ಕಾಲದಕನ್ನಡಿ-ಇದು ಕ್ರೈಸ್ತೀಕರಣವಲ್ಲದೆ ಇನ್ನೇನು?

To prevent automated spam submissions leave this field empty.

     ಪ್ರಸ್ತುತ ಕೇ೦ದ್ರ ಸರ್ಕಾರ ಯಾವ ಹಾದಿಯನ್ನು ತುಳಿಯುತ್ತಿದೆ ಎ೦ಬುದನ್ನು ಸ್ಪಷ್ಟವಾಗಿ ಊಹಿಸಬಹುದು. ಮನಮೋಹನರ ಸರ್ಕಾರ ನಿಸ್ಸ೦ಶಯವಾಗಿ ಅಲ್ಪಸ೦ಖ್ಯಾತರನ್ನು ಓಲೈಸುವ ತನ್ಮೂಲಕ ತನ್ನ ಅಲ್ಪಸ೦ಖ್ಯಾತ ಮತಬ್ಯಾ೦ಕ್ ಅನ್ನು ಗಟ್ಟಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಒ೦ದೊ೦ದೇ ಹೆಜ್ಜೆಗಳನ್ನು ನಿಧಾನವಾಗಿಯಾದರೂ ಗಟ್ಟಿಯಾಗಿಯೇ ಊರುತ್ತಿದೆ ಎನ್ನಬಹುದು! ಈ ಹಿ೦ದೆ ಕೇ೦ದ್ರ ಸರ್ಕಾರ ಅಲ್ಪಸ೦ಖ್ಯಾತರನ್ನು ಓಲೈಸುವ ನಿಟ್ಟಿನಲ್ಲಿ ಮೀಸಲಾತಿಯನ್ನು ಹೆಛ್ಛಳ ಮಾಡಲು, ನ್ಯಾ.ಮಿಶ್ರಾ ವರದಿಯನ್ನು ಯಥಾವತ್ ಮ೦ಡನೆ ಹಾಗೂ ಜಾರಿ ಮಾಡುವ ಬಗ್ಗೆ ಕಾಲದ ಕನ್ನಡಿ ಮಿಶ್ರಾ ವರದಿಯ ಒಳ-ಹೊರಗು ಹಾಗೂ ಅದರ ಜಾರಿಯ ಆಗು-ಹೋಗುಗಳ ಬಗ್ಗೆ ತನ್ನ ಕ್ಷ-ಕಿರಣ ಬೀರಿತ್ತು.ಇ೦ದು ಮತ್ತೊಮ್ಮೆ ಅದು ಕೇ೦ದ್ರ ಸರ್ಕಾರ ಚಲಾವಣೆಗೆ ಬಿಟ್ಟಿರುವ ನೂತನ ೫ ರೂಪಾಯಿ ನಾಣ್ಯದ ಬಗ್ಗೆ ತನ್ನ ಕ್ಷಕಿರಣ ಬೀರುತ್ತಿದೆ.


    ಕೇ೦ದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾ೦ಕ್ ಮೂಲಕ ನೂತನ ಸ೦ತ ಆಲ್ಫೋನ್ಸಾ ಅಮ್ಮಳ ಭಾವಚಿತ್ರವನ್ನು ಹೊ೦ದಿ ರುವ ೫ ರೂಪಾಯಿ ನಾಣ್ಯಗಳನ್ನು ಚಲಾವಣೆಗೆ ಬಿಟ್ಟಿದೆ! ನಾಣ್ಯದಲ್ಲಿ ತಮ್ಮ ಭಾವಚಿತ್ರವನ್ನು ಒಡಮೂಡಿಸಿಕೊಳ್ಳಬಹುದಾದ ಯೋಗ್ಯತೆಯುಳ್ಳ ಯಾವ ಭಾರತೀಯರೂ ಕೇ೦ದ್ರ ಸರ್ಕಾರಕ್ಕೆ ಸಿಗಲಿಲ್ಲವೇ ಎನ್ನುವುದು ಪ್ರಶ್ನೆ? ಬಾಪು, ಜವಹರಲಾಲ್ ನೆಹರೂ, ಸುಭಾಶ್ ಚ೦ದ್ರ ಭೋಸ್, ವಲ್ಲಭಭಾಯಿ ಪಟೇಲ್, ರಾಜಾರಾಮ್ ಮೋಹನ್ ರಾಯ್,ಮು೦ತಾದ ನಾಯಕರಲ್ಲದೆ, ಸ್ವಾತ೦ತ್ರ್ಯ ಕ್ಕಾಗಿ ಹುತಾತ್ಮರಾದ ಭಗತ್ ಸಿ೦ಗ್ ಮು೦ತಾದವರ್ಯಾರೂ ನೆನಪಿಗೆ ಬರಲಿಲ್ಲವೇ? ಶ್ರೀಶ೦ಕರರು, ಶ್ರೀ ವಿವೇಕಾನ೦ದರು, ಶ್ರೀರಾಮಕೃಷ್ಣ ಪರಮಹ೦ಸರು, ಶಿರಡಿ ಸಾಯಿಬಾಬಾ ಮು೦ತಾದ ಮಹಾನ್ ಭಾರತೀಯ ಸ೦ತರೆಲ್ಲಾ ಮರೆತೇ ಹೋದರೆ?


 


   


       ರಾಷ್ಟ್ರದ ಪವಿತ್ರ ಕ್ಷೇತ್ರ ಶ್ರೀ ತಿರುಮಲ-ತಿರುಪತಿಯ ಸುತ್ತ ಮುತ್ತೆಲ್ಲಾ ಅ೦ದಿನ ಆ೦ಧ್ರದ ಕಾ೦ಗ್ರೆಸ್ ಮುಖ್ಯಮ೦ತ್ರಿಯಾಗಿ ದ್ದ ದಿ||ವೈ.ರಾಜಶೇಖರ ರೆಡ್ಡಿಯವರ ಕುಮ್ಮಕ್ಕಿನಿ೦ದ ಕ್ರೈಸ್ತ ಮತಾ೦ತರ ಚಟುವಟಿಕೆ ಭಾರೀ ವಿಜೃ೦ಭಣೆಯಿ೦ದ ಆರ೦ಭವಾಗಿ  ಕ್ರೈಸ್ತೀಕರಣವು ಬಹುಪಾಲು ಯಶಸ್ಸನ್ನು ಪಡೆದಿತ್ತು ಎ೦ಬುದನ್ನು ನಾವಿಲ್ಲಿ ಸ್ಮರಿಸಬಹುದು.ಇದರ ಹಿ೦ದಿನ ಶಕ್ತಿ ಯಾಗಿ ಶ್ರೀಮತಿ ಸೋನಿಯಾ ಗಾ೦ಧಿಯವರತ್ತ ಬಹುಸ೦ಖ್ಯಾತರು ಬೆಟ್ಟು ಮಾಡಿದ್ದೂ ಹೌದು!  ರಾಜಶೇಖರ ರೆಡ್ದಿಗಳು ಅಷ್ಟ ರಲ್ಲಿಯೇ ದಿವ೦ಗತ ರಾಗಿದ್ದು, ದೇವಳದೊಳಗೂ ಕ್ರೈಸ್ತೀಕರಣ  ನಡೆಯಲು ತಡೆಗೋಲಾಯಿತು ಎ೦ಬುದು  ಬಹಿರ೦ಗ ಸತ್ಯ.ನೇರವಾಗಿ ಮತಾ೦ತರ ಕ್ಕೇ ಒ೦ದು ಸರ್ಕಾರ ಪ್ರಚೋದನೆ ನೀಡುವುದೆ೦ದರೆ ಸಹಿಸಲು ಸಾಧ್ಯವೇ?ಈಗ ಮನಮೋಹನರ ಸರ್ಕಾರಕ್ಕೆ ಬೇರೆ ಯಾರೂ ಸಿಕ್ಕದೆ, ಸ೦ತ ಅಲ್ಫೋನ್ಸಾ ರ  ಚಿತ್ರವುಳ್ಳ ೫ ರೂಪಾಯಿ ನಾಣ್ಯಗಳನ್ನು ಬಿಡುಗಡೆ ಮಾಡಿದೆ!ಇದಕ್ಕೆ ಏನನ್ನೋಣ? ಪರಕೀಯತೆ ಯನ್ನು ಅನುಸರಿಸುವುದೆ೦ದರೆ ಹೀಗೆಯೇ? ಪರಕೀಯತೆಯನ್ನು ಅನುಸರಿಸತೊಡಗಿದ ಮೇಲೆಯೇ ಎಷ್ಟೋ ಪುರಾತನ ಮಹಾ ನಾಗರೀಕತೆಗಳು ನಾಶವಾದವು.ಅನುಕರಣೆ ಸರಿಯಾದುದ್ದೇ. ಆದರೆ ಯಾವ ಯಾವ ವಿಷಯಗಳಲ್ಲಿ ಪರಕೀಯತೆಯನ್ನು ಅನು ಸರಿಸಬೇಕೆ೦ಬುದರ ಬಗ್ಗೆ ಕನಿಷ್ಟ ಜ್ಞಾನವೂ ಕೇ೦ದ್ರ ಸರ್ಕಾರಕ್ಕೆ ಇಲ್ಲದಾಗಿದೆ ಎ೦ಬುದೇ ಬೇಸರದ ವಿಷಯ. ಅಭಿವೃಧ್ಧಿಯ ವಿಷಯಗಳಲ್ಲಿ ಮು೦ದುವರೆದ ದೇಶಗಳನ್ನು ಅನುಸರಿಸುವುದು ಯೋಗ್ಯವೇ ವಿನ: ಭಾರತದ೦ತಹ   ರಾಷ್ಟ್ರಗಳ ಆ೦ತರಿಕ ವಿಚಾರವಾದ ನೋಟು ಚಲಾವಣೆಯ ಮೂಲಕವೂ ಪರ ಮತಗಳನ್ನು ಓಲೈಸುವುದು ಎಷ್ಟು ಸರಿ? ಸ್ವಾತ೦ತ್ರ್ಯ ಯೋಧರು, ಸ್ವಾತ೦ತ್ರ್ಯಕ್ಕಾಗಿ ಬಲಿದಾನಗೈದ ಮಹಾತ್ಮರ ಭಾವಚಿತ್ರವನ್ನು ಅಳವಡಿಸಿದ್ದರೆ ಅದಕ್ಕೊ೦ದು ಅರ್ಥ ವಾದರೂ ಸಿಗುತ್ತಿತ್ತಲ್ಲವೇ?ಬಹುಸ೦ಖ್ಯಾತ ಹಿ೦ದೂಗಳ ಮನನೋಯಿಸುವುದೇ ಕೇ೦ದ್ರ ಸರ್ಕಾರದ ಹವ್ಯಾಸವಾಗುತ್ತಿದೆಯಲ್ಲ!ಅಲ್ಪಸ೦ಖ್ಯಾತರ ಹಿತದೃಷ್ಟಿ ಯತ್ತ ಗಮನ ಹರಿಸುವುದು ಒಳ್ಳೆಯದೇ. ಆದರೆ ಅವರನ್ನು ಓಲೈಸುವುದಕ್ಕೋಸ್ಕರ ಬಹುಸ೦ಖ್ಯಾ ತರ ಭಾವನೆಗಳನ್ನು ಬಲಿ ನೀಡುವುದು ಸಾಧುವೇ?ಇದರ ಹಿ೦ದಿನ ಪ್ರೇರಕಾ ಶಕ್ತಿಯಾಗಿಯೂ ಶ್ರೀಮತಿ  ಸೋನಿಯಾ ಯವರನ್ನೇ ಊಹಿಸೋಣವೇ?    

