ತಿಳಿವಳಿಕೆಗೆ ತಿಳಿಸಾರು

To prevent automated spam submissions leave this field empty.

ಬದುಕು ಎಷ್ಟು ಸುಲಭವೋ ಅಷ್ಟೇ ಸವಾಲುಗಳನ್ನು, ಸಂಕಷ್ಟಗಳನ್ನೂ ನಮ್ಮೆದುರು ತಂದು ನಿಲ್ಲಿಸುತ್ತದೆ.  ಮಹರ್ಷಿಗಳ, ಋಷಿಪುಂಗವರ, ಸಾಧಕರ ಮಾತುಗಳನ್ನು ನೆನೆದು, ಧೃತಿ ಗೆಡದೆ ಸಾಗಿದರೆ ಬಾಳು ಹಸನು, ಹಸನ್ಮುಖಿ. ಮಾನಸಿಕ ಕ್ಲೇಶಗಳು, ವಿಹ್ವಲತೆ, ನಿರಾಶೆ ಇವೆಲ್ಲಾ ಹೆಚ್ಚೂ ಕಡಿಮೆ ನಮ್ಮ ಸಂಪಾದನೆಯೇ. ಬಳುವಳಿಯಾಗಿ ಬಂದವೇನೂ ಅಲ್ಲ. ನಮ್ಮ ವಂಶವಾಹಿಯಲ್ಲೂ ಇಲ್ಲ. ಅತಿಯಾಸೆ, ಅನುಕಂಪವಿಲ್ಲದ ಬದುಕು, ನಮ್ಮದಾಗುವುದು ಬೇಡ.   


ಸುಪ್ರಸಿದ್ಧ ತತ್ವಜ್ಞಾನಿ ಕಾರ್ಲ್ ಜಂಗ್ ಹೇಳುತ್ತಾನೆ, ಹೃದಯದೊಳಕ್ಕೆ ನಾವು ಇಣುಕಿ ನೋಡಿಕೊಂಡಾಗಲೇ ನಮ್ಮ ದೃಷ್ಟಿ ತಿಳಿಯಾಗುವುದು ಎಂದು. ಯಾರು ತಮ್ಮ ಹೃದಯದ ಹೊರಕ್ಕೆ ನೋಡುತ್ತಾರೋ ಅವರು ಕನಸನ್ನು ಕಾಣುವರು, ಮತ್ತು ಯಾರು ತಮ್ಮ ಹೃದಯದೊಳಕ್ಕೆ ಇಣುಕಿ ನೋಡುತ್ತಾರೋ ಅವರು ಎಚ್ಚೆತ್ತುಕೊಳ್ಳುವರು. ಇಷ್ಟೆಲ್ಲಾ ಸರ್ಕಸ್ ಮಾಡಲು ನಮಗಿದೆಯೇ ವ್ಯವಧಾನ, ಸಮಯ? ದಿನವೂ ನಮ್ಮ ಚಟುವಟಿಕೆಗಳ ಬಗ್ಗೆ ನಾವು ತೆಗೆದುಕೊಳ್ಳಬೇಕು stock taking. taking stock of the situation ಅಂತಾರಲ್ಲ ಹಾಗೆ, ನಮ್ಮ ಅಂತರಂಗ ಬಹಿರಂಗದ stock taking.  ಸೂಫಿ ಸಂತ ರೊಬ್ಬರು ಈ ಮಾತನ್ನು ಹೇಳುತ್ತಾರೆ, ಎಂದಿಗೂ ಅಹಂಕಾರದಿಂದ ಬೇರೆಯವರ ಮೇಲೆ ಸವಾರಿ ಮಾಡಬೇಡ, ಹಾಗೂ ನಿನ್ನ ಅಡಿಯಾಳುಗಳ ಮೇಲಂತೂ ನಿನ್ನ ದರ್ಪ ಬೇಡವೇ ಬೇಡ. ನಿಮ್ಮಲ್ಲಿ ಅಂತರಂಗ, ಬಹಿರಂಗ ಶುದ್ಧಿಯಿಲ್ಲದಿದ್ದರೆ ಸೃಷ್ಟಿ ಕರ್ತನ ಬಳಿ ನೀವು ಸಲ್ಲುವುದಿಲ್ಲ.


