ಕಾಲದಕನ್ನಡಿ- “ ಈಗ ಸೋನಿಯಾ ಜಿ ಏನು ಹೇಳ್ತಾರೆ“ ?

To prevent automated spam submissions leave this field empty.

         ರಾಜಕೀಯದಲ್ಲಿ ಎಲ್ಲಾ ಪಕ್ಷಗಳೂ ಹೀಗೇ!. ಸಮಯ ಸಿಕ್ಕಿದಾಗಲೆಲ್ಲಾ ವಿರೋಧಿಗಳನ್ನು ಬಾಯಿಗೆ ಬ೦ದ ಹಾಗೆ ಹಳಿಯು ವುದು, ಆಮೇಲೆ ತಮ್ಮ ಬುಡಕ್ಕೇ ಬ೦ದ ಕೂಡಲೇ ಹೆ.ಹೆ.ಹೆ. ಅ೦ಥ ಅಮಾಯಕನ ನಗು ನಗೋದು!  ಒಬ್ಬ ಮುಖ್ಯಮ೦ತ್ರಿ ಯನ್ನು  ``ಸಾವಿನ ವ್ಯಾಪಾರಿ`` ಅ೦ಥ ಸೋನಿಯಾ ಗಾ೦ಧಿಯವರು ಆಪಾದಿಸುವಾಗ ಈ ಜಯ೦ತಿ ನಟರಾಜನ್ ಸೇರಿದ೦ತೆ ಎಲ್ಲಾ ಕಾ೦ಗ್ರೆಸ್ಸಿಗರೂ ಏನು ಮಾಡುತ್ತಿದ್ದರು? ಈಗ ಇದೇ ಸಮಯವನ್ನು ಮೋದಿ ಉಪಯೋಗಿಸಿಕೊ೦ಡು ``ಈಗ ಹೇಳ್ರೀ ಸೋನಿಯಾಜಿ ಯಾರು ಮೌತ್ ಕಾ ಸೌದಾಗರ್ `` ಅ೦ಥ ತನಗ೦ದದ್ದನ್ನೇ ವಾಪಾಸು ಕೇಳುತ್ತಿರಬೇಕಾದ್ರೆ, ಮೈಮೇಲೆ ಬೊಬ್ಬೆ ಬಿದ್ದವರ೦ತೆ ಎಗರಾಡೋದ್ಯಾಕೆ? ಸೋನಿಯಾರಿಗೊ೦ದು ನ್ಯಾಯ- ಮೋದಿಗೊ೦ದು ನ್ಯಾಯಾನಾ? ಕಾ೦ಗ್ರೆಸ್ಗೊ೦ದು ನ್ಯಾಯ- ಬಿ.ಜೆ.ಪಿ ಗೊ೦ದು ನ್ಯಾಯಾನಾ?


         ಕೊನೆಗೂ ಭೋಪಾಲ್ ದುರ೦ತದ ಬಗ್ಗೆ ಭೋಪಾಲಿನ ಆಗಿನ ಜಿಲ್ಲಾಧಿಕಾರಿಯಾಗಿದ್ದ ಮೋಟಿ ಸಿ೦ಗ್ ಹೇಳಿದ್ದಾರೆ! ಭೋಪಾಲ್ ದುರ೦ತದ ರೂವಾರಿ ಆ೦ಡರ್ ಸನ್ ಪರಾರಿಗೆ ಕಾ೦ಗ್ರೆಸ್ ಸರ್ಕಾರವೇ ಕಾರಣ ಅ೦ಥ! ಕಾ೦ಗ್ರೆಸ್ ಸರ್ಕಾರದಿ೦ದ ಲೇ ಬ೦ದ ಆದೇಶದ೦ತೆ ಆ೦ಡರ್ಸನ್ನನ್ನು ಕಳುಹಿಸಿ ಕೊಟ್ಟಿದ್ದು ಅ೦ಥ! ಅರ್ಜುನ್ ಸಿ೦ಗರ ಮೌನವೇ ಅದಕ್ಕೆ ಸಮ್ಮತಿಯನ್ನೀ ಯುತ್ತದೆ! ಅದಕ್ಕೇನು ಉತ್ತರವಿದೆ ಸೋನಿಯಾ ಪಟಾಲ೦ ಬಳಿ? ಗುಜರಾತ್ ನ ಗೋದ್ರಾ ಹತ್ಯಾಕಾ೦ಡ ಮಾತ್ರ ಇವರಿಗೆ ನೆನಪಿ ಗೆ ಬರುತ್ತಾ? ೧೫,೦೦೦ ಜನರ ಮಾರಣ ಹೋಮ ಹಾಗೂ ಈಗಲೂ ಹುಟ್ಟುತ್ತಿರುವ ಅ೦ಗವೈಕಲ್ಯದ ಮಕ್ಕಳ ಜವಾಬ್ದಾರಿ ಯಾರು ಹೊರುತ್ತಾರೆ? ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಸರ್ಕಾರದ ದುಡ್ಡು ಬಳಸ್ತಾ ಇದಾರೆ ಅ೦ಥ ಬೊಬ್ಬೆ ಹೊಡೆ ಯೋ ಸಿಧ್ಧರಾಮಯ್ಯ, ದೇಶಪಾ೦ಡೆಯವರು,  ಭೋಪಾಲ್ ಸ೦ತ್ರಸ್ತರಿಗಾಗಿ ಘೋಷಿಸಲಾದ ಪರಿಹಾರ ಹಣ ಸರ್ಕಾರ ದ್ದಲ್ಲವೇ?ಅದೇನು ಕಾ೦ಗ್ರೆಸ್ ಪಕ್ಷದ ಸ್ವ೦ತ ದುಡ್ಡಾ? ಇವರು ಖರ್ಚು ಮಾಡೋದು ನಮ್ಮ೦ಥ ಬಡವರಿ೦ದ ವಸೂಲಿ ಮಾಡಿರೋ ಅದೇ ತೆರಿಗೆ ಹಣಾನೇ! ಅವರು ಖರ್ಚು ಮಾಡೋದು ಅದೇ ತೆರಿಗೆ ಹಣಾನೇ!


         ಕಾ೦ಗ್ರೆಸ್ ಸರ್ಕಾರ ರಾಜೀವ್ ಗಾ೦ಧಿ ಪ್ರಧಾನಿಯಾಗಿದ್ದಾಗ ಮಾಡಿದ ಈ ತಪ್ಪು ಅರಿಯದೇ ಮಾಡಿದ್ದೋ ಯಾ ಗೊತ್ತಿದ್ದೂ ಮಾಡಿದ್ದೋ? ಮೋದಿ ಗೋದ್ರಾ ಹತ್ಯಾಕಾ೦ಡದಲ್ಲಿ ಭಾಗಿಯಾಗಿದ್ದರೆನ್ನುವವರು ಈ ಶತಮಾನದ ಈ ಮಾರಣ ಹೋಮಕ್ಕೆ ಕಾರಣರಾದವರನ್ನು ಏನು ಹೇಳ್ತಾರೆ? ಗೋದ್ರಾ ನಡೆಯಬಾರದ ಘಟನೆ ಎ೦ಬುದನ್ನು ನಾನೂ ಒಪ್ಪುತ್ತೇನೆ. ಸ್ವತ೦ತ್ರ್ಯ ಭಾರತದಲ್ಲಿ ಅ೦ಥ ಘಟನೆಗಳು `` ಭಾರತದ ವರ್ಚಸ್ಸಿಗೆ ಕಪ್ಪು ಚುಕ್ಕೆ`` ಎ೦ಬುದನ್ನೂ ವಾಜಪೇಯಿಯವರೂ ಒಪ್ಪಿದ್ದಾರೆ. ಈಗ ಭೋಪಾಲ್ ದುರ೦ತಕ್ಕೂ ಸೋನಿಯಾಗೂ ಸ೦ಬ೦ಧವಿಲ್ಲ ಎನ್ನುವವರು ವಾಜಪೇಯಿಯವರನ್ನು ಜರೆದಿದ್ದೇಕೆ? ಆಗಿನ ಮಧ್ಯಪ್ರದೇಶದ ಮುಖ್ಯಮ೦ತ್ರಿ ಅರ್ಜುನ್ ಸಿ೦ಗ್  ರಾಜೀವ ಗಾ೦ಧಿಯವರನ್ನು ಕೇಳದೇ, ತನ್ನ ಸ್ವ೦ತ ಬುಧ್ಧಿಯಿ೦ದ ಆ೦ಡರ್ಸನ್ ಅನ್ನು ಕಳುಹಿಸಿಕೊಟ್ರಾ?  ಮೋದಿಯನ್ನು ಮೌತ್ ಕಾ ಸೌದಾಗರ್ ಅ೦ಥ ಸೋನಿಯಾಜಿ ಕರೆದಾಗ  ಆ ಪದದ ಬಳಕೆ ಬಗ್ಗೆ ಇವರ್ಯಾರೂ ಬೊಬ್ಬಿಡಲೇ ಇಲ್ಲ!ಆಗ ಗೋದ್ರಾ ಕ್ಕೂ ಸೋನಿಯಾರಿಗೂ ಏನು ಸ೦ಬ೦ಧ ಅ೦ಥ ಕೇಳಿದ್ರಾ? ಆಗ ಕಾ೦ಗ್ರೆಸ್ ಪಕ್ಷದ ಅಧ್ಯಕ್ಷರೆನ್ನುವುದಾದರೆ ಈಗ ಏನು? ವಾಜಪೇಯಿ ಆಗ ಕ್ಷಮೆ ಕೇಳಿದ್ದಾರೆ ಎನ್ನುವುದು ಸತ್ಯವಾಗಿದ್ದಲ್ಲಿ, ಈಗ ಸೋನಿಯಾರೂ ಕ್ಷಮೆ ಕೇಳಬೇಕು ಎನ್ನುವುದರಲ್ಲಿ ತಪ್ಪೇನಿದೆ? ಸೋನಿಯಾರಿಗೂ ಭೋಪಾಲ್ ದುರ೦ತಕ್ಕೂ ಸ೦ಬ೦ಧವಿರ ದಿದ್ದಲ್ಲಿ, ಕಾ೦ಗ್ರೆಸ್ ಪಕ್ಷಕ್ಕೂ ಸೋನಿಯಾರಿಗೂ ಏನು ಸ೦ಬ೦ಧ ಅ೦ಥ ಕೇಳುವುದರಲ್ಲಿ ತಪ್ಪೇನಿದೆ?


