ಅಪ್ಪ--ನಾಟಕ

To prevent automated spam submissions leave this field empty.

ಅಪ್ಪ  ನಾಟಕದ ಬಗ್ಗೆ ಕುತೂಹಲವಿತ್ತು.ಮೇಲಾಗಿ " ಜೆಪಿ" ಅವರು ಅಭಿನಯಿಸಿದ್ದು, ಚಂಪಾ ಬರೆದಿದ್ದು ಇವೇ ಮುಂತಾಗಿ
ಸಂಗತಿಗಳಿದ್ದವು.ಫೇಸ್ ಬುಕ್ ನಲ್ಲಿ ಅಟೆಂಡ್ ಆಗುವೆ ಎಂದು ಘೋಷಿಸಿದ ಅನೇಕ ಗೆಳೆಯರು ಬರುತ್ತಾರೆ ಭೇಟಿಯಾದೀತು ಎಂಬ ಉಮೇದಿನೊಂದಿಗೆ ಹೋದೆ. ಪ್ರೇಕ್ಷಕ ಪ್ರಭು ಯಾಕೋ ಮುನಿಸಿಕೊಂಡಿದ್ದ..ಕುರ್ಚಿ ಖಾಲಿ
ಇದ್ದವು. ಲೇಖಕರು ಹಾಜರಾಗಿದ್ದರು. ಕೊನೆತನಕ ಇದ್ರು ನಾಟಕ ನೋಡಿದ್ರು.

ಹುಡುಕಾಟವೇ ಪ್ರಧಾನ ವಿಷಯ ನಾಟಕದ್ದು ತನ್ನ  ಅಪ್ಪನ ಬೇರುಹುಡುಕುವ ಹಂಬಲ.ಇಡೀ ನಾಟಕದಲ್ಲಿ ವ್ಯಾಪಿಸಿನಿಲ್ಲುವ ಅವ್ವಳ  ಪಾತ್ರಕ್ಕೆ " ಜೆಪಿ" ಜೀವ ತುಂಬಿದ್ರು. ಭಾವಾವೇಶ ಇಲ್ಲದ ಸಹಜ ಅಭಿನಯ. ಮುಕ್ತದ
ಮಂಗಳತ್ತೆ ಯನ್ನು ಮೀರಿಯೂ ತನ್ನೊಳಗೆ  ಕಲಾವಿದೆ ಸಜೀವವಾಗಿದ್ದಾಳೆ ಎಂದು ತೋರಿಸಿಕೊಟ್ಟರು. ಚೂಟಿಯಿಂದ
ಅಭಿನಯಿಸಿದ ಬಾಲನಟ ನಮ್ಮ ಕಡೆಯ "ಜವಾರಿ ಕನ್ನಡ" ಮಾತಾಡಲು ಸ್ವಲ್ಪ ತಡವರಿಸಿದ ಆದರೆ ಹುಡುಗ
ಚೂಟಿಯಾಗಿದ್ದ.

.ಆದ್ರೂ ಯಾಕೋ ಪ್ರೋತ್ಸಾಹ " ಹೆಜ್ಜೆ" ಯ ಮೊದಲ ಪ್ರಯತ್ನಕ್ಕೆ ಸಾಕಾಗಿಲ್ಲ ಅನಿಸ್ತು
ಆದ್ರೂ ಅವರು ಹೆಜ್ಜೆ ಮೂಡಿಸಿದ್ದಾರೆ ಮುಂದೆ ರಭಸವಾಗಿ ಸಾಗಲಿ ಎಂದು ಹಾರೈಸುವೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಇಷ್ಟೇನಾ? <<ಆದ್ರೂ ಯಾಕೋ ಪ್ರೋತ್ಸಾಹ " ಹೆಜ್ಜೆ" ಯ ಮೊದಲ ಪ್ರಯತ್ನಕ್ಕೆ ಸಾಕಾಗಿಲ್ಲ ಅನಿಸ್ತು>> ಆರೋಪ ಮಾಡಿದೋರೂ ನೀವೇ! ಪೂರಾ ಬರೆಯದೇ ಆರೋಪಿಯಾದವರೂ ನೀವೇ!