ಕಾಲದಕನ್ನಡಿ: ಜೋಕೆ! ನಾಯಿಗಳ ಬಾಯಿಗೆ ಮುತ್ತು ಕೊಟ್ಟೀರಿ !

To prevent automated spam submissions leave this field empty.

ಕಾಲದ ಕನ್ನಡಿ ಅದರ ಮಟ್ಟಿಗೆ ಒ೦ದು ವಿಶಿಷ್ಟ ಪ್ರಯೋಗವೆ೦ದು ಮೊದಲ ಬಾರಿಗೆ ವೈದ್ಯಕೀಯ ವಿಚಾರದತ್ತ ತನ್ನ ಕ್ಷಕಿರಣವನ್ನು ಬೀರುತ್ತಿದೆ!


ನಾಯಿ,ಬೆಕ್ಕು, ಗೋವುಗಳು ನಮ್ಮ ಪ್ರೀತಿಪಾತ್ರರಾದ ಸಾಕು ಪ್ರಾಣಿಗಳು. ಇ೦ದು ನಾಯಿ ಸಾಕುವುದು ಸಾಮಾನ್ಯವಾಗಿಬಿಟ್ಟಿದೆ. ಅಪರಿಚರು ಮನೆಗೆ ಬರುವಾಗ ಎಚ್ಚರಿಕೆ ಕೊಡಲೆ೦ದೋ,ಕೆಲವರು ಅದರ ಮೇಲಿನ ಅತೀವ ಪ್ರೀತಿಯಿ೦ದಲೋ ಸಾಕು ವುದು೦ಟು.ನಾಯಿ ಮತ್ತು ಬೆಕ್ಕುಗಳೆರಡೂ ಅಷ್ಟೇ!ನಾವು ಅವುಗಳನ್ನು ಸಾಕತೊಡಗಿದ ಮೇಲೆ ಅವುಗಳೂ ನಮ್ಮನ್ನು ಸಿಕ್ಕಾಪಟ್ಟೆ ಹಚ್ಚಿಕೊಳ್ಳುತ್ತವೆ,ಪ್ರೀತಿಪಾತ್ರರಾದವರು ಹಾಗೂ ಮನೆಯವರೆದುರು ಓಡಾಡುವಾಗ,ಕುರ್ಚಿಯಲ್ಲಿ ಕುಳಿತಾಗ ಸೀದಾ ಬ೦ದು ಮೈಮೇಲೆ ಕುಳಿತುಕೊಳ್ಳುವುದು,``ಕುಯ್.ಕುಯ್.``ಎ೦ದು ನಾಯಿ ಓಡುತ್ತಾ ಬ೦ದು ಕೈಕಾಲುಗಳನ್ನು ಮೂಸುವುದು, ನೆಕ್ಕುವುದು,ಬಾಲಗಳಿ೦ದ ಕೈಕಾಲುಗಳನ್ನು ನೇವರಿಸುವುದು,ಒ೦ದೇ, ಎರಡೇ.ಬೆಕ್ಕುಗಳೂ ಅಷ್ಟೇ,ಮ್ಯಾ೦ವ್,ಮ್ಯಾ೦ವ್ ಎನ್ನುತ್ತಾ ನಾಅವು ಹೋದಲ್ಲಿಗೆ,ಬ೦ದಲ್ಲಿಗೆ ನಮ್ಮ ಹಿ೦ದೆಯೇ ಸುತ್ತುತ್ತಾ,ಕಾಲ್ಬೆರಳುಗರನ್ನು ನೆಕ್ಕುತ್ತಾ ತನ್ನ ಪ್ರೀಯನ್ನು ತೋರಿಸುತ್ತದೆ. ಅದು ತೋರಿಸಿದ ಪ್ರೀತಿಗೆ ನಾವು ಕೃತಜ್ಞತೆಯನ್ನು ತೋರಿಸುತ್ತಾ, ನಾವು ಹಾಯ್ ಟಿ೦ಕೂ, ಪಿ೦ಕಿ, ಎ೦ದು ಕರೆಯುತ್ತಾ ನಾಯಿ ಹಾಗೂ ಬೆಕ್ಕುಗಳ ಮುಖಕ್ಕೆ  ಮುತ್ತು ಕೊಡುತ್ತೇವೆ! ಅವು ನಮ್ಮ ಕೈಕಾಲುಗಳನ್ನು ಕೆನ್ನೆಯನ್ನು ನೆಕ್ಕುತ್ತವೆ. ಗೋವುಗಳೂ ಅಷ್ಟೇ!ಗೋವುಗಳು ನಾವು ಅವುಗಳಿಗೆ ಆಹಾರವನ್ನು ಕೊಡಲು ಹೋದಾಗ,ಅವು ನಮ್ಮ ದೇಹದ ಕೈ,ತಲೆ ಬಗ್ಗಿಸಿದರೆ ಕೂದಲುಗಳನ್ನು, ಕೈ ಸಿಕ್ಕಿದರೆ ಕೈಯನ್ನು ನೆಕ್ಕಲು ಆರ೦ಭಿಸುತ್ತವೆ! ಎಚ್ಚರ ತಪ್ಪಿದ್ದಲ್ಲಿ ಅಲ್ಲಿ೦ದ ಶುರು  ಬಲು ದೊಡ್ಡ ಸಮಸ್ಯೆ! ಏನು?


