"LOVE" IN BANGALORE

To prevent automated spam submissions leave this field empty.

೧) ಈಗಿನ ಕಾಲದ  ಹೈ ಸ್ಕೂಲ್ ಓದುವ ಕೆಲ ವಿದ್ಯಾರ್ಥಿ ಗಳು ಪ್ರೀತಿ ಪ್ರೇಮ ಎಂಬ ಜಾಲದಲ್ಲಿ ಬೀಳ್ತಾರೆ, ಅದು ಅವರಿಗೆ ಒಂದು ಹೊಸ ಅನುಭವ, ಆಗ ಅವರಲ್ಲಿ ಏನೋ ಒಂದು ತರಹದ ಸಂತೋಷ, ಉತ್ಸಾಹ ..  ಒಬ್ಬರನ್ನೋಬರು ತುಂಬಾ ಪ್ರೀತಿಸುತ್ತಾರೆ ಆದ್ರೆ ಅದು ಎಲ್ಲಿಯ ವರೆಗೂ? ಬರೀ ಅವರ ಹೈ ಸ್ಕೂಲ್ ಮುಗಿಯೋ ವರೆಗೂ ಅಷ್ಟೇ. ಆಮೇಲೆ ಕಾಲೇಜು ಹೈಯರ್ ಸ್ಟಡೀಸ್ ಅಂತ ಮುಂದುವರಿತ ಹೋಗ್ತಾರೆ. ಹೈ ಸ್ಕೂಲ್ ಲವ್ ನ ಬ್ರೇಕ್ ಮಾಡೋಕೆ ಅವ್ರ್ಗೆ ಒಂದು ಒಳ್ಳೆಯ  ರೀಸನ್ ಅಂದ್ರೆ "ಆಗ ನಾನು ಇನ್ನು ಚಿಕ್ಕ ಹುಡುಗ/ಹುಡುಗಿ ಆಗಿದ್ದೆ. ಆ ವಯಸಲ್ಲಿ ನನಗೇನು ಅರ್ಥ ಆಗುತ್ತೆ" (ಮೋಸ್ಟ್ ಕಾಮನ್ಲಿ ಯುಸಡ್ ರೀಸನ್) . 

 

೨) ಹೈ ಸ್ಕೂಲ್ ಮುಗಿದ ಮೇಲೆ ಮುಂದಿನ ಹೆಜ್ಜೆ ಕಾಲೇಜು , ಮೊದಲನೇ ದಿನದ ಕಾಲೆಜಂತು ಎಲ್ಲರಿಗೂ ಹೆಚ್ಚಿನ ಸಂತೋಷ ಕೊಡುವಂತಹ ದಿನ. ಆಗಷ್ಟೆ ಸ್ಕೂಲ್ ಲೈಫ್ ಮುಗಿಸಿರುತ್ತಾರೆ ಕಾಲೇಜಿಗೆ ಬಂದ ಮೇಲೆ ನಾನು ಈಗ ದೊಡ್ಡವನು ಅಂತ ಅನ್ಕೊಬಿಡ್ತಾರೆ. ಕಾಲೇಜಿಗೆ ಹೋದಮೇಲೆ ಲವ್ ಮಾಡದೇ ಇರ್ತಾರಾ?? ಲವ್ ಅನ್ನೋದು ಒಂದು ಫ್ಯಾಶನ್ ಆಗೋಗ್ಬಿಟ್ಟಿದೆ. ಲವ್ ಮಾಡ್ತಿದೀನಿ ಅಂತ ಹೇಳಿದಾಗ... ಟ್ರೂ ಲವ್ವ ? ಅಥವಾ ಟೈಮ್ ಪಾಸ್ ಲವ್ವ ಅಂತ ಕೇಳ್ತಾರೆ! ಕಾಲೇಜಿನಲ್ಲಿ ಓದುವಾಗ , ನಾನು ನಿಜವಾದ ಪ್ರೀತಿ ನೆ ಮಾಡ್ತಿದೀನಿ ಅಂತಾರೆ. ಆದರೆ ಅದು ಎಷ್ಟು ದಿನ?? ಎರಡು ವರ್ಷ ಕಾಲೇಜು ಮುಗಿಯೋವರೆಗೂ ಅಷ್ಟೇ. ಆಗ ಅವರು ಕೊಡೋ ರೀಸನ್ ಏನ್ ಹೇಳಿ ? "ನಾನು (Attraction ) ಆಕರ್ಷಣೆ / ಇನ್ ಫಾಚುಎಶನ್ ನ ಲವ್ ಅಂತ ಅನ್ಕೊಂಡಿದ್ದೆ" ಎರಡು ವರ್ಷದ ಪ್ರೀತಿಯ ಅದ್ಯಯ ಅಲ್ಲಿಯೇ ಮುಗಿಸಿ ಮುಂದಿನ ವ್ಯಾಸಂಗದ ಪಯಣ ಶುರು ಮಾಡ್ತಾರೆ.