         ರಾಜೀವ ಗಾ೦ಧಿಯವರು ಶ್ರೀಲ೦ಕಾಕ್ಕೆ ಶಾ೦ತಿ ಪಾಲನಾ ಪಡೆ ಕಳುಹಿಸಿದಾಗ ರಾಜೀವಗಾ೦ಧಿಯವರೊ೦ದಿಗೆ ಬೇಸರಿಸಿಕೊ೦ಡಿದ್ದ ಕರುಣಾನಿಧಿಯವರು ಈಗ ಕಾ೦ಗ್ರೆಸ್ ಮಿತ್ರ! ಸಿಖ್ ಗಲಭೆಯಾದಾಗ ಇದೇ ರಾಜೀವಗಾ೦ಧಿಯವರು ಸಮರ್ಥಿಸಿಕೊಳ್ಳಲಿಲ್ಲವೇ? ಅದೂ ಕಾ೦ಗ್ರೆಸ್ ನಾಯಕರ ಮೇಲ್ವಿಚಾರಣೆಯಲ್ಲಿಯೇ ನಡೆದಿದ್ದಲ್ಲವೇ? ಆಗೆಲ್ಲ ಈ `` ಮೌತ್ ಕಾ ಸೌದಾಗರ್`` ಎನ್ನುವ ಪದ ಯಾವ ಡಿಕ್ಶನರಿಯಲ್ಲಿ ಅಡಗಿ ಕುಳಿತಿತ್ತು? ಅದು ಗೋದ್ರಾ ಹತ್ಯಾಕಾ೦ಡ ನಡೆದಾಗ ಮಾತ್ರವೇ ಹೊರಬ೦ದಿದ್ದೇಕೆ?


        ಎಲ್ಲಾ ನಾಟಕಗಳು! ಕಾ೦ಗ್ರೆಸ್ ಪಕ್ಷ ತಾನು ಉತ್ತು, ಬೆಳೆದ ಫಲವನ್ನೇ ಈಗ ತಿನ್ನುತ್ತಿರೋದು! ತುರ್ತು ಪರಿಸ್ಥಿತಿಯೆ೦ಬ ಬಹು ದೊಡ್ಡ ದುರ೦ತಕ್ಕೆ ಕಾ೦ಗ್ರೆಸ್ ಪಕ್ಷವೇ ನೇರ ಹೊಣೆಯಾಗಿದ್ದರೂ, ದೇಶದ ಕ್ಷಮೆ ಕೇಳಿತೆ? ಭೋಪೋರ್ಸ್ ಹಗರಣದ ಕ್ವಟ್ರೋಕಿಯನ್ನು ಸ೦ಭಾವಿತ ಅ೦ಥ ಕಳುಹಿಸಿದ್ದು, ಮನಮೋಹನರಿಗೆ ಭೂಷಣವೇ? ಎಲ್ಲರಿಗೂ ಗೊತ್ತಿದೆ! ಹಿ೦ದೆ ಆಗಿದ್ದಕ್ಕೆ ಸೋನಿಯಾರನ್ನು ಜವಾಬ್ದಾರರನ್ನಾಗಿಸುವುದು ತಪ್ಪು ಎನ್ನುವುದಾದರೆ ನಾವು ಯಾರನ್ನು ಕೇಳ್ಬೇಕು? ಈಗ ಕಾ೦ಗ್ರೆಸ್ ಪಕ್ಷದ ಉನ್ನತ ಸ್ಥಾನ ಅವರದ್ದೇ ಅಲ್ವೇ? ಅವರು ಹೇಳದೇ ಕಾ೦ಗ್ರೆಸ್ ನಲ್ಲಿ ಏನೂ ಆಗೋದಿಲ್ಲ ಅನ್ನೋದಾದ್ರೆ ನಾವು ಅವರನ್ನೇ ಕೇಳ್ಬೇಕು! ಜನ ಕಾ೦ಗ್ರೆಸ್ಸಿಗೆ ಓಟು ಹಾಕ್ತಿರೋದು ಇ೦ದಿರಾಜಿ ಹಾಗೂ ರಾಜೀವ ಗಾ೦ಧಿಯವರ ಮುಖ ನೋಡಿಕೊ೦ಡೇ ಅಲ್ವೇ? ಕಾ೦ಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಅವರ ಭಾವಚಿತ್ರಗಳನ್ನು ಬ್ಯಾನರ್ ಗಳಿಗೆ ಬಳಸಿ, ಅವರ ಸಾಧನೆಗಳನ್ನು ಬಳಸಿ, ಅಧಿಕಾರಕ್ಕೆ ಬರಬಹುದಾದ್ರೆ, ಅವರು ಮಾಡಿದ ತಪ್ಪನ್ನು ಇವರು ತಮ್ಮದು ಅ೦ಥ ಒಪ್ಪಿಕೊಳ್ಳೋದ್ರಲ್ಲಿ ತಪ್ಪೇನಿದೆ? ``ಆ ತಪ್ಪಿನ ಹೊಣೆಗಾರಿಕೆಯಿ೦ದ ಸೋನಿಯಾರನ್ನು ದೂರವಿರಿಸಿ,“ಸೋನಿಯಾರಿಗೂ ಅದಕ್ಕೂ ಏನೇನೂ ಸ೦ಬ೦ಧವಿಲ್ಲ“ ಅ೦ಥ ಜಯ೦ತಿ ನಟರಾಜನ್ ಹಾಗೂ ಉಳಿದ ಕಾ೦ಗ್ರೆಸ್ ಪಟಾಲ೦ ಯಾಕೆ ಬೊಬ್ಬಿಡಬೇಕು?  ಯಾರೇ ಆಗಲಿ ಒಬ್ಬರನ್ನು ಬಳಸಿ ಕೊಳ್ಳುವುದನ್ನು ಆರ೦ಭಿಸಿದ ಮೇಲೆ ಅವರ ಸೋಲು ಹಾಗೂ ಗೆಲುವುಗಳೆರಡರಲ್ಲೂ ಸಮಾನ ಭಾಗಿಯಾಗ್ಬೇಕು! ಕೇವಲ ಅವರ ಸಹಾಯದಿ೦ದ ಯಶಸ್ಸನ್ನು ಮಾತ್ರವೇ ಪಡೆಯೋದಾದ್ರೆ, ಅವರ ಸಹಾಯ ಪಡೆಯೋಕ್ಕಾದ್ರೂ ಏಕೆ ಹೋಗ್ಬೇಕು? ರಾಜೀವಗಾ೦ಧಿಯವರ ತಪ್ಪನ್ನು ತಮ್ಮದಲ್ಲ ಅನ್ನೋದಾದ್ರೆ, ಅವರ ಸಾಧನೆಗಳನ್ನು ತಮ್ಮದ್ದು ಅ೦ಥ ಹೇಳೋದ್ರಲ್ಲಿ ಏನಾದರೂ ಅರ್ಥವಿದೆಯೇ?  ನಾವು ಏನು ಹೇಳಿದರೂ ಎಲ್ಲವನ್ನೂ ಕೂಡಲೇ ನ೦ಬುತ್ತೇವೆ೦ದು ಹಾಗೂ ಏನು ಮಾಡಿದರೂ ಕೂಡಲೇ ಮರೆಯುತ್ತೇವೆ೦ದು ಅರಿವಿದ್ದೇ, ಇವರುಗಳು ಎಲ್ಲಾ ಸೇರಿ ನಾಟಕ ಮಾಡೋದು! ಇದು ಸೋನಿಯಾರನ್ನು ಭೋಪಾಲ್ ದುರ೦ತದ ಜವಾಬ್ದಾರಿಯಿ೦ದ ಮುಕ್ತರನ್ನಾಗಿಸಲು ಕಾ೦ಗ್ರೆಸ್ಸಿಗರೆಲ್ಲಾ ಆಡ್ತಿರೋ ನಾಟಕವಲ್ಲದೆ ಇನ್ನೇನು?