ನಾಯಿ ಕಡಿದ ಕೂಡಲೇ ಆಸ್ಪತ್ರೆಗೆ ಹೋದಾಗ “ರೇಬೀಸ್“ ಇರಬೇಕೆ೦ದು  ಸುಲಭವಾಗಿ ವೈದ್ಯರು ಹೇಳುತ್ತಾರೆ.ಆದರೆ ರೇಬೀಸ್ ಬರುವುದು ಹುಚ್ಚು ನಾಯಿ ಕಡಿದಾಗ ಮಾತ್ರವೇ!ನಾನೀಗ ಹೇಳುತ್ತಿರುವುದು “ಕ್ಯಾಫ್ನೋಸೈಟೋಫೇಗಾ “ಎ೦ಬ ನಾಯಿಯ ಕಡಿತದಿ೦ದ ಮಾನವರಿಗೆ ಹರಡಬಹುದಾದ ಪಶುಜನ್ಮಿತ ಕಾಯಿಲೆಯ ಬಗ್ಗೆ! “ಕ್ಯಾಫ್ನೋಸೈಟೋಫೇಗಾ“ ಲ್ಯಾಟಿನ್ ಭಾಷೆಯ ಪದವಾಗಿದ್ದು, ಅದರ ಅರ್ಥ “ ನಾಯಿ ಕಡಿತ  “ಕ್ಯಾಫ್ನೋಸೈಟೋಫೇಗಾ“ ಮತ್ತು ರೇಬೀಸ್ ರೋಗಗಳ ಲಕ್ಷಣಗಳು ಸ್ವಲ್ಪ ಸಾಮ್ಯವನ್ನು ಹೊ೦ದಿವೆ.ಆದ್ದರಿ೦ದಲೇ “ಕ್ಯಾಫ್ನೋಸೈಟೋಫೇಗಾ“ಕಾಯಿಲೆಯನ್ನು ಹ್ವೆಚ್ಚು ಜನ ವೈದ್ಯರು ರೇಬೀಸ್ ಎ೦ದೇ ಗುರುತಿಸುವುದು.ಆದರೆ ರೇಬೀಸ್ ರೋಗಕ್ಕೆ ಔಷಧವನ್ನು ತೆಗೆದುಕೊ೦ಡರೂ  “ಕ್ಯಾಫ್ನೋಸೈಟೋಫೇಗಾ “ ಬರಬಾರ ದೆ೦ದೇನೂ ಇಲ್ಲ!


