ಕನ್ನಡ ಫಾಂಟ್ ಇಲ್ಲದಿದ್ದರೂ ಕಡತ ಓದುವುದು

To prevent automated spam submissions leave this field empty.

ಮೈಕ್ರೋಸಾಫ್ಟ್ ವರ್ಡ್‌‌ನಲ್ಲಿ ನುಡಿ ಅಥವಾ ಬರಹ ತಂತ್ರಾಂಶದ ಮೂಲಕ ಕನ್ನಡ ಫಾಂಟ್ ಬಳಸಿ(ಉದಾ: Nudi Akshar-01) ಬರೆದ ಕಡತಗಳನ್ನು ಆ ಫಾಂಟ್ ಇಲ್ಲದ ಕಂಪ್ಯೂಟರ್‌ಗಳಲ್ಲಿ ಓದುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕನ್ನಡದಲ್ಲಿ ಬರೆದ ಕಡತಗಳನ್ನು ಬೇರೆಯವರಿಗೆ ಕಳುಹಿಸುವಾಗ, ಅವರಲ್ಲಿ ಆ ಫಾಂಟ್ ಇಲ್ಲದಿದ್ದರೂ ಅವರು ನಿಮ್ಮ ಡಾಕ್ಯುಮೆಂಟನ್ನು ಓದುವಂತೆ ಮಾಡಲು ಹೀಗೆ ಮಾಡಿ. ನೀವು ವರ್ಡ್ ಕಡತವನ್ನು ಸೇವ್ ಮಾಡುವ ಮೊದಲು tools ಗೆ ಹೋಗಿ Options ಒತ್ತಿರಿ.

 

 

ನಂತರ Save ಟ್ಯಾಬ್ ಕ್ಲಿಕ್ ಮಾಡಿ. ಅಲ್ಲಿ Save options ಕೆಳಗೆ Embed TrueType fonts ಅನ್ನು ಸೆಲೆಕ್ಟ್ ಮಾಡಿ OK ಒತ್ತಿರಿ.


ಈಗ ನಿಮ್ಮ ಕಡತಗಳನ್ನು ಸೇವ್ ಮಾಡಿ ಕಳುಹಿಸಿದರೆ ಆ ಕಡತವು ಯಾವುದೇ ಫಾಂಟಿಲ್ಲಿ ಬರೆದಿದ್ದರೂ ಕೂಡ ಬೇರೆ ಕಂಪ್ಯೂಟರ್‌‌ಗಳಲ್ಲಿ ಅದನ್ನು ಓದಬಹುದು, ಅವರಲ್ಲಿ ಆ ಫಾಂಟ್ ಇಲ್ಲದಿದ್ದರೂ ಓದುವುದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. Unicodeನಲ್ಲಿ ಇಂತಹ ಹೆಚ್ಚಿನ ತೊಂದರೆಗಳಿರುವುದಿಲ್ಲ. ಆದರೆ ANSIಯಲ್ಲಿ ಸಾಕಷ್ಟು ಫಾಂಟಿನ ರಗಳೆಗಳಿರುತ್ತವೆ. ಆದ್ದರಿಂದ Unicodeನ್ನೇ ಹೆಚ್ಚು ಬಳಸುವುದು ಸೂಕ್ತ.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಸನ್ನ.. ಒಳ್ಳೆಯ ಮಾಹಿತಿ. ಇದರ ಜೊತೆಗೆ... - ಆ ಬದಿಯ ಓದುಗ ಕಡತ ಓದುವುದಷ್ಟೇ ಮುಖ್ಯ..ತಿದ್ದುಪಡಿ ಮಾಡುವ ಸಮಸ್ಯೆ/ಅವಶ್ಯಕತೆ ಇಲ್ಲ ಎಂದಾದಲ್ಲಿ PDF ಫಾರ್ಮಾಟಿನಲ್ಲಿ ಕಳಿಸುವುದು ಸೂಕ್ತ..ಫಾಂಟ್ ನ್ನು ಎಂಬೆಡ್ ಮಾಡಿ ವರ್ಡ ಫಾರ್ಮಾಟಿನಲ್ಲಿ ಕಳಿಸುವುದಕ್ಕಿಂತ. - ಅವರಲ್ಲಿ ವರ್ಡ ತಂತ್ರಾಂಶ ಇಲ್ಲ, ಕೇವಲ ಕಳಿಸಿದ ಕಡತವನ್ನು ಪ್ರಿಂಟ್ ಮಾಡಿಕೊಂಡರಷ್ಟೇ ಸಾಕು ಎಂದರೆ..print to file ಸೌಲಭ್ಯ ಉಪಯೋಗಿಸುವುದು ಸೂಕ್ತ.

PDF ಪ್ರತಿ ಮಾಡಿ ಕಳುಹಿಸಬಹುದು. ಆದರೆ ಅದನ್ನು ಓದುವವನ ಬಳಿ PDFನ್ನು ರೀಡ್ ಮಾಡೋ ತಂತ್ರಾಂಶ ಇರಬೇಕಲ್ಲ. ಎಲ್ಲ ಕಂಪ್ಯೂಟರ್‌ಗಳಲ್ಲೂ ಅಡೋಬ್‌ ರೀಡರ್‍ ಅಥವಾ ಸಂಬಧಪಟ್ಟ ತಂತ್ರಾಂಶ ಇರುವುದಿಲ್ಲ. ಹಾಗೆಯೇ ಸಾಮಾನ್ಯವಾಗಿ ಎಲ್ಲರ ಬಳಿ ಮೈಕ್ರೋಸಾಫ್ಟ್ ವರ್ಡ್ ತಂತ್ರಾಂಶ ಇರುತ್ತದೆ. ಎಂ.ಎಸ್ ವರ್ಡ್ ಇಲ್ಲದೇ ಹೋದರೂ ಎಲ್ಲಾ ವಿಂಡೋಸ್‌ಗಳಲ್ಲೂ ವರ್ಡ್‌ಪ್ಯಾಡ್‌ ಇದ್ದೇ ಇರುತ್ತದೆ. ಈ ರೀತಿ ಕಡತಗಳನ್ನು ಕಳುಹಿಸುವುದರಿಂದ ವರ್ಡ್‌‌ಪ್ಯಾಡ್‌‌ನಲ್ಲಿಯೂ ಅದನ್ನು ಓದಬಹುದು. ಇನ್ನು ನೀವು ಹೇಳಿದಂತೆ ಈ ರೀತಿ ಮಾಡಿದಾಗ ಫಾಂಟ್ ಇಲ್ಲದಿದ್ದರೆ ಓದಲು ಮಾತ್ರ ಸಾಧ್ಯ. ಎಡಿಟ್ ಮಾಡಲು ಸಾಧ್ಯವಿಲ್ಲ. PDF ಪ್ರಿಂಟ್ ಮಾಡಿ ಕಳುಹಿಸಿದರೂ ಓದುವವನ ಬಳಿ ಆ ಫಾಂಟ್ ಇಲ್ಲದಿದ್ದರೆ ಓದಲು ಆಗುವುದಿಲ್ಲ. ಕೆಲವು PDF ಪ್ರಿಂಟರ್‍ ಬಳಸಿದಾಗ ಈ ರೀತಿಯ ತೊಂದರೆಗಳಾಗುತ್ತವೆ. ಧನ್ಯವಾದಗಳೊಂದಿಗೆ, ಪ್ರಸನ್ನ.ಎಸ್.ಪಿ

ನಮ್ ಗೆಳೆಯನ ಸೈಬರ್‌ನಲ್ಲಿ ಹಲವೊಮ್ಮೆ ಗ್ರಾಹಕರು ತರುವ ಫೈಲು ನಮ್ಮಲ್ಲಿ ಓಪನ್ ಆಗ್ದೇ ಪ್ರಿಂಟ್ ಕೊಡೋಕೆ ಕಸ್ಟ ಆಗುತ್ತಿತ್ತು.. ಈಗ ನೀವ್ ಹೇಳಿದ ವಿಧಾನ ಅನುಸರಿದರೆ ಆ ಸಮಸ್ಯೆ ದೋರಾಗಬಹುದು ಅನ್ನಿಸುತ್ತೆ.. ಪ್ರಯತ್ನಿಸುವೆ.. ಉಪಯುಕ್ತ ಮಾಹಿತಿಗೆ ಧನ್ಯವಾದಗಳು... ಶುಭವಾಗಲಿ...