ಪೃಥ್ವಿ ಎಂಬ ಉತ್ತಮ ಚಿತ್ರ - ವಿಮರ್ಶೆ

To prevent automated spam submissions leave this field empty.

ಪೃಥ್ವಿ ಚಿತ್ರ ಉತ್ತಮವಾಗಿದೆ. ಜಿಲ್ಲಾಧಿಕಾರಿಯಾಗಿ ಪುನೀತ್ ರಾಜ್ಕುಮಾರ್ ಅಮೋಘ್ನ ಅಭಿನಯ ನೀಡಿದ್ದಾರೆ. ಸಾಮಾನ್ಯವಾಗಿ ಡ್ಯಾನ್ಸ್, ಫೈಟ್ಸ್ ಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಪುನೀತ್, ಈ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಒಬ್ಬ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಪೃಥ್ವಿ ಐ.ಎ.ಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗುತ್ತಾರೆ. ಸರ್ಕಾರ ಇವರನ್ನು ಬಳ್ಳಾರಿಗೆ ನಿಯೋಜಿಸುತ್ತದೆ. ಬಳ್ಳಾರಿಯು ಗಣಿಧಣಿಗಳ ಅಟ್ಟಹಾಸದಲ್ಲಿ ಮೆರೆಯುತ್ತಿದೆ ಎನ್ನುವುದನ್ನು ಮೊದಲು ಕುಲಂಕುಷವಾಗಿ ಅರಿತು. ಒಬ್ಬರಾದ ನಂತರ ಒಬ್ಬರಿಗೆ ನಿಧಾನವಾಗಿ ಕಡಿವಾಣ ಹಾಕುತ್ತಾ ಬರುತ್ತಾರೆ. ಅಧಿಕಾರ ಹಾಗೂ ಹಣವಿರುವ ಗಣಿಧಣಿಗಳು ಇನ್ನಿಲ್ಲದ ಹಿಂಸೆಯನ್ನು ನೀಡುತ್ತಾರೆ. ರೌಡಿ ಪಡೆಗಳಿಂದ ಕೊಲೆ ಮಾಡುವ ಸಂಚೂ ಕೂಡ ನಡೆಯುತ್ತದೆ. ಸರ್ಕಾರದಿಂದ ಕಾರ್ಯಗಳಿಗೆ ಅಡ್ಡಿ ಬರುತ್ತದೆ. ಆದರೂ  ಯಾವುದಕ್ಕೂ ಮಣಿಯದೆ ತನ್ನ ಕಾರ್ಯವನ್ನು ನಿಷ್ಠೆಯಿಂದ ಒಬ್ಬ ಅಧಿಕಾರಿ ನಿರ್ವಹಿಸುತ್ತಾನೆ. ಇದು ಇತರರಿಗೆ ಮಾದರಿಯಾಗಿದೆ ಎನ್ನುವುದನ್ನು ತೋರಿಸುತ್ತದೆ.

ಈ ಸಂದರ್ಭದಲ್ಲಿ ನಾಯಕಿ ತಮಗೆ ಬಳ್ಳಾರಿ ಬೇಡವೇ ಬೇಡ, ಬೇರೆಯಾವುದಾದರೂ ಜಿಲ್ಲೆಗೆ ಹೋಗಿ ಸಂತೋಷವಾಗಿ ಇರೋಣವೇಂದಾಗ, ಇಲ್ಲಿನ ಕೊಳೆಯನ್ನು ತೊಳೆದೇ ನನ್ನ ಮುಂದಿನ ಕಾರ್ಯ ಎಂದು ನಾಯಕ ಹೇಳುವುದು ಎಲ್ಲರನ್ನೂ ಮೆಚ್ಚಿಸುತ್ತದೆ. ಇದರ ಮಧ್ಯೆ ಅಲ್ಲಿನ ಜನರ ದಯನೀಯ ಸ್ಥಿತಿಯ ಜೀವನ, ಕಲುಷಿತ ನೀರಿನ ಸಮಸ್ಯೆಯನ್ನು ಒಂದಾದರೊಂದರಂತೆ ಬಗೆಹರಿಸುತ್ತಾ ಬರುತ್ತಾನೆ ನಾಯಕ. ತಂದೆ, ತಾಯಿಗಳ ಪ್ರೀತಿ ಬಹಳ ಚೆನ್ನಾಗಿ ತೋರಿಸಲಾಗಿದೆ. ಪ್ರೌಢ ಅಭಿನಯವನ್ನು ನೀಡಿರುವ ಪುನೀತ್ ತಾನು ಅಪ್ಪನಿಗಿಂತ ಏನೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ.

