ಜಾತಿ ರಾಜಕಾರಣದ ಚರ್ಚೆ ಮತ್ತು ಮಾಯವತಿ ಎಂಬ ರಾಜಕಾರಣಿ

To prevent automated spam submissions leave this field empty.

ಜಾತಿ ಮತ್ತು ರಾಜಕಾರಣದ ಸಂಬಂಧವನ್ನು ವಿವರಿಸುತ್ತಿರುವ ಬಹಳಷ್ಟು ಚಿಂತಕರು ಪ್ರಸ್ತುತ ಇಂದಿನ ಬಹುಜನಪ್ರೀಯವಾದಶಕ್ತಿರಾಜಕಾರಣವನ್ನು ಸಮಸ್ಯೆಯಾಗಿ ಭಾವಿಸುತ್ತಾರೆ. ಆದರೆ ನಿಜವಾದ ಅರ್ಥದಲ್ಲಿ ರಾಜಕಾರಣ ಎಂದರೇನು? ಎಂಬುದಕ್ಕೆಹಲವಾರು ವ್ಯಾಖ್ಯಾನಗಳಿವೆ. ಸರಳವಾಗಿ ಹೇಳುವುದಾದರೆ ಪ್ರಭುತ್ವದ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಎಂದುವಿವರಿಸಿಕೊಳ್ಳಬಹುದು. ಪ್ರಖ್ಯಾತ ರಾಜಕೀಯಶಾಸ್ತ್ರಜ್ಞ ಡೇವಿಡ್ ಈಸ್ಟನ್ ರಾಜಕೀಯವನ್ನು ಮೌಲ್ಯಗಳ ಅಧಿಕಾರಯುತ ವಿತರಣೆಎಂದು ವಿಶ್ಲೇಷಿಸಿದ್ದಾನೆ. ಅಂದರೆ ರಾಜಕಾರಣ ಎಂಬುದು ಪ್ರಭುತ್ವದ ಕಾರ್ಯಚಟುವಟಿಕೆ ಅದರಲ್ಲಿ ಪ್ರಜೆಗಳ ಪಾಲ್ಗೊಳ್ಳುವಿಕೆಮುಂತಾದವುಗಳ ಕುರಿತಂತೆ ತಿಳಿಸುವುದಾಗಿದೆ. ಆದರೆ ಜನಸಾಮನ್ಯರ ಸಾಮಾನ್ಯ ತಿಳುವಳಿಕೆಯಲ್ಲಿ ರಾಜಕೀಯ ಎಂದರೆ ಯಾವಮಾರ್ಗವನ್ನಾದರೂ ಹಿಡಿದು ಸಾರ್ವಜನಿಕ ಅಧಿಕಾರವನ್ನು ಪಡೆಯುವ ತಂತ್ರಗಾರಿಕೆ ಎನ್ನುವ ನೆಗೆಟಿವ್ ಆದಂತಹ ಭಾವನೆಪ್ರಬಲವಾಗಿದೆ. ಪ್ರಸ್ತುತ ಬಹುಪಾಲು ಚಿಂತರಕರು ಸಾಮಾನ್ಯ ಜನರ ಅರ್ಥದಲ್ಲಿನ ನೆಗೆಟಿವ್ ಮಾದರಿಯ ರಾಜಕಾರಣವನ್ನೇಸಮಸ್ಯೆಯನ್ನಾಗಿ ಗ್ರಹಿಸುತ್ತಾರೆ. ಮಾಯಾವತಿಯವರ ವರ್ತನೆಯ ಹಿಂದೆ ರಾಜಕೀಯದ ಕುರಿತ ಈ ಗ್ರಹಿಕೆಯೇ ಕೆಲಸಮಾಡಿದೆ. ಹಾಗಾದರೆ ಇದು ರಾಜಕಾರಣಿಗಳ ತಪ್ಪಾ ಖಂಡಿತ ಅಲ್ಲ!