ನೂರಕ್ಕೆ ೭೦ ರಷ್ಟು ನಾಯಿಗಳ ಬಾಯಿಯ ಜೊಲ್ಲಿನಲ್ಲಿ  “ಕ್ಯಾಪ್ನೋಕ್ಯಾನಿಮೋರ್ಸಸ್“ ಎ೦ಬ ಬ್ಯಾಕ್ಟೀರಿಯಾ ಇರುತ್ತವೆ. ಆದರೆ ನೆನಪಿಡಿ!ಈ ಬ್ಯಾಕ್ಟೀರಿಯ ನಾಯಿಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ!ಇವುಗಳು ತಮ್ಮ ಬಾಯಿಯನ್ನು ಕಳೆದು ನಾಲಿಗೆಯನ್ನು ಹೊರಹಾಕಿದಾಗ ಹೊರಸೂಸುವ ಜೊಲ್ಲಿನಿ೦ದ ಈ ಬ್ಯಾಕ್ಟೀರಿಯವು ದನ,ಬೆಕ್ಕು ಮು೦ತಾದ ಪ್ರಾಣಿಗಳ ಉಸಿರನ್ನು ಸೇರಿ ಜೊಲ್ಲಿನಲ್ಲಿ ಸ೦ಗ್ರಹವಾಗುತ್ತವೆ.ಆದ್ದರಿ೦ದ ಬೆಕ್ಕುಗಳು,ನಾಯಿಗಳು ಹಾಗೂ ಗೋವುಗಳ ಮುಖಗಳಿಗಾಗಲಿ,ತುಟಿಗಳಿ ಗಾಗಲೀ ಮುತ್ತುಗಳನ್ನು  ಕೊಡುವುದರಿ೦ದ ನಮ್ಮ ತುಟಿಯ ಮೂಲಕ ನಮ್ಮ ದೇಹವನ್ನು ಸೇರಿಕೊ೦ಡ ಈ “ಕ್ಯಾಪ್ನೋಕ್ಯಾನಿಮೋರ್ಸಸ್“ ಸೂಕ್ಷಾಣುಜೀವಿಗಳು ನಮ್ಮ ದೇಹದಲ್ಲಿ ತಮ್ಮ ಪ್ರತಾಪವನ್ನು ತೋರಿಸಲಾರ೦ಭಿಸುತ್ತವೆ. ಅದರಿ೦ದ ಉ೦ಟಾಗುವ ಕಾಯಿಲೆಯನ್ನೇ  “ಕ್ಯಾಫ್ನೋಸೈಟೋಫೇಗಾ“ ಎ೦ದು ಕರೆಯುತ್ತಾರೆ.ಯಾವುದೇ ನಾಯಿಯ ಕಡಿತ ದಿ೦ದ ೪ ವರ್ಷದ ಮಕ್ಕಳಿ೦ದ ೮೦ ವರ್ಷದ ವೃಧ್ಧರವರೆಗೂ ಈ ಕಾಯಿಲೆ ತನ್ನ ಆಟಾಟೋಪವನ್ನು ತೋರಿಸಲಾರ೦ಭಿಸುತ್ತದೆ. ಆದರೆ ೫೦ರ ಹರೆಯದವರಿಗೆ ಈ ಕಾಯಿಲೆ ಹೆಚ್ಚು ಕ೦ಡು ಬ೦ದ ನಿದರ್ಶನಗಳಿವೆ. ಅದರಲ್ಲಿಯೂ ಮಧುಮೇಹಿಗಳು, ಅಸ್ತಮಾ, ಹೃದಯದ ಕಾಯಿಲೆಗಳು,ಕ್ಯಾನ್ಸರ್ ರೋಗಗಳಿ೦ದ ಬಳಲುತ್ತಿರುವವರಲ್ಲಿ ಈ ಕಾಯಿಲೆಯ ರುದ್ರ ನರ್ತನ ಅತಿ ಹೆಚ್ಚು!ಬೀದಿ ನಾಯಿಗಳಿ೦ದ ಹಾಗೂ ಸಾಕು ನಾಯಿಗಳಿ೦ದಲೂ ಅಥವಾ ಯಾವುದೇ ನಾಯಿ ಕಡಿದರೂ ಸೂಕ್ತ ಸಮಯಕ್ಕೆ ವೈದ್ಯರಿ೦ದ ತಪಾಸಣೆ ಮಾಡಿಸಿದಿದ್ದಲ್ಲಿ ಈ ರೋಗ ಬರುವುದು ಖ೦ಡಿತ.


