ನಿಮ್ಮ ಕಂಪ್ಯೂಟರ್‍ ಹೈಬರ್ನೇಟ್ ಮಾಡಿಡಿ

To prevent automated spam submissions leave this field empty.
ನೀವು ನಿಮ್ಮ ಕಂಪ್ಯೂಟರ್‌‌ನ್ನು ಟರ್ನ್ ಆಫ್‌ ಮಾಡುವ ಬದಲು Hibernate ಮಾಡಿದರೆ ನಿಮ್ಮ ಅಮೂಲ್ಯ ಸಮಯ ಹಾಗೂ ವಿದ್ಯುತ್ ಉಳಿಸಬಹುದು. ಹೈಬರ್ನೇಟ್ ಮಾಡಿಡುವುದರಿಂದ ವಿಂಡೋಸ್ ಲೋಡ್ ಆಗಲು ಕಡಿಮೆ ಸಮಯ ಸಾಕಾಗುತ್ತದೆ. ಇದರಿಂದ ಸಮಯ ಹಾಗೂ ವಿದ್ಯುತ್ ಉಳಿತಾಯವಾಗುತ್ತದೆ. ಅಲ್ಲದೇ ಹೈಬರ್ನೇಟ್ ಮಾಡಿಡುವುದರಿಂದ ಎಲ್ಲಾ ಅಪ್ಲಿಕೇಷನ್‌ಗಳನ್ನು ಮತ್ತೊಮ್ಮೆ ಪ್ರಾರಂಭ ಮಾಡಬೇಕಾಗುವುದಿಲ್ಲ.

ಈಗ ಹೈಬರ್ನೇಟ್ ಮಾಡುವುದು ಹೇಗೆಂದು ನೋಡೋಣ. ಮೊದಲು Control Panel (start-->Control Panel) ಗೆ ಹೋಗಿ.
ಅಲ್ಲಿ Power options ಓಪನ್‌ ಮಾಡಿ, ಅಲ್ಲಿ Hibernate ಟ್ಯಾಬ್‌‌ ಕ್ಲಿಕ್ ಮಾಡಿ. ಕೆಳಗೆ Enable Hibernation ಎಂಬುದನ್ನು ಸೆಲೆಕ್ಟ್ ಮಾಡಿ.  Disk space for Hibernation ಎಂಬಲ್ಲಿ ಸಾಕಷ್ಟು ಖಾಲಿ ಜಾಗ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ Apply ಬಟನ್ ಒತ್ತಿರಿ.


ಅದಾದಮೇಲೆ Advanced ಟ್ಯಾಬ್‌ ಕ್ಲಿಕ್ ಮಾಡಿ.


ಅಲ್ಲಿ When I press the power button on my computer ಎಂಬಲ್ಲಿ Hibernate ಆರಿಸಿ OK ಒತ್ತಿರಿ. ಜೊತೆಗೆ Prompt for password when computer resumes from standby ಎನ್ನುವುದು ಸೆಲೆಕ್ಟ್ ಆಗಿಲ್ಲ ಎಂದು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಇದು ಸೆಲೆಕ್ಟ್ ಆಗಿದ್ದರೆ Windows resume ಅದಮೇಲೆ ಪಾಸ್‌ವರ್ಡ್ ಇದ್ದರೆ ಅದನ್ನು ಕೊಡಬೇಕಾಗುತ್ತದೆ ಇಲ್ಲದಿದ್ದರೆ ಯೂಸರ್‌ನೇಮ್‌ನ್ನು ಕ್ಲಿಕ್‌ ಮಾಡಬೇಕಾಗುತ್ತದೆ.


ಇದಿಷ್ಟು ಮೊದಲನೇ ಹಂತದ ಕೆಲಸಗಳು. ಈಗ ಹೈಬರ್ನೇಟ್ ಹೇಗೆ ಮಾಡಬಹುದು ಎಂದು ನೋಡೋಣ. ಇದನ್ನು ಮೂರು ರೀತಿ ಮಾಡಬಹುದು.
ಮೊದಲನೇ ರೀತಿ: When I press the power button on my computer ಎಂಬಲ್ಲಿ Hibernate ಆಯ್ಕೆಯನ್ನು ಆರಿಸಿರುವುದರಿಂದ ನಿಮ್ಮ ಕಂಪ್ಯೂಟರ್‌ ಆನ್‌ ಆಗಿದ್ದಾಗ CPUನಲ್ಲಿ ಪವರ್‌ ಗುಂಡಿ ಒತ್ತಿದರೆ ಕಂಪ್ಯೂಟರ್‌ ಹೈಬರ್ನೇಟ್‌ ಆಗುತ್ತದೆ.

