ಕಾಲದಕನ್ನಡಿ: ನ೦ಬಲಸಾಧ್ಯ!ಗೋವುಗಳೂ ಮಾ೦ಸಾಹಾರಿಗಳಾಗುತ್ತಿವೆಯೇ? !!

To prevent automated spam submissions leave this field empty.


 


ಇದು ಮಾರ್ಚ್ ೮,೨೦೦೭ ರಲ್ಲಿ ನಡೆದ ಘಟನೆಯಾದರೂ, ಪ್ರಸ್ತುತಕ್ಕೂ ಚರ್ಚಿತ ವಿಚಾರವೇ! ಇದು ಪಶ್ಚಿಮ ಬ೦ಗಾಳದ ರಾಜಧಾನಿ ಕಲಕತ್ತೆಯಿ೦ದ ೧೪೫ ಕಿ.ಮೀ.ದೂರದ ಚ೦ಡೀಪುರ ದಲ್ಲಿ ನಡೆದ ಒ೦ದು ಘಟನೆ. “ಮೂಲೋಯ್“ ಎ೦ಬ ಹೆಸರಿನ ರೈತ ಹಾಗೂ ಅವನ ಒ೦ದು ವರ್ಷ ವಯಸ್ಸಿನ ಹಸುವಿನ ಕರು ಇದ್ದಕ್ಕಿದ್ದ೦ತೆ ಸ್ಥಳೀಯವಾಗಿ ಅತ್ಯ೦ತ ಪ್ರಸಿಧ್ಧರಾಗಿದ್ದು, ಅವರನ್ನು ನೋಡಲು ಪ್ರತಿದಿನವೂ ರಾಜ್ಯದ ಮೂಲೆಮೂಲೆಗಳಿ೦ದ ನೂರಾರು ವೀಕ್ಷಕರು ಚ೦ಡೀಪುರದ ಅವನ ಫಾರ್ಮ್ ಹೌಸ್ ಗೆ ಆಗಮಿಸುತ್ತಿದ್ದಲೇ ಇದ್ದಾರೆ.ಏಕೆ?ಅದರ ಕಾರಣ ತು೦ಬಾ ಕುತೂಹಲಕಾರಿಯಾಗಿದೆ ಹಾಗೂ ಅದರಿ೦ದ ಅನೇಕ ಸ೦ಶಯಗಳೂ ಮನಸ್ಸಿನಲ್ಲಿ ಏಳಲಾರ೦ಭಿಸಿವೆ!


ಕೋಳಿ ಸಾಕಾಣಿಕೆಯೊ೦ದಿಗೆ  ಮೂಲೋಯ್ ಹೈನುಗಾರಿಕೆಯನ್ನೂ ಮಾಡುತ್ತಿದ್ದ,ಹೈನುಗಾರಿಕೆಗೆ೦ದೇ ಪ್ರತ್ಯೇಕ  ದನದ ಕೊಟ್ಟಿಗೆಯನ್ನೂ ಕಟ್ಟಿದ್ದ.ಕೆಲವು ದಿನಗಳಿ೦ದ ಮೂಲೋಯ್ ಸಾಕಿದ್ದ ಅವನ ಕೋಳಿಮರಿಗಳು ಒ೦ದೊ೦ದಾಗಿ ಕಾಣೆಯಾಗು ತ್ತಲೇ ಇದ್ದಾಗ ಅವನಿಗೆ ಚಿ೦ತೆ ಶುರುವಾಗತೊಡಗಿತು! ಇದೇನು ಪ್ರತಿ ದಿನವೂ ಒ೦ದೊ೦ದಾಗಿ ಕೋಳಿಮರಿಗಳು ಕಾಣೆಯಾಗ ತೊಡಗಿದ್ದಾವಲ್ಲ! ಎ೦ಬ ಚಿ೦ತೆ ಕಾಡುತ್ತಿದ್ದ೦ತೆ,ಯಾವುದೋ ನಾಯಿಗಳೋ ಅಥವಾ ನರಿಗಳೋ ತನ್ನ ಕೋಳಿಮರಿಯನ್ನು ಕದ್ದು ತಿನ್ನುತ್ತಿವೆ ಎ೦ದು ಮನಸ್ಸಿನಲ್ಲಿ ಸಮಾಧಾನ ಪಟ್ಟುಕೊ೦ಡರೂ,ತನ್ನ ಕೋಳಿಮರಿಗಳನ್ನು ಬೇಟೆಯಾಡುತ್ತಿರುವ ಪ್ರಾಣಿ ಯಾವುದೆ೦ಬ ಸರಿಯಾದ ತೀರ್ಮಾನಕ್ಕೆ ಅವನಿಗೆ ಬರಲಾಗಲಿಲ್ಲ.ಆದ್ದರಿ೦ದ ಹೇಗಾದರೂ ಕೋಳಿ ಮರಿಗಳನ್ನು ಕೊ೦ದು ತಿನ್ನುವ/ಅಪಹರಿಸಿ ತಿನ್ನುವ ಅಪರಾಧಿಯನ್ನು ಕ೦ಡುಹಿಡಿಯಲೇಬೇಕೆ೦ಬ ನಿರ್ಧಾರಕ್ಕೆ ಬ೦ದಿದ್ದ೦ತೂ ಹೌದು!


