ನಾವುಕಂಡ ಪುಣೆನಗರ !

To prevent automated spam submissions leave this field empty.

ಭಾರತದ ಪ್ರಗತಿಶೀಲ ರಾಜ್ಯಗಳಲ್ಲೊಂದಾದ  ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಪುಣೆ. ಅದನ್ನು ದಖನ್ ಪ್ರಸ್ತಭೂಮಿಯ ರಾಣಿಯೆಂದು ಕರೆಯುವುದೂ ಉಂಟು. ಪ್ರಕೃತಿದತ್ತವಾದ ಸೌಂದರ್ಯ, ಸಹ್ಯಾದ್ರಿಯ ಪರ್ವತಶ್ರೇಣಿಗಳ ಅಕ್ಕಪಕ್ಕದಲ್ಲಿ ವಿಜೃಂಭಿಸಿ, ಟೆಲ್ಕೊ ನಂತಹ ಬೃಹತ್ ಕಾರ್ಖಾನೆಗಳಿಗೆ ತವರಾದ ಪುಣೆ, ಮಹಾರಾಷ್ಟ್ರದ ಸಾಂಕೃತಿಕ ಹಾಗೂ ವಾಣಿಜ್ಯ ಕೇಂದ್ರಗಳಲ್ಲೊಂದು. ಮುಂಬೈಗಿಂತಲೂ ಅತಿಹೆಚ್ಚು ಔದ್ಯೋಗಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಅದು ಹೊಂದಿದೆ. ಬ್ರಿಟಿಷ್ ಸಾಮ್ರಾಜ್ಯದ ಸಮಯದಲ್ಲಿ ಪ್ರಪ್ರಥಮವಾಗಿ ಸ್ಥಾಪಿಸಿದ ಮಹತ್ವದ ವಿಶ್ವವಿದ್ಯಾಲಯಗಳ ನಗರಗಳಲ್ಲೊಂದಾಗಿದೆ. ಖಡಕ್ ವಾಸ್ಲಾ ದಲ್ಲಿನ ಭಾರಿ ಪ್ರಮಾಣದ ನೀರಿನ ಡ್ಯಾಮ್, ಮತ್ತು ಮಿಲಿಟರಿ ಅಕ್ಯಾಡಮಿಗಳಲ್ಲದೆ, ಕೆಲವು ಚಾರಿತ್ರ್ಯಿಕ ಸನ್ನಿವೇಶಗಳ ಅನುಪಮ ಖಜಾನೆಯಾಗಿದೆ. ಪೇಷ್ವೆಗಳ ವಾಸಸ್ಥಾನ. ಬೃಹತ್ ಐಟಿ ಉದ್ಯಮಗಳ ತವರೂರು. ಪುಣೆಯೊಂದರಿಂದಲೇ ಸುಮಾರು ೧,೦೬೦  ಐ. ಟಿ ವಲಯದ ಪ್ರಶಿಕ್ಷಿತ ತಂತ್ರಜ್ಞರು, ಪ್ರತಿವರ್ಷ ಅಮೆರಿಕಕ್ಕೆ ಲಗ್ಗೆಹಾಕುತ್ತಿದ್ದಾರೆ.