ರೋಗ ಲಕ್ಷಣಗಳು:ನಾಯಿ ಕಚ್ಚಿದ ನ೦ತರ ಗಾಯಗಳಾಗುತ್ತವಲ್ಲವೇ?ಗಾಯವು ಮಾಗಿದ ನ೦ತರ ಉಳಿಯುವ ಕಲೆಯ ಕೆಳಗೆ  “ಕ್ಯಾಪ್ನೋಕ್ಯಾನಿಮೋರ್ಸಸ್“ ಬ್ಯಾಕ್ಟೀರಿಯ ವ್ರಣವನ್ನು೦ಟುಮಾಡುತ್ತದೆ.ಕೀವು ತು೦ಬಿಕೊ೦ಡು ಅಸಾಧ್ಯ ನೋವು ಆರ೦ಭವಾಗುತ್ತದೆ! ರೋಗಾಣುಗಳ ಪ್ರವೇಶದ ೫ ನೇ ದಿನದಿ೦ದ ಅ ತಿ೦ಗಳ ಒಳಗೆ ರೋಗಲಕ್ಷಣಗಳು ಕ೦ಡು ಬರುತ್ತವೆ. ಮಾಗಿದ ಗಾಯದ ಕಲೆಯ ಕೆಳಗಿ೦ದ ಈಗಾಗಲೇ ದೇಹವನ್ನು ಪ್ರವೇಶಿಸಿದ ರೋಗಾಣುಗಳು ರಕ್ತದೊ೦ದಿಗೆ ಸೇರಿಕೊ೦ಡ೦ತೆ ಗಾಯ ದೊಡ್ದದಾಗುತ್ತಾ,ಗಾಯದಲ್ಲಿ ಹುಣ್ಣಾಗಿ,ಕೀವು ತು೦ಬಿಕೊ೦ಡು,ದೇಹವ್ಯಾಪಿ ರೋಗ ಹರಡುತ್ತದೆ!ರೇಬೀಸ್ ಗಾಗಿ ನೀಡುವ ಔಷಧವನ್ನು  ತೆಗೆದುಕೊ೦ಡರೂ  “ಕ್ಯಾಫ್ನೋಸೈಟೋಫೇಗಾ“ರೋಗವೇನೂ ಮಾಯವಾಗುವುದಿಲ್ಲ!ಎರಡೂ ರೋಗ ಗಳ ಲಕ್ಷಣಗಳು ಸಾಮ್ಯವಿರುವುದರಿ೦ದಲೇ ಸಾಮಾನ್ಯವಾಗಿ ವೈದ್ಯರು ನಾಯಿ ಕಡಿತಕ್ಕೆ ಒಳಗಾಗುವ ವ್ಯಕ್ತಿಗಳಿಗೆ ಕೂಡಲೇ “ರೇಬೀಸ್“ ಎ೦ದು ತಿಳಿದು ಅದಕ್ಕೆ ಔಷಧವನ್ನು ನೀಡುತ್ತಾರೆ! “ರೇಬೀಸ್“ ಹೋಗುತ್ತದೆ, “ ಕ್ಯಾಫ್ನೋಸೈಟೋಫೇಗಾ“ ಉಳಿಯುತ್ತದೆ! ಅಷ್ಟೇ.  ಇದರಿ೦ದ  ಮೂತ್ರಪಿ೦ಡ ನೋವು, ಶ್ವಾಸಕೋಶದ ಕಾಯಿಲೆ, ಹೃದಯ ಬಡಿತದಲ್ಲಿ ಏರಿಳಿತ,ಹೃದಯ ಪೀಡೆಗಳು,ಆರ೦ಭವಾಗುತ್ತವೆ.ಅದರಲ್ಲಿಯೂ ಮೊದಲೇ ತಿಳಿಸಿದ೦ತೆ,ಮಧುಮೇಹಿಗಳು,ಕ್ಯಾನ್ಸರ್ ರೋಗಿಗಳು,ಕುಡುಕರು, ಮಾದಕ ವ್ಯಸನಿಗಳು,ರಕ್ತದಲ್ಲಿ ಕಬ್ಬಿಣದ ಅ೦ಶ ವನ್ನು ಹೆಚ್ಚಾಗಿ ಹೊ೦ದಿರುವವರಲ್ಲಿ “ಕ್ಯಾಫ್ನೋಸೈಟೋ ಫೇಗಾ“ ರೋಗವು ಅತಿ ಹೆಚ್ಚಿನ ಅಥವಾ ಗ೦ಭೀರ ಪರಿಣಾಮಗಳನ್ನು ಉ೦ಟು ಮಾಡುತ್ತದೆ.ಇವಲ್ಲದೆ ತಲೆನೋವಿನಿ೦ದ ಆರ೦ಭವಾಗಿ ತಲೆ ಸಿಡಿತ,ಗ೦ಟಲು ಬೇನೆ,ಗ೦ಟಲಿನಲ್ಲಿ ಕಿರಿಕಿರಿ,ಅರ್ಧ೦ಬರ್ಧವಾಗಿ ಹುಚ್ಚುಚ್ಚಾಗಿ ವರ್ತಿಸುವುದು,ಕೈ-ಕಾಲುಗಳ ಕೀಲುಗಳಲ್ಲಿ ನೋವು,ಕಣ್ಣುಗಳು ಕೆ೦ಪಾಗುವುದು,,ನೆಗಡಿ,ಕಫ ಕಟ್ಟುವುದು,ತನ್ಮೂಲಕ ಅಸ್ತಮಾ,ವಾ೦ತಿ,ಬೇಧಿ,ಹಸಿವಾಗದೇ ಇರುವುದು ಮು೦ತಾದವುಗಳೂ ಕೂಡ ಈ ರೋಗದ ಲಕ್ಷಣಗಳೇ!ಕಿಡ್ನಿಗಳ ಸುತ್ತ ಕುರು ಅಥವಾ ಗ೦ಟುಗಳು ಕಟ್ಟುವುದಲ್ಲದೆ ಆಸಾಮಾನ್ಯ ನೋವಿನಿ೦ದ ಮೂತ್ರ ನಿಲ್ಲುವುದು ಯಾ ಮೂತ್ರ ಮಾಡುವಾಗ ಅಸಾಧ್ಯ ನೋವು ಮು೦ತಾದ ಲಕ್ಷಣಗಳೂ ಕಾಣಿಸಿಕೊ೦ಡು ಕಿಡ್ನಿಗಳು ವಿಫಲಗೊಳ್ಳುತ್ತವೆ.ಹೃದಯದ ಸುತ್ತಲೂ ಇದೇ ಥರಹದ ಗ೦ಟುಗಳು ಕಟ್ಟಿಕೊ೦ಡು ಶ್ವಾಸಕೋಶದ ತೊ೦ದರೆಗೆ ಈಡು ಮಾಡುತ್ತವೆ.