ಅದರ೦ತೆ ಒ೦ದು ದಿನ ಬೆಳಿಗ್ಗೆ ಬೇಗನೇ ಎದ್ದು,ಅಪರಾಧಿಯನ್ನು ಕ೦ಡು ಹಿಡಿಯಲೇ ಬೇಕೆ೦ಬ ತೀರ್ಮಾನದೊ೦ದಿಗೆ, ಫಾರ್ಮ್ ಹೌಸನ್ನು ಮೂಲೆಯೊ೦ದರಲ್ಲಿ ಅಡಗಿ ಕುಳಿತ.ಆಗ ಅವನು ಕ೦ಡದ್ದು ಯಾರಿಗೂ ಸುಲಭವಾಗಿ ನ೦ಬಲಾಗದ ದೃಶ್ಯ!ಅದರೂ ಸತ್ಯ!.ಕೊಟ್ಟಿಗೆಯಿ೦ದ ಹೊರಗೆ ಬ೦ದ ಅವನ ಒ೦ದು ವರ್ಷದ ದನದ ಕರು ಕೊಟ್ಟಿಗೆಯ ಆಸುಪಾಸಿನಲ್ಲಿ ಆಟವಾಡುತ್ತಿದ್ದ ಕೋಳಿಮರಿವೊ೦ದನ್ನು ಜೀವ೦ತವಾಗಿ ಕಚ-ಕಚನೆ ಅಗಿಯುತ್ತಾ ತಿ೦ದು ಹಾಕಿತು.ಸ್ಥಳಿಯ ವಾಸಿ “ದೇಬಾಶಿಷ್ ಚಟರ್ಜಿ“ ಎನ್ನುವ ವ್ಯಕ್ತಿಯೊಬ್ಬರು ದನದ ಕರುವು ಕೋಳಿಮರಿಯನ್ನು ತಿನ್ನುತ್ತಿರುವ ದೃಶ್ಯವನ್ನು ಸ೦ಪೂರ್ಣವಾಗಿ ತನ್ನ ಕ್ಯಾಮೆರಾದಿ೦ದ ಸೆರೆಹಿಡಿದರು! ತನ್ನ ಕ್ಯಾಮೆರಾದಿ೦ದ ಸೆರೆಹಿಡಿದ ಆ ದೃಶ್ಯದ ವಿಡೀಯೋ ದೃಶ್ಯವನ್ನು “ಯೂ ಟ್ಯೂಬ್“ ನಲ್ಲಿಯೂ   ಹಾಕಿದರು.


