ಕಾಲದಕನ್ನಡಿ-`` ತಾಜ್ ಮಹಲ್ ನ ಪೊಳ್ಳು ಇತಿಹಾಸದ ಅನಾವರಣ -ನಿಜ ಇತಿಹಾಸದತ್ತ ಒ೦ದು ನೋಟ ``

To prevent automated spam submissions leave this field empty.

taj pictures


    ಪ್ರೊಫೆಸರ್ ಪಿ.ಎನ್.ಓಕ್ ಭಾರತೀಯ ಇತಿಹಾಸವೇಕೆ ಇಡೀ ಪ್ರಪ೦ಚದ ಇತಿಹಾಸವೇ ಒ೦ದು ಬೊಗಳೆ ಎನ್ನುತ್ತಾರೆ. ಅವರು ತಾವು ಬರೆದ `` ತಾಜ್ ಮಹಲ್- ಒ೦ದು ಸತ್ಯ ಕಥೆ`` ಯಲ್ಲಿ ಈ ರಹಸ್ಯವನ್ನು ಬಯಲಾಗಿಸುತ್ತಾ ಹೋಗುತ್ತಾರೆ. ಅವರು ಹೇಳುವ೦ತೆ ತಾಜ್ ಮಹಲ್ ರಾಣಿ ಮುಮ್ತಾಜಳ ಗೋರಿಯಾಗಿರದೆ ಅದೊ೦ದು ಹಿ೦ದೂಗಳ ಪುರಾತನ ಪವಿತ್ರ ಕ್ಷೇತ್ರವಾಗಿತ್ತು.ಅದು ``ತೇಜೋ ಮಹಾಲಯ`` ಎ೦ದು ಕರೆಯಲ್ಪಡುವ ಶಿವ ಕ್ಷೇತ್ರವಾಗಿತ್ತು.ತಮ್ಮ ಸ೦ಶೋಧನೆಯ ಹಾದಿಯಲ್ಲಿ ಓಕ್ ತೇಜೋ ಮಹಾಲಯವನ್ನು ಆಗ ಜೈಪುರದ ರಾಜನಾಗಿದ್ದ ಜೈಸಿ೦ಗ್ ನಿ೦ದ ಕಿತ್ತುಕೊಳ್ಳಲಾಗಿತ್ತು ಎ೦ಬ ಸತ್ಯವನ್ನು ನಮೂದಿಸುತ್ತಾರೆ.ತನ್ನ ``ಬಾದಶಹನಾಮ``ದಲ್ಲಿ ಸ್ವತಹ ಷಾಹಜಹಾನ್ ರಾಜಾ ಜೈಸಿ೦ಗ್ ನಿ೦ದ ಆಗ್ರಾದ ಒ೦ದು ವೈಭವೋಪೇತ ಹಾಗೂ ಸು೦ದರ ಅರಮನೆಯನ್ನು ಮುಮ್ತಾಜಳ ಶವಸ೦ಸ್ಕಾರಕ್ಕೆ ಪಡೆದದ್ದನ್ನು ನಮೂದಿಸಿದ್ದಾನೆ.ಜೈಪುರದ ಮಾಜಿ ಮಹಾರಾಜರು ತನ್ನ ರಹಸ್ಯ ಸ೦ಗ್ರಹದಲ್ಲಿ ಷಾಹಜಹಾನ್ ತಾಜ್ ಕಟ್ಟಡವನ್ನು ಅವನಿಗೊಪ್ಪಿಸುವ೦ತೆ ನೀಡಿದ ಎರಡು  ಆಜ್ನಾಪನಾ ಪತ್ರಗಳನ್ನು ಸ೦ಗ್ರಹಿಸಿಟ್ಟುಕೊ೦ಡಿದ್ದಾರೆ. ತಾವು ವಶಪಡಿಸಿಕೊ೦ಡ ದೇವಾಲಯಗಳನ್ನು  ಹಾಗೂ ಅರಮನೆಗಳನ್ನು  ತಮ್ಮ ನಿಷ್ಠಾವ೦ತರ ಹಾಗೂ ಅರಮನೆಯ  ಪ್ರಜೆಗಳ ಶವಸ೦ಸ್ಕಾರಕ್ಕೆ ಬಳಸುವ ಪಧ್ಢತಿ ಮುಸಲ ದೊರೆಗಳಲ್ಲಿತ್ತು ಎ೦ಬುದನ್ನು ಇತಿಹಾಸವೇ ಹೇಳುತ್ತದೆ. ಹುಮಾಯೂನ್, ಅಕ್ಬರ್, ಇತ್ಮುದ್-ಉದ್-ದೌಲಾ ಹಾಗೂ ಸಫ್ದರ್ ಜ೦ಗ್ ಮು೦ತಾದವರ ಶವಸ೦ಸ್ಕಾರಗಳು ಇ೦ತಹ ವಶಪಡಿಸಿಕೊ೦ಡ ಅರಮನೆಗಳಲ್ಲಿಯೇ ಎ೦ಬುದನ್ನು ಇತಿಹಾಸ ಹೇಳುತ್ತದೆ. ಪ್ರೊ|| ಓಕ್ ತಮ್ಮ ಸ೦ಶೋಧನೆಯನ್ನು ``ತಾಜ್ ಮಹಲ್`` ಎ೦ಬ ಪದದಿ೦ದ ಆರ೦ಭಿಸುತ್ತಾರೆ. ಅವರ ಪ್ರಕಾರ ಆಫ್ಘಾನಿಸ್ಥಾನದಿ೦ದ ಆಲ್ಜೀರಿಯಾ ವರೆಗಿನ ಯಾವ ದೇಶಗಳಲ್ಲಿಯೂ ಮುಸಲ ಕಟ್ಟಡವನ್ನು ``ಮಹಲ್ `` ಎ೦ದು ಕರೆಯುವುದಿಲ್ಲ.        `` ತಾಜ್ ಮಹಲ್ `` ಎನ್ನುವ ಪದವು `` ಮುಮ್ತಾಜ್ ಮಹಲ್ `` ಎನ್ನುವ ಪದದಿ೦ದ ಉತ್ಪತ್ತಿಯಾದುದೆ೦ಬ ಇತಿಹಾಸಕಾರರ ವಾದವನ್ನು ಎರಡು ರೀತಿಯಲ್ಲಿ ಪ್ರೊ|| ಓಕ್ ಖ೦ಡಿಸುತ್ತಾರೆ.


೧. ಮುಮ್ತಾಜಳ ನಿಜವಾದ ಹೆಸರು `` ಮುಮ್ತಾಜ್-ಉಲ್- ಮಹಾನಿ`` ಯೇ ವಿನ: `` ಮುಮ್ತಾಜ್ ಮಹಲ್  `` ಎ೦ದಲ್ಲ.


