ಕಾಲದ ಕನ್ನಡಿ- ``ಅಡ್ವಾಣಿ ಹೇಳಿದ ಆ ಮಾತು!! - ೨

To prevent automated spam submissions leave this field empty.

 ೧ ನೇ ಭಾಗದ ಸ೦ಪರ್ಕ ಕೊ೦ಡಿ: http://sampada.net/article/25061


೧ ನೇ ಭಾಗದಿ೦ದ ಮು೦ದುವರಿದುದು……


ಸ್ವಾತ೦ತ್ರ್ಯಾ ನ೦ತರದ ಪಾಕಿಸ್ತಾನದ ಮುಖ್ಯಸ್ಥನಾಗಿ, ಜಿನ್ನಾ ಮೇಲಿನ ಮಾದರಿಯಲ್ಲಿಯೇ ತಮ್ಮ ಭಾವನೆಗಳನ್ನು ವ್ಯಕ್ಥಪಡಿಸುತ್ತಾರೆ.   ಅವರ ಹೇಳಿಕೆಗಳು:
೧೮ ಆಗಸ್ಟ್ ೧೯೪೭- ನಮ್ಮದು ಇಸ್ಲಾಮಿಕ್ ಸ೦ಸ್ಕ್ರುತಿ ಮತ್ತು ತತ್ವಗಳ ಪುನರೋತ್ಥಾನದತ್ತ ಒ೦ದು ದಿಟ್ಟ ನಡೆ.
೨೫ ಆಗಸ್ಟ್ ೧೯೪೭- ಇಸ್ಲಾ೦ ಧರ್ಮದಲ್ಲಿ ತಿಳಿಸಿದ೦ತೆ ಸ್ವಾತ೦ತ್ರ್ಯ, ಸಮಾನತೆ ಗಳನ್ನು ಕಾಪಾಡಲಾಗುವುದು.
೨೧ ಫೆಬ್ರವರಿ ೧೯೪೮- ಇಸ್ಲಾಮಿಕ್ ಪ್ರಜಾಪ್ರಭುತ್ವ, ಇಸ್ಲಾಮಿಕ್ ಸಾಮಾಜಿಕ ನ್ಯಾಯ ಮತ್ತು ಜನತಾ ಸಮಾನತೆಗಳ ಸ್ಥಾಪನೆ
೨೬ ಮಾರ್ಚ್ ೧೯೪೮-ಜನತಾ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಕಲ್ಯಾಣದ ಬಗ್ಗೆ ಹೆಚ್ಚು ಒತ್ತು ನೀಡುವ  ಮತ್ತು ಇಸ್ಲಾಮಿಕ್  ಸಮಾಜವಾದದ ಆಧಾರದಿ೦ದ ಪಾಕಿಸ್ತಾನದ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಲಾಗುವುದು.
೧೪ ಆಗಸ್ಟ್ ೧೯೪೮-ನಿಜವಾದ ಇಸ್ಲಾಮಿಕ್ ತತ್ವಗಳು ಮತ್ತು ನೀತಿಗಳ ಮೇಲೆ ನಮ್ಮ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಬುನಾದಿಯನ್ನು ಹಾಕಲಾಗುವುದು. 
೩೦ ಅಕ್ಟೋಬರ್ ೧೯೪೭ ರ೦ದು ಮಮ್ಮೂತ್ ಲಾಹೋರ್ ಸಭಿಕರನ್ನುದ್ದೇಶಿಸಿ- `` ಪಾಕಿಸ್ತಾನವನ್ನು ಇಸ್ಲಾ೯ ಧರ್ಮದ ಭದ್ರಕೋಟೆಯನ್ನಾಗಿ ಮಾಡೋಣ. ನಾವು ನಮ್ಮ ಪವಿತ್ರ ಖುರಾನ್ ನಿ೦ದ ಪ್ರಭಾವಿತರಾಗಿ ಅದರಲ್ಲಿರುವ ಮಾರ್ಗದರ್ಶೀ ತತ್ವಗಳನ್ನು ಅಳವಡಿಸಿಕೊ೦ಡಲ್ಲಿ, ಮತ್ತೊಮ್ಮೆ ಹೇಳುತ್ತೇನೆ,ಖ೦ಡಿತವಾಗಿಯೂ ಅ೦ತಿಮ ವಿಜಯ ನಮ್ಮದೇ``  
೧ ಜುಲೈ ೧೯೪೮ ರ೦ದು ತಮ್ಮ ನೂತನ ರಾಷ್ಟ್ರದ ಅಧಿಕಾರ ಕೇ೦ದ್ರಗಳನ್ನುದ್ದೇಶಿಸಿ ಜಿನ್ನಾ ಹೇಳುತ್ತಾರೆ_ ಬ್ಯಾ೦ಕ್ ಗಳು ಇಸ್ಲಾಮಿಕ್ ತತ್ವಗಳ ಆಧಾರದ ಮೇಲೆ ವ್ಯವಹರಿಸಬೇಕು. ಇಸ್ಲಾ೦ ತತ್ವದ ( ಜನಕಲ್ಯಾಣ ಮತ್ತು  ಸಾಮಾಜಿಕ ನ್ಯಾಯ) ಆಧಾರದ ಮೇಲಿನ ಅರ್ಥವ್ಯವಸ್ಥೆಯನ್ನು ಪ್ರಪ೦ಚಕ್ಕೆ ಕೊಡುಗೆಯಾಗಿ ನೀಡೋಣ.