ಭಾರತದಲ್ಲಿನ ಜಾತಿ ಮತ್ತು ರಾಜಕಾರಣದ ಇತಿಹಾಸವನ್ನು ಸಂಕ್ಷೀಪ್ತವಾಗಿ ನೋಡಿದರೆ ಬಹುಪಾಲು ವಿದ್ವಾಂಸರು ಭಾರತಸಮಾಜದಲ್ಲಿ ಜಾತಿಯೇ ಕೇಂದ್ರಬಿಂದು ಎಂದು ವಿವರಿಸುತ್ತಾ ಪ್ರಜಾಸತ್ತಾತ್ಮಕ ರಾಜಕೀಯದ ಮೂಲ ತತ್ವವಾದ ರಾಜಕೀಯಸಮಾನತೆಗೆ ಜಾತಿವ್ಯವಸ್ಥೆ ಅಡ್ಡಿಯಾಗಿದೆ ಎಂದು ಪ್ರತಿಪಾದಿಸುತ್ತಾರೆ. ಅಲ್ಲದೆ ಜಾತಿ ಆಧಾರಿತ ಸಾಮಾಜಿಕ ಅಸಮಾನತೆಭಾರತದಲ್ಲಿರುವುದರಿಂದ ರಾಜಕೀಯ ಮತ್ತುಅರ್ಥಿಕ ಪ್ರಭುತ್ವಗಳು ಕನಸಾಗಿವೆ ಎಂದು ನಂಬುತ್ತಾರೆ. ಅಲ್ಲದೇ ಪ್ರಜಾಪ್ರಭುತ್ವದಯಶಸ್ಸಿಗೆ ಜಾತಿ ಪ್ರಾಬಲ್ಯ ಕ್ಷೀಣಿಸಬೇಕಾಗಿರುವುದು ಅಗತ್ಯವಾಗಿದೆ ಎಂದು ವಿವರಿಸುತ್ತಾರೆ. ಅಲ್ಲದೇ ರಾಜಕೀಯ ಪಕ್ಷಗಳಪ್ರತಿಯೊಂದು ನಡೆಯು ಜಾತಿಯನ್ನು ಅವುಗಳ ನಡುವಿನ ಸಂಬಂಧವನ್ನು ಬಲಿಷ್ಠಗೊಳಿಸುತ್ತಿದೆ ಎಂದು ನಂಬುತ್ತಾರೆ. ದಲಿತಚಿಂತಕರು ಇನ್ನೂ ಮುಂದುವರಿದು ಜಾತಿ ಪ್ರಾಬಲ್ಯ ಕ್ಷೀಣಿಸಲು ದೊಡ್ಡ ಪ್ರಮಾಣದಲ್ಲಿ ಶೂದ್ರಾತಿಶೂದ್ರ ಜಾತಿಗಳು ಒಗ್ಗೂಡಬೇಕುಎಂದು ಬಯಸುತ್ತಾರೆ. ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ಭಾರತದ ಜಾತಿವ್ಯವಸ್ಥೆಯನ್ನು ಮೂಲವಾಗಿಸುತ್ತಾ ಅದಕ್ಕೆಪಯರ್ಯವನ್ನು ಪ್ರಬಲ ದಲಿತ ರಾಜಕಾರಣದಲ್ಲಿ ಹುಡುಕುತ್ತಾರೆ. ಮುಂದುವರಿದು ಮಾಯಾವತಿಯಂತಹ ನಾಯಕಿಯನ್ನು ಈಒಟ್ಟು ಚಳುವಳಿಯ ಅಧಿನಾಯಕಿಯಾಗಿ ಕಲ್ಪಿಸಿಕೊಂಡು ಸಮರ್ಥಿಸಿಕೊಳ್ಳುತ್ತಾರೆ. ಈ ಎಲ್ಲಾ ವಾದ/ಪ್ರಯತ್ನಗಳು ಬ್ರಾಹ್ಮಣ ಮತ್ತುದಲಿತ ಎಂಬ ಭಿನ್ನ ಧೃವಗಳನ್ನು ಕಲ್ಪಿಸಿಕೊಂಡು ಹೆಣೆದ ಜಾತಿ ಸಮೀಕರಣದಿಂದ ಪ್ರಭಾವಿತವಾಗಿವೆ. ಇದರಲ್ಲಿ ಮಾಯಾವತಿಯಹಣದ ಹಾರದ ಕಥೆ ಒಂದು ಘಟನೆ ಮಾತ್ರ. ಆದರೆ ವಾಸ್ತವದಲ್ಲಿ ಇದು ರಾಜಕಾರಣವನ್ನು ಮೀರಿದ ಅಥವ ನಿರ್ದೆಶಿಸುತ್ತಿರುವಬೌದ್ಧಿಕ ಜ್ಙಾನದ ಸಮಸ್ಯಯಾಗಿ ಕಾಡುತ್ತದೆ. ಇದರ ಕುರಿತಂತೆ ಇದುವರೆಗೂ ಬಹಳಷ್ಟು ಜನ ಗಮನಹರಿಸಿಲ್ಲ ವಿವರವಾಗಿನೋಡುವುದಾದರೆ.
