ಜಿಮೇಲ್‌ನಿಂದ SMS ಪಡೆಯುವದು

To prevent automated spam submissions leave this field empty.

ಹಾಟ್‌ಮೇಲ್ ಅಥವಾ ಲೈವ್‌‌ಮೇಲ್ ಉಪಯೋಗಿಸುತ್ತಿದ್ದಲ್ಲಿ ನೀವು ನಿಮಗೆ ಬರುವ ಮೇಲ್‌ಗಳನ್ನು ನಿಮ್ಮ ಮೊಬೈಲ್‌ನ ಮುಖಾಂತರ ಹೇಗೆ ನೋಡಬಹುದು ಎಂದು ಪ್ರಸನ್ನ ಅವರು ಇಲ್ಲಿ ವಿವರಿಸಿದ್ದಾರೆ. ಈ ಸೌಲಭ್ಯ ಜಿಮೇಲ್‌ನಲ್ಲಿ ಇಲ್ಲ. ಆದರೆ ಇದನ್ನು ಎರಡು ರೀತಿಯಿಂದ ಮಾಡಬಹುದು. ಇದಕ್ಕೆ ನಿಮಗೆ ಹಾಟ್‌ಮೇಲ್ ಮತ್ತು ಜಿಮೇಲ್‌ನ ಎರಡೂ ಅಕೌಂಟ್ ಇರಬೇಕು.

 

ಮೊದಲನೇ ರೀತಿ: ಜಿಮೇಲ್‌ನ Forwarding ಆಯ್ಕೆಯಿಂದ ಇದನ್ನು ಪಡಿಬಹುದು


೧. ಮೊದಲು ಪ್ರಸನ್ನ ಅವರು ಇಲ್ಲಿ ವಿವರಿಸಿದ ಹಾಗೆ ಮಾಡಿ. ಆಮೇಲೆ ನಿಮ್ಮ  ಜಿಮೇಲ್‌ನ ಅಕೌಂಟ್‌ಗೆ ಲಾಗಿನ್ ಆಗಿ.

 

೨. ಕೆಳಗಿನ ಚಿತ್ರದಲ್ಲಿ ತೋರಿಸಿರುವ ಹಾಗೆ, Settingsಗೆ ಹೋಗಿ, Forwarding and POP/IMAPನ್ನು ಚಿಟುಕಿಸಿ.


gmail settings

 

 

೩. ಬಂದ dialog boxನಲ್ಲಿ ನಿಮ್ಮ ಹಾಟ್‌ಮೇಲ್‌ನ ವಿಳಾಸ ಕೊಡಿ.

 

ವಿಳಾಸ ಸೇರಿಸುವದು

 

೪. Next ಚಿಟುಕಿಸಿ, confirmation ಕಿಡಕಿ ಬರುತ್ತದೆ.

 

confirmation

 

೫. OK ಚಿಟುಕಿಸಿ, ಹಾಟ್‌ಮೇಲ್‌ಗೆ ಹೋಗಿ. ಜಿಮೇಲ್‌ನಿಂದ ಮೇಲ್ ಬಂದಿರುತ್ತದೆ. ಅದರಲ್ಲಿಯ confirmation code ಕಾಪಿ ಮಾಡಿ, ಮತ್ತೆ ಜಿಮೇಲ್‌ಗೆ ಬನ್ನಿ. ಕೆಳಗೆ ಕಾಣಿಸುವ ಕಿಡಕಿಯಲ್ಲಿ codeನ್ನು ಸೇರಿಸಿ Verify ಗುಂಡಿ ಒತ್ತಿ.

 

Verify code

 

೬. ಈಗ Forward a copy of incoming mail to ಗುಂಡಿ ಆಯ್ಕೆ ಮಾಡಿ, ಅದರ ಮುಂದಿರೋ drop-down boxನಲ್ಲಿ ನಿಮ್ಮ ಹಾಟ್‌ಮೇಲ್ ವಿಳಾಸ ಆಯ್ದುಕೊಳ್ಳಿ.