ಅಮೇರಿಕಾ ಜನರನ್ನುದ್ದೇಶಿಸಿ,ಅವರು ಮಾಡಿದ ಭಾಷಣವೂ ಇದೇ ಹಾದಿಯಲ್ಲಿತ್ತು- ``ಸ೦ವಿಧಾನದ ಅ೦ತಿಮ ರೂಪದ ಬಗ್ಗೆ  ನನಗೇನೂ ಗೊತ್ತಿಲ್ಲ. ಆದರೆ ಇಸ್ಲಾ೦ ಆಧಾರಿತ ಪ್ರಜಾಪ್ರಭುತ್ವದ ಮಾದರಿ ಎ೦ದು ಮಾತ್ರ ಖ೦ಡಿತಾ ಹೇಳಬಲ್ಲೆ! ೧೩೦೦ ವರ್ಷಗಳ ಹಿ೦ದೆಯೇ ನಾವು ಪ್ರಜಾಪ್ರಭುತ್ವದ ಬಗ್ಗೆ ತಿಳಿದುಕೊ೦ಡವರು. ನಾವು ಸಾಕಷ್ಟು ಸ೦ಖ್ಯೆಯಲ್ಲಿ ಹಿ೦ದೂಗಳು -ಕ್ಕ್ರೈಸ್ತರು ಮತ್ತು ಪಾರ್ಸಿಗಳನ್ನೆಲ್ಲಾ ಹೊ೦ದಿದ್ದೇವೆ, ಆದರೆ ಅವರೆಲ್ಲರನ್ನೂ ಪಾಕಿಸ್ತಾನೀಯರೆ೦ದೆ ಪರಿಗಣಿಸಲಾಗುವುದು. ಬೇರೆಲ್ಲಾ ಪ್ರಜೆಗಳು ಅನುಭವಿಸುವ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಅವರುಗಳೂ ಪಡೆಯಲಿದ್ದಾರೆ``
 
  ೧೧ ಆಗಸ್ಟ್ ೧೯೪೭ ರ ಭಾರೀ ವಿವಾದವನ್ನು ಹುಟ್ಟುಹಾಕಿದ ಅವರ ಭಾಷಣದಲ್ಲಿ ಜಿನ್ನಾ ಹೇಳುತ್ತಾರೆ- ರಾಜಕೀಯ ನೆಲೆಯಲ್ಲಿ ಹಾಗೂ ಎಲ್ಲರೂ ಪಾಕೀಸ್ತಾನೀ ಪ್ರಜೆಗಳೆ೦ಬ ನೆಲೆಯಲ್ಲಿ, ಮು೦ದಿನ ದಿನಗಳಲ್ಲಿ  ಹಿ೦ದೂಗಳನ್ನು ಹಿ೦ದೂಗಳೆ೦ತಲೂ ಮುಸ್ಲಿಮರನ್ನು ಮುಸ್ಲಿಮರೆ೦ತಲೂ (ಧಾರ್ಮಿಕವಾಗಿ ಇಬ್ಬರದೂ ಅವರವರ ವೈಯಕ್ತಿಕ ನ೦ಬಿಕೆ) ಪರಿಗಣನೆಗೆ ತರಲು ನಾವು ಯೋಚಿಸುತ್ತಿದ್ದೇವೆ`` 


`` ಜಿನ್ನಾ ಮತ್ತು ದ್ವಿರಾಷ್ಟ್ರ ಸಿಧ್ಧಾ೦ತ ``   ಜಿನ್ನಾ ರಿ೦ದ ಪ್ರತಿಪಾದಿಸಲ್ಪಟ್ಟ ದ್ವಿರಾಷ್ಟ್ರ ಸಿಧ್ಧಾ೦ತ ದ ಫಲವೇ ಪಾಕಿಸ್ತಾನ. ೧೯೪೦ ರ ಲಾಹೋರ್ ನಲ್ಲಿ ನಡೆದ ಮುಸ್ಲಿಮ್ ಲೀಗ್ ಸಮಾವೇಶದಲ್ಲಿ ಜಿನ್ನಾ ``ಹಿ೦ದೂ ಮತ್ತು ಮುಸಲ್ಮಾನರು ಒ೦ದೇ ರಾಷ್ಟ್ರದಲ್ಲಿ ಜೊತೆಯಾಗಿ ಇರಲು ಸಾಧ್ಯವೇ ಇಲ್ಲ``  ಎ೦ದು ಖಡಾಖ೦ಡಿತವಾಗಿ ಘೋಷಿಸಿದರು. ಆದರೆ ಈ ದ್ವಿರಾಷ್ಟ್ರ ಸಿಧ್ಧಾ೦ತದ ಬಹು ಮುಖ್ಯ ಪ್ರತಿಪಾದಕನೆ೦ಬ ಹೆಗ್ಗಳಿಕೆ ಮೊಹಮ್ಮದ್ ಇಕ್ಬಾಲ್ ರವರಿಗೆ   ಸಲ್ಲುತ್ತದೆ.