ಭಾರತದ ಸಂದರ್ಭದಲ್ಲಿ ಜಾತಿ ಮತ್ತು ರಾಜಕಾರಣವನ್ನು ವಿವರಿಸುತ್ತಿರುವ ಬಹುಪಾಲು ರಾಜಕೀಯ ಚಿಂತಕರುಯುರೋಪಿಯನ್ನರಿಂದ ಗುರುತಿಸಲ್ಪಟ್ಟ ಜಾತಿವ್ಯವಸ್ಥೆಯ ಕುರಿತಾದ ಸಮಾಜಶಾಸ್ತ್ರೀಯ ವಿವರಣೆಗಳನ್ನು ಯಾವ ಪ್ರಶ್ನೆ ಅಥವಾಮರುವಿಮರ್ಶೆಗೆ ಒಳಪಡಿಸದೇ ಒಪ್ಪಿಕೊಂಡು ಸಾಂಪ್ರದಾಯಕ ಜಾತಿಯ ವಿಶ್ಲೇಷಣೆಗಳೊಂದಿಗೆ ಆಧುನಿಕ ರಾಜ್ಯವ್ಯವಸ್ಥೆಯಪರಿಕಲ್ಪನೆಯಾದ ರಾಜಕಾರಣವನ್ನು (politics) ವಿವರಿಸುತ್ತಿರುವುದು ಕಂಡುಬರುತ್ತದೆ. ಇದರ ಅರ್ಥ ಪ್ರಸ್ತುತ ರಾಜಕಾರಣವನ್ನುವಿವರಿಸುತ್ತಿರುವ ಚಿಂತಕರ ಮೇಲೆ ಜಾತಿ ಕುರಿತಾದ ಸಾಂಪ್ರದಾಯಕ ಸಮಾಜಶಾಸ್ತ್ರೀಯ ವಿವರಣೆಗಳು ಬಹುವಾಗಿಪ್ರಭಾವಿಸಿರುವುದು ಸ್ಪಷ್ಟವಾಗುತ್ತದೆ. ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ "ಭಾರತದ ಜಾತಿವ್ಯವಸ್ಥೆ ಪಾಶ್ಚ್ಯಾತ್ಯರು ತಮ್ಮಒಂದು ಸಾಂಸ್ಕೃತಿಕ ಹಿನ್ನಲೆಯಲ್ಲಿಯೇ ಪೌರಾತ್ಯರನ್ನು ನೋಡಿದ್ದರಿಂದಲೇ ಹುಟ್ಟಿಕೊಂಡ ಒಂದು ಪಾಶ್ಚಾತ್ಯ ಕಲ್ಪಿತಪರಿಕಲ್ಪನೆಯಾಗಿದೆ. ಎಂಬ ಅಂಶ ಸ್ಪಷ್ಟವಾಗುತ್ತಿದೆ. ಈ ಸಂಶೋಧನೆಯ ಪ್ರಕಾರ ಭಾರತದ ಸಮಾಜದಲ್ಲಿ caste ಅಥವಾಜಾತಿಯನ್ನು ಒಂದು ವ್ಯವಸ್ಥೆಯಾಗಿ ಗುರುತಿಸುವುದು ಅರ್ಥವಾಗದ ವಿಶ್ಲೇಷಣೆ (add-hoc explanation). ಭಾರತದಸಮಾಜದಲ್ಲಿ ನಮಗೆಲ್ಲರಿಗೂ ತಿಳಿದಿರುವಂತೆ ಹಲವಾರು ಜಾತಿಗಳು ಅಸ್ಥಿತ್ವದಲ್ಲಿವೆ. ಅವುಗಳ ನಡುವೆ ತಾರತಮ್ಯ/ಶೋಷಣೆಗಳುಇವೆ ಆದರೆ ಅವುಗಳನ್ನೆಲ್ಲ ಈಗಾಗಲೇ ನಾವು ಬೌದ್ಧಿಕ ವಾದಗಳಲ್ಲಿ ಗುರುತಿಸಿರುವಂತೆ ಒಂದು ವ್ಯವಸ್ಥೆಯ ಮಾದರಿಯಲ್ಲಿಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗೆ ನೋಡುವುದಾದರೆ ಜಾತಿಗಳ ಪರಸ್ಪರ ಸಂಬಂಧ ಅವುಗಳ ಆಚರಣೆಗಳನ್ನು ನಿರ್ದೆಶಿಸುವಸಂಪ್ರದಾಯಗಳ ಸ್ವರೂಪ, ಪಾಶ್ಚಾತ್ಯರು ನೀಡಿರುವ ಸೈದ್ಧಾಂತಿಕ ಚೌಕಟ್ಟಿನಲ್ಲಿ ವಿವರಿಸಿರುವುದಕ್ಕಿಂತ ಭಿನ್ನವಾಗಿವೆ. (ನನ್ನಪಿ.ಹೆಚ್.ಡಿ ಸಂಶೋಧನೆಯ ಪ್ರಕಾರ) ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಜಾತಿಗಳು ಸಮಾಜದಲ್ಲಿ ಹೇಗೆ ಸಂಘಟನೆಗೊಂಡವು ಮತ್ತುಹೇಗೆ ಜನರಿಂದ ಗುರುತಿಸಲ್ಪಡುತ್ತವೆ, ಎನ್ನುವುದರ ಕುರಿತ ಅಧ್ಯಯನವು ಇಂದಿನ ಅಗತ್ಯವಾಗಿದೆ. ಈ ರೀತಿಯ ಅಧ್ಯಯನಕ್ಕೆನಾವು ಜಾತಿಯನ್ನು ಭಿನ್ನ ದೃಷ್ಟಿಕೋನದಿಂದಲೇ ನೋಡಬೇಕಾಗುತ್ತದೆ. ಇಲ್ಲವಾದರೆ ಇನ್ನು 150 (ಹಿಂದಿನ 150 ವರ್ಷಗಳಂತೆ) ವರ್ಷಗಳಾದರು ನಾವು ದಲಿತ/ಬ್ರಾಹ್ಮಣ ಎಂಬ ಕಲ್ಪಿತ ಪರಿಕಲ್ಪನೆಗಳ ಕುರಿತಾದ ಚರ್ಚೆ/ಹೊರಾಟಗಳಲ್ಲಿಯೇ ಕಾಲಕಳೆಯಬೇಕಾಗುತ್ತದೆ. ಹೊರತು ನಮ್ಮ ರಾಜಕೀಯ ವ್ಯವಸ್ಥಯನ್ನು ಗಟ್ಟಿಗೊಳಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆಮಾಯಾವತಿಯಂತಹವರು ದಲಿತ್/ಶೂದ್ರ ಎಂಬ ಕಲ್ಪಿತ ಸಮುದಾಯದ ರಕ್ಷಕಳ ಅಥವ ಆ ಸಮುದಾಯಕ್ಕೆ ಆದ ಐತಿಹಾಸಿಕಹಿಂಸೆಗೆ ಪ್ರತಿಕಾರದ ಹೆಸರಿನಲ್ಲಿ ಮತ್ತೊಂದು ಹಣದ ಹಾರಕ್ಕೆ ಕೊರಳೊಡ್ಡಿ ಸಮರ್ಥಿಸಿಕೊಳ್ಳುತ್ತಾಳೆ. ಬ್ರಾಹಣ ಅಥವ ಮೇಲ್ಜಾತಿಎಂಬ ಇನ್ನೊಂದು ಗುಂಪು ಮಾಧ್ಯಮಗಳ ಮೂಲಕ ಘಟನೆಯನ್ನು ಖಂಡಿಸುವ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣಕ್ಕೆಇಳಿಯುತ್ತವೆ. ಇದ್ಯಾವುದು ಅರ್ಥವಾಗದ ಶೋಷೀತ ಜನ ಕೇವಲ ಈ ಘಟನೆಗಳ ಪ್ರೇಕ್ಷಕರಾಗುತ್ತಾರೆ. ಒಂದು ಅರ್ಥದಲ್ಲಿ ಇಂದುನಾವು ನಮ್ಮ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಗ್ರಹಿಸಿರುವುದು ಮತ್ತು ವಿವರಿಸುತ್ತಿರುವುದು ಪಾಶ್ಚ್ಯಾತ್ಯರುಕೊಡಮಾಡಿದ ಸೈದ್ಧಾಂತಿಕ ಚೌಕಟ್ಟಿನಲ್ಲಿಯೇ? ಆದ್ದರಿಂದಲೇ ನಾವು ಇಂದು ನಮ್ಮ ಸಮಾಜದ ಸಮಸ್ಯೆಗಳನ್ನು ಅರಿಯಲು ಮತ್ತುಪರಿಹಾರ ಕಂಡುಕೊಳ್ಳಲು ಸೋತ್ತಿದ್ದೇವೆ. ನಮ್ಮ ಸಮಾಜ ವಿಜ್ಞಾನಗಳ ವಲಯದಲ್ಲಿ ಬಹುದೊಡ್ಡ ಪರಿಕಲ್ಪನೆ ಮತ್ತುಸಿದ್ಧಾಂತಗಳೆಂದು ಗುರುತಿಸಲ್ಪಡುತ್ತಿರುವ ಜಾತಿ-ರಾಜಕಾರಣದ ಚರ್ಚೆ ಇಂದಿಗೂ ಸಹ ಸಮಾಜ ಸಮಸ್ಯೆಗಳಿಗೆ ಪರಿಹಾರವಾಗದೆಕೆವಲ ಬೌದ್ಧಿಕ ಜೀಜ್ಞಾಸೆಯಾಗಿ ಮಾತ್ರ ಉಳಿದಿರುವುದು ಮಾತ್ರವಲ್ಲದೆ ಸಾರ್ವಜನಿಕ ಬದುಕಿನ ಚರ್ಚೆ ಗಳಲ್ಲಿಭಾಗಿಯಾಗಿಲ್ಲದಿರುವುದು ಇದಕ್ಕೆ ನಿರ್ದಶನ. ಜಾತಿ ಮತ್ತು ರಾಜಕಾರಣದ ಕುರಿತು ಸಂಶೋಧನೆಯಲ್ಲಿ ತೊಡಗಿರುವ ವಿದ್ವಾಂಸರುಈ ಅಂಶವನ್ನು ಗುರುತಿಸಿ ವಿವರಿಸುವ ಜರೂರು ಇಂದಿದೆ .