ನಾವು ತಿಂಡಿಗೋ  ಊಟಕ್ಕೋ ಹೋಗುವ ರೆಸ್ಟುರಾಂಟ್ ನಲ್ಲಿ ಕೆಲಸಮಾಡುವ ಮಾಣಿ (ವೇಟರ್) ನ ಹತ್ತಿರದ ನಮ್ಮ ವರ್ತಿಸುವ ರೀತಿಯನ್ನು ನೋಡೋಣ. ಮುಖ ಸಿಂಡರಿಸಿಕೊಂಡು ಆರ್ಡರ್ ಕೊಡುವ ನಮಗೆ ಇಷ್ಟು ಜ್ಞಾನವೂ ಇರುವುದಿಲ್ಲ ಆರ್ಡರ್ ತೆಗೆದುಕೊಂಡು ಹೋಗಿ ಅಡುಗೆ ಮನೆಯಿಂದ ಆತ ನಮ್ಮ ಮುಂದೆ ತಂದಿಡುವುದು ನಾವು ಸೇವಿಸುವ ಆಹಾರವನ್ನು ಎಂದು. ಮಾಣಿ ಮಾಡುತ್ತಿರುವುದು ಅತ್ಯಂತ ಗೌರವಾರ್ಹವಾದ ಕೆಲಸ ಎಂದು ನಮಗೆಂದಾದರೂ ತೋಚಿದ್ದಿದೆಯೇ? ಅವನನ್ನು ಕೆಲಸಕ್ಕಿಟ್ಟ ಯಜಮಾನನಿಂದ ಹಿಡಿದು, ಅಡುಗೆ ಭಟ್ಟನವರೆಗೆ  ನಮ್ಮನೂ ಸೇರಿಸಿ ಅವನ ಪಾಡು ನೋಡಿ. ಹರಿದು ತಿನ್ನುವ ತೋಳಗಳು. ಮರುಕ ತೋರುವುದಿಲ್ಲವೇ? ಆದರೆ ಈ ರೀತಿಯ ನಡವಳಿಕೆ ನಮ್ಮ ದೇಶದಲ್ಲಿ ಅಥವಾ ದಕ್ಷಿಣ ಏಶಿಯಾದ ದೇಶಗಳಲ್ಲಿ ಮಾತ್ರ ಕಾಣಲು ಸಾಧ್ಯ. ಮುಂದುವರಿದ ದೇಶಗಳಲ್ಲಿ ಚೆನ್ನಾಗಿ ಕಲಿತವರು ಮಾಣಿಯ ಕೆಲಸ ಮಾಡುವುದರಲ್ಲಿ ಯಾವುದೇ ಅವಮಾನವನ್ನೂ ಕಾಣುವುದಿಲ್ಲ. ಏಕೆಂದರೆ ಮಾಣಿಯ ಕೆಲಸ ಹಲವು ಗುಣ ವೈಶಿಷ್ಟ್ಯ ಗಳನ್ನು ನಮಗೆ ಕಲಿಸುತ್ತದೆ. ಯಾವ ರೀತಿ ಅತಿಥಿಯನ್ನು ಬರಮಾಡಿಕೊಳ್ಳಬೇಕು, ಉಪಚರಿಸಬೇಕು, ಅವರಿಗಿಷ್ಟವಾದ ಆಹಾರದೊಂದಿಗೆ ಅವರನ್ನು ಹೇಗೆ  ಸತ್ಕರಿಸಬೇಕು, ಅವರೊಡನೆ ಯಾವ ರೀತಿ ವರ್ತಿಸಬೇಕು.....ಇತ್ಯಾದಿ. ಹೀಗಿರುವಾಗ ನಮಗೆ ಈ ಉದ್ಯೋಗದ ಬಗ್ಗೆ ತಾತ್ಸಾರ. ನಮ್ಮ ಸಂಸ್ಕಾರವೇ ಯಜಮಾನಿಕೆಯ ಸಂಸ್ಕಾರ ನೋಡಿ. ಕೈಯ್ಯಲ್ಲಿ ಒಂದಿಷ್ಟು ಕಾಸು ಓಡಾಡುತ್ತಿದ್ದರೆ ನೆಲ ಕಾಣುವುದಿಲ್ಲ ನಮಗೆ. ಯಜಮಾನ ಎಂದರೆ ಮುಖ ಗಂಟಿಕ್ಕಿಕೊಂಡಿರಬೇಕೆಂದು ಸಮಾಜದ ಅಲಿಖಿತ ನಿಯಮ. ನಾವು ಯಾವ ರೀತಿ ಇವರೊಂದಿಗೆ ವರ್ತಿಸುತ್ತೇವೆಯೋ ಅದೇ ರೀತಿಯೇ ನಮ್ಮ ಮಕ್ಕಳೂ ನಮ್ಮನ್ನು ಅನುಕರಿಸುವುದು.