ಎರಡನೇ ರೀತಿ: Turn off computer ಕೊಟ್ಟ ನಂತರ ಕೀಬೋರ್ಡ್‌ನಲ್ಲಿ shift ಗುಂಡಿ ಒತ್ತಿ ಹಿಡಿಯಿರಿ, ಆಗ Stand By ಜಾಗದಲ್ಲಿ Hibernate ಎಂದು ಬರುತ್ತದೆ. ಅದನ್ನು ಕ್ಲಿಕ್ಕಿಸುವುದರ ಮೂಲಕ ಹೈಬರ್ನೇಟ್ ಮಾಡಬಹುದು.

ಮೂರನೆಯ ರೀತಿ: ಡೆಸ್ಕ್‌‌ಟಾಪ್‌ನಲ್ಲಿ ರೈಟ್‌ ಕ್ಲಿಕ್ ಮಾಡಿ, New-->Shortcut ಸೆಲೆಕ್ಟ್ ಮಾಡಿ.


Type the location of the item ಎಂಬ ಜಾಗದಲ್ಲಿ ಈ ಕೆಳಗಿನ ಸಾಲುಗಳನ್ನು ಪೇಸ್ಟ್ ಮಾಡಿ.


rundll32.exe PowrProf.dll, SetSuspendState


ನಂತರ Next ಬಟನ್‌ ಒತ್ತಿರಿ.

Type a name for this shortcut ಜಾಗದಲ್ಲಿ Hibernate ಎಂದು ಕೊಟ್ಟು Finish ಒತ್ತಿರಿ.

 

ಈಗ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ Hibernate ಎಂಬ ಐಕಾನ್‌ ಇರುತ್ತದೆ. ಅದನ್ನು ಡಬಲ್ ಕ್ಲಿಕ್ ಮಾಡಿದರೆ ಕಂಪ್ಯೂಟರ್‍ ಹೈಬರ್ನೇಟ್ ಆಗುತ್ತದೆ.

ಅದೇ ರೀತಿ ಮೂರನೇ ವಿಧಾನದಲ್ಲಿ Type the location of the item ಎಂಬ ಜಾಗದಲ್ಲಿ


shutdownಗೆ   SHUTDOWN -s -t 01

ಹಾಗೂ restartಗೆ   SHUTDOWN -r -t 01

ಬಳಸಬಹುದು.


-ಪ್ರಸನ್ನ.ಎಸ್.ಪಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಸನ್ನ, ಉಪಯುಕ್ತ ಮಾಹಿತಿ.. ಹೈಬರ್ನೇಟ್ ಗೆ ಕನ್ನಡದಲ್ಲಿ ಏನಂತ ಕರೀಬಹುದು? ಗಣಕ ಯಂತ್ರದ ಸುಪ್ತ ಸ್ಥಿತಿ,ಸುಪ್ತ ಸ್ಥಿತಿ,ಅರೆ ನಿದ್ರಾವಸ್ಥೆ ??

ನನಗೂ ಸರಿಯಾದ ಪದ ಗೊತ್ತಿಲ್ಲ. ವಿಂಡೋಸ್‌‌ನ Kannada LIP ನಲ್ಲಿ ಯಾವ ಪದ ಇದೆ ಎಂದು ನೋಡಿಲ್ಲ. ಗಣಕ ಯಂತ್ರದ ಸುಪ್ತ ಸ್ಥಿತಿ,ಸುಪ್ತ ಸ್ಥಿತಿ,ಅರೆ ನಿದ್ರಾವಸ್ಥೆ... ಎಲ್ಲವೂ ಸರಿಹೋಗಬಹುದು. "ಕೋಳಿ ನಿದ್ರೆ" ಹೇಳೋಕೆ ಸುಲಭ! -ಪ್ರಸನ್ನ.ಎಸ್.ಪಿ