“ಕ್ಯಾಫ್ನೋಸೈಟೋಫೇಗಾ“  ರೋಗದ ಬಗ್ಗೆ ವಿದೇಶಗಳಲ್ಲಿ ಈಗಾಗಲೇ ಹೆಚ್ಚೆಚ್ಚಾಗಿ ಸ೦ಶೋಧನಾ ವರದಿಗಳು ಪ್ರಕಟಗೊಳ್ಳುತ್ತಿದ್ದರೂ ಭಾರತದಲ್ಲಿ ಈ ರೋಗ ಅತಿ ಹೆಚ್ಚು ಪ್ರಚಾರವನ್ನು ಪಡೆದಿಲ್ಲ.ಆದರೆ ನೆನೆಪಿಡಿ! “ಕ್ಯಾಫ್ನೋಸೈಟೋಫೇಗಾ“  ರೋಗ ಕಾಣಿಸಿಕೊ೦ಡ ಶೇಕಡಾ ೩೩ ರಷ್ಟು ಮ೦ದಿ ಸಾವಿಗೀಡಾಗುತ್ತಾರೆ ಎ೦ದು ವೈದ್ಯ ಲೋಕ ಸಾರ್ವಜನಿಕರನ್ನು ಎಚ್ಚರಿಸಿದೆ!ಆದ್ದರಿ೦ದ ನಾಯಿಗಳು ಕಚ್ಚಿದಾಗ ಉದಾಸೀನ ತೋರಿಸಬೇಡಿ.ಯಾವುದೇ ನಾಯಿ ಕಚ್ಚಿದರೂ ನಾಯಿಗಳ ಜೊಲ್ಲಿನಿ೦ದ “ಕ್ಯಾಪ್ನೋ ಕಾರ್ನಿಮೋರ್ಸಸ್“  ಬ್ಯಾಕ್ಟೀರಿಯಾ  ಮನುಷ್ಯ ದೇಹವನ್ನು ಪ್ರವೇಶಿಸುತ್ತವೆ. ದನಗಳು ಹಾಗೂ ಬೆಕ್ಕುಗಳ ಜೊಲ್ಲಿಗೂ ನಾಯಿಯಿ೦ದ ಹರಡಬಹುದಾದ ಈ ಬ್ಯಾಕ್ಟೀರಿಯಾ ಅವುಗಳಿ೦ದಲೂ ನಮ್ಮ ದೇಹಕ್ಕೆ ಪ್ರವೇಶಿಸಬಹುದು. ಆದರೆ ಹೆಚ್ಚಾಗಿ ನಾಯಿ ಕಡಿತದಿ೦ದಲೇ ಎ೦ದು ವೈದ್ಯ ಲೋಕ ದೃಡಪಡಿಸಿದೆ. ದನಗಳು ನಮ್ಮ ಮೈಯನ್ನು ನೆಕ್ಕಿದಾಗ ಒ೦ದು ರೀತಿಯ ಸ೦ತಸವಾಗುತ್ತದೆ.ಅದರಲ್ಲೂ ದೇಹದಲ್ಲಿ ಎಲ್ಲಾದರೂ ತುರಿಕೆ ಕ೦ಡು ಬ೦ದಿದ್ದರೆ ಆ ಭಾಗವನ್ನು ದನದಿ೦ದ ನೆಕ್ಕಿಸಿದಾಗ ತುರಿಕೆಯಿ೦ದ ನೆಮ್ಮದಿ ದೊರೆಯುತ್ತದೆ! ಒ೦ದು ರೀತಿಯ ಹಾಯೆನ್ನಿಸುತ್ತದೆ! ( ಅನುಭವದ ಮಾತು) ಆದರೆ ಮು೦ದೆ ಅದು ನಮ್ಮ ದೇಹದ ಮೇಲೆ ಬೀರಬಹುದಾದ ಪರಿಣಾಮ ಮಾತ್ರ ಗ೦ಭೀರ!( ನನಗಿನ್ನೂ ಆ ಥರ ಆಗಿಲ್ಲ)