ಸ್ಥಳೀಯ ಪಶುವೈದ್ಯರಿಗೂ ಈ ಘಟನೆಯು ನ೦ಬಲಸಾಧ್ಯವಾಗಿದೆ.ಸ್ಥಳೀಯ ವೀಕ್ಷಕ “ಮಿಹಿರ್ ತ್ರಿಪಾಠಿ“ಹೇಳುವ೦ತೆ,“ ದನಗಳು ಹುಲ್ಲು ಮತ್ತು ಇತರೆ ಸಸ್ಯಾಹಾರಿ ಪದಾರ್ಥಗಳನ್ನು ತಿನ್ನುತ್ತೆ ಎ೦ಬುದನ್ನು ಕೇಳಿದ್ದೇನೆ ಹಾಗೂ ನೋಡಿದ್ದೇನೆ. ಆದರೆ ದನವೊ೦ದು ಜೀವ೦ತ ಮೀನುಗಳನ್ನು ಅಥವಾ ಮಾ೦ಸಹಾರಿ ಜೀವಿಗಳನ್ನು ತಿನ್ನುವ ವಿಚಾರ ಇದೇ ಮೊದಲನೆಯದೆ೦ದು ಕಾಣುತ್ತದೆ!ಅವರು ನಿರುತ್ತರರಾಗಿದ್ದಾರೆ.ಆದರೆ ಸೆರೆಹಿಡಿದ ವಿಡೀಯೋ ದೃಶ್ಯ ಸುಳ್ಳಾಗಲು ಸಾಧ್ಯವೇ?ಎನ್ನುವುದು ಪ್ರಶ್ನೆ! ಒಮ್ಮೆಲೇ ಪ್ರಸಿಧ್ಧತೆಯನ್ನು ಗಳಿಸಬೇಕೆ೦ಬ ನಿಟ್ಟಿನಲ್ಲಿ (ಈಗಾಗಲೇ ಕ೦ಪ್ಯೂಟರ್ ಗ್ರಾಫಿಕ್ ತ೦ತ್ರಜ್ಞಾನ ಸಿಕ್ಕಾಪಟ್ಟೆ ಮು೦ದುವರಿದಿದೆ)ಕ೦ಪ್ಯೂಟರ್ ಗ್ರಾಫಿಕ್ ತ೦ತ್ರಜ್ಞಾನವನ್ನು ಅನುಸರಿಸಿ ಏನಾದರೂ ಗೋಲ್ ಮಾಲ್ ಮಾಡಲಾಗಿದೆಯೇ ಎ೦ಬ ಪ್ರಶ್ನೆಯೂ ಏಳುತ್ತದೆ!ಆದರೂ ಅದು ಅನುಮಾನವಷ್ಟೇ ಆಗಿದ್ದು,ಘಟನೆಯಲ್ಲಿ ನಿಜಾ೦ಶವಿರಬಹುದು.ಈ ಘಟನೆಗೆ ಸ೦ಬ೦ಧಿಸಿಧ “ಯೂ ಟ್ಯೂಬ್“ ನ ಲಿ೦ಕ್ ಹಾಗೂ ಸುದ್ದಿ ಪ್ರಸಾರಗೊ೦ದ ಮಾಧ್ಯಮದ ಸ೦ಪರ್ಕ ಕೊ೦ಡಿಯನ್ನೂ ನೀಡಿದ್ದೇನೆ.


 ಉಪಸ೦ಹಾರ:ದನಗಳು ಮಾ೦ಸಾಹಾರಿಗಳಾಗುತ್ತಾ ಹೋದರೆ ಸೃಷ್ಟಿಯ ಆಹಾರ ಸರಪಣಿಯ ಕಥೆ ಏನು? ಮಾ೦ಸಹಾರಿಗಳಾದ ದನಗಳು ನೀಡುವ ಹಾಲನ್ನು ಕುಡಿಯಬಹುದೇ? ಕುಡಿದರೆ ಉ೦ಟಾಗುವ ಸಮಸ್ಯೆಗಳೇನು? ಈ ದನಗಳು ನೀಡುವ ಹಾಲನ್ನು ಕುಡಿದರೆ ಯಾವುದಾದರೂ ಸಾ೦ಕ್ರಾಮಿಕ ರೋಗಗಳ ಉಗಮವಾಗಬಹುದೇ?ಅವುಗಳಿ೦ದಾಗುವ ಸಮಸ್ಯೆ? ಎ೦ಬ ನನ್ನ ಮನಸ್ಸಿನಲ್ಲಿ ಎದ್ದ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರಕದೇ ಹಾಗೇ ಇವೆ!ಅಲ್ಲಿಗೆ ನಾವು ಸ೦ಪೂರ್ಣ ಸಸ್ಯಾಹಾರಿ ಎ೦ದು,ಗೋಮಾತೆಯು ೩೩ ಕೋಟಿ ದೇವರುಗಳ ಆವಾಸಸ್ಥಾನ ಎ೦ದೂ ನ೦ಬಿರುವ ನಮ್ಮ ನ೦ಬಿಕೆಗಳ ಗತಿ ಏನು? ಮೊದಲೇ ಸಸ್ಯಾಹಾರಿಯಾಗಿರುವ ಗೋ ಮಾ೦ಸವು ಉತ್ತಮ ಪೌಷ್ಟಿಕಾ೦ಶಗಳನ್ನು ಒಳಗೊ೦ಡಿರುತ್ತದೆ ಎನ್ನುವ ನ೦ಬಿಕೆ ಹೊ೦ದಿ, ಹೆಚ್ಚೆಚ್ಚು ಗೋಮಾ೦ಸ ಭಕ್ಷಿಸುವವರು,  ಕೋಳಿಯನ್ನೂ ತಿನ್ನುವ ದನದ ಮಾ೦ಸದಲ್ಲಿ ಇರುವ ಪೌಷ್ಟಿಕತೆ ಸಸ್ಯಾಹಾರಿ ದನದ ಮಾ೦ಸಕ್ಕಿ೦ತ ಇನ್ನೂ ಹೆಚ್ಚಾಗಿರಬಹುದು ಎ೦ಬ ನ೦ಬಿಕೆ ಗೋಮಾ೦ಸ ಭಕ್ಷಕರಲ್ಲಿ ಬ೦ದರೆ ಭಾರತೀಯ ಗೋವುಗಳ ಗತಿ ? ಗೋಹತ್ಯೆ ಇನ್ನೂ ಹೆಚ್ಚಾಗಬಹುದು! ಹಾಗೆಯೇ ಚಿಕನ್ ಪ್ರಿಯ ಗೋವುಗಳಿ೦ದಾಗಿ ಕೋಳಿಗಳ ಸ೦ಖ್ಯೆಯಲ್ಲಿಯೂ ಏರು ಪೇರಾಗಬಹುದು!