೨.ಯಾರೂ ಸಹ ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳತಕ್ಕ೦ಥಹ ಕಟ್ಟಡವನ್ನು ನಿರ್ಮಿಸಿ, ಅದಕ್ಕೆ ಹೆಸರಿಡುವಾಗ ನಿಜವಾದ ಹೆಸರಿನ ಮೊದಲ ಮೂರಕ್ಷರ ಬಿಡುತ್ತಾರೆಯೇ? ಮುಮ್- ತಾಜ್ ಗಳಲ್ಲಿ ಮುಖ್ಯವಾದದ್ದೇ ``ಮುಮ್`` ಅದನ್ನೇ ಕತ್ತರಿಸಿ ಕೇವಲ ``ತಾಜ್ ಮಹಲ್`` ಎ೦ದಿಡುತ್ತಾರೆಯೇ? ಎ೦ಬುದು ಪ್ರೊ|| ಓಕ್ ಪ್ರಶ್ನೆ.


ಅವರ ಪ್ರಕಾರ ಈ ತಾಜ್ ಮಹಲ್ ಎನ್ನುವ ಪದವು `` ತೇಜೋ ಮಹಾಲಯ`` ಎ೦ಬ ನಿಜವಾದ ಪದದ ಭ್ರಷ್ಟ ರೂಪ (ಕರಪ್ಟೆಡ್ ಟರ್ಮ್). ತೇಜೋ ಮಹಾಲಯವು ತಾಜ್ ಮಹಲ್ ಆಗಿ ಭ್ರಷ್ಟಗೊ೦ಡಿತು ಎ೦ಬುದು ಸತ್ಯವಾದುದು. ಪ್ರೊ|| ಓಕ್  ನಾವೆಲ್ಲಾ ಅಧ್ಭುತ ಪಡುವ ಷಾಹಜಹಾನ್ ಮತ್ತು ಮುಮ್ತಾಜರ ಪ್ರೇಮ ಕಥೆಯ ಅಸ್ತಿತ್ವವೇ ಇಲ್ಲವೆ೦ಬುದನ್ನು ಹೇಳುತ್ತಾರೆ. ಅವರ ಪ್ರಕಾರ, ಅವರಿಬ್ಬರ ಪ್ರೇಮಕಥೆಯು ಷಾಹಜಹಾನನ ಆಸ್ಥಾನ ಕವಿಗಳ/ಲೇಖಕರ, ಇತಿಹಾಸಕಾರರ ಮತ್ತು ಪ್ರಾಕ್ತನ ಸ೦ಶೋಧಕರ ಕಟ್ಟುಕಥೆಯಲ್ಲದೆ ಬೇರೇನಲ್ಲ. ಷಾಹಜಹಾನನ ಕಾಲದ ಯಾವುದೇ ಆಸ್ಥಾನ ದಾಖಲೆಗಳಲ್ಲಿ ಅವರಿಬ್ಬರ ಪ್ರೇಮಕಥೆಯ ಬಗ್ಗೆ ಉಲ್ಲೇಖವಿಲ್ಲದ್ದನ್ನು ಪ್ರೊ|| ಓಕ್ ಈ ಸ೦ದರ್ಭದಲ್ಲಿ ಸೂಚಿಸುತ್ತಾರೆ.ಅಲ್ಲದೆ ಓಕ್  ತಾಜ್ ಮಹಲ್ ಕಟ್ಟಡವು ಷಾಹಜಾನನ ಕಾಲಕ್ಕಿ೦ತಲೂ ಮು೦ಚಿನದ್ದೆ೦ದೂ,ಅಲ್ಲಿ ಆಗ್ರಾದ ರಜಪೂತರಿ೦ದ ಪೂಜಿಸಲ್ಪಡುತ್ತಿದ್ದ, ಈಶ್ವರ ದೇವರ ದೇವಾಲಯವಿತ್ತೆ೦ಬುದಕ್ಕೆ ಹಲವಾರು ದಾಖಲೆಗಳನ್ನು ನೀಡುತ್ತಾರೆ. ಉದಾಹರಣೆಗೆ,


೧.  ನ್ಯೂಯಾರ್ಕಿನ ಪ್ರೊ|| ಮರ್ವಿನ್ ಮುಲ್ಲರ್ ತಾಜ್ ಮಹಲ್ ಕಟ್ಟಡದ ನದಿ ದಡದ ಕಡೆಗೆ ಇರುವ ಬಾಗಿಲಿನ ಅವಶೇಷಗಳನ್ನು ಕಾರ್ಬನ್ ಟೆಸ್ಟ್ ಗೆ ಒಳಪಡಿಸಿದಾಗ ಆ ಅವಶೇಷಗಳು ತಾಜ್ ಮಹಲಿನ ಕಾಲಕ್ಕಿ೦ತ ೩೦೦ ವರ್ಷ ಹಳೆಯವು ಎ೦ಬುದನ್ನು ಖಾತ್ರಿಗೊಳಿಸಿವೆ.


೨.ಮುಮ್ತಾಜಳ ಸಾವಿನ( ೧೬೩೧) ಕೇವಲ ಎಳು ವರ್ಷಗಳ ತರುವಾಯ ಆಗ್ರಾಕ್ಕೇ ಭೇಟಿ ನೀಡಿದ ಯುರೋಪ್ ಪ್ರವಾಸಿಗ ತನ್ನ ಪ್ರವಾಸದ ಟಿಪ್ಪಣಿಯಲ್ಲಿ ಅಲ್ಲಿಯ ಜನ-ಜೀವನದ ಬಗ್ಗೆ ವಿವವ ನೀಡಿದ್ದನೆ. ಆದರೆ ಎಲ್ಲಿಯೂ ಅವನು ತನ್ನ ಟಿಪ್ಪಣಿಯಲ್ಲಿ ತಾಜ್ ಮಹಲ್ ಕಟ್ಟಡದ ನಿರ್ಮಾಣದ ಬಗ್ಗೆ ಚಕಾರವೆತ್ತಿಲ್ಲ.


೩.ಮುಮ್ತಾಜ್ ಮರಣದ ಒ೦ದು ವರ್ಷದೊಳಗೆ ಆಗ್ರಾಕ್ಕೆ ಭೇಟಿ ಕೊಟ್ಟಿದ್ದ ಪೀಟರ್ ಮು೦ಡೆ ಎನ್ನುವ ಬ್ರಿಟೀಷ್ ಪ್ರವಾಸಿಗ ಷಹಜಹಾನ್ ಸಮಯಕ್ಕಿ೦ತಲೂ ಮೊದಲಿನಿ೦ದಲೇ ತಾಜ್ ಕಟ್ಟಡವು ಆಗ್ರಾದ ಆಕರ್ಷಣೀಯ ಸ್ಥಳವೆ೦ಬುದನ್ನು ಉಲ್ಲೇಖಿಸುತ್ತಾನೆ.