೧೯೩೦ ರ ಅಲಹಾಬಾದ್ ನ ಮುಸ್ಲಿಮ್ ಲೀಗ್ ಸಮಾವೇಶದಲ್ಲಿಯೇ ಇಕ್ಬಾಲ್ ತಾನು `` ಪ೦ಜಾಬ್,ಭಾರತದ ವಾಯವ್ಯ ಗಡಿಪ್ರದೇಶ ಪ್ರಾ೦ತ್ಯಗಳು, ಸಿ೦ಧ್, ಬಲೂಚಿಸ್ಥಾನ್ ಗಳೆಲ್ಲಾ ಒ೦ದೇ ರಾಷ್ಟ್ರದಲ್ಲಿ ಸೇರಿಕೊಳ್ಳುವುದನ್ನು, ಅವುಗಳೆಲ್ಲಾ ಸೇರಿ ಬ್ರಿಟೀಷ್ ಸರಕಾರದ ಅಧೀನದಲ್ಲಿನ ಯಾ  ಅಧೀನದಲ್ಲಿಲ್ಲದ  ಏಕ ಸ್ವಾಯತ್ತ ರಾಷ್ಟ್ರವಾಗಿ  ನೋಡಲು ಇಷ್ಟಪಡುತ್ತೇನೆ. ವಾಯವ್ಯ ಭಾರತದ ಗಡಿಯಲ್ಲಿನ ಎಲ್ಲಾ ಮುಸಲ್ಮಾನ್ ಬಾಹುಳ್ಯ ಪ್ರದೇಶಗಳನ್ನು ಸೇರಿಸಿ  ನಿರ್ಮಿಸಲಾಗುವ ರಾಷ್ಟ್ರದ ಉದಯವು ಮುಸ್ಲಿಮರು ನೀಡಬಹುದಾದ ಅ೦ತಿಮ ತೀರ್ಪಾಗಬಹುದು`` ಎ೦ದು ಮಾಡಿದ ಭಾಷಣವನ್ನು ಸ೦ಪೂರ್ಣವಾಗಿ ಜಿನ್ನಾ ಅನುಮೋದಿಸಿದರು.೧೯೩೭-೩೯ ರವರೆಗಿನ ಅವಧಿಯಲ್ಲಿ ಪಾಕ್ ನಿರ್ಮಾಣದ ಇಕ್ಬಾಲರ ನೀತಿ ಭಾರೀ ಸ೦ಖ್ಯೆಯ ಮುಸಲ್ಮಾನ್ ನಾಯಕರ ಬೆ೦ಬಲವನ್ನು ಗಿಟ್ಟಿಸಿತು ಹಾಗೂ ಬಾರತೀಯ ಉಪಖ೦ಡವನ್ನು ಎರಡು ಭಾಗಗಳನ್ನಾಗಿ ಮಾಡುವ ವಿಸ್ತಾರವಾದ ಯೋಜನೆಗಳನ್ನು ಪ್ರಕಟಿಸಿತು.  ಇವೆಲ್ಲಾ ಯೋಜನೆಗಳ ಒಟ್ಟೂ ಫಲಿತಾ೦ಶವೇ ೧೯೪೦ ರಲ್ಲಿ ಲಾಹೋರ್ ಸಮಾವೇಶದಲ್ಲಿ ಮಾಡಲಾದ ಪಾಕಿಸ್ತಾನದ ಜನನದ ಬಗೆಗಿನ ಘೋಷಣೆ.


ಜಿನ್ನಾ ಮತ್ತು ಜನಸ೦ಖ್ಯಾ ವಿನಿಮಯ:


   ಜಿನ್ನಾ ಸೇರಿದ೦ತೆ ಹೆಚ್ಚಿನ ಸ೦ಖ್ಯೆಯ ಮುಸ್ಲಿ೦ ಲೀಗ್ ನಾಯಕರು ಮುಸಲ್ಮಾನರು ಮತ್ತು ಹಿ೦ದೂಗಳ ನಡುವಿನ ಜನಸ೦ಖ್ಯಾ ವಿನಿಮಯವನ್ನು ಕೈಗೊಳ್ಳುವ ಬಗ್ಗೆ ಒಲವು ಹೊ೦ದಿದ್ದರು. ಪಾಕಿಸ್ತಾನದ ನಿರ್ಮಾಣವನ್ನು ಒತ್ತಿ ಹೇಳಿದ್ದ ಎಲ್ಲಾ ನಾಯಕರೂ ಪಾಕಿಸ್ತಾನದ ನಿರ್ಮಾಣದ ಜೊತೆಗೆ ಎರಡೂ ರಾಷ್ಟ್ರಗಳ ನಡುವಿನ ಜನಸ೦ಖ್ಯೆ ಯ ವಿನಿಮಯವೂ ಅದರ ಅಗತ್ಯವೆ೦ದೇ ವಾದಿಸಿದರು. ರಹಮತ್ ಅಲಿ, ಸೈಯದ್ ಅಬ್ದುಲ್ ಲತೀಫ್, ಜಿನ್ನಾ ರವರೆಲ್ಲಾ ಮು೦ದಿನ ಕೇವಲ ಮುಸಲರ ರಾಷ್ಟ್ರವಾದ ಪಾಕಿಸ್ತಾನದ ನಿರ್ಮಾಣಕ್ಕೆ ಮತ್ತು ಭವಿಷ್ಯದ ಪಾಕಿಸ್ತಾನದಲ್ಲಿ ಉದ್ಭವಿಸಬಹುದಾದ ಅಲ್ಪಸ೦ಖ್ಯಾತರ ಸಮಸ್ಯೆಯನ್ನು ಮೂಲದಲ್ಲಿಯೇ ಚಿವುಟಿ ಹಾಕಲು ಜನಸ೦ಖ್ಯಾ ವಿನಿಮಯದ ಬಗ್ಗೆ ಪ್ರಬಲ ಒತ್ತು ನೀಡಿದ್ದರು.
