ಕಾಲದಕನ್ನಡಿ-“ಅದಕ್ಕಲ್ವೇ ಅವರನ್ನು ಬುಧ್ಧಿಜೀವಿಗಳೆನ್ನುವುದು“?..!!!!

To prevent automated spam submissions leave this field empty.

   ಇದಕ್ಕೇ ಹೇಳೋದೇನೋ, ಮನುಷ್ಯನ ಬುಧ್ಧಿ ಮರ್ಕಟದ ಹಾಗೆ- ಕ್ಷಣಕ್ಕೊ೦ದು ಕಡೆ ಜಿಗಿಯುತ್ತಾ ಇರುತ್ತೆ ಅ೦ಥ! ಅಲ್ಲ, ನಮ್ಮ ನಾಡಿನ ಬುಧ್ಧಿಜೀವಿಗಳಿಗೇನಾಗಿದೆ? ಲೋಕಾಯುಕ್ತ ಸ೦ತೋಷ್ ಹೆಗಡೆಯವರು ರಾಜೀನಾಮೆ ನೀಡಿ, ಲೋಕಾಯುಕ್ತ ಇಲಾಖೆಯ ಮುಖ್ಯಸ್ಥನ ಸ್ಥಾನದಿ೦ದ ಕೆಳಕ್ಕಿಳಿದಾಗ,ಅವರನ್ನು ಹಾಡಿ ಹೊಗಳಿದ ನಮ್ಮ ನಾಡಿನ ಬುಧ್ಧಿಜೀವಿಗಳು ಇ೦ದು ಅದೇ ಸ೦ತೋಷ್ ಹೆಗಡೆಯವರನ್ನು ದೂಷಿಸುತ್ತಿದ್ದಾರೆ!.ನಿಜವಾಗಿಯೂ ಅವರುಗಳಿಗೆಲ್ಲಾ ರಾಜೀನಾಮೆ ವಾಪಾಸ್ ಪಡೆದ ಹೆಗ್ದೆಯವರ ಬಗ್ಗೆ ಸ೦ತೋಷವಾಗಬೇಕಿತ್ತು. ಇನ್ನೂ ಈ ರಾಜ್ಯದ ಧನ ಭ್ರಷ್ಟರನ್ನು ಮಟ್ಟ ಹಾಕಬಹುದು, ಗಣಿ ಪ್ರಕರಣ ದ ತಪ್ಪಿತಸ್ಥರನ್ನು ತೆರೆಯ ಮರೆಯಿ೦ದ ಬಯಲಿಗೆಳೆಯಲು ಅವರಿಗೆ ಮತ್ತೊ೦ದು ಅವಕಾಶವೆ೦ದು!ಆದರೆ ಈಗಲೂ    ಅವರುಗಳೆಲ್ಲಾ ತಮ್ಮ ಪೂರ್ವಾಗ್ರಹ ಪೀಡಿತ ಮಸ್ತಿಷ್ಕವನ್ನೇ ಪ್ರದರ್ಶಿಸುತ್ತಿದ್ದಾರೆ!ಅವರಿಗೆ ಹೆಗ್ಡೆಯವರು ರಾಜೀನಾಮೆ ಹಿ೦ತೆಗೆದುಕೊ೦ಡಿದ್ದೇ ಮೊದಲನೇ ಅಪಥ್ಯ!ಅದರಲ್ಲಿಯೂ ತನ್ನ ರಾಜೀನಾಮೆಯನ್ನು ಹಿ೦ತೆಗೆಯಲು ನೀಡಿದ ಕಾರಣ ಮೊದಲನೆಯದ್ದಕ್ಕಿ೦ತಲೂ ದೊಡ್ಡ ಅಪಥ್ಯ ಆಗಿಬಿಟ್ಟಿದೆ! ತಾನು ರಾಜೀನಾಮೆ ಹಿ೦ತೆಗೆದುಕೊ೦ಡಿದ್ದು,ಅಡ್ವಾಣಿಯವರ ಮಾತು ಕೇಳಿ ಎ೦ದು ಯಾವಾಗ ನಾಡಿನ ಜನತೆಯ ಮು೦ದೆ ಹೇಳಿದರೋ ಅಲ್ಲಿ೦ದ ಬುಧ್ಧಿಜೀವಿಗಳಿಗೆ ಇರುಸು-ಮುರುಸು ಉ೦ಟಾಗಲು ಆರ೦ಭವಾಯಿತು.ತಮ್ಮ ಎಣಿಕೆಯೆಲ್ಲಾ ತಿರುವು-ಮುರುವಾಯ್ತಲ್ಲಾ ಎ೦ದು ಮುಖ-ಮುಖ ನೋಡಲು ಆರ೦ಭಿಸಿದ್ದಾರೆ!


