ಮತದಾನ ಮಾಡುವವರು ಮಾತ್ರ ಪ್ರತಿಕ್ರಿಯಿಸಿ

To prevent automated spam submissions leave this field empty.

ಮತದಾನ ಎನ್ನುವುದು ನಮ್ಮಲ್ಲಿನ ಆಂತರಿಕ ಜವಾಬ್ದಾರಿಯನ್ನು ಸಮಾಜಕ್ಕೆ ಎತ್ತಿ ತೋರಿಸುವಂತುಹುದು. ನಮಗೆ ಬೇಕಾದಂತಹ, ಸ್ಪಂದಿಸುವಂತಹ ಪ್ರತಿನಿಧಿಯನ್ನು ಆಯ್ಕೆ ಮಾಡಲು ಸಂವಿಧಾನ ಕೊಟ್ಟಂತಹ ಅವಕಾಶ. ಆದರೆ ಇದನ್ನು ಪ್ರಜ್ಞಾವಂತರು ನಿಭಾಯಿಸುತ್ತಿದ್ದಾರೆಯೇ, ಇಲ್ಲ, ಎನ್ನುವುದಕ್ಕೆ ಬಿಬಿಎಂಪಿ ಚುನಾವಣೆಯೇ ನಮ್ಮ ಕಣ್ಣೆದುರುಗಿನ ಸಾಕ್ಷಿ. ಅದೇ ಗ್ರಾಮ ಮಟ್ಟದಲ್ಲಿ ಇನ್ನೂ ಪ್ರಜಾಪ್ರಭುತ್ವ ಉಳಿದಿದೆ ಎನ್ನಲು ಗ್ರಾ.ಪಂ ಚುನಾವಣೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾವಣೆಯಾಗಿದ್ದು.

ನಾವು ದಿನ ನಿತ್ಯ ಸುತ್ತಮುತ್ತಲಿನ ಸಮಸ್ಯೆಗಳ ಬಗ್ಗೆ ಗೊಣಗುತ್ತಿರುತ್ತೇವೆ. ಮನೆಯಲ್ಲಿ ನೀರು ಬಂದಿಲ್ಲ, ಚೆರಂಡಿ ಸ್ವಚ್ಛಗೊಳಿಸಿಲ್ಲ ಎಂದಾಕ್ಷಣ ತಕ್ಷಣವೇ ಸ್ಥಳೀಯ ಕಾಪರ್ಪೊರೇಟರ್ಗೆ ಶಾಪ ಹಾಕುವುದು ಮಾಮೂಲಿ. ಮತ್ತೆ ತಿಂಡಿಗೆ ಕೂತಾಗ ಅದೇ ಚರ್ಚೆ ಅವನನ್ನು ಗೆಲ್ಲಿಸಿದ್ದರೆ ಚೆನ್ನಾಗಿತ್ತು. ಅವನು ಯುವಕ, ಉತ್ತಮ ಕೆಲಸಗಾರ ಅಂತಾ ಸಾಕಷ್ಟು ತಟ್ಟೆ ಮುಂದೆ ಚರ್ಚೆ. ಸರ್ ನೀವು ಮತದಾನ ಮಾಡಿದ್ದಿರಾ ಎಂದರೆ ಇಲ್ಲಾ ಸರ್ ಅವತ್ತು.........ಏನೋ ಒಂದು ಕಾರಣ. ಮತದಾನವೇ ಮಾಡದ ಅನೇಕರಿಗೆ ಸಮಾಜದ ವ್ಯವಸ್ಥೆ ಬಗ್ಗೆ ಮಾತನಾಡುವ ಹಕ್ಕೇ ಇಲ್ಲ ಎನ್ನುವುದು ನನ್ನ ವಾದ.

ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದೇ ನಮಗೆ ಬೇಕಾದಂತಹ ನಾಯಕನನ್ನು ಆಯ್ಕೆ ಮಾಡಲು. ಚುನಾವಣೆಗೆ ಸ್ಪರ್ಧಿಸಿದ್ದಂತಹ ಎಲ್ಲರೂ ಕೆಟ್ಟವರಾದರೆ ಅವರಲ್ಲಿ ಅತೀ ಕಡಿಮೆ ಕಟ್ಟವನಿಗೆ ಮತ ಚಲಾಯಿಸಬೇಕಾಗುತ್ತದೆ. ಸಮಾಜದ ಕನಿಷ್ಠ ಮಟ್ಟದ ಜವಾಬ್ದಾರಿಯನ್ನು ನಿಭಾಯಿಸದೇ ಹೋದರೆ  ಆಡಳಿತವನ್ನು ತೆಗಳಲು ಅಂತವರಿಗೆ ನೈತಿಕ ಹಕ್ಕೆ ಇಲ್ಲ. ಇವತ್ತು ಎಲ್ಲೆಡೆ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತದೆ. ಚರ್ಚೆ ಮಾಡುವವರಲ್ಲಿ ನಮಗೆ ಮತದಾನ ಮಾಡಿದಂತವರು ಸಿಗುವುದು ಕೆಲವೇ ಪರ್ಸೆಂಟ್ ಮಂದಿ. ಇದೀಗ ನಡೆಯುತ್ತಿರುವ ಚುನಾವಣೆಗಳು ಹಣ, ಹೆಂಡ ಆಧಾರದ ಮೇಲೆ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಶೇ.30ರಷ್ಟು ಮತದಾನ ಇದರ ಆಧಾರದ ಮೇಲೆ. ಅವರುಗಳು ಎಂತವರನ್ನು ಆರಿಸುತ್ತಾರೆ ಎನ್ನುವುದನ್ನು ಮತ್ತೆ ಬಿಡಿಸಿ ಹೇಳಬೇಕಾಗಿಲ್ಲ. ಮತದಾನ ಎಂಬ ಪ್ರಕ್ರಿಯೆ ಸರಿಯಾಗಿ ನಡೆಯದೇ ಹೋದಲ್ಲಿ ವ್ಯವಸ್ಥೆಗೆ ನಾವೇ ಸರಿ ಹೊಂದಬೇಕಾಗುತ್ತದೆ. ಇಲ್ಲವಾದಲ್ಲಿ ಅಕ್ರಮಗಳು  ಹೀಗೆ ಮುಂದುವರೆಯುತ್ತಲೇ ಇರುತ್ತದೆ.

ನಾನು ಪ್ರತೀ ಚುನಾವಣೆಯಲ್ಲೂ ಮತದಾನ ಮಾಡುತ್ತೇನೆ.

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾಡಿಗರೆ, ನನಗೆ ಮತದಾನ ಮಾಡುವ ಯೋಗ್ಯತೆ ಬ೦ದ ನ೦ತರ ಬಹುಶಃ ಎಲ್ಲಾ ಚುನಾವಣೆಗಳಲ್ಲೂ ನಾನು ಮತ ಚಲಾಯಿಸಿದ್ದೇನೆ. ಕಳೆದ ಬಾರಿಯ ಲೋಕಸಭಾ ಚುನಾವಣೆಗೆ ಮುನ್ನ, ದುಬೈನಿ೦ದ ರಜಕ್ಕೆ೦ದು ಬ೦ದವನು, ನಮ್ಮ ಮತದಾರರ ಗುರುತುಪತ್ರ ಪಡೆಯಲು ಪತ್ನಿಯೊಡನೆ ಸುಮಾರು ಒ೦ದೂವರೆ ಘ೦ಟೆ ಶ೦ಕರಮಠದ ಮೈದಾನದಲ್ಲಿ ಸಾಲಿನಲ್ಲಿ ನಿ೦ತಿದ್ದೆ. ನನ್ನ ಮತವನ್ನು ಬಿಜೆಪಿಗೇ ಚಲಾಯಿಸಿದ್ದೆ. ಏಕೆ೦ದರೆ ಕೇ೦ದ್ರದಲ್ಲಿ ನಾನು ಬದಲಾವಣೆಯನ್ನು ಬಯಸುತ್ತಿದ್ದೆ. ಆದರೆ ಫಲಿತಾ೦ಶ ಮಾತ್ರ ಉಲ್ಟಾ ಆಯಿತು. ಅ೦ತರ್ಜಾಲದಲ್ಲಿ ಸಿಗುವಷ್ಟು ಬೆ೦ಬಲ ಬಿಜೆಪಿಗೆ ಮತದಾನದಲ್ಲಿ ಸಿಕ್ಕಿದ್ದಿದ್ದರೆ ಕಥೆಯೇ ಬೇರೆ ಇರುತ್ತಿತ್ತು. ಇನ್ನಾದರೂ ವಿದ್ಯಾವ೦ತರು ಎಚ್ಚೆತ್ತು, ಇಲ್ಲಿ ಇದು ಸರಿಯಿಲ್ಲ, ಅದು ಸರಿಯಿಲ್ಲ ಎ೦ದು ದೂರುವುದನ್ನು ಬಿಟ್ಟು ದೇಶಕ್ಕೆ ನಿಷ್ಠರಾಗಿ ತಮ್ಮ ಜವಾಬ್ಧಾರಿ ನಿರ್ವಹಿಸಿದರೆ ಹೊಲಸೆದ್ದಿರುವ ರಾಜಕೀಯ ಪರಿಸ್ಥಿತಿಯಲ್ಲಿ ಬದಲಾವಣೆಯ ಗಾಳಿ ಬೀಸಬಹುದು. ಬರುವ ಚುನಾವಣೆಗಳ ಹೊತ್ತಿಗೆ ಹಾಗಾಗುತ್ತದೆ೦ದು ಎಲ್ಲರೂ ಆಶಾವಾದಿಗಳಾಗಿರೋಣ.