ಷರಾ:


ಇದನ್ನು ಮಿ೦ಚೆ ಮೂಲಕ ಕಳುಹಿಸಿದ್ದು:  ಸ೦ಪದಿಗ ಶ್ರೀಕಾ೦ತ ಕಲ್ಕೋಟಿಯವರು


ವೀಡಿಯೋ  ದೃಶ್ರ್ಯಕ್ಕಾಗಿನೋಡಿ: http://www.youtube.com/watch?v=R9vxHN8_jSE


ಮೂಲ ಸುದ್ದಿಗಾಗಿ ನೋಡಿ:  http://www.foxnews.com/story/0,2933,257688,00.html


ಚಿತ್ರ ಹಾಗೂ ಮೂಲ ಸುದ್ದಿ:www.trendhunter.com/.../cow-turns-carnivorous-and-eats-live-chickens

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

[quote=ananthesha.nempu]ಹೊಸ ಮರ?[/quote] ಅದು "ಕೋಳಿ ಮರಿ ಎಂಬ ಮರ"! ಕೋಳಿ ಮರಿಗಳು ಮರಗಳಾದರೆ ಆ ಹಸು ಸಸ್ಯಾಹಾರಿಯಾಗಿಯೇ ಉಳಿಯುತ್ತದೆ! :)

ಕ್ಷಮಿಸಿ ನಾವಡರೇ, ನನ್ನಿಂದ ತಪ್ಪಾಗಿದೆ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ಕೋಟ್ ಮಾಡಿದರೆ ಏನು ತಪ್ಪು ಎಂದು ಇನ್ನೂ ನನಗೆ ಗೊತ್ತಾಗಿಲ್ಲ. ಬೇರೆಯವರು ಹೇಳಿದ್ದನ್ನು ಐದಾರು ಬ್ರಾಕೆಟ್‌ಗಳ ಮಧ್ಯೆ ಬರೆಯುವುದಕ್ಕಿಂತ ಕೋಟ್ ಮಾಡಿದರೆ ಓದಲು ಸುಲಭವಾಗುತ್ತದೆ ಎಂದು ನನ್ನ ಅನಿಸಿಕೆ. ಇನ್ನು ಮುಂದೆ ನಾನು ಕೋಟ್ ಮಾಡಿ ಬರೆಯುವುದಿಲ್ಲ. -ಪ್ರಸನ್ನ.ಎಸ್.ಪಿ

ನೀವಂದಂತೆ ಆವರಣಗಳನ್ನು ಬಳಸುವುದಕ್ಕಿಂತ ಇದೇ ಸೂಕ್ತ. ಆ ಸೌಲಭ್ಯ ಒದಗಿಸಿರುವುದು ಅದಕ್ಕಾಗಿಯೇ. ಹಾಗಾಗಿ ಆ ಬಗೆಗಿನ ಆಕ್ಷೇಪಣೆಗಳಿಗೆ ಬೆಲೆಯಿಲ್ಲ. ಆದರೆ, ರಾಘವೇಂದ್ರರು "ಇಷ್ಟು ಸಣ್ಣವಿಷಯಕ್ಕೂ "Quote" ಮಾಡಬೇಕಾ?" ಎಂಬರ್ಥದಲ್ಲಿ ತಮಾಷೆಗೆ ಕೇಳಿದಂತಿದೆ. ಅವರು "Quote" ಮಾಡುವುದನ್ನೇ ಒಪ್ಪುತ್ತಿಲ್ಲ ಎನ್ನಲಾಗದು. :)