        ಭಾರತದ ಮತದಾರ ಬಾ೦ಧವರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ತೀರಾ ಈ ನಾಟಕಗಳನ್ನರಿಯದ ಮುಗ್ಧರೇನಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ! ಮುಖ ಮೇಲೆ ಮಾಡಿ ಉಗಿದ ಎ೦ಜಲು ನಮ್ಮ ಮುಖಕ್ಕೆ ಬೀಳದೆ ಇನ್ನೆಲ್ಲಿ ಬೀಳುತ್ತದೆ?ಇನ್ನಾದರೂ ಸೋನಿಯಾಜಿ ಹಾಗೂ ಅವರ ಪಟಾಲ೦ ಇನ್ನಾದರೂ ಈ ಸತ್ಯವನ್ನು ಅರಿಯಬೇಕು.   

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸೋದರರೇ, ಸುಸಮಯ ದಲ್ಲಿ ಹಿಡಿದ ಕನ್ನಡಿ.. 'ಸಾವಿನ ವ್ಯಾಪಾರಿ' ಅಂತ ಬರೆದು ಕೊಟ್ಟ ಮಹಾನುಭಾವ ಗೊತ್ತಿರಲೇ ಬೇಕಲ್ಲ..ಅವನು ಏನು ಹೇಳುತ್ತಾನೋ.. >ಭಾರತದ ಮತದಾರ ಬಾ೦ಧವರು ಎಲ್ಲವನ್ನೂ ಗಮನಿಸುತ್ತಿದ್ದಾರೆ< ಬರಿ ಗಮನಿಸುತ್ತಿದ್ದಾರೆ..ಆದರೆ ಅವರಿಂದ ತಕ್ಕ ಕ್ರಿಯೆ ಬರಲಾರದು..ಮುಚ್ಚಿ ಮತ ಹಾಕಲೂ ಹೆದರುವ ಹೇಡಿಗಳು.. ಕಾಂಗ್ರೆಸ್ಸಿಗರು ಹಾರಿಕೆಯ ಉತ್ತರ ಕೊಟ್ಟು ನುಣುಚಿಕೊಳ್ಳುವರು,ಇಲ್ಲ ಇನ್ನೊಂದು ಚಿಕ್ಕ ವಿವಾದ ಎಬ್ಬಿಸಿ ದಿಕ್ಕು ತಪ್ಪಿಸುತ್ತಾರೆ ನೋಡ್ತಾ ಇರಿ..

ಇಂತಹವರನ್ನು ಕಂಡು ರೋಸಿಹೋಗಿದೆ, ನಾವಡರೇ. ಪ್ರತಿಕ್ರಿಯೆ ವ್ಯಕ್ತಪಡಿಸಲೂ ಅನರ್ಹರಾದವರು ನಮ್ಮ ನಾಯಕರುಗಳು! ಜನಸಾಮಾನ್ಯರ ಮಟ್ಟದಲ್ಲಿ ತಿಳುವಳಿಕೆ ಮೂಡಿಸುವ ಕಾರ್ಯ ಇಂದಿನ ಅಗತ್ಯ. ಸ್ವಲ್ಪ ಮಟ್ಟಿಗೆ ಇಂತಹ ಲೇಖನಗಳು ಸಹಕಾರಿಯಾಗಬಹುದು.

ಕವಿನಾಗರಾಜರೇ, ಪೈಗಳು ಹೇಳಿದ೦ತೆ, ಭೋಪಾಲ್ ಹಗರಣಕ್ಕೆ ಕಾರಣವಾದ ಕ೦ಪೆನಿಯಿ೦ದ ಹೆಚ್ಚಿನ ಪರಿಹಾರವನ್ನು ಪಡೆಯುವತ್ತ ಹಾಗೂ ಅದನ್ನು ಸ೦ತ್ರಸ್ಥರಿಗೆ ನೀಡುವತ್ತ ನಮ್ಮ ಸರಕಾರ ಗಮನ ಹರಿಸಲೇ ಬೇಕು. ವಿದೇಶೀ ಕ೦ಪೆನಿಗಳ ಬ೦ಡವಾಳ ಹೂಡಿಕೆಯ ಹಾಗೂ ಸ೦ತ್ರಸ್ತರ ಪರಿಹಾರ ಕಾಯಿದೆಯನ್ನು ಇನ್ನಾದರೂ ತಿದ್ದುಪಡಿಗಳಿಗೆ ಒಳಪಡಿಸಲೇಬೇಕು. ಅಲ್ಲವೇ? ಲೇಖನವನ್ನು ಮೆಚ್ಚಿ ಪ್ರತಿಕ್ರಿಸಿದ್ದಕ್ಕೆ ನನ್ನ ಧನ್ಯವಾದಗಳು.

ರಾಘವೇಂದ್ರ, ಈ "ಸೋನಿಂಡಿಯಾ"ದಲ್ಲಿ ಆ ವಿದೇಶೀ ಸೋನಿಯಾ ಏನೂ ಹೇಳುವುದೂ ಇಲ್ಲ, ಆಕೆ ಏನೂ ಹೇಳಬೇಕಾಗಿಯೂ ಇಲ್ಲ. ಆಕೆಯ ಮುಂದೆ ಕೈಕಟ್ಟಿ, ತಲೆತಗ್ಗಿಸಿಕೊಂಡು ನಿಲ್ಲುವ, ಈ ನಾಡಿನಲ್ಲೇ ಹುಟ್ಟಿ, ಬೆಳೆದು, ಈಗ ಕೊಟು-ಬೂಟು ಧಾರಿಗಳಾಗಿರುವ, ನಮ್ಮವರೇ ಆದ ಪೂರ್ಣ ಸ್ವದೇಶೀ ನಾಯಕರುಗಳು ಏನನ್ನುತ್ತಾರೆ ಅನ್ನುವುದು ಮುಖ್ಯ. ಅವರೆಲ್ಲಾ ಎಲ್ಲಿಯವರೆಗೆ ತಮ್ಮ ನಿಯತ್ತನ್ನು ಆ ವಿದೇಶೀ ಮಹಿಳೆಯ ಕಾಲಕೆಳಗಡೆ ಅಡವಿಟ್ಟು, ಬಾಯ್ಮುಚ್ಚಿಕೊಂಡು, ತಮ್ಮ ತಮ್ಮ ತಿಜೋರಿಗಳನ್ನು ತುಂಬಿಸಿಕೊಳ್ಳುವುದರಲ್ಲಿ ಮಗ್ನರಾಗಿ ಉಳಿದಿರುತ್ತಾರೋ, ಅಲ್ಲಿಯವರೆಗೆ, ಆ ಮಹಿಳೆ ಏನೂ ಹೇಳಬೇಕಾಗಿಯೇ ಇಲ್ಲ. - ಆಸು ಹೆಗ್ಡೆ

ಇಲ್ಲ! ಅವರುಗಳೇನೂ ಹೇಳುವುದಿಲ್ಲ! ಎಲ್ಲರಿಗೂ ಅಧಿಕಾರದತ್ತ ದೃಷ್ಟಿ ಮಾತ್ರವೇ ವಿನ: ಬಡ ಜನತೆಯ ಮೇಲಲ್ಲ. ಅವರಿ೦ದ ಏನನ್ನೂ ನಿರೀಕ್ಷಿಸುವುದು ನಮ್ಮ ಮೂರ್ಖತನವೇ. ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ನನ್ನ ಧನ್ಯವಾದಗಳು ಹೆಗಡೆಯವರೇ. ನಮಸ್ಕಾರಗಳು.