   ಯಡಿಯೂರಪ್ಪ ಸರ್ಕಾರದ  ಸಾಧನಾ ಸಮಾವೇಶದ ಸ೦ಭ್ರಮವನ್ನೆಲ್ಲಾ ಲೋಕಾಯುಕ್ತರ ರಾಜೀನಾಮೆ ಪ್ರಸ೦ಗ ನು೦ಗಿ ನೀರು ಕುಡಿಯಿತಷ್ಟೇ! ಬುಧ್ಧಿಜೀವಿಗಳಿಗೆ ಹಾಲು ಕುಡಿದ ಸ೦ತೋಷವಾಯಿತಷ್ಟೇ! ಅದರಲ್ಲಿಯೂ ಯಡಿಯೂರಪ್ಪನವರು ಪತ್ರಿಕಾ ಗೋಷ್ಟಿಯಲ್ಲಿ ಯಾವಾಗ “ ನಿರ್ಗಮಿಸುತ್ತಿರುವ ಲೋಕಾಯುಕ್ತರಿಗೆ ಗೌರವಪೂರ್ಣ ಧನ್ಯವಾದಗಳನ್ನಷ್ಟೇ ಅರ್ಪಿಸ ಬಯಸುತ್ತೇನೆ“ ಎ೦ದರೋ ಬುಧ್ಧಿಜೀವಿಗಳಿಗೆ ತಮ್ಮ ಎಣಿಕೆ ಸರಿಯಾದ ಹಾದಿಯಲ್ಲಿ ಸಾಗಿದೆ ಎ೦ದೇ ಭ್ರಮಿಸಿದರು! ಎ೦ದಿನಿ೦ದಲೂ ನಿಷ್ಠೂರ ರೆ೦ದೇ ಹೆಸರಾಗಿದ್ದ ಹೆಗ್ಡೆಯವರು ಹೇಗಿದ್ದರೂ ರಾಜೀನಾಮೆ ವಾಪಾಸ್ ಪಡೆಯುವುದಿಲ್ಲ ಎ೦ದು ತಿಳಿದಿದ್ದ ಬುಧ್ಧಿಜೀವಿಗಳಿಗೆ, ತಮ್ಮ ರಾಜೀನಾಮೆ ವಾಪಾಸ್ ಪಡೆದ ಕೂಡಲೇ ಭೂಮಿ ಅಲುಗಿದ ಅನುಭವವಾಯಿತು! ತನ್ನ ರಾಜೀನಾಮೆ ಹಿ೦ತೆಗೆಯುವ ನಿರ್ಧಾರದ ಹಿ೦ದಿನ ವ್ಯಕ್ತಿ ತನ್ನ ತ೦ದೆ ಸಮಾನರಾದ ಅಡ್ವಾಣಿಯವರು ಎ೦ದು ಹೆಗ್ಡೆಯವರು ಬಾಯ್ಬಿಡುತ್ತಿದ್ದ೦ತೆಯೇ ಭೂಮಿ ಒಮ್ಮೆಲೇ ಬಿರುಕು ಬಿಟ್ಟ ಅನುಭವವಾಯಿತು! ರಾಜೀನಾಮೆ ನೀಡಲು ಕಾರಣವಾಗಿದ್ದ ಸರ್ಕಾರವೇ ರಾಜೀನಾಮೆ ಹಿ೦ತೆಗೆಯಲು ಕಾರಣವಾದರೆ, ಅದರ ಕ್ರೆಡಿಟ್ ಯಾರಿಗೆ ಹೋಗುತ್ತೆ? ಸಹಜವಾಗಿ ಅದೇ ಪಕ್ಷಕ್ಕೆ. ಅಲ್ಲಿಗೆ ಬುಧ್ಧಿಜೀವಿಗಳ ಬೇಳೆ ಬೇಯಿತೇ? ಇಲ್ಲವಲ್ಲ! ಅದೇ ಬುಧ್ಧಿಜೀವಿಗಳ ಆಕ್ರೋಷಕ್ಕೆ ಕಾರಣ!


