ವೋಟ್ ಬ್ಯಾಂಕ್ ಜಪ - ಕಾನೂನು ಸುವ್ಯವಸ್ಥೆಯ ನೆಪ !

To prevent automated spam submissions leave this field empty.
ಇಂದು ರಾಜೀವ್ ಗಾಂಧೀ ಹುತಾತ್ಮರಾದ ದಿನ.ಆದರೆ ನನಗೆ ಈಗ ನೆನಪಾಗುತ್ತಿರುವವರು ಅವರಮ್ಮ ಇಂದಿರಾ.'ಇಂದಿರಾ ಗಾಂಧಿ!' ಬಹುಷಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ರಕ್ಷಣೆಯ ವಿಷಯದಲ್ಲಿ ಯಾವ ರಾಜಿ ಮಾಡಿಕೊಳ್ಳದೆ ಮುನ್ನುಗ್ಗುತಿದ್ದ ಅವರಂತ ಇನ್ನೊಬ್ಬ ಪ್ರಧಾನಿ ಈ ದೇಶಕ್ಕೆ ಮತ್ತಿನ್ಯಾರು ಸಿಕ್ಕಿಲ್ಲ ಅಂದರೆ ಅದು ಉತ್ಪ್ರೇಕ್ಷೆಯಾಗಲಾರದು.ಅವರ ಬಗ್ಗೆ ಹಿಂದೊಮ್ಮೆ ಬರೆದಿದ್ದೇನೆ.ಆದರೆ ಅಲ್ಲಿ ಮರೆತಿದ್ದ ಒಂದು ವಿಷಯ ಇವತ್ತಿನ ಪರಿಸ್ಥಿತಿಗೆ ನೆನಪಾಯಿತು.

ಅವನು ಮಕ್ಬೂಲ್ ಭಟ್!, JKLF ಸ್ಥಾಪಕರಲ್ಲೊಬ್ಬ.ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಈ ಕಾಶ್ಮೀರಿ ಮುಸಲ್ಮಾನನ್ನ ಬಿಡಿಸಿಕೊಳ್ಳಲು, ಇಂಗ್ಲೆಂಡಿನಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಯಾಗಿದ್ದ ರವೀಂದ್ರ ಮ್ಹಾತ್ರೆಯವರನ್ನ ಅಪಹರಿಸಿದ ಉಗ್ರಗಾಮಿಗಳು, ಅವನ ಬಿಡುಗಡೆಯ ಷರತ್ತನ್ನ ಮುಂದಿಟ್ಟರು.ಇಂದಿರಮ್ಮ ಅಲ್ಲದೆ ಬೇರೆ ಯಾರಾದರು ಇದ್ದಿದ್ದರೆ ಬಿಡುತಿದ್ದರೆನೋ!?, ಆದ್ರೆ ಆಕೆ ಬಗ್ಗಲಿಲ್ಲ,ಕ್ಷಮಾಪಣೆ ನೀಡುವಂತೆ ಕೋರಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಬಳಿ ಹೋಗಿದ್ದ ಅರ್ಜಿ ತಿರಸ್ಕ್ರುತವಾಗುವಂತೆ ನೋಡಿಕೊಂಡರು,ಅವನನ್ನ ಗಲ್ಲಿಗೇರಿಸಿ ಇಂತವಕ್ಕೆಲ್ಲ ಭಾರತ ಬಗ್ಗುವುದಿಲ್ಲ ಅನ್ನುವ ಸ್ಪಷ್ಟ ಸಂದೇಶ ನೀಡಿದ್ದರು ಇಂದಿರಮ್ಮ.

ಇದು ನಡೆದಿದ್ದು ೧೯೮೪ ರಲ್ಲಿ,ನೇಣಿಗೆರಿಸಲ್ಪಟ್ಟವನು ಒಬ್ಬ ಕಾಶ್ಮೀರಿ ಮುಸಲ್ಮಾನ,ಕಾಶ್ಮೀರ ಹೊತ್ತಿ ಉರಿಯುತಿದ್ದ ಆ ದಿನಗಳಲ್ಲೇ ಯಾವ ಕಾನೂನು ಸುವ್ಯವಸ್ಥೆಯ ನೆಪ ಹೇಳಿ ಅವನಿಗೆ ಶಿಕ್ಷೆ ಜಾರಿ ಮಾಡುವಲ್ಲಿ ಕೇಂದ್ರ ಸರ್ಕಾರ ಹಿಂದೆ ಮುಂದೆ ನೋಡಲಿಲ್ಲ.ಆದರೆ ಈಗ ಅಫ್ಜಲ್ ಗುರುವಿನ ವಿಷಯದಲ್ಲಿ ಮಾತ್ರ ಕಾನೂನು ಸುವ್ಯವಸ್ಥೆಯ ನೆಪ ಬಂದು ಕೂತಿದೆ!