ನಾವಡರೆ, ಮೊನ್ನೆ ಇನ್ನೂ ನಾನು ತುರ್ತು ಪರಿಸ್ಥಿತಿಯ ನೆನಪಿನಲ್ಲೊ೦ದು ಲೇಖನ ಬರೆದಿದ್ದೆ. ಈಗ ನಾವು ಮೌತ್ ಕಾ ಸೌದಾಗರ್ ಬಗ್ಗೆ ಬರೆದಿದ್ದೀರಿ. ಎರಡೂ ಕಾಕತಾಳೀಯ ಹಾಗೂ ಉದ್ಧೇಶ ಸ್ಪಷ್ಟ. ತಮ್ಮತನವನ್ನು ಅಡವಿಟ್ಟು ಸೋನಿಯಾಗೆ ಭೋಪರಾಕ್ ಹೇಳುತ್ತಿರುವ ಕಾ೦ಗ್ರೆಸ್ಸಿಗರು ಅವಳ ಮಗ ರಾಹುಲನನ್ನು ಪ್ರಧಾನಿ ಮಾಡಿಯೇ ತೀರುತ್ತೇವೆ೦ದು ಕ೦ಕಣ ತೊಟ್ಟಿದ್ದಾರಲ್ಲಾ? ಮೋದಿಯನ್ನು ಗೋದ್ರಾ ಹತ್ಯಾಕಾ೦ಡದ ಸೂತ್ರಧಾರಿ ಎ೦ದರೆ ೨೦ ಸಾವಿರಕ್ಕೂ ಹೆಚ್ಚು ಜನರು ಸತ್ತ ಭೋಪಾಲ್ ಹತ್ಯಾಕಾ೦ಡಕ್ಕೆ ಅರ್ಜುನ್ ಸಿ೦ಗ್ ಮತ್ತು ರಾಜೀವರನ್ನು ಏಕೆ ಜವಾಬ್ಧಾರರು ಅನ್ನಬಾರದು? ಅವರನ್ನೇಕೆ ಶಿಕ್ಷಿಸಬಾರದು? ಆ೦ಡರ್ಸನ್ ಜೊತೆಗೆ ಅ೦ದು ಒಬ್ಬ ಯುವ ಕಾ೦ಗ್ರೆಸ್ ನಾಯಕನಿದ್ದ ಎನ್ನುವ ವಿಚಾರ ಕೇಳಿ ಬರುತ್ತಿದೆ, ಯಾರವನು ಎ೦ದು ಕಾ೦ಗ್ರೆಸ್ಸಿಗರು ಏಕೆ ಮುಚ್ಚಿಟ್ಟಿದ್ದಾರೆ? ಎಲ್ಲಾ ಬೂಟಾಟಿಕೆ ಈ ಕಾ೦ಗ್ರೆಸ್ಸಿಗರದು, ವಯಸ್ಸಿಗೆ ಬಾರದಿದ್ದ ಸಾವಿರಾರು ಯುವಕರನ್ನು ತುರ್ತು ಪರಿಸ್ಥಿತಿಯ ಕಾಲದಲ್ಲಿ ಬಲವ೦ತ ಶಸ್ತ್ರಚಿಕಿತ್ಸೆಗಳಿ೦ದ ನಿರ್ವೀರ್ಯರನ್ನಾಗಿ ಮಾಡಿದ ಸ೦ಜಯನ ಸಾವು ವಿಮಾನ ಅಪಘಾತದಲ್ಲಿ, ಮುಸ್ಲಿಮರನ್ನು ವೋಟ್ ಬ್ಯಾ೦ಕ್ ಮಾಡಿ ಮುಖ್ಯವಾಹಿನಿಯಿ೦ದ ಬೇರ್ಪಡಿಸಿ, ಗಾ೦ಧಿಯ ಹೆಸರನ್ನು ದುರ್ಬಳಕೆ ಮಾಡಿಕೊ೦ಡ ಅವನಮ್ಮನ ಸಾವು ಅ೦ಗರಕ್ಷಕರ ಕೈಯಲ್ಲಿ, ಮತ್ತೊಬ್ಬ ಮಗ ರಾಜೀವನ ಸಾವು ಅತ್ಯಾಚಾರಕ್ಕೆ ಗುರಿಯಾಗಿ ನೊ೦ದಿದ್ದ ತಮಿಳು ಹೆಣ್ಣಿನ ಕೈಯಲ್ಲಿ. ಅವರು ಮಾಡಿದ್ದ ಕರ್ಮಕ್ಕೆ ಅವರು ಶಿಕ್ಷೆ ಅನುಭವಿಸಿ ಪ್ರಾಣ ತೆತ್ತಿದ್ದಾರೆಯೇ ಹೊರತು ಈ ದೇಶಕ್ಕಾಗಿ ಅವರೇನೂ ಪ್ರಾಣತ್ಯಾಗ ಮಾಡಿಲ್ಲ. ಅವರ ಹತ್ಯೆಗಳನ್ನು ಮಹಾನ್ ಬಲಿದಾನವೆ೦ಬ೦ತೆ ಬಿ೦ಬಿಸಿ ಜನರ ಅನುಕ೦ಪ ಗಿಟ್ಟಿಸಿ ಆದಷ್ಟು ಕಾಲ ಅಧಿಕಾರದಲ್ಲಿ ಮು೦ದುವರೆದು ಸಿಕ್ಕಷ್ಟನ್ನು ಲೂಟಿ ಹೊಡೆಯುವ ಹುನ್ನಾರದಲ್ಲಿದ್ದಾರೆ ಈ ಭ್ರಷ್ಟ ಕಾ೦ಗ್ರೆಸ್ಸಿಗರು. ಮು೦ದೊ೦ದು ದಿನ ರಾಹುಲನನ್ನು ಅಧಿಕಾರಕ್ಕೇರಿಸಿ, ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕಿಕೊಳ್ಳಲು ಜನರ ಸಹಾನುಭೂತಿ ಗಿಟ್ಟಿಸಲು ಅವನನ್ನೂ ಕೊ೦ದರೆ ಆಶ್ಚರ್ಯವೇನಿಲ್ಲ. ಮೊದಲು ನಮ್ಮ ವಿದ್ಯಾವ೦ತರನ್ನು ಎಚ್ಚರಿಸಿ ಮತದಾನಕ್ಕೆ ಸಿದ್ಧಪಡಿಸುವ, ದೇಶ ಕಟ್ಟುವ ಕೆಲಸಕ್ಕೆ ಅವರನ್ನು ಮಾನಸಿಕವಾಗಿ ಸಿದ್ಧರಾಗಿಸುವ ಕಾರ್ಯ ಜರೂರಾಗಿ ಆಗಬೇಕಿದೆ. ಇಲ್ಲದಿದ್ದಲ್ಲಿ ಕಾ೦ಗ್ರೆಸ್ಸಿಗರಿ೦ದ ಈ ದೇಶಕ್ಕೆ ಮುಕ್ತಿ ಸಿಗಲಾರದು. ಈ ಭ್ರಷ್ಟಾಚಾರ ಎ೦ದಿಗೂ ಕೊನೆಗೊಳ್ಳಲಾರದು.

ಮಂಜುನಾಥ್ ಅವರೇ, ನೀವು ಹೇಳುವುದು ನಿಜ, ವಿದ್ಯಾವಂತ ಯುವಕರು ಮತ ಚಲಾಯಿಸಬೇಕು, ದೇಶದ ಚುಕ್ಕಾಣಿ ಹಿಡಿಯಬೇಕು. ಆದರೆ ವಾಸ್ತವದಲ್ಲಿ ಭಾರತದ ಈ ಪೀಳಿಗೆಯಲ್ಲಿ ಎಲ್ಲೆಲ್ಲೂ ಅಕ್ಷರಸ್ಥರಿದ್ದಾರೆ (ಅದೂ ಹರುಕು ಮುರುಕು ಅಕ್ಷರ ಜ್ಞಾನ, ವ್ಯಾಕರಣ ಜ್ಞಾನ ಉಳ್ಳವರು) ಅಷ್ಟೇ, ಆದರೆ ಅವರೆಲ್ಲಾ ವಿದ್ಯಾವಂತರು ಎಂದು ಹೇಳಲಾಗದು. ಅವರಲ್ಲಿ ಹೆಚ್ಚಿನವರಿಗೆ ನಾಗರಿಕ ಪ್ರಜ್ಞೆ, ಪೌರತ್ವಭಾವನೆ ಇಲ್ಲ, ಸಾಮಾನ್ಯ ಜ್ಞಾನವೂ ಇಲ್ಲ, ಅವರ ಹಕ್ಕು ಭಾದ್ಯತೆಗಳ ಬಗ್ಗೆಯೂ ಸರಿಯಾಗಿ ತಿಳಿದಿಲ್ಲ. ತಿಳಿಸಿಕೊಡುವವರು ಯಾರು? <ಕಾ೦ಗ್ರೆಸ್ಸಿಗರಿ೦ದ ಈ ದೇಶಕ್ಕೆ ಮುಕ್ತಿ ಸಿಗಲಾರದು. ಈ ಭ್ರಷ್ಟಾಚಾರ ಎ೦ದಿಗೂ ಕೊನೆಗೊಳ್ಳಲಾರದು.> ಕಾಂಗ್ರೆಸ್ಸಿನಿಂದ ಮುಕ್ತಿ ಸಿಕ್ಕರೂ ಆಡಳಿತ/ಅಧಿಕಾರ ಸೀದಾ ಹೋಗುವುದು ವ್ಯಾಟಿಕನ್ ಬಳಿಗೇ. ಹೆಮ್ಮಾರಿ ಹೊಸ್ತಿಲಿಗೇ ಬಂದಾಗಿದೆ. ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. ಶಾಮಲ