ಇಂತಹ ಪುಣೆ ಮಹಾನಗರಕ್ಕೆ ನಾವು ೨೦೧೦ ರ, ಮಾರ್ಚ್ ತಿಂಗಳ ಮೊದಲವಾರದಲ್ಲಿ ಭೇಟಿ ನೀಡಿದ್ದು ಅಲ್ಲಿ ಕಂಡ ಕೆಲವು ಪ್ರವಾಸಿ ತಾಣಗಳ ಬಗ್ಗೆ ನಮ್ಮ ಸಂಪದೀಯರ ಜೊತೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ಶ್ರೀಮಂತ ದಗಡೂಸೇಟ್ ಹಲ್ವಾಯಿಯವರು ಸ್ಥಾಪಿಸಿದ ಗಣಪತಿ ಮಂದಿರ, ರಾಜಾ ದಿನಕರ್ ಗಂಗಾಧರ್ ಕೇಳ್ಕರ್ ವಸ್ತುಸಂಗ್ರಹಾಲಯ, ಸಾರಸ್ ವಾಡ ಉದ್ಯಾನ್, ಮಹಾತ್ಮ ಫುಲೆ ವಸ್ತುಸಂಗ್ರಹಾಲಯ, ಇತ್ಯಾದಿ ಇತ್ಯಾದಿ.
ಇಂತಹ ಸುಪ್ರಸಿದ್ಧ ಪುಣೆನಗರಕ್ಕೆ ಎಲ್ಲಾ ವಿಪರೀತ ಬೆಳೆದ ಭಾರತದ ಪ್ರಮುಖ ನಗರಗಳಂತೆ ಕೆಲವು ಅಪವಾದಗಳೂ ಇವೆ. ಜನಸಂದಣಿ ಅತ್ಯಧಿಕ. ವಾಹನಗಳ ಸಂಖ್ಯೆ ನೋಡಿದರೆ, ತಲೆತಿರುಗುತ್ತದೆ. ಪುಣೆನಗರದಲ್ಲಿ ತಯಾರಾಗುವ ಟೆಲ್ಕೊ ಟ್ರಕ್ ಗಳೆಲ್ಲಾ ಅಲ್ಲೇ ಇವೆಯೇನೊ ಅನ್ನಿಸುತ್ತದೆ. ರಸ್ತೆಗಳೋ ತೀರ ಚಿಕ್ಕವು. ಫುಟ್ಪಾತ್ ಬಗ್ಗೆ ಜನರಿಗೆ, ಅಥವಾ ನಗರಪಾಲಿಕೆಗೆ ಅರಿವಿಲ್ಲವೇನೋ ಎನ್ನುವಂತೆ ನಿರ್ಮಿಸಿರುವ ಪುಣೆನಗರದ ಪ್ರಮುಖ ರಸ್ತೆಗಳು. .

ಇಂತಹ ಪುಣೆ ಮಹಾನಗರಕ್ಕೆ ನಾವು ೨೦೧೦ ರ, ಮಾರ್ಚ್ ತಿಂಗಳ ಮೊದಲವಾರದಲ್ಲಿ ಭೇಟಿ ನೀಡಿದ್ದು ಅಲ್ಲಿ ಕಂಡ ಕೆಲವು ಪ್ರವಾಸಿ ತಾಣಗಳ ಬಗ್ಗೆ ನಮ್ಮ ಸಂಪದೀಯರ ಜೊತೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.

ಶ್ರೀಮಂತ ದಗಡೂಸೇಟ್ ಹಲ್ವಾಯಿಯವರು ಸ್ಥಾಪಿಸಿದ ಗಣಪತಿ ಮಂದಿರ, ರಾಜಾ ದಿನಕರ್ ಗಂಗಾಧರ್ ಕೇಳ್ಕರ್ ವಸ್ತುಸಂಗ್ರಹಾಲಯ, ಸಾರಸ್ ವಾಡ ಉದ್ಯಾನ್, ಮಹಾತ್ಮ ಫುಲೆ ವಸ್ತುಸಂಗ್ರಹಾಲಯ, ಇತ್ಯಾದಿ ಇತ್ಯಾದಿ.
ಇಂತಹ ಸುಪ್ರಸಿದ್ಧ ಪುಣೆನಗರಕ್ಕೆ ಎಲ್ಲಾ ವಿಪರೀತ ಬೆಳೆದ ಭಾರತದ ಪ್ರಮುಖ ನಗರಗಳಂತೆ ಕೆಲವು ಅಪವಾದಗಳೂ ಇವೆ. ಜನಸಂದಣಿ ಅತ್ಯಧಿಕ. ವಾಹನಗಳ ಸಂಖ್ಯೆ ನೋಡಿದರೆ, ತಲೆತಿರುಗುತ್ತದೆ. ಪುಣೆನಗರದಲ್ಲಿ ತಯಾರಾಗುವ ಟೆಲ್ಕೊ ಟ್ರಕ್ ಗಳೆಲ್ಲಾ ಅಲ್ಲೇ ಇವೆಯೇನೊ ಅನ್ನಿಸುತ್ತದೆ. ರಸ್ತೆಗಳೋ ತೀರ ಚಿಕ್ಕವು. ಫುಟ್ಪಾತ್ ಬಗ್ಗೆ ಜನರಿಗೆ, ಅಥವಾ ನಗರಪಾಲಿಕೆಗೆ ಅರಿವಿಲ್ಲವೇನೋ ಎನ್ನುವಂತೆ ನಿರ್ಮಿಸಿರುವ ಪುಣೆನಗರದ ಪ್ರಮುಖ ರಸ್ತೆಗಳು. 