ಸಂಪತ್ತು ಸ್ಥಿರವಲ್ಲ. ಅಗರ್ಭ ಶ್ರೀಮಂತರು ಯಾವುದಾದರೂ ಒಂದು ಕಾರಣಕ್ಕೆ ತಮ್ಮ ಸಂಪತ್ತನ್ನೆಲ್ಲಾ ಕಳೆದು ಕೊಂಡು ಬೀದಿಗೆ ಬಂದಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ. ೧೯೯೦ ರಲ್ಲಿ ಇರಾಕಿನ ಆಗಿನ ಅಧ್ಯಕ್ಷ ಸದ್ದಾಮ್ ಪಕ್ಕದ ಪುಟ್ಟ ರಾಷ್ಟ್ರ ಕುವಿತನ್ನು ಆಕ್ರಮಿಸಿ ಅದು ತನ್ನ ೧೯ ನೆ ಪ್ರಾಂತ್ಯ ವೆಂದು ಘೋಷಿಸಿ ವಿಶ್ವವನ್ನೇ ದಿಗಿಲುಗೊಳಿಸಿದ. ರಾತ್ರೋ ರಾತ್ರಿ ಕುವೈತ್ ನ ಅರಸ ದೇಶ ಬಿಟ್ಟು ಹೆಲಿಕಾಪ್ಟರ್ ನಲ್ಲಿ ಸೌದಿ ಗೆ ಬಂದಿಳಿದು ಆಶ್ರಯ ಬೇಡಿದ. ವಿಶ್ವದ ಅಗರ್ಭ ಶ್ರೀಮಂತ ರಲ್ಲಿ ಒಬ್ಬನಾಗಿದ್ದ ಅರಸ "ಅಲ್-ಸಬಾ" ಕೆಲವೇ ಘಂಟೆಗಳಲ್ಲಿ ಎಲ್ಲವನ್ನೂ ಕಳೆದು ಕೊಂಡ. ಅಲ್ಲಿಯವರೆಗೂ ಕುವೈತ್ ನ ಹಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ವಿದೇಶಿ ವಿನಮಯ ಹೊಂದಿತ್ತು. ಈ ಘಟನೆಯ ನಂತರ ಕುವೈತ್ ನ ಹಣಕ್ಕೆ ವಿಶ್ವದ ಅತ್ಯಂತ ಬಡ ರಾಷ್ಟ್ರದ ಹಣದ ಮುಂದೆ ಯಾವ ಬೆಲೆಗೂ ಬರದೇ ಹೋಯಿತು. ಕುವೈತಿ ನೋಟುಗಳು ಬೀದಿಗಳಲ್ಲಿ ಚೆಲ್ಲಾಟ, ಡ್ರಾ ಆದ ನಂತರ ಗೋತಾ ಹೊಡೆದ ಲಾಟರಿ ಟಿಕೆಟುಗಳು ರಸ್ತೆಯ ಮೇಲೆ ದಿಕ್ಕಾ ಪಾಲಾದಂತೆ. ತನ್ನ ದೇಶವನ್ನು ಮರಳಿ ಕೊಡಿಸುವಂತೆ ಸರಕಾರಗಳನ್ನು ಒತ್ತಾಯಿಸಲು ವಿಶ್ವದ ರಾಜಧಾನಿಗಳನ್ನು ಅಲೆದ, ಗೋಗರೆದ. ನೋಡಿ, ಕೇವಲ ಕೆಲವೇ ಘಂಟೆಗಳ ವಿದ್ಯಮಾನ ತಂದ ಅವಸ್ಥೆ.


ಈ ಅರಸ (ಮಧ್ಯ ಪ್ರಾಚ್ಯದ ಎಲ್ಲ ಅರಸರ ಕತೆಯೂ ಇದೇ) ತಾನು ಹೋಗುವ ಕಡೆಯೆಲ್ಲಾ ಅವನದೇ ಖಾಸಗಿ ಹೆಲಿ ಪ್ಯಾಡು, ಅರಮನೆಗಳು, ರೋಲ್ಲ್ಸ್ ರಾಯ್ಸ್ ಕಾರುಗಳು. ಧಿಡೀರನೇ ಎಲ್ಲವನ್ನೂ - ರಾಜ್ಯ, ಕೋಶ, ಪದವಿ, ಪೀಠ – ಕಳೆದುಕೊಂಡು ಬೀದಿಯಲ್ಲಿ ಅಸಹಾಯಕನಾಗಿ ತಲೆ ಮೇಲೆ ಕೈ ಹೊತ್ತು ಕೂರುವ ಬೇಡುವವನ ಪರಿಸ್ಥಿಗೆ ಬಂದು ಬಿಟ್ಟ. ಸಂಪತ್ತಿನ ಅಹಂಕಾರದಿಂದ ಕುವೈತಿ ಅರಸ ಒಂದು ಸಭೆಯಲ್ಲಿ ಸದ್ದಾಮನನ್ನು ಹೀನಾಯವಾಗಿ ನಡೆಸಿಕೊಂಡ, ಆದ್ದರಿಂದ ಸದ್ದಾಮ್ ಈ ಶಿಕ್ಷೆ ನೀಡಿದ ಎನ್ನುವವರೂ ಇದ್ದಾರೆ. ಅದೇನೇ ಇರಲಿ ಕೆಲ ತಿಂಗಳ ಕಾಲ ಅವನು ಬೀದಿ ಪಾಲಾದದ್ದು ವಾಸ್ತವವೇ.      