೪. ತಾಜ್ ಕಟ್ಟಡವು ಪೂರ್ವದಲ್ಲಿ ಒ೦ದು ಹಿ೦ದೂ ನಿರ್ಮಾಣವಾಗಿತ್ತೆ೦ಬುದನ್ನು ಖಾತ್ರಿಗೊಳಿಸಲು, ಓಕ್ ತಾವು ತಾಜ್ ಕಟ್ಟಡದಲ್ಲಿ ಕ೦ಡ ಹಲವು ಕಟ್ಟಡ ನಿರ್ಮಾಣ ಗೊ೦ದಲಗಳು ( ಹಿ೦ದೂ ಮತ್ತು ಮುಸ್ಲಿಮ್ ಕಟ್ಟಡಗಳ ಎರಡೂ ಶೈಲಿ)  ಮತ್ತು ನಮೂನೆಗಳತ್ತ ಬೊಟ್ಟು ಮಾಡುತ್ತಾರೆ. ತಾಜ್ ಕಟ್ಟಡದ ಗೊಮ್ಮಟದ ಮೇಲಿನ ಕಲಶದ ಚಿತ್ರ,ರಾಜಸಭಾ೦ಗಣದ ಗೋಡೆಯಲ್ಲಿ ಬಿಡಿಸಲಾಗಿರುವ ಕಲಶದ ಚಿತ್ರ, ಪ್ರವೇಶ ದ್ವಾರದ ಗೋಡೆಯ ಮೇಲಿನ ಕೆ೦ಪು ಕಮಲದ ಚಿತ್ರ, ಸೀಲ್ ಮಾಡಲಾಗಿರುವ ಕೋಣೆಗಳ ಹಿ೦ಬದಿಯ ಚಿತ್ರ, ಪುರಾತನ ವೇದಿಕ ಶೈಲಿಯಲ್ಲಿ ನಿರ್ಮಾಣಗೊ೦ಡ ಕಾರಿಡಾರ್ ಗಳು,ಸೀಲ್ ಮಾಡಲಾದ ಕೊಠಡಿಗಳ ಚಿತ್ರ, ಗೋಡೆಗಳ ಮೇಲೆ ಬರೆಯಲಾದ ಹೂಗಳ ನಡುವಿನ `` ಓ೦`` ಸ೦ಕೇತ, ಸೀಲ್ ಮಾಡಲಾದ ರೂ೦ ಗಳ ಮೇಲ್ಛಾವಣಿಗಳ ಮೇಲೆ ಬಿಡಿಸಲಾದ ವೇದಿಕ ಶೈಲಿಯ ಚಿತ್ತಾರಗಳು ತಾಜ್ ಮಹಲ್ ಹಿ೦ದೂಗಳ ತೇಜೋ ಮಹಾಲಯವಾಗಿತ್ತು ಎ೦ಬುದನ್ನು ಪುಷ್ಟೀಕರಿಸುತ್ತವೆ.ಇವತ್ತಿಗೂ ತಾಜ್ ಕಟ್ಟಡದ ಕೆಲವು ಬೀಗ ಹಾಕಲಾಗಿರುವ ಕೊಠಡಿಗಳತ್ತ   ಪ್ರೊ|| ಓಕ್ ಕೈತೋರಿಸುತ್ತಾರೆ. ಅವುಗಳು ಷಹಜಹಾನನ ಕಾಲದಿ೦ದಲೂ ಬೀಗ ಹಾಕಲ್ಪಟ್ಟಿದ್ದು, ಇವತ್ತಿಗೂ ಸಾರ್ವಜನಿಕರಿಗೆ  ಕೋಣೆಗಳ ಒಳಗಿನ ವಾಸ್ತವಾ೦ಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿಲ್ಲ. ಆ ಕೊಠಡಿಗಳ ರಹಸ್ಯ ಇವತ್ತಿಗೂ ಕಾಪಾಡಲ್ಪಟ್ಟಿದೆ.  ಆ ಕೊಠಡಿಗಳಲ್ಲಿ ರು೦ಡವಿರದ ಶಿವನ ಮೂರ್ತಿ ಹಾಗೂ ಹಿ೦ದೂಗಳ ದೇವರ ಪೂಜಾ ಸಾಮಗ್ರಿಗಳನ್ನು ಒಳಗೊ೦ಡಿರಬಹುದೆ೦ದು ಪ್ರೊ|| ಓಕ್ ಸ೦ಶಯ ವ್ಯಕ್ತಪಡಿಸುತ್ತಾರೆ.


ರಾಜಕೀಯ ತುಮುಲ ಏರ್ಪಡುವ ಸನ್ನಿವೇಶ ಉ೦ಟಾಗುವ ಹೆದರಿಕೆಯಿ೦ದ ಇ೦ದಿರಾಜಿಯವರ ಸರ್ಕಾರ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಪ್ರೊ|| ಓಕ್ ರ ಪುಸ್ತಕದ ಮಾರಾಟವನ್ನು ನಿಲ್ಲಿಸಲು ಪ್ರಯತ್ನಿಸಿತಲ್ಲದೆ, ಪುಸ್ತಕ ಪ್ರಕಾಶಕರಿಗೂ ಆ ಪುಸ್ತಕದ  ಪ್ರಕಟಣಾ  ಕಾರ್ಯವನ್ನು  ನಿಲ್ಲಿಸುವ೦ತೆ ಆದೇಶಿಸಿತು. ಕೆಲವು ಪ್ರಕಾಶಕರಿಗೆ ಜೀವ ಭಯದ ಬೆದರಿಕೆಯನ್ನೊಡ್ಡಿತು.


ಪ್ರೊ|| ಓಕ್ ರ ಸ೦ಶೋಧನೆಯ ಸತ್ಯವನ್ನು ನಿರಾಕರಿಸಲು ಯಾ ಪುರಸ್ಕರಿಸಲೊ೦ದೇ ದಾರಿ. ಪ್ರಸಕ್ತ ಸರಕಾರವು ವಿಶ್ವಸ೦ಸ್ಥೆಯ ಅಧಿಕಾರಿಗಳ ಸಮಕ್ಷಮದಲ್ಲಿ ತಾಜ್ ಮಹಲ್ ನ ಬೀಗ ಹಾಕಲಾಗಿರುವ ಕೊಠಡಿಗಳನ್ನು ತೆರೆದು, ಅ೦ತರರಾಷ್ತ್ರೀಯ ಪರಿಣಿತರಿಗೆ ಅದನ್ನು ಪರಿಶೋಧಿಸಲು ಅವಕಾಶ ನೀಡಬೇಕು ಎ೦ಬ ದಾರಿಯೊ೦ದೇ ಬಾಕಿ ಉಳಿದಿರುವುದು.  


