ಪುಣೆಯ ಸಮೀಪದಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯ !

To prevent automated spam submissions leave this field empty.

ಬಾಲಾಜಿಮಂದಿರಕ್ಕೆ ಸ್ವಾಗತನೀಡುವ ಮಹಾದ್ವಾರ...

ರಾಜಗೋಪುರ.

ಪುಣೆಯ ಬಳಿಯ ನಾರಾಯಣ್ ಪುರ್ ದ,  ’ಕೇತ್ಕಾವಳೆ” ಎಂಬ ಊರಿನಲ್ಲಿ ತಿರುಪತಿ ಮಹಾಸ್ಥಾನದಲ್ಲಿನ ವೆಂಕಟೇಶ್ವರ ಸ್ವಾಮಿಯನ್ನೇ ಹೋಲುವ ಬಾಲಾಜಿಮಂದಿರವೊಂದು ಭಕ್ತಜನರ ಮನೋಕಾಮನೆಗಳನ್ನು ಈಡೇರಿಸಲು ಸದಾ ಸಿದ್ಧವಾಗಿ ನಿಂತಿದೆ. ಹಾಗೆಯೇ ’ಶಿರ್ ಗಾಂ ’ ನಲ್ಲಿ ”ಶಿರ್ಡಿಯ ಸಾಯಿಬಾಬನ ಮಂದಿರ ’ ದ ಹೋಲಿಕೆಯ ಮತ್ತೊಂದು ದೇವಸ್ಥಾನ ಸ್ಥಾಪನೆಯಾಗಿದೆ.

ಬಾಲಾಜಿ ದೇವಾಲಯದ  ಪೂಜೆ-ಪುನಸ್ಕಾರಗಳ ವೇಳಾಪಟ್ಟಿ (೨೦೧೦ ರ ಮಾರ್ಚ್ ತಿಂಗಳ ಮೊದಲನೆಯವಾರದಂದು ಚಿತ್ರೀಕರಿಸಿದ್ದು)

ಬಹುಶಃ ’ತಿರುಪತಿ ವೆಂಕಟೇಶ್ವರ ದೇವಸ್ಥಾನ” ’ಶಿರ್ಡಿ ಸಾಯಿಬಾಬ ಮಂದಿರ ’ ಗಳಿಗೆ ಹೋಗಲು ಸಾಧ್ಯವಾಗದೆ ಇದ್ದಾಗ ಶ್ರದ್ಧಾಳುಗಳಿಗೆ ಮತ್ತೊಂದು ದೇವರ ವರದಾನವೆಂದರೆ ಅವೆಲ್ಲಾ ಭಕ್ತರ ಹತ್ತಿರಹತ್ತಿರಕ್ಕೆ ಬಂದು ಎಲ್ಲರ ಇಷ್ಠಾರ್ಥಗಳನ್ನು ನೆರೆವೇರಿಸುತ್ತಿವೆ. ಗಮನಿಸಿ.

ಪುಣೆನಗರಕ್ಕೆ ಭೆಟ್ಟಿಕೊಡುವ ಸುಮಾರು ಪರ್