ಉತ್ತಮ ಲೇಖನ ನಾಡಿಗರೇ, ನಾನು ಮತದಾನ ಮಾಡುತ್ತಿದ್ದೇನೆ. @ ಸತೀಶ್ ಗೌಡರೇ, ನಮ್ಮ ಮಲೆನಾಡಿನಲ್ಲಿ ಊಟಕ್ಕೆ ಮಾತ್ರವಲ್ಲದೆ, ಕೆಲವು ತಿ೦ಡಿಗಳಿಗೂ ಉಪ್ಪಿನಕಾಯಿಯನ್ನು ಬಳಸುತ್ತೇವೆ. ಚಿತ್ರನ್ನ, ಮೊಸರನ್ನ, ತೆ೦ಗಿನಕಾಯಿ ಅನ್ನ, ಬೆಳ್ಳುಳ್ಳಿ ಅನ್ನ ಮು೦ತಾದವಕ್ಕೆ.( ಅನ್ನದಿ೦ದ ಮಾಡಿರುವುದು ತಿ೦ಡಿಯೇ ಎ೦ಬ ಮತ್ತೊ೦ದು ವಕ್ರ ಪ್ರಶ್ನೆ ಕೇಳಬೇಡಿ) ಲೇಖನ ಯಾವ ಸಮಯದಲ್ಲೇ ಬರೆದಿರಲಿ, ಯಾವ ವಿಚಾರವಾಗಿಯೇ ಬರೆದಿರಲಿ, ಅದು ಎಲ್ಲಾ ಸಮಯದಲ್ಲೂ ಅರ್ಹ ಓದುಗರಿಗೆ ಸ್ವೀಕಾರಾರ್ಹವೇ. ತಮ್ಮ ಪ್ರತಿಕ್ರಿಯೆ ಬರಹಗಾರನಲ್ಲಿ ತಮ್ಮ ಬಗ್ಗೆ ಅಸಹನೆಯನ್ನು ಉ೦ಟುಮಾಡಬಾರದು! ವಸ್ತು ಯಾವುದಾದರೇನು?ಯಾವಾಗಾದರೇನು? ಅದು ಚರ್ಚೆಗೆ ತಮಗೆ ಅರ್ಹವೇ ಎ೦ದು ಯೋಚಿಸಿ, ತಾವು ಚರ್ಚೆಯಲ್ಲಿ ಪಾಲ್ಗೊಳ್ಳುವುದಾದಲ್ಲಿ, ಪ್ರತಿಕ್ರಿಯಿಸಿ!ಚರ್ಚೆಯಲ್ಲಿ ಪಾಲೊಳ್ಳುವವರು ಪಾಲ್ಗೊಳ್ಳುತ್ತಾರೆ. ಬೇಸರಿಸಬೇಡಿ. ನಮಸ್ಕಾರಗಳು.

ಮತದಾನ ಮಾಡುತ್ತೇನೆ ನಾನೂ ಸಿಗಬೇಕು ನನಗೊಂದು ನೋಟಿನ ಕಂತೆ ಇಲ್ಲವಾದಲ್ಲಿ ತೊಟ್ಟೆ ಸರಾಯಿ ಕಿಂಚಿತ್ತು ಬೀಡಿ ಸಿಗಲಿ ಮತದಾರ ನಾನು, ಸ್ವಂತ ಯೋಚನೆ ನನ್ನದು ಅದಕ್ಕೆ ಕಾಯುತ್ತೇನೆ ನನ್ನ ಒಲಿಸುವವರ ಕನಸು ಕಾಣುವ ಕಣ್ಣಿನ ನನಸು ಮಾಡುವವರ ಮತ್ತೆ ಯೋಚಿಸುವುದಿಲ್ಲ ಸತ್ಯ ಮಿಥ್ಯ ಅವನಿಗೆ ನನ್ನ ಜೈ ಮತ್ತೆ ಬಟನ್ನು ಮತ್ತೊಮ್ಮೆ ಮಗದೊಮ್ಮೆ ನಾನೂ ಘೋಷಿಸುತ್ತೇನೆ ನಾನೂ ಮತದಾರ ಜಯಿಸಬೇಕು ನನ್ನ ಪಾರ್ಟಿ!!

ಈ ಸಾರಿ ಮತದಾನ ಮಾಡುವಾಗ ನನಗೇಕೊ ಧೈರ್ಯ ಇರಲಿಲ್ಲ. ನಾನು ಆಯ್ಕೆ ಮಾಡಿದ ನಾಯಕ ಸರಿಯೇ, ನಾನೇನೊ ತಪ್ಪು ಮಾಡುವ೦ತೆ ಭಾಸವಾಗುತಿತ್ತು. ಚುನಾವಣೆಗೆ ನಿ೦ತವರ ಪಟ್ಟಿಯಲ್ಲಿ ನನಗೆ ಯಾರೂ ಯ್ಯೋಗ್ಯರೆ೦ದು ಅನಿಸಲಿಲ್ಲ. ಇವರನ್ನು ನಮ್ಮ ದೇಶ, ರಾಷ್ಟ್ರಗಳನ್ನು ಆಳುವುದಕ್ಕೆ ಅಯ್ಕೆ ಮಾಡಿದವರ ಪಟ್ಟಿಯಲ್ಲಿ ನಾನು ಒಬ್ಬನಾಗುತ್ತೇನೆ, ಅವರು ಮಾಡುವ ಬ್ರಷ್ಟಾಚಾರಕ್ಕೆ ಒ೦ದು ರೀತಿ ನಾನೇ ಕಾರಣವಾಗುತ್ತೇನೇನೋ ಎ೦ದು ಅನಿಸುತಿತ್ತು.

[quote=malleshgowda]ಮತದಾನ ಮಾಡಬೇಕು, ಅದು ನಮ್ಮ ಹಕ್ಕು.[/quote]

ನಂಗಿನ್ನೂ ಆ ಹಕ್ಕೇ ಬಂದಿಲ್ಲ. ಮುಂದಿನ ವರ್ಷ ಬರುತ್ತೆ. ಈಗ್ಲೇ ವೋಟ್ ಹಾಕ್ತೀನಿ ಅಂತ ಹೋದ್ರೆ ಓಡಿಸ್ತಾರೆ ಅಷ್ಟೆ! :-)

ಮಲ್ಲೇಶ್ ಗೌಡ್ರೆ ನಮ್ಮಿಬ್ಬರ ಪರಿಚಯವಿದೆಯೇ?ನಿಮ್ಮನ್ನು ಮುಖ ಪರಿಚಯವಿದ್ದಂತೆ ಅನಿಸುತ್ತೆ. ಚನ್ನೇನಹಳ್ಳಿ / ನ್ಯಾಶನಲ್ ಕಾಲೇಜ್? ನಿಮ್ಮ ಮಿಂಚಂಚೆ ಕಾಣದೆ ಇಲ್ಲಿ ಬರೆಯಬೇಕಾಯಿತು (ನಾಡಿಗರೆ ಕ್ಷಮೆ ಇರಲಿ) --ಮನು

