ಕಯ್ಯಾರ ಕಿಞ್ಞಣ್ಣ ರೈ

To prevent automated spam submissions leave this field empty.
ಸಂದರ್ಶನ ಇಲ್ಲೇ ಕೇಳಿ: 

ಓದುಗರೆ, ಸಂಪದ ಸಂದರ್ಶನಗಳ ಸರಣಿಯ ೧೨ನೇ ಸಂ‌ಚಿಕೆ ಇಗೋ ನಿಮ್ಮ ಮುಂದಿದೆ.

ಕಾಸರಗೋಡಿನ ಕನ್ನಡಪರ ಹೋರಾಟದಲ್ಲಿ ಕೇಳಿ ಬರುವ ಮೊದಲ ಹೆಸರು ಕಯ್ಯಾರ ಕಿಞ್ಞಣ್ಣ ರೈ. ಕಾಸರಗೋಡು ಜಿಲ್ಲೆಯು ಕರ್ನಾಟಕದ ಭಾಗವಾಗಿದ್ದ ಕಾಲದಿಂದಲೂ ತಮ್ಮ ಸಾಹಿತ್ಯ, ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡವರು. ಇಂತಹ ಕಯ್ಯಾರರಿಗೆ ತುಳು ಭಾಷೆ ಹೆತ್ತ ತಾಯಿಯಾದರೆ, ಕನ್ನಡ ಭಾಷೆ ಸಾಕುತಾಯಿ. ಕಯ್ಯಾರರು ತಮ್ಮನ್ನು ಬೆಳೆಸಿದ ಈ ಇಬ್ಬರು ತಾಯಂದಿರನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಲೇ ಮಾತನ್ನು ಆರಂಭಿಸುತ್ತಾರೆ.

ಕಯ್ಯಾರ ಕಿಞ್ಞಣ್ಣ ರೈ - Kayyara-Kinyanna-Rai

ಬದಿಯಡ್ಕ ಸಮೀಪದ ಪೆರಡಾಲ ಎಂಬ ಗ್ರಾಮದಲ್ಲಿರುವ ಕವಿತಾ ಕುಟೀರದಲ್ಲಿ ಇವರ ವಾಸ. ೯೬ ರ ಪ್ರಾಯದಲ್ಲೂ ಜಿಗಿಯುವ ಜೀವನ ಉತ್ಸಾಹ. ಕಿಞ್ಞಣ್ಣ ಎಂದರೆ  ತುಳುವಿನಲ್ಲಿ ಕಿರಿಯವನು ಎಂದರ್ಥ. ಹೆಸರಿಗೆ ತಕ್ಕಂತೆ ಕಯ್ಯಾರರು ಬಹು ವಿಧೇಯ ವ್ಯಕ್ತಿತ್ವವುಳ್ಳ ಚೇತನ.

ಕನ್ನಡನಾಡಿನ ಭಾಗವಾಗಿದ್ದ ಕಾಸರಗೋಡು ಕೇರಳಕ್ಕೆ ಸೇರಿದಾಗ ಕನ್ನಡಿಗರನ್ನು ಸಂಘಟಿಸಿ ಹೋರಾಟ ಮಾಡಿದರೂ ಸಿಗದ ಯಶಸ್ಸು, ಅದರ ಹಿಂದಿನ ಹಲವು ಕಾರಣಗಳು, ಕರ್ನಾಟಕ ಸರ್ಕಾರ ಇದಕ್ಕಾಗಿ ಮಾಡಬೇಕಾದ ಕಾರ್ಯಗಳ ಕುರಿತ ಹಾಗೆ ಸಂಪದದೊಂದಿಗೆ ಮಾತನಾಡಿದ್ದಾರೆ. ಬನ್ನಿ ಈ ಹಿರಿಯರ ಅನುಭವ, ಹೋರಾಟದ ಬದುಕಿನ ಕುರಿತು ಅವರಿಂದಲೇ ಕೇಳಿ ತಿಳಿಯೋಣ. 

 

with Kayyara Kinyanna Rai

ಕಯ್ಯಾರರ ಸಂದರ್ಶನಕ್ಕಾಗಿ ಕಾಸರಗೋಡು ಜಿಲ್ಲೆ ಬದಿಯಡ್ಕ ಸಮೀಪದ ಪೆರಡಾಲ ಗ್ರಾಮದ ಅವರ ಮನೆ ಕವಿತಾ ಕುಟೀರದಲ್ಲಿ ಭೇಟಿಯಾದ ತಂಡದ ಭಾವಚಿತ್ರ. (ಎಡದಿಂದ)  ಹರಿಪ್ರಸಾದ್ ನಾಡಿಗ್, ಕಯ್ಯಾರರು, ಸಾತ್ವಿಕ್ ಎನ್ ವಿ  ಮತ್ತು ಪ್ರತಾಪಚಂದ್ರಶೆಟ್ಟಿ ಹಳ್ನಾಡು

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಇದೆ ಹನ್ನೊಂದನೇ ಶ್ರಾವ್ಯ ಸಂದರ್ಶನ ಅಲ್ಲವೇ? ಹನ್ನೆರಡು ಅಂತ ನಮೂದಿಸಿದ್ದೀರಿ. ಕಯ್ಯಾರರು ಗಡಿಯಾಚೆಗಿದ್ದೂ ಕನ್ನಡಕ್ಕಾಗೇ ಕೈ ಎತ್ತುತ್ತಿದ್ದಾರೆ. ಅವರೊಂದಿಗೆ ನಾವೆಲ್ಲರೂ ಕೈ ಜೋಡಿಸಲೇ ಬೇಕು.

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ... ಪ್ರಾಥಮಿಕದಲ್ಲಿ ಓದಿದ ಪದ್ಯ ಇನ್ನೂ ನೆನಪಿದೆ. ೧೯೯೨ ರ ದಾವಣಗೆರೆಯ ಸಾಹಿತ್ಯ ಸಮ್ಮೇಳನದಲ್ಲಿ ಅವರ ಭಾಷಣವನ್ನು ಕೇಳಿದ್ದೆ. ಒಳ್ಳೆಯ ಪಾಡುಕಾಸ್ಟಿಗಾಗಿ ಸಾತ್ವಿಕ್ ಮತ್ತು ಹರಿಗೆ ಧನ್ಯವಾದಗಳು !

ಕನ್ನಡದ ಹಿರಿಯ ಚೇತನ ಕಯ್ಯಾರರ ಸಂದರ್ಶನ ತುಂಬಾ ಸೊಗಸಾಗಿ ಮೂಡಿ ಬಂತು. ಕಯ್ಯಾರರ ಅನುಭವಗಳನ್ನು ಅವರದೇ ಧ್ವನಿಯಲ್ಲಿ ಕೇಳಿಸಿದ, ಚಿತ್ರಸಹಿತ ಪ್ರಕಟಿಸಿದ ಸಾತ್ವಿಕ್ ರಿಗೆ ಧನ್ಯವಾದಗಳು. ಪುಟ್ಟರಾಜು

ಎಲ್ಲ ಶುಭ ಹಾರೈಸಿದ ಸ್ನೇಹಿತರಿಗೆ ಧನ್ಯವಾದಗಳು. ನಿಮ್ಮಲ್ಲಿಯೂ ಇಂತಹ ಪಾಡ್ ಕಾಸ್ಟ್ ಗಳು ಇದ್ದಲ್ಲಿ, ಅವು ಸಂಗ್ರಹಯೋಗ್ಯ ಎನಿಸಿದಲ್ಲಿ ಅವುಗಳನ್ನು ನೀವು ಕೂಡ ಸಂಪದದಲ್ಲಿ ಪ್ರಕಟಿಸಬಹುದು. ಸಾತ್ವಿಕ್

ಕಳೆದ ಐವತ್ತರ ದಶಕದ ಕೊನೆಯಲ್ಲಿ ಕೊಡಗಿನ ವಿದ್ಯಾರ್ಥಿಗಳು ೫ನೇ ತರಗತಿಯಲ್ಲಿ ಓದುತ್ತಿದ್ದ ಕನ್ನಡ ಪಠ್ಯಪುಸ್ತಕ ಕಯ್ಯಾರ ಕಿಞ್ಞಣ್ಣ ರೈಯವರು ಬರೆದು ರೂಪಿಸಿದ್ದು. ಅದರಲ್ಲಿದ್ದ ’ಹರಿಜನರ ಮೊರೆ’ ಎನ್ನುವ ಪದ್ಯ ನಾನು ನೋಡಿದ ಹಾಗೆ ದಲಿತರ ಪರವಾದ ಮೊದಲ ಕವನ. "ಹೊಲೆಯ ನೀನು ಪಾಪಿಯೆ೦ದು ಹಳಿವರಯ್ಯೋ ನಮ್ಮನ್ನೆಲ್ಲ ಬಳಿಗೆ ಕರೆದು ನುಡಿವರಿಲ್ಲ ..." ಎ೦ದು ಮೊದಲಾಗಿತ್ತು.

ಇವರು ಕವಿ ಮಾತ್ರ ಎಂದು ತಿಳಿದಿದ್ದೆವು. ಅವರ ಅಪಾರ ಸಾಧನೆಗಳನ್ನು ಅವರಿಂದಲೇ ಕೇಳಿಸಿದ ಸಂಪದಕ್ಕೆ ಅಭಿನಂದನೆಗಳು. ನಿಜಕ್ಕೂ ಇವರೊಬ್ಬ ಮಹಾನ್ ಸಾಧಕರೇ ಹೌದು. ಕವಿತ್ವದಲ್ಲಷ್ಟೇ ಅಲ್ಲ, ಜೀವನದಲ್ಲೂ ಗೆದ್ದವರಿವರು. ಈ ರೀತಿಯ ಪಾಡ್ಕಾಸ್ಟ್ ಗಳು ಮತ್ತಷ್ಟು ಬರಲಿ. ನಮ್ಮವರನ್ನು ನಾವು ಮತ್ತೂ ಚೆನ್ನಾಗಿ ತಿಳಿಯುವಂತಾಗಲಿ.

ಶ್ರೀಯುತ ಸಾತ್ವಿಕ ಎನ್ ವಿ ಯವರಿಗೆ ವಂದನೆಗಳು ನೀವು ಹಿರಿಯ ಕವಿ ಕಾಸರಗೋಡಿನ ಕಯ್ಯಾರ ಕಿಂಞಣ್ಣ ರೈಯವರ ಬಗ್ಗೆ ಬರೆದ ಪರಿಚಯ ಲೇಖನ ಹಾಗೂ ಶ್ರಾವ್ಯವನ್ನು ಕೇಳಿ ಸಂತಸವಾಯಿತು. ರೈಯವರ ಹಾಗೂ ನೀವು ನಾಡಿಗರು ಹಾಗೂ ಶೆಟ್ಟರ ಗ್ರೂಫ್ ಫೋಟೋ ನೋಡಿ ಸಂತಸವಾಯಿತು.ಮಹತ್ವ ಪೂರ್ಣವಾದ ಶ್ರಾವ್ಯವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.