ಶ್ರೀಮಂತ ದಗಡು ಹಲ್ವಾಯಿ ಶೇಟ್ ಗಣಪತಿಮಂದಿರ :

ಪುಣೆಯ ಪರ್ಯಟಕರ ಪಟ್ಟಿಯಲ್ಲಿ ಈ ದೇವಾಲಯ ಅತಿ ಪ್ರಮುಖವಾದದ್ದೆಂದು ನನಗೆ ತಿಳಿದದ್ದು ನಮ್ಮ ಗೈಡ್ ಅದರಬಗ್ಗೆ ವಿವರಿಸಿದಾಗಮಾತ್ರ. ನಾನು ಕೆಲವು ದೇವಾಲಯಗಳಂತೆ ಇದೊಂದು ಹಣಮಾಡುವ ತಾಣವೆಂಭ ಭ್ರಮೆಗೊಳಗಾಗಿದ್ದೆ. ಅಥವಾ ಹಣವಂತ ವ್ಯಾಪಾರಿಯೊಬ್ಬ ತನಗೆ ಮಕ್ಕಳಿಲ್ಲವೆಂದೋ ಅಥವಾ ಪ್ರತಿಷ್ಠೆಯ ಸಲುವಾಗಿಯೋ ದೇವಸ್ಥಾನ ನಿರ್ಮಿಸಿರಬಹುದೆಂದು ಎಣಿಸಿದ್ದೆ. ಕೆಲವು ಅಂತಹ ದೇವಾಲಯಗಳು ಇರುವಂತೆ ಬೆಂಗಳೂರಿನ ಸಜ್ಜನ್ ರಾವ್ ದೇವಾಲಯ, ಬಿರ್ಲಾ ದೇವಾಲಯ, ಕಾಮಾಕ್ಷಯ್ಯನವವರ ದೇವಾಲಯ ಇತ್ಯಾದಿ. ಇಲ್ಲಿ ದೇವರ ಹೆಸರು ತಿಳಿಯುವುದು ಆಮೇಲೆ. ಮೊದಲು ಅದನ್ನು ಕಟ್ಟಿಸಿದ ಮನುಷ್ಯನ ಗುಣಗಾನ.