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕಿರಣ್ ಅವರೇ, ಲೇಖನದಲ್ಲಿ ಭಿನ್ನ ಮಾದರಿಯ ಗ್ರಹಿಕೆಗಳಿವೆ, ಸಂಪದಕ್ಕೆ ಸ್ವಾಗತ. ಅಕ್ಷರ ದೋಷಗಳಿಂದ ನಿಮ್ಮ ಲೇಖನವನ್ನು ಮುಕ್ತಗೊಳಿಸಿದರೆ ಇನ್ನಷ್ಟು ಸುಲಭದಲ್ಲಿ ಓದಲು ಸಾಧ್ಯ. ಅದು ಏನೇ ಇರಲಿ ಒಂದು ಗಂಭೀರ ಓದನ್ನು ಬಯಸುವ ಇಂಥ ಲೇಖನ ನೀಡಿದ್ದಕ್ಕೆ ಧನ್ಯವಾದಗಳು. ಸಾತ್ವಿಕ್ ಎನ್ ವಿ

ನಮಸ್ಕಾರ, ಕಿರಣ್ ಸ್ವಲ್ಪ ತಲೆಕೆಡಿಸ್ಕೊ೦ಡೆ. ಗ೦ಭೀರ ಚಿ೦ತನೆಯನ್ನು ಬಯಸುವ, ಸುಲಭವಾಗಿ ಓದಿಸಿಕೊ೦ಡು ಹೋಗದ, ಸ್ವಲ್ಪ ತಲೆಗೆ ಕಸರತ್ತು ನೀಡುವ ನಿಮ್ಮ ಲೇಖನ ಉತ್ತಮವಾಗಿದೆ. ಮಾಯಾವತಿಯೂ ಕೇವಲ ಓಟ್ ಬ್ಯಾ೦ಕ್ ರಾಜಕಾರಣವನ್ನು ಮಾತ್ರವೇ ಬಲ್ಲಳು.ನಿಜವಾದ ದಲಿತರ ಉದ್ಧಾರ ಇನ್ನಷ್ತೇ ಆರ೦ಭವಾಗಬೇಕಿದೆ.

ನೀವು ಸರಿಯಾದ ರೀತಿಯಲ್ಲಿ ಯೋಚಿಸುತ್ತಿದ್ದೀರಾ ಆದ್ರೆ ದಲಿತರ ಉದ್ಧಾರದ ದಾರಿಯ ಕುರಿತು ನಾವು ಯೋಚಿಸಬೇಕಿದೆ. ಸರಳವಾಗಿ ಹೇಳುವುದಾದರೆ ನಮಗೆ ಇಂದು ಬೇಕಿರುವುದು ರಾಜಕಾರಣಿಗಳಲ್ಲ ನಾಯಕರು thanku

ನಮಸ್ಕಾರ, ಕಿರಣ್ ಸ್ವಲ್ಪ ತಲೆಕೆಡಿಸ್ಕೊ೦ಡೆ. ಗ೦ಭೀರ ಚಿ೦ತನೆಯನ್ನು ಬಯಸುವ, ಸುಲಭವಾಗಿ ಓದಿಸಿಕೊ೦ಡು ಹೋಗದ, ಸ್ವಲ್ಪ ತಲೆಗೆ ಕಸರತ್ತು ನೀಡುವ ನಿಮ್ಮ ಲೇಖನ ಉತ್ತಮವಾಗಿದೆ. ಮಾಯಾವತಿಯೂ ಕೇವಲ ಓಟ್ ಬ್ಯಾ೦ಕ್ ರಾಜಕಾರಣವನ್ನು ಮಾತ್ರವೇ ಬಲ್ಲಳು.ನಿಜವಾದ ದಲಿತರ ಉದ್ಧಾರ ಇನ್ನಷ್ತೇ ಆರ೦ಭವಾಗಬೇಕಿದೆ.