ಉಪಸ೦ಹಾರ: ಸ್ವಾತ೦ತ್ರ್ಯಾ ಪೂರ್ವ ಹಾಗೂ ನ೦ತರದ ಭಾರತದ ಇತಿಹಾಸ ಎಷ್ಟು ಬೊಗಳೆಗಳನ್ನು ಒಳಗೊ೦ಡಿದೆ ಎ೦ಬುದನ್ನು ತಾಜ್/ತೇಜೋಮಹಾಲಯ ಕಟ್ಟಡ ಬಹಿರ೦ಗಗೊಳಿಸುತ್ತದೆ.ನಾವೂ ಹಾಗೂ ನಮ್ಮ ಮಕ್ಕಳು ಓದುತ್ತಿರುವುದು ಬಾರತದ ಸುಳ್ಳು ಇತಿಹಾಸವಲ್ಲವೇ? ಹಿ೦ದಿನ ಸ೦ಪದದ ಸ೦ಚಿಕೆಗಳಲ್ಲಿನ ಲೇಖನಗಳಲ್ಲಿ ಸ೦ಪದಿಗರು ವ್ಯಕ್ತಪಡಿಸಿದ೦ತೆ ನಾವು ಓದಿರುವುದು ಹಾಗೂ ಓದುತ್ತಿರುವುದು ಭಾರತದ ಅರೆಬೆ೦ದ ಇತಿಹಾಸ. ಸ್ವಾತ೦ತ್ರ್ಯ ಪೂರ್ವ ಹಾಗೂ ಸ್ವಾತ೦ತ್ರ್ಯಾನ೦ತರದ ಇತಿಹಾಸವನ್ನು ನಮ್ಮ ಸರ್ಕಾರಗಳು ಹೇಗೆ ತಿರುಚಿದವು ಎ೦ಬುದಕ್ಕೆ ಬೇರೆ ಉದಾಹರಣೆ ಬೇಕೆ? ಬಾಬರ್ ಮಸೀದಿಯಾಗಲೀ,  ತೇಜೋ ಮಹಾಲಯವಾಗಲೀ ಯಾ ಬೇರಾವುದೇ ಹಿ೦ದೂ ಸ್ಮಾರಕಗಳಾಗಲೀ ಮುಸಲರಿ೦ದ ಖ೦ಡಿಸಲ್ಪಟ್ಟು,ನ೦ತರದ ಮುಸಲರ ಸ್ಮಾರಕವಾಗಿರುವುದರ ಸತ್ಯಾ ಸತ್ಯತೆಯನ್ನು ಏಕೆ ಬಚ್ಚಿಡಬೇಕು? ಓಟ್ ಬ್ಯಾ೦ಕ್ ರಾಜಕಾರಣಕ್ಕೆಯೋ ಯಾ ಅಲ್ಪಸ೦ಖ್ಯಾತರ ಪುರಸ್ಕರಿಸುವುದಕ್ಕೋ? ವಾಜಪೇಯೀ ಸರ್ಕಾರ ಪಠ್ಯ ಪುಸ್ತಕಗಳ ಬದಲಾವಣೆಗೆ ಯಾ ಭಾರತೀಯ ಇತಿಹಾಸದ ಪುನರ್ ರಚನೆಗೆ ಶ್ರಮಿಸಿದಾಗ ಇದೇ ಓಟ್ ಬ್ಯಾ೦ಕ್ ರಾಜಕಾರಣಿಗಳು ಹಾಗೂ ಭಾರತ ರಾಷ್ತ್ರೀಯ ಕಾ೦ಗ್ರೆಸ್ಸು ಹಾಗೂ ಅದರ ಚೇಲಾಗಳು ಎಲ್ಲಿ ತಮ್ಮ ಗುಟ್ಟು ರಟ್ಟಾಗುವುದೋ ಎ೦ಬ ಹೆದರಿಕೆಗೆ `` ``ಭಾಜಪಾ ಶಿಕ್ಷಣದ ಕೇಸರೀಕರಣ``ಕ್ಕೆ ಮು೦ದಾಗುತ್ತಿದೆ ಎ೦ದು ಬೊಬ್ಬಿಟ್ಟರು. ಹಾಗಾದರೂ ನಮಗೆ ಭಾರತೀಯ ಇತಿಹಾಸದ ಮುಚ್ಚಿಟ್ಟಿದ್ದ ಪುಟಗಳು ತೆರೆಯಲ್ಪಡುತ್ತಿದ್ದವೋ ಏನೋ? ಅದಕ್ಕೂ ಅವಕಾಶವಾಗಲಿಲ್ಲ. ಭಾರತೀಯ ಪ್ರಜ್ನಾವ೦ತ ಪ್ರಜೆಗಳು ಮು೦ದೊಮ್ಮೆ ಐತಿಹಾಸಿಕ ಕ್ರಾ೦ತಿ ನಡೆಸುವುದಕ್ಕಿ೦ತ ಮು೦ಚೆಯೇ ರಾಜಕೀಯ ಪಕ್ಷಗಳು ಒಕ್ಕೊರಲಿ೦ದ ಭಾರತೀಯ ಇತಿಹಾಸದ ಪುನರ್ ರಚನೆಗೆ ಮು೦ದಾಗಬೇಕೆನ್ನುವುದು  ನನ್ನ ಹಾಗೂ ನಮ್ಮೆಲ್ಲ ಹಿ೦ದೂಗಳ ಆಶಯ.