ಸಾಧು ಕೋಕಿಲರ ತಮಾಷೆ ಚೆನ್ನಾಗಿದೆ. ಚಿತ್ರದಲ್ಲಿ ಎಲ್ಲೂ ಅದ್ದೂರಿತನ ಇಲ್ಲ. ಪ್ರತಿಯೊಂದು ಸಂಭಾಷಣೆಯೂ ಚಿತ್ರದ ಕಥೆಗೆ ಸಹಕರಿಯಾಗುತ್ತಾ ಸಾಗಿದೆ.  ಅನವಶ್ಯಕ ಹಾಗೂ ಗೊಂದಲದ ಸೀನ್ಗಳು ಎಲ್ಲೂ ಸಿಗುವುದಿಲ್ಲ. ಇದು ಈಗಿನ ಸರ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮಧ್ಯದಲ್ಲಿ ಬರುವ ಉತ್ತಮ ಹಾಡುಗಳು ಮನಸ್ಸನ್ನು ಮುದಗೊಳಿಸುತ್ತದೆ. ನಿರ್ದೇಶಕ ತನ್ನ ಕಾರ್ಯ ಚೆನ್ನಾಗಿಯೇ  ನಿರ್ವಹಿಸಿದ್ದಾನೆ ಎನ್ನಬಹುದಾಗಿದೆ. ಚಿತ್ರ ಬಿಡುಗಡೆಯಾದ ನಂತರ ಗಣಿಧಣಿಗಳ ವಿರೋಧಿ ಅನಿಲ್ ಲಾಡ್ ಈ ಚಿತ್ರ ತೆಗೆಸಿದ್ದಾರೆ ಎಂಬ ಸುದ್ದಿಯೆದಾರೂ, ಪ್ರಸಕ್ತ ಸ್ಥಿತಿಗೆ ಸರಿಯಾಗಿದೆ. ದೇವೆಗೌಡ, ಶ್ರೀರಾಮುಲು,ಜನಾರ್ಧನರೆಡ್ಡಿ,ಯಡಿಯೂರಪ್ಪ ಚಿತ್ರ ನೋಡಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಟುಂಬ ಸಮೇತ ಥಿಯೇಟರಿಗೆ ತೆರಳಿ ನೋಡಬಹುದಾದ ಚಿತ್ರವಾಗಿದೆ. ಇವತ್ತಿನ ಕನ್ನಡ ಸಿನಿಮಾಗಳಲ್ಲಿ ಇದೊಂದು ಉತ್ತಮ ಚಿತ್ರ ಎಂದರೆ ತಪ್ಪಾಗಲಾರದು

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>>ದೇವೆಗೌಡ, ಶ್ರೀರಾಮುಲು,ಜನಾರ್ಧನರೆಡ್ಡಿ,ಯಡಿಯೂರಪ್ಪ ಚಿತ್ರ ನೋಡಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ<< ಇವರೆಲ್ಲ ಮನಸ್ಸಿನಲ್ಲೇ ನಕ್ಕಿರಬೇಕು..ಇಷ್ಟೆಲ್ಲಾ ಆಗಲಿಕ್ಕೆ ಬಿಡ್ತಾನೇ ಇರ್ಲಿಲ್ಲ ಎಂದೋ ಎತ್ತಂಗಡಿ ಮಾಡಿ ಬಿಡ್ತಿದ್ವಿ ಅಂತ ! ಹೆ ಹೆ.. ಚಿತ್ರ ನೋಡಿಲ್ಲ, ಸದ್ಯದಲ್ಲಿ ನೋಡ್ತೇನೋ ಇಲ್ಲೋ ಅದೂ ಗೊತ್ತಿಲ್ಲ.. ಆದರೆ ಕಥಾವಸ್ತು ತಿಳಿಸಿ ವಿಮರ್ಶೆ ಮಾಡಿದ್ದಕ್ಕೆ ಧನ್ಯವಾದಗಳು ಸುರೇಶ,