 

೩) ಕಾಲೇಜು ಮುಗಿದ ನಂತರ ಡಿಗ್ರಿ ಸೇರ್ತಾರೆ .. ಪಿ.ಯು.ಸಿ. ಅಲ್ಲಿ ಸ್ವಲ್ಪ ಕಾಲೇಜು ಬಂಕ್ ಮಾಡೋಕೆ ಹೆದರಿ ಮಾಡಿರೋದಿಲ್ಲ , ಡಿಗ್ರಿ ಅಲ್ಲಿ ಬಂಕ್ ಮಾಡಿ ಫಿಲಂ ಕಾಫೀ ಡೇ ಅಂತ ಲವೆರ್ಸ್ ಜೊತೆ ಸುತ್ತಡ್ತಾರೆ, ಆ ಒಂದು ಸಂಧರ್ಬದಲ್ಲಿ ಅವರ ಅಂತರಥ್ಮೆಕ್ಕೆ ಗೊತ್ತಿರುತ್ತೆ ಅವರು ನಿಜವಾದ ಪ್ರೀತಿ ಮಾಡುತ್ತ ಇರೋಲ್ಲ ಅಂತ ಆದರೆ ಮುಂದೆ ಮಾತ್ರ ಇಬ್ರು ಹೇಳ್ಕೊಲೋದಿಲ್ಲ. ಇಬ್ಬರದು ನಾಟಕದ ಪ್ರೀತಿ ನೆ, ಮೂರು / ನಾಲ್ಕು ವರ್ಷ ಆಗುತ್ತೆ ಒಬ್ಬರ  ಮೇಲೆ ಒಬ್ಬರಿಗೆ ಆಸಕ್ತಿ ಕೂಡ ಕಡಮೆ ಆಗಿರುತ್ತೆ , so ಅವರಿಗೆ ಬ್ರೇಕ್ ಅಪ್ ಆಗೋದು ಈಜಿ ಆಗುತ್ತೆ, ಆಗ ಇಲ್ಲ ಸಲ್ಲ ದ ಜಗಳವಾಡಿ ಬೆಕಂತನೆ ಬ್ರೇಕ್ ಹಾಕ್ತಾರೆ. 

 

