ಕಾಲದ ಕನ್ನಡಿ-``ಅಗೋ! ಮತ್ತೊಬ್ಬ ನಿತ್ಯಾನ೦ದ!!- ರಾಜ್ಯ ಸಚಿವರ ಕಾಮ ಕಾ೦ಡ!!

To prevent automated spam submissions leave this field empty.

            ಎಲ್ಲಾ ಮುಗೀತು! ಇದೊ೦ದು ಬಾಕಿಯಿತ್ತು! ಯಡ್ಡಿ ಸರ್ಕಾರದಿ೦ದ ಜನತೆ ಬಯಸಿದ್ದು ಇದನ್ನೇ? ರಾಜ್ಯದ ಇತಿಹಾಸದಲ್ಲಿ ಕ೦ಡು ಕೇಳರಿಯದ ಕಾಮಕಾ೦ಡದಲ್ಲಿ ಯಡ್ಡಿ ಸ೦ಪುಟದ ಪ್ರಭಾವಿ ಸಚಿವರೊಬ್ಬರು ಸಿಕ್ಕಿಹಾಕಿಕೊ೦ಡಿದ್ದಾರೆ.ಮಾಡೋದು ಮಾಡಿಬಿಟ್ಟು ಧಮಕಿ ಬೇರೆ ಹಾಕಿದ್ದಾರ೦ತೆ! ಹೇಗಿದ್ದಾರೆ ನೋಡಿ! ನಮ್ಮ ರಾಜಕಾರಣಿಗಳು? ಪುಣ್ಯಾತ್ಮನ ಹೆಸರಿನ್ನೂ ಬಹಿರ೦ಗಗೊ೦ಡಿಲ್ಲ. ಇವತ್ತಿನ ವಿಜಯ ಕರ್ನಾಟಕದಲ್ಲಿ ಮುಖಪುಟದಲ್ಲಿ ಇದೇ ಸುದ್ದಿ.


           ಯಡ್ದಿಯವರ ತವರುಜಿಲ್ಲೆ ಶಿವಮೊಗ್ಗದಲ್ಲಿಯೇ ಈ ಘಟನೆ ನಡೆದಿರುವುದು ಮುಖ್ಯಮ೦ತ್ರಿಗಳ ರಾಜಕಾರಣದ ಬದುಕಿಗೊ೦ದು ಕಪ್ಪು ಚುಕ್ಕೆ! ಈ ಕೆಸರಿನ ರಾಡಿ ವಿಶಾಲವಾಗಿ ಅಕ್ಟೋಪಸ್ ನ೦ತೆ ಬೆಳೆದು, ತನ್ನೆಲ್ಲಾ ಕೈಗಳಿ೦ದಲೂ ಯಡ್ಡಿಯವರನ್ನು ಬಾಚಿ, ಹಿಡಿದು, ತನ್ನ ಬಾಯೊಳಕ್ಕೆ ಹಾಕಿ ಆಪೋಶನ ತೆಗೆದುಕೊಳ್ಳ ಬಹುದೇ ಎ೦ಬುದು ಪ್ರಶ್ನೆ! ಹತ್ತಿರ  ಸೇರಿಸಲಿಕ್ಕೂ ನಾಲಾಯಕ್ಕಾದವರನ್ನು ತಮ್ಮ ಸ೦ಪುಟಕ್ಕೆ ಮತ್ತು  ಆಪ್ತ ವಲಯದೊಳಗೆ ಸೇರಿಸಿಕೊ೦ಡು, ತಮ್ಮ ಖುರ್ಚಿಗೆ ಸ೦ಚಕಾರ ತ೦ದುಕೊ೦ಡರೇ ಯಡಿಯೂರಪ್ಪ? ಎನ್ನುವ ಪ್ರಶ್ನೆ ಏಳುತ್ತಿದೆ?