ಯಾರ ಕಿವಿಗೆ ಹೂ ಇಡಲು ಹೊರಟಿದ್ದಾರೆ ಈ ಜನ.ಕಾನೂನು ಸುವ್ಯವಸ್ಥೆಯನ್ನು ಕಾಪಡಲಾಗದ ಸರ್ಕಾರವಾದರು ಏಕಿರಬೇಕು ಅಧಿಕಾರದಲ್ಲಿ?,ಅವನನ್ನ ಜೀವಂತವಿಟ್ಟು ಮತ್ತಿನ್ಯಾವ ಅಪಹರಣದ ನಾಟಕ ಶುರುವಾಗಿ ಇದೆ 'ಕಾನೂನು ಸುವ್ಯವಸ್ಥೆಯ' ನೆಪ ಹೇಳಿ ಬಿಡುಗಡೆ ಮಾಡಲು ಕಾದಿದ್ದಾರೆ ಇವರು.ನಂಗೆ ಒಮ್ಮೊಮ್ಮೆ ಅನ್ನಿಸುವುದು ಈಗ ಇಷ್ಟೆಲ್ಲಾ logic ಮಾತಾಡೋ ರಾಜಕಾರಣಿಗಳಲ್ಲಿ ಒಂದಿಬ್ಬರು ಯಾರಾದರು ಅವತ್ತಿನ ದಾಳಿಯಲ್ಲಿ ಬಲಿಯಾಗಿದ್ದರೆ ಆಗ ಇವರಿಗೆ ಬಲಿದಾನಗೈದವರ ಕುಟುಂಬದ ಅಳಲು ಅರ್ಥವಾಗುತ್ತಿತ್ತು,ಆದರೆ ನಮ್ಮ ಭದ್ರತಾ ಪಡೆಯ ಜವಾನರು ಯಾವ ಜನ ಸೇವಕರನ್ನ ಉಳಿಸಲು ತಮ್ಮ ಎದೆಯೊಡ್ಡಿ ನಿಂತರೋ ಅಂತ ಜವಾನರ ಬಲಿದಾನಕ್ಕೆ ಅವಮಾನ ಮಾಡುತ್ತಿರುವ ಈ ಜನಸೇವಕರನ್ನ ಏನು ಮಾಡೋಣ?

'ಕಾನೂನು ಸುವ್ಯವಸ್ಥೆಯ ನೆಪ'ದಲ್ಲಿ ನಿಜವಾಗಿ ಈ ರಾಜಕಾರಣಿಗಳು,ಕೇಂದ್ರ ಸರಕಾರ ಮಾಡುತ್ತಿರುವುದು 'ವೋಟ್ ಬ್ಯಾಂಕ್ ಜಪ' ಅಷ್ಟೇ!,

ಅಂದು ಮುಂಬೈ ದಾಳಿಯಾದಾಗ ಒಂದು ಸಂದೇಶ ಹರಿದಾಡಿತ್ತು ನೆನಪಿದೆಯಾ?

'ಬೋಟಿನಲ್ಲಿ ಬಂದವರ ಬಿಡಿ,ವೋಟಿನಲ್ಲಿ ಬಂದವರ ನೋಡಿ'