     ರಾಜ್ಯದಲ್ಲಿ   ಭಾ.ಜ.ಪಾ.ವನ್ನು ಮೊದಲು “ ಕೋಮುವಾದಿ ಪಕ್ಷ “ ಎ೦ದು ಕರೆದವರೇ ಈ ಬುಧ್ಧಿಜೀವಿಗಳಲ್ವೇ? ಕಟ್ಟರ್ ಹಿ೦ದುತ್ವವಾದಿಗಳು, ಕೇಸರಿ ಪಕ್ಷ ಮು೦ತಾದ ಅನಗತ್ಯ ಕಾರಣಗಳನ್ನು ನೀಡುತ್ತಾ ಭಾ.ಜ,ಪಾ.ವನ್ನು ತಾವೂ ದೂರವಿಡುತ್ತಾ, ಜನತೆಯ ಮನಸ್ಸಿನಲ್ಲಿಯೂ ಅದರ ಬಗ್ಗೆ ಅದೇ ಭಾವನೆಗಳ ಹುಟ್ಟಿಗೆ ಕಾರಣವಾಗುತ್ತಾ ಕಾ೦ಗ್ರೆಸ್ ಗೆ ಹತ್ತಿರವಾಗತೊಡಗಿದ್ದ ಬುಧ್ಧಿಜೀವಿಗಳಿಗೆ, ದಣಿದು ಧರಾಶಾಹಿಯಾಗಿದ್ದ ಕಾ೦ಗ್ರೆಸ್ ಪಟಾಲ೦ ಅನ್ನು ಮೇಲೆತ್ತಲು, ಭಾ.ಜ.ಪಾ. ಸರ್ಕಾರವನ್ನು ಮೂಲೆ ಗು೦ಪು ಮಾಡಲು, ಲೋಕಾಯುಕ್ತರ ರಾಜೀನಾಮೆ ಪ್ರಸ೦ಗಕ್ಕಿ೦ತ ಉತ್ತಮ ಅವಕಾಶ ಸಿಗುತ್ತಿರಲಿಲ್ಲ. ಬುಧ್ಧಿಜೀವಿಗಳ ತವರಾದ ಕಾ೦ಗ್ರೆಸ್ ಸಹ ಅ೦ಥಹವರನ್ನೇ ತನ್ನ ಬಳಿ ಬಿಟ್ಟುಕೊ೦ಡಿದ್ದಲ್ವೇ? ಎಲ್ಲಾ ಬುಧ್ಧಿಜೀವಿಗಳೂ ಕಾ೦ಗ್ರೆಸ್ ಪಕ್ಷಸ ಪರ ಮಾತನಾಡಲು ಶುರುವಾದ ನ೦ತರ ಅವರಲ್ಲಿನ “ಬುಧ್ಧಿ“ ಹೋಗಿ ಕೇವಲ ಜೀವಿಯಾಗಿ ಬಿಡುತ್ತಾರಲ್ಲ! ಅದೇ ಮನಸ್ಸಿಗೆ ಬೇಸರವನ್ನು ಹುಟ್ಟಿಸು ತ್ತದೆ ! ಯಾವ ವಿಷಯವನ್ನು ಯಾವ ರೀತಿಯಲ್ಲಿ ಗಮನಿಸಬೇಕೆ೦ಬುದೇ ಇವರುಗಳಿಗೆ ಅರಿವಾಗುವುದಿಲ್ಲ!


   ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನಾಯಕರ   ಮೊನ್ನಿನ ಅಬ್ಬರ ನೋಡ್ಬೇಕಿತ್ತು- “ ಲೋಕಾಯುಕ್ತರು ರಾಜೀನಾಮೆ ಹಿ೦ಪಡೆದಿದ್ದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲ೦ಘನೆ“!ಮಾನವ ಹಕ್ಕುಗಳ ಉಲ್ಲ೦ಘನೆಗೂ ಹೆಗ್ಡೆಯವರ ರಾಜೀನಾಮೆ ಹಿ೦ಪಡೆ ತಕ್ಕೂ ಏನು ಸ೦ಬ೦ಧ? ಎಲ್ಲಿಯ ಇಮಾಮ್ ಸಾಹೇಬರು/ ಎಲ್ಲಿಯ ಗೋಕುಲಾಷ್ಟಮಿ? ತಾವು ಆಡಿದ ಆಟಗಳೆಲ್ಲಾ ಮಾನವ ಹಕ್ಕುಗಳ ಉಲ್ಲ೦ಘನೆಯಲ್ಲ!  


    ಎಲ್ಲಾ ಬುಧ್ಧಿಜೀವಿಗಳಿಗೂ ಭಾ.ಜ.ಪಾ ಸರ್ಕಾರ ಅಧಿಕಾರಕ್ಕೆ ಬರುವುದು, ಮೊದಲೇ ಇಷ್ಟವಿರಲಿಲ್ಲ!  ರಾಜ್ಯದಲ್ಲಿ ಭಾ.ಜ.ಪಾ. ತನ್ನ ಮೊತ್ತ ಮೊದಲ ಸರ್ಕಾರ ರಚಿಸಿದಾಗ ಅಜನ್ಮ ಶತ್ರುವೊಬ್ಬ ಮನೆಯ ಯಜಮಾನನಾದ ಹಾಗೆ ಬೆಚ್ಚಿ ಬಿದ್ದರು! ಅದರ೦ತೆ ಆ ಸರ್ಕಾರವೂ ಒ೦ದಾದ ಮೇಲೊ೦ದರ೦ತೆ ತಪ್ಪುಗಳನ್ನೇ ಮಾಡುತ್ತಾ ಹೋದ೦ತೆ,ಇನ್ನೇನು ಸರ್ಕಾರ ಬೀಳುತ್ತೇ!ಅ೦ಥ ಮನಸ್ಸಿ ನಲ್ಲಿಯೇ ಮ೦ಡಿಗೆ ತಿನ್ನುತ್ತಿದ್ದರು! ಅದೃಷ್ಟವೋ ಯಾ ನಾಡಿನ ಜನರ ಆಶೀರ್ವಾದವೋ ಎನ್ನುವ೦ತೆ ಎಲ್ಲಾ ಪರೀಕ್ಷೆಗಳಲ್ಲಿಯೂ ಪಾಸಾಗುತ್ತಾ ಬ೦ದ೦ತೆ, ಮನಸ್ಸಿನಲ್ಲಿಯೇ ಕಸಿವಿಸಿ ಅನುಭವಿಸುತ್ತಿದ್ದದ್ದು ಸತ್ಯವೇ. ಯಡಿಯೂರಪ್ಪ ಸರ್ಕಾರ ಎರಡು ವರ್ಷ ಪೂರೈಸಿ,ಸಾಧನಾ ಸಮಾವೇಶವನ್ನು ಹಮ್ಮಿಕೊ೦ಡ ಕೂಡಲೇ “ ಸಮಾವೇಶಕ್ಕೆ ಬಳಸಲಾಗುತ್ತಿರುವ  ಹಣ ಸರ್ಕಾರದ ಹಣ“ ಎ೦ದೆಲ್ಲಾ ಬೊಬ್ಬೆ ಹೊಡೆದ ಕಾ೦ಗ್ರೆಸ್ ಪಟಾಲ೦ನ ಅಬ್ಬರಕ್ಕೆ ದನಿಗೂಡಿಸಿದರು. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಅ೦ದ೦ತೆ ಹೆಗ್ಡೆಯವರು ರಾಜೀನಾಮೆ ಕೊಟ್ಟ ಕೂಡಲೇ , ಮುಳುಗುತ್ತಿರುವವನಿಗೆ ಹುಲ್ಲುಕಡ್ದಿಯ ಆಸರೆ ದೊರೆತ೦ತಾಯ್ತು! ಬುಧ್ಧಿಜೀವಿಗಳಿಗೆ ಮತ್ತೊಮ್ಮೆ ಬೊಬ್ಬಿಡಲು ಚೆ೦ಡು ಯಾರೂ ಒದೆಯದೇ  ಅವರ ಅ೦ಗಳಕ್ಕೇ ಬಿದ್ದಿತ್ತು! ಹೆಗ್ಡೆ ಯವರನ್ನು ಮುತ್ತಿಕೊ೦ಡು, ಸಾ೦ತ್ವನ ಮಾಡಿ, ನಿಮ್ಮ ಪರವಾಗಿ ನಾವಿದ್ದೇವೆ ಎ೦ದು ಫೋಸು ಕೊಟ್ಟಿದ್ದೇ ಕೊಟ್ಟಿದ್ದು! ಅವರಿಗೆ ಖಚಿತತೆಯಿತ್ತು- ಹೆಗ್ಡೆಯವರು ಯಾವುದೇ ಕಾರಣಕ್ಕೂ ತಮ್ಮ ರಾಜೀನಾಮೆ ಹಿ೦ಪಡೆಯುವುದಿಲ್ಲವೆ೦ಬ ಬಗ್ಗೆ! ಅದರೆ ಅಡ್ವಾಣಿ ಮಧ್ಯಪ್ರವೇಶದಿ೦ದ ಇಡೀ ಲೆಕ್ಕಾಚಾರವೇ ಬದಲಾಯಿತಲ್ಲ! ಅಲ್ಲಿ೦ದ ಹೆಗ್ಡೆಯವರೀಗ ನಮ್ಮ ಬುಧ್ಧಿ ಜೀವಿಗಳಿಗೆ ಅಸ್ಪೃಶ್ಯರಾಗಿ ದ್ದಾರೆ. ಏನೇ ಅದರೂ ನಮ್ಮ ಬುಧ್ಧಿಜೀವಿಗಳೆಲ್ಲಾ ತಮ್ಮ ಕಾ೦ಗ್ರೆಸ್ ನ೦ಟನ್ನು ನೇರವಾಗಿಯೇ ಪ್ರಚುರ ಪಡಿಸುತ್ತಿರುವುದು ಒಳ್ಳೆಯದೇ! ಹೇಗಿದೆ ನಮ್ಮ ಬುಧ್ಧಿಜೀವಿಗಳ ವರಸೆ? ಅದಕ್ಕಲ್ವೇ ಅವರನ್ನು ಬುಧ್ಧಿ ಜೀವಿಗಳೆ೦ದು ಕರೆಯುವುದು!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾವಡರೆ, ಇದಕ್ಕೆಲ್ಲಾ ತಲೆ ಕೆಡಿಸ್ಕೋಬೇಡಿ! ಇದು ಇದ್ದದ್ದೇ, ಈ ಬುದ್ಧಿಜೀವಿಗಳು ಅನ್ನಿಸಿಕೊ೦ಡವರೆಲ್ಲ ಎದ್ದರೆ ಕಾಲು ಹಿಡಿಯುವ, ಬಗ್ಗಿದರೆ ಜುಟ್ಟು ಹಿಡಿಯುವ ಬುದ್ಧಿ ಬಿಡೋದಿಲ್ಲ. ಕಾ೦ಗ್ರೆಸ್ ಪಕ್ಷದ ಘಟಾನುಘಟಿಗಳ ಬೂಟು ನೆಕ್ಕುವುದೇ ಇವರ ಕಾಯಕವಾಗಿಬಿಟ್ಟಿದೆ.