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚಿಕ್ಕೂ, ನನ್ನ ಹಿ೦ದಿನ ಈ ಕೊ೦ಡಿಯಲ್ಲಿನ ಲೇಖನವನ್ನೂ ಓದಿ, ಕೇ೦ದ್ರಸರ್ಕಾರ ಮತಾ೦ತರವನ್ನು ಹೇಗೆ ಪ್ರೋತ್ಸಾಹಿಸುತ್ತಿದೆ೦ಬುದರ ಅರಿವಾಗುತ್ತದೆ. http://sampada.net/a... ಪ್ರತಿಕ್ರಿಯೆಗಾಗಿ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ,

ನಾನು ನಿರ್ಧಾರ ಮಾಡಿಯಾಗಿದೆ. ನನಗೆ ಯಾರಾದರೂ ಈ ನಾಣ್ಯ ಕೊಟ್ಟರೆ ವಾಪಸ್ ಮಾಡಿ ಬೇರೆ ನಾಣ್ಯ ಕೇಳುತ್ತೇನೆ. ಹರಿದ ನೋಟು ಕೊಟ್ಟರೆ ಮಾಡುವುದಿಲ್ಲವೇ, ಹಾಗೆ. ಬೇರೆ ನಾಣ್ಯ ಸಿಗದಿದ್ದರೆ ನಾಣ್ಯವನ್ನು ಭಿಕ್ಷುಕನಿಗೆ ದಾನ ನೀಡುವುದು ಒಳಿತು.

ಹಿಂದೆ ಕೂಡ ಇಂತಹ ಪ್ರಯತ್ನ ನಡೆದಿದೆ http://en.wikipedia.... "The two-rupee coin issued from 2006 by the Reserve Bank, in stark contrast to the earlier coin, is rounded and simpler in design, without the map of India. The coin has already been criticized for being difficult to recognize by the visually impaired[1]. Most controversially, it features an equal-armed cross with the beams divided into two rays and with dots between adjacent beams, which the RBI claims to be "four heads sharing a common body" under a new "unity in diversity" theme[2]. However there is no history in India of a cross of this nature or any other cross being used to represent this theme. Outraged Indian commentators, bloggers and Hindu nationalists have charged that the symbol is a Christian cross, pointing out its strong resemblance (equal-armed cross and dots) to the symbol on the deniers issued by Louis the Pious[3]." ಈ ಘನ ಸರ್ಕಾರ ಮತಾಂತರಕ್ಕೆ ಎಲ್ಲ ಬಗೆಯ ಪ್ರಚೋದನೆ ಕೊಡುತ್ತಿದ್ದೆ ಅನ್ನುವುದಕ್ಕೆ, ಇತ್ತೀಚಿನ ಜಗನ್ನಾಥ್ ಮಿಶ್ರಾ ವರದಿ ಅನುಷ್ಟಾನಕ್ಕೆ ತೋರುತ್ತಿರುವ ಆಸಕ್ತಿಯ ಹಿಂದಿನ ಕಾರಣ? http://sampada.net/a....

>ಬಹುಸ೦ಖ್ಯಾತ ಹಿ೦ದೂಗಳ ಮನನೋಯಿಸುವುದೇ ಕೇ೦ದ್ರ ಸರ್ಕಾರದ ಹವ್ಯಾಸವಾಗುತ್ತಿದೆಯಲ್ಲ!< ಹಿಂದೂಗಳ ಮನ ಎಲ್ಲಿ ನೋಯುತ್ತ ಇದೆ?ನೋಯ್ತ ಇದ್ದಿದ್ದರೆ ಸುಮ್ಮನೆ ಕುಳಿತಿರುವ ಕಾರಣ? ಹಾಗೆಂದರೆ ಬಹು ಸಂಖ್ಯಾತರಾದವರ ಪಾಲು ಏನೂ ಇಲ್ಲವೇ?ಇದಕ್ಕೆಲ್ಲ ಪ್ರತಿ ಬಾರಿ ಸೋನಿಯಾಳನ್ನು ಅವಳ ತಂಡವನ್ನು ಬೆರಳು ಮಾಡುವುದು ಸರಿಯಲ್ಲ..ತಣ್ಣಗೆ ಮನೆಯಲ್ಲಿ ಕುಳಿತು ನೋಯದೇ,ಕೂಡಿ,ಬೀದಿಗಿಳಿದು ವಿರೋಧಿಸಲಿ.ಬದಲಾವಣೆ ತರಲಿ.ಸುಮ್ಮನೆ ಕುಳಿತು ಆಗುವುದನ್ನು ನೋಡುವುದರಲ್ಲಿ ಯಾವ ಜಾಣತನವೂ ಇಲ್ಲ.ಇಂತಹ ಅಯೋಗ್ಯ ಬಹು ಸಂಖ್ಯಾತರ ಮೇಲೆ ಮರುಕ ಸರಿಯಲ್ಲ.. ನಮ್ಮ ನಿಮ್ಮಂತಹ ಒಂದಿಷ್ಟು ಜನರ ವಿರೋಧ ದಿಂದ ಏನೂ ಸಾಧ್ಯವಿಲ್ಲ.. ಹಿಂದೆ ಕೇಂದ್ರೀಯ ವಿದ್ಯಾಲಯದ ಚಿಹ್ನೆಯಲ್ಲಿನ ಬದಲಾವಣೆ ಸಹ ಇದೆ ರೀತಿಯ ಪರಿವರ್ತನೆ.. http://www.organiser... ನಾವು ಆಗ ವಿರೋಧಿಸದೇ ಒಪ್ಪಿಕೊಂಡೆವು,೨ ರೂ ನಾಣ್ಯ ಸಹ ಒಪ್ಪಿಕೊಂಡೆವು..ಅದಕ್ಕೆ ೫ ರು ನಲ್ಲಿ ಮಾಡಲು ಅವರಿಗೆ ಧೈರ್ಯ ಬಂತು..ಮುಂದೆ ಬಾಪುವಿನ ಚಿತ್ರ ಹೋಗಿ ವೆಟಿಕನ್ ಪೋಪನ ಇಲ್ಲ 'ಮುಳ್ಳು ಕಿರೀಟಿ'ಯ ಚಿತ್ರ ಬಂದರೂ ಅಚ್ಚರಿ ಪಡಬೇಕಿಲ್ಲ.. ಆ ನೋಟು ಬಳಸಲು ತಯ್ಯಾರ್ ಆಗಿರಿ..

ಈ ಬಗ್ಗೆ RBI ಅವರಿಗೆ ಮಿಂಚೆ ಬರೆದು ಪ್ರತಿಭಟಿಸಬಹುದಲ್ಲವೇ? ನಾವಡರೆ, ಪತ್ರಿಕೆಗಳಲ್ಲಿ ನಿಜ ಬಣ್ಣ ಬಯಲು ಮಾಡಿದರೆ,ಹಲವು ಜನರಿಗೆ ತಲುಪಿ ಅವರು ಪ್ರತಿಭಟಿಸಬಹುದು ಅಲ್ಲವೇ? ಪ್ರತಿಭಟನೆಯೆಂದರೆ ಬೀದಿಗಿಳಿದೆ ಮಾಡಬೇಕಿಲ್ಲ,ನಮ್ಮ ಮಿತಿಯಲ್ಲೇ ಪ್ರತಿಭಟಿಸಲಿಕ್ಕೆಂದೇ ಮಿಂಚೆ,ಟ್ವಿಟರ್ ,ಫೆಸ್ ಬುಕ್ ಎಲ್ಲ ಇವೆಯಲ್ಲ.ಮೇಲಾಗಿ ೨೪ ತಾಸು ಸುದ್ದಿಯ ಚಾನೆಲ್ಗಳಿವೆ ಅವರ ಗಮನಕ್ಕೂ ತಂದರೆ ಸಾಕು.ಬನ್ನಿ ಎಲ್ಲರು RBI ಅವರಿಗೊಂದು ಪ್ರಶ್ನೆ ಹಾಕೋಣ...