 

ವಿಳಾಸದ ಆಯ್ಕೆ

 

ಇನ್ನು ಮುಂದೆ ನಿಮ್ಮ ಜಿಮೇಲ್‌ಗೆ ಬಂದ ಪ್ರತಿಯೊಂದು ಅಂಚೆಯನ್ನು ಜಿಮೇಲ್, ಹಾಟ್‌ಮೇಲ್‌ಗೆ ಕಳುಹಿಸುತ್ತದೆ (ಜಿಮೇಲ್‌ನಲ್ಲೂ ಒಂದು copy ಇರುತ್ತದೆ). ಹಾಟ್‌ಮೇಲ್‌ನಿಂದ ನಿಮಗೆ SMS ಬರುತ್ತದೆ.

 

ಎರಡನೇ ರೀತಿ: ಹಾಟ್‌ಮೇಲ್‌ಗೆ  ಜಿಮೇಲ್‌ನ ಖಾತೆ ಸೇರಿಸುವದರಿಂದ.

 

ಹಾಟ್‌ಮೇಲ್‌ಗೆ  ಜಿಮೇಲ್‌ನ ಖಾತೆ ಹೇಗೆ ಸೇರಿಸಬೇಕು ಎಂದು ಪ್ರಸನ್ನ ಅವರು ಇಲ್ಲಿ ಹೇಳಿದ್ದಾರೆ.

ಇದರಿಂದ ನಿಮ್ಮ ಜಿಮೇಲ್‌ಗೆ ಬಂದ ಪ್ರತಿಯೊಂದು ಅಂಚೆ ಹಾಟ್‌ಮೇಲ್‌ಗೆ ಬರುತ್ತದೆ ಮತ್ತು ಹಾಟ್‌ಮೇಲ್‌ನಿಂದ ನಿಮಗೆ SMS ಬರುತ್ತದೆ.

 

 

ನೆನಪಿಡಿ, ಎರಡನೆಯ ರೀತಿಗಿಂತ ಮೊದಲನೆಯ ರೀತಿ ಸುರಕ್ಷಿತ.


ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸರಿ ಸರ‍್ ನೀವು ಹೇಳುವುದು.. ಆದರೆ.. ಇಲ್ಲಿ ಮುಖ್ಯವಾದದ್ದು.. ನೀವು ಹೇಳಿದಂತೆ ಮಾಡುವುದು.. ಅಂದರೆ.. ಮೇಲ್ ಫಾರ್ವರ್ಡ್ ಮಾಡಬೇಕೆ ಹೊರತು, ಹಾಟ್‌ಮೇಲ್‌ನಲ್ಲಿ ಅಕೌಂಟ್‌ನಲ್ಲಿ ಜಿ-ಮೇಲ್‌ ಖಾತೆಯನ್ನು ಸೇರಿಸಬಾರದು.. ಆದರೆ, ಹಾಗೆ, ನಾನು way2sms ಖಾತೆಯಲ್ಲಿ ಜಿ-ಮೇಲ್ ರಹಸ್ಯಪದ ಕೊಟ್ಟಿಲ್ಲ.. ನಾನು ಜಿ-ಮೇಲ್‌ನಿಂದ ಆಟೋ ಮೇಲ್ ಫಾರ್ವರ್ಡ್ ಉಪಯೋಗಿಸಿರೋದು. ಅಂದ ಹಾಗೆ, ನನಗೆ way2sms ಖಾತೆ ಉತ್ತಮ ಅಂತ ಅನ್ನಿಸುತ್ತಿದೆ. ಯಾಕೆಂದರೆ, ಹಾಟ್‌ಮೇಲ್‌ನಲ್ಲಿ, ಈ SMSಗೆ ಮಿತಿ 300 ತಿಂಗಳಿಗೆ ಅಂತ ಕೊಟ್ಟಿದ್ದಾರೆ. ಅಂದರೆ.. ನನ್ನಂತವನಿಗೆ ಬಹುಷಃ 6-10 ದಿವಸದಲ್ಲಿ, ಅದು ಮುಗಿದು ಹೋಗಿರುತ್ತೆ. ಇನ್ನು ಇದರ ಉಪಯೋಗ ಯಾರಿಗಾಗುತ್ತೋ ಅವರು ಖಂಡಿತ ಉಪಯೋಗಿಸಿಕೊಳ್ಳಬಹುದು. ಆಯ್ಕೆ ಆಯ್ದುಕೊಳ್ಳುವಲ್ಲಿ ಅನುಮಾನ ಬಂದಲ್ಲಿ.. ಖಂಡಿತ ನನ್ನ ಸಂಪರ್ಕಿಸಬಹುದು. ನನ್ನ (ದೂರುವಾಣಿ) ಸಂಖ್ಯೆ : ೯೧ ೯೮೮೬೦ ೮೮೦೦೩. :) ನಿಮ್ಮೊಲವಿನ, ಸತ್ಯ...:)