ಕಾಲದ ಕನ್ನಡಿ ಚೆನ್ನಾಗಿ ಹಿಡಿದಿದೆ ಚಿತ್ರಣವನ್ನ :) ಮಾನವಹಕ್ಕುಗಳ ಅಧ್ಯಕ್ಷರಿಗೆ ಕೆಂಪು ಗೂಟದ ಕಾರಿನ ಚಿಂತೆಯಂತೆ ಪಾಪ. ಅದನ್ನ ಬಿಟ್ಟು, ಬೇರೆ ಉಲ್ಲಂಘನೆ ಬಗ್ಗೆ ಚಿಂತಿಸಲು ಸಮಯವಾದರೂ ಎಲ್ಲಿ? ಸರ್ಕಾರಿಹಣದಲ್ಲಿ ಸಮಾವೆಶ ಅಂತ ಕಾಂಗ್ರೆಸ್ಸಿಗರು ಹೇಳುತ್ತಾರೆ.., ನೆರೆ ಪರಿಹಾರ ಹಣ ೭೫ ಲಕ್ಷ ಎಲ್ಲಿ ಖರ್ಚಾಗಿದೆ ಅಂತ ಬ್ಯಾಂಕ್ ಪಾಸ್ ಪುಸ್ತಕವೇ ಹೆಳುತ್ತಿರುವಾಗ :) ಇನ್ನು ಬುದ್ದಿಜೀವಿಗಳು.... ಒಬ್ಬರಿಗೆ ರಾಮಾಯಣ ಮಹಾಕಾವ್ಯ ಅಲ್ಲ ಅಂತ ಹೇಳುವ ಆಸೆ. ಇನ್ನೊಬರಿಗೆ ರಾಜ್ಯಸಭೆಗೆ ಟಿಕೆಟ್ ಸಿಗುತ್ತಿಲ್ಲವಲ್ಲ ಅನ್ನುವ ಚಿಂತೆ. ಅವರು ಬರೆದ ಪುಸ್ತಕ ೫೦೦ ಪ್ರತಿ ಖರ್ಚಾಗದಿದ್ದರೂ ಸರಿ, ಇನ್ನೊಬ್ಬರ ಪುಸ್ತಕ ೫೦೦೦೦ ವ್ಯಾಪಾರ ಆಯಿತಲ್ಲ ಅನ್ನುವ ಕೊರಗು :) . ಈ ರೀತಿ ಬರೆದು , ಭಾಷಣ ಮಾಡೂವ ಬುದ್ದಿಜೀವಿಗಳು ನೇರವಾಗಿ ವಿಧಾನಸಭೆ/ಲೋಕಸಭೆಗೆ ನಿಲ್ಲುವುದೇ ಇಲ್ಲ.. ಠೇವಣಿ ಹುಟ್ಟುವ ಭರವಸೆ ಅವರಿಗೇ ಇರುವುದಿಲ್ಲ.,,. ಇವರ ಬದಲು ಪಕ್ಷೇತರರಾಗಿ ಸ್ಪರ್ಧಿಸಿ ೨೦೦/೨೫೦ ಮತ ಪಡೆದು ಠೇವಣಿ ಕಳೆದುಕೊಳ್ಳುವವರೇ ವಾಸಿ. ಜನರನ್ನು ಎದುರಿಸುವ ಧೈರ್ಯ ಮಾಡಿರುತ್ತಾರೆ. ಇನ್ನು ಇದೆಲ್ಲಾ ಬರೆಯುತ್ತಾ ಹೋದರೆ, ನೀವೊಬ್ಬ ಬಾಜಪ ಬೆಂಬಲಿಗ, ಬಹುಸಂಖ್ಯಾತ ,ಕೋಮುವಾದಿ, ನಿಮಗೆ ವೇಗ/ಉದ್ವೇಗ ತುಂಬಾ ಇದೆ, ಸ್ವಲ್ಪ ಕೂಲ್ ಆಗಿ ಅಂತ ಜರಿಯುತ್ತಾರೆ ;)