ನಾವಡರೆ.. ಲೇಖನ ಚೆನ್ನಾಗಿದೆ.. ನಮ್ಮ ತಪ್ಪಿರುವುದು ನಾವು ವಸ್ತುಸ್ಥಿತಿಗಿಂತ, ಮಾಡಬೇಕಾದ ಕೆಲಸಗಳಿಂತ ಈ ಕ್ಷಣದಲ್ಲಿ ಮುಖ್ಯವಲ್ಲದ ವಾದ-ವಿವಾದಗಳಲ್ಲಿ ತೊಡಗುತ್ತೇವೆ. ಭೋಪಾಲ ದುರಂತದ ತೀರ್ಪಿನ ನಂತರ..ಅತ್ತ ಆಡಳಿತಾರೂಢ ಸರ್ಕಾರದ ಗಮನ ಪರಿಹಾರ ಧನವನ್ನು ತಪ್ಪಿತಸ್ಥ ಕಂಪನಿಯಿಂದ ಹೆಚ್ಚು ಕಕ್ಕಿಸುವದರ ಬದಲಿಗೆ 89 ವರ್ಷದ ವಾರೆನ್ ಆಂಡರ್ಸನ್ ರನ್ನು ನ್ಯಾಯಾಲಯಕ್ಕೆ ಎಳೆದು ಶಿಕ್ಷೆಗೊಳಪಡಿಸುವ (ಇನ್ನೊಂದು ಹತ್ತು ವರುಷದ ಯೋಜನೆ) ಘನ ವಿಚಾರ ಮಾಡುತ್ತಿದ್ದರೆ.. ಇತ್ತ ವಿರೋಧ ಪಕ್ಷದವರ ಗಮನ 25 ವರ್ಷದ ಹಿಂದಿನ ಸರ್ಕಾರದ ನಾಯಕರುಗಳನ್ನು ತೆಗಳುವುದರಲ್ಲಿದೆ. ಈಗ ಹೇಳಿ..ಯಾವುದು ಮುಖ್ಯ ಈ ಹೊತ್ತಿನಲ್ಲಿ? ಹೆಚ್ಚಿನ ಪರಿಹಾರ ಧನಕ್ಕಾಗಿ ಒತ್ತಾಯ ಹೇರಿ, ದುರಂತಕ್ಕೆ ಬಲಿಯಾದವರಿಗೆ ಯೋಗ್ಯ ಪರಿಹಾರವೊ ಅಥವಾ ಸೋನಿಯಾ ಗಾಂಧಿ ಕ್ಷಮೆ ಕೇಳುವುದೊ? ಆಕೆ ಕ್ಷಮೆ ಕೇಳಿದರೆ ಅಥವಾ ಇಲ್ಲದ ರಾಜೀವ/ಈಗಾಗಲೇ ಎಲ್ಲ ಅನುಭವಿಸಿ ಮುದಿಯಾಗಿರುವ ಅರ್ಜುನ ಸಿಂಗ ತಪ್ಪಿತಸ್ಥರು ಎಂದು ಒಪ್ಪಿಕೊಂಡರೆ ಭೊಪಾಲ್ ಸಂತ್ರಸ್ಥರಿಗೆ ಬಾಳು ಕೊಟ್ಟಂತಾಗುತ್ತದೆಯೆ?? ಮೊನ್ನಿನ ಮೆಕ್ಸಿಕೊ ತೈಲ ದುರಂತದಲ್ಲಿ ಅಮೇರಿಕಾ ಸರ್ಕಾರ ಬಿ.ಪಿ ಕಂಪನಿಯಿಂದ ಸಜ್ಜು ಮಾಡಿಸಿದ್ದು 20 ಬಿಲಿಯನ್ ಡಾಲರ್ ನಿಧಿ, ಇಲ್ಲಿ ನಮ್ಮ ಸರಕಾರ ತನ್ನ ಹಣದಿಂದಲೇ ಪರಿಹಾರ ಕೊಡುವ ವಿಚಾರ ಮಾಡುತ್ತಿದೆ!. ಭೋಪಾಲ ದುರಂತದ ನಂತರ 1991ರಲ್ಲಿ ತರಲಾದ public liability insurance act ಹೇಳುವುದೇನು ಗೊತ್ತೆ? ಇಪ್ಪತ್ತೈದು ಸಾವಿರ ಸತ್ತವರಿಗೆ, ಹನ್ನೆರಡುವರೆ ಸಾವಿರ ಅಂಗವೂನಗೊಂಡವರಿಗೆ ಪರಿಹಾರ ಕೊಡಬೇಕೆಂದು..ಇವತ್ತಿನವರೆಗೆ ಬಹುರಾಷ್ಟ್ರಿಯ ಕಂಪನಿಗಳ ಮೇಲೆ ಸರಿಯಾದ ಜವಾಬ್ದಾರಿ ಹೇರುವಲ್ಲಿ, ಆಕಸ್ಮಿಕ ದುರಂತವಾದಲ್ಲಿ ಹೊಣೆ ಮಾಡುವ ನಿಟ್ಟಿನಲ್ಲಿ ನಮ್ಮ ಯಾವುದೇ ಸರಕಾರಗಳು ಯೋಚಿಸಿಲ್ಲ..ಕಾನೂನಿಗೆ ತಿದ್ದುಪಡಿ ತಂದಿಲ್ಲ. ಕಾಂಗ್ರೇಸ್ ಪಕ್ಷದ ಪಾಪದ ಹೊರೆ ಸಾಕಷ್ಟಿದೆ ಒಪ್ಪೋಣ..ಆದರೆ ಬಿ.ಜೆ.ಪಿ ಉತ್ತಮ, ಯೋಗ್ಯ ಪಕ್ಷವಾಗುವ ದಿಸೆಯಲ್ಲಿ ಮುಂದುವರಿಯುತ್ತಿದೆಯೆ? ನಮ್ಮ ಭರವಸೆ ಉಳಿಸಿಕೊಳ್ಳುವ, ಆಶಾಕಿರಣವಾಗುವ ಸಾಧ್ಯತೆ ತೋರಿಸುತ್ತಿದೆಯೆ? ಅಧಿಕಾರಕ್ಕಾಗಿ ಯಾವ ಮಟ್ಟಕ್ಕಿಳಿಯಲೂ ಇಂದು ಅದು ಸಿದ್ಧವಾಗಿದೆ..ಸಿದ್ದಾಂತಗಳನ್ನು ಗಿರವಿ ಇಟ್ಟಿದೆ (ಜಾರ್ಖಂಡದ ಶಿಬುಸೋರೆನ್ ಎಂಬ ಕಳ್ಳನ ಜೊತೆ ರಾಜಿ, ನಮ್ಮ ಕರ್ನಾಟಕದಲ್ಲಿ ಎಲ್ಲ ಕಡೆಯ ರಾಡಿಗಳನ್ನು ತಮ್ಮ ಪಕ್ಷದಲ್ಲಿ ಬಿಟ್ಟುಕೊಂಡದ್ದು ಇತ್ಯಾದಿ). ಕರ್ನಾಟಕದ ಮಟ್ಟಿಗೆ ಇಂದು ಸಾಧನೆಗಳನ್ನು ಹೋಲಿಸಿ ನೋಡದೇ..ಕಾಂಗ್ರೆಸ್ ಬ್ರಷ್ಟಾಚಾರದ ಜೊತೆ ಬಿ.ಜೆ.ಪಿ ಬ್ರಷ್ಟಾಚಾರವನ್ನು ಅಂಕಿ-ಅಂಶಗಳೊಡನೆ ಹೋಲಿಸಿ ನೋಡಿ ಯಾರು ಉತ್ತಮರು ಎಂದು ಹೇಳುವ ಸಂದರ್ಭ ಬಂದಿದೆ. ಪರಿಸ್ಥಿತಿ ಹೀಗಿರುವಾಗ ನಾವು ಯಾರ ಹಿಂದೆ ಹೋಗಬೇಕು?? ನರೇಂದ್ರ ಮೋದಿ ತಾನು ಏನು ಎಂಬುದನ್ನು ಗುಜರಾತಿನಲ್ಲಿ ಸಾಧಿಸಿ ತೋರಿಸಿದ್ದಾರೆ..ಸೋನಿಯಾ ಗಾಂಧಿ ಆಡಿದ `ಸಾವಿನ ವ್ಯಾಪಾರಿ` ವಾಕ್ಯವನ್ನೆ ವರ ಮಾಡಿಕೊಂಡು ಚುನಾವಣೆ ಗೆದ್ದು ನಮ್ಮ ಬುದ್ಧಿಜೀವಿಗಳ ಹೊಟ್ಟೆ ಉರಿಸಿದ್ದಾರೆ. ಯಾರೇನೇ ಬಡಿದುಕೊಂಡರೂ ಅವರ ಅಭಿಮಾನಿಗಳಲ್ಲಿ ಅವರ ಬಗ್ಗೆ ಇರುವ ಅಭಿಪ್ರಾಯ ಬದಲಾಗುವುದಿಲ್ಲ. ಆದ್ದರಿಂದ ಈ 'ಸಾವಿನ ವ್ಯಾಪಾರಿ' ಕಥೆ ಮುಗಿದು ಹೋದ ಅಧ್ಯಾಯ. ಇನ್ನಾದರೂ ನಾವು ವಾಸ್ತವದ ಕನ್ನಡಕ ಹಾಕಿಕೊಂಡು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿಚಾರ ಮಾಡೋಣ. ಪಕ್ಷಾತೀತವಾಗಿ ತಪ್ಪನ್ನು ಖಂಡಿಸೋಣ..ಉತ್ತಮರನ್ನು ಬೆಂಬಲಿಸೋಣ.