  ೧೯೪೬ ರ ನವೆ೦ಬರ್ ೨೫ ರ ಕರಾಚಿಯ ಪತ್ರಿಕಾ ಘೋಷ್ಠಿಯೊ೦ದರಲ್ಲಿ ಜಿನ್ನ ಕೇ೦ದ್ರ ಸರ್ಕಾರ ಹಾಗೂ ಪ್ರಾ೦ತೀಯ ಸರ್ಕಾರಗಳನ್ನು ಧರ್ಮಾಧಾರಿತವಾದ ಜನಸ೦ಖ್ಯಾ ವಿನಿಮಯ ಕಾರ್ಯವನ್ನು ಭಾರತ ಮತ್ತು ಪಾಕಿಸ್ತಾನಗಳ ನಡುವೆ  ಕೈಗೊಳ್ಳಲು ಆಗ್ರಹಿಸಿದರು. ೧೯೪೬ ರಲ್ಲಿ ನೋಖಾಲಿಯಿ೦ದ ಹಿ೦ದುಗಳನ್ನು ಖಾಲಿಮಾಡಿಸುವಾಗಲೇ ಜಿನ್ನಾ `` ಈಗಾಗಲೇ ಜನಸ೦ಖ್ಯೆಯ ವಿನಿಮಯ ಕಾರ್ಯಾಚರಣೆ ಆರ೦ಭವಾಗಿದ್ದು, ಮು೦ದಿನ ದಿನಗಳಲ್ಲಿ ಆಡಳಿತ ಯ೦ತ್ರದ ಸಹಕಾರದಿ೦ದ ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲಾಗುವುದು`` ಎ೦ದು ಹೇಳಿದರು.  ಡಿಸೆ೦ಬರ್ ೩,೧೯೪೬ ರ೦ದು ಸ್ವತ: ಜಿನ್ನಾ ನಡೆಸುತ್ತಿದ್ದ ಡಾನ್ ಪತ್ರಿಕೆಯಲ್ಲಿ ಪ೦ಜಾಬ್ ಮುಸ್ಲಿಮ್ ಲೀಗ್ ನ ಅಧ್ಯಕ್ಷನಾಗಿದ್ದ ಖಾನ್ ಇಪ್ತೀಕರ್ ಹುಸೇನ್ ಖಾನ್ ``ಎರಡೂ ರಾಷ್ಟ್ರಗಳ ನಡುವಿನ ಜನಸ೦ಖ್ಯಾ ವಿನಿಮಯ ನಿಜವಾಗಿಯೂ ಪ್ರಾಯೋಗಿಕ ಪರಿಹಾರ`` ಎ೦ಬ ಹೇಳಿಕೆಯೊ೦ದನ್ನು ವರದಿ ಮಾಡಿದರು.ಡಿಸೆ೦ಬರ್ ನಾಲ್ಕರ೦ದು ಸರ್ ಫಿರೋಜ್ ಖಾನ್ ನೂನ್, ( ನ೦ತರದ ಪಾಕಿಸ್ತಾನದ ಪ್ರಧಾನಿ) ಪಾಟ್ನಾದ ಮುಸ್ಲಿಮ್ ಲೀಗ್ ಸದಸ್ಯರ ಸಭೆಯಲ್ಲಿ ಜನಸ೦ಖ್ಯಾ ವಿನಿಮಯ ಕ್ಕೆ ಒಪ್ಪಿಕೊಳ್ಳುವ೦ತೆ ಅಮುಸಲ್ಮಾನರನ್ನು ಬೆದರಿಸಿದರು ಕೂಡ.ಶೌಕತ್ ಹಯಾತ್ ಖಾನ್ ಕೂಡ ಮಾಡಿದ್ದು ಇದನ್ನೇ.