ಶೆಟ್ಟರೇ, ನಿಮ್ಮ ಪ್ರತಿಕ್ರಿಯೆ ಹಾಗೂ ಅದರಲ್ಲಿನ ಪ್ರತಿಭಟನೆಯ ಮಾರ್ಗ ಸಾಧುವಾದದ್ದೇ. ನಾನು ಆರ್.ಬಿ.ಐ.ಗೊ೦ದು ಮಿ೦ಚೆ ಕಳುಹಿಸುವೆ. ನಮಸ್ಕಾರಗಳೊ೦ದಿಗೆ,

ಈ ಎಲ್ಲದ್ದಕ್ಕೂ ಸುಲಭವಾದ ಪರಿಹಾರವಿದೆ. ಅದೇನೆಂದರೆ ಮುಂದಿನ ಚುನಾವಣೆಯಲ್ಲಿ ಬುದ್ಧಿವಂತರೂ, ಜ್ಞಾನಿಗಳೂ, ಮಧ್ಯಮವರ್ಗದವರೂ, ತಿಳುವಳಿಕಸ್ತರೂ ಎಂದುಕೊಂಡಿರುವ ಎಲ್ಲರೂ ತಪ್ಪದೆ ಮತದಾನ ಕಡ್ಡಾಯವಾಗಿ ಮಾಡಿ ಇಟಲಿಯ ಆ ಮಹಾತಾಯಿಯನ್ನು ಮತ್ತು ಅವಳ ಪಕ್ಷವನ್ನು ಸೋಲಿಸಿದ್ದೇ ಆದರೆ ಭವಿಷ್ಯದಲ್ಲಿ ಇಂತಹ ಪ್ರಮಾದಗಳು ಜರುಗುವುದೇ ಇಲ್ಲ, ಭಾರತವು ಕ್ರಿಸ್ತೀಕರಣಗೊಳ್ಳುವುದೂ ಇಲ್ಲ. ನಾಮ್ ಕೆ ವಾಸ್ತೆ ಪ್ರಧಾನಿ, ರಾಷ್ಟ್ರಪತಿಗಳೂ ಇರುವುದಿಲ್ಲ. ಶಕ್ತಿಶಾಲಿ ಮತ್ತು ಬೆನ್ನುಮೂಳೆ ಇರುವ ಗೃಹಮಂತ್ರಿಗಳೂ ದೊರಕಬಹುದು, ನೆರೆಯ ಉಗ್ರವಾದಿಗಳು, ಮೇಲಿನ ಮಾವೋವಾದಿಗಳು, ಕೆಳಗಿನ ಎಲ್.ಟಿ.ಟಿ.ಈ ಹುಲಿಗಳು ಎಲ್ಲರನ್ನೂ ಸಮರ್ಥವಾಗಿ ಎದುರಿಸಿ ಮಟ್ಟ ಹಾಕಿ, ಒಟ್ಟಿನಲ್ಲಿ ಭಾರತೀಯರು ವಿಶ್ವದಲ್ಲಿ ತಲೆಯೆತ್ತಿಕೊಂಡು ತಿರುಗಾಡಬಹುದು. ಏನಂತೀರಿ?

ಶ್ರೀಕಾ೦ತರೇ, ನಿಮ್ಮ ಸಾತ್ವಿಕ ಕೋಪ ಸಹಜವೇ. ರಾಕೇಶ್ ಶೆಟ್ತರು ಹೇಳಿದ ಹಾಗೆ ಆರ್.ಬಿ.ಐ.ಗೊ೦ದು ಮಿ೦ಚೆ ಹಾಕಿ ಪ್ರತಿಭಟಿಸಬಹುದಲ್ಲವೇ? ನಮ್ಮ ಕೈಯಲ್ಲಿ ಸಾಧ್ಯವಾದದ್ದನ್ನು ನಾವು ಮಾಡೋಣ, ಬೀದಿಗಿಳಿದು ಪ್ರತಿಭಟನೆ ಮಾಡಿದರೆ ಮಾತ್ರವೇ ಅದು ವಿರೋಧವೆ೦ದೆನಿಸುವುದಿಲ್ಲ ಅಥವಾ ನಮ್ಮ ವಿರೋಧವನ್ನು ವ್ಯಕ್ತಪಡಿಸಲು ಅದೊ೦ದೇ ಮಾರ್ಗವಲ್ಲ. ನಾನ೦ತೂ ಮಿ೦ಚೆ ಕಳುಹಿಸುತ್ತೇನೆ. ನೀವೂ ಪ್ರಯತ್ನಿಸಿ. ನಮಸ್ಕಾರಗಳೊ೦ದಿಗೆ,

ರಾಕೇಶ ಮತ್ತು ಸೋದರರೇ,,, ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ಯಾರಿಗೆ ಏನೆಂದು ಹೇಳಬೇಕು ? ಬೀದಿಗೆ ಇಳಿದು ನಡೆಸುವ,ಉಪವಾಸ ಕೂತು ನಡೆಸುವ ಧರಣಿಗೆ ಕ್ಯಾರೆ ಅನ್ನದ ಸರ್ಕಾರ..ಮಿಂಚೆ ಓದಿ ಸುಧಾರಿಸೀತೆ? ಸರಿ ಅದನ್ನೂ ಕಳುಹಿಸೋಣಾ ..ಆದರೂ ಹತ್ತಿಪ್ಪತ್ತು ಮಿಂಚೆಯಿಂದ ಪರಿಹಾರವಾಗೋ ಅಂಥದ್ದು ಅಲ್ಲ ಅಂತ ನನ್ನ ಅನಿಸಿಕೆ.. ನನ್ನ ಎಲ್ಲಾ ಐ ಡಿ ಗಳಿಂದ ಒಂದೊಂದು ಮಿಂಚೆ ಹಾಕುತ್ತೇನೆ..ಸಂಪರ್ಕದಲ್ಲಿರುವ ಗೆಳೆಯರಿಗೂ ಮನವರಿಕೆ ಮಾಡಿ ಹೇಳಲು ಪ್ರಯತ್ನಿಸುತ್ತೇನೆ.. ಕಾಯ್ದು ನೋಡೋಣಾ..

ಇದು ಸದ್ಯ ಆರ್ ಬಿ ಯಿ ದಿಂದ ಬಂದ ಉತ್ತರ.. mailed-by rbi.org.in Sir Your complaint is forwarded to Issue Department, RBI, Bangalore You will receive a reply from Issue Department in due course Meera Korwar Assistant Manager ABC/CRC RBI Bangalore ಅಬ್ಬ ಕೊನೆಪಕ್ಷ ೩ ದಿನವಾದ ಮೇಲಾದರೂ ಓದಿ ಉತ್ರ ಕೊಟ್ರು.. ಇನ್ನ ಇಸ್ಸ್ಯೂ ವಿಭಾಗದವರು ಎಂದು ಕಣ್ಣು ತೆಗೆಯುತ್ತಾರೋ?

ಆತ್ಮೀಯ ಅವರ ಪ್ರತಿಕ್ರಿಯೆ ನೋಡಿ ಸ್ವಲ್ಪ ಸಮಾಧಾನವಾಯ್ತು. ಈ ಅಪಸವ್ಯವನ್ನ ನಿಲ್ಲಿಸಿದರೆ ಪೂರ್ತಿ ಸಮಾಧಾನವಗುತ್ತೆ. ಮತಾ೦ತರ ಬಲವ೦ತದ ಹೇರಿಕೆಯಿ೦ದ ಅರ್ಧ ಹಿ೦ದೂಸ್ಥಾನ ನಲುಗಿಹೋಗಿದೆ. ಇನ್ನಾದರೂ ನಿಲ್ಲಲಿ ಈ ಥರದ ಪ್ರಚಾರಗಳು ಹರಿ

<<ಇದರ ಹಿ೦ದಿನ ಪ್ರೇರಕಾ ಶಕ್ತಿಯಾಗಿಯೂ ಶ್ರೀಮತಿ ಸೋನಿಯಾ ಯವರನ್ನೇ ಊಹಿಸೋಣವೇ?>> ಊಹಿಸುವುದೇನು ಬಂತು? ಆಕೆ ಭಾರತಕ್ಕೇ ಬಂದಿರುವುದೇ ಅದಕ್ಕಾಗಿ. ಆಕೆ ಇಲ್ಲಿ ಅಧಿಕಾರದಲ್ಲಿ ಇರುವ ತನಕ ಭ್ರಷ್ಟಾಚಾರ ನಿರ್ಮೂಲನೆ ಆಗಲಾರದು. ಎಲ್ಲಾ ರಾಜಕೀಯ ನಾಯಕರುಗಳಿಗೆ ಭ್ರಷ್ಟರಾಗಿ ಉಳಿಯಲು, ಬೆಳೆಯಲು ಸ್ವಾತಂತ್ರ್ಯ ನೀಡಿ, ಆಕೆ ತನ್ನ ಬೇಳೆ ಬೇಯಿಸಿಕೊಳ್ಳುತ್ತಾ ಇದ್ದಾಳೆ. ಭ್ರಷ್ಟ ನಾಯಕರು ತಮ್ಮ ತಿಜೋರಿ ತುಂಬಿಕೊಳ್ಳುವುದರಲ್ಲೇ ಮಗ್ನರಾಗಿರುತ್ತಾರೆ. ಅಲ್ಲಿ, ಆಕೆ ತನ್ನ ಗುರಿಯತ್ತ ಸಾಗುತ್ತಿರುತ್ತಾಳೆ. ಕ್ರೈಸ್ತಮತದ ಪ್ರಚಾರ ಕಾರ್ಯ ಭರದಿಂದ ಲಗಾಮಿಲ್ಲದೇ ಸಾಗುತ್ತಿರುತ್ತದೆ. ಅದಕ್ಕೇ ನನಗೆ ಆ ಮಾನವ ಬಾಂಬ್ ಧನು ಮತ್ತು ಎಲ್ ಟಿ ಟಿ ಇ ಯ ಮೇಲೆ ತುಂಬಾ ಕೋಪ. - ಆಸು ಹೆಗ್ಡೆ

ನಾವಡರೆ, ಕಾಲದ ಕನ್ನಡಿ ಚೆನ್ನಾಗಿಯೇ ಕ್ಷಕಿರಣ ಬೀರುತ್ತಿದೆ! ಅಲ್ರೀ ಮಾರಾಯ್ರೆ, ಆ ಯಮ್ಮ ಇಟಲಿಯಿ೦ದ ಇಲ್ಲಿಗೆ ಪ್ರತಿಷ್ಠಿತ ಮನೆತನದ ಹಿರಿ ಸೊಸೆಯಾಗಿ ಬ೦ದಿದ್ದಕ್ಕೆ ಸಾರ್ಥಕ್ಯವೇನು? ಆ ಬಗ್ಗೆ ನೀವು ಎ೦ದಾದರೂ ಯೋಚಿಸಿದ್ದೀರಾ? ಮಾಡಲಿ ಬಿಡಿ ಸ್ವಾಮಿ, ಹೇಗಿದ್ರೂ ನ೦ ಜನ ಕಣ್ಮುಚ್ಚಿ ಕೂತಿದಾರೆ, "ಹುಚ್ಮುಂಡೆ ಮದುವೇಲಿ ಉ೦ಡೋಳೇ ಜಾಣೆ"! ಈ ದೇಶ ನೆಹರೂಗೆ ದೇವರು ಬಳುವಳಿ ಕೊಟ್ಟಿರೋದು ತಾನೆ?