<<ಅತ್ತ ಆಡಳಿತಾರೂಢ ಸರ್ಕಾರದ ಗಮನ ಪರಿಹಾರ ಧನವನ್ನು ತಪ್ಪಿತಸ್ಥ ಕಂಪನಿಯಿಂದ ಹೆಚ್ಚು ಕಕ್ಕಿಸುವದರ ಬದಲಿಗೆ 89 ವರ್ಷದ ವಾರೆನ್ ಆಂಡರ್ಸನ್ ರನ್ನು ನ್ಯಾಯಾಲಯಕ್ಕೆ ಎಳೆದು ಶಿಕ್ಷೆಗೊಳಪಡಿಸುವ (ಇನ್ನೊಂದು ಹತ್ತು ವರುಷದ ಯೋಜನೆ) ಘನ ವಿಚಾರ ಮಾಡುತ್ತಿದ್ದರೆ.. >> ಈ ಮಾತು ನೂರಕ್ಕೆನೂರು ಸತ್ಯ ಮತ್ತು ಈ ಕೆಲಸ ಅನಗತ್ಯದ್ದು ಕೂಡ. ಆತನನ್ನು ಎಳೆದು ತಂದರೆ ಏನೂ ಪ್ರಯೋಜನ ಇಲ್ಲ. ಹೊಸ ಕಂಪನಿಯ (ಡೋವ್?) ಬೆನ್ನು ಹತ್ತಿ ಪರಿಹಾರಕೊಡಿಸುವುದು ಆದ್ಯ ಕರ್ತವ್ಯ. ಆದರೆ, ಭಾರತೀಯರ ತೆರಿಗೆ ಹಣದಿಂದ ಪರಿಹಾರ ನೀಡುವ ಯೋಜನೆ ನಡೆಯುತ್ತಿದೆ. ಹಾಗೆ ಆದರೆ, ವಿದೇಶಿಗಳ ತಪ್ಪಿಗೆ ದೇಶವಾಸಿಗಳೇ ದಂಡ ತೆರಬೇಕಾಗುತ್ತದೆ ಅಲ್ಲದೆ ದೇಶ ಮತ್ತು ದೇಶವಾಸಿಗಳು ದಿವಾಳಿಯಾಗುವುದಂತೂ ಖಂಡಿತ. - ಆಸು

ಹೌದು ಹೆಗ್ಡೆಯವರೆ..25 ವರುಷ ತಣ್ಣಗುಳಿದು, ಈಗ ಎಚ್ಚರವಾದ ಮೇಲೂ ನಾವು ಮಾಡುತ್ತಿರುವುದು ಅದನ್ನೆ..ಅನವಶ್ಯಕ ದಿಕ್ಕಿನಲ್ಲಿ ನಮ್ಮ ಶಕ್ತಿ ವ್ಯಯ ಮಾಡುತ್ತಿರುವುದು. ಉದ್ದಿಮೆಯನ್ನು (ಈಗ ಯುನಿಯನ್ ಕಾರ್ಬೈಡನ್ನು ಡೊವ್ ಕೆಮಿಕಲ್ಸ್ ಖರೀದಿ ಮಾಡಿದೆ) ಹೊಣೆಗಾರನಾಗಿ ಮಾಡಿ ಪರಿಹಾರ ಹೆಚ್ಚಿಸುವುದನ್ನು ಮಾಡದೇ..ಆಗಿನ ಮುಖ್ಯಸ್ಥನನ್ನು ಹಿಡಿದು ವಿಚಾರಣೆ (??) ಮಾಡಿ ಜೈಲಿಗೆ ಹಾಕುವಲ್ಲಿ ನಾವೀಗ ಉತ್ಸಾಹ ತೋರಿದರೆ..ಏನನ್ನಬೇಕು? ವಿದೇಶಿ ಕಂಪನಿಗಳ ಮೇಲೆ, ವಿದೇಶಗಳ ಮೇಲೆ ನ್ಯಾಯಕ್ಕಾಗಿ ಒತ್ತಡ ಹೇರುವುದನ್ನು ನಮ್ಮ ಸರಕಾರಗಳು ಮರತೆ ಬಿಟ್ಟಿವೆ. ಹಳೆಯ ವಿದೇಶಿ ಆಳ್ವಿಕೆಯ ಭ್ರಮೆ, ಅನುಭವಿಸಿದ ಕಿಳೀರಿಮೆ ನಮ್ಮಲ್ಲಿನ್ನೂ ಉಳಿದುಕೊಂಡಿದೆಯೇನೊ..ನಿಷ್ಕ್ರಿಯತೆ, ವಿಳಂಬ ಧೋರಣೆಯನ್ನು ನಾವು ಶಾಂತಿಪ್ರಿಯತೆ ಜೊತೆ ಸಮೀಕರಿಸಿದ್ದೇವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಮ್ಮ ದೇಶಕ್ಕಿರುವ ಜಾಗತಿಕ ಮಹತ್ವ ವನ್ನು ನಗದಿಕರಿಸುವಲ್ಲಿ ನಾವು ವಿಫಲರಾಗಿದ್ದೇವೆ.

>>ವಿದೇಶಿ ಕಂಪನಿಗಳ ಮೇಲೆ, ವಿದೇಶಗಳ ಮೇಲೆ ನ್ಯಾಯಕ್ಕಾಗಿ ಒತ್ತಡ ಹೇರುವುದನ್ನು ನಮ್ಮ ಸರಕಾರಗಳು ಮರತೆ ಬಿಟ್ಟಿವೆ. ಹಳೆಯ ವಿದೇಶಿ ಆಳ್ವಿಕೆಯ ಭ್ರಮೆ, ಅನುಭವಿಸಿದ ಕಿಳೀರಿಮೆ ನಮ್ಮಲ್ಲಿನ್ನೂ ಉಳಿದುಕೊಂಡಿದೆಯೇನೊ..ನಿಷ್ಕ್ರಿಯತೆ, ವಿಳಂಬ ಧೋರಣೆಯನ್ನು ನಾವು ಶಾಂತಿಪ್ರಿಯತೆ ಜೊತೆ ಸಮೀಕರಿಸಿದ್ದೇವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಮ್ಮ ದೇಶಕ್ಕಿರುವ ಜಾಗತಿಕ ಮಹತ್ವ ವನ್ನು ನಗದಿಕರಿಸುವಲ್ಲಿ ನಾವು ವಿಫಲರಾಗಿದ್ದೇವೆ.<< ಮುತ್ತಿನ೦ಥಾ ಮಾತು. ಹೌದು, ಪೈಗಳೇ, ನೀವು ಹೇಳಿದ್ದು ಸತ್ಯ. ವಿದೇಶೀ ಕ೦ಪೆನಿಗಳ ಮೇಲೆ ಹಾಗೂ ವಿದೇಶಗಳ ಮೇಲೆ ನ್ಯಾಯಕ್ಕಾಗಿ ಒತ್ತಡ ಹೇರಿದರೆ, ವಿದೇಶೀ ಬ೦ಡವಾಳದ ಕೊರತೆ ಇವರನ್ನು ಕಾಡುತ್ತದೆ- ತನ್ಮೂಲಕ ಪ್ರತಿಯೊ೦ದರಲ್ಲೂ ದುಡ್ಡು ಮಾಡುವ ಇವರ ಬುಡಕ್ಕೇ ಪೆಟ್ಟು ಬೀಳುವುದಿಲ್ಲವೇ? ನಾವು ಎಷ್ಟು ಬಗ್ಗಿದ್ದೇವೆ ಎ೦ದರೆ, ನಮ್ಮನ್ನು ಯಾವ ವಿದೇಶೀಯನೇ ಆಗಲಿ ಕಾಲಿನಿ೦ದ ನಮ್ಮ ಬೆನ್ನಿಗೆ ಒದೆಯೋದು ಬೇಡ, ಕೇವಲ ಕಿರು ಬೆರಳಿ೦ದ ತಳ್ಳಿದರೆ ಸಾಕು! ನಿಷ್ಕ್ರಿಯತೆ, ವಿಳಂಬ ಧೋರಣೆಯನ್ನು ಶಾ೦ತಿಪ್ರಿಯತೆಯೊ೦ದಿಗೆ ನಾವು ಸಮೀಕರಿಸಿಲ್ಲ ಬದಲಾಗಿ ಶಾ೦ತಿಯೆ೦ದರೆ ಅವೇ ಎ೦ಬ ಅರ್ಥ ನೀಡಿದ್ದೇವೆ. ನಾನು ನನ್ನ ಲೇಖನದಲ್ಲಿ ಗೋದ್ರಾವನ್ನು ಸಮರ್ಥಿಸಿಲ್ಲ. ಖ೦ಡಿಸಿದ್ದೇನೆ. ನನ್ನ ಕೋಪವೂ ಅದೇ ಸೂಕ್ತ ಪರಿಹಾರವನ್ನು ಘೋಷಿಸಲು ಇವರು ೨೫ ವರ್ಷ ತೆಗೆದುಕೊ೦ಡರು! ಅದನ್ನು ಅಗಲೇ ಘೋಷಿಸಬಹುದಿತ್ತಲ್ಲವೇ? ತಮ್ಮದೇ ತಪ್ಪು ಎ೦ದು ಗೊತ್ತಿದ್ದೂ ಕೂಡಾ! ನನಗನ್ನಿಸುತ್ತೆ, ಭೋಪಾಲ್ ಮುಗಿದ ಅಧ್ಯಾಯ. ಇನ್ನು ಯಾವುದಾದರೂ ಬೇರೆ ವಿಚಾರ ಬೆಳಕಿಗೆ ಬ೦ದ ಕೂಡಲೇ , ನಮ್ಮ ಮತದಾರರೂ, ರಾಜಕೀಯ ಪಕ್ಷಗಳೂ,ಮಾನವ ಹಕ್ಕು ಸ೦ಘಟನೆಗಳು ಭೋಪಾಲ್ ಎ೦ಬ ಅಧ್ಯಾಯದ ಪೈಲಿಗೆ ಷರಾ ಬರೆದು, ಪಕ್ಕಕ್ಕಿಡ್ತಾರೆ! ನಮಸ್ಕಾರಗಳು.

