ಬೆಟ್ಟ ನಿಟ್ಟುಸಿರು ಬಿಟ್ಟಾಗ

To prevent automated spam submissions leave this field empty.

ಐಸ್ಲಂಡ್ ಒಂದು ಪುಟ್ಟ ದೇಶ. ವಿರಳವಾಗಿ ಕೇಳುವ ಹೆಸರು. ಅಂತರ ರಾಷ್ಟ್ರೀಯ ಬ್ಯಾನ್ಕುಗಳನ್ನು ಬಿಟ್ಟರೆ ಹೇಳಿಕೊಳ್ಳುವಂಥ ಉದ್ದಿಮೆಗಲಿಲ್ಲ. ಆದರೂ ಇತ್ತೀಚಿನ ಹಣಕಾಸು ಬಿಕ್ಕಟ್ಟಿನ ವಿದ್ಯಮಾನದವರೆಗೂ ವಿಶ್ವದ ಶ್ರೀಮಂತ ರಾಷ್ಟ್ರ ಗಳಲ್ಲಿ ಒಂದು. ಒಂದು ಲಕ್ಷ ಚದರಡಿಯ, ಸುಮಾರು ಮೂರು ಲಕ್ಷ ಜನಸಂಖ್ಯೆಯ ಯೂರೋಪಿನ ಈ ದ್ವೀಪ ಯಾರ ಕಣ್ಣಿಗೂ ಬೀಳದೆ (ಅಮೆರಿಕೆಯ ಹಾಗೆ ಎಲ್ಲಾ ಕಡೆ ಮೂಗು ತೂರಿಸದೆ)  ತನ್ನ ಪಾಡಿಗೆ ತಾನಿರುವ ದೇಶ. ಎಂಭತ್ತರ ದಶಕದಲ್ಲಿ ಪರಮಾಣು ಅಸ್ತ್ರಗಳ ನಿಯಂತ್ರಣಕ್ಕೆ ಅಮೇರಿಕ ಮತ್ತು ರಷ್ಯ ದೇಶಗಳ ನಾಯಕರು ತಮ್ಮ ಮಾತುಕತೆಗೆ ಆರಿಸಿಕೊಂಡಿದ್ದು ಐಸ್ಲೆಂಡ್ ದೇಶದ ರಾಜಧಾನಿಯಾದ "ರೇಕ್ಯವಿಕ್" ನಗರವನ್ನು.ರೇಗನ್, ಗೋರ್ಬಚೋಫ್ ನಡುವಿನ ಮಾತುಕತೆ ನಂತರ ಮತ್ತೊಮ್ಮೆ ಐಸ್ಲೆಂಡ್ ಸುದ್ದಿಯಲ್ಲಿ.

ಮಂಜಿನ ಉಡುಪು ಧರಿಸಿ (ನಮ್ಮ ಅಚ್ಚ ಬಿಳಿಯ ಖಾದಿ ಧರಿಸಿ ತಣ್ಣಗೆ ನಗುವ ಖದೀಮ ಪುಢಅರಿಗಳಂತೆ) ತಣ್ಣಗೆ ಮಗುಮ್ಮಾಗಿ ಮಲಗಿದ್ದ  Eyjafjallajokull ಬೆಟ್ಟ ತನ್ನದೇ ಆದ ಕಾರಣಕ್ಕೆ ಒಂದು ದಿನ ಏಪ್ರಿಲ್ ೧೭ ಕ್ಕೆ ದೊಡ್ಡದಾದ ನಿಟ್ಟುಸಿರು ಬಿಟ್ಟಿತು. Eyjafjallajokull ಜ್ವಾಲಾಮುಖಿ ಯ ಈ ಬೆಟ್ಟ ಉಗುಳಿತು ತನ್ನ ಒಡಲಲ್ಲಿದ್ದ ಕಹಿಯನ್ನು. ಬೂದಿಯನ್ನು, ಧೂಳನ್ನು. ಜ್ವಾಲಾಮುಖಿ ಬೂದಿಯನ್ನಲ್ಲದೆ ಬೇರೇನು ಚಿನ್ನ ಮುತ್ತು ರತ್ನ ಬಿಸಾಕುತ್ತದೆಯೇ ತನ್ನೊಡಲಿನಿಂದ ಎನ್ನಬೇಡಿ. ಫಿಲಿಪ್ಪೀನ್ಸ್ ದೇಶದಲ್ಲೂ ಇವೇ ಜ್ವಾಲಾಮುಖಿಗಳು. ಪಾಪ ಅವು ಬಡ ರಾಷ್ಟ್ರದ ಜ್ವಾಲಾ ಮುಖಿ, ಯಾರೂ ದೊಡ್ಡ ದಾಗಿ ತೆಗೆದು ಕೊಳ್ಳುವುದಿಲ್ಲ. ಆದರೆ ಮೇಲೆ ಹೇಳಿದ  Eyjafjallajokull ಜ್ವಾಲಾಮುಖಿ  ಸುದ್ದಿ ಮಾಡಿದ್ದು ಬೇರೆಯದೇ ಕಾರಣಕ್ಕೆ.  