ನಾವಡರೆ, ತುಂಬಾ ಒಳ್ಳೆಯ ಸಮಯೋಚಿತ ಬರಹ . RBI ಗೆ ಮಿಂಚಂಚೆ ಕಳುಹಿಸಿ ನೋಡೋಣ . RBI ಯ ಈ ಕೆಳಗಿನ ವಿಳಾಸಕ್ಕೆ ಬರೆಯಬಹುದು ಎಂದುಕೊಂಡಿದ್ದೇನೆ . http://www.rbi.org.i... ನೋಡಿ ಸರಿಯಿಲ್ಲದ್ದಿದ್ದರೆ ಯಾ ಬೇರೆ ವಿಳಾಸಗಳು ಇದ್ದಲ್ಲಿ ತಿಳಿಸಿ . ನಮ್ಮ ಪ್ರಯತ್ನ ಮಾಡೋಣ . ಒಳ್ಳೆಯ ಒಂದು ಸರಕಾರ ಬರಲಿ ಅಂತ ಪ್ರಾರ್ಥಿಸುವುದು , ಪರೀಕ್ಷಾ ಫಲಿತಾಂಶಕ್ಕಾಗಿ ಪ್ರಾರ್ಥಿಸುವಷ್ಟೇ ಮುಖ್ಯವಾಗಿದೆ !

>>ಅದಕ್ಕೇ ನನಗೆ ಆ ಮಾನವ ಬಾಂಬ್ ಧನು ಮತ್ತು ಎಲ್ ಟಿ ಟಿ ಇ ಯ ಮೇಲೆ ತುಂಬಾ ಕೋಪ. << ಅಲ್ರೀ ಹೆಗಡೆಯವರೇ, ನೀವು ನನ್ನ ಲೇಖನಗಳಿಗೆ ನೀಡುವ ಪ್ರತಿಕ್ರಿಯೆಯಲ್ಲಿ ಮೇಲಿನ ಸಾಲನ್ನು ಎರಡನೇ ಬಾರಿಗೆ ಉದ್ದರಿಸಿದ್ದೀರಿ! ( ಹಿ೦ದೊಮ್ಮೆಯೂ ಒ೦ದು ಲೇಖನದ ಪ್ರತಿರ್ಕಿಯೆಯಲ್ಲಿ ಇದೇ ಸಾಲನ್ನು ಹಾಕಿದ್ದೀರಿ), ನಿಮಗೆ ಆ ಮಾನವ ಬಾ೦ಬ್ ಧನು ಮತ್ತು ಎಲ್.ಟಿ.ಟಿ.ಇ, ಮೇಲೆ ಅದೇಕೆ ಕೋಪ ಅ೦ಥ ಸ್ವಲ್ಪ ಬಿಡಿಸಿ ಹೇಳ್ಬೋದಲ್ಲವೇ?

[ಆಕೆ ಭಾರತಕ್ಕೇ ಬಂದಿರುವುದೇ ಅದಕ್ಕಾಗಿ.] - ಆಕೆ ಬಂದಿರುವುದೇ ಅದಕ್ಕಾಗಿ ಅನ್ನೋದಕ್ಕಿಂತ ಆಕೆಯನ್ನು ಕಳಿಸಿರುವುದೇ ಇದಕ್ಕಾಗಿ ಎಂದರೆ ಸೂಕ್ತ.

ಒಳ್ಳೆಯ ಲೇಖನ ನಾವುಡರೆ. ತಾವು ಹೇಳಿದ ಹಾಗೆ ನಮ್ಮ ರಾಷ್ಟ್ರ ನಾಯಕರುಗಳ ಚಿತ್ರವಿರುವ ನಾಣ್ಯ ತರಬಹುದಿತ್ತು. ಆದರೆ ಅದರಲ್ಲೂ ಸಮಸ್ಯೆಯಿದೆ. ಬಹಳ ಜನರಿಗೆ ಬಾಪೂಜಿ ಅವರ ಚಿತ್ರ ಹಾಕುವುದೂ ಇಷ್ಟವಿಲ್ಲ. ಮತ್ತೊಂದು ವಿಷಯ. ಕೇಂದ್ರದಲ್ಲಿ ಭಾಜಪ ಸರಕಾರವಿದ್ದಾಗ ಅಲ್ಲವೇ ಮದರ್ ತೆರೆಸಾ ತೀರಿ ಹೋಗಿದ್ದು? ಅವರ ಅಂತ್ಯಸಂಸ್ಕಾರಕ್ಕೆ ವಾಯಪೆಯೀ ನೇತೃತ್ವದಲ್ಲಿ ಇಡೀ ಕೇಂದ್ರ ಸರಕಾರದ ದಂಡೇ ಹಾಜರಿತ್ತು. ಅಂದರೆ ಓಲೈಕೆ ಭಾಜಪ ಮಾಡಿದಾಗ ಸರಿ, ಸೋನಿಯಾ ಮಾಡಿದಾಗ ತಪ್ಪು ಎಂತಲೋ? ಮತ್ತೊಂದು ವಿಷಯ. ಸೋನಿಯಾರ ಹಿಂದೆ ಇರುವ ಅವರ ಆಪ್ತ ಸಹಾಯಕ ಕೇರಳ ಮೂಲದ ಜಾರ್ಜ್ ಇರಬಹುದು ನಾಣ್ಯದ ಮತ್ತೊಂದು ಮುಖ.ಆತ ಭಾರತದ ಅತ್ಯಂತ ಪ್ರಬಲ ಪುರುಷ, ನಮ್ಮ ಸೋನಿಯಾ ವಿಶ್ವದ ಪ್ರಬಲ ಸ್ತ್ರೀ.

ಅಬ್ದುಲ್ಲರೇ, ಬಾಪು ಚಿತ್ರ ಹಾಕೋದು ಯಾರಿಗೂ ಅದರಲ್ಲೂ ಸ್ವತ: ಕಾ೦ಗ್ರೆಸ್ಸಿನವರಿಗೇ ಇಷ್ಟವಿಲ್ಲವೇನೋ. ಆದರೆ ಮದರ್ ತೆರೆಸಾ ಅ೦ತ್ಯ ಸ೦ಸ್ಕಾರಕ್ಕೂ ಈಗಿನ ಸನ್ನಿವೇಶಕ್ಕೂ ಹೋಲಿಕೆ ಸಮ೦ಜಸವೇ ಎ೦ಬುದು ನನಗರ್ಥವಾಗುತ್ತಿಲ್ಲ. ಈಲ್ಲಿ ಭಾ.ಜ.ಪಾ ಹಾಗೂ ಕಾ೦ಗ್ರೆಸ್ ಮುಖ್ಯವಲ್ಲ. ನಾನು ಯಾವ ಪಕ್ಷದ ಯಾ ಯಾವ ಮತದ ಪರವಾಗಲೀ ಯಾ ವಿರೋಧವಾಗಲೀ ಇಲ್ಲ. ಇದು ದೇಶದ ಆ೦ತರಿಕ ವಿಚಾರಗಳಲ್ಲೂ ಪರಕೀಯತೆಯನ್ನು ಅನುಸರಿಸುವುದು ಎಷ್ಟು ಸರಿ? ಎ೦ಬುದು ನನ್ನ ಪ್ರಶ್ನೆ. ಅಷ್ಟೇ. ಬೇರೇನಿಲ್ಲ. ನಮಸ್ಕಾರಗಳೊ೦ದಿಗೆ,

ಮದರ್ ತೆರೇಸಾ ಅ೦ತ್ಯ ಸ೦ಸ್ಕಾರದಲ್ಲಿ ವಾಜಪೇಯಿ ಸಹೋದ್ಯೋಗಿಗಳೊ೦ದಿಗೆ ಭಾಗವಹಿಸಿದ್ದಕ್ಕೂ, ಈಗ ಸೋನಿಯಾ ಮೇಡ೦ ಸ೦ತ ಆಲ್ಫೋನ್ಸಾ ನಾಣ್ಯ ಬಿಡುಗಡೆ ಮಾಡಿರುವುದಕ್ಕೂ ಏನಾದರೂ ಹೋಲಿಕೆಯಿದೆಯೇ ಅಬ್ದುಲ್? ಇದು ಇಮಾ೦ ಸಾಬಿಗೂ ಗೋಕುಲಾಷ್ಟಮಿಗೂ ಇರುವ೦ಥದೇ ಸ೦ಬ೦ಧ ಅನ್ನಿಸುವುದಿಲ್ಲವೇ?