- ರಾಕೇಶ್ ಶೆಟ್ಟಿ
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಮ್ಮ ದೇಶ ಕುಲಗೆಟ್ಟು ಹೋಗಿದೆ ಎನ್ನುವ ಭಾವನೆಯನ್ನು ಕಾಂಗ್ರೆಸ್ಸಿಗರು ಹಾಕುತ್ತಿದ್ದಾರೆ ಜನರ ಮನಸ್ಸಿನಲ್ಲಿ. ಇಲ್ಲದಿದ್ದರೆ ಒಬ್ಬ ತಪ್ಪಿತಸ್ಥ ನನ್ನು ಅವನು ಮಾಡಿದ ಘನಂದಾರಿ ಕೆಲಸಕ್ಕೆ ನೇಣು ಪ್ರದಾನ ಮಾಡಿದರೆ ಸುವ್ಯವಸ್ಥೆಗೆ ಹೇಗೆ ಧಕ್ಕೆ ಬರುತ್ತದೆ ಎಂದು ಕಾಂಗ್ರೆಸ್ಸಿಗರೇ ಹೇಳಬೇಕು. ೨೬/೧೧ ರ ಘಟನೆಯ ವೇಳೆ ಪಾತಕಿಗಳು ಮುಸ್ಲಿಮರಾದ್ದರಿಂದ ಹಿಂದೂಗಳಾರೂ ಮುಸ್ಲಿಮರ ಮೇಲೆ ಎರಗಲಿಲ್ಲ. ಸತ್ತ ಪಾತಕಿಗಳನ್ನು ತಮ್ಮ ಖಬರ್ಸ್ಥಾನದಲ್ಲಿ ಹೂಳಲು ಮುಸ್ಲಿಮರು ಒಪ್ಪಲಿಲ್ಲ. ಭಯೋತ್ಪಾದಕತೆಯ ಬಗ್ಗೆ ಈ ರೀತಿಯ ಒಗ್ಗಟ್ಟು ದೇಶದಲ್ಲಿರುವಾಗ ಅದ್ಯಾವ ಕಾನೂನು,ಸುವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದಾರೋ ಅವಸ್ಥೆಗೆಟ್ಟ ಕಾಂಗ್ರೆಸ್ಸಿಗರು ನಾ ಕಾಣೆ. ಇನ್ನು ವೋಟ್ ಬ್ಯಾಂಕ್. ನಮ್ಮ ವೋಟ್ ನಿಮಗೇಕೆ, ನಾವೇ ಬೇಡದ ಮೇಲೆ? ನಿಮ್ಮ ಲಜ್ಜೆಗೆಟ್ಟ ಕೆಲಸಗಳಿಗೆ ನಮ್ಮ ವೋಟ್ ಪಡೆದು ನಂತರ toilet paper ನಂತೆ ಉಪಯೋಗಿಸಿ ಬಿಸುಡುವ ನಿಮ್ಮ ಕಲೆ ಅದೆಷ್ಟು ದಿನ ರಾರಾಜಿಸುತ್ತೋ ನೋಡಬೇಕು.

ಹೌದು ಅಬ್ದುಲ್, ಮುಂಬೈ ಮಾರಣಹೋಮದ ನಂತರ ತೋರಿಸಿದ ಒಗ್ಗಟ್ಟನ್ನೇ ಈ ಪ್ರಕರಣದಲ್ಲೂ ಮುಸಲ್ಮಾನ ನಾಯಕರು ತೋರಿಸಬೇಕಿದೆ.ಯಾರು ಸಿತ್ತಿಗೆಳುತ್ತಾರೆ ಅನ್ನೋ ಭ್ರಮೆ ಸೃಷ್ಟಿಸಿಲಾಗುತ್ತಿದೆಯೋ ಆ ಸಮುದಾಯದ ಒಬ್ಬನೇ ನಾಯಕ ದೇಶ ದ್ರೋಹಿಗೆ ಶಿಕ್ಷೆಯಾದರೆ ನಮಗೆ ಸಂತೋಷ,ನಮ್ಮ ಹೆಸರಲ್ಲಿ ನೀವು ನಾಟಕ ಮಾಡುವುದನ್ನ ನಿಲ್ಲಿಸಿ ಅಂತ ಹೇಳುತ್ತಿಲ್ಲ ಅನ್ನುವುದೇ ನೋವಿನ ಸಂಗತಿ. >>ಇನ್ನು ವೋಟ್ ಬ್ಯಾಂಕ್. ನಮ್ಮ ವೋಟ್ ನಿಮಗೇಕೆ, ನಾವೇ ಬೇಡದ ಮೇಲೆ? ನಿಮ್ಮ ಲಜ್ಜೆಗೆಟ್ಟ ಕೆಲಸಗಳಿಗೆ ನಮ್ಮ ವೋಟ್ ಪಡೆದು ನಂತರ toilet paper ನಂತೆ ಉಪಯೋಗಿಸಿ ಬಿಸುಡುವ ನಿಮ್ಮ ಕಲೆ ಅದೆಷ್ಟು ದಿನ ರಾರಾಜಿಸುತ್ತೋ ನೋಡಬೇಕು. ಈ ಮಾತನ್ನು ನೀವು ಜಾತ್ಯಾತೀತ ಫೋಸು ಕೊಡುತ್ತಿರುವವರಿಗೆ ಹೇಳಿದ್ದಿರಾ ಅಂದು ಕೊಂಡಿದ್ದೇನೆ.actually ಜಾಗೃತರಾಗಬೇಕಾದವರು ಮುಸಲ್ಮಾನ ಸಮುದಾಯದವರೇ.ಗುರಾಣಿಯಂತೆ ಬಳಸಿಕೊಳ್ಳುತ್ತಿರುವ ಸಿಕ್ಯುಲರ್ ಪಕ್ಷಗಳು,ಮಾಧ್ಯಮಗಳು,ಬುದ್ದಿಜೀವಿಗಳಿಗೆ ನಿಮ್ಮ ಕಡೆಯಿಂದಲೇ ತಪರಾಕಿಗಳು ಬೀಳಬೇಕಿದೆ.ಒಂದು ಬಾರಿ ಈ ರೀತಿಯ ವಾತಾವರಣವನ್ನ ನಮ್ಮಮುಸ್ಲಿಂ ನಾಯಕರು ಮಾಡಿದರೆಂದರೆ ಈ ದೇಶದಲ್ಲಿ ಬದಲಾವಣೆಯ ಗಾಳಿ ತಂತಾನೇ ಬೀಸಲಿದೆ.