ಮತದಾನವನ್ನು ಎಲ್ಲರೂ ಮಾಡಲೇಬೇಕೆಂಬ ನಿಮ್ಮ ಲೇಖನ ಬಹಳ ಯೋಗ್ಯವಾದದ್ದು. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ನಾನೂ ಒಬ್ಬ ಸ್ವಯಂ ಸೇವಕನಾಗಿ ಕಾರ್ಯನಿರ್ವಹಿಸಿದ್ದೆ. ಮತದಾನದ ಸಮಯದಲ್ಲಿ ಎನೇನಾಗಬಹುದು ಎಂಬುದನ್ನು ಹಂಚಿಕೊಳ್ಳಲಷ್ಟೇ ಪ್ರತಿಕ್ರಿಯಿಸುತ್ತಿದ್ದೇನೆ. ನಗರ ಪ್ರದೇಶದ ಒಂದು ಸಮಸ್ಯೆಯಿದೆ. ಇಲ್ಲಿರುವ ಬಹಳಷ್ಟು ಮತದಾರರು ವಲಸಿಗರು ಮತ್ತು ಬಾಡಿಗೆದಾರರು. ಒಮ್ಮೆ ಹೆಸರನ್ನು ನೋಂದಾಯಿಸಿದ ನಂತರ, ಚುನಾವಣೆಯ ವೇಳೆಗೆ ಅವರು ಆ ಪ್ರದೇಶದಲ್ಲಿರುವುದೇ ಇಲ್ಲ. ಇದು ಮತಪಟ್ಟಿ ಹಿಡಿದು ಮನೆ ಮನೆಗೆ ತಿರುಗಿದ ನನ್ನ ಸ್ವಂತ ಅನುಭವ. ಮತಪಟ್ಟಿ ಯಾವಗಲೂ ಪರಿಷ್ಕೃತ ಆಗಿರುವುದಿಲ್ಲ. ಶೇಕಡಾವಾರು ಮತದಾನ ಇಂತಹ ಮತಪಟ್ಟಿಯನ್ನವಲಂಬಿಸಿರುತ್ತದೆ. ಹಾಗಾಗಿ ಶೇಕಡಾವಾರು ಮತದಾನದ ಲೆಕ್ಕ ಸರಿಯಾದ ಲೆಕ್ಕವಲ್ಲ. ಹಾಗಿದ್ದರೂ ಕಡಿಮೆ ಮತದಾನವೆಂಬುದು ನಿಜವೇ ಸರಿ. ಆದರೆ ಮಾಧ್ಯಮಗಳು ಬಿಂಬಿಸುವಷ್ಟು ಕಡಿಮೆ ಅಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಖಾಯಂ ನಿವಾಸಿಗಳಿರುವುದರಿಂದ ಸಮಸ್ಯೆ ಇಷ್ಟು ದೊಡ್ಡದಲ್ಲ. ನಾನೇ ಗಮನಿಸಿದಂತೆ ಮತದಾನದ ದಿನದ ಕೊನೆ ಕ್ಷಣಗಳಲ್ಲಿ ದುರ್ಬಳಕೆ ಪ್ರಮಾಣ ಅಧಿಕ. ಚುನಾವಣಾ ಸ್ಪರ್ಧಿಗಳ ಪರವಾಗಿ ಮತದಾನದ ಕೊಠಡಿಯಲ್ಲಿ ಪ್ರತಿನಿಧಿಗಳು ಕೂತಿರುತ್ತಾರಷ್ಟೇ. ಇವರು ದಿನದ ಕೊನೆ ಕ್ಷಣಗಳಲ್ಲಿ ಯಾರ್ಯಾರು ಮತದಾನ ಮಾಡಿಲ್ಲವೆಂದು ಹೊರಗಡೆ ಸುದ್ದಿ ರವಾನಿಸುತ್ತಾರೆ. ಮತ್ತು ಮತದಾನ ಮಾಡಿಲ್ಲದವರ ಮತವನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹಾಗಾಗಿ ನಿಮ್ಮ ಮತವನ್ನು ಬೇರೆಯವರು ಪ್ರಯೋಗಿಸುವ ಸಾಧ್ಯತೆ ಅಧಿಕ. ಹಾಗಾಗಿ ಆದಷ್ಟು ಬೇಗನೆ ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದೊಳಿತು. ಮತದಾನದ ಹಿಂದಿನ ದಿನ ಸ್ಪರ್ಧಿಗಳ ಕಡೆಯವರು ಹಣ ಹೆಂಡ ಹಂಚಿ ಗುರುತಿನ ಚೀಟಿಯನ್ನು ಇಸಿದುಕೊಂಡುಬಿಡುತ್ತಾರೆ. ಮತದಾನದ ದಿನ ಇನ್ನೊಬ್ಬರು ಹೋಗಿ ಆ ಗುರುತಿನ ಚೀಟಿ ಉಪಯೋಗಿಸಿ ಮತದಾನ ಮಾಡುವುದನ್ನು ಕಣ್ಣಾರೆ ಕಂಡಿದ್ದೇನೆ. ಇಂತಹ ಸಂದರ್ಭಗಳನ್ನು ಮತದಾನದ ಕೊಠಡಿಯಲ್ಲಿ ಕುಳಿತಿರುವ ಸ್ಪರ್ಧಿಗಳ ಪ್ರತಿನಿಧಿಗಳು ಸೂಕ್ಷ್ಮವಾಗಿ ಗಮನಿಸಿ ಹಿಡಿಯಬೇಕು.