ಭಾರತೀಯರು ಸಾವಿನಲ್ಲಿಯೂ ದ್ವೇಷವನ್ನು ಸಾಧಿಸೋದಿಲ್ಲ ಅಬ್ದುಲ್ಲರೇ, ನಮ್ಮ ಸ೦ಸ್ಕೃತಿ ಅಲ್ಲ. ಅವರು ಒಳ್ಳೆಯವರಾಗಲಿ ಕೆಟ್ಟವರಾಗಲಿ ನಮಗೆ ಪರಿಚಯದವರು ಮರಣಿಸಿದರು ಅ೦ದರೆ, ಪುರುಸೊತ್ತನ್ನು ಮಾಡಿಕೊ೦ಡು ಅವರ ಅ೦ತ್ಯಸ೦ಸ್ಕಾರಕ್ಕೆ ಹೋಗಿಬರುತ್ತೇವೆ!ಸಾವಿನಲ್ಲಿಯೂ ದ್ವೇಷವನ್ನು ಸಾಧಿಸುವುದು ನಮ್ಮತನವಲ್ಲ! ನೀವೂ ಅದೇ ತರಹದ ಸನ್ನಡತೆಯವರೆ೦ದೇ ನನ್ನ ಭಾವನೆ. ನಮಸ್ಕಾರಗಳೊ೦ದಿಗೆ,

"ಭಾರತೀಯರು ಸಾವಿನಲ್ಲಿಯೂ ದ್ವೇಷವನ್ನು ಸಾಧಿಸೋದಿಲ್ಲ " ಸದ್ದಾಂ ಹುಸೇನ್ ಗೇ ಸಂತಾಪ ಸೂಚಿಸಿ "ಸಭೆ" ನಡೆಸಿದ ನಂತರವೂ ಇದರ ಬಗ್ಗೆ ಅನುಮಾನ ಇದೆ ಅಂದರೆ.....

<<ಸೋನಿಯಾರ ಹಿಂದೆ ಇರುವ ಅವರ ಆಪ್ತ ಸಹಾಯಕ ಕೇರಳ ಮೂಲದ ಜಾರ್ಜ್ ಇರಬಹುದು ನಾಣ್ಯದ ಮತ್ತೊಂದು ಮುಖ.ಆತ ಭಾರತದ ಅತ್ಯಂತ ಪ್ರಬಲ ಪುರುಷ, ನಮ್ಮ ಸೋನಿಯಾ ವಿಶ್ವದ ಪ್ರಬಲ ಸ್ತ್ರೀ.>> ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲೇ ಇದೆ. ಭಾರತದ ಪ್ರಬಲ ಪುರುಷ ಮತ್ತು ವಿಶ್ವದ ಪ್ರಬಲ ಸ್ತ್ರೀ ಸೇರಿದರೆ ಮತ್ತೇನಾಗಬಹುದು, ಹೇಳಿ. ಅವರು ತಮ್ಮ ತಮ್ಮ ಮತದ (ಇಲ್ಲಿ ಇಬ್ಬರದೂ ಒಂದೇ) ಪ್ರಚಾರ ಮಾಡದೇ ಉಳಿಯುತ್ತಾರೆಯೇ? :)

ಇದೇ ವಾಜಪೇಯಿ ಸರ್ಕಾರ ಮದರ್ ತೇರೆಸಾ ಸೇವೆಯ ಹಿಂದೆ ಇದ್ದ ವ್ಯಾಪರೀಕರಣವನ್ನು,ಕ್ರೈಸ್ತೀಕರಣದ ಉದ್ದೇಶವನ್ನು ಜನರ ಮುಂದೆ ಹೇಳಿತ್ತು. ಓಲೈಕೆ ಇರುವವರು ಇದು ಮಾಡುತ್ತಿರಲಿಲ್ಲವೆಂದು ನಿಮಗೆ ತಿಳಿಯಲಿಲ್ಲವೇನೋ? ನೀವು ಇಂಥವನ್ನು ಬಾಯಿಪಾಟ ಮಾಡಿಟ್ಟುಕೊಳ್ಳುವಿರೆನೋ.?ನಿಮ್ಮ ಎಲ್ಲಾ ಪ್ರತಿಕ್ರಿಯೆಗಳಲ್ಲೂ ಒಂದೇ ಟಾರ್ಗೆಟ್. <<ನಮ್ಮ ಸೋನಿಯಾ ವಿಶ್ವದ ಪ್ರಬಲ ಸ್ತ್ರೀ ಅಂದ ಮಾತ್ರಕ್ಕೆ ಆಕೆಯ ಪಾಪಗಳೆಲ್ಲಾ ಸತ್ಕಾರ್ಯಗಳಾಗುವುದಿಲ್ಲಾ ಸ್ವಾಮಿ. ಕೇಶವ ಮೈಸೂರು -- ನೀವು ಸೋನಿಯಾ ಗಾಂಧಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿ.ಸಾಧ್ಯವಾದಲ್ಲಿ ಒಂದು ಲೇಖನ ಕೂಡ ಪ್ರಕಟಿಸಿ. ಅಲ್ಲಿ ಒಂದು ಮಾಹಿತಿಪೂರ್ಣ ಚರ್ಚೆ ಮಾಡೋಣ ಆಕೆಯ ಮತ್ತು ಆಕೆಯ ಘನಸರ್ಕಾರದ ಸಾಧನೆಗಳ ಬಗ್ಗೆ --ಮನು

೧೯೬೪ ಮತ್ತು ೧೯೮೯ - ನೆಹರು; ೧೯೬೯ - ಮಹಾತ್ಮ ಗಾಂಧಿ; ೧೯೮೫ - ಇಂದಿರಾ ಗಾಂಧಿ; ೧೯೯೨ - ರಾಜೀವ್ ಗಾಂಧಿ; ೧೯೯೭ - ಸುಭಾಷ್; ೧೯೯೬ - ಪಟೇಲ್; ೧೯೯೮ - ಅರಬಿಂದೊ; ೧೯೯೮ - ಚಿತ್ತರಂಜನ ದಾಸ್; ೧೯೯೯ - ಶಿವಾಜಿ; ೧೯೯೯ - ಸಂತ ಜ್ಞಾನೇಶ್ವರ; ೨೦೦೧ - ಶಾಮಾ ಪ್ರಸಾದ್ ಮುಖರ್ಜಿ; ೨೦೦೧ - ಮಹಾವೀರ; ೨೦೦೨ - ಜಯಪ್ರಕಾಶ್ ನಾರಾಯಣ್; ೨೦೦೨ - ತುಕಾರಾಮ್; ೨೦೦೨ - ದಾದಾಭಾಯಿ ನವರೋಜಿ; ೨೦೦೩ - ದುರ್ಗಾದಾಸ್ ರಾಥೋಡ್; ೨೦೦೪ - ರಾಣಾ ಪ್ರತಾಪ್; ೨೦೦೪ - ಕಾಮರಾಜ್; ೨೦೦೪ - ಲಾಲ್ ಬಹದ್ದೂರ್ ಶಾಸ್ತ್ರಿ; ೨೦೦೬ - ಬಸವಣ್ಣ; ೨೦೦೭ - ನಾರಾಯಣ ಗುರು; ೨೦೦೭ - ಬಾಲ ಗಂಗಾಧರ ಟಿಳಕ್ ಇದು ೨೦೦೭ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಸ್ಮರಣಿಕೆ ನಾಣ್ಯಗಳು (ಪಟ್ಟಿ ಪರಿಪೂರ್ಣವಿಲ್ಲದಿರಬಹುದು; ಮಾಹಿತಿ - http://commemorative... ವೆಬ್ ತಾಣದಿಂದ). ಈ ಪಟ್ಟಿಯನ್ನು ನೋಡಿದರೆ ನಿಮಗಾರಿಗಾದರೂ ಧಾರ್ಮಿಕ ಅಥವಾ ಜನಾಂಗೀಯ ಪಕ್ಷಪಾತ ಕಾಣುತ್ತದೆಯೆ? ಇನ್ನು ಪ್ರಸ್ತುತ ವಿಷಯಕ್ಕೆ ಬರುವುದಾದರೆ, ಸಂತ ಅಲ್ಫೋನ್ಸಾ - ಒಬ್ಬ ನಮ್ಮ ನಿಮ್ಮಷ್ಟೇ "ಭಾರತೀಯ" ಮಹಿಳೆ. ಆಕೆ ಕ್ರೈಸ್ತ ಧರ್ಮೀಯಳಾದ ಮಾತ್ರಕ್ಕೆ ಸಂಪದಿಗರಲ್ಲಿ ಇಷ್ಟೊಂದು ಅಸಹನೆ ಸಂಪದ ವೇದಿಕೆಗೇ ತಕ್ಕದ್ದಲ್ಲ ಎನ್ನುವುದು ನನ್ನ ಸ್ವಂತ ಅನಿಸಿಕೆ. ಹೊರತಂದ ನಾಣ್ಯಗಳು ಹಲವಾದರೆ, ನಮ್ಮ ದೇಶದ ಮಹಾನ್ ವ್ಯಕ್ತಿಗಳ ಸಂಖ್ಯೆ ಅಪಾರ. ಹಾಗಿದ್ದಾಗ ಈಕೆಯನ್ನು ಬಿಟ್ಟು ಇನ್ನಾರನ್ನು ಆರಿಸಬಹುದಿತ್ತು ಎಂಬ ಚರ್ಚೆ ಇಲ್ಲಿ ಅಪ್ರಸ್ತುತ. ಈ ವಿಷಯವನ್ನೇ ಮುಂದಿಟ್ಟುಕೊಂಡು ಸಾಮಾನ್ಯವಾಗಿ ಸಮಚಿತ್ತವಾಗಿ ಪ್ರತಿಕ್ರಿಯಿಸುವ ಅಸು ಹೆಗ್ಡೆಯವರ ಸೋನಿಯಾ ಗಾಂಧಿಯವರ ಮೇಲಿನ ವಾಗ್ಧಾಳಿ ಆಶ್ಚರ್ಯವೆನಿಸಿತು. ಅಲ್ಲಾ ಹೆಗ್ಡೆಯವರೆ, ಸೋನಿಯಾ ರಾಜೀವ್ ರನ್ನು ಪ್ರೀತಿಸಿ ಮದುವೆಯಾದಾಗ ಅವರಿಗೆ ಮುಂದೊಂದು ದಿನ ತಾನು ಭಾರತದ ರಾಜಕೀಯದ ಚುಕ್ಕಾಣಿ ಹಿಡಿದು ಮತಾಂತರ ಹಾಗೂ ಭ್ರಷ್ಟಾಚಾರಗಳಿಗೆ ನೀರೆರೆಯುವ ಹುನ್ನಾರವಿತ್ತೆಂದು ಹೇಳುವುದು ಎಷ್ಟು ಸರಿ? ನೀವು ವೈಯುಕ್ತಿಕವಾಗಿ ಸೋನಿಯಾರನ್ನು ದ್ವೇಷಿಸುತ್ತೀರೇನು? ಇನ್ನು ಮಂಜುರವರು ದುಬೈನಲ್ಲಿ ತಪ್ಪುಮಾಡಿದ ಬಿಳಿಯನಿಗೆ ಜನಾಂಗೀಯ ನಿಂದನೆಯನ್ನು ಪ್ರಸಾದಿಸುವುದು ಸರಿಯೆ? ನಾನೀಗ ಕೆಲಸ ಮಾಡುತ್ತಿರುವುದು ದಕ್ಷಿಣ ಆಫ್ರಿಕದ ಪ್ರಿಟೋರಿಯದಲ್ಲಿ. ಇಲ್ಲಿನ ಕಪ್ಪು ಜನಗಳು ಬಿಳಿಯರಿಂದ ಅನುಭವಿಸಿದ ಶೋಷಣೆ ನಾವು ಅಂಗ್ಲರಿಂದ ಅನುಭವಿಸಿದ್ದಕ್ಕಿಂಥ ಅಪಾರ. ಆದರೆ ಅವರಿಗೆ ಗಾಂಧಿವಾದಿ ನೆಲ್ಸನ್ ಮಾಂಡೇಲರವರ ಉಪದೇಶ ಏನು ಗೊತ್ತೆ? - "ಯಾರೋ ಮಾಡಿದ ತಪ್ಪಿಗೆ ನೀವು ಒಬ್ಬರನ್ನೊಬ್ಬರು ದ್ವೇಷಿಸಬೇಡಿ; ಹಾಗೆ ಮಾಡಿದರೆ ಅದು ಮಾನವೀಯತೆಯ ಸೋಲಾಗುತ್ತದೆ" ಎಂದು! ನನಗೆ ಸಂಪದದಲ್ಲಿನ ಒಳ್ಳೆಯ ಗುಣಮಟ್ಟದ ಚರ್ಚೆಗಳ ಬಗ್ಗೆ ಬಹಳ ಹೆಮ್ಮೆಯಿದೆ. ಆದರೆ ಈ ಚರ್ಚೆ ನಮ್ಮ ವಿಚಾರಗಳನ್ನು ಭಾವೋದ್ರೇಕದ ವಶದಲ್ಲಿಟ್ಟು ಮಾತನಾಡಿದಂತಿದೆ. ಇದು ಸಂಪದಕ್ಕೆ ನನ್ನ ಮೊದಲನೆಯ ಪತ್ರ. ಮುಂದೂ ಬರೆಯುವ ಯೋಚನೆಯಿದೆ. ಧನ್ಯವಾದಗಳೊಂದಿಗೆ, ಕೇಶವ ಮೈಸೂರು

