ಶನಿವಾರದಂದೇ ಕಟ್ಟಿದ ಪುಣೆಯ ಶನಿವಾರ್ ವಾಡ ಕೋಟೆ ಅರಮನೆ !

To prevent automated spam submissions leave this field empty.

ನಾವು ಮಾರ್ಚ ತಿಂಗಳ ಮೊದಲವಾರ ಪುಣೆಗೆ ಹೋದಾಗ,  ಕೋಟೆಮತ್ತು ಅರಮನೆಗಳ ದುರಸ್ತಿಕೆಲಸ ನಡೆಯುತ್ತಿತ್ತು.

 

ಶನಿವಾರ್ ವಾಡ ಕೋಟೆ ಒಳಭಾಗದಲ್ಲಿನ ಕಟ್ಟಡದ ಕೆಲವು ಅವಶೇಷಗಳು....

ಕೋಟೆಯ ಒಳಭಾಗದ ದೃಷ್ಯ....

\\

 

ಪೇಷ್ವೆ ಬಾಜಿರಾವ್ ದೆಹಲಿಯ ಮೊಗಲ್ ಸುಲ್ತಾನರಮೇಲೆ ಯಾವಾಗಲೂ ಕಣ್ಣಿಟ್ಟಿದ್ದರು. ಅದರಿಂದ ದೆಹಲಿಯ ಕಡೆಗಿನ ಉತ್ತದ ದ್ವಾರಕ್ಕೆ ವಿಶೇಷ ಪ್ರಾಮುಖ್ಯತೆ ಕೊಡಲಾಗಿತ್ತು. ಛತ್ರಪತಿ ಸಾಹು ಮಹರಾಜರೂ ಆ ಮಾತನ್ನೇ ಪುಷ್ಟೀ ಕರಿಸಿದ್ದರು.
ಭಾರಿ ಪ್ರಮಾಣದ ದ್ವಾರದಲ್ಲಿ ದೊಡ್ಡ ಆನೆಗಳೂ ಮತ್ತು ಅವುಗಳಮೇಲೆ ಅಂಬಾರಿಯಲ್ಲಿ ಕುಳಿತ ಯೋಧರೂ  ಬರಬಹುದಾಗಿತ್ತು.
ಉತ್ತರದಿಕ್ಕಿಗೆ ಮುಖಮಾಡಿದ ಮಸ್ತಾನಿ ದರವಾಜ. ಅಥವಾ ಅಲಿಬಹದ್ದುರ್ ದರವಾಜ,
ಪೂರ್ವದಿಕ್ಕಿಗೆ ಮುಖಮಾಡಿದ ಖಿಡ್ಕಿ ದರವಾಜ
ದಕ್ಷಿಣ ಪೂರ್ವದಿಕ್ಕಿಗೆ ಮುಖಮಾಡಿದ ಗಣೇಶ್ ದರವಾಜ
ದಕ್ಷಿನದಿಕ್ಕಿನ ಜಂಭುಲ್ ದರವಾಜ ಅಥವಾ ನಾರಾಯಣ್ ದರವಾಜ. ಕೆಲವೊಮ್ಮೆ ಪೇಷ್ವೆಯವರು ಯುದ್ಧದಲ್ಲಿ ಮಡಿದಾಗ ಈ ದ್ವಾರದ ಮುಖಾಂತರವೇ ಅವರ ಶವಗಳನ್ನು ಕೊಟೆಯಿಂದ ಹೊರತಂದು ಅಂತ್ಯ ಸಂಸ್ಕಾರಗಳನ್ನು ಮಾಡಲಾಗುತ್ತಿತ್ತು. 

ಶನಿವಾರ್ ವಾಡ (Marathi: शनिवारवाडा) ಪುಣೆಯ ಕೋಟೆ ಮತ್ತು ಅದರೊಳಗೆ ನಿರ್ಮಿಸಿದ  ಅರಮನೆ ಸೈನಿಕ  ಸಿಬ್ಬಂದಿವರ್ಗ ವಾಸವಾಗಿದ್ದ ಪ್ರದೇಶ. ಇದನ್ನು ಕಟ್ಟಿದ್ದು ೧೭೩೬ ರಲ್ಲಿ.  ಪುಣೆಯನ್ನಾಳಿದ ಪೇಷ್ವೆಗಳ ಅಧಿಕಾರ ಗದ್ದುಗೆ ಇದ್ದದ್ದು ಇಲ್ಲೇ. ೧೮೧೮ ರ ಅಂತರ ಒಂದು ಕಾಲದಲ್ಲಿ ಮೆರೆದ ಪುಣೆಯ ಬಲಿಷ್ಟ ಪೇಷ್ವೆಯವರುಗಳು ಬ್ರಿಟಿಶರ ಅಧೀನರಾದರು. ೧೮೨೮ ರಲ್ಲಿ ಕೋಟೆ ಮತ್ತು ಅಲ್ಲಿನ ಅರಮನೆಗಳು ಬೆಂಕಿಗೆ ಆಹುತಿಯಾಗಿ ಸುಮಾರು ಪ್ರದೇಶ ನಷ್ಟವಾಯಿತು. ಇಂದು ಅಳಿದುಳಿದ ಕೆಲವು ಭಾಗಗಳನ್ನು ರಕ್ಷಿಸಿ ಸಾರ್ವಜನಿಕರಿಗೆ ತೆರೆದಿಡಲಾಗಿದೆ.

ಛತ್ರಪತಿ ಶಾಹುಮಹಾರಾಜರಿಗೆ ದಿವಾನರಾಗಿ ಕಾರ್ಯನಿರ್ವಹಿಸುತ್ತಿದ್ದ, ಬಾಜಿರಾವ್- ೧ ಪೇಷ್ವೆಯವರು, ತಮ್ಮ ಸ್ವಂತ ರಾಜಗೃಹವನ್ನು ಕಟ್ಟಿಸಲು ಸಾಂಪ್ರದಾಯಿಕವಾಗಿ ಹಿಡಿಮಣ್ಣಿನಿಂದ ಶುರುಮಾಡಿದ್ದು ೧೭೩೦ ರ ಜನವರಿ, ಶನಿವಾರ ೧೦, ರಂದು. ಆ ದಿನ ಪಂಚಾಂಗ ರೀತ್ಯ ಅತ್ಯಂತ ಪ್ರಶಸ್ತವಾದ ದಿನವಾಗಿತ್ತು. ಅಂದಿನಿಂದ ಈ ಕೋಟೆ ಗೆ ಶನಿವಾರ ವಾಡವೆಂದು ಹೆಸರುಬಂತು. ಇದರ ನಿರ್ಮಾಣಕ್ಕಾಗಿ,  ಜುನ್ನಾರ್ ಪ್ರದೇಶದ ಕಾಡಿನಿಂದ ಟೀಕ್ ಮರವನ್ನು ತರಿಸಲಾಯಿತು. ಚಿಂಚ್ ವಾಡದ ಕ್ವೈರಿಯಿಂದ ಕಲ್ಲುಗಳು ಬಂದವು. ಜೆಜುರಿಯಿಂದ ಸುಣ್ಣ ಕಲ್ಲು ಮತ್ತು ಗಾರೆಗೆ ಬೇಕಾದ ವಸ್ತುಗಳು ಬಂದವು. ೧೭೩೨, ರಲ್ಲಿ ಶನಿವಾರ್ ವಾಡ ಅರಮನೆಯ ಕೆಲಸ ೧೬,೧೧೦,ರೂಪಾಯಿಗಳ ವೆಚ್ಚದಿಂದ ಸಂಪೂರ್ಣಗೊಂಡಿತು. ೧೭೩೨, ನೇ ಇಸವಿಯ, ಜನವರಿ, ೨೨ ರಂದು,ಶನಿವಾರದ ಪ್ರ ಶಸ್ತದಿನದಂದೇ ಅದರ ಉದ್ಘಾಟನೆಯಾಯಿತು.

ಕ್ರಮೇಣ ಅನೇಕ ಅರಮನೆಗಳು, ಬಲವಾದ ಗೋಡೆಗೆ ಹಲವಾರು ಸೇರ್ಪಡೆಗಳು, ದ್ವಾರಗಳು, ವಿಶಾಲವಾದ ಹಝಾರಗಳು,ರಾಣೀವಾಸದವರಿಗೆ, ಮತ್ತು ರಾಜಪರಿವಾರಕ್ಕೆ ಕುಳಿತು ವೀಕ್ಷಿಸಲು ಪರದೆಯ ಪುಟ್ಟ ಸ್ಥಾನಗಳು, ಸುಂದರವಾದ ಉದ್ಯಾನವನಗಳು, ನೀರಿನ ಕಾರಂಜಿಗಳು ಇತ್ಯಾದಿಗಳು ರಚಿಸಲ್ಪಟ್ಟವು. ಅನೇಕ ದ್ವಾರಗಳನ್ನೂ ರಚಿಸಲಾಯಿತು.  ಈಗಲೂ ನಮಗೆ ೫ ದ್ವಾರಗಳು ಮತ್ತು ಫಿರಂಗಿ ಮದ್ದು ಗುಂಡುಗಳನ್ನು ತಯಾರಾಗಿ ಇಟ್ಟ, ಬತೇರಿ, ಬುರುಜುಗಳು ಕಾಣಿಸುತ್ತವೆ.

೧. ಉತ್ತರಬಾಗಕ್ಕೆ ಮುಖಮಾಡಿದ ದಿಲ್ಲೀ ದರವಾಜ :

ಇದು ಶನಿವಾರವಾಡ ಅರಮನೆಯ ಪ್ರಮುಖ ದ್ವಾರಗಳಲ್ಲೊಂದು. ಪೇಷ್ವೆ ಬಾಜಿರಾವ್ ದೆಹಲಿಯ ಮೊಗಲ್ ಸುಲ್ತಾನರಮೇಲೆ ಯಾವಾಗಲೂ ಕಣ್ಣಿಟ್ಟಿದ್ದರು. ಅದರಿಂದ ದೆಹಲಿಯ ಕಡೆಗಿನ ಉತ್ತದ ದ್ವಾರಕ್ಕೆ ವಿಶೇಷ ಪ್ರಾಮುಖ್ಯತೆ ಕೊಡಲಾಗಿತ್ತು. ಛತ್ರಪತಿ ಸಾಹು ಮಹರಾಜರೂ ಆ ಮಾತನ್ನೇ ಪುಷ್ಟೀ ಕರಿಸಿದ್ದರು. ಭಾರಿ ಪ್ರಮಾಣದ ದ್ವಾರದಲ್ಲಿ ದೊಡ್ಡ ಆನೆಗಳೂ ಮತ್ತು ಅವುಗಳಮೇಲೆ ಅಂಬಾರಿಯಲ್ಲಿ ಕುಳಿತ ಯೋಧರೂ ದ್ವಾರದೊಳಗೆ ಸುಲಭವಾಗಿ ಬರಬಹುದಾಗಿತ್ತು.

೨. ಉತ್ತರದಿಕ್ಕಿಗೆ ಮುಖಮಾಡಿದ ಮಸ್ತಾನಿ ದರವಾಜ. ಅಥವಾ ಅಲಿಬಹದ್ದುರ್ ದರವಾಜ,


೩. ಪೂರ್ವದಿಕ್ಕಿಗೆ ಮುಖಮಾಡಿದ ಖಿಡ್ಕಿ ದರವಾಜ


೪. ದಕ್ಷಿಣ ಪೂರ್ವದಿಕ್ಕಿಗೆ ಮುಖಮಾಡಿದ ಗಣೇಶ್ ದರವಾಜ


೫. ದಕ್ಷಿನದಿಕ್ಕಿನ ಜಂಭುಲ್ ದರವಾಜ ಅಥವಾ ನಾರಾಯಣ್ ದರವಾಜ :

ಕೆಲವೊಮ್ಮೆ ಪೇಷ್ವೆಯವರು ಯುದ್ಧದಲ್ಲಿ ಮಡಿದಾಗ ಈ ದ್ವಾರದ ಮುಖಾಂತರವೇ ಅವರ ಶವಗಳನ್ನು ಕೊಟೆಯಿಂದ ಹೊರತಂದು ಅಂತ್ಯ ಸಂಸ್ಕಾರಗಳನ್ನು ಮಾಡಲಾಗುತ್ತಿತ್ತು. ಹೀಗೆ ಪ್ರತಿ ದರವಾಜಕ್ಕೂ ನಿಯಮಿತ ದಾಯಿತ್ವವಿದೆ.

-ಚಿತ್ರಗಳು ವೆಂಕಟೇಶ್

ಲೇಖನ ವರ್ಗ (Category):