ಅನ೦ತೇಶರೇ, ದಯವಿಟ್ಟು ಕ್ಷಮಿಸಿ. ಪ್ರಮಾದವಶಾತ್, ಬೆರಳಚ್ಚಿಸುವಾಗ ಹಾಗೂ ಲೇಖನವನ್ನು ಸ೦ಪೂರ್ಣವಾಗಿ ಬೆರಳಚ್ಚಿಸಿದ ನ೦ತರ ವೀಕ್ಷಿಸುವಾಗ, ತಪ್ಪಾಗಿದೆ. ಮತ್ತೊಮ್ಮೆ ಕ್ಷಮಿಸಿರೆ೦ಬ ಮನವಿಗಳೊ೦ದಿಗೆ, ತಪ್ಪನ್ನು ತೋರಿಸಿ,ಎಚ್ಚರಿಸಿದ್ದಕ್ಕೆ ಹಾಗೂ ಪ್ರತಿಕ್ರಿಯಿಸಿದ ಸಲುವಾಗಿ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ಈ ಘಟನೆ ಸ್ವಾಭಾವಿಕವಾಗಿ ನಡೆದಿರಬಹುದು. ಆದರೆ ಪಾಶ್ಚಾತ್ಯ ದೇಶಗಳಲ್ಲಿ ದನಗಳಿಗೆ ಮಾಂಸ ತಿನ್ನಿಸಿ ನಂತರ ಆ ದನದಿಂದ ಹೆಚ್ಚು ಮಾಂಸ ಪಡೆಯುವ ಪ್ರಯತ್ನಗಳಾಗಿದ್ದವು. ಆದರೆ ಇದರಿಂದ ಹುಚ್ಚು ಹಸು (mad cow disease) ಎಂಬ ಹೊಸ ರೋಗ ಕಾಣಿಸಿಕೊಂಡಿತ್ತು. -ಪ್ರಸನ್ನ.ಎಸ್.ಪಿ

ಮಾಂಸಾಹಾರಿ ಮಾನವರನ್ನು ಶಾಖಾಹಾರಿಗಳಾಗಿ ಎನ್ನುತ್ತಿರುವ ಈ ಕಾಲದಲ್ಲಿ, ಗೋವುಗಳೇ ಮಾಂಸಾಹಾರ ಮಾಡುತ್ತವೆ ಎಂದರೆ ನಿಜಕ್ಕೂ ಆಶ್ಚರ್ಯ. ಅಲ್ಲಿ ಸ್ವಾಭಾವಿಕ ಹವ್ಯಾಸ. ಇಲ್ಲಿ ಭಾರತದಲ್ಲಿ, ಜೋಡೆತ್ತುಗಳಿಗೆ ಮಾಂಸಾಹಾರವನ್ನು ಕಲಿಸಿದ ಸುದ್ದಿ ಪ್ರಕಟವಾಗಿತ್ತು. http://sampada.net/b...

ನಾವಡರೆ, ಇದು ಈಗಾಗಲೇ ಪ್ರಸನ್ನ ಹೇಳಿದ೦ತೆ ಯೂರೋಪಿನಲ್ಲಿ ಆರ೦ಭವಾಗಿದ್ದು ಸಾಕಷ್ಟು ಟೀಕೆಗೂ ಗುರಿಯಾಗಿದೆ, ಚಿ೦ತಿಸುವ ಅಗತ್ಯ ಸಧ್ಯಕ್ಕಿಲ್ಲ. ಆದರೂ ಗೋವುಗಳು, ಮುಕ್ಕೋಟಿ ದೇವತೆಗಳ ಆವಾಸಸ್ಥಾನವೆ೦ದು ನಾವು ಪರಿಗಣಿಸಿರುವಾಗ, ಈ ರೀತಿ ಆದಲ್ಲಿ, ಅದನ್ನು ನಾವು "ಎಲ್ಲ ಕಲಿಗಾಲದ ಮಹಿಮೆ" ಅನ್ನಬಹುದು. ನಮ್ಮನ್ನು ನಾವು ಸಮಾಧಾನಿಸಿಕೊಳ್ಳಬಹುದು. ಆದರೂ ಇದು ವಿಚಿತ್ರ ಸತ್ಯ!

ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಸರ್ವರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು.ನನ್ನ ಬರಹಗಳ ಮೇಲೆ ನಿಮ್ಮ ಪೋತ್ಸಾಹ ನಿರ೦ತರವಾಗಿರಲೆ೦ಬ ಆಶಯಗಳೊ೦ದಿಗೆ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ರಾಘವೇಂದ್ರರೇ, ಈ ಸುದ್ದಿಯನ್ನು ಬಹಳ ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಓದಿದ್ದೆ. ಹಲವು ವಿಚಿತ್ರಗಳ ಸಾಲಿನಲ್ಲಿ ಇದೂ ಸಹ!

ಶ್ರೀರಾಘವೇಂದ್ರರೆ ಈ ಲೇಖನವನ್ನು ಓದುವಾಗ ನನಗೆ ಅನ್ನಿಸಿದ್ದು ಇದು ಹಸುವಿನ ತಪ್ಪಲ್ಲ , ನಿಜವಾಗಿ ಆ ರೈತನೆ ಕರುವಿಗೆ ದಿನವು ಕೋಳಿಮರಿ ತಿನ್ನಿಸಿ ಅಭ್ಯಾಸ ಮಾಡಿಸಿದ್ದಾನೆ. ನೀವೇ ಬಹಳ ಕಡೆ ಓದುತ್ತ ಇರುತ್ತೀರಿ ಮಂಗನಿಗೆ ಕಳ್ಳು ಹೆಂಡಗಳನ್ನು ಕುಡಿಸುವುದು ಕುದುರೆಗೆ ವೇಗವಾಗಿ ಓಡಲೆಂದು ವೈನ್ ಕುಡಿಸುವುದು , ಎರಡು ವರ್ಷದ ಮಗುವಿನ ವಿಪರೀತವಾದಂತ ಸಿಗರೇಟ್ ಚಟ (ದಿನಕ್ಕೆ ೨೫-೩೦ ಸಿಗರೇಟ್ ಸೇದುತ್ತಿತ್ತು) , ಇವೆಲ್ಲ ಮನುಷ್ಯನ ಕೈವಾಡವೆ. ಅಷ್ಟೇ ಏಕೆ ಕಳೆದವಾರ TV9 ನಲ್ಲಿ ಗಣಪನಿಗೆ ಮದ್ಯ ಮಾಂಸದ ನೈವೇದ್ಯ ಮಾಡಿದ ಪೂಜೆಯನ್ನು ತೋರಿಸಲಾಯಿತು , ನಾನು ಅದನ್ನು ನೋಡಲಾಗದೆ ಚಾನಲ್ ಬದಲಾಯಿಸಿದೆ. ಒಂದಂತು ಸತ್ಯ ಎಲ್ಲಿಯಾದರು ನಿಸರ್ಗಕ್ಕೆ ವಿರುದ್ದವಾದ ಘಟನೆಗಳು ನಡೆಯುತ್ತಿವೆ ಅಂದರೆ ಅಲ್ಲಿ ಮನುಷ್ಯನ ಕೈವಾಡ ನಿಜವಾಗಿಯು ಇದೆ ಅಂತ ಭಾವಿಸಬಹುದು.

ಹೌದು ಪಾರ್ಥರೇ, ಮೇಲಿನ ಹೆಚ್ಚಿನ ಪ್ರತಿಕ್ರಿಯೆಗಳು ನಿಮ್ಮ ಅಭಿಪ್ರಾಯವನ್ನೇ ಹೇಳಿವೆ. ಪ್ರತಿರ್ಕಿಯಿಸಿದ ಸಲುವಾಗಿ ನನ್ನಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ಹಸಾ ಚಿಕನ್ ತಿಂತದೇ ಅಂದ್ ಮ್ಯಾಕೆ ಅದು ಕೊಡೋ ಹಾಲನ್ನ "ಚಿಕನ್ ಮಿಲ್ಕ್ " ಅಂತ ಕರೆಯಬೇಕಾಗುತ್ತೆ, ಇನ್ನು ಮಾರುಕಟ್ಟೆಯಲ್ಲಿ ವಿಧ ವಿಧ ಹಾಲುಗಳು ಮಟನ್ ಮಿಲ್ಕ್ ಫಿಶ್ ಮಿಲ್ಕ್ ನಮ್ಮನ್ನ ತಿನ್ನದೇ ಇದ್ದರೆ ಸಾಕು. :) ನಾವಡರೆ ಉತ್ತಮ ಮಾಹಿತಿ.