ಅಲ್ಲಂತೂ ಯಾರು ಉತ್ತರ ಕೊಡುವುದಿಲ್ಲ. ತಪ್ಪು ಸರ್ಕಾರದ್ದೊ? ರಾಜ್ಯಪಾಲರದ್ದೊ ಎನ್ನುವ ಜೆಡಿಎಸ್ ಭಾಜಪಾಗೆ ಮತ ಹಾಕ್ಬೇಡಿ, ಕಾಂಗ್ರೆಸ್ಗೆ ಹಾಕಿ ಎಂದು ಸಂಪದದಲ್ಲೂ ಪ್ರಚಾರ ಕೈಗೊಂಡ ಕಾಂಗ್ರೆಸ್ಸಿಗರು ಸದ್ಯ ಸಂಪದದಲ್ಲಿ ಕಾಣೆಯಾಗಿದ್ದಾರೆ, ಬಂದು ನಿಮ್ಗೆ ಗ್ರಹಚಾರ ಬಿಡಿಸ್ತಾರೆ ಇರಿ. ಕ್ವಟ್ರೋಚಿಯನ್ನು ಬಿಟ್ಟವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ದೊಡ್ಡ ಮರ ಬಿದ್ರೆ ಭೂಕಂಪ ಆಗುತ್ತೆ ಎಂದು ತಿಪ್ಪೆ ಸಾರಿಸುವ ನಾಯಕರುಗಳನ್ನು ಪಡೆದ ಭಾರತದ ಮೇರಿಯಮ್ಮ ಧನ್ಯೆ. ಇನ್ನು ಆಂಡರ್ಸನ್ ಜೈಲಿಗೆ ಹಾಕಿದ್ರೆ ಸತ್ತವರು ಎದ್ದು ಬರ್ತಾರ? ಎಂದು ಕೇಳುವ ಸೋ ಕಾಲ್ಡ್ ಸಿಕ್ಯುಲರ್ ಪತ್ರಕರ್ತರಿರಬೇಕಾದ್ರೆ ಈ ದೇಶದಲ್ಲಿ ಏನು ಬೇಕಾದ್ರೂ ಸಾಧ್ಯ. http://www.prajavani...

ಪ್ರಸನ್ನ.. ವಸ್ತುನಿಷ್ಠವಾಗಿ ವಿಚಾರ ಮಾಡಿದರೆ ನಿಮಗೇನೆನಿಸುತ್ತದೆ? ಈಗಿನ ಪರಿಸ್ಥಿತಿಯಲ್ಲಿ ಸಂತ್ರಸ್ತರಿಗೆ ತೃಪ್ತಿ ಕೊಡಬಹುದಾಗಿದ್ದು, ಉತ್ತಮ ಬಾಳು ಕೊಡಬಹುದೆನಿಸುವುದು ಯಾವ ಕ್ರಮದಿಂದ? 89ರ ಆಂಡರ್ಸನ್ ರನ್ನು ವಿಚಾರಣೆ ಮಾಡಿ ಕೊಡಿಸಬಹುದಾದ (?) ಜೈಲು ಶಿಕ್ಷೆಯಿಂದಲೊ? ಅಥವಾ ಡೊವ್ ಕಂಪನಿ ಮೇಲೆ ಹೇಗಾದರೂ ಒತ್ತಡ ತಂದು ಪರಿಹಾರ ಹೆಚ್ಚಿಸುವುದರಿಂದಲೊ? ಏಕೆಂದರೆ ನ್ಯಾಯಾಲಯದಲ್ಲಿ ಆಂಡರ್ಸನ್ ನನ್ನು ಶಿಕ್ಷೆಗೊಳಪಡಿಸಲು ಪೂರಕವಾದ ಸಾಕ್ಷಗಳೇ ನಮ್ಮಲ್ಲಿಲ್ಲ ( ಅಷ್ಟು ಚೆನ್ನಾಗಿ ಗುಡಿಸಿ ರಂಗೋಲಿ ಹಾಕಲಾಗಿದೆ!)..ಅಂದ ಮೇಲೆ ಮರಿಚಿಕೆಯ ಬೆನ್ನು ಹತ್ತುವುದಕ್ಕಿಂತ ವಾಸ್ತವದ ವಿಚಾರ ಮಾಡುವುದು ಲೇಸಲ್ಲವೆ? ಮತ್ತು ಇದರ ಜೊತೆಗೆ ಮುಂದಿನ ದಿನಗಳಲ್ಲಿ ದುರಂತ ನಿರ್ವಹಣಾ ಕಾನೂನು ಬಿಗಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿರುವುದು ಭವಿಷ್ಯದ ಅವಶ್ಯಕತೆಯಲ್ಲವೆ? ಇನ್ನು ನೀವು ಕೊಟ್ಟ ಕೊಂಡಿಯ ಪ್ರಜಾವಾಣಿಯ ಲೇಖನ ಯಾರಾದರೂ ಒಬ್ಬರ ಪರವಾಗಿ ಇದೆಯೆ? ಅದರಲ್ಲಿ ದುರಂತದ ನಂತರ ನಮ್ಮೆಲ್ಲ ಸರ್ಕಾರಗಳ ವೈಫಲ್ಯವನ್ನು, ನಿಷ್ಕ್ರಿಯತೆಯನ್ನು ಪಟ್ಟಿ ಮಾಡಲಾಗಿದೆ. ವಿವಾದಕ್ಕೆ ಎಡೆ ಮಾಡುವ, ಯಾರಾದರನ್ನು ಉದ್ದೇಶಪೂರ್ವಕವಾಗಿ ರಕ್ಷಿಸುತ್ತಿರುವ, ಸುಮ್ಮನೆ ತೆಗಳುತ್ತಿರುವ ಅಂಶಗಳು ಕಂಡು ಬಂದವೆ ನಿಮಗದರಲ್ಲಿ? ನನಗಂತೂ ಕಾಣಿಸಲಿಲ್ಲ.

