ಹಾಟ್‌ಮೇಲ್‌ನಲ್ಲಿ ನಿಮ್ಮ Gmailನ ಮೇಲ್‌ಗಳನ್ನು ಓದಬಹುದು

To prevent automated spam submissions leave this field empty.

ನೀವು ನಿಮ್ಮ ಹಾಟ್‌ಮೇಲ್‌ ಅಥವಾ ಲೈವ್ ಅಕೌಂಟ್‌ ಮೂಲಕ ನಿಮ್ಮ Gmailನ ಅಥವಾ ಇನ್ನೊಂದು ಹಾಟ್‌ಮೇಲ್‌ ಅಕೌಂಟ್‌ನ ಮೇಲ್‌ಗಳನ್ನು ನೋಡಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ನಿಮ್ಮ ಹಾಟ್‌ಮೇಲ್ ಅಥವಾ ಲೈವ್ ಅಕೌಂಟಿಗೆ ಲಾಗಿನ್ ಆಗಿರಿ.

 

ನಂತರ ಎಡಬದಿಯಲ್ಲಿ ಕಾಣುವ Add an email account ಲಿಂಕ್ ಮೇಲೆ ಕ್ಲಿಕ್ ಮಾಡಿ.

 

ಈಗ E-mail address ಜಾಗದಲ್ಲಿ ನಿಮ್ಮ ಜಿಮೇಲ್ address ಟೈಪ್ ಮಾಡಿ. ಉದಾ: example123@gmail.com. ನಂತರ ಪಾಸ್‌ವರ್ಡ್ ಜಾಗದಲ್ಲಿ ನಿಮ್ಮ ಪಾಸ್‌‌ವರ್ಡ್ ನೀಡಿ Next ಬಟನ್ ಕ್ಲಿಕ್ ಮಾಡಿ.

 

 

ಈಗ ನಿಮ್ಮ ಮೇಲ್‌ಗಳು ಎಲ್ಲಿ ಇರಬೇಕೆಂದು ಸೂಚಿಸಿ. ನಿಮ್ಮ Inboxನಲ್ಲಿಯೇ ಸಿಗಬೇಕೆಂದಾದರೆ Your inboxನ್ನು ಆಯ್ಕೆ ಮಾಡಿ. ಇಲ್ಲದಿದ್ದಲ್ಲಿ A separate folder, called ಎಂಬುದನ್ನು ಆಯ್ಕೆ ಮಾಡಿ ನಿಮಗಿಷ್ಟವಾದ ಹೆಸರು ನೀಡಿ. ಉದಾ: Gmail-1. ನಂತರ Save ಬಟನ್ ಕ್ಲಿಕ್ಕಿಸಿ.

 

 

ನಂತರ ನಿಮ್ಮ Gmail ಅಕೌಂಟಿಗೆ ಲಾಗಿನ್‌ ಆಗಿ ಹಾಟ್‌ಮೇಲ್‌ನಿಂದ ಬಂದಿರುವ ಒಂದು ಲಿಂಕ್ (URL) ಕ್ಲಿಕ್ ಮಾಡಿ. ಆಗ ನೀವು ಹಾಟ್‌ಮೇಲ್‌ನಿಂದಲೇ ಜಿಮೇಲ್‌ನ mailಗಳನ್ನು ನೋಡಲಿಕ್ಕೆ ಸಾದ್ಯವಾಗುತ್ತದೆ.

 

 

ನಿಮ್ಮ hotmail inboxನ ಕೆಳಬದಿಯಲ್ಲಿ ಕಾಣುವ ಫೋಲ್ಡರ್‍‌ನ್ನು(Gmail ಅಥವಾ ನೀವಿಟ್ಟ ಹೆಸರು) ಕ್ಲಿಕ್ ಮಾಡಿದರೆ ಆಯ್ತು, ನಿಮ್ಮ Gmail ಮೇಲ್‌ಗಳನ್ನು ನೋಡಬಹುದು.
ಈ ಸೌಲಭ್ಯವನ್ನು ಬಳಸಿ ನಿಮ್ಮ Yahoo! mail classic ನ ಮೇಲ್‌ಗಳನ್ನು ನೋಡಲು ಸಾಧ್ಯವಿಲ್ಲ. ಆದರೆ ನೀವು Yahoo! Mail Plus ಉಪಯೋಗಿಸುತ್ತಿದ್ದಲ್ಲಿ ನಿಮ್ಮ Yahoo! ಮೇಲ್‌ಗಳನ್ನು ಹಾಟ್‌ಮೇಲ್‌ ಮೂಲಕ ವೀಕ್ಷಿಸಬಹುದು.