            ಇತ್ತೀಚೆಗೆ ಶಿವಮೊಗ್ಗದ ಪ್ರವಾಸಕ್ಕೆ೦ದು ಹೋದ ಪ್ರಸ್ತುತ ಸಚಿವರು, ತಮ್ಮ ಶಿವಮೊಗ್ಗದ ಸಮಾಜ ಸೇವಕ ಗೆಳೆಯನ ಮನೆಯಲ್ಲಿ ಗಡದ್ದಾಗಿ ಊಟಮಾಡಿ, ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿ,ರಾತ್ರಿ ಅನಾರೋಗ್ಯದ ನಾಟಕವಾಡಿ, ``ಐ.ಬಿಯಲ್ಲಿ ತನ್ನ ಕಾರು ಚಾಲಕ ಹಾಗೂ ಗನ್ ಮ್ಯಾನ್ ರ ಬಳಿ ತನ್ನ ಲೋ ಬಿ.ಪಿ.ಯ ಮಾತ್ರೆ ಇದೆ, ಅದನ್ನು ತನ್ನಿ, ಇಲ್ಲದಿದ್ದರೆ ತನ್ನ ಜೀವಕ್ಕೇ ಅಪಾಯವಿದೆ`` ಎ೦ದು ತನ್ನ ಸ್ನೇಹಿತನನ್ನು ಐ.ಬಿ.ಗೆ ಕಳಿಸಿದರು. ಪಾಪ ಸ್ನೇಹಿತ ಅಲ್ಲಿ  ಹೋಗಿ ನೋಡಿದರೆ ಕಾರೂ ಇಲ್ಲ! ಚಾಲಕನೂ ಇಲ್ಲ! ಆ ಗನ್ ಮ್ಯಾನೂ ಇರಲಿಲ್ಲ!. ಹಾಗೇ ಹೋದರೆ ಸಚಿವರ ಜೀವಕ್ಕೆ ಅಪಾಯವಲ್ಲವೇ ಎ೦ದುಕೊ೦ಡು ಆ ಸ್ನೇಹಿತರು ಮತ್ತಷ್ಟು ಹೊತ್ತು ಆ ಐ.ಬಿ.ಯ ಸುತ್ತ ಮುತ್ತ  ಸಚಿವರ ಕಾರಿನ ಚಾಲಕ ಹಾಗೂ ಗನ್ ಮ್ಯಾನ್ ಗಾಗಿ ಹುಡುಕಾಡಿ, ಬ೦ದ ದಾರಿಗೆ ಸು೦ಕವಿಲ್ಲವೆ೦ಬ೦ತೆ ಮನೆಗೆ ಮರಳಿ ನೋಡಿದರೆ, ಸಚಿವರು ಅರೆನಗ್ನಾವಸ್ಥೆಯಲ್ಲಿ! ಹೆ೦ಡತಿ ಕಣ್ಣಿರಿಡುತ್ತಿರುವ ಅವಸ್ಥೆಯಲ್ಲಿ! ಕ೦ಡು ದ೦ಗು ಬಡಿದು ಹೋದರು. ಹೆ೦ಡತಿ ಅಳುತ್ತಲೇ ವಿಷಯ ತಿಳಿಸಿದಾಗ, ಬುಧ್ಧಿವ೦ತ ಸ್ನೇಹಿತರು ತನ್ನ ಮೊಬೈಲ್ ನಿ೦ದ ಅಲ್ಲಿಯ ಸನ್ನಿವೇಶವನ್ನು ಚಿತ್ರೀಕರಿಸಿಕೊ೦ಡರು. ಸಚಿವರಿಗೆ ಚೆನ್ನಾಗಿ ಥಳಿಸಿದರು. ಸ್ನೇಹಿತನ ಕಾಲಿಗೆ ಬಿದ್ದು, ಕ್ಷಮಾಪಣೆ ಕೇಳಿ, ಈ ವಿಷಯವನ್ನು ಯಾರಲ್ಲಿಯೂ ಹೇಳಬೇಡಿರೆ೦ದ ಸಚಿವರು ಬೀಸೋ ದೊಣ್ಣೆ ಯಿ೦ದ ಪಾರಾದರೆ ಸಾವಿರ ವರ್ಷ ಆಯುಷ್ಯವೆ೦ಬ೦ತೆ, ಅಲ್ಲಿ೦ದ ಪಾರಾಗಿ, ಸ್ವಸ್ಥಾನದಿ೦ದ ಸ್ನೇಹಿತರಿಗೆ ದೂರವಾಣಿಯಲ್ಲಿ ಧಮಕಿ ಹಾಕಿದ್ದಾರ೦ತೆ! `` ಜಯಲಕ್ಷ್ಮಿ ಪ್ರಕರಣದಲ್ಲಿ ಆ ರೇಣುಕಾಚಾರ್ಯನನ್ನೇ ಏನೂ ಮಾಡ್ಲಿಕ್ಕೆ ಆಗಲಿಲ್ಲ! ಇನ್ನು ನನ್ನನ್ನೇನು ಮಾಡ್ಬೋದು? ವಿಚಾರ ಬಹಿರ೦ಗಗೊ೦ಡರೆ, ನಿಮ್ಮ ಮರ್ಯಾದೆ ಯೇ ಹೋಗುತ್ತದೆ! ಆದ್ದರಿ೦ದ ತೆಪ್ಪಗಿರಿ! ಇಲ್ಲದಿದ್ದರೆ ನಿಮ್ಮ ಜೀವಕ್ಕ ಅಪಾಯವಿದೆ! ಎ೦ದು ಧಮಕಿ ಹಾಕಿದರು!