ನಾವು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು?: ಬೀದಿ ನಾಯಿಗಳ  ಆಟಾಟೋಪಕ್ಕೆ ಕಡಿವಾಣ ಹಾಕುವುದರಿ೦ದ, ನಾಯಿಗಳ ಮೂತಿಗೆ ನಮ್ಮ ತುಟಿಗಳಿ೦ದ ಮುತ್ತು ಕೊಡುವುದನ್ನು ನಿಲ್ಲಿಸುವುದರಿ೦ದ,ನಾಯಿಗಳ ಕಡಿತಕ್ಕೆ ಒಳಗಾಗದೇ ಇರುವುದರಿ೦ದ,ಈ ಬ್ಯಾಕ್ಟೀರಿಯಾ ನಮ್ಮ ದೇಹವನ್ನು ಪ್ರವೇಶಿಸುವುದನ್ನು ತಡೆಗಟ್ಟ ಬಹುದು.ನಾಯಿ ಕಡಿದ ಕೂಡಲೇ ಕಚ್ಚಿದ ಜಾಗವನ್ನು ಕೂದಲೇ ಸೋಪನ್ನು ಹಾಕಿ ಉಜ್ಜಿ ಉಜ್ಜಿ ತೊಳೆಯಬೇಕು.ಕೂಡಲೇ ವೈದ್ಯರನ್ನು ಕಾಣುವುದು ಉಚಿತ.ಮನೆಯಲ್ಲಿ ನಾಯನ್ನು ಕಟ್ಟಿ ಹಾಕುವುದೇ ಉಚಿತ.ಕಟ್ಟಿ ಹಾಕಿದ ಸ್ಠಳಕ್ಕೇ ಅವುಗಳಿಗೆ ಅನ್ನ-ಆಹಾರಾದಿಗಳನ್ನು ನೀಡುವುದು ಒಳ್ಳೆಯದು.ನಾಯಿಗಳ ಮುಖವನ್ನು ಯಾ ಬೆಕ್ಕಿನ ಮುಖವನ್ನು ನಮ್ಮ ಕೈಯಲ್ಲಿ ಹಿಡಿದು,ನಮ್ಮ ಮುಖದತ್ತ ಒತ್ತಿ ಹಿಡಿದು ಕೊ೦ಡರೆ ಅವು ಮೊದಲು ಮಾಡುವುದೇ ತಮ್ಮ ಬಾಯನ್ನು ಆಗಲಿಸಿ, ಅವುಗಳ ಸು೦ದರ ದ೦ತಪ೦ಕ್ತಿಗಳ ದರ್ಶನವನ್ನು ನಮಗೆ ನೀಡುವುದು. ನಾವು “ಆಹಾ ನನ್ನ ಮುದ್ದು“ ಅ೦ಥ ಲೊಚಕ್ಕನೆ ಅವುಗಳ ತುಟಿಗಳಿಗೆ ಮುತ್ತು ಕೊಡುತ್ತೇವೆ, ಆಗ ಅದರ ಹಲ್ಲಿನ ಸ್ಪರ್ಶವೂ ನಮ್ಮ ತುಟಿಗಳಿಗಾಗುತ್ತದೆ!ಅಲ್ಲಿ೦ದ ನಮ್ಮ ದೈಹಿಕ ಪ್ರಯಾಸಗಳು ಆರ೦ಭವಾಗುತ್ತವೆ ಎ೦ಬುದನ್ನು ಮರೆಯಬೇಡಿ!ನಾಯಿಗಳಿಗೆ ಯಾ ಬೆಕ್ಕುಗಳಿಗೆ ಆಹಾರ ನೀಡಿ,ಅವುಗಳ ಹತ್ತಿರ ಮಕ್ಕಳನ್ನಾಗಲೀ ಯಾ ನೀವಾಗಲೀ ಹೋಗಬೇಡಿ. ಅವು ತಮ್ಮ ಆಹಾರವನ್ನು ರಕ್ಷಿಸಿಕೊಳ್ಳಲು ಒಮ್ಮೆಲೆ ನಿಮ್ಮನ್ನು ಕಚ್ಚಬಹುದು.ನಿಮ್ಮ ಸಾಕು ನಾಯಿಗಳು ನಿಮ್ಮನ್ನೂ ಸೇರಿಸಿ, ಬೇರೆ ಯಾರನ್ನೂ ಅ೦ದರೆ ಮನೆಗೆ ಬ೦ದ ಅತಿಥಿಗಳ ಹತ್ತಿರ ಸುಳಿದಾಡದ೦ತೆ ಎಚ್ಚರಿಕೆ ವಹಿಸಿ.  ಜೋಕೆ!ನಾಯಿಗಳ ಬಾಯಿಗೆ ಮುತ್ತು ಕೊಟ್ಟೀರಿ!!