೪) ಕಾಲೇಜಿನ ಲೈಫ್ ಮುಗೀತು , ಕೆಲಸಕ್ಕೆ ಹೋಗ್ತಾರೆ , ಅಲ್ಲಿ ಯಾರೂ ಇಷ್ಟ ಆಗ್ತಾರೆ ಮತ್ತೆ ಪ್ರೀತಿ ಹುಟ್ಟುತ್ತೆ, ಆದರೆ ಆ ಪ್ರೀತಿ ಮದುವೆ ವರೆಗೂ ಹೋಗೋದೇ ಇಲ್ಲ. ತುಂಬಾ ಅಪರೂಪ. ಪ್ರೀತಿ ಮಾಡಿ ಲಾಸ್ಟ್ ಅಲ್ಲಿ"ಮನೇಲಿ ಒಪ್ತ ಇಲ್ಲ ನೀನು ಬೇರೆ ಅವರ್ನ ಮದುವೆ ಅಗ್ಬಿಡು ನನಗೆ ನೀನು ಚೆನ್ನಾಗಿರೋದು ಮುಖ್ಯ" ಅಂತ ಹೇಳಿ ಎಸ್ಕಪ್ ಆಗ್ತಾರೆ . :)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸತ್ಯವಾದ ಮಾತುಗಳು! :) ನೀವು ಹೈಸ್ಕೂಲಿಂದ ಶುರುಮಾಡಿದ್ದೀರಿ. ನಾನು ಒಬ್ಬಾತ ಪ್ರೈಮರಿ (ಲೋಯರ್‍ ಪ್ರೈಮರಿ) ಸ್ಕೂಲಿನಲ್ಲಿಯೇ ಲವ್ ಲೆಟರ್‍ ಬರೆದಿದ್ದನ್ನು ನೋಡಿದ್ದೇನೆ. ನನ್ನ ಅಕ್ಕ ಪ್ರೈಮರಿ ಸ್ಕೂಲಲ್ಲಿ ಟೀಚರ್‍, ಅವಳ ಸ್ಟೂಡೆಂಟ್ ಒಬ್ಬ ತನ್ನದೇ ಕ್ಲಾಸಿನ ಹುಡುಗಿಯೊಬ್ಬಳಿಗೆ ಸ್ಪೆಲ್ಲಿಂಗ್ ಮಿಸ್ಟೇಕ್‌‌ಗಳಿಂದ ಕೂಡಿದ ಲವ್ ಲೆಟರ್‍ ಕೊಟ್ಟಿದ್ದ. ಅವಳು ಅದನ್ನು ಓದೋದು ಹೇಗೆ ಎಂದು ಗೊತ್ತಾಗದೆ ಟೀಚರ್‍ ಕೈಗೆ ಕೊಟ್ಟಿದ್ದಳು! :)

<<ಅವಳು ಅದನ್ನು ಓದೋದು ಹೇಗೆ ಎಂದು ಗೊತ್ತಾಗದೆ ಟೀಚರ್‍ ಕೈಗೆ ಕೊಟ್ಟಿದ್ದಳು! :)>> ಬಾಲ್ಯದ ಮುಗ್ಧತೆಗೆ ಒಂದು ಉತ್ತಮ ಉದಾಹರಣೆ. :)

"LOVE" IN BANGALORE - ಬೆಂಗಳೂರಲ್ಲಿ ಮಾತ್ರನ ಹಾಗೆ ಅಥವಾ ನೀವು ಬೆಂಗಳೂರಲ್ಲಿ ಮಾತ್ರ ಈ ತರಹ ನೋಡಿರೋದ??. ಬೇರೆ ಜಿಲ್ಲೆಗಳಲ್ಲೂ ನೀವು ನಿಮ್ಮ ಲೇಖನದಲ್ಲಿ ಬರೆದಿರೋದನ್ನ ಕಾಣಬಹುದು.

ಇದು ಈಗಿನ ಯುವ ಜನತೆ ಪ್ರೀತಿಯನ್ನು ಅರ್ಥ ಮಾಡಿಕೊಂಡಿರುವ ರೀತಿ, ಇದಕ್ಕೆ ನಮ್ಮ ಮನೆ, ಮನ , ಸಮಾಜ ಮತ್ತು ಮುಖ್ಯವಾಗಿ ತಂದೆ ತಾಯಂದಿರು ಕೊಡುವ ಸಂಸ್ಕಾರ. ಚೆನ್ನಾಗಿದೆ, ಆದರೆ ಇಂತ ಗಂಭೀರವಾದ ವಿಷಯವನ್ನು ಇನ್ನಷ್ಟು ಉತ್ತಮವಾಗಿ ಬರೆಯಬಹುದಾಗಿತ್ತು , ಇದು ನನ್ನ ಅನಿಸಿಕೆ.