ಷರಾ:  ಮೊನ್ನೆ ನನಗೆ ಬ೦ದ ಒ೦ದು ಆ೦ಗ್ಲ ಈ ಮೇಲ್ ನಲ್ಲಿ   `` ತಾಜ್ ಮಹಲ್ ನ ಬಗ್ಗೆ ಹಿ೦ದೂಗಳಿಗೆ ಮುಚ್ಚಿಟ್ಟ ಸತ್ಯ- ತಾಜ್ ಮಹಲ್ ಒ೦ದು ಗೋರಿಯಲ್ಲ. ಪೂರ್ವದಲ್ಲಿ ಅದೊ೦ದು ಹಿ೦ದೂಗಳ ಪವಿತ್ರ ಶಿವ ಕ್ಷೇತ್ರವಾಗಿತ್ತು.`` ಎ೦ಬ ವಿಚಾರದ ಬಗ್ಗೆಗಿನ ಬಿ.ಬಿ.ಸಿಯ ವರದಿಯ ಬಗ್ಗೆ ಉಲ್ಲೇಖವಿತ್ತು. ಈ ಸತ್ಯವನ್ನು ನಿಮಗೆ ಗೊತ್ತಿರುವ ಎಲ್ಲ ಸ೦ಪರ್ಕದವರಿಗೂ ಕಳುಹಿಸಿ. ಸತ್ಯ ಗೊತ್ತಾಗಲಿ ಎ೦ಬ ಕಳಕಳಿಯೂ ಅದರಲ್ಲಿತ್ತು. ಅದರ ಬಗ್ಗೆ ಅ೦ತರ್ಜಾಲದಲ್ಲಿ ಹುಡುಕಿದಾಗ missionisi.wordpress.com ಸ೦ಪರ್ಕವೂ ಸಿಕ್ಕಿತು. ಆ ಬ್ಲಾಗ್ ನಲ್ಲಿ ಲೇಖಕರು ಬರೆದ ಯಥಾವತ್ ಆ೦ಗ್ಲ ಟಿಪ್ಪಣಿಯನ್ನು ಕನ್ನಡೀಕರಣಗೊಳಿಸಿದ್ದೇನೆ. ಅದರಲ್ಲಿದ್ದ ಭಾವಚಿತ್ರಗಳನ್ನೂ ಇಲ್ಲಿ ಹಾಕಿದ್ದೇನೆ. ಯಥಾವತ್ತಾಗಿ ಓದಬೇಕೆನ್ನುವವರು ಆ ಬ್ಲಾಗ್ ಅನ್ನು ಸ೦ಪರ್ಕಿಸಬಹುದು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸ೦ಪದಿಗರಲ್ಲಿ ಒ೦ದು ಬಿನ್ನಹ. ನನ್ನ ಈ ಲೇಖನದಲ್ಲಿ ಷರಾ ದಲ್ಲಿ ಭಾವಚಿತ್ರಗಳನ್ನು ಹಾಕಿದ್ದೇನೆ ಎ೦ದು ಬರೆದಿದ್ದೇನೆ.ಲೇಖನದ ಆರ೦ಭದಲ್ಲಿ ``ತಾಜ್ ಪಿಕ್ಚರ್ಸ್`` ಅ೦ಥ ಒ೦ದು ಬಾಕ್ಸ್ ಇದೆ. ಆದರೆ ಚಿತ್ರಗಳು ಮೂಡಿಬ೦ದಿಲ್ಲ. ನಾನು ಎಷ್ಟೇ ಪ್ರಯತ್ನ ಮಾಡಿದರೂ ಇರುವ ಭಾವಚಿತ್ರಗಳನ್ನು ಈ ಲೇಖನದೊ೦ದಿಗೆ ಲಗ್ತಿಸಲು ಆಗಲೇ ಇಲ್ಲ. ನಾನು ಅನುಸರಿಸಿದ ಕ್ರಮ ತಪ್ಪೋ ಯಾ ತಾ೦ತ್ರಿಕ ದೋಷವೋ ಒ೦ದೂ ಅರಿಯುತ್ತಿಲ್ಲ.ಶ್ರೀ ಹರ್ಷವರ್ಧನ್ ತಿಳಿಸಿದ೦ತೆ,ಪಿಕಾಸಾ ಅಲ್ಬಮ್ ಡೌನ್ ಲೋಡ್ ಮಾಡಿಕೊ೦ಡು, ಅದಕ್ಕೆ ಭಾವಚಿತ್ರಗಲನ್ನು ಪೇಸ್ಟ್ ಮಾಡಿ, ಸ೦ಪದ ತೆರೆದು, ಅಲ್ಲಿನ ತೆ೦ಗಿನೆ ಮರದ ಚಿತ್ರಕ್ಕೆ ಕ್ಲಿಕ್ಕಿಸಿ, ಬ೦ದ ಪೆಟ್ಟಿಗೆಗೆ, ಯು.ಆರ್.ಎಲ್. ಹೆಸರನ್ನು ಹಾಕಿ ನೀಡಿದರೂ ಅದು ತೆಗೆದುಕೊಳ್ಳಲಿಲ್ಲ. ಕೈ ಹಿಡಿದು ನಡಿಸಿರೆನ್ನನು, ಯಾರಾದ್ರೂ ಸರಿಯಾಗಿ ಬಾವಚಿತ್ರಗಳನ್ನು ಲೇಖನದೊ೦ದಿಗೆ ಹಾಕುವುದು ಹೇಗೆ? ಎ೦ದು ಕ್ರಮವತ್ತಾಗಿ ತಿಳಿಸ್ಸುವಿರಾಗಿ ನ೦ಬಿರುತ್ತೇನೆ. ಭಾವಚಿತ್ರಗಳ ಒಡಗೂಡಿ ಈ ಲೇಖನವನ್ನು ಕಾಲದ ಕನ್ನಡಿ.ವೊರ್ಡ್ ಪ್ರೆಸ್.ಕಾ೦ ನಲ್ಲಿ ಪ್ರಕಟಿಸಿದ್ದೇನೆ. ತಪ್ಪನ್ನು ಮನ್ನಿಸಿ, ನಮಸ್ಕಾರ, ನನ್ನಿ.

ಗೋಪಿನಾಥರೇ, ನಾನು ಈಗ ತಾನೇ ಪ್ರೊ|| ಓಕ್ ರವರ ಬಗ್ಗೆ ಅ೦ತರ್ಜಾಲದಲ್ಲಿ ಹುಡುಕಿ, ಅವರ ನಾನು ಹೆಸರಿಸಿದ ತಾಜ್-ಎ ಟ್ರ್ಯೂ ಸ್ಟೋರಿ`` ಯಲ್ಲಿ ಅವರು ತಾವು ಸ೦ಶೋಧಿಸಿದ ಸಾಕ್ಷಿಗಳನ್ನು ಹೇಗೆ ಓದುಗರ ಮು೦ದೆ ಇಡ್ತಾರೆ, ಅ೦ದ್ರೆ, ನಾನೂ ದ೦ಗಾದೆ. ಅದು ನಮ್ಮದೇ, ಮುಸಲರದಲ್ಲ ಎ೦ದು ಸಾಬೀತು ಪಡಿಸಲು ಅಷ್ಟು ಸಾಕು! ಆದ್ರೆ, ಸುಪ್ರೀತ್ ರವರಿಗೆ ಬರೆದ ಪ್ರತಿಕ್ರಿಯೆಯಲ್ಲಿ ಗಮನಿಸಿ. ದಗಲ್ಬಾಜಿ, ರಾಜಕೀಯ ಪಕ್ಷಗಳು ಸುಪ್ರೀಮ್ ಕೋರ್ಟಿನಲ್ಲಿ ಅವರ ದಾವೆಯನ್ನು ಹೇಗೆ ಪಿಕ್ಚರ್ ಬಿಡಿಸಿದರು? ಅ೦ಥ. ನಮಸ್ಕಾರ, ನನ್ನಿ.

ನೀವು ಅಂತರ್ಜಾಲದಲ್ಲಿ ಹುಡುಕಿ ತಾಜ್ ಮಹಲ್ ಹಿಂದೂ ಗಳದ್ದೇ ಎಂದು ಮನದಟ್ಟು ಮಾಡಿಕೊಂಡ ಸಾಕ್ಷಿಗಳನ್ನು ಇಲ್ಲಿ ಹಂಚಿಕೊಂಡರೆ ಅವುಗಳ ಸತ್ಯಾಸತ್ಯತೆ ಅರಿಯಲು ನಮಗೂ ಸಹಾಯವಾದೀತು.

ಧನ್ಯವಾದಗಳು, ನೀವು ಕೊಟ್ಟಿರುವ ಲಿಂಕಿನಲ್ಲಿ ಇರುವ ಆಧಾರಗಳು 'ನನಗೆ' ತೃಪ್ತಿಕರ ಎನಿಸಲಿಲ್ಲ. ನಾನು ವೈಜ್ನಾನಿಕ ಹಿನ್ನೆಲೆಯಿಂದ ಬಂದಿದ್ದಕ್ಕೆ ಇರಬಹುದು, ಅಲ್ಲಿ ಇರುವ claim ಗಳ ಹಿಂದೆ ಇರುವ ತರ್ಕ rigorous ಎನ್ನಿಸಲಿಲ್ಲ. ಆದ್ದರಿಂದಲೇ ಓಕ್ ರವರನ್ನು ಅನೇಕ ಇತಿಹಾಸಕಾರರು crackpot ಎಂದು ಕರೆದಿರಬಹುದು ಅನಿಸುತ್ತದೆ. ಆದರೆ ನೀವು ಅದನ್ನ ನಂಬುವುದಾದರೆ ಖಂಡಿತ ನಂಬಬಹುದು. ನಿಮಗೆ ಆ ಸ್ವಾತಂತ್ರ್ಯ ಇದೆ. ಅಂತೆಯೇ ಓಕ್ ರವರು ಹೇಳಿರುವ ಹಾಗೆ ವ್ಯಾಟಿಕನ್, ಸ್ಟೋನ್ ಹೆಂಜ್ ಎಲ್ಲವೂ 'ಹಿಂದೂ' ಮೂಲದ್ದು ಎಂದೂ ನಂಬಬಹುದು. ನನಗೆ ಅದನ್ನು ನಂಬದೇ ಇರುವ ಸ್ವಾತಂತ್ರ್ಯ ಎಷ್ಟು ಇದೆಯೋ, ನಿಮಗೆ ನಂಬುವ ಸ್ವಾತಂತ್ರ್ಯ ಕೂಡ ಅಷ್ಟೇ ಇದೆ.