ಸುರೇಶ್, ಈ ಕೆಳಗಿನ ಒಂದು ಮಾತನ್ನುಳಿದು ನಿಮ್ಮೀ ವಿಮರ್ಶೆ ಚೆನ್ನಾಗಿದೆ, ಹಿಡಿಸಿತು. <<ದೇವೆಗೌಡ, ಶ್ರೀರಾಮುಲು,ಜನಾರ್ಧನರೆಡ್ಡಿ,ಯಡಿಯೂರಪ್ಪ ಚಿತ್ರ ನೋಡಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. >> ಈ ಚಿತ್ರ ವಿಮರ್ಶೆಯಲ್ಲಿ ಇದರ ಅಗತ್ಯ ಇದ್ದಿರಲಿಲ್ಲ, ಅಂತ ಅನಿಸ್ತು. ಯಾರು ಹೊಗಳಿದ್ದಾರೆ ಯಾರು ತೆಗಳಿದ್ದಾರೆ ಅನ್ನುವುದು ನಾವು ಮಾಡುವ ವಿಮರ್ಶೆಯ ಮೇಲೆ ಮತ್ತು ವಿಮರ್ಶೆಯನ್ನು ಓದುವ ಓದುಗನ ಮೇಲೆ ಪ್ರಭಾವ ಬೀರಬಾರದು, ಅಂತ ನನ್ನ ಅನಿಸಿಕೆ. ನನಗೆ ನಿಮ್ಮ ವಿಮರ್ಶೆಯಲ್ಲಿ ನೀವು ಚಿತ್ರದ ಬಗ್ಗೆ ಏನು ಹೇಳುತ್ತಿದ್ದೀರಿ ಅನ್ನೋದು ಮುಖ್ಯವಾಗುತ್ತದೆ. ಅವರು ಏನು ಹೇಳಿದ್ದಾರೆ ಅನ್ನೋದು ಅಲ್ಲ. ಚಿತ್ರವನ್ನು ತೆಗಳಿದವರೂ ಇರಬಹುದು, ಅಲ್ವೇ? - ಆಸು ಹೆಗ್ಡೆ ಆದರೆ ಇಲ್ಲಿ ಸಾಕಷ್ಟು ತಪ್ಪುಗಳೂ ಇವೆ. ಮತ್ತೊಮ್ಮೆ ಓದಿ ಸರಿಪಡಿಸಿದರೆ ಚೆನ್ನ.

ಸಿನಿಮಾ..ಪ್ರಶಂಸೆ ..ಸರಿ ಆದ್ರೆ ನಿಜ ಜೀವನದಲ್ಲಿ ಅವರ ಮಟ್ಟ ಯಾವಾಗಾಗುತ್ತೊ..ಅಂಥ ಪೋಲಿಸ್ ಅಧಿಕಾರಿ ಬರ್ತಾರ... ಬಂದ್ರು ಅಂತವರನ್ನ ಸರ್ಕಾರ ಬಿಡುತ್ತ...

ನಿಜ ಮಾಲತಿ. ಇದು ಸಿನಿಮಾಕ್ಕಷ್ಟೇ ಸೀಮಿತ. ನಿಜ ಜೀವನದಲ್ಲಿ ಈ ರೀತಿ ಆಗಿಬಿಟ್ಟರೆ ಅದೊಂದು ಅದ್ಭುತವೇ ಸರಿ. ಪ್ರತಿಕ್ರಿಯೆಗಾಗಿ ಧನ್ಯವಾದಗಳು