ಹೌದು ಇದು ನನ್ನ ಒಂದು ಸಣ್ಣ ಪ್ರಯತ್ನ. ಇನ್ನು ತೂಕವಾದ ಪದಗಳನ್ನು ಬಳಸಬೇಕಿತ್ತು , ಮುಂದೆ ಪ್ರಯತ್ನ ಮಾಡುತ್ತೇನೆ :)

ದಿವ್ಯಾ, ಬೆಂಗಳೂರಿನಲ್ಲಿ ಜಾಹೀರಾತು ಫಲಕಗಳು ಆಂಗ್ಲ ಭಾಷೆಯಲ್ಲಿದ್ದರೆ, ಅದರ ಮಾಲೀಕರಿಗೆ ಮಿಂಚಂಚೆ ಕಳುಹಿಸಿ ಬುದ್ಧಿ ಹೇಳುವವರು ನಾವು. ನಿಮ್ಮನ್ನು ಸುಮ್ಮನೇ ಬಿಡ್ತೀವಾ? ಆಂಗ್ಲ ಪದಗಳನ್ನು ಬಳಸದೇ ಕನ್ನಡದಲ್ಲಿಯೇ ಬರೆದು ತಿದ್ದಿ ಪ್ರಕಟಿಸಿ. ಓದಿ ಪ್ರತಿಕ್ರಿಯಿಸುವ ಪ್ರಯತ್ನ ಮಾಡುತ್ತೇನೆ. ಇಲ್ಲಾಂದ್ರೆ ನಾನಂತೂ ಓದೋಲ್ಲ. :) - ಆಸು ಹೆಗ್ಡೆ

ನಿಮ್ಮ ಮಾತು ಸರಿಯಾಗಿದೆ ಸರ್ , ಮುಂದೆ ಪ್ರಯತ್ನಿಸುತ್ತೇನೆ, ನಿಮ್ಮ ಪ್ರತಿಕ್ರಿತ್ಯೆಗಳು ನಮಗೆ ಮುಖ್ಯ . ನೀವು ಓದುವ ಹಾಗೆಯೆ ಬರೆಯಲು ಪ್ರಯತ್ನಿಸುತ್ತೇನೆ .

>>ನಿಮ್ಮ ಪ್ರತಿಕ್ರಿತ್ಯೆಗಳು ನಮಗೆ ಮುಖ್ಯ ದಿವ್ಯ, ಏನೇ ಆದರೂ ನೀವು ಆಂಗ್ಲ ಭಾಷೆಯಲ್ಲಿ ಬರೆದಿರುವ-"love in bangalore" ಅನ್ನು ಕನ್ನಡದಲ್ಲಿ ಬರೆಯಬೇಡಿ ಪ್ಲೀಸ್. ಮೇಲಿನ ನಿಮ್ಮ ವಾಕ್ಯ ಓದಿದರೆ ನಮ್ಮ ಆಸುಹೆಗ್ಡೆಯವರು ಖಂಡಿತ ತಮ್ಮತಲೆಯನ್ನು ಕಂಪ್ಯೂಟರ್‌ಗೆ ಚಚ್ಚಿಕೊಳ್ಳುವರು. :( -ಗಣೇಶ.