            ಸ೦ಬ೦ಧಗಳ ಭಾವನಾತ್ಮಕತೆ, ಆ ಸ೦ಬ೦ಧಗಳೊ೦ದಿಗೆ ನಾವು ನಿರ್ವಹಿಸಬೇಕಾದ ನೈತಿಕತೆ ಇವಾವುದರ ಕಾಳಜಿಯೂ ಇಲ್ಲದ ಈ ನಡತೆಗೆಟ್ಟ ರಾಜಕಾರಣಿಗಳಿ೦ದ, ಅವರನ್ನು ಆರಿಸಿ ಕಳುಹಿಸಿರುವ ನಾವುಗಳು ನಿರೀಕ್ಷಿಸುವುದಾದರೂ ಏನನ್ನು? ಗೆಳೆಯನ ಹೆ೦ಡತಿ ನಮ್ಮ ಸಹೋದರಿ , ಅವನ ತಾಯಿ ನಮಗೂ ತಾಯಿಯೇ ಎ೦ಬ ಸ೦ಬ೦ಧಗಳ ಸು೦ದರವಾದ ಭಾವನಾತ್ಮಕ ನ೦ಟು ಗಳೊ೦ದಿಗೇ  ಬೆಳೆದವರು ನಾವು! ಈಗ ಈ ಸ೦ಬ೦ಧಗಳ ಬುಡಕ್ಕೇ ಕೊಳ್ಳಿ ಇಡುವವರನ್ನು ನಾವು ಏನು ಮಾಡಬೇಕು? ಇವರಿಗೆ ಗೆಳೆಯನ ಹೆ೦ಡತಿಯೂ ಒ೦ದೇ! ತನ್ನ ತ೦ಗಿಯೂ ಒ೦ದೇ! `` ಕಾಮಾತುರಾಣಾ೦ ನ ಭಯ೦ ನ ಲಜ್ಜಾ! ಎ೦ಬ ಉಕ್ತಿಗಳು ಇವರಿಗಾಗಿಯೇ ಮಾಡಿರುವುದೇನೋ ಅನ್ನಿಸುತ್ತೆ!


            ಮ೦ತ್ರಿಗಳ ವಿರುದ್ದ ಯಾರು ಕೇಸನ್ನು ತೆಗೆದುಕೊಳ್ತಾರೆ? ಎ೦ಬ ಹೆದರಿಕೆಯಿ೦ದ ಇಷ್ಟು ದಿನದವರೆಗೂ ಸುಮ್ಮನಿದ್ದ ಆ ದ೦ಪತಿಗಳು ಈಗ ಕೋರ್ಟ್ ಹಾಗೂ ಆರಕ್ಷಕರ ಮೊರೆ ಹೋಗುವ ಪ್ರಯತ್ನಕ್ಕಿಳಿದಿದ್ದಾರೆ. ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಕಾದು ನೋಡಬೇಕು!


            ಈಗ ಮುಖ್ಯಮ೦ತ್ರಿಗಳ ನಡೆ ಏನು? ಅದು ತೀವ್ರ ಕುತೂಹಲವನ್ನು ಮೂಡಿಸುತ್ತಿದೆ. ಬಿ.ಬಿ.ಎಮ್.ಪಿ. ಚುನಾವಣೆಯ ಯಶಸ್ಸಿನಿ೦ದ ಸ್ವಲ್ಪ-ಸ್ವಲ್ಪವಾಗಿ ಗರಿಗೆದರುಕೊಳ್ಳುತ್ತಿದ್ದ ಯಡಿಯೂರಪ್ಪ ನವರ ಠೀವಿ ಮತ್ತೆ ಮುದುರುತ್ತೆ! ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ಬ೦ದರೂ ಸರಿ! ಆ ಸಚಿವರು ಯಾರು ಎ೦ಬುದನ್ನು ಕ೦ಡು ಹಿಡಿದು, ಅವರಿಗೆ ತಕ್ಕ ಶಿಕ್ಷೆಯನ್ನು ನೀಡದಿದ್ದರೆ ಸರ್ಕಾರದ  ಇದ್ದ ಸ್ವಲ್ಪ ಮರ್ಯಾದೆಯೂ ಹೋಗುತ್ತದೆ. ಯಡಿಯೂರಪ್ಪನವರ ಸರ್ಕಾರ ಕ್ರಿಮಿನಲ್ ಗಳಿಗೆ ಅಲ್ಲದೆ ಅತ್ಯಾಚಾರಿ ಗಳನ್ನೂ ಪೋಷಿಸುತ್ತಿದೆ ಎ೦ಬ ಕೂರ೦ಗಿಗೆ ಎದೆ ಕೊಡಬೇಕಾಗುತ್ತದೆ.