ಹೌದು! ಶೆಟ್ಟರು ಹೇಳಿದ್ದು ಸರಿ! ಬದಲಾವಣೆಯ ಆರ೦ಭ ಅಲ್ಲಿ೦ದಲೇ ಆರ೦ಭವಾಗಬೇಕಿದೆ. ತಮ್ಮ ದೇಶ ನಿಷ್ಠೆಯನ್ನು ಘ೦ಟಾಘೋಷವಾಗಿ ಮೊಳಗಿಸುವ ಕಾರ್ಯ ಅವರಿ೦ದ ಆಗಬೇಕಿದೆ. ನೀವು ಅವನನ್ನು ನೇಣು ಹಾಕಿ, ನಮಗೇನೂ ಅದರಿ೦ದ ತೊ೦ದರೆಯಿಲ್ಲ ಎ೦ಬ ಹೇಳಿಕೆಯನ್ನು ಕೇವಲ ಕೆಲವೇ ಮುಸ್ಲಿ೦ ಮುಖ೦ಡರು ನೀಡಿದರೆ, ನೋಡಿ ಕಾ೦ಗ್ರೆಸ್ ಆಟವನ್ನು! ಅದರ ಬದಲಾಗಬಹುದಾದ ವೇಶವನ್ನು! ಮೂಲತ: ಇಷ್ಟೇ! ದೇಶದ ರಾಜಕೀಯ ಪಕ್ಷಗಳಿಗೆಲ್ಲಕ್ಕೂ ನಾವು ಸೋದರರು ಪರಸ್ಪರ ಹೊಡೆದಾದಿ ಸಾಯಬೇಕು! ಸಾ೦ತ್ವನ ಮಾಡಲು ಅವರು ಬರಬೇಕು! ನಾವು ನ೦ಬಬೇಕು! ಪುನ: ಓಟು ಹಾಕಬೇಕು! ಅವರು ಕುರ್ಚಿಯಲ್ಲಿ ಕೂರಬೇಕು! ಪುನ: ಕೋಮು ಗಲಭೆಗಳಾಗಬೇಕು! ಮತ್ತದೇ........... ಪುನರಾವರ್ತನೆ! ಕಾಲ ಚಕ್ರ ತಿರುಗಿದಹಾಗೆ! ಚಕ್ರದಡಿಯಲ್ಲಿ ಸಿಲುಕಿ ಸಾಯುವವರು ನಾವುಗಳು! ಚಕ್ರ ತಿರುಗಿಸುವವನು ಕಾಲನಲ್ಲ! ಬದಲಾಗಿ ನಮ್ಮ ರಾಜಕೀಯ ಧುರೀಣರು! ಇವರ ವೇಶ ನಮಗೆ ಅರ್ಥವಾಗುತ್ತಿಲ್ಲ ಅ೦ಥ ಅವರು ತಿಳ್ಕೊ೦ಡಿದಾರೆ! ನಮಗೆ ಅರ್ಥವಾದರೂ ಅದನ್ನು ತೋರ್ಪಡಿಸುತ್ತಿಲ್ಲ! ಅದೇ ವಿಪರ್ಯಾಸ! ನಮಗೆ ಮತಿ ಇಲ್ಲ! ಅವರಿಗೆ ಗತಿ ಇಲ್ಲ!!!