ಇದೇ ರೀತಿ ನೀವು ಐದಾರು gmail ಅಥವಾ hotmail ಅಕೌಂಟ್‌ಗಳನ್ನು add ಮಾಡಬಹುದು.

 

ನನ್ನ ಬ್ಲಾಗ್‌ನಲ್ಲಿ ಈ ಲೇಖನ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಒಳ್ಳೇ ಲೇಖನ.. ಧನ್ಯವಾದಗಳು.. ಮತ್ತೊಂದು ಮಾಹಿತಿ.. ಇದರೊಂದಿಗೆ.. ನಿಮ್ಮ ಅದೇ ಮೇಲ್‌ನಲ್ಲಿ ಪತ್ರ ಬರೆದು.. "ಇಂದ" ಮಾತ್ರ.. ನಿಮ್ಮ ಇನ್ನೊಂದು ಮೇಲ್ ಖಾತೆಯಿಂದ ಅನ್ನುವಂತೆ ಮಾಡಬಹುದು.. ಇದಕ್ಕೆ.. "Add an address to send mail from " ಅನ್ನೋ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಸಾದ್ಯವಾದಲ್ಲಿ.. ಅದರ ಬಗ್ಗೆ ಪ್ರತ್ಯೇಕ ಲೇಖನ ಬರೆಯಬೇಕು.. ನೋಡುವ.. ನಿಮ್ಮೊಲವಿನ, ಸತ್ಯ..

ಹೌದು ಸತ್ಯ, manage e-mail accountsನಲ್ಲಿ You can send mail from these accounts ಎಂಬ ಟೇಬಲ್‌ನಲ್ಲಿ ನಾವು ಸೇರಿಸಿರುವ(verify ಮಾಡಿರುವ) ಅಕೌಂಟ್‌ಗಳ ಲಿಸ್ಟ್ ಇರುತ್ತದೆ. ಅದರಲ್ಲಿ ನಾವು ಯಾವುದರಿಂದ ಮೇಲ್ ಕಳುಹಿಸಬೇಕೋ ಆ ಅಕೌಂಟಿನ ಮುಂದೆ ಇರುವ use as default ಕ್ಲಿಕ್ ಮಾಡಿದರೆ ಆಯಿತು, ಅದರಿಂದಲೇ ಮೇಲ್ ಕಳುಹಿಸಬಹುದು (ಸಾಮಾನ್ಯವಾಗಿ ನಮ್ಮ ಮೂಲ ಹಾಟ್‌ಮೇಲ್ ಅಥವಾ ಲೈವ್ ಅಕೌಂಟ್ default ಆಗಿರುತ್ತದೆ). ಅಥವಾ ಅಲ್ಲೇ ಕೆಳಗೆ ಇರುವ "Add another account to send mail from" ಕ್ಲಿಕ್ಕಿಸಿ ಇನ್ನೊಂದು ಅಕೌಂಟ್ ಸೇರಿಸಬಹುದು. ನಾನು ಹೇಳಿದ್ದು ಸರಿ ಇದೆಯೇ? -ಪ್ರಸನ್ನ.ಎಸ್.ಪಿ

ಒಂದು ಜಾಗ್ರತೆ ಅಂದರೆ ಹಿಂದಿನ ಮೇಲ್ ಉಳಿಸುವಂತೆ ಮಾಡಿದರೆ , ಆ ಮೇಲ್ ಅನ್ನು gmail ನಲ್ಲು hotmail ನಲ್ಲೂ ನೋಡಬಹುದು.ಆಳಿಸಿ ಎಂದಲ್ಲಿ ಮುಂದೆ gmail ಗೆ ಬರುವ ಎಲ್ಲಾ ಮೇಲ್ hotmailಗೆ ಬರುತ್ತೆ.