[quote=ಪ್ರಸನ್ನ]ಜೊತೆಗೆ Prompt for password when computer resumes from standby ಎನ್ನುವುದು ಸೆಲೆಕ್ಟ್ ಆಗಿಲ್ಲ ಎಂದು ಖಾತ್ರಿಪಡಿಸಿಕೊಳ್ಳಿ.[/quote]

ನಿಮ್ಮ user nameಗೆ password ಕೊಟ್ಟಿದ್ದರೆ, ಈ ಆಯ್ಕೆ ಸೆಲೆಕ್ಟ್ ಮಾಡುವುದು ಒಳ್ಳೆಯದು. ಇಲ್ಲವಾದರೆ ಬೇರೆ ಯಾರಾದರೂ ಕಂಪ್ಯುಟರ್‌ನ್ನು ಪ್ರಾರಂಭಿಸಿ, ನಿಮ್ಮ ಅಕೌಂಟ್‌ಗೆ ನುಗ್ಗಬಹುದು.

 


[quote=ಶ್ರೀನಿವಾಸ ವೀ. ಬ೦ಗೋಡಿ]ನಿಮ್ಮ user nameಗೆ password ಕೊಟ್ಟಿದ್ದರೆ, ಈ ಆಯ್ಕೆ ಸೆಲೆಕ್ಟ್ ಮಾಡುವುದು ಒಳ್ಳೆಯದು. ಇಲ್ಲವಾದರೆ ಬೇರೆ ಯಾರಾದರೂ ಕಂಪ್ಯುಟರ್‌ನ್ನು ಪ್ರಾರಂಭಿಸಿ, ನಿಮ್ಮ ಅಕೌಂಟ್‌ಗೆ ನುಗ್ಗಬಹುದು.[/quote]

ಹೌದು. ನೀವು ನಿಮ್ಮ user nameಗೆ password ಕೊಟ್ಟಿದ್ದರೆ Prompt for password when computer resumes from standbyನ್ನು ಸೆಲೆಕ್ಟ್ ಮಾಡಿ. ಪಾಸ್‌ವರ್ಡ್ ಕೊಟ್ಟಿರದಿದ್ದರೆ ಲಾಗಿನ್ ಆಗುವಾಗ ನಿಮ್ಮ ಯೂಸರ್‌ನೇಮ್‌ನ್ನು ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲದೇ ಮೂರ್ನಾಲ್ಕು ಯೂಸರ್‍ ಅಕೌಂಟ್‌ಗಳಿದ್ದಾಗ ನಿಮ್ಮ ಪಾಸ್‌ವರ್ಡ್ ಹೊಂದಿದ ಅಕೌಂಟಿನಿಂದ ಹೈಬರ್ನೇಟ್ ಮಾಡಿದರೆ ಮತ್ತೊಮ್ಮೆ ವಿಂಡೋಸ್ ಆರಂಭಿಸುವಾಗ ನಿಮ್ಮ ಯೂಸರ್‌‌ನೇಮ್‌ಗೆ ಪಾಸ್‌ವರ್ಡ್ ಸರಿಯಾಗಿ ಕೊಟ್ಟರೂ ಕೆಲವೊಮ್ಮೆ ಲಾಗಿನ್‌ ಆಗುವುದಿಲ್ಲ. ಇದನ್ನು ತಪ್ಪಿಸಲು ಮೂರ್ನಾಲ್ಕು ಯೂಸರ್‍ ಅಕೌಂಟ್‌ಗಳಿರುವಾಗ ಮೊದಲು Log Off ಮಾಡಿ ನಂತರ ಹೈಬರ್ನೇಟ್ ಮಾಡುವುದು ಉತ್ತಮ.