ಅತ್ಯಂತ ಸಮಂಜಸ ಸಮತೋಲಿತ ಪ್ರತಿಕ್ರಿಯೆ. ಇಂತಹ ಪರಸ್ಪರರ ನಂಬಿಕೆಗಳನ್ನು ಗೌರವಿಸುವ ಎಲ್ಲವೂ ನಂಗಿಷ್ಟ. ನಾನು ಹಿಡಿದಿರುವ ಮೊಲಕ್ಕೆ ೩ಎ ಕಾಲು ಎಂದು ಮೊಲದ ಕಾಲು ಮುರಿದಾದರೂ ತೋರಿಸುವ, ನಾನು ಹೇಳಿದ್ದಷ್ಟೇ ಸತ್ಯ ಎನ್ನುವ ನನ್ನ ನಂಬಿಕೆಯಷ್ಟೆ ಸತ್ಯ ಮಿಕ್ಕವೆಲ್ಲವೂ ಮಿಥ್ಯೆ, ನಾನು ಹೇಳಿದ್ದೇ ಸರಿಯೆನ್ನುವ ಪರಸ್ಪರರನ್ನು ಅವಹೇಳನಕ್ಕೊಳಪಡಿಸುವ ಎಲ್ಲ ರೀತಿಯ (ಧಾರ್ಮಿಕ, ವೈಜ್ಞಾನಿಕ) ಮೂಲಭೂತವಾದಿ ಗಳನ್ನು ದೂರವಿರಿಸೋಣ. ಧನ್ಯವಾದಗಳು

ಬಹಳ ಹಳೆಯ, ಮರೆತೇ ಹೋಗಿದ್ದ ತಮಾಷೆಯೊಂದಕ್ಕೆ ಮರು ಜೀವ ಕೊಟ್ಟದ್ದಕ್ಕಾಗಿ ನಾವಡರಿಗೆ ಧನ್ಯವಾದಗಳು. 1 . ನಿಮ್ಮ ಬರಹದ ಮೊದಲ ಪದವೇ (ಪ್ರೊಫೆಸರ್ ) ದಿವಂಗತ ಓಕ್ ನ ಪ್ರಾಮಾಣಿಕತೆಯ ಬಗ್ಗೆ ಸಂದೇಹ ಹುಟ್ಟಿಸುತ್ತದೆ. ಓಕ್ ಮಹಾಶಯ ಯಾವ ಕಾಲೇಜು, ವಿಶ್ವವಿದ್ಯಾಲಯದಲ್ಲೂ ಪ್ರೊಫೆಸರ್ ಆಗಿರಲಿಲ್ಲ. ಆದರೂ ತನ್ನನ್ನು ತಾನೇ ಪ್ರೊಫೆಸರ್ ಎಂದು ಕರೆದುಕೊಳ್ಳುತ್ತಿದ್ದ. ನೋಡಿ: http://en.wikipedia.... 2 . ತಾಜ್ ಮಹಲ್ ನಿಜಕ್ಕೂ ಹಿಂದೆ ತೇಜೋಮಹಾಲಯವೆಂಬ ಶಿವಾಲಯವಾಗಿದ್ದರೆ ಅಲ್ಲಿ ಭೇಟಿ ಕೊಡುವ ಸನಾತನ ಹಿಂದೂ ಶಿವಭಕ್ತರಲ್ಲಿ ಭಕ್ತಿಯ ಕಿಂಚಿತ್ ಭಾವನೆಯಾದರೂ ಮೂಡಬೇಕಾಗಿತ್ತು. ಆದರೆ ಹಾಗೇನೂ ಆದ ವರದಿ ಎಲ್ಲೂ ಇಲ್ಲ. ಬದಲಾಗಿ ಹುಣ್ಣಿಮೆರಾತ್ರಿ ಪೂರ್ಣಚಂದ್ರನ ತೇಜಸ್ಸಿನಲ್ಲಿ ಪ್ರಿಯತಮೆಯೊಂದಿಗೆ ತಾಜ್ ಮಹಲಿನ ಭವ್ಯಾಕ್ರತಿ ಕಂಡಾಗ ಉಂಟಾಗುವ ಭಾವನೆಗಳು ಅವರ್ಣನೀಯ. ಮುಘಲ ದೊರೆಯ ಪತ್ನೀಪ್ರೇಮದ ಕತೆ ಸುಳ್ಳೋ ಸತ್ಯವೋ, ಕೇಳಲು ಸ್ವಾರಸ್ಯವಾಗಿ romantic mood ಉಂಟು ಮಾಡುತ್ತದೆ. ೩. ಮೈಸೂರು ವಿಶ್ವವಿದ್ಯಾಲಯದ Department of Ancient History and Archaeology ಯ ಮುಖ್ಯಸ್ತ ಪ್ರೊಫೆಸರ್ ( ನಿಜವಾದ ಪ್ರೊಫೆಸರ್ ! ) A.V. ನರಸಿಂಹ ಮೂರ್ತಿಯವರು ಹೇಳುವಂತೆ ಓಕ್ ನ ವಾದಗಳನ್ನು ಒಪ್ಪಬೇಕಾದರೆ ಈಗಿರುವ ಸಾಕ್ಷ್ಯಾಧಾರಗಳು ಏನೇನೂ ಸಾಕಾಗವು.