ಈ ನಿಟ್ಟುಸಿರಿಗೆ ಬರೀ ಐಸ್ಲೆಂಡ್ ದ್ವೀಪವಲ್ಲ ಹೆಚ್ಚು ಕಡಿಮೆ ಸಂಪೂರ್ಣ ಯೂರೋಪ್ ಬೆರಗಾಗಿ ನೋಡಿತು. ಯೂರೋಪಿನ ಆಗಸ ಈ ನಿಟ್ಟುಸಿರಿಗೆ ಸಹಕರಿಸಿ ತನ್ನ ಮಿತ್ರ ತನ್ನತ್ತ ನೋಡುತ್ತಾ ಹೊರಚೆಲ್ಲಿದ ಬೂದಿಯನ್ನು, ಧೂಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿತು. ಇತ್ತ ಯೂರೋಪಿನ ಬಹುತೇಕ ನಗರಗಳಲ್ಲಿ ಜನ ವಿಮಾನ ಯಾನ ಮಾಡಲಾಗದೆ ಸ್ವಾಲಾಮುಖಿ ಉಗುಳಿದ ಬೆತ್ತದೊಂದಿಗೆ ತಾವೂ ನಿಟ್ಟುಸಿರು ಬಿಟ್ಟರು. ಇತ್ತೀಚೆಗೆ ವಿಮಾನಾಪಘಾತದಲ್ಲಿ ನಿಧರಾದ ಪೋಲೆಂಡಿನ ಅಧ್ಯಕ್ಷ ಮತ್ತು ಇತರರ ಅಂತಿಮ ಸಂಸ್ಕಾರಕ್ಕೆ ಅಮೆರಿಕೆಯ ಅಧ್ಯಕ್ಷ ಹೋಗದಂತೆ ತಡೆ ಹಿಡಿಯಿತು. ವಿಮಾನಗಳ ಕಾರ್ಯಾಚರಣೆಯಿಂದ ಆದ ತೊಂದರೆಯಿಂದ ಯೂರೋಪ್ ಮಾತ್ರವಲ್ಲ ಜಗತ್ತಿನ ಬಹುತೇಕ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿತು ಈ ಜ್ವಾಲಾಮುಖಿ. ಅಮೆರಿಕೆಗೆ ಹೋಗಿದ್ದ ನಮ್ಮ ಪ್ರಧಾನಿಗಳೂ ಸಹ ಹಿಂತಿರುಗುವಾಗ ಸುತ್ತಿ ಬಳಸಿ ಭಾರತ ಸೇರಿಕೊಂಡು ಅವರೂ ನಿಟ್ಟುಸಿರು ಬಿಟ್ಟರು ಸುರಕ್ಷಿತವಾಗಿ ಸೇರಿದೆನಲ್ಲಾ ಎಂದು.ಮತ್ತೊಂದು ಸ್ವಾರಸ್ಯವೆಂದರೆ ಪ್ರತೀ ಘಟನೆ, ದುರ್ಘಟನೆ ಗೂ ನಾಮಗಳಿರುತ್ತವೆ. "ಹೈತಿ" ಭೂಕಂಪ, "ಕಟ್ರಿನ" ಬಿರುಗಾಳಿ, "ಅಲ್ ನಿನೋ" ಚಂಡ ಮಾರುತ ಹೀಗೆ. ಆದರೆ ಈ ಜ್ವಾಲಾಮುಖಿಗೆ ಸ್ವಲ್ಪ ದಿನ ಹೆಸರಿಲ್ಲ. ಹೆಸರಿದೆ, ಆದ್ರೆ ಹೇಳೋಕ್ಕೆ ಬರೋಲ್ಲ. tsunami ಬಂದಾಗ ಆಗಿದ್ದೂ ಇದೆ. tsunami ಯನ್ನು ಹೇಗೆ ಹೇಳಬೇಕು ಎಂದು ಹಲವರಿಗೆ ಗೊತ್ತಿರಲಿಲ್ಲ, ನಾನು "ಟ್ಸುನಾಮಿ", "ಟುಸುನಾಮಿ" ಅಂತ ಕೆಲ ದಿನ ಓಡಾಡಿದೆ. ಹಾಗೆಯೇ ಈ ಜ್ವಾಲಾಮುಖಿಗೂ ಒಂದು ವಿಚಿತ್ರ ಹೆಸರು. organic chemistry ಯಲ್ಲಿ ಬರುವ elements ಗಳ ಥರ. Eyjafjallajokull ಬೆಟ್ಟವನ್ನು "ಅಯಫಿಯತ್ಲಯೋಕುತ್ಲ್" ಎಂದು ಉಚ್ಚರಿಸಬೇಕು. ಒಹ್, ಇದೆಂಥಾ ಹೆಸರಪ್ಪಾ ಎಂದಿರಾ? ಬಿಳಿಯರಿಗೆ "ಶ್ರೀವೆಂಕಟಬಾಲಸುಭ್ರಮಣ್ಯಂಸ್ವಾಮೀ" ಎಂದು ಉಚ್ಚರಿಸು ಎಂದರೆ ಹೇಗಿರುತ್ತೋ ಹಾಗೆ ನಮಗೆ ಈ ಜ್ವಾಲಾಮುಖಿಯ ಹೆಸರು. Eyjafjallajokull, ಇದು ಮೂರು ಪದಗಳ ಸಮ್ಮಿಲನವಂತೆ “island-mountain-glacier” ಇವು ಆ ಮೂರು ಪದಗಳು.