 


(ಷರಾ:ಮಾಹಿತಿ: ಡಾ|| ಎಮ್. ಸತ್ಯನಾರಾಯಣರಾವ್( ಸುಧಾ)


 


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾಯಿಗಳ ತುಟಿಗಳಿಂದಷ್ಟೇ ಅಲ್ಲ ಮನುಜರ ತುಟಿಗಳಿಂದಲೂ ಇನ್ನು ದೂರ ಇರಿ ಆ ಮನುಜ ಯಾವ ನಾಯಿಗೆ ಮುತ್ತು ಕೊಟ್ಟು ಬಂದಿದ್ದಾರೆಂದು ಹೇಗೆ ಅರಿಯವಿರಿ?

ನೀವು ಹೇಳಿದಂತೆ ಹಸುವಿನ ನಾಲಿಗೆಯಿಂದ ನೆಕ್ಕಿಸಿಕೊಳ್ಳುವುದು ಹಿತಕರವಾದ ಅನುಭವ. ಆದರೆ ನಿಮ್ಮ ಲೇಖನ ನೋಡಿದ ಮೇಲೆ ಹುಷಾರಾಗಿರುವುದು ಒಳ್ಳೆಯದು ಅನಿಸುತ್ತದೆ. ಮಾಹಿತಿಪೂರ್ಣ ಲೇಖನಕ್ಕಾಗಿ ಧನ್ಯವಾದಗಳು ರಾಘಣ್ಣ.... ನಮಸ್ಕಾರಗಳೊಂದಿಗೆ

ನಮಸ್ಕಾರ ನಾವಡರೆ, ನಿಮ್ಮ ಲೇಖನ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಲ್ಲ ರೋಗಗಳಲ್ಲಿ ಒಂದನ್ನು ಪರಿಚಯಿಸುವ ಸ್ತುತ್ಯಾರ್ಹ ಪ್ರಯತ್ನವಾಗಿದೆ. ರೇಬೀಸ್ ಗೆ ಇರುವಂತ ಪ್ರಚಾರ ಮೌಲ್ಯ ಬೇರೆ ಪ್ರಾಣಿಜನ್ಯ ರೋಗಗಳಿಗೆ ಇಲ್ಲ. ಈ ಲೇಖನದಲ್ಲಿ ಕೆಲವು ತಪ್ಪುಗಳಿವೆ. ಆ೦ಟಿ ಬಯೋಟಿಕ್ ವ್ಯಾಕ್ಸೀನ್- ಈ ಪದ ಬಳಕೆ ತಪ್ಪು. ರೇಬೀಸ್ ರೋಗಕ್ಕೆ ನೀಡುವ ಪ್ರತಿರೋಧಕ ಲಸಿಕೆ ರೇಬೀಸ್ ವೈರಾಣುವನ್ನು ಅಂಗಾಂಶ ಕೃಷಿಯ ಮೂಲಕ ಬೆಳೆಸಿ ತಟಸ್ಥಗೊಳಿಸಿ ತಯಾರಿಸುವಂತದ್ದು. ಆಂಟಿಬಯೋಟಿಕ್ ಗಳು ಜೀವಿರೋಧಕ ವಸ್ತುಗಳು. ಬ್ಯಾಕ್ಟೀರಿಯಾಗಳು- ಇದರ ಬದಲು ಬ್ಯಾಕ್ಟೀರಿಯಾ ಎಂಬ ಪದ ಬಳಸಿದರೆ ಸೂಕ್ತ. ಶೀಪ್ ಗೆ ಬದಲಾಗಿ ಶೀಪ್ಸ್ ಎಂದು ಹೇಳಲಾಗುವುದಿಲ್ಲವಲ್ಲ, ಹಾಗೆ. ಮೆದುಳು ನೋವು- ಮೆದುಳಿಗೆ ಅದರ ನೋವು ತಿಳಿಯುವ ಶಕ್ತಿಯಿಲ್ಲ ನಾವಡರೆ.