-ಪ್ರಸನ್ನ.ಎಸ್.ಪಿ

[quote]ಅಲ್ಲದೇ ಮೂರ್ನಾಲ್ಕು ಯೂಸರ್‍ ಅಕೌಂಟ್‌ಗಳಿದ್ದಾಗ ನಿಮ್ಮ ಪಾಸ್‌ವರ್ಡ್ ಹೊಂದಿದ ಅಕೌಂಟಿನಿಂದ ಹೈಬರ್ನೇಟ್ ಮಾಡಿದರೆ ಮತ್ತೊಮ್ಮೆ ವಿಂಡೋಸ್ ಆರಂಭಿಸುವಾಗ ನಿಮ್ಮ ಯೂಸರ್‌‌ನೇಮ್‌ಗೆ ಪಾಸ್‌ವರ್ಡ್ ಸರಿಯಾಗಿ ಕೊಟ್ಟರೂ ಕೆಲವೊಮ್ಮೆ ಲಾಗಿನ್‌ ಆಗುವುದಿಲ್ಲ.[/quote]

ಹಳೆಯ ವರ್ಶನ್‌ಗಳಲ್ಲಿ ಈ ಸಮಸ್ಯೆ ಇತ್ತು. ಹೊಸ ಸರ್ವಿಸ್ ಪ್ಯಾಕ್‌ಗಳಲ್ಲಿ ಈ ಸಮಸ್ಯೆ ಇಲ್ಲ.

[quote]ಇದನ್ನು ತಪ್ಪಿಸಲು ಮೂರ್ನಾಲ್ಕು ಯೂಸರ್‍ ಅಕೌಂಟ್‌ಗಳಿರುವಾಗ ಮೊದಲು Log Off ಮಾಡಿ ನಂತರ ಹೈಬರ್ನೇಟ್ ಮಾಡುವುದು ಉತ್ತಮ.[/quote]

Log Off ಮಾಡಿ ನಂತರ ಹೈಬರ್ನೇಟ್ ಮಾಡುವುದು ಮತ್ತು shut down ಮಾಡುವುದು, almost ಒಂದೇ!

 

[quote=ಶ್ರೀನಿವಾಸ ವೀ. ಬ೦ಗೋಡಿ]Log Off ಮಾಡಿ ನಂತರ ಹೈಬರ್ನೇಟ್ ಮಾಡುವುದು ಮತ್ತು shut down ಮಾಡುವುದು, almost ಒಂದೇ![/quote]

ಹೌದು. ಆದರೆ ಬೇಗ ಬೂಟಾಗುತ್ತೆ.

-ಪ್ರಸನ್ನ.ಎಸ್.ಪಿ

ಹೌದು, Log Off ಮಾಡಿ ಹೈಬರ್ನೇಟ್ ಮಾಡಿದರೆ ಹೆಚ್ಚೇನೂ ಸಮಯ ಉಳಿಯುವುದಿಲ್ಲ. ಬೇಗ ಬೂಟಾಗುತ್ತೆ ಅನ್ನೋದು ಬಿಟ್ಟರೆ, ಲಾಗಾಫ್ ಮಾಡಿ ಹೈಬರ್ನೇಟ್ ಮಾಡುವುದರಿಂದ ಬೇರಾವ ಪ್ರಯೋಜನವೂ ಇಲ್ಲ. ಲಾಗಾಫ್ ಮಾಡದೇ ಹೈಬರ್ನೇಟ್ ಮಾಡುವುದು ಉತ್ತಮ ಅಭ್ಯಾಸ.

 

-ಪ್ರಸನ್ನ.ಎಸ್.ಪಿ

>>>>>ನೀವು ನಿಮ್ಮ ಕಂಪ್ಯೂಟರ್‌‌ನ್ನು ಟರ್ನ್ ಆಫ್‌ ಮಾಡುವ ಬದಲು Hibernate ಮಾಡಿದರೆ ನಿಮ್ಮ ಅಮೂಲ್ಯ ಸಮಯ ಹಾಗೂ ವಿದ್ಯುತ್ ಉಳಿಸಬಹುದು. >>>>> ಸಮಯ ಓ.ಕೆ. ಆದರೆ ಇದರಿಂದ ವಿದ್ಯುತ್ ಉಳಿತಾಯ ಹೇಗೆ? ಟರ್ನ್ ಆಫ್ ಅಂದ್ರೆ ಪೂರ್ತಿ ಆಫ್ ಆಗಿರುತ್ತದಲ್ಲವೇ? ವಿದ್ಯುತ್ ಬಳಸುತ್ತಿರುವುದಿಲ್ಲ.!