ದಗಡೂ ಶೇಟ್ ದೇವಾಲಯದ ಮಹತ್ವವಿರುವುದು, ಅದರ ೧೧೭ ವರ್ಷದ ಇತಿಹಾಸದಿಂದಾಗಿ. ಲೋಕಮಾನ್ಯ ಟಿಳಕರ ಸಂಗಾತಿಯಾದ ದಗಡೂ ರವರು, ಆಗ ಬಹುಶಃ ಅಷ್ಟು ದೊಡ್ಡ ಹಲವಾಯಿ ವ್ಯಾಪಾರಿಯಾಗಿರಲಿಲ್ಲ. ಟಿಳಕರು, ಗಣಪತಿ ಉತ್ಸವವನ್ನು ಕೇವಲ ಮನೆಗಳಿಗೆ ಸೀಮಿತಪಡಿಸದೆ, ಅದನ್ನು ಸಾರ್ವಜನಿಕವನ್ನಾಗಿಸಿದ ಸಮಯದಲ್ಲಿ ಅವರ ಭುಜಕ್ಕೆ ಭುಜಕೊಟ್ಟು ಸಹಕರಿಸಿದ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಮುಂದೆ ಅವರ ವ್ಯಾಪಾರವಲಯ ವೃದ್ಧಿಗೊಂಡಂತೆಲ್ಲಾ ಜನಹಿತ ಕಾರ್ಯಗಳನ್ನು ಹಮ್ಮಿಕೊಂಡು ಜನರ ಮನ್ನಣೆಗೆ ಪಾತ್ರವಾಗಿದ್ದಾರೆ. ಸಾರ್ವಜನಿಕ ಸಂಸ್ಥೆಗಳು, ಕಾಲೇಜ್, ಮತ್ತು ಬಡಮಕ್ಕಳಿಗೆ ಉಚಿತ ಊಟ ಮತ್ತು ಯೂನಿಫಾರಮ್ ಗಳನ್ನು ಪುಸ್ತಕಗಳನ್ನು ಒದಗಿಸುವ, ಮತ್ತು ಧನಸಹಾಯಮಾಡುವ ನಿಟ್ಟಿನಲ್ಲಿ ದುಡಿದಿದ್ದಾರೆ. 

ಸಾರಸ್ ಬಾಗ್, ಪೇಷ್ವೆಯರು ಕಟ್ಟಿಸಿದ ಉದ್ಯಾನವಾಗಿದೆ.

ರಾಜಾ ದಿನ್ಕರ್ ಗಂಗಾಧರ್ ಕೇಳ್ಕರ ವಸ್ತುಸಂಗ್ರಹಾಲಯ

ಇದು ಮೊದಲು ಖಾಸಗಿ ಸಂಗ್ರಹಾಲಯವಾಗಿತ್ತು. ಈಗ ಮಹಾರಾಷ್ಟ್ರ ಸರ್ಕಾರದ ಆರ್ಕೆಲಾಜಿಕಲ್ ವಿಭಾಗದವರು ಅದರ ನಿರ್ವಹಣೆಯ ಭಾರವನ್ನು ತೆಗೆದುಕೊಂಡಿದ್ದಾರೆ. ವಸ್ತುಸಂಗ್ರಹಾಲಯ ಇದುವರೆಗೂ ಕೇಳ್ಕರ್ ನಿವಾಸಸ್ಥಾನದಲ್ಲಿದ್ದು, ಇನ್ನುಮುಂದೆ ಅದನ್ನು ಪುಣೆ ಬೆಂಗಳೂರು ರಸ್ತೆಯಲ್ಲಿ ಸ್ಥಾನಾಂತರಿಸುವ ಪ್ರಯತ್ನ ನಡೆದಿದೆ. ಕೇಳ್ಕರ್ ವಸ್ತುಸಂಗ್ರಹಾಲಯದ ಪ್ರಮುಖ ದ್ವಾರದಲ್ಲಿ ಕೇಳ್ಕರ್ ರವರ ಪುಥಳಿಯಿದೆ. ಗೋಡೆಯಮೇಲೆ ಅವರ ಪತ್ನಿಯವರ ಚಿತ್ರವೂ ಇದೆ.ಸುಮಾರು ೪೦ ವರ್ಷಗಳ ಕಾಲ, ಕೇಳ್ಕರ್ ರವರು ಒಬ್ಬರೇ ಈ ಎಲ್ಲಾ ಅಪರೂಪದ ಮೇರು-ಕಲಾಕೃತಿಗಳನ್ನು ದೇಶದಾದ್ಯಂತ ಸುತ್ತಾಡಿ ಗಳಿಸಿದ್ದಾರೆ. ಹವಾನಿಯಂತ್ರಿತವಾದ, ಸುಂದರವಾಗಿ ಸಜಾವಟ್ ಮಾಡಿದ ಸಮರ್ಪಕ ಕಪಾಟುಗಳಲ್ಲಿ, ತೋರಿಕೆಗೆ ಸಮರ್ಪಿಸಿರುವ ಸುಂದರ ಕಲಾಕೃತಿಗಳು ನಮ್ಮನ್ನು ಒಂದು ೧೦೦ ವರ್ಷಗಳ  ಹಿಂದಿನ ಲೋಕಕ್ಕೆ ಕರೆದೊಯ್ಯುತ್ತವೆ !