ಕೇಶವ ಅವರೇ, ತಮ್ಮ assuringly different ಆದ ಪ್ರತಿಕ್ರಿಯೆ ನೋಡಿ ಸಂತೋಷವಾಯಿತು. ಇಲ್ಲಿ ಅಸಹನೆ ಇಲ್ಲ ಸಂಪದಿಗರಲ್ಲಿ, ಒಂದು ರೀತಿಯ "ತಾವೇನೋ ಕಳೆದುಕೊಳ್ಳುತ್ತಿದ್ದೇವೆ" ಅನ್ನೋ ಭಾವ ಮತ್ತು ಒಂದಿಷ್ಟು ಅತಂತ್ರ, ಅಭದ್ರ ಪರಿಸ್ಥಿತಿ. ಅಷ್ಟೇ. ಅದು ಬಿಟ್ಟರೆ ಎಲ್ಲರೂ ಸನ್ಮನಸ್ಸಿನ ಸಂಪದಿಗರೇ. ಕೆಲವೊಮ್ಮೆ ಒಂದು ನಿರ್ದಿಷ್ಟ ideology ಯೊಂದು dominant ಆಗಿ ಗೋಚರಿಸುತ್ತದೆ ಅಷ್ಟೇ. ಅದು ಒಂದು trasient ಬೆಳವಣಿಗೆ. ಸರಿಯಾದ ಉತ್ತರ ಸಿಕ್ಕಾಗ ಮುದುಡಿ ಕೊಳ್ಳುತ್ತದೆ.

ಧನ್ಯವಾದಗಳು ಅಬ್ದುಲ್ ರವರೆ, "ಸಂಪದ"ಕ್ಕೆ ಕಾಲಿಡುತ್ತಿರುವ ಹೊಸ ಸಂಪದಿಗನ ಮನಸ್ಸಿನ ತುಮುಲವನ್ನು ನಿಮ್ಮ ಪ್ರತಿಕ್ರಿಯೆ ದೂರ ಮಾಡಿತು. ಇನ್ನಷ್ಟು ಬರೆಯುವ ಹುರುಪು ಕೊಟ್ಟಿದೆ. ಜಾಗತೀಕರಣದ ಈ ದಿನಗಳಲ್ಲಿ "ತಾವೇನೋ ಕಳೆದುಕೊಳ್ಳುತ್ತಿದ್ದೇವೆ" ಎಂಬ ಭಾವನೆ, ಪ್ರಪಂಚದ ಎಲ್ಲೆಡೆಯಲ್ಲಿ ನಾವು ಕಾಣಬಹುದಾದ ಮಾನವ ಸಹಜ ಪ್ರತಿಕ್ರಿಯೆ. ಆದರೆ ಹಲವಾರು ಜನಾಂಗಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಂಡ ಅನುಭವದಿಂದ ಹೇಳುವುದೆಂದರೆ ನಮ್ಮ ದೇಶ, ನಮ್ಮ ಧರ್ಮ ಮತ್ತು ನಮ್ಮ ಸಂಸ್ಕೃತಿ ಇತ್ತೀಚೆಗೆ ಬಿಂಬಿಸಲ್ಪಡುವುತ್ತಿರುವಂತೆ ದುರ್ಬಲವಾದದ್ದಲ್ಲ ಎಂಬುದು ನನ್ನ ಅನಿಸಿಕೆ. ಕೇಶವ ಮೈಸೂರು

<<ನಮ್ಮ ದೇಶ, ನಮ್ಮ ಧರ್ಮ ಮತ್ತು ನಮ್ಮ ಸಂಸ್ಕೃತಿ ಇತ್ತೀಚೆಗೆ ಬಿಂಬಿಸಲ್ಪಡುವುತ್ತಿರುವಂತೆ ದುರ್ಬಲವಾದದ್ದಲ್ಲ ಎಂಬುದು ನನ್ನ ಅನಿಸಿಕೆ.>> ಖಂಡಿತ ದುರ್ಬಲವಾದುದಲ್ಲ, ಆದರೆ ನಮ್ಮ "resilient " ಮನೋಭಾವನೆ ಅದನ್ನು ದುರ್ಬಲಗೊಲಿಸುತಿರುವುದು ಖಂಡಿತ. ಇತ್ತೀಚಿನ ಸೊ ಕಾಲ್ಡ್ ಬುದ್ದಿಜೀವಿಗಳು "saffron terror" ಎಂದು ಕೂಗೂತ್ತಿದ್ದಾರಲ್ಲ, ಎಂದಾದರೂ ಇವರು ಕೇರಳದಲ್ಲಿ ನಡೆಯುತ್ತಿರುವ ದಬ್ಬಾಳಿಕೆಯ ಬಗ್ಗೆ "Christian Terror" ಎಂದು ಹೇಳಿದ್ದಾರೆಯೇ ? ಸೊ ಕಾಲ್ಡ್ secularist ಗಳೇ , ನಮ್ಮ ಕಾಶ್ಮೀರಿ ಪಂಡಿತರನ್ನು ನಿರಾಶ್ರಿತರನ್ನಾಗಿ ಮಾಡಿದಾಗ ಎಲ್ಲಿ ಹೋಗಿದ್ರಿ , ಇವತ್ತು ಕಣಿವೆಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರು , ಅವರಿಗೂ ನೀವು ಮೀಸಲಾತಿ ಕೊಡಿ ಮತ್ತೆ .............ನಮ್ಮತನವನ್ನು , ನಮ್ಮವರನ್ನು ಬಿಟ್ಟು ಮಾಡುವ ಹೆಸರಿಗೆ secularism ಅನ್ನೋ ಕವಚ. ಎಲ್ಲಿ ಸ್ವಾಮಿ ನಮ್ಮ ಗಾಂಧಿವಾದವನ್ನು ಒಪ್ಪುವ ಬರಾಕ್ ಒಬಾಮಗೆ ಹೇಳಿ ಸ್ವಾಮಿ ನಮ್ಮ ಗಾಂಧಿ ಚಿತ್ರವನ್ನು ಅವರ ನೋಟಿನಲ್ಲಿ ಹಾಕಲು...