ಸರಿ ಸರ‍್ ನೀವು ಹೇಳುವುದು.. ಆದರೆ.. ಇಲ್ಲಿ ಮುಖ್ಯವಾದದ್ದು.. ನೀವು ಹೇಳಿದಂತೆ ಮಾಡುವುದು.. ಅಂದರೆ.. ಮೇಲ್ ಫಾರ್ವರ್ಡ್ ಮಾಡಬೇಕೆ ಹೊರತು, ಹಾಟ್‌ಮೇಲ್‌ನಲ್ಲಿ ಅಕೌಂಟ್‌ನಲ್ಲಿ ಜಿ-ಮೇಲ್‌ ಖಾತೆಯನ್ನು ಸೇರಿಸಬಾರದು.. ಆದರೆ, ಹಾಗೆ, ನಾನು way2sms ಖಾತೆಯಲ್ಲಿ ಜಿ-ಮೇಲ್ ರಹಸ್ಯಪದ ಕೊಟ್ಟಿಲ್ಲ.. ನಾನು ಜಿ-ಮೇಲ್‌ನಿಂದ ಆಟೋ ಮೇಲ್ ಫಾರ್ವರ್ಡ್ ಉಪಯೋಗಿಸಿರೋದು. ಅಂದ ಹಾಗೆ, ನನಗೆ way2sms ಖಾತೆ ಉತ್ತಮ ಅಂತ ಅನ್ನಿಸುತ್ತಿದೆ. ಯಾಕೆಂದರೆ, ಹಾಟ್‌ಮೇಲ್‌ನಲ್ಲಿ, ಈ SMSಗೆ ಮಿತಿ 300 ತಿಂಗಳಿಗೆ ಅಂತ ಕೊಟ್ಟಿದ್ದಾರೆ. ಅಂದರೆ.. ನನ್ನಂತವನಿಗೆ ಬಹುಷಃ 6-10 ದಿವಸದಲ್ಲಿ, ಅದು ಮುಗಿದು ಹೋಗಿರುತ್ತೆ. ಇನ್ನು ಇದರ ಉಪಯೋಗ ಯಾರಿಗಾಗುತ್ತೋ ಅವರು ಖಂಡಿತ ಉಪಯೋಗಿಸಿಕೊಳ್ಳಬಹುದು. ಆಯ್ಕೆ ಆಯ್ದುಕೊಳ್ಳುವಲ್ಲಿ ಅನುಮಾನ ಬಂದಲ್ಲಿ.. ಖಂಡಿತ ನನ್ನ ಸಂಪರ್ಕಿಸಬಹುದು. ನನ್ನ (ದೂರುವಾಣಿ) ಸಂಖ್ಯೆ : ೯೧ ೯೮೮೬೦ ೮೮೦೦೩. :) ನಿಮ್ಮೊಲವಿನ, ಸತ್ಯ...:)

<<<<<ಹಾಟ್‌ಮೇಲ್‌ನಲ್ಲಿ, ಈ SMSಗೆ ಮಿತಿ 300 ತಿಂಗಳಿಗೆ ಅಂತ ಕೊಟ್ಟಿದ್ದಾರೆ.>>>>> SMS ಮಿತಿ ಮುನ್ನೂರು ತಿಂಗಳಿಗೋ ಅಥವಾ ತಿಂಗಳಿಗೆ ಮುನ್ನೂರೊ? 300ತಿಂಗಳಿಗಾದರೆ 25ವರ್ಷ ನೋ ಟೆಂಷನ್‌! :-) Quote ಮಾಡಕ್ಕೆ ಅಗ್ತಾಯಿಲ್ಲ. ಸಹಾಯ ಮಾಡಿ. ಪ್ರಸನ್ನ.ಎಸ್.ಪಿ

ಹಾಟ್‌ಮೇಲ್‌ನಲ್ಲಿ, ಈ SMSಗೆ ಮಿತಿ 300, ತಿಂಗಳಿಗೆ ಅಂತ ಕೊಟ್ಟಿದ್ದಾರೆ.