ಬೆಳಿಗ್ಯೆ ೧೦-೩೦ ರಿಂದ, ಸಾಯಂಕಾಲ ೬ ರ ವರೆಗೆ ಇದು ಸಾರ್ವಜನಿಕರಿಗೆ ತೆರೆದಿರುತ್ತದೆ. 

ಕೇಳ್ಕರ್ ವಸ್ತುಸಂಗ್ರಹಾಲಯದ ಪ್ರಮುಖ ದ್ವಾರದಲ್ಲಿ ಕೇಳ್ಕರ್ ರವರ ಪುಥಳಿಯಿದೆ. ಗೋಡೆಯಮೇಲೆ ಅವರ ಪತ್ನಿಯವರ ಚಿತ್ರವೂ ಇದೆ.

ಮಹಾತ್ಮ ಫುಲೆ ವಾಡ ದಲ್ಲಿ ಒಂದು ಸುಂದರವಾದ ವಸ್ತುಸಂಗ್ರಹಾಲಯವಿದೆ. ಫುಲೆಯವರ ಪತ್ನಿ ಶ್ರೀಮತಿ ಸಾವಿತ್ರಿಬಾಯಿ ಫುಲೆಯವರು ಮಹಿಳೆಯರ ವಿದ್ಯಾಭ್ಯಾಸಕ್ಕೆ ಪಟ್ಟ ಶ್ರಮ ಅಭಿನಂದನೀಯ ಹಾಗೂ ಚಾರಿತ್ರ್ಯಿಕ ದಾಖಲೆ ಸಹಿತ

ನಾರಾಯಣ್ ಪುರದಲ್ಲಿ ದತ್ತಮಂದಿರವಿದೆ.

ಎಲ್ಲಕ್ಕಿಂತ ನಮ್ಮ ಹೆಚ್ಚು ಆಕರ್ಶಿಸಿದ್ದು ಈ ವಿವರಾಣಾತ್ಮಕ ಫಲಕ. ಬಹುಶಃ ಇಷ್ಟು ಕಾಳಜಿಯುಕ್ತ ವಿವರಣೆಯನ್ನು ನಾನು ಎಲ್ಲೂ ಕಂಡಿಲ್ಲ. ಅಮೆರಿಕದಲ್ಲೂ !

ಕಾತ್ರೆಜ್ ನ ಹಾವುಗಳ ಸಂಗ್ರಹಾಲಯ, ಪುಣೆ-ಸತಾರ ಹೈವೇನಲ್ಲಿದೆ. ಪುಣೆಮಹಾನಗರಪಾಲಿಕೆಯೂ ಹಣ ಸಹಾಯ ಮಾಡುತ್ತಿದೆ. (೧೦-೩೦ ರಿಂದ ೬ ರ ವರೆಗೆ) ಬುಧವಾರ ರಜೆ. ಇಲ್ಲಿನ ವಿಶೇಷ ಆಕರ್ಷಣೆ, ೬ ಅಡಿ ಉದ್ದದ ಕಿಂಗ್ ಕೋಬ್ರ,  ಮತ್ತು ೬ ವರ್ಷ ಅಲ್ಲಿಡಲಾಗಿರುವ ಹಾವು.

 

ಚಿತ್ರ ವೆಂಕಟೇಶ್ 

 

 

 

 

 

ಲೇಖನ ವರ್ಗ (Category):