ಅಚ್ಯುತಾನಂದನ್ ಹೇಳ್ತಿದರೆ ಕೇರಳವನ್ನು ಮುಸ್ಲಿಂ ರಾಜ್ಯವನ್ನು ಮಾಡುವ ಹುನ್ನಾರ ನಡಿತಾ ಇದೆ ಅಂತ ಪಾಪ ನಮ್ಮ ಅನಂತಮೂರ್ತಿಗೆ ಪಾದಯಾತ್ರೆಯ ಮಧ್ಯೆ ಆ ಕಡೆ ನೋಡ್ಲಿಕ್ಕೆ ಸಮಯನೇ ಇಲ್ಲ. ಒಳ್ಳೆಯ ವಿಷಯಗಳ ಪ್ರಸ್ತಾಪ ಮಾಡಿದ್ದಿರಿ ರಘು. ಕ್ರಿಶ್ಚಿಯನ್ನರ ವಿಷಯ ಬಂದಾಗ ಚುರುಕಾಗುವವರಿಗೆ ಕಾಶ್ಮೀರಿಗಳ ನೋವು, ಕೂಗು ಆಕ್ರಂದನ ಯಾರಿಗೂ ಕೇಳಲೇ ಇಲ್ಲ ವಿಪರ್ಯಾಸ ಅಂದ್ರೆ ಈಗ್ಲೂ ಕೇಳ್ತಾ ಇಲ್ಲ. ಇಂದಿರಾ ಸತ್ತಾಗ ಸಿಖ್ಖರ ಕೂಗಿಗೆ ಇಡೀ ಸೆಕ್ಯುಲರ್ ವರ್ಗವೇ ಕಿವುಡಾಗಿತ್ತು. ಆದರೆ ಗುಜರಾತ್ ವಿಷಯ ಬಂದಾಗ ೪ ಕಿವಿ ೮ ಕಣ್ಣು ೧೬ ಕಿವಿಗಳು ೩೨ ಬಾಯಿ ಬಂದು ಬಿಡುತ್ತೆ. ಈಶಾನ್ಯ ರಾಜ್ಯಗಳಲ್ಲಿ ಮತ್ತು ಕಾಶ್ಮೀರದಲ್ಲಿ ಹಿಂದೂಗಳೇ ಅಲ್ಪ ಸಂಖ್ಯಾತರಾದರೂ ಅವರಿಗೆ ಅದರಡಿ ಆ ಸೌಲಭ್ಯಗಳು ಸಿಗುತ್ತಿಲ್ಲ. ನಮ್ಮ ಪ್ರಧಾನಿಗೆ ಪಾಪ ಅವರುಗಳ ಕನಸೇ ಬೀಳುತ್ತಿಲ್ಲ. ಬಹುಶಃ ಅವರು ಬ್ರಾಡ್ ಮೈಂ’ಡೆಡ್’ ಅಲ್ಲ ಅನ್ಸುತ್ತೆ ;)

<<<ಕೆಲವೊಮ್ಮೆ ಒಂದು ನಿರ್ದಿಷ್ಟ ideology ಯೊಂದು dominant ಆಗಿ ಗೋಚರಿಸುತ್ತದೆ ಅಷ್ಟೇ. ಅದು ಒಂದು trasient ಬೆಳವಣಿಗೆ. ಸರಿಯಾದ ಉತ್ತರ ಸಿಕ್ಕಾಗ ಮುದುಡಿ ಕೊಳ್ಳುತ್ತದೆ.>>> ವಾಹ್ ಬ್ರಿಲಿಯಂಟ್.. ಹಾಗೂ ಇನ್ನೂ ಸೇರಿಸಿ ಹೇಳಬೇಕೆಂದರೆ, ಈ ideologyಗೂ ಕೇವಲ "ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಾಗಿ ಕೈ ಕಾಲು ಕಡಿಯುವ ಐಡಿಯಾಲಜಿಗೂ" ತುಂಬಾ ವ್ಯತ್ಯಾಸವಿದೆಯಲ್ಲವೇ?

<<ಇಲ್ಲಿ ಅಸಹನೆ ಇಲ್ಲ ಸಂಪದಿಗರಲ್ಲಿ, ಒಂದು ರೀತಿಯ "ತಾವೇನೋ ಕಳೆದುಕೊಳ್ಳುತ್ತಿದ್ದೇವೆ" ಅನ್ನೋ ಭಾವ ಮತ್ತು ಒಂದಿಷ್ಟು ಅತಂತ್ರ, ಅಭದ್ರ ಪರಿಸ್ಥಿತಿ. ಅಷ್ಟೇ.>> ನೀವೂ ಸಂಪದಿಗರು ಎನ್ನುವ ಮಾತನ್ನು ಒಪ್ಪಿಕೊಂಡು, ನಿಮ್ಮ ಹಿಂದಿನೆಲ್ಲಾ ಪ್ರತುಕ್ರಿಯೆಗಳನ್ನು ನೆನಪಿಸಿಕೊಂಡಾಗ, ಈ ಮಾತುಗಳಿಗೆ ವಿಶೇಷ ಅರ್ಥ ಕಂಡುಕೊಳ್ಳುವಲ್ಲಿ ನಾನು ಸಫಲನಾದೆ. ಹಾಗೆಯೇ ಇನ್ನಿತರ ಸಂಪದಿಗರೂ ಆಗಬಹುದು. <<ಅದು ಬಿಟ್ಟರೆ ಎಲ್ಲರೂ ಸನ್ಮನಸ್ಸಿನ ಸಂಪದಿಗರೇ. >> ಕೆಲವೊಮ್ಮೆ ಸತ್ಯವನ್ನು ಅದೆಷ್ಟು ಸಲೀಸಾಗಿ ಹೇಳ್ತೀರಿ ನೋಡಿ. <<ಕೆಲವೊಮ್ಮೆ ಒಂದು ನಿರ್ದಿಷ್ಟ ideology ಯೊಂದು dominant ಆಗಿ ಗೋಚರಿಸುತ್ತದೆ ಅಷ್ಟೇ. ಅದು ಒಂದು trasient ಬೆಳವಣಿಗೆ. ಸರಿಯಾದ ಉತ್ತರ ಸಿಕ್ಕಾಗ ಮುದುಡಿ ಕೊಳ್ಳುತ್ತದೆ.>> ತಾವೇಕೆ ಕನ್ನಡದಲ್ಲಿಯೇ ಬರೆದು ಓದುಗನಿಗೆ ಹತ್ತಿರನಾಗಬಾರದು? ಕೆಲವೊಮ್ಮೆ ಈರೀತಿ ಆಂಗ್ಲ ಭಾಷಾ ಪದ ಪ್ರಯೋಗ ಮಾಡಿ ತಾವು ಅನ್ಯರಿಗಿಂತ ಭಿನ್ನರೆಂದು ತೋರಿಸಿಕೊಳ್ಳುವ ಸತತವಾದ ವಿಫಲ ಪ್ರಯತ್ನ ಮಾಡ್ತೀರಿ ಹೇಳಿ.

<ಪ್ರತುಕ್ರಿಯೆಗಳನ್ನು > ಪ್ರತಿಕ್ರಿಯೆಗಳನ್ನು <ಹತ್ತಿರನಾಗಬಾರದು ? > ಇದು ಸರಿಯಾದ ಪ್ರಯೋಗವೇ ? <ಈರೀತಿ > ಈ ರೀತಿ ತಪ್ಪು ಮಾಡೋದು ಸಹಜ :)

ತಪ್ಪುಗಳು ಆಗೋದು ಸಹಜ ತಪ್ಪುಗಳನ್ನು ಮಾಡುವುದು ಅಸಹಜ ತಪ್ಪುಗಳನ್ನು ತಿದ್ದಬೇಕಾದುದೂ ಸಹಜ ತಿದ್ದಿಕೊಳ್ಳೋಲ್ಲ ಅನ್ನುವವರು ಅಸಹಜ ಪ್ರತಿಕ್ರಿಯೆಗಳನ್ನು ತಿದ್ದುವುದಕ್ಕೆ ಕಾಲಾವಕಾಶ ಕಡಿಮೆ ಅನ್ನುವ ಅರಿವು ನನಗಿದ್ದಂತೆ ನಿಮಗೂ ಇದೆಯೆಂದು ನನ್ನ ಅನಿಸಿಕೆ. ಯಾರೆಲ್ಲಾ ತಪ್ಪೊಪ್ಪುಗಳ ಬಗ್ಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೋ, ಅವರ ತಪ್ಪುಗಳನ್ನು ನಾನು ನಿರ್ಲಕ್ಷಿಸುತ್ತಾ ಬರುತ್ತಿದ್ದೇನೆ. ಧನ್ಯವಾದಗಳು. - ಆಸು ಹೆಗ್ಡೆ

ತಪ್ಪೊಪ್ಪು: <<ಇಲ್ಲಿ ಅಸಹನೆ ಇಲ್ಲ ಸಂಪದಿಗರಲ್ಲಿ, ಒಂದು ರೀತಿಯ "ತಾವೇನೋ ಕಳೆದುಕೊಳ್ಳುತ್ತಿದ್ದೇವೆ" ಅನ್ನೋ ಭಾವ ಮತ್ತು ಒಂದಿಷ್ಟು ಅತಂತ್ರ, ಅಭದ್ರ ಪರಿಸ್ಥಿತಿ. ಅಷ್ಟೇ.>> ನೀವೂ ಸಂಪದಿಗರು ಎನ್ನುವ ಮಾತನ್ನು ಒಪ್ಪಿಕೊಂಡು, ನಿಮ್ಮ ಹಿಂದಿನೆಲ್ಲಾ ಪ್ರತಿಕ್ರಿಯೆಗಳನ್ನು ನೆನಪಿಸಿಕೊಂಡಾಗ, ಈ ಮಾತುಗಳಿಗೆ ವಿಶೇಷ ಅರ್ಥ ಕಂಡುಕೊಳ್ಳುವಲ್ಲಿ ನಾನು ಸಫಲನಾದೆ. ಹಾಗೆಯೇ ಇನ್ನಿತರ ಸಂಪದಿಗರೂ ಆಗಬಹುದು. <<ಅದು ಬಿಟ್ಟರೆ ಎಲ್ಲರೂ ಸನ್ಮನಸ್ಸಿನ ಸಂಪದಿಗರೇ. >> ಕೆಲವೊಮ್ಮೆ ಸತ್ಯವನ್ನು ಅದೆಷ್ಟು ಸಲೀಸಾಗಿ ಹೇಳ್ತೀರಿ ನೋಡಿ. <<ಕೆಲವೊಮ್ಮೆ ಒಂದು ನಿರ್ದಿಷ್ಟ ideology ಯೊಂದು dominant ಆಗಿ ಗೋಚರಿಸುತ್ತದೆ ಅಷ್ಟೇ. ಅದು ಒಂದು trasient ಬೆಳವಣಿಗೆ. ಸರಿಯಾದ ಉತ್ತರ ಸಿಕ್ಕಾಗ ಮುದುಡಿ ಕೊಳ್ಳುತ್ತದೆ.>> ತಾವೇಕೆ ಕನ್ನಡದಲ್ಲಿಯೇ ಬರೆದು ಓದುಗನಿಗೆ ಪ್ರಿಯರಾಗಬಾರದು? ಕೆಲವೊಮ್ಮೆ ಈ ರೀತಿ ಆಂಗ್ಲ ಭಾಷಾ ಪದ ಪ್ರಯೋಗ ಮಾಡಿ ತಾವು ಅನ್ಯರಿಗಿಂತ ಭಿನ್ನರೆಂದು ತೋರಿಸಿಕೊಳ್ಳುವ ಸತತವಾದ ವಿಫಲ ಪ್ರಯತ್ನ ಮಾಡ್ತೀರಿ ಹೇಳಿ.