ಹೀಗೆ ಈ ಜ್ವಾಲಾಮುಖಿ ತನ್ನ ಬೂದಿಯಿಂದ ಎಬ್ಬಿಸಿದ ರಾದ್ಧಾಂತದಿಂದ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆ. ಪ್ರಯಾಣಿಕರಿಗೆ ಮಾತ್ರವಲ್ಲ, ಹೊಟ್ಟೆ ಬಾಕರಿಗೂ ಸಹ. ಹಾಂ? ಹೊಟ್ಟೆ ಬಾಕರಿಗೂ ಈ ಜ್ವಾಲಾ ಮುಖಿಗೂ ಏನು ಸಂಬಂಧ? ಮರೆತಿರಾ? ಇಡೀ ವಿಶ್ವವೇ ಈಗ ಒಂದು ಗ್ರಾಮದಂತೆ. ನಮ್ಮ ಗ್ರಾಮಗಳಿಂದ ಪಟ್ಟಣಗಳಿಗೆ ಸರಬರಾಜಾಗುವುದಿಲ್ಲವೇ ಸಾಮಾನುಗಳು? ಅದೇ ರೀತಿ ನಮ್ಮ ಕಂಪೆನಿ ಸಹ ಪ್ರತೀ ವಾರ ವಿಮಾನದ ಮೂಲಕ ತಾಜಾ ಆಹಾರ ಪದಾರ್ಥಗಳನ್ನ ಯೂರೋಪಿನಿಂದ ತರಿಸುತ್ತದೆ. ಹಾಲಂಡ್ ದೇಶದಿಂದ salmon ಮೀನು ಮತ್ತು ಹಲವು ನಮೂನೆಯ cheese ಗಳು ಪ್ರತೀವಾರ ಬರುತ್ತವೆ ಜೆಡ್ಡಾ ನಗರಕ್ಕೆ. ಈಗ ಈ ಮೀನು ಮತ್ತು cheese ಗಳ ಆಗಮನವಿಲ್ಲ ಯೂರೋಪಿನಿಂದ, ನೀಲಿ  ಆಗಸ ಅಗಸನ ಬಳಿ ಹೋಗಿ ತನ್ನ ಅಂಗಿ ಒಗೆಸಿಕೊಳ್ಳುವವರೆಗೂ. ಅಂದ್ರೆ ಆಕಾಶ ತಿಳಿಯಾಗಬೇಕು, ವಿಮಾನ ಹಾರಲು, ವಿಮಾನ ಹಾರುವ ತನಕ ಈ salmon ಮೀನಿನ "ವ್ಯಸನಿ"ಗಳು ಹಪ ಹಪಿಸಬೇಕು. ಹೇಗಿದೆ ನೋಡಿದ್ರಾ food chain ನ ಮರ್ಮ? ಜ್ವಾಲಾಮುಖಿ ಗೂ ಜೆಡ್ಡಾ ನಗರಕ್ಕೂ ಇರುವ ಸಂಬಂಧ?ಇದಕ್ಕೇ ಹೇಳೋದು...world is a global village ಅಂತ.       picture courtesy: Reuters 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅಬ್ದುಲ್, ನಮಸ್ಕಾರ. ಐಸ್ ಲ್ಯಾ೦ಡ್ ಬಗ್ಗೆ ಅಲ್ಲಿಯ ಜ್ವಾಲಾಮುಖಿಯು ಕೋಪಗೊ೦ಡಿರುವ ಬಗ್ಗೆಗಿನ ಮಾಹಿತಿಯನ್ನು ತಮ್ಮ ಲೇಖನದಲ್ಲಿ ಓದಿ,ತಿಳಿದುಕೊ೦ಡೆ. ಎ೦ದಿನ೦ತೆ ಅಬ್ದುಲ್ ಶೈಲಿ! ಉತ್ತಮ ಮಾಹಿತಿ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು. ನಮಸ್ಕಾರ, ನನ್ನಿ.