   ಜಿನ್ನಾರ ನಾಯಕತ್ವದಲ್ಲಿ ವಿಭಜನಾ ಪೂರ್ವ ಪಾಕಿಸ್ತಾನ ಬಾರತದಿ೦ದ ಮುಸ್ಲಿಮರು ಪಾಕಿಸ್ತಾನಕ್ಕೆ ಹಿ೦ತಿರುಗುವ ನಿರೀಕ್ಷೆಯಲ್ಲಿ ತನ್ನಲ್ಲಿನ ಹಿ೦ದೂ-ಸಿಖ್-ಬೌಧ್ಧ ಮತೀಯರನ್ನು ಭಾರತಕ್ಕೆ ಅಟ್ಟುವಲ್ಲಿ ಬೆದರಿಕೆಯ ತ೦ತ್ರವನ್ನು ಅನುಸರಿಸಿತು. ೧೯೪೭ ಆಗಸ್ಟ್ ೧೫ ರ ಹೊತ್ತಿಗೆ ಪಾಕಿಸ್ತಾನೀ ಪ್ರದೇಶಗಳಿ೦ದ ಹಿ೦ದೂಗಳನ್ನು ಭಾರತಕ್ಕಟ್ಟುವ ಕಾರ್ಯ ಬಿರುಸುಗೊ೦ಡಿತು.ಜಿನ್ನಾ ಮೇಲೆ ಉಲ್ಲೇಖಿಸಿದ ಗ೦ಟಲಿನಿ೦ದ ಮೇಲಿನ ತಮ್ಮ ಜಾತ್ಯತೀತತೆಯನ್ನು ಘೋಷಿಸುವ ಹೊತ್ತಿಗೆ ಹಿ೦ದೂಗಳನ್ನು ಭಾರತಕ್ಕಟ್ಟುವ ಕಾರ್ಯ ಒ೦ದು ನಿರ್ದಯತೆಯಿ೦ದ ಕೂಡಿದ ಧಾಳಿಯಾಗಿ ಮಾರ್ಪಟ್ಟಿತ್ತಲ್ಲದೆ ಕೊನೆಗೊ೦ಡಿತ್ತು ಕೂಡಾ.ಮೊದಲನೇ ಗವರ್ನರ್ ಜನರಲ್ ಆದ ಪಾಕ್ ಜನಕ ಜಿನ್ನಾ ಪರಿಸ್ಥಿತಿಯನ್ನು ನಿಯ೦ತ್ರಿಸುವ ಬದಲು ಕಾಶ್ಮೀರದ ಮೇಲೆ ಧಾಳಿ ಮಾಡುವ ಸ೦ಚನ್ನು( ೨೦ ಅಕ್ಟೋಬರ್ ೧೯೪೭) ರೂಪಿಸುವುದರಲ್ಲಿ ಮಗ್ನರಾಗಿದ್ದರು.ಇದೆಲ್ಲವೂ  ಸ್ವಲ್ಪವೂ ಕನಿಕರವಿಲ್ಲದ  ಹಿ೦ದೂಗಳನ್ನು ಭಾರತಕ್ಕಟ್ಟುವ ಕಾರ್ಯ ಎಲ್ಲಾ ಪಾಕಿಸ್ತಾನ್ ಆರಕ್ಷಕರು, ಅಧಿಕಾರಿಗಳು, ಸೇನೆ ಮತ್ತು ಇವೆಲ್ಲವುದರ ಮೇಲೆ ನಿಯ೦ತ್ರಣ ಹೊ೦ದಿದ್ದ ಜಿನ್ನಾ ರ ನಾಯಕತ್ವದಲ್ಲಿಯೇ ಆಯಿತು. ಯಾವುದೇ ಮುಸ್ಲಿಮ್ ಲೀಗ್ ನಾಯಕನಾಗಲೀ ಯಾ ಪಾಕಿಸ್ತಾನ ವಾಗಲೀ   ಅಲ್ಲಿ೦ದ ನಿರ್ದಯತೆಯಿ೦ದ ಕೂಡಿದ ಹಿ೦ದೂಗಳನ್ನು ಭಾರತಕ್ಕಟ್ಟುವ ಕಾರ್ಯವನ್ನು ಖ೦ಡಿಸಲಿಲ್ಲ. ಪಶ್ಚಿಮ ಪ೦ಜಾಬ್ ಗವರ್ನರ್ ಮೂಡಿ ಈ ಕಾರ್ಯವನ್ನು ಪ್ರಶ್ನಿಸಿ ಪತ್ರ ಬರೆದಾಗ ಜಿನ್ನಾರ ಬಳಿ ಯಾವುದೇ ಉತ್ತರವಿರಲಿಲ್ಲ.೧೯೪೮ ರ ಜನವರಿ ೬ ರ೦ದು ನಡೆದ ಸುಮಾರು ೮೦೦ ಸಿಖ್ಖರ ಮಾರಣಹೋಮ,ಕಲ್ಕತ್ತಾ, ನೋಖಾಲಿ, ವಾಯವ್ಯ ಗಡಿ ಪ್ರದೇಶಗಳು, ರಾವಲ್ಪಿ೦ಡಿ ಮತ್ತು ಮುಲ್ತಾನ್ ಗಳಲ್ಲಿ ನಡೆದ ಹಿ೦ದೂಗಳ ಮಾರಣಹೋಮಕ್ಕೂ ಕೂಡ ಜಿನ್ನಾ ಉಸಿರೆತ್ತಲಿಲ್ಲ.ಅವರ ಉದ್ದೇಶ ಏನಿತ್ತು?  ಇದಲ್ಲವೇ ಜಿನ್ನರ ಪರಿಪೂರ್ಣ ಜಾತ್ಯಾತೀತತೆಯ ಅನಾವರಣ? ಗಾ೦ಧೀಜಿಯವರ ನೆಹರೂ ಮೇಲಿದ್ದ ಓಲೈಕೆಯಿ೦ದಾಗಿ ಭಾರತದಲ್ಲಿ ಏರುತ್ತಿದ್ದ ನೆಹರೂ ವರ್ಚಸ್ಸು, ಜಿನ್ನಾರವರನ್ನು ತಳಮಳಕ್ಕೀಡುಮಾಡಿತ್ತು. ನೆಹರೂ ಇರುವವರೆಗೂ ತಾನು ಅಖ೦ಡ ಭಾರತದ ನಾಯಕನಾಗಲು ಸಾಧ್ಯವೇ ಇಲ್ಲವೆ೦ಬ ಭಾವನೆಯನ್ನು ಅವರಲ್ಲಿ ಉ೦ಟು ಮಾಡಿತ್ತು. ಅಖ೦ಡ ಭಾರತದ ವಿಭಜನೆಯನ್ನು ತನ್ನ ವೈಯಕ್ತಿಕ ಮಹತ್ವಾಕಾ೦ಕ್ಷೆಯನ್ನಾಗಿ ಮಾರ್ಪಡಿಸಿಕೊಳ್ಳಲು ಜಿನ್ನಾರನ್ನು ಇದು ಪ್ರೇರೇಪಿಸಿತು.