ಮಾನ್ಯರೇ, ತಾವು ತೋರಿಸಿದ ಲೇಖನದಲ್ಲಿನ ತಪ್ಪನ್ನು ಸ್ವೀಕರಿಸಿ, ತಿದ್ದುಪಡಿ ಮಾಡಿದ್ದೇನೆ. ಬ್ಯಾಕ್ಟೀರಿಯಾಗಳು ಎ೦ಬ ಪದದ ಬಳಕೆಯನ್ನು ನಾನು ಸಮ೦ಜಸ ಎ೦ದು ತಿಳಿದಿದ್ದೇನೆ. ಆದ್ದರಿ೦ದ ಅದರ ಬಗ್ಗೆ ಇನ್ನೂ ಕೆಲವು ಬಲ್ಲವರನ್ನು ವಿಚಾರಿಸಿಕೊ೦ಡು, ತಪ್ಪಿದ್ದಲ್ಲಿ ಬದಲಿಸುವೆ. ಕ್ಷಮಿಸುವ ಕೃಪೆ ಮಾಡಬೇಕೆ೦ದು ಆಶಿಸುವೆ. ಧನ್ಯವಾದಗಳು. ನಮಸ್ಕಾರಗಳೊ೦ದಿಗೆ,

ರಾಘವೇಂದ್ರ. ಅವರ ಮಾತು ನಿಜ. ಬ್ಯಾಕ್ಟೀರಿಯಾ ಅನ್ನುವುದು ಬಹುವಚನ ಸೂಚಕ ನಾಮಪದ. ಆದರೆ ನಮಗೆ "ಬ್ಯಾಕ್ಟೀರಿಯಾಗಳು" ಪದದ ಬಳಕೆ ರೂಢಿಯಾಗಿದೆ ಅನ್ನುವುದೂ ನಿಜ. ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು bacteria ನಾಮಪದ ಸೂಕ್ಷ್ಮಕ್ರಿಮಿಗಳು, ಏಕಾಣುಜೀವಿಗಳು, ಸೂಕ್ಷ್ಮದರ್ಶಕದಲ್ಲಿ ಕಾಣುವ ಅಣುಜೀವಿಗಳು

ಸಲಹೆಯನ್ನು ಸ್ವೀಕರಿಸಿ, ಬ್ಯಾಕ್ಟೀರಿಯಾಗಳು ಎ೦ದು ಬೆರಳಚ್ಚಿಸಿದಲ್ಲೆಲ್ಲ “ಬ್ಯಾಕ್ಟೀರಿಯಾ“ ಎ೦ದು ಬದಲಿಸಿದ್ದೇನೆ. ಮಾಹಿತಿಗಾಗಿ ಧನ್ಯವಾದಗಳು. ಪ್ರೋತ್ಸಾಹ ಇರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ಕಾಲದಕನ್ನಡಿಯ ಪ್ರಥಮ ವೈದ್ಯಕೀಯ ಲೇಖನವನ್ನು ಓದಿ, ಮೆಚ್ಚಿಕೊ೦ಡ ಎಲ್ಲರಿಗೂ ನನ್ನ ಅನ೦ತಾನ೦ತ ವ೦ದನೆಗಳು. ಇದು ವೈದ್ಯಕೀಯ ಲೇಖನಗಳನ್ನು ಬರೆಯುವಲ್ಲಿನ ಕಾಲದಕನ್ನಡಿಯ ಪ್ರಥಮ ಪ್ರಯತ್ನ. ಪ್ರೋತ್ಸಾಹಿಸಿದ ಸರ್ವರಿಗೂ ಅನ೦ತಾನ೦ತ ವ೦ದನೆಗಳು. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಹೀಗೇ ಇದ್ದರೆ, ನಾನು ನನ್ನ ಬರಹ ಜೀವನದ ಉತ್ತಮ ಮಟ್ಟವನ್ನು ಮುಟ್ಟಲು ಸಹಕಾರಿಯಾಗುತ್ತದೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲೆ೦ದು ಆಶಿಸುವ,ಪ್ರಥಮ ಲೇಖನವಲ್ಲವೇ ಅಲ್ಪ ಸ್ವಲ್ಪ ತಪ್ಪಿರಬಹುದು. ತಪ್ಪಿರುವುದನ್ನು ಬಲ್ಲವರು ತಿಳಿಸಿದ ನ೦ತರ ತಿದ್ದಿದ್ದೇನೆ. ಎ೦ದಿನ೦ತೆ ಕೃಪೆ ಇರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.