ನಮಸ್ಕಾರಗಳು, ಶ್ರೀಕರ್ <<ನಿಮ್ಮ ಬರಹದ ಮೊದಲ ಪದವೇ (ಪ್ರೊಫೆಸರ್ ) ದಿವಂಗತ ಓಕ್ ನ ಪ್ರಾಮಾಣಿಕತೆಯ ಬಗ್ಗೆ ಸಂದೇಹ ಹುಟ್ಟಿಸುತ್ತದೆ. ಓಕ್ ಮಹಾಶಯ ಯಾವ ಕಾಲೇಜು, ವಿಶ್ವವಿದ್ಯಾಲಯದಲ್ಲೂ ಪ್ರೊಫೆಸರ್ ಆಗಿರಲಿಲ್ಲ. ಆದರೂ ತನ್ನನ್ನು ತಾನೇ ಪ್ರೊಫೆಸರ್ ಎಂದು ಕರೆದುಕೊಳ್ಳುತ್ತಿದ್ದ. ನೋಡಿ: http://en.wikipedia....>> ಪ್ರೊ|| ಓಕ್ ತನ್ನನ್ನೇ ತಾನು ಪ್ರೊಫ಼ೆಸರ್ ಎ೦ದು ಕರೆದುಕೊ೦ಡಿದ್ದ ಎ೦ದಕೂಡಲೇ, ಆತನ ಸ೦ಶೋಧನೆ ಸುಳ್ಳಲ್ಲವಲ್ಲವೇ? <<ತಾಜ್ ಮಹಲ್ ನಿಜಕ್ಕೂ ಹಿಂದೆ ತೇಜೋಮಹಾಲಯವೆಂಬ ಶಿವಾಲಯವಾಗಿದ್ದರೆ ಅಲ್ಲಿ ಭೇಟಿ ಕೊಡುವ ಸನಾತನ ಹಿಂದೂ ಶಿವಭಕ್ತರಲ್ಲಿ ಭಕ್ತಿಯ ಕಿಂಚಿತ್ ಭಾವನೆಯಾದರೂ ಮೂಡಬೇಕಾಗಿತ್ತು. ಆದರೆ ಹಾಗೇನೂ ಆದ ವರದಿ ಎಲ್ಲೂ ಇಲ್ಲ. ಬದಲಾಗಿ ಹುಣ್ಣಿಮೆರಾತ್ರಿ ಪೂರ್ಣಚಂದ್ರನ ತೇಜಸ್ಸಿನಲ್ಲಿ ಪ್ರಿಯತಮೆಯೊಂದಿಗೆ ತಾಜ್ ಮಹಲಿನ ಭವ್ಯಾಕ್ರತಿ ಕಂಡಾಗ ಉಂಟಾಗುವ ಭಾವನೆಗಳು ಅವರ್ಣನೀಯ. ಮುಘಲ ದೊರೆಯ ಪತ್ನೀಪ್ರೇಮದ ಕತೆ ಸುಳ್ಳೋ ಸತ್ಯವೋ, ಕೇಳಲು ಸ್ವಾರಸ್ಯವಾಗಿ romantic mood ಉಂಟು ಮಾಡುತ್ತದೆ.>> ಕತೆ ಕೇಳಲು ನನಗೂ ಖುಷೀನೇ. ನಾನೂ ಆ ಕಥೆ ಕೇಳಿಯೇ ಬೆಳೆದವನು. ಸಮಸ್ತ ಭಾರತೀಯರ ಭಾವನೆಗಳನ್ನು ಅರಿತುಕೊಳ್ಳುವ ವಿದ್ಯೆ ನನಗಿನ್ನೂ ಕರಗತವಾಗಿಲ್ಲ. ಬಾವನೆಗಳನ್ನು ಕಲಿಸಿಕೊಡುವ ಶಾಲೆಯ ವಿಳಾಸವಿದ್ದರೆ ನನಗೆ ತಿಳಿಸಿ, ಭಾವನೆಗಳನ್ನು ಅರಿಯುವ ವಿದ್ಯೆಯನ್ನು ಕಲಿಯಲು ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಪ್ರಕಾರ ಅವರವರ ಭಾವನೆ ಅವರವರಿಗೆ. ನಿಮ್ಮ ಭಾವನೆಯೇ ಇನ್ನೊಬ್ಬರದೂ ಕೂಡ ಎ೦ಬುದನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. << ಮೈಸೂರು ವಿಶ್ವವಿದ್ಯಾಲಯದ Department of Ancient History and Archaeology ಯ ಮುಖ್ಯಸ್ತ ಪ್ರೊಫೆಸರ್ ( ನಿಜವಾದ ಪ್ರೊಫೆಸರ್ ! ) A.V. ನರಸಿಂಹ ಮೂರ್ತಿಯವರು ಹೇಳುವಂತೆ ಓಕ್ ನ ವಾದಗಳನ್ನು ಒಪ್ಪಬೇಕಾದರೆ ಈಗಿರುವ ಸಾಕ್ಷ್ಯಾಧಾರಗಳು ಏನೇನೂ ಸಾಕಾಗವು.<< ಆತ ನೀಡಿರುವ ಸಾಕ್ಷಿಗಳು ನ್ಯಾಯಾಲಯದ ಮು೦ದೆ ದಾವೆಯನ್ನು ಗೆಲ್ಲಲು ಸಾಕಾಗುವುದಿಲ್ಲ ಆದರೆ ಆ ಸಾಕ್ಷಿಗಳು ಸ್ವತ: ಹುಟ್ಟು ಹಾಕಿದ್ದ೦ತೂ ಅಲ್ಲವಲ್ಲ? ನಮ್ಮ ರಾಜಕೀಯ ಪಕ್ಷಗಳು ಮನಸ್ಸು ಮಾಡಿದರೇ ಯಾವ ಸಾಕ್ಷೀನೂ ಬೇಕಾಗಿಲ್ಲ. ಆದರೆ ನಮ್ಮ ಹುಸಿ ಜಾತ್ಯಾತೀತ ರಾಷ್ಟ್ರದಲ್ಲಿ ಅದು ಸಾಧ್ಯವಾಗಲಿಕ್ಕಿಲ್ಲ, ಬಿಡಿ. ಇನ್ನು ನನ್ನ ಲೇಖನವೇ ನಿಮಗೆ ಸ೦ದೇಹವನ್ನು೦ಟು ಮಾಡುತ್ತಿದ್ದಲ್ಲಿ, ನಾನೇನು ಮಾಡಲಿ? ನಿಮ್ಮ ಸ೦ದೇಹವನ್ನು ನಿವಾರಿಸುವ ಗುಳಿಗೆ ನನ್ನಲ್ಲಿಲ್ಲ. ನಮಸ್ಕಾರ, ನನ್ನಿ.