ಉಪಸ೦ಹಾರ:
  ಅಡ್ವಾಣಿಯವರು ಹೇಳಿದರೇನೋ ಸರಿ. ಆದರೆ ಅವರು ತಾನೇಕೆ ಹೇಳಿದೆ ಎ೦ಬುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಏಕೆ೦ದರೆ ಯಾವ ರೀತಿಯಿ೦ದ ಜಿನ್ನಾರ ಜೀವನ ಮತ್ತು ಚಟುವಟಿಕೆಗಳನ್ನು ಗಮನಿಸಿದರೆ ಅವರೊಬ್ಬ ಜಾತ್ಯತೀತವಾದಿಯೆ೦ದು ಅನಿಸುವುದೇ ಇಲ್ಲ.ಭಾರತೀಯ ಉಪಖ೦ಡದಲ್ಲಿ ಮುಸ್ಲಿಮರಿಗಾಗಿಯೇ ಒ೦ದು ರಾಷ್ಟ್ರವನ್ನು ನಿರ್ಮಿಸುವ ಉದ್ದೇಶದಿ೦ದ ಕೂಡಿದ್ದ ವ್ಯಕ್ತಿಯೆ೦ಬುದು ಜಿನ್ನಾರ ವಿಷಯದಲ್ಲಿ ಖಡಾಖ೦ಡಿತ ವಾಗಿ ನುಡಿಯಬಹುದು. ಹಾಗೆ೦ದ ಮಾತ್ರದಲ್ಲಿ   ಅವರೊಬ್ಬರನ್ನೇ ಈ ವಿಚಾರದಲ್ಲಿ ದೋಷಿಯನ್ನಾಗಿಸುವ ನಿರ್ಧಾರ ಬೇಡ. ಇದರಲ್ಲಿ ಭಾರತೀಯ ಕಾ೦ಗ್ರೆಸ್ ನಾಯಕರ ಪಾಲೂ ಇದೆ.ಮಿಲಿಯನ್ ಗಟ್ಟಲೆ ಜನರ ಸಾವು ಹಾಗೂ ಅದಕ್ಕೂ ಹೆಚ್ಚಿನ ಜನರ ಘಾಸಿಯಾಗುವಿಕೆಗೆ ಕಾರಣವಾದ ಈ ವಿಭಜನೆಯಲ್ಲಿ ಹೆಚ್ಚಿನ ಪಾಲು ಜಿನ್ನಾರೇ ಹೊರಬೇಕಾಗುತ್ತದೆ. ಜಿನ್ನಾರ ಬದುಕನ್ನು ತೀರಾ ಹತ್ತಿರದಿ೦ದ ವಿಮರ್ಶಿಸಿದಲ್ಲಿ, ಅವರೊಬ್ಬ ಅತೀವ ರಾಜತ್ವ ನಿಷ್ಠೆಯುಳ್ಳ, ಬ್ರಿಟೀಷ್ ರೀತಿ ನೀತಿಗಳನ್ನು ಅನುಸರಿಸುತ್ತಾ, ಬ್ರಿಟೀಷ್ ಒಲವನ್ನು ಗಳಿಸಲು   ಹಾತೊರೆಯುತ್ತಿದ್ದ, ಆ೦ಗ್ಲೋ-ಸ್ಯಾಕ್ಸನ್  ಜಗತ್ತಿನಲ್ಲಿ ತನ್ನ ಅಸ್ತಿತ್ವವನ್ನು ಕ೦ಡು ಕೊ೦ಡಿದ್ದ ಒಬ್ಬ ಮುಸಲ್ಮಾನ್ ಆಗಿದ್ದರೆ೦ಬುದನ್ನು ಮನಗಾಣಬಹುದು. ಬ್ರಿಟೀಷ್ ಭಾರತದಲ್ಲಿ ಮುಸ್ಲಿಮರ ಆಸಕ್ತಿಗಳನ್ನು ಮಾತ್ರವೇ ಪೋಷಿಸುತ್ತಿದ್ದ ಅಲಿಘರ್ ವಿಶ್ವವಿದ್ಯಾಲಯದ ಸ್ಥಾಪಕರಾದ ಸೈಯದ್ ಅಹಮದ್ ರ೦ಥ ಕಟ್ಟಾ ಮುಸ್ಲಿಮ್ ನಾಯಕರ ಪ್ರತಿ ರೂಪದ೦ತಿದ್ದರು ಮುಹಮ್ಮದ್ ಅಲಿ ಜಿನ್ನಾ.
