ಎಸ್ಸೆಮ್ಮೆಸ್ಸಾಯಣ

To prevent automated spam submissions leave this field empty.

                                     Hi frnds! gm/ga/ge :) hd ur brkfst/lunch/din ? 

  ಅರ್ಥ ಆಗ್ಲಿಲ್ವಾ? ನನಗೂ ಮೊದಮೊದಲು ಇದು ಅರ್ಥ ಆಗ್ತಾ ಇರ್ಲಿಲ್ಲ. ಈಗಿನ ಎಸ್ಸೆಮ್ಮೆಸ್ಸಿಗರಿಗಂತೂ ಇವೆಲ್ಲ ಲೀಲಾಜಾಲ. ur ಅಂದ್ರೆ your. ನಡುವೆ space ಕೊಟ್ರೆ you are. gm ಅಂದ್ರೆ good morning..break fast ಗೆ brkfst. ಹೀಗೆ SMS ಭಾಷೆ SMS ತಜ್ಞರಿಗೆ ಮಾತ್ರ ಗೊತ್ತು.

  SMS ಎಂದರೆ ಏನೆಂದು ನನಗೆ ತಿಳಿದದ್ದೇ ಕಾಲೇಜು ಮೆಟ್ಟಿಲು ಹತ್ತಿದ ಮೇಲೆ. ಪದವಿಯಲ್ಲಿ ಓದುತ್ತಿದ್ದಾಗ SMS ನಲ್ಲಿ ಬಳಸುತ್ತಿದ್ದ ಯಾವ short forms ಕೂಡಾ ನನಗೆ ಅರ್ಥವಾಗಿತ್ತಿರಲಿಲ್ಲ. ಈಗ ಕೆಲ ತಿಂಗಳುಗಳ ಕೆಳಗೆ ನನಗೆಂದೇ ಕೊಡಿಸಿದ ಮೊಬೈಲ್ ನಲ್ಲೇ free SMS ಗಳಿದ್ದರೂ ನಾನದನ್ನು ಅಷ್ಟಾಗಿ ಬಳಸುತ್ತಿರಲಿಲ್ಲ. ಆದರೆ ಈಗಂತೂ SMS expert ಆಗಿಬಿಟ್ಟಿರುವೆ. ಈ ಹುಡುಗಿಯರಿಗೆ ಯಾಕಿಷ್ಟು ಮೊಬೈಲ್ ಹುಚ್ಚೆಂದು ಈಗ ತಿಳಿಯತೊಡಗಿದೆ. ನಿಜ ಹೇಳಬೇಕೆಂದರೆ ಬರವಣಿಗೆಯ ವೇಗಕ್ಕಿಂತಾ ಈಗ ಟೈಪಿಸುವ ವೇಗವೇ ಹೆಚ್ಚಾಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ short forms ಅದೆಷ್ಟು ಬೆರೆತುಹೋಗಿದೆಯೆಂದರೆ, ಪರೀಕ್ಷೆಯ ಉತ್ತರ ಪತ್ರಿಕೆಯಲ್ಲೂ ಅವು ಅರಿವಿಲ್ಲದಂತೆ ಇಳಿಯತೊಡಗುತ್ತವೆ! ಇದು ಒಂದು ರೀತಿಯ ಸಮಯ ರಕ್ಷಕ ಕೂಡಾ. ಆದರೆ ಈ ರೀತಿಯ ಸಂಕ್ಷಿಪ್ತತೆಯನ್ನು ವಿಶ್ವವಿದ್ಯಾಲಯಗಳು ನಿಶೇಧಿಸಿರುವುದು ವಿದ್ಯಾರ್ಥಿಗಳ ಪಾಲಿಗೆ ಒಂದು ವಿಷಾದಕರ ಸಂಗತಿ.
ನಿಜ ಹೇಳಬೇಕೆಂದರೆ, "ಟಾಕ್-ಟಾಕ್" ಗಿಂತ "ಟಿಕ್-ಟಿಕ್ಕೇ" ಉತ್ತಮ ಸಂವಾಹಕ