, ಬಿಟ್ಟು ಹೋಗಿತ್ತು :-)

[quote]Quote ಮಾಡಕ್ಕೆ ಅಗ್ತಾಯಿಲ್ಲ.[/quote]

Quoteಗೆ ಚೌಕ ಕಂಸ (square bracket) ಉಪಯೋಗಿಸಿ ಮತ್ತು Input format: Full HTMLನ್ನು ಆಯ್ದುಕೊಳ್ಳಿ.

 

[Quote=ಶ್ರೀನಿವಾಸ ವೀ. ಬ೦ಗೋಡಿ] Quoteಗೆ ಚೌಕ ಕಂಸ (square bracket) ಉಪಯೋಗಿಸಿ ಮತ್ತು Input format: Full HTMLನ್ನು ಆಯ್ದುಕೊಳ್ಳಿ. [/Quote]

ಆಯ್ತು! Full HTML ಆಯ್ಕೆ ಮಾಡಿರಲಿಲ್ಲ. ಧನ್ಯವಾದಗಳು ಶ್ರೀನಿವಾಸರವರೆ. "square bracket= ವರ್ಗಾವರಣ" ಅನ್ಸುತ್ತೆ.(bracket=ಆವರಣ)

-ಪ್ರಸನ್ನ.ಎಸ್.ಪಿ

[quote=ಸತ್ಯ ಚರಣ]ನನಗೆ way2sms ಖಾತೆ ಉತ್ತಮ ಅಂತ ಅನ್ನಿಸುತ್ತಿದೆ.[/quote]

ನಿಜ, ಜಿ-ಮೇಲ್‌ನಿಂದ ಆಟೋ ಮೇಲ್ ಫಾರ್ವರ್ಡ್ ಉಪಯೋಗಿಸಿದರೆ way2sms ಖಾತೆ ಉತ್ತಮ. ನಾನೂ way2sms ಪ್ರಯತ್ನಿಸಿದೆ. ಬೇರೆ ಖಾತೆಗಳಿಂದ ಮೇಲ್ ಬಂದಾಗ, ನನಗೆ SMS ಬಂತು, ಆದರೆ way2smsನಲ್ಲಿ "No mails to display" ಅಂತ ತೋರಿಸ್ತಿದೆ.

 

’ಸರ್’ ಬೇಡ :-)

ಲೇಖನ ಚೆನ್ನಾಗಿದೆ. ಧನ್ಯವಾದಗಳು. ಮೊದಲು ಹಾಟ್‌ಮೇಲ್‌ನಲ್ಲಿ SMS ಅಲರ್ಟ್‌‌ಗೆ ಚಂದಾದಾರರಾಗಿ, ನಂತರ ಜಿಮೇಲ್‌ನ ಮೇಲ್‌ಗಳು ಹಾಟ್‌ಮೇಲ್‌ಗೆ ಬರುವಾಗ ಬೇರೆ ಫೋಲ್ಡರ್‌ಗೆ ಹೋಗದೆ ಇನ್‌ಬಾಕ್ಸ್‌‌ಗೆ ಹೋಗುವಂತೆ ಮಾಡಿದರೆ SMSನಲ್ಲಿ ಆ ಮೇಲ್‌ ಬರುತ್ತದೆಯೇ? ಏಕೆಂದರೆ ಜಿಮೇಲ್‌ನ ಮೇಲ್‌ಗಳನ್ನು ಬೇರೆ ಫೋಲ್ಡರ್‌ಗೆ ಹೋಗುವಂತೆ ಮಾಡಿದರೆ ಆ ಮೇಲ್‌‌ಗಳು SMS ಮೂಲಕ ಬರುವುದಿಲ್ಲ. ನನಗೆ ಹಾಟ್‌ಮೇಲ್‌ನ ಇನ್‌ಬಾಕ್ಸ್‌ಗೆ ಬರುವ ಮೇಲ್‌‌ಗಳು ಮಾತ್ರ SMS ಮೂಲಕ ಬರುತ್ತಿವೆ. ಬೇರೆ ಫೋಲ್ಡರ್‌ಗೆ ಹೋಗುವ ಮೇಲ್‌ಗಳು ಮೊಬೈಲ್‌ಗೆ ಬರುತ್ತಿಲ್ಲ. ಪ್ರಸನ್ನ.ಎಸ್.ಪಿ