          ಇ೦ಥವರು ನಮ್ಮ ಜನನಾಯಕರು! ಹೇಗಿದ್ದಾರೆ ನೋಡಿ ದಗಲ್ಬಾಜಿಗಳು! ಈ ಆಷಾಡಭೂತಿ ಗಳನ್ನು ನೇರವಾಗಿ  ಮುಸ್ಲಿಮ್ ರಾಷ್ತ್ರಗಳಲ್ಲಿದ್ದ೦ತೆ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಬೇಕೆ೦ಬ ಕಾನೂನಿನ೦ತೆ ಶಿಕ್ಷಿಸಬೇಕೆ೦ಬ ಸಿಟ್ಟು ಬರುವುದಿಲ್ಲವೇ? ಇವರು ಈ ಸಮಾಜದಲ್ಲಿರಲು ಲಾಯಕ್ಕೇ ಎ೦ದು ನಮ್ಮ ಮನಸ್ಸಿನಲ್ಲಿ ಏಳುವ  ಪ್ರಶ್ನೆಗೆ  ಛೀ! ಮನುಷ್ಯನಾಗಿ ಬದುಕಿರಲೂ ನಾಲಾಯಕ್ಕು!ಎ೦ಬ ಉತ್ತರ ಹೊಳೆಯುವುದಿಲ್ಲವೇ? ಇವರದೊ೦ದು ಮನುಷ್ಯ ಜನ್ಮ! ಥೂ.. ಆ ಮಾಧುರಿ ಗುಪ್ತಳಿಗಿ೦ತಲೂ ನೀಚರಾಗಿ ಹೋದರು ಈ ಸಚಿವರು!ತವರಿನಲ್ಲಿಯೇ ತಮ್ಮ ಮರ್ಯಾದೆ ಕಾಪಾಡಿಕೊಳ್ಳಲಾಗದ ಈ ಮುಖ್ಯಮ೦ತ್ರಿ ಗಳು ರಾಜ್ಯವನ್ನು ಕಾಪಾಡಿಯಾರೇ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹಿಂದಿನ ಹಲವಾರು ಚರ್ಚೆಗಳಲ್ಲಿ ಇಂದಿನ ರಾಜಕೀಯ ಚಿತ್ರಣ ಬದಲಾಗಬೇಕಾದರೆ ೧೦೦% ಮತದಾನ ನಡೆಯಬೇಕೆಂದು ವಾದಿಸಿದ್ದೆ. ಅಜ್ಞಾನಿಗಳು ಆರಿಸಿ ಕಳುಹಿಸಿದ ಅಯೋಗ್ಯರು ಎಲ್ಲಿಯವರೆಗೂ ನಮ್ಮನ್ನು ಆಳುತ್ತಿರುತ್ತಾರೋ ಅಲ್ಲಿಯವರೆಗೂ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಶೇ.೪೦ ಜನ ಮತ ಚಲಾಯಿಸಿ, ಇನ್ನುಳಿದವರು ಮತದಾನಕ್ಕೂ ನಮಗೂ ಸಂಬಂಧವೇ ಇಲ್ಲವೆನ್ನುವಂತೆ ನಿರ್ಲಿಪ್ತರಾಗುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ದೊಡ್ಡ ದುರಂತ. ನಮ್ಮಲ್ಲಿನ ಕಾನೂನಿನ ಪ್ರಕಾರ ಆ ಸಚಿವರಿಗೆ ಯಾವ ಶಿಕ್ಷೆಯೂ ಸಿಗುವುದಿಲ್ಲ ಬಿಡಿ. ವಿದ್ಯಾವಂತರು ಈಗಲಾದರೂ ಎಚ್ಚೆತ್ತುಕೊಂಡಾರೆಯೇ ??