ಸಾತ್ವಿಕ್ ಅವರೇ ನನ್ನ ಕನ್ನಡ ನಿಜವಾಗಲು ಕೆಟ್ಟದಾಗಿದೆ ನಾನು ನುಡಿ ಫಾಂಟ್ ನಲ್ಲಿ ಟೈಪ್ ಮಾಡಿ ಅದನ್ನು ತುಂಗಾ ಫಾಂಟ್ ಗೆ ಬದಲಿಸಿ ಹಾಕಿದ್ದೇನೆ ಅದ್ದರಿಂದ ಅಕ್ಷರ ತಪ್ಪಾಗಿವೆ ದಯವಿಟ್ಟು ಕ್ಷಮಿಸಿ ನಿಮ್ಮ ಕಮೆಂಟ್ಸ್ ನನಗೆ ಇಷ್ಟ ಆಯಿತು thanku

ಕಿರಣ್: ನಿಮ್ಮ ಲೇಖನ, ನನ್ನನ್ನು ಯೋಚನೆಗೆ ಹಚ್ಚಿದ್ದು ನಿಜ. ನಿಮ್ಮ ವಿಚಾರಸರಣಿಯ ಬಗ್ಗೆ ಹೆಚ್ಚು ಹೆಚ್ಚು ಓದುವ ಕುತೂಹಲ ಮೂಡಿದೆ. ಇತೀ, ಉಉನಾಶೆ (ಸಾತ್ವಿಕ್ ಹೇಳಿದ ಹಾಗೆ, ಬರಹದಲ್ಲಿರುವ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿ)

ನಿಜ ಸರ್ ಯುವಜನರ ಬರವಣಿಗೆ ಕೆಲವರಲ್ಲಿ ಯೋಚನೆಯನ್ನು ಹುಟ್ಟಿಸಿದರೆ ಅದು ನಿಜವಾದ ಸಂತೋಷದ ವಿಷಯ ಆದ್ರೆ ನೀವೇ ಗಮನಿಸಿ ಇವತ್ತು ಓದು ಕೊಡ ಒಂದು ಮನೋರಂಜನೆಯ ಸರಕಾಗಿದೆ ಅಥವ ಚಟುವಟಿಕೆಯಾಗಿದೆ ಸರ್ ಆದ್ದರಿಂದಲೇ ನಾವು ಗಂಭೀರ ಬರಹಗಳು ಸಮಾಜಮುಕಿಯಾದ ಬರಹಗಳಿಂದ ದೊರಉಳಿಯುತ್ತಿದ್ದೇವೆ. ಇದು ನಿಜವಾದ ದುರಂತ ಇದರ ಪರಿಣಾಮ ಮಾತ್ರ ತುಂಬಾ ಕೆಟ್ಟದಾಗಿರುತ್ತದೇ thanku

ಕಿರಣ್, ನಿಜಕ್ಕೂ ಚಿಂತನೆಗೆ ಹಚ್ಚುವಂಥ ಲೇಖನ. ಆದರೆ ನಮಗೆ ಇಂದು ಅಗತ್ಯವಿರುವುದು ನಾಯಕರು, ರಾಜಕಾರಣಿಗಳಲ್ಲ ಅನ್ನುವ ನಿಮ್ಮ ಮಾತು ತುಂಬಾ ಮಾರ್ಮಿಕವಾಗಿದೆ. ಎಲ್ಲಿದ್ದಾರೆ ಆ ನಾಯಕರು?? ಉತ್ತರ ಸಿಗದ ಯಕ್ಷಪ್ರಶ್ನೆ.

ನಮ್ಮಲ್ಲೇ ಇದ್ದಾರೆ ಸರ್ ನಾವು ರಾಜಕಾರಣಿಗಳನ್ನು ಸೃಷ್ಟಿಸುತ್ತಿದ್ದೇವೆ ಆದ್ದರಿಂದಲೇ ಅವರಿದ್ದಾರೆ ನಾವು ನಾಯಕರನ್ನು ಸೃಷ್ಟಿಸಲು ಪ್ರಾರಂಬಿಸಿದರೆ ನಾಯಕರು ಸಿಗುತ್ತಾರೆ. ಯಾಕೆ ಸರ್ ನಿಮ್ಮಲ್ಲಿ ಒಬ್ಬ ಒಳ್ಳೆ ನಾಯಕನಿಲ್ಲವ? ನಮ್ಮೊಳಗಿರುವ ನಾಯಕನನ್ನು ಮೊದಲು ಕಂಡುಕೊಳೋಣ ನಂತರ ಸಮಾಜದ ಎಲ್ಲೆಡೆ ನಾಯಕರೆ ಕಾಣುತ್ತಾರೆ ಏನಂತಿರ ಸರ್? thanku