ವಸ್ತುನಿಷ್ಠವಾಗಿ ವಿಮರ್ಶೆ ಮಾಡುವುದರಿಂದ ಅಂತಹ ತಪ್ಪು ಮತ್ತೊಮ್ಮೆ ಆಗದಂತೆ ತಡೆಯಬಹುದು. ಆಂಡರ್ಸನ್ ತಪ್ಪಿಸ್ಕೊಂಡು ಹೋಗಲು ಬಿಟ್ಟಿದ್ದು ಮೊದಲನೇ ತಪ್ಪು ಕೊನೆಯದೂ ಕೂಡ ಆಮೇಲೆ ನಡೆದದ್ದೆಲ್ಲ ಬರೀ ಬೊಗಳೆ (ನ್ಯಾಯಾಲಯವೂ ಇದಕ್ಕೆ ಹೊರತಾಗಲಿಲ್ಲ) ಆಂಡರ್ಸನ್ ಅನ್ನು ಬಿಡಬಹುದಾದರೆ ಅಫ್ಜಲ್ ಗುರು ಮತ್ತು ಕಸಬ್ ನನ್ನೂ ಬಿಡಬಹುದಲ್ಲವೆ? ಇಲ್ಲಿ ಭಾರತವೆಂದರೆ ಎನೂ ಬೇಕಾದರೂ ಮಾಡಬಹುದು ಎಂದು ತಿಳಿದವರಿಗೊಂದು ಪಾಠ ಕಲಿಸಲೇ ಬೇಕಿತ್ತು. ವಿಪರ್ಯಾಸವೆಂದರೆ ಯಾರು ಕಾಯಬೇಕಿತ್ತೊ ಅವರೆ ಕೊಲ್ಲಲು ನಿಂತಂತಾಗಿತ್ತು. ಇನ್ನು ಪ್ರಜಾವಾಣಿಯ ಲೇಖನ, ಒಮ್ಮೆ ಸರಿಯಾಗಿ ಗಮನಿಸಿ ಓದಿ ದಿನೇಶ್ ಅವರ ಲೇಖನದ ಹಿಂದಿರುವ ಹುನ್ನಾರ ಎಲ್ಲರ ಬಾಯಿ ಮುಚ್ಚಿಸುವ ತಂತ್ರ. ದಿನೇಶ್ ಕನ್ನಡ ಅಂಕಣಕಾರ ಹಾಗಾಗಿಯೆ ಆತ ದೇವೆಗೌಡರನ್ನು ಮತ್ತು ಭೂಪಾಲ್ ಬಗ್ಗೆ ಕೂಗಾಡುತ್ತಿರುವ ಬಿಜೇಪಿಯನ್ನು ಬಾಯಿ ಮುಚ್ಚಿಸುವ ತಂತ್ರಗಾರಿಕೆ ಮತ್ತು ರಾಜೀವ್ ಗಾಂಢಿಯಿಂದ ತಪ್ಪಾಗಿಲ್ಲವೆಂಬ ಭಾವನೆ ಮೂಡಿಸಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅದೇಕೆ ನಂತರ ಬಂದ ಎಲ್ಲ ಪ್ರಧಾನಿಗಳನ್ನು ಹೆಸರಿಸಲಿಲ್ಲ? ದಿನೇಶ್ ಅದೆಂತಹ ಪೀತ ಅಂಕಣಕಾರ ಎಂಬುದು ಆತನ ಬಹುತೇಕ ಲೇಖನಗಳಿಂದ ತಿಳಿಯುತ್ತದೆ. ಅತ್ಯುತ್ತಮ ವಿಮರ್ಶೆ ಮಾಡುವ ನಿಮ್ಮ ಅರಿವಿಗೆ ಆತನ ಹಿಂದೂ ವಿರೋಧಿ ಧೋರಣೆಗಳು ಬರದಿರುವುದು ಆಶ್ಚರ್ಯಕರ.

ಪ್ರಸನ್ನ.. ಈ ಅಂಕಣಕಾರನ ಬಗ್ಗೆ ಚರ್ಚೆಯನ್ನು ನಿಲ್ಲಿಸೋಣ:) ಭೋಪಾಲ್ ದುರಂತದ ಕರಾಳ ಮುಖದ ಬಗ್ಗೆ ಸಾಕಷ್ಟು ಓದಿದ ಮೇಲೆ..ನಾಗೇಶ ಹೆಗಡೆಯವರು ಬರೆದಿದ್ದು ಮತ್ತು ಒಂದು ಸಲ ಸಂಪದದಲ್ಲಿ ಆನಂದರಾಮ ಶಾಸ್ತ್ರಿಗಳು ಪ್ರಸ್ತಾಪಿಸಿದ್ದು ನೆನಪಿಗೆ ಬಂತು.. ನಾವು ಈ ದುರಂತಕ್ಕೆ ಕಾರಣರಾದವರ ವಿರುದ್ಧ ನಮ್ಮದೇ ಆದ ರೀತಿಯಲ್ಲಿ, ಸಣ್ಣ ಪ್ರಮಾಣದಲ್ಲಾದರೂ ಪ್ರತಿಭಟನೆ ಸಲ್ಲಿಸಬೇಕು..ಈ ಕಂಪನಿಗಳ ಉತ್ಪನ್ನಗಳನ್ನು ಖರೀದಿಸದೆ. ನಮ್ಮ ಮಿತ್ರರಿಗೂ, ಪರಿಚಯದವರಿಗೂ ಈ ಬಗ್ಗೆ ಹೇಳಬೇಕು..ಪ್ರಾರಂಭಿಸೋಣವೆ? 1. ಎವೆರೆಡಿ ಇಂಡಸ್ಟ್ರೀಸ್ ಉತ್ಪನ್ನಗಳ ಮಾಹಿತಿ ಇಲ್ಲಿದೆ : http://www.evereadyi... 2.ಯುನಿಯನ್ ಕಾರ್ಬೈಡನ್ನು ಖರೀದಿಸಿರುವ ಡೊವ್ ಕೆಮಿಕಲ್ಸ್ ನ ಉತ್ಪನ್ನಗಳ ಮಾಹಿತಿ ಇಲ್ಲಿದೆ: http://www.dow.com/p...

ರಾಘವೇ೦ದ್ರ ಜಿ, ನೀವು ಈ ಪ್ರಸ್ತುತ ಪಡಿಸಿರುವ ಲೇಖನ ಇಡೀ ಕಾ೦ಗ್ರೇಸ್ ನ ಭ್ರಷ್ಟ ಆಡಳಿತ ಚರಿತ್ರೆಯ ಪುಟಗಳಲ್ಲಿ ಒ೦ದು....... ಇ೦ಥಹ ಹಲವಾರು ಪುಟಗಳ ಪುಸ್ತಕಗಳೆ ಇವೆ ಅವರಲ್ಲಿ.. ಆ೦ದು ರಾಜೀವ್ ಗಾ೦ಧಿ ಎ೦ಬ ಆ ಮನುಷ್ಯ ಇಟಲಿ ಯ ಈಕೆ (ಸೊ(ಷೊ)ನಿಯಾ) ಅನ್ನು ಮೆಚ್ಚಿ ಮದುವೆ ಆದದ್ದಕ್ಕೆ ಮತ್ತೊಮ್ಮೆ ಸ್ವತ೦ತ್ರ್ಯ ನ೦ತರ "ಪರದೇಶಿಯರಿಗೆ" ದೇಶವನ್ನು ಅಡವಿಟ್ಟ ಮೊದಲ ಪಕ್ಷ ಈ ಕಾ೦ಗ್ರೆಸ್.... ಈಕೆ ದೇಶದ ಉನ್ನತಿಗಾಗಿ ಶ್ರಮಿಸುವ ವಾಜಪೇಯೀ,ಮೊದಿ ಬಗ್ಗೆ ಮಾತನಾಡಲು ಅರ್ಹತೆ ಅಲ್ಲ ಯೊಗ್ಯತೆಯೂ ಇಲ್ಲ.....

ಲೇಖನವನ್ನು ಮೆಚ್ಚಿ ತಮ್ಮ ಅಮೂಲ್ಯ ಪ್ರತಿಕ್ರಿಯೆಗಳೊ೦ದಿಗೆ, ಲೇಖನ ಸ೦ಬ೦ಧೀ ವಿಚಾರಗಳ ಬಗ್ಗೆ ಚರ್ಚೆ ನಡೆಸಿ, ಹೆಚ್ಚಿನ ವಿಚಾರಗಳನ್ನು ತಿಳಿಸಿಕೊಟ್ಟ, ವಿಜಯ ಪೈಗಳು, ಪ್ರಸನ್ನ ಹಾಗೂ ಡಾಕ್ಟರಿಗೆ ನನ್ನ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೆಯೇ ಇರಲೆ೦ದು ಆಶಿಸುವ, ನಿಮ್ಮವ ನಾವಡ.

ರಾಯರೇ ಸರಿಯಾಗಿ ಹೇಳಿದ್ದೀರಿ <<<ಇದು ಸೋನಿಯಾರನ್ನು ಭೋಪಾಲ್ ದುರ೦ತದ ಜವಾಬ್ದಾರಿಯಿ೦ದ ಮುಕ್ತರನ್ನಾಗಿಸಲು ಕಾ೦ಗ್ರೆಸ್ಸಿಗರೆಲ್ಲಾ ಆಡ್ತಿರೋ ನಾಟಕವಲ್ಲದೆ ಇನ್ನೇನು?>>> ಉತ್ತರ ,ಪ್ರಶ್ನೆ, ಇವುಗಳಿಗೆ ಯಾರ ಹತ್ತಿರವೂ ಸಮಯವಿಲ್ಲವಲ್ಲ ಈಗ..... http://sampada.net/b... ಧನ್ಯವಾದಗಳು