ಸಂದೇಹ ನಿವಾರಿಸುವ ಗುಳಿಗೆ ..... ಶ್ರೀ ನಾವಡರವರೇ , ನಿಮ್ಮ ವಿವರಪೂರ್ಣ ಮರುಪ್ರತಿಕ್ರಿಯೆಗೆ ಧನ್ಯವಾದಗಳು. Ms. (?) Summer Glau ಅವರು ಈಗಾಗಲೇ ಬಹಳ ಚಂದವಾಗಿ ಹೇಳಿದಂತೆ, "ನನಗೆ ಅದನ್ನು ನಂಬದೇ ಇರುವ ಸ್ವಾತಂತ್ರ್ಯ ಎಷ್ಟು ಇದೆಯೋ, ನಿಮಗೆ ನಂಬುವ ಸ್ವಾತಂತ್ರ್ಯ ಕೂಡ ಅಷ್ಟೇ ಇದೆ." ಕನ್ನಡದ ಖ್ಯಾತನಾಮ ಅನಕ್ರ ಐವತ್ತು ವರ್ಷ ಹಿಂದೆ ಹೇಳಿದ ಹಾಗೆ ನಿಮಗೂ ನನಗೂ ಅಭಿಪ್ರಾಯಭೇದಗಳಿರಬಹುದು. ಆದರೆ ನನ್ನದಕ್ಕಿಂತ ಭಿನ್ನವಾದ ಅಭಿಪ್ರಾಯವನ್ನು ಹೊಂದುವ ನಿಮ್ಮ ಸ್ವಾತಂತ್ರ್ಯವನ್ನು ನಾನು ಗೌರವಿಸುತ್ತೇನೆ. ಆದರೆ ನಿಮ್ಮ ಈ ಕೆಳಗಿನ ಮಾತು ಸರಿಯಾಗಿ ಅರ್ಥವಾಗಲಿಲ್ಲ. << "ನಿಮ್ಮ ಸ೦ದೇಹವನ್ನು ನಿವಾರಿಸುವ ಗುಳಿಗೆ ನನ್ನಲ್ಲಿಲ್ಲ." >> ಸಂದೇಹಗಳನ್ನು ಗುಳಿಗೆಗಳಿಂದ ನಿವಾರಿಸಬಹುದು ಎಂಬುದನ್ನು ಇದೇ ಮೊದಲ ಸಲ ಕೇಳುತ್ತಿದ್ದೇನೆ. ಕಮ್ಯುನಿಸ್ಟ್ ದೇಶಗಳಲ್ಲಿ ಅಭಿಪ್ರಾಯ/ನಂಬಿಕೆಗಳನ್ನು ಪ್ರಜೆಗಳ ಮನಸ್ಸಿನಲ್ಲಿ ಬಲವಂತದಿಂದ ತುರುಕುವುದರ ಬಗ್ಗೆ ಕೇಳಿದ್ದೇನೆ - ಉದಾಹರಣೆಗೆ ದೇವರಿಲ್ಲ ಎಂಬುದಾಗಿ. ಇದಕ್ಕೆ brainwash ಎನ್ನುತ್ತಾರೆ ಎಂದೂ ಕೇಳಿದ್ದೇನೆ. ಇನ್ನು ನಿಮ್ಮ ಇನ್ನೊಂದು ವಾಕ್ಯ: "ಬಾವನೆಗಳನ್ನು ಕಲಿಸಿಕೊಡುವ ಶಾಲೆಯ ವಿಳಾಸವಿದ್ದರೆ ನನಗೆ ತಿಳಿಸಿ, ಭಾವನೆಗಳನ್ನು ಅರಿಯುವ ವಿದ್ಯೆಯನ್ನು ಕಲಿಯಲು ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ." ಇದನ್ನು ಸ್ವಲ್ಪ ವಿವರಿಸಿ ಹೇಳಿದರೆ, ನಿಮ್ಮ ಅವಶ್ಯಕತೆ ಏನೆಂದು ತಿಳಿಸಿದರೆ ಇಂತಹ ಶಾಲೆಗಳ ವಿಳಾಸಗಳನ್ನು ಹುಡುಕಲು ನಿಮಗೆ ಸಹಾಯ ಮಾಡಬಹುದು. ಬೆಂಗಳೂರಿನಲ್ಲಿ, ಕರ್ನಾಟಕದಲ್ಲಿ ಬಹಳಷ್ಟು ವಿಧದ ಶಾಲೆಗಳು ಇವೆ. ನಮಸ್ಕಾರ, ನನ್ನಿ.

ಮೇಲಿನ ಮೂಲದಲ್ಲಿನ ಓಕ್ ರ ಬಗ್ಗೆಗಿನ ಪರಿಚಯದಲ್ಲಿ ತಾಜ್ ಮಹಲಿನ ನದೀ ದಡದ ಬಾಗಿಲನ್ನು ಕಾರ್ಬನ್ ಪರೀಕ್ಷೆಗೆ ಅಳವಡಿಸಿದಾಗ ದೊರಕಿದ ಪರೀಕ್ಷೆಯ ಫಲಿತಾ೦ಶ, ಆಗಿನ ಅಲ್ಲಿನ ಅಧಿಕಾರಿಗಳು ದ್ವಾರದ ಪರೀ಼ಕ್ಷೆಗೆ ನೀಡಿದ ಅನುಮತಿ ಪತ್ರ, ಉರ್ದು ಶಾಸನ ಮು೦ತಾದ ಅನೇಕ ಸಾಕ್ಷ್ಯಗಳನ್ನು ಓಕ್ ನೀಡಿದ್ದಾರೆ.

೧೯೭೯ರಲ್ಲಿ ನಾನು ತಾಜ್ ಮಹಲ್ಗೆ ಭೇಟಿಯಿತ್ತಾಗ ಎರಡು ನೆಲಮಹಡಿಗೆ (http://www.stephen-k...) ಪ್ರವೇಶವಿತ್ತು. ಆದರೆ ೨೦೦೯ರಲ್ಲಿ ಹೋದಾಗ ಎಲ್ಲವನ್ನು ಮುಚ್ಚಲಾಗಿತ್ತು. ಆದರೂ ಕುತೂಹಲಕ್ಕೆ ಓಕ್ ಅವರ ಹೇಳಿಕೆಗಳು ಸುಳ್ಳೆಂದು ಸಾಬೀತು ಮಾಡಲು ಅದರ ಕಳಶದಲ್ಲಿರುವ ಅರ್ದ ಚಂದ್ರಾಕೃತಿಗೆ ನನ್ನ ಕ್ಯಾಮೆರಾವನ್ನು ಝೂಮ್ ಮಾಡಿ ನೋಡಿದಾಗ ಕಂಡದ್ದು ಕಳಶ ಮತ್ತು ತ್ರಿಶೂಲ. ಅದಕ್ಕೆಲ್ಲ ಅಲ್ಲಿವರ್ಗೂ ಹೋಗ್ಬೇಕಿಲ್ಲ ಮೈಸೂರಿನ ಸಮೀಪದ ಶ್ರೀರಂಗಪಟ್ಟಣಕ್ಕೆ ಹೋಗ್ಬನ್ನಿ ಸಾಕು ಮಸೀದಿಯ ಗೋಡೆಗಳು ಸಾಕ್ಷಿ ಹೇಳುತ್ತವೆ.

ನಮಸ್ಕಾರ, ಕಮಲಾರವರೇ, ನೀವು ಸೂಚಿಸಿದ ಕೊ೦ಡಿಯನ್ನು ಗಮನಿಸಿದ್ದೇನೆ. ನೀವು ಕೊಟ್ಟ ಕೊ೦ಡಿಯನ್ನು ಗಮನಿಸಿ, ನನಗೆ ನನ್ನ ಲೇಖನದಲ್ಲಿ ಯಾವುದಾದರೂ ತಪ್ಪುಗಳಿವೆಯೇ? ಎ೦ಬ ಸ೦ದೇಹ ಬ೦ತು. ನಾನು ಈ ಲೇಖನವನ್ನು ಲಭ್ಯ ಭಾವಚಿತ್ರಗಳೊ೦ದಿಗೆ ಕಾಲದಕನ್ನಡಿ.ವೊರ್ಡ್ ಪ್ರೆಸ್.ಕಾಮ್ ನಲ್ಲಿಯೂ ಹಾಕಿದ್ದೇನೆ. ಭಾವಚಿತ್ರಗಳನ್ನೂ ಗಮನಿಸುವ ಉದ್ದೇಶವಿದ್ದಲ್ಲಿ ಅಲ್ಲಿಯೂ ಗಮನಿಸಬಹುದು. ಏನಾದರೂ ಅಚಾತುರ್ಯವಾಗಿದ್ದಲ್ಲಿ, ತಿಳಿಸೋಣವಾಗಲಿ. ನಮಸ್ಕಾರ, ಪ್ರತಿಕ್ರಿಯೆಗೆ ನನ್ನಿ.