ಒಬ್ಬ ವ್ಯಕ್ತಿ ಅಸಹಾಯಕನಾಗಿ ಬೀದಿ ಬದಿಯ ಕಟ್ಟೆಯ ಮೇಲೆ ತಲೆಯನ್ನು ತನ್ನ ಕೈಗಳಲ್ಲಿ ಹೊತ್ತು ಅಳುತ್ತಾ ಕುಳಿತಿರುತ್ತಾನೆ. ದಾರಿ ಹೋಕನೊಬ್ಬ ಇದನ್ನು ಕಂಡು ಕನಿಕರ ಪಟ್ಟು ಅಲ್ಲೇ ಹತ್ತಿರದ ಹೂವಿನ ಅಂಗಡಿಗೆ ಹೋಗಿ ಒಂದು ಹೂವಿನ ಗುಚ್ಚವನ್ನು ಖರೀದಿಸಿ ಆ ವ್ಯಕ್ತಿಗೆ ಕೊಟ್ಟು, take heart my friend, life is still good, Lord will help you ಎಂದು ಸಾಂತ್ವನದ ಮಾತುಗಳನ್ನು ಆಡಿ ಹೋಗುತ್ತಾನೆ. ಈ spontaneous gesture ಆ ನೊಂದ ವ್ಯಕ್ತಿಗೆ ದೊಡ್ಡ ಅಸರೆಯನ್ನೇ ನೀಡುತ್ತದೆ. Dont sweat over small things (ಚಿಕ್ಕ ವಿಷಯಗಳ ದೊಡ್ಡದು ಮಾಡುವುದು ಬೇಡ) ಎಂದು ಹೇಳುವುದಿದೆ. ಆದರೆ ಇಂಥ ಸನ್ನಿವೇಶಗಳಲ್ಲಿ ಚಿಕ್ಕ- ಚಿಕ್ಕ, ಪುಟ್ಟ- ಪುಟ್ಟ, ಹೃದಯವನ್ನು ಅರಳಿಸುವ ಚಮತ್ಕಾರಗಳನ್ನು ನಾವು ಮಾಡಲು, ಪ್ರದರ್ಶಿಸಲು ತೊಡಗಿದರೆ ನಮ್ಮ worth ಕೂಡಾ ಚಮತ್ಕಾರಗಳನ್ನು ಸಾಧಿಸುತ್ತದೆ. ಈ ತೆರನಾದ ಚಮತ್ಕಾರಗಳನ್ನು ಅನಾವರಣ ಮಾಡಲು ನಮಗಿದೆಯೇ ವ್ಯವಧಾನ? where is time? we are in hurry. ಮೇಲೆ ಕೂತ, ನಮ್ಮ ನಾಗಾಲೋಟ ಗಮನಿಸುತ್ತಿರುವ ಆ "ಹರಿ" ನಮ್ಮ ಆಕಾಂಕ್ಷೆಗಳು ಪೂರ್ತಿಯಾಗುವ ಮುನ್ನ ನಮ್ಮನ್ನು ಕರೆಸಿಕೊಳ್ಳದಿರಲಿ.


ಒಬ್ಬ ವ್ಯಕ್ತಿ, ಒಬ್ಬನ ಬಳಿ ಹೋಗಿ ೧೦೦ ಡಾಲರ್ ನ ಚಿಲ್ಲರೆ ಕೇಳುತ್ತಾನೆ. ದೊಡ್ಡ ಮುಗುಳ್ನಗುವಿನೊಂದಿಗೆ ಓಹ್ ಸ್ಸಾರಿ, ನನ್ನಲ್ಲಿದ್ದಿದ್ದರೆ ಖಂಡಿತ ನಿನಗೆ ಕೊಡುತ್ತಿದ್ದೆ ಎಂದು ಹೇಳಿದಾಗ ಚಿಲ್ಲರೆಗೆ ಬಂದ ವ್ಯಕ್ತಿ ಅವನ ಮುಗುಳ್ನಗುವಿಗೆ ಮಾರು ಹೋಗಿ ನನಗಿನ್ನು ಚಿಲ್ಲರೆಯ ಅವಶ್ಯಕತೆಯಿಲ್ಲ ನಿನ್ನ ಆ ದೊಡ್ಡ, ಮನಃಪೂರ್ವಕವಾಗಿ ಬಂದ ಮುಗುಳ್ನಗುವೇ ನನಗೆ ಸಿಕ್ಕ ಚಿಲ್ಲರೆ, you made my day ಎಂದು ವಂದಿಸಿ ಹೋಗುತ್ತಾನೆ. ನೋಡಿ ಒಂದೇ ಒಂದು ನಗು, ಪುಕ್ಕಟೆಯಾಗಿ ದೈವದತ್ತವಾಗಿ, ulterior motive ಇಲ್ಲದೆ ಬಂದ, ಸೂರ್ಯನ ರಶ್ಮಿ ಗಳಂಥ ಬೆಚ್ಚಗಿನ ಮುಗುಳ್ನಗು. ಮುಖ ಸಿಂಡರಿಸಲು ನೂರಾರು ಸ್ನಾಯುಗಳು ಕೆಲಸ ಮಾಡುತ್ತವಂತೆ. ಮಂದಾಹಸಕ್ಕೆ ಕೆಲವೇ ಸ್ನಾಯುಗಳು.  