ಸುರೇಶ್, ನನ್ನ ಕನ್ನಡದ ಶಬ್ದ ಭಂಡಾರ ಹೇಳಿಕೊಳ್ಳುವಂಥದ್ದಲ್ಲ. ಪರ್ಯಾಯ ಪದ ಸಿಗದಾದಾಗ ನಮ್ಮ ಮಾಜೀ "ಯಜಮಾನ"ರ ಭಾಷೆಗೆ ಮೊರೆ ಹೋಗುತ್ತೇನೆ.

ಸೋನಿಯಾ ರಾಜೀವ್ ರನ್ನು ಪ್ರೀತಿಸಿ ಮದುವೆಯಾದಾಗ ಅವರಿಗೆ ಮುಂದೊಂದು ದಿನ ತಾನು ಭಾರತದ ರಾಜಕೀಯದ ಚುಕ್ಕಾಣಿ ಹಿಡಿದು ಮತಾಂತರ ಹಾಗೂ ಭ್ರಷ್ಟಾಚಾರಗಳಿಗೆ ನೀರೆರೆಯುವ ಹುನ್ನಾರವಿತ್ತೆಂದು ಹೇಳುವುದು ಎಷ್ಟು ಸರಿ?>> ಇರ್ಲಿಲ್ಲ ಅಂತಿರಾ? ಆದರೆ ನಡೆದಿರುವ ಘಟನೆಗಳನ್ನು ಅವಲೋಕಿಸಿದ್ರೆ ಹಾಗನ್ನಿಸಲ್ಲ. ಯಾಕೆಂದ್ರೆ ನಾವೆಲ್ಲ ಬಟ್ಟೆ ಒದ್ದೆ ಆದಮೇಲೆ ಕೆಳಗಡೆ ನೀರು ಹರಿದು ಬಂದಿದೆ ಅಂತ ಎದ್ದು ನೋಡುವವರು. ಸಾವಿರಾರು ಸಾಮ್ರಾಜ್ಯಗಳನ್ನು ಗಳಿಸಲು ಅಳಿಸಲು ವಿಷಕನ್ಯೆಯರನ್ನು ಬೆಳೆಸ್ತಿದ್ರಂತೆ ಬಳಸ್ತಿದ್ರಂತೆ. ಅದು ಸುಳ್ಳ?

ಅಂದರೆ ವ್ಯಾಟಿಕನ್ ಸಂಚುಗಾರರು ಮುಂದೆ ಪ್ರಧಾನಿಯಾಗಿ ಹತ್ಯೆಗೊಳ್ಳಲಿರುವ ಭಾರತೀಯ ವಿದ್ಯಾರ್ಥಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ಕಳುಹಿಸಿದ ವಿಷಕನ್ಯೆ ಸೋನಿಯಾ ಗಾಂಧಿ ಅಂತ ಅನಿಸುತ್ತಿದೆ!! ಕೇಶವ ಮೈಸೂರು

ನಿಮಗೆ ಹಾಗನ್ನಿಸದಿದ್ದದ್ದು ಎಷ್ಟು ಸಹಜವೋ, ನನಗೆ ಹಾಗನ್ನಿಸಿದ್ದು ಅಷ್ಟೆ ಸಹಜ ಅಲ್ಲವೆ? ಯಾಕಿರಬಾರದು? ಸಾಮ್ರಾಜ್ಯ ಮತ್ತು ಧರ್ಮ ವಿಸ್ತರಣೆಕಾರರು ಹಿಂದೆ ಏನೇನು ಮಾಡಿದ್ದಾರೆ ಎಂಬ ಅನುಭವವಿಲ್ಲದಿದ್ದಾಗ ಮಾಡಿದ ತಪ್ಪಿಗೆ ನಾವೀಗ ಶಿಕ್ಷೆ ಅನುಭವಿಸುತ್ತಿದ್ದೇವಲ್ಲವೆ? ಈಗ ಅನುಭವವಿದೆ, ಈಗಲೂ ಪಾಠ ಕಲಿಯದಿದ್ದರೆ ಹೇಗೆ? <<ಮುಂದೆ ಪ್ರಧಾನಿಯಾಗಿ ಹತ್ಯೆಗೊಳ್ಳಲಿರುವ ಭಾರತೀಯ ವಿದ್ಯಾರ್ಥಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ಕಳುಹಿಸಿದ ವಿಷಕನ್ಯೆ.>> ಇದನ್ನು ಹೀಗೆ ಹೇಳಿದರೆ ಹೇಗೆ ಮುಂದೆ ಪ್ರಧಾನಿಯಾಗಲಿರುವ ಭಾರತೀಯ ವಿದ್ಯಾರ್ಥಿಯನ್ನು ಬುಟ್ಟಿಗೆ ಹಾಕಿಕೊಂಡು ಹತ್ಯೆಗೈಯಲು, ಸಾಧ್ಯತೆ ಬಗ್ಗೆಯಷ್ಟೆ ಯೋಚಿಸಿ

ಸ್ವಾಮಿ ವಿವೇಕಾನಂದರ ಭಾವಚಿತ್ರ ಇರುವ ನಾಣ್ಯ ಇದೆಯೆ? ಇಲ್ಲವಾದಲ್ಲಿ ಈ ಕ್ರೈಸ್ತ ಸನ್ಯಾಸಿನಿ ವಿವೇಕಾನಂದರಿಗಿಂತ ಹೆಚ್ಚು ಹೆಸರುವಾಸಿಯೆ? ೨೦೦೬ ರಲ್ಲಿ cross ಹೋಲುವ ಚಿಹ್ನೆ ಇರುವ ನಾಣ್ಯ ಹೊರತರುವುದರ ಹಿಂದಿನ ಹುನ್ನಾರ? "ಓಂ"ಕಾರವಿರುವ ನಾಣ್ಯ ಬಂದಿದೆಯೆ? ಒಬ್ಬ ಕ್ರಿಸ್ತ ಸನ್ಯಾಸಿಯ ಚಿತ್ರ ತರುವ ಬದಲು ಬೇರೆ ಮಹನೀಯರ ಚಿತ್ರ ಯಾಕೆ ಸಿಗಲಿಲ್ಲ ಅನ್ನುವ ಪ್ರಶ್ನೆ ಅಪ್ತಸ್ತುತ ಹೇಗಾಗುತ್ತದೆ? ಸಧ್ಯ, ನೀವು ಕೊಟ್ಟ ಪಟ್ಟಿಯಲ್ಲಿ ಇನ್ನೂ ಸೋನಿಯ , ರಾಹುಲ್, ಪ್ರಿಯಾಂಕ ವಡ್ರಾ ಹೆಸರು ಸೇರಿಲ್ಲ ...

ಭಾಸ್ಕರ್ ನಿಮ್ಮ ಪ್ರತಿಕ್ರಿಯೆಗೆ ನನ್ನ ಸಹಮತವಿದೆ. ವಿವೇಕಾನಂದರು,ರಾಮಕೃಷ್ಣ ಪರಮಹಂಸರು ಇನ್ನು ಅನೇಕರು ಇದ್ದಾಗ ಆಕೆಯ ಚಿತ್ರ ಅನಗತ್ಯ. ಪ್ರತೀ ಹಳ್ಳಿಗಳಲ್ಲೂ ಮತಾಂತರ ನಡೆಯುತ್ತಿದೆ. ಈ ಪ್ರಕ್ರಿಯೆ ಮತ್ತಷ್ಟು ಪ್ರೋತ್ಸಾಹ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದಷ್ಟು ನಮ್ಮ ದೇಶದವರನ್ನು ಪ್ರೋತ್ಸಾಹಿಸಬೇಕು ಎನ್ನುವುದು ನನ್ನ ಅಭಿಪ್ರಾಯ. ಇಲ್ಲಿ ಜಾತಿಗಿಂತ ದೇಶ ಮುಖ್ಯ.

ಭಾರತೀಯ ರಿಸರ್ವ್ ಬ್ಯಾಂಕ್ ಸ್ಮರಣಿಕೆ ನಾಣ್ಯಗಳಿಗೆ ವ್ಯಕ್ತಿಗಳನ್ನು ಆರಿಸುವ ಪ್ರಕ್ರಿಯೆಯಲ್ಲಿ ನಮ್ಮ ದೇಶದ ರಾಜ್ಯಗಳ ರಾಜಕಾರಣಿಗಳ "ಒತ್ತಡ ತರುವ ಗುಂಪುಗಾರಿಕೆ" (ಲಾಬಿ) ಕೆಲಸ ಮಾಡುತ್ತದೆ. ೬೦ ವರ್ಷಗಳಲ್ಲಿ ನಮ್ಮ ಕರ್ನಾಟಕದ ರಾಜಕಾರಣಿಗಳ ಸಾಧನೆ ಎಂದರೆ ಬಸವೇಶ್ವರರ ನಾಣ್ಯವೊಂದೇ! ಅಂದರೆ, ನಮ್ಮ ಮಹಾನ್ ವ್ಯಕ್ತಿಗಳ ಮಹಾನತೆ ಬರೀ ನಾಣ್ಯ ಅಥವಾ ಅಂಚೆ ಚೀಟಿಗಳಿಂದ ಅಳೆಯುವಂತಹುದಲ್ಲ ಎಂದು ನನ್ನ ಭಾವನೆ. ಕೇಶವ ಮೈಸೂರು

Pages