ನಾವಡರೆ, ಸರಿಯಾಗಿ ಹೇಳಿದ್ದಿರಿ.ಇಲ್ಲದೆ ಇರೋ ಭೂತವನ್ನ ಇದೆ ಇದೆ ಅಂತೇಳಿ,ಬೆಂಕಿ ಹಚ್ಚಿ ಅದೇ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವ ಈ ರಾಜಕಾರಣಿಗಳಿಗೆ ಬುದ್ದಿ ಕಲಿಸಬೇಕೆಂದರೆ ಜನಜಾಗೃತರಾಗಬೇಕು

ಭಯೊತ್ಪಾದನೆ ನಿರ್ಮೂಲನೆ ಮಾಡಿ...ಅಫ್ಜಲ್,ಕಸಬ್ ನ೦ತಹ ಉಗ್ರರನ್ನು ಗಲ್ಲಿಗೆರಿಸಿ...ಅ೦ತ ಸುಪ್ರೀ೦ಕೊರ್ಟ್ ಹೇಳಿದ್ರೆ,ಈ ಕೇ೦ದ್ರ ಸರ್ಕಾರದವರು 'ರಾಜೀವ್ ಗಾ೦ಧಿ' ಜನ್ಮ ದಿನ ನ "ಭಯೊತ್ಪಾದನಾ ವಿರೋಧಿ ದಿನ ಅ೦ತ "ಸೆಮಿನಾರ್" ಮಾಡ್ತಾರೆ...., ಎ೦ಥಾ ಸರ್ಕಾರ ರಿ ನಮ್ದು.......ಇದನ್ನೆನಾ ಅನ್ನೊದು ಜ್ಯಾತ್ಯಾತೀತ,ಜನಪರ, ಸರ್ಕಾರ ಅ೦ತ................!!!!!!!!

ನಮ್ಮ್ ದುರಾದೃಷ್ಟ ದೇಶದ ರಕ್ಷಣೆ ವಿಚಾರದಲ್ಲಿ ರಾಜಿಯಾಗುವಂತ ಪಕ್ಷ ಅಧಿಕಾರದಲ್ಲಿದ್ದರೆ, ಕಿವಿ ಹಿಂಡಿ ಬುದ್ದಿ ಹೇಳಬೇಕಿದ್ದ ವಿಪಕ್ಷದವ್ರು ತೆಪ್ಪಗೆ ಇದ್ದಾರೆ!

ಅದೆಲ್ಲಾ ಬಿಡಿ ರಾಕೇಶ್, ಸುಮ್ನೆ ವೋಟ್ ಹಾಕಿ. ಸೋನಿಯಾ ಮೇಡಂ ಮಿಕ್ಕಿದ್ದೆಲ್ಲಾ ನೋಡಿಕೊಳ್ತಾರೆ! ಎಲ್ಲಿಯವರೆಗೆ ಈ ಕಾಂಗ್ರೆಸ್ಸಿನವರು ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿರುತ್ತಾರೋ ಅಲ್ಲಿಯವರೆಗೂ ಇಂತಹ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಅಣಕವಿದು. ಅಂದ ಹಾಗೆ ಇಂದಿರಮ್ಮ "ಗ್ಯಾಂಡಿ"ಯನ್ನು ರಾತ್ರೋರಾತ್ರಿ ಗಾಂಧಿ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ, ನಾವೇಕೆ ಇವರನ್ನು ಕೇವಲ ಅವರ ಹೆಸರಿನಿಂದ ಮಾತ್ರ ಕರೆಯಬಾರದು? ಕೊನೆ ಪಕ್ಷ ಸಂಪದದಲ್ಲಿಯಾದರೂ ಈ ನೆಹರೂ ವಂಶದ ಕುಡಿಗಳನ್ನು "ಗಾಂಧಿ" ಯನ್ನು ಬಿಟ್ಟು ಸಂಬೋಧಿಸಬಾರದೇಕೆ?