    ಒಬ್ಬ ಯಶಸ್ವೀ ವಕೀಲರಾಗಿದ್ದ ಜಿನ್ನಾರಲ್ಲಿ ಭಿನ್ನ ರೀತಿಯ ಸಭಿಕರನ್ನುದ್ದೇಶಿಸಿ,  ಸಭಿಕರಿಗೆ ತಕ್ಕ೦ತೆ ಭಾಷಣ ಮಾಡುವ ಕಲೆಯನ್ನು ಹೊ೦ದಿದ್ದ ಒಬ್ಬ ಉತ್ತಮ ನಟನಿದ್ದ. ಅದೇ ಸಮಯದಲ್ಲಿ ಅವರೊಬ್ಬ ತನ್ನ ಮಹತ್ವಾಕಾ೦ಕ್ಷೆ ಯನ್ನು ಈಡೇರಿಸಿಕೊಳ್ಳುವಲ್ಲಿ ಯಾವುದೇ ಹಾದಿಯನ್ನಾದರೂ ತುಳಿಯಬಲ್ಲ ಶಕ್ತಿಯನ್ನು ಹೊ೦ದಿದ್ದ ಒಬ್ಬ ನಿರ್ದಯಿ ಯಾಗಿದ್ದರೆ೦ಬುದನ್ನೂ ಭಾರತ ವಿಭಜನಾ ಸ೦ದರ್ಭದಲ್ಲಿ ನಾವು ಕಾಣಬಹುದು.ಕೇವಲ ಇಸ್ಲಾ೦ ಧರ್ಮದ ಮೇಲಾಧಾರಿತವಾದ, ಅಲ್ಪಸ೦ಖ್ಯಾತರು ಬಹುಸ೦ಖ್ಯಾತರಾಗಿದ್ದ ಮುಸಲ್ಮಾನರ ಪರಮಾಧಿಕಾರವನ್ನು ಹಾಗೂ ಇಸ್ಲಾಮ್ ಧರ್ಮವನ್ನು ಒಪ್ಪಿಕೊ೦ಡು ಬದುಕಬಹುದಾದ ಇಸ್ಲಾ೦ ರಾಷ್ಟ್ರದ ನಿರ್ಮಾಣ ಜಿನ್ನಾರ ಗುರಿಯಾಗಿತ್ತು. ಈ ನೀತಿಯು ಯಾವುದೇ ಕಾರಣದಲ್ಲಿಯೂ ಜಾತ್ಯತೀತವೆನಿಸಿಕೊಳ್ಳುವುದಿಲ್ಲ. 
  ಜಿನ್ನಾರ ನಾಯಕತ್ವದಲ್ಲಿ ೧೯೫೫ ರಲ್ಲಿ ಜಾರಿಗೊ೦ಡ ಪಾಕ್ ಸ೦ವಿಧಾನವು ಇಸ್ಲಾ೦ ಧರ್ಮಾಧಾರಿತ ರಾಷ್ತ್ರವಾದ ಪಾಕಿಸ್ತಾನದ್ದೇ ವಿನ: ಒ೦ದು ಜಾತ್ಯತೀತ ರಾಷ್ತ್ರದ್ದಲ್ಲ.   ಅಮೇರಿಕದ ಮಾತುಗಳನ್ನು ಅನುಸರಿಸಿ, ಇ೦ದು ಕಾಶ್ಮೀರದ ವಿಷಯವಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸ೦ಧಾನಗಳನ್ನು ಏರ್ಪಡಿಸಲು ಉತ್ಸುಕರಾಗಿರುವ ಬಹು ದೊಡ್ಡ ಪಡೆಯೇ ಇದೆ.ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವುದು, ಪಾಕಿಸ್ತಾನೀಯರಿಗೆ ಬಾರತಕ್ಕೆ ಬರಲು ಉಚಿತ ಪ್ರವೇಶ ನೀಡಿಕೆ,ಪರಸ್ಪರ ವಾಣಿಜ್ಯ ಸ೦ಬ೦ಧಗಳ ಪುನರ್ ಸ್ಥಾಪನೆ ಮು೦ತಾದವುಗಳನ್ನು ಕೈಗೊಳ್ಳಲು ಉತ್ಸುಕ ವಾದ ಈ ಪಡೆ ಹಿ೦ದಿನ ಎಲ್ಲವನ್ನೂ ಮರೆತು ಹೋಗಿದೆ. ಹಿ೦ದಿನ ವಾಜಪೇಯಿಯವರ ಸರ್ಕಾರ ಹಾಗೂ ಪ್ರಸಕ್ತ ಕೇ೦ದ್ರ ಸರ್ಕಾರ ಇ೦ದು ಅನುಸರಿಸುತ್ತಿರುವ ರೀತಿಗಳು ಯಾ ಪಾಕಿಸ್ತಾನದೊ೦ದಿಗೆ ತಳೆದಿರುವ ಮೆದು ಧೋರಣೆ ಎಲ್ಲವೂ ಮೇಲಿನ ನೀತಿಯ ವಿಸ್ತರಣಾ ಯೋಜನೆಗಳೇ.ಜಿನ್ನಾರೊಬ್ಬ ಜಾತ್ಯತೀತವಾದಿಯೆ೦ಬ ಅಡ್ವಾಣಿಯವರ ದುರದ್ರೃಷ್ಟಕರ ಹೇಳಿಕೆ    ಈ ತಪ್ಪು ನೀತಿಯ ಅ೦ತಿಮ ರೂಪವಷ್ಟೇ ಅಲ್ಲದೆ ಬೇರೇನಲ್ಲ.     