ನಾವಡರೇ, ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಿ! ಮಂತ್ರಿಯಾಗಲೀ ನಿತ್ಯಾನಂದನಾಗಲೀ ಅಪರಾಧಿಗಳೆಂದು ಇನ್ನೂ ಸಾಬೀತಾಗಿಲ್ಲ. ಅವರು ನಿರಪರಾಧಿಗಳೆಂದು ಸಾಬೀತಾದದ್ದೇ ಆದರೆ ನಿಮ್ಮ ಮೇಲೆ ಕೇಸುಗಳಾಗಬಹುದು! ಆಗ ಅವರು ಅಪರಾಧಿಗಳೆಂದು ನಿರೂಪಿಸಬೇಕಾದ ಜವಾಬ್ದಾರಿ ನಿಮ್ಮದಾಗುತ್ತದೆ. ಟಿವಿ ನೋಡಿಕೊಂಡು ಪತ್ರಿಕೆ ಓದಿಕೊಂಡು ಹೇಳುವುದಕ್ಕಿಂತ ನಿಮ್ಮ ಬಳಿ ನಿಖರವಾದ ಸಾಕ್ಷಿಯಿದ್ದರೆ ಅದರ ಪ್ರಕಾರ ಹೇಳುವುದು ಒಳ್ಳೆಯದಲ್ಲವೇ? ವಿಡಿಯೋಗಳು ಫೋಟೋಗಳು ಸಾಂದರ್ಭಿಕ ಸಾಕ್ಷಿಗಳಿಗೆ ಪೂರಕವಾಗದಿದ್ದರೆ ಅವು ಬಲವಾದ ಸಾಕ್ಷಿಯಲ್ಲ ಎಂಬುದು ನೆನಪಿರಲಿ!

ಸಾಲಿಮಠರೇ, ನಮಸ್ಕಾರ. ನಿಮ್ಮ ಎಚ್ಚರಿಕೆಯನ್ನು ನನ್ನ ಬರಹದ ಜೀವನದ ಉದ್ದಕ್ಕೂ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಎಚ್ಚರಿಸಿ, ತಿಳಿ ಹೇಳಿದ್ದಕ್ಕೆ ಧನ್ಯವಾದಗಳು. ಮತ್ತೊ೦ದು, ಘಟನೆ ನಡೆದ ನ೦ತರ, ಸಾ೦ದರ್ಭಿಕವಾಗಿ ಮ೦ತ್ರಿಗಳು ಅವರ ಗೆಳೆಯನ ಮನೆಗೆ ಮಾಡಿದ ೧೦೦ ಕ್ಕೂ ಹೆಚ್ಚು ಚರವಾಣಿ ಕರೆಗಳು ಹಾಗೂ ಅವರ ಗೆಳೆಯರು ಮಾಡಿರುವ ಜೀವ ಬೆದರಿಕೆಯ ಕರೆಗಳು ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತವೆ ಹಾಗೂ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಪತಿಯು ಆ ಕರೆಗಳನ್ನೆಲ್ಲಾ ದಾಖಲಿಸಿರುವುದರಿ೦ದ ಬಲವಾದ ಸಾಕ್ಷಿಗಳಾಗಿ ಮಾರ್ಪಾಡಾಗುತ್ತವೆಯೆ೦ಬ ಆರಕ್ಷಕ ಹೇಳಿಕೆಗಳು ಈ ದಿನ ವರದಿಯಾಗಿವೆ.ಅಲ್ಲದೆ ಸಚಿವರು ಅರೆನಗ್ನಾವಸ್ಥೆಯ ದೃಶ್ಯ ಹಾಗೂ ಮಃಇಲೆಯ ತನ್ನ ಪತಿಯ ಕೈಹಿಡಿದು ಅಳುತ್ತಿರುವ ದೃಶ್ಯದ ಚರವಾಣಿಯ ಚಿತ್ರೀಕರಣ ಬೇರೆ ಇದೆಯ೦ತೆ. ಆದ್ದರಿ೦ದ ನಾನು ಅವುಗಳನ್ನು ಲೇಖನದಲ್ಲಿ ಬಳಸಿದೆ ಅಷ್ಟೇ. ಮತ್ತೊಮ್ಮೆ ನಿಮ್ಮ ಎಚ್ಚರಿಕೆಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ನನ್ನಿ, ನಮಸ್ಕಾರ.

ಹರ್ಷ ಭಟ್ಟರೇ, ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಜಗತ್ತಿನಲ್ಲಿನ ರಾಜಕಾರಣಿಗಳೇ ಹೀಗೆ. ಪಾರದರ್ಶಕ ವ್ಯಕ್ತಿತ್ವದವರನ್ನು ಭೂತಗನ್ನಡಿ ಹಾಕಿ ಹುಡುಕಬೇಕು. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನನ್ನಿ,ನಮಸ್ಕಾರ.