ನನ್ನ ಮಾತು ಸರಿಯಾಗಿದೆ ಅನ್ನುವುದನ್ನು ನಿಮ್ಮಿಂದ ತಿಳಿದು ಖುಷಿ ಆಯ್ತು. ನಿಮಗೆ ಯಾವುದು ಮುಖ್ಯ ಅಂತ ತಿಳಿದಂತೂ ಇಮ್ಮಡಿ ಖುಷಿ ಆಯ್ತು. ನೀವು ಎರಡೆರಡು ಬಾರಿ "ಪ್ರಯತ್ನಿಸುತ್ತೇನೆ" ಎಂದು ಬರೆದಿರುವುದನ್ನು ಓದಿದಾಗ, ಖುಷಿ ಜಾಸ್ತಿಯಾಗಿ, ನನ್ನ ಕಣ್ಣುಗಳೆರಡೂ ತುಂಬಿ ಬಂದವು. ಜೈ ಕರ್ಣಾಟಕ ಮಾತೆ! - ಆಸು ಹೆಗ್ಡೆ

ದಿವ್ಯಾ, ಶೀರ್ಷಿಕೆ ಕನ್ನಡದಲ್ಲೇಕಿಲ್ಲ?... ಆಂಗ್ಲವನ್ನೇ ಕನ್ನಡದಲ್ಲಿ ಬರೆಯಬಹುದಿತ್ತಲ್ಲ..!? ಅದ್ಸರಿ, ಪ್ರೀತಿಲಿ ಇರೋದು ಈ ೪ಕೆ ಕ್ಯಾಟೆಗರಿನ ಅಥವಾ ಇನ್ನ ಇದೆಯಾ? ;)

ಈ ಸಲ ಸುಮ್ಮನೆ ಒಂದು ರೀತಿ ವಿಬಿನ್ನ ವಾಗಿರಲಿ ಅಂತ ಆಂಗ್ಲ ದಲ್ಲಿ ಹಕ್ಕಿದ್ದೆ , ಅದಕ್ಕೆ ಕ್ಷಮೆ ಇರಲಿ :) ನನಗೆ ತಿಳಿದಿರುವ ಹಾಗೆ ೪ ಕೆಟಗರಿ ನಿಮಗೆ ಇನ್ನು ತಿಳಿದಿದ್ದಲಿ ಹೇಳಿ ನಮ್ಮ ಅಬ್ಯಾನ್ಥರ ವೇನಿಲ್ಲ :)