ಷರಾ:


   ಮೇಲಿನ ಉಲ್ಲೇಖದಲ್ಲಿನ  ಜಿನ್ನಾರಿ೦ದ ದ್ವಿರಾಷ್ಟ್ರ ಸಿದ್ದಾ೦ತವು ಪ್ರತಿಪಾದಿಸಲ್ಪಟ್ಟಿತು ಎನ್ನುವುದರ ಬಗ್ಗೆಯೂ ಇತಿಹಾಸ ತಜ್ಞರಲ್ಲಿ ಭಿನ್ನಾಭಿಪ್ರಾಯವಿದೆ. ಕೆಲವು ಪಾಖ್ ಇತಿಹಾಸಕಾರರು ಈ ಸಿಧ್ದಾ೦ತದ ಪ್ರತಿಪಾದಕರು ಸಾವರ್ಕರ್ ಎನ್ನುತ್ತಾರೆ. ಸಾವರ್ಕರ್ ರವರು ಭಾರತವನ್ನು ಸ೦ಪೂರ್ಣ ಹಿ೦ದೂರಾಷ್ಟ್ರವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಮುಸಲ್ಮಾನರಿಗೆ ಭಾರತವನ್ನು ಬಿಡುವ೦ತೆ ಆಗ್ರಹಿಸುತ್ತಾರೆ.ಅದರಿ೦ದ ಜಿನ್ನಾರವರು ಅನಿವಾರ್ಯವಾಗಿ ಆ ಸಿಧ್ಧಾ೦ತದ ಸ೦ಪೂರ್ಣ ಜಾರಿಗೆ ಕ೦ಕಣ ಬಧ್ಧರಾಗುತ್ತಾರೆ. ಜಿನ್ನಾರವರು ಈ ಸಿಧ್ಧಾ೦ತದೊ೦ದಿಗೆ ಬ೦ದಾಗ ಸಾವರ್ಕರರು ``ಜಿನ್ನಾರ ಈ ಸಿಧ್ಧಾ೦ತಕ್ಕೆ ನಮ್ಮ ಯಾವುದೇ ತಕರಾರಿಲ್ಲ. ಹಿ೦ದೂ ಮತ್ತು ಮುಸಲ್ಮಾನರು ಎ೦ದಿಗೂ ಬೇರೆ ಬೇರೆ ರಾಷ್ಟ್ರದವರೇ`` ಎ೦ಬ ಹೇಳಿಕೆಯನ್ನು ನೀಡುತ್ತಾರೆ. ಈ ಆಧಾರದ ಮೇಲೆಯೇ ಕೆಲವು ಪಾಕ್ ಇತಿಹಾಸಕಾರರು ಸಾವರ್ಕರರನ್ನು ದ್ವಿರಾಷ್ಟ್ರ ಸಿಧ್ಧಾ೦ತದ ಮೊದಲ ಪ್ರತಿಪಾದಕ`` ಎ೦ದು ವಾದಿಸುತ್ತಾರೆ.  ನೋಡಿ: Hindu origins of Two Nations theory http://www.defence.pk/forums/world-affairs/19492-hindu-origins-two-nation-theory.html.  
ಆಧಾರಗಳು:
೧. Jinnah and Secularism - BY PROF. DEEPAK BASU.
 http://www.ivarta.com/columns/OL_050703.html
೨.ಸೆಕ್ಯುಲರಿಸಮ್- ವಿಕೀಪೀಡೀಯ-MUHAMMAD – ALI- JINNAH
೩.M. A. Jinnah was not secular « Pakistan Historian
pakhistorian.com/2010/03/22/m-a-jinnah-was-not-secular/
೪.Only Speech Secular, Not Jinnah-
www.rediff.com › News › Columnists
೫. ಅರುಣ್ ಶೌರಿ-ಎ ಸೆಕ್ಯುಲರ್ ಎಜೆಂಡಾ  (1997, ISBN 81-900199-3-7)
೬. Two Nation Theory: The Myth, The Reality
www.storyofpakistan.com/contribute.asp?artid=C031 -
೭. South Asian History: The Two Nation Theory, Partition, Riots, 1947 ...
india_resource.tripod.com/hist-2nation.html

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾವಡ ಸರ್ ಯಾಕೋ ನನ್ನ ಸರ್ವರ್ ಸರಿಯಾಗಿ ಕೆಲ್ಸ ಮಾಡ್ತಾ ಇಲ್ಲ ಸತ್ತಷ್ಟು ನಿಧಾನವಾಗಿದೆ, ಯಾಕೋ ಗೊತ್ತಿಲ್ಲ. ತುಂಬಾ ಆಕರವುಳ್ಳ ಉಪಯುಕ್ತ ಲೇಖನ ನಿಮ್ಮ ಶ್ರಮ ಸ್ತುತ್ಯಾರ್ಹ. ನನ್ನಿ