[quote=vikashegde]ಸಮಯ ಓ.ಕೆ. ಆದರೆ ಇದರಿಂದ ವಿದ್ಯುತ್ ಉಳಿತಾಯ ಹೇಗೆ? ಟರ್ನ್ ಆಫ್ ಅಂದ್ರೆ ಪೂರ್ತಿ ಆಫ್ ಆಗಿರುತ್ತದಲ್ಲವೇ? ವಿದ್ಯುತ್ ಬಳಸುತ್ತಿರುವುದಿಲ್ಲ.![/quote]

ವಿಂಡೋಸ್ ಬೂಟ್ ಆಗಲು ಬಳಸುವ ವಿದ್ಯುತ್ ಉಳಿಯುತ್ತದೆ!

ಕೆಳಗಿರುವುದು ಮೈಕ್ರೋಸಾಫ್ಟಿನ ವೆಬ್ಸೈಟ್‌ನಲ್ಲಿ ದೊರೆತ ಮಾಹಿತಿ. ಇಂಗ್ಲೀಷ್‌ನಲ್ಲಿದೆ, ಕನ್ನಡಕ್ಕೆ ಅನುವಾದಿಸದೆ  ಸಂಪದದಲ್ಲಿ ಹಾಕಿದ್ದಕ್ಕೆ ಕ್ಷಮೆ ಕೋರುತ್ತೇನೆ.

The Hibernate function in Windows XP Professional can make the batteries in your laptop computer last longer.

Windows XP supports the industry standard power management technology known as the Advanced Configuration and Power Interface (ACPI), which enables the operating system to control power to your computer and peripheral devices. The power management features in Windows XP include Hibernate and Standby. Hibernate saves an image of your desktop with all open files and documents, and then it powers down your computer. When you turn on power, your files and documents are open on your desktop exactly as you left them. Standby reduces the power consumption of your computer by cutting power to hardware components you are not using. Standby can cut power to peripheral devices, your monitor, even your hard drive, but maintains power to your computer's memory so you don't lose your work.

http://www.microsoft.com/windowsxp/using/mobility/getstarted/hibernate.mspx

-ಪ್ರಸನ್ನ.ಎಸ್.ಪಿ

ಪ್ರಸನ್ನರೆ , ಉಪಯುಕ್ತ ಮಾಹಿತಿಗೆ ಧನ್ಯವಾದಗಳು. ಈ ತರಹ ಕಂಪ್ಯೂಟರ್ ಅನ್ನು ಮಲಗಿಸಿದರೆ ಅದನ್ನು ಮತ್ತೆ ಎಬ್ಬಿಸೋದು ಹೇಗೆ ಅಂತನೂ ಸ್ವಲ್ಪ ಹೇಳಿಬಿಡಿರಿ.

[quote=shreekant.mishrikoti]ಈ ತರಹ ಕಂಪ್ಯೂಟರ್ ಅನ್ನು ಮಲಗಿಸಿದರೆ ಅದನ್ನು ಮತ್ತೆ ಎಬ್ಬಿಸೋದು ಹೇಗೆ ಅಂತನೂ ಸ್ವಲ್ಪ ಹೇಳಿಬಿಡಿರಿ.[/quote]

ಏನೂ ಮಾಡಬೇಕಾಗಿಲ್ಲ, ಕರೆಂಟ್ ಕೊಟ್ಟರೆ(ಪವರ್‍ ಆನ್ ಮಾಡಿದರೆ) ಅದಕ್ಕೆ ಎಚ್ಚರ ಆಗಿಬಿಡುತ್ತೆ. ಒಮ್ಮೆ ನೀವು ಹೈಬರ್ನೇಟ್ ಮಾಡಲು ಪ್ರಾರಂಭಿಸಿದರೆ ನಂತರದಲ್ಲಿ ಕಂಪ್ಯೂಟರ್‍ Turn Off ಮಾಡಲು ಮನಸ್ಸೇ ಬರುವುದಿಲ್ಲ.

ಧನ್ಯವಾದಗಳೊಂದಿಗೆ,

ಪ್ರಸನ್ನ.ಎಸ್.ಪಿ