ಹ್ಮ್.. ಹುಡುಗನೊಬ್ಬ ಹುಡ್ಗೀನ ಯಾಕೆ ಪ್ರೀತಿಸ್ತಾನೆ? ನೂರಕ್ಕೆ ತೊಂಭತ್ತರಷ್ಟು ಕೇಸುಗಳಲ್ಲಿ "ನನಗೆ ಆಕೆ, ಆಕೆಯ ಪ್ರೀತಿ ಬೇಕು" ಅನ್ನುವ ಹಂಬಲದಿಂದ. ಹಾಗೆಯೇ ಹುಡುಗಿ ಹುಡುಗನನ್ನು ಪ್ರೀತಿಸುವುದರಲ್ಲಿಯೂ ಅದೇ ಕಾರಣ. ಆತನ ಪ್ರೀತಿ ಆರೈಕೆ ಆಸರೆ ಬೇಕು ಅಂತ. ನನಗೆ ಅನಿಸುವುದು - ಸುಮ್ಮನೆ ಹಾಗೆಯೇ ಮನಸಿಗೆ ಬಂದ ಯೋಚನೆ - ಹುಡುಗ ಹುಡುಗಿಯರಿಬ್ಬರೂ ವಿಭಿನ್ನ ರೀತಿಯಲ್ಲಿ ಯಾಕೆ ಯೋಚಿಸಬಾರದು? ಹೇಗೆಂದರೆ ಹುಡುಗನೊಬ್ಬ ಹುಡುಗಿಯೊಬ್ಬಳನ್ನು ನೋಡಿ ಯೋಚಿಸುತ್ತಾನೆ - ಈಕೆಗೆ ನನ್ನ ಸಂಗ ಖುಷಿ ಕೊಡಬಹುದು, ಅವಳು ಒಪ್ಪಿದಲ್ಲಿ ನಾನು ಅವಳನ್ನು ಬಾಳಸಂಗಾತಿಯಾಗಿ ಆರಿಸಿಕೊಂಡಲ್ಲಿ ನಾನು ಅವಳನ್ನು ಪ್ರೀತಿಯಿಂದ ನೋಡಿಕೊಂಡು ಅನ್ಯೋನ್ಯವಾಗಿರಬಹುದು - ಅಂತ. ಅಂದರೆ ಈ ರೀತಿ ಯೋಚಿಸುವುದರಲ್ಲಿ ಇರುವ ವ್ಯತ್ಯಾಸವೆಂದರೆ ಇಲ್ಲಿ "ಪ್ರೀತಿ ಬೇಕು" ಅನ್ನುವ ಬೇಡಿಕೆಗಿಂತ ನಾನು ಪ್ರೀತಿಸಿ ಅನ್ಯೋನ್ಯವಾಗಿ ಇರುತ್ತೇನೆ ಎಂಬ ಜವಾಬ್ದಾರಿ ಸಹಿತ ಪ್ರೀತಿ. ಹಾಗೆಯೇ ಹುಡುಗಿಯರ ವಿಷಯದಲ್ಲೂ.. ಈ ರೀತಿ ಯೋಚಿಸಿದರೆ ವ್ಯರ್ಥ ಪ್ರೇಮಾಲಾಪಗಳ ಹಾವಳಿ ಕಡಿಮೆಯಾಗಿ ಒಳ್ಳೆಯ ಅನ್ಯೋನ್ಯ ಪ್ರೀತಿ ಉಳಿಯಬಹುದೇನೋ? ಬಹುಷಹ ಸಣ್ಣ ವಯಸ್ಸಿನಲ್ಲಿ ಈ ಮಟ್ಟಿನ ಪ್ರೌಢತೆ ಬರದೇನೋ? ಗೊತ್ತಿಲ್ಲ...

ವಿಧ ೫ ಅವನು ಅವಳನ್ನು ಮೆಚ್ಚುತ್ತಾನೆ .ಇವಳು ಅವನನ್ನು ಮೆಚ್ಚುತ್ತಾಳೆ. ಇಬ್ಬರೂ ಒಬ್ಬರೊನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಜೊತೆ ಜೊತೆಯಲ್ಲಿ ಓಡಾಡಿಯೂ ಅವನು ಇವಳಿಗೆ ಬೇಸರವಾಗುವುದಿಲ್ಲ . ಇವಳು ಅವನಿಗೆ ನೀರಸವೆನಿಸುವುದಿಲ್ಲ. ಒಬ್ಬರ ಅನುಪಸ್ಥಿತಿ ಮತ್ತೊಬ್ಬರಿಗೆ ತಡೆಯಲಾಗದೆಂದೆನಿಸಿದಾಗ ಒಬ್ಬರನೊಬ್ಬರು ಅಗಲಿರಲಾಗುವುದಿಲ್ಲ ಎಂದಾಗ ಮದುವೆಯೊಂದೇ ದಾರಿ ಎಂದೆನಿಸುತ್ತದೆ. ಕೊನೆಗೆ ಮದುವೆ ಮಾಡಿಕೊಳ್ಳುತ್ತಾರೆ. ನಂತರ ? ಅದು ಈಗ ಬೇಡ ಬಿಡಿ

ಅಷ್ಟು ಬೇಗ ಬೇರೆ ಆಗೋಕ್ಕೆ ಕಾರಣ ಹುಡ್ಕೋರು ಬೇರೆ ಆಗೋದೇ ಒಳ್ಳೇದಲ್ವಾ..? ಜೀವನ ಪೂರ್ತ ಕಟ್ಕೊಂಡು ಒದ್ದಾಡೋಕಿಂತ ..!