  • ಮಾತಿನಲ್ಲಿ ಹೇಳಲಾರದ ಅದೆಷ್ಟೋ ಮಾತುಗಳನ್ನು ಸ್ಮ್ಸ್ ಆಗಿ ಪರಿವರ್ತಿಸಿ ಉದ್ಧೇಶಿತ ವ್ಯಕ್ತಿಯನ್ನು ತಿವಿಯಬಹುದು...ಹೃದಯದ ಮಿಡಿತಗಳನ್ನೆಲ್ಲಾ ಟಿಕ್ ಟಿಕ್ ಎಂದು ರವಾನಿಸಬಹುದು..
  • Short Moral Service ಆಗಿ ಕೂಡಾ ಬಳಸಬಹುದು.
  •  smiley ಗಳ ಮೂಲಕ ಭಾವನೆಗಳನ್ನೂ ವ್ಯಕ್ತಪದಿಸಬಹುದು :).. ಗೆಳೆಯ ಗೆಳತಿಯರೊಂದಿಗೆ ಮನಸ್ಸು ಬಿಚ್ಚಿ ಮಾತಾಡಬಹುದು.
  • ಅಷ್ಟೇ ಅಲ್ಲ. ನಮ್ಮ ಸಂವಹನಾ ಕೌಶಲವನ್ನೂ ವೃದ್ಧಿಸಿಕೊಳ್ಳಬಹುದು..

   hmmm.. ನೊಡಿದ್ರಾ.. ಒಂದು ಪಟ್ಟಿಯೇ ತಯಾರಾಗುತ್ತದೆ..

    ಹೀಗೆ ಸಂಕ್ಷಿಪ್ತ ಸಂದೇಶ ಸೇವೆ (SMS), ಸಂವಹನ ತಂತ್ರಜ್ಞಾನದ ಒಂದು ಅಪ್ರತಿಮ ವರವಾಗಿದೆ. ಆದರೂ ಇದರ ಗರಿಷ್ಠ ಸದುಪಯೋಗ ಸಂಪೂರ್ಣ ನಮ್ಮ ಜವಾಬ್ದಾರಿಯಾಗಿದೆ.
    ಅಧುನಿಕತೆಯ ಉಪವಸ್ತುವಾದ ಸಂಕ್ಷಿಪ್ತತೆ, ಮೊಬೈಲ್ ಹ್ಯಾಂಡ್ ಸೆಟ್ ನಿಂದ ಹಿಡಿದು, ಬರೆಯುವ ಪದಗಳ ವರೆಗೆ ಯಾವುದನ್ನೂ ಬಿಟ್ಟಿಲ್ಲ. ಇಡೀ ಜಗತ್ತೇ ಚಿಕ್ಕದಾಗಿ ಜಾಗತಿಕ ಹಳ್ಳಿ(global village)ಯಾಗಿಲ್ಲವೇ? ಮುಂದೊಂದು ದಿನ ಇಡೀ ವಿಶ್ವವೇ ಚಿಕ್ಕದಾಗಿ, universal planet ಆದರೂ ಆಶ್ಚರ್ಯವೇನಿಲ್ಲ.
ನೀವೇನಂತಿರಿ?..

    ok frnds.. bye.. gn/ H.A.N.D(have a nice day)...tc :)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರಾಧಿಕ ಅವರೆ, ಮನದಲ್ಲಿರುವ ಹಲವಾರು ಭಾವಗಳನ್ನು ಟಿಕ್ ಟಿಕ್ ನಲ್ಲಿ ಹಿಡಿದಿಡೋದು ಕಷ್ಟಾರೀ. ಅವಸರದಲ್ಲಿರುವಾಗ, ನೆಟ್ವರ್ಕ್ ಸಿಗದಿರುವಾಗ ಎಸ್ಸೆಮ್ಮೆಸ್ ಉತ್ತಮ ನಿಜ. ಆದರೆ ನೀವೆಂದಂತೆ ಹೃದಯದ ಮಿಡಿತಗಳನ್ನೆಲ್ಲ ಇದರಲ್ಲಿ ಹಿಡಿದಿಡೋಕೆ ಆಗಲ್ಲಾರೀ. ಮೊದಲೆಲ್ಲ ಇನ್ಲ್ಯಾಂಡ್ ಲೆಟರ್, ಉದ್ದನೆಯ ಹಾಳೆಯಲ್ಲಿ ಏನೆಲ್ಲ, ಎಷ್ಟೆಲ್ಲ ಭಾವನೆಗಳನ್ನು ನವಿರಾಗಿ, ಮಧುರವಾಗಿ ಹಿಡಿದಿಡಬಹುದಾಗಿತ್ತು, ಕಿರುಬೆರಳ ಅಳತೆಯಲ್ಲಿರುವ ಮೊಬೈಲ್ ನಲ್ಲಿ ಅದೆಲ್ಲ ಸಾಧ್ಯವಿಲ್ಲ. ಅದರೆ ಭಾಷೆಯೋ, ಅದನ್ನು ಅರ್ಥ ಮಾಡ್ಕೊಳ್ಳೋದೋ, ಶಾರ್ಟ್ ಆಗಿ ಬರೆಯೋದೋ, ದೇವರಿಗೇ ಪ್ರೀತಿ.