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹಾಟ್‌ಮೇಲ್‌ನಲ್ಲಿ ಬೇರೆ ಫೋಲ್ಡರ್‌ಗೆ ಹೋಗುವ ಮೇಲ್‌ಗಳಿಗೆ SMS ಬರುವ ಆಯ್ಕೆ ಕೊಟ್ಟಿಲ್ಲ. ಇದು ಜಿಮೇಲ್‌ನಿಂದ ಬರುವ ಮೇಲ್‌ಗಳಿಗಷ್ಟೇ ಅಲ್ಲ, ಯಾವದೇ ಮೇಲ್‌ಗಳಿಗೆ Filter ಹಾಕಿದ್ದರೆ ಅವಕ್ಕೂ SMS ಬರುವುದಿಲ್ಲ. ಆದರೆ ಜಿಮೇಲ್‌ನಲ್ಲಿ ಇದಕ್ಕೆ ಆಯ್ಕೆ ಇದೆ. Filterನಲ್ಲಿ "Apply the label:" ಮತ್ತು "Forward it to:" ಎರಡೂ check boxಗಳನ್ನು ಆಯ್ದುಕೊಳ್ಳಿ.

ಶ್ರೀನಿವಾಸ್, ಆಯಿತು.., ಸರ‍್ ಅನ್ನೋದಿಲ್ಲ.. ಹೆಸರು ಹಿಡಿದು ಕರೆದರೆ ಕಸಿವಿಸಿ ಇಲ್ಲ ಅನ್ಕೋತೀನಿ. ಆಗಬಹುದೇ?..!! :) ಮೇಲಿನ ಹಲವು ಪ್ರಶ್ನಿಸಿದ ಪ್ರತಿಕ್ರಿಯೆಗಳಿಗೆ ಉತ್ತರಿಸೋದು ತಡವಾಯ್ತು.. ತಾವೇ ಸಾಕಷ್ಟು ಉತ್ತರ ಕೊಟ್ಟಿದ್ದೀರಿ.. ಧನ್ಯವಾದಗಳು.. ಹಾ.. ","(ಕಾಮಾ ಚಿಹ್ನೆ) ಬಿಟ್ಟದ್ದಕ್ಕೆ ಸಂದೇಹ ಮೂಡುವಂತಾಯ್ತು.. ಅದು "೩೦೦, ತಿಂಗಳಿಗೆ" ಆಗಬೇಕಿತ್ತು. ನೀವು ಹೇಳಿದಂತೆ, SMS ನನಗೂ ಬರುತ್ತಿಲ್ಲ.. ಜಿ-ಮೇಲ್‌ ಖಾತೆಯನ್ನು, ಹಾಟ್‌ಮೇಲ್‌ನಲ್ಲಿ ಸೇರಿಸಿದ ಮೇಲೂ.. ಕಾರಣ ನೀವು ತಿಳಿಸಿದಂತೆ, ಅದು ಇನ್‌ಬಾಕ್ಸ್‌ಗೆ ಬಂದಲ್ಲಿ ಮಾತ್ರ.. ಬೇರೆ ಫೋಲ್ಡರ್‌ಗೆ ಹೋಗುವಂತೆ ಮಾಡಿದಲ್ಲಿ.. sms ಬರುವುದಿಲ್ಲ.. ನಿಮ್ಮೊಲವಿನ, ಸತ್ಯ.. :)