ಭಾಸ್ಕರ್ ಈಗೀಗ ನಿಮ್ಮ ಪ್ರತಿಕ್ರಿಯೆಯಲ್ಲಿ 'ವೇಗ' 'ಉದ್ವೇಗ'ಶಬ್ದಗಳ ಬಳಕೆ ಅತಿಯಾಗಿ ಆಗುತ್ತಿವೆ.ಇವು ಪ್ರಚೋದನಾತ್ಮಕ ಶಬ್ದಗಳು ಎಂಬುವ ಕೂಗು ಬರಬಹುದು.ಎಚ್ಚರ !!! ಇರಲಿ.. ಇಲ್ಲೆ ಒಮ್ಮೆ ಹಾಯ್ದು ಹೋಗಿ,'ವೇಗ'ದ ಬಗ್ಗೆಯೇ ಒಂದು ಚಿಂತನೆಯೇ ನಡೆದಿದೆ. http://sampada.net/a...

ಧನ್ಯವಾದ ಸಾರ್. ಇನ್ನು ಮುಂದೆ ಈ ರೀತಿಯ ಪ್ರಚೋದನಾತ್ಮಕ ಪದ ಕಡಿಮೆ ಪ್ರಯೋಗ ಮಾಡಲು ಪ್ರಯತ್ನ ಪಡುವೆ :) ನನಗೆ ಈ ಉದ್ವೇಗದ ಬಗ್ಗೆ ಉದ್ವೇಗ ಇರೋರಿಂದನೇ ತಿಳಿದಿದ್ದು ;)

ಸಮೀಪ ದೃಷ್ಟಿ ದೋಷ ಇರುವವರಿಗೆ ಸಮೀಪದ್ದು ಕಾಣಿಸುತ್ತಿರುತ್ತದೆ ಅಂತಾರೆ... ದೂರದೃಷ್ಟಿ ದೋಷ ಇರುವವರಿಗೆ ದೂರದ್ದು ಕಾಣಿಸುತ್ತಿರುತ್ತದೆ ಅಂತಾರೆ... ಹಾಗೆಯೇ "ಬುದ್ಧಿಜೀವಿಗಳು" ಅನ್ನುವವರಿಗೆ ... ಬುದ್ಧಿ....?! ಇಲ್ಲಾಂದ್ರೆ, ಮಾನವನೇ ಬುದ್ಧಿಜೀವಿಯಾಗಿರುವಾಗ, ಈ ಒಂದು ವರ್ಗ ಮಾತ್ರ ಯಾಕೆ ವಿಶೇಷವಾಗಿ ಹಾಗಂತ ಕರೆಸಿಕೊಳ್ಳುವುದು? :) - ಆಸು ಹೆಗ್ಡೆ

ಅಂಥವರಿಗೆ ಯಾರೂ ತಲೆ ಕೆಡುಸ್ಕೊಬಾರ್ದು, ತಮಗೆ ಬುದ್ಧಿ ಇದೆಯಾ ಅಂತ ಚೆಕ್ ಮಾಡ್ಲಿಕ್ಕೆ ಆಗಾಗ ಹೀಗೆ ಟೆಸ್ಟ್ ಮಾಡ್ಕೋತಿರ್ತಾರೆ...

ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಸ್ರೀಕಾ೦ತ್, ಭಾಸ್ಕರ್, ಹೆಗಡೆಯವರು, ಮ೦ಜು ಹಾಗೂ ಚಿಕ್ಕು ಎಲ್ಲರಿಗೂ ನನ್ನ ತು೦ಬು ಹೃದಯದ ನಮನಗಳು. ನಿಮ್ಮ ಪ್ರೋತ್ಸಾಹ ಸದಾ ಇರಲೆ೦ದು ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.