ಮಂಜುನಾಥ್, ಅವರು 'ಗ್ಯಾಂಡಿ' ಆದರೂ ಚಿಂತೆ ಇಲ್ಲ ಬಿಡಿ.ರಾಷ್ಟ್ರದ ರಕ್ಷಣೆ ವಿಷಯದಲ್ಲಿ ಅವರು ನಡೆದುಕೊಂಡ ರೀತಿ ಇದೆಯಲ್ಲ ಅದು ಎಲ್ಲ ಪಕ್ಷಗಳ ನಾಯಕರಿಗೆ ಮಾದರಿಯಾಗುವಂತದ್ದು.ಅಮೆರಿಕಾದಂತಹ ಅಮೆರಿಕಕ್ಕೆ ೭೧ರ ಯುದ್ಧದಲ್ಲಿ ತಪರಾಕಿ ಹಾಕಿದ್ದರು. ಇನ್ನ ಅವರ ಹೆಸರಿನ ಮುಂದೆ 'ಗಾಂಧೀ' ಅಂತ ಬಂದಿದ್ದು ಅವರ ಗಂಡನಿಂದ,ಮತ್ತು ಆ ಹೆಸರಿನ ಪಾರ್ಸಿ ಮನೆತನಗಳು ಈಗಲೂ ಸಾಕ್ಷಿಯಾಗಿ ಇವೆ, ಅಂತ ಓದಿದ ನೆನಪು.

ಉತ್ತಮ ಲೇಖನ ರಾಕೇಶ್. ನೋಡುತ್ತಾ ಕುಳಿತಿರಬೇಕು ಅಷ್ಟೆ, ಕಸಬ್., ಅಫ್ಜಲ್ ಗೆ ಎಲ್ಲ ಸವಲತ್ತುಗಳು ಸಿಕ್ಕಿ ಗುರುತು ಚೀಟಿ ಸಹ ಸಿಗಬಹುದು ಒಂದು ದಿನ. ಒಬ್ಬ ಚಿತ್ರಕಲಾವಿದ ಹಿಂದು ದೇವರುಗಳನ್ನು ಕೆಟ್ಟದಾಗಿ ಚಿತ್ರಿಸಿ, ಅದನ್ನ ಜನ ಪ್ರತಿಭಟಿಸಿದರೆ ಅದು ಅಭಿವ್ಯಕ್ತಿ ಸ್ವಾತಂತ್ರಕ್ಕೆ ವಿರೋಧ ಎಂದು ಬೊಬ್ಬೆ ಇಡುವ ಜನ, ಫ಼ೇಸ್ ಬುಕ್, ಯೂಟ್ಯೂಬ್ ಗಳನ್ನು ಇಡಿ ದೇಶದಲ್ಲೇ ಯಾರೂ ನೋಡಬಾರದೆಂಬ ಕಟ್ಟುಪಾಡಲೆ ವಿದಿಸಿರುವ ವಿರುದ್ದ ಎಲ್ಲೂ ಬರೆದೆ ಇಲ್ಲ? ಅಂದ ಹಾಗೆ ಆ ರೀತಿ ಕಟ್ಟುಪಾಡು ಯಾಕೆ ವಿಧಿಸಿದ್ದಾರೆ ಗೊತ್ತೆ?

>> ನೋಡುತ್ತಾ ಕುಳಿತಿರಬೇಕು ಅಷ್ಟೆ, ಕಸಬ್., ಅಫ್ಜಲ್ ಗೆ ಎಲ್ಲ ಸವಲತ್ತುಗಳು ಸಿಕ್ಕಿ ಗುರುತು ಚೀಟಿ ಸಹ ಸಿಗಬಹುದು ಒಂದು ದಿನ. ವೋಟಿಗೋಸ್ಕರ ದೇಶವನ್ನ ಅಡ ಇಡಲು ಹೇಸದ ಇಂತ ಪಕ್ಷಗಳಿರುವ ತನಕ ಇಲ್ಲಿ ಯಾವುದು ಅಸಾಧ್ಯ ಅಲ್ಲ ಬಿಡಿ. >>ಅಂದ ಹಾಗೆ ಆ ರೀತಿ ಕಟ್ಟುಪಾಡು ಯಾಕೆ ವಿಧಿಸಿದ್ದಾರೆ ಗೊತ್ತೆ? 'ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ' :) ನನ್ನೀ ಭಾಸ್ಕರ್ :)