ಬಾಲಿವುಡ್ ತಾರೆಯೊಬ್ಬ (ಅಮೀರ್ ಖಾನ್ ಇರಬೇಕು) ಹೊರಗೆ ರೆಸ್ಟುರಾಂಟ್ ಗೆ ಹೋದರೆ ತಾನು  ಆರ್ಡರ್ ಮಾಡಿದ ಆಹಾರ ಹೆಚ್ಚು ಎಂದು ತೋರಿದರೆ ಅದನ್ನು ಹಾಳು ಮಾಡದೆ ಮನೆಗೆಂದು (take home) ಕಟ್ಟಿಸಿಕೊಂಡು ಹೊರಗೆಲ್ಲಾದರೂ ಕೂತು ಬೇಡುವವರಿಗೆ ಕೊಡುತ್ತಾನಂತೆ. ನಾವು? ಹೊಟ್ಟೆ ಬಿರಿಯುವ ಹಾಗೆ ತಿಂದು ಉಳಿದದ್ದನ್ನು ನಾಳೆ ಬೆಳಿಗ್ಗೆಗೋ, ಮಧ್ಯಾಹ್ನಕ್ಕೋ ಆಯಿತು ಎಂದು ಕಟ್ಟಿಸಿಕೊಂಡು ಹೋಗುತ್ತೇವೆ. ನಾಳೆಯ ಬಗ್ಗೆ ಅಷ್ಟೊಂದು ಖಾತರಿ. ಇಸ್ತ್ರಿ ಪೆಟ್ಟಿಗೆ ಒಂದು ವರ್ಷದ ಖಾತರಿಯೊಂದಿಗೆ ಬರುತ್ತದೆ, ಆದರೆ ಮನುಷ್ಯನ ಜೀವಕ್ಕೆ ಒಂದು ಸೆಕೆಂಡಿನ ಖಾತರಿಯೂ ಇಲ್ಲ ಎಂದು ಬಹುತೇಕ ಜನರಿಗೆ, ಬಹಳಷ್ಟು ಸಮಯ ಅರಿವೇ ಇರುವುದಿಲ್ಲ.     


ಮಾರುಕಟ್ಟೆಗಳ ತಿಕ್ಕಲುತನ ಮತ್ತು ಹೊಸ ಅಂತರ್ಜಾಲ ತಂತ್ರಜ್ಞಾನದ development ಗಳಿಂದ ಬಹಳಷ್ಟು ಜನ ಹಣ ಬಾಚಿಕೊಳ್ಳ ತೊಡಗಿದರು. ಸುಲಭವಾಗಿ ಬಂದ ಹಣವನ್ನು ಯಾವ ರೀತಿ ಬಳಸಬೇಕೆಂದು ಅರಿಯದೆ ಬೇಕಾ ಬಿಟ್ಟಿಯಾಗಿ ಖರ್ಚು ಮಾಡಿ, ಮಾರುಕಟ್ಟೆಯಲ್ಲಿ ಬೆಲೆಗಳು ಸಾಮಾನ್ಯ ಜನರಿಗೆ ಎಟುಕದಂತೆ ಮಾಡಿದರು. ಕಳೆದ ವರ್ಷದ ಆರ್ಥಿಕ ಸಂಕಷ್ಟದಲ್ಲಿ ಸಾಫ್ಟ್ ವೇರ್ ಕಂಪೆನಿಗಳು ಉದ್ಯೋಗಿಗಳಿಗೆ ಸೋಡಾ ಚೀಟಿ ಕೊಟ್ಟಾಗ ಸಂತಸ ಪಟ್ಟವರೂ ಇದ್ದಾರೆ. ದೊಡ್ಡ ದೊಡ್ಡ ಸಂಬಳ ತೆಗೆದು ಕೊಳ್ಳುವ ಈ ಉದ್ಯೋಗಿಗಳು ವರ್ತಕ ಹೇಳಿದ ಬೆಲೆ ಕೊಟ್ಟು ಸಾಮಾನು ಕೊಂಡರು. ಕಾಲದ ಸವಾಲನ್ನು ಎದುರಿಸಿದ "ಚೌಕಾಸಿ" ದೂರ ಉಳಿಯಿತು. what? haggling for bargain? NO!  ಪ್ರಳಯ ಡಿಕ್ಲೇರ್ ಆಯ್ತೇನೋ ಎನ್ನಬೇಕು, ಆ ತೆರನಾದ frantic shopping spree. baskin' robbins, cafe coffee day, pub, pizza hut, glittering mall ಇವರ ತಾಣಗಳು.  ಇದು ಸಮಾಜದ ಕೆಲ ವರ್ಗಗಳ, ಕಡಿಮೆ ಸಂಬಳ ಪಡೆಯುವ, ಒಂದೊಂದು ರೂಪಾಯಿಯನ್ನೂ, ಪೈಸೆಯನ್ನೂ ಜೋಪಾನವಾಗಿ ಕಾಪಾಡಿ, ಬೇಕಿದ್ದ ಕಡೆ ಮಾತ್ರ ಖರ್ಚು ಮಾಡುವ ಜನರನ್ನು ಬಾಧಿಸಿ ಅವರು ಮನಸಾರೆ ಶಪಿಸುವಂತಾಯಿತು.


ಬದುಕಿನ ಪ್ರತಿ ಘಟ್ಟಗಳಲ್ಲೂ ನಮಗೆ ಸವಾಲುಗಳಿರುತ್ತವೆ. ಧನದಲ್ಲೂ, ಆರೋಗ್ಯದಲ್ಲೂ, ಅಧಿಕಾರದಲ್ಲೂ ಸವಾಲುಗಳಿರುತ್ತವೆ. ಇವನ್ನು ಸಮರ್ಥವಾಗಿ ಎದುರಿಸಲು ವಿಫಲರಾದಾಗ ಉಂಟಾಗುತ್ತದೆ ಕ್ಲೇಶ, ತರುತ್ತದೆ ಮತ್ಸರ. ಆದರೆ ಇಂಥ ಸಂಕೋಲೆಗಳಿಂದ ಬಿಡಿಸಿಕೊಳ್ಳಲು ಹೊರಬರಲು, ನಮಗೆ ವಿದೇಶೀ ಗುರುವಿನ ಅಗತ್ಯ ಬರಬಹುದೇ? ಬರಕೂಡದು. ಈ ವಿದೇಶಿ ಗುರು ಹೇಳಿಕೊಡುವುದು ಪೂರ್ವ ದಿಕ್ಕಿನ ಆದರ್ಶಗಳನ್ನು. ನಮ್ಮ ಅಜ್ಜ ಅಜ್ಜಿಯಂದಿರು ನಮಗೆ ಹೇಳಿ ಕೊಟ್ಟ ನೀತಿ ಕಥೆಗಳನ್ನು. ಸೂಫಿ ವರ್ಯರು, ಮುನಿಗಳು ಹೇಳಿದ ಸತ್ಯವನ್ನು. ನಮ್ಮ ಆದರ್ಶಗಳನ್ನು ನಮಗೆ ಹೇಳಿಕೊಡಲು ನಮ್ಮಿಂದ ಫೀಸನ್ನೂ ಪೀಕುತ್ತಾನೆ, ತನ್ನ ಮೂರನೇ ವಿವಾಹ ವಿಚ್ಛೇದನಕ್ಕಾಗಿ ಹೋರಾಡಿ ಬಂದ, ಸೂಟು ಬೂಟು ತೊಟ್ಟ, ತಲೆಗೆ ಫಳ, ಫಳ ಹೊಳೆಯುವ "ಜೆಲ್" ಹಚ್ಚಿಕೊಂಡ ವಿದೇಶೀ ಗುರು. ದೇಶೀ ಆದರ್ಶಗಳ ವಿದೇಶೀ ಗುರು.       


ಸರ್ವಿಸ್ ಗೆಂದು ಬಿಟ್ಟಿದ್ದ ನನ್ನ ಕಾರನ್ನು ತರಲು ಟ್ಯಾಕ್ಸಿ ಯಲ್ಲಿ ಹೋಗುವಾಗ ಚಾಲಕ ಹೇಳಿದ, ಈ ಅರಬರಿಗೆ ಹಣ ದ ಮದ ಸರಿಯಾಗಿ ಹತ್ತಿದೆ, ತಾವೇನು ಮಾಡುತ್ತಿದ್ದೇವೆ ಎಂದು ತಮಗೆ ಗೊತ್ತಿರುವುದಿಲ್ಲ. "ಕ್ಯಾಮೆಲ್ ಟು ಕ್ಯಾಮ್ರೀ" transformation ಕಣ್ಣಿವೆ ಇಕ್ಕುವಷ್ಟರಲ್ಲಿ ಆಯಿತು ಎಂದು. ಇದರರ್ಥ ಒಂಟೆ ಸವಾರಿ ಮಾತ್ರ ಮಾಡಿ ಗೊತ್ತಿದ್ದ ಅರಬ್ ಕ್ಯಾಮ್ರೀ (ದುಬಾರಿ ಕಾರು) ಕಾರಿನಲ್ಲಿ ಓಡಾಡ ತೊಡಗಿದಾಗ ಆದ confusion.


yes, money brings confusion, when priorities are lost. ಈ ಕಹಿ ಸತ್ಯ ನಮಗೆ ಅನ್ವಯಿಸದೆ ಇರಲಿ.       


 


 

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ಅಬ್ದುಲ್.. ನನ್ನ ತುಂಬು ಮನಸ್ಸಿನ ವಂದನೆಗಳು ತಮಗೆ.. ನಾನು ಬಹಳ ದಿನದ ಬಳಿಕ ಒಂದೆರಡು ನಿಮಿಷಕ್ಕಾಗಿ ಮತ್ತೆ ಸಂಪದಕ್ಕೆ ಮತ್ತೆ ಭೇಟಿ ಕೊಟ್ಟಾಗ ಸಿಕ್ಕ ಈ ನಿಮ್ಮ ಬರಹ.. ವಾವ್.. ಬೇಕಿತ್ತು.. ಹೆಚ್ಚು ಕಡಿಮೆ ಇದೆ ತರದ ಯೋಚನೆ ಪ್ರಪಂಚದಲ್ಲಿ ಇದ್ದ ನನಗೆ.. ಸಂಪದದಲ್ಲಿ ಯಾಕೆ ನಿಮ್ಮ ಲೇಖನ ಮತ್ತೆ ಬರ್ತಾ ಇಲ್ಲ ಅಂತ ಕೆಲವರು ಕೇಳ್ತಾ ಇದ್ದದಕ್ಕೆ ಉತ್ತರ ಕೊಡಲಾಗದೆ, ಉತ್ತರವಾಗಿ ಯಾವ ವಿಷಯ ಬರಿಯೋಣ ಅಂತಿದ್ದವನಿಗೆ ಒಳ್ಳೆ ವಿಷಯ ಕೊಟ್ರಿ.. ಯೋಚನೆ ಏನೋ ಬಹಳ ಬರುತ್ತೆ.. ಬರಿಯಲು ಏನು ಬರಿಯಲಿ ಅಂತ ಗೊತ್ತಾಗಲ್ಲ ಹಲವು ಬಾರಿ.. ಕೆಲವೇ.. ದಿನಗಳಲಿ ನನ್ನಲ್ಲೋ ಕೊರಿತಿರೋ ಇಂತ ಕೆಲವು ವಿಷಯಗಳಲ್ಲಿ ಒಂದಾದರೂ ನಿಮ್ಮೆಲ್ಲರ ಬಳಿ ಹಂಚಿಕೊಳ್ಳೋಣ ಅಂತ ಈಗ ಅನ್ನಿಸ್ತ ಇದೆ.. ನಿಮ್ಮ ಲೇಖನ ಮನಸ್ಸಿಗೆ ತಟ್ಟಿದೆ.. ಇದಕ್ಕೆ ಉತ್ತರ ಇನ್ನೊಂದು ಲೇಖನದ ಮೂಲಕ ಕೊಡೋಣ ಅಂತ ನನ್ನ ಭಾವನೆ.. ನೀವು ಹಂಚಿಕೊಂಡ ಎಷ್ಟೋ ಭಾವನೆಗಳ ನಾನು ಕೂಡ ನನ್ನ ಮನದಲ್ಲಿ ಹೊತ್ತು ಊರೂರು ತಿರುಗುತ್ತಾ ಇದ್ದೇನೆ. ಸಮಯ ಬಂದಿದೆ ಈಗ..ಸದ್ಯದಲ್ಲೇ ಹಂಚಿಕೊಳ್ಳೋಣ.. ನಿಮ್ಮೊಲವಿನ, ಸತ್ಯ :)

ಅಬ್ದುಲ್: ಲೇಖನದ ಒಟ್ಟಾರೆ ಅಭಿಪ್ರಾಯ ಹಿಡಿಸಿತು.. ಆದರೆ, >>>"ನಾವು? ಹೊಟ್ಟೆ ಬಿರಿಯುವ ಹಾಗೆ ತಿಂದು ಉಳಿದದ್ದನ್ನು ನಾಳೆ ಬೆಳಿಗ್ಗೆಗೋ, ಮಧ್ಯಾಹ್ನಕ್ಕೋ ಆಯಿತು ಎಂದು ಕಟ್ಟಿಸಿಕೊಂಡು ಹೋಗುತ್ತೇವೆ..." ಅದರಲ್ಲೇನು ತಪ್ಪು? ಕೆಳಗಿನ ಅಭಿಪ್ರಾಯ ನನ್ನದು... ಇತರರಿಗೆ ಕೊಡುವುದಿದ್ದರೆ, ನಾವುಂಡು ಬಿಟ್ಟದ್ದು ಏಕೆ ಕೊಡಬೇಕು? ಹೊಸದಾಗಿ ಕೊಂಡು ಕೊಡುವುದೇ ಲೇಸಲ್ಲವೆ? ಉಂಡು ಉಳಿದುದನ್ನು ಬಿಸಾಡುವುದಕ್ಕಿಂತ, ಮನೆಗೊಯ್ದು ಮರುದಿನ ತಿನ್ನುವುದು ಲೇಸಲ್ಲವೆ? ಇತೀ, ಉಉನಾಶೆ

ಸರ್.. ಇದು ಪರಿಸ್ಥಿತಿ ಮೇಲೆ ಬಿಟ್ಟದ್ದಲ್ವೆ? ಮಾರನೆ ದಿನದವರೆಗೆ ಉಳಿಯದೆ ಇರುವ ವಸ್ತು ಇನ್ಯಾರಿಗೋ ಕೊಡೋದ್ರಲ್ಲಿ ತಪ್ಪೇನಿದೆ? ನನ್ನಲ್ಲೂ ಈ ಅಭ್ಯಾಸ ಇದೆ.. ನಾನು ಉತ್ತರ ಭಾರತ ಪ್ರವಾಸದಲ್ಲಿ ಇರುವಾಗ ನಾನು ಹೋಗುವ ಹೋಟೆಲ್ ನಲ್ಲಿ ನನಗೆ ಕೊಡುವ ತಿನಿಸು, ಖಂಡಿತ ಜಾಸ್ತಿಯೇ ಇರುತ್ತೆ.. ಅದನ್ನ ಬಿಸಾಡಲು ಸಾದ್ಯವಿಲ್ಲ. ರಾತ್ರಿ ತೆಗೆದುಕೊಂಡ ಆಹಾರ ಮಾರನೇ ಬೆಳಿಗ್ಗೆ ತೆಗೆದುಕೊಳ್ಳಲು ಸಾಧ್ಯ ಇಲ್ಲ. ಅದನ್ನ ನಾನು ಉಳಕೊಂಡಿದ್ದ ಲಾಡ್ಜ್ ನ "ರೂಂ ಸರ್ವಿಸ್ ಬಾಯ್ಸ್"ಗಳಿಗೆ ಕೊಡುತ್ತೇನೆ. ಇಲ್ಲವೇ ಇನ್ಯಾರಿಗಾದರೂ.. ತಪ್ಪು ಅನ್ನಿಸುತ್ತದೆಯೇ? ಹಾಗೆ ಇನ್ನೊಂದು ನಿಜ ಒಪ್ಪಿಕೊಲ್ಲದರಲ್ಲಿ ನನಗೇನೂ ನಾಚಿಕೆ ಇಲ್ಲ.. ಅದೆಂದರೆ.. ನಾನು, "ರೂಂ ಸರ್ವಿಸ್ ಬಾಯ್ಸ್"ಗಳಿಗೆ ಅಂತ ತಿನಿಸು ಪ್ಯಾಕ್ ಮಾಡಿಸಿಲ್ಲ.. ಅಂದರೆ ಅವರ ಮೇಲಿನ ಪ್ರೀತಿಯಿಂದಾಗಿ ಅಂತ ಅಲ್ಲ.. ಆಹಾರ ಬಿಸಾಡುವಂತಾಗದಿರಲಿ ಅಂತ ನಮ್ಮ ಮನಸಿನಲ್ಲಿ ಇದೆ.. ಅದಕ್ಕೆ ಅಲ್ವೇ? ನಿಮ್ಮೊಲವಿನ, ಸತ್ಯ..

"ಆಹಾರವನ್ನು ಬಿಸಾಡಬಾರದು" ಎಂಬ ಸದುದ್ದೇಶ ಎಲ್ಲರಲ್ಲೂ ಇರುತ್ತದೆ. ಉಳಿದ ಅಹಾರವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಅನ್ನುವುದಕ್ಕೆ ಹಲವು ದಾರಿಗಳುಂಟು. ಉಳಿದ ಅಹಾರವನ್ನು ಇತರರಿಗೆ ನೀಡದೆ, ತಾವೆ ಮರುದಿನಕ್ಕೆಂದು ಒಯ್ಯುವುದರಲ್ಲಿ ತಪ್ಪೇನಿದೆ? ಅನ್ನುವುದು ನನ್ನ ಪ್ರಶ್ನೆಯಾಗಿತ್ತು. ಇನ್ನುಳಿದಂತೆ, ನೀವು ಹೇಳೋದು ಸರಿ. ಇವೆಲ್ಲದರ ಸರಿ/ತಪ್ಪು ಪರಿಸ್ಥಿತಿಗನುಗುಣವಾಗಿ ಬದಲಾಗುತ್ತದೆ.