ನಿಮ್ಮ ಜಾಲತಾಣಕ್ಕೆ ಕನ್ನಡ ಲಿಪಿಯಲ್ಲಿ URL

To prevent automated spam submissions leave this field empty.

ನಿಮ್ಮ ಬಳಿ ಈಗಾಗಲೇ ಒಂದು ಜಾಲತಾಣ ಅಥವಾ ಬ್ಲಾಗ್ ತಾಣ ಇದ್ದರೆ ಅದಕ್ಕೆ ಕನ್ನಡ ಲಿಪಿಯಲ್ಲಿ URL ಕೊಡಬಹುದು. ಇದಕ್ಕಾಗಿ ನೀವು http://co.cc ತಾಣಕ್ಕೆ Sign In ಆಗಬೇಕಾಗುತ್ತದೆ. ನಂತರ ಅಲ್ಲಿರುವ ಸೂಚನೆಗಳನ್ನು ಪಾಲಿಸಿದರೆ ಉಚಿತವಾಗಿ ನಿಮ್ಮ ತಾಣಕ್ಕೆ ಕನ್ನಡ ಲಿಪಿಯಲ್ಲಿ ಒಂದು URL ಪಡೆಯಬಹುದು. ಆ URL ಈ ರೀತಿ ಇರುತ್ತದೆ- http://ನಿಮ್ಮಹೆಸರು.co.cc.

ಉದಾಹರಣೆಗೆ ನೋಡಿ, ನಾನು ನನ್ನ ಕನ್ನಡ ಬ್ಲಾಗ್ ತಾಣ http://prasannakannada.blogspot.com ಗೆ http://ಪ್ರಸನ್ನ.co.cc ಎಂಬ URL ಪಡೆದಿದ್ದೇನೆ. ಪ್ರಸನ್ನ.co.cc ಎಂದು ಕೊಟ್ಟರೆ ಸೀದಾ ನನ್ನ ಕನ್ನಡ ಬ್ಲಾಗಾದ http://prasannakannada.blogspot.com ಗೆ redirect ಆಗುತ್ತದೆ. ಇದರ ಉಪಯೊಗವೆಂದರೆ ಕನ್ನಡದಲ್ಲಿಯೂ URL ಗಳನ್ನು ಪಡೆಯಬಹುದು ಹಾಗೂ ಉದ್ದವಾದ ತಾಣಗಳಿಗೆ ಸಣ್ಣದಾದ ನೆನಪಿಟ್ಟುಕೊಳ್ಳಲು ಸುಲಭವಾಗುವ URL ಹೊಂದಬಹುದು.

ಇನ್ನೇಕೆ ತಡ? ಬೇರೆಯವರು ನಿಮ್ಮ ಹೆಸರನ್ನು ಪಡೆಯುವ ಮೊದಲು ನೀವೇ ಕನ್ನಡ ಲಿಪಿಯಲ್ಲಿ ನಿಮ್ಮ ತಾಣಕ್ಕೆ URL ಪಡೆದುಕೊಳ್ಳಿ.

ಏನಾದರೂ ಸಂದೇಹವಿದ್ದರೆ ದಯವಿಟ್ಟು ಕೇಳಿ. ಸಹಾಯಕ್ಕೆ ಸದಾ ಸಿಧ್ಧ. ಒಟ್ಟಿನಲ್ಲಿ ಅಂತರ್ಜಾಲದಲ್ಲಿ ಹೆಚ್ಚೆಚ್ಚು ಕನ್ನಡವನ್ನು ನಾವು ಉಪಯೋಗಿಸಬೇಕು.

-ಪ್ರಸನ್ನ.ಎಸ್.ಪಿ

 

ನನ್ನ ಬ್ಲಾಗ್‌ನಲ್ಲಿ ಈ ಲೇಖನ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ನಾಗರಾಜ್, ಶ್ರೀನಿವಾಸ. ಇನ್ನಷ್ಟು ಕುತೂಹಲಕರ ಮಾಹಿತಿಗಳನ್ನು ಬರೆದಿಟ್ಟಿದ್ದೇನೆ. ಒಂದೊಂದಾಗಿ ಸಂಪದದಲ್ಲಿ ಹಾಕುವೆ. ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಇದ್ದರೆ ಇನ್ನೂ ಅನೇಕ ಲೇಖನಗಳನ್ನು ಬರೆಯಲು ಉತ್ಸಾಹವಿರುತ್ತದೆ. -ಪ್ರಸನ್ನ.ಎಸ್.ಪಿ

ಪ್ರಸನ್ನ.. ನಿಮ್ಮೆಲ್ಲ ಲೇಖನಗಳು ಮಾಹಿತಿಪೂರ್ಣವಾಗಿವೆ. screen shots ಜೊತೆಗೆ ಸರಿಯಾದ ಮಾಹಿತಿ ಹೊಂದಿದ ಲೇಖನ ಬರೆಯಲು ಸಾಕಷ್ಟು ತಾಳ್ಮೆ ಬೇಕು..ನಿಮ್ಮಲ್ಲಿದೆ ಅದು. ಹೀಗೆಯೇ ಮುಂದುವರಿಯಲಿ ನಿಮ್ಮ ಲೇಖನ ಮಾಲೆ.. ಸಹಸಂಪದಿಗರಿಗೆ ಉಪಯುಕ್ತ ಮಾಹಿತಿ ಸಿಕ್ಕಂತ್ತಾಗುತ್ತದೆ.

ಸುರೇಶ್ ನಾಡಿಗ್ ಸರ್‍, ಕ್ರೆಡಿಟ್ಸ್ ನೋಡುವುದೆಂದರೆ ಏನೆಂದು ಗೊತ್ತಾಗಲಿಲ್ಲ. ಸ್ವಲ್ಪ ವಿವರಿಸಿ ಹೇಳಿದರೆ ಸಹಾಯ ಮಾಡಲು ಪ್ರಯತ್ನಿಸುವೆ. ಧನ್ಯವಾದಗಳೊಂದಿಗೆ, -ಪ್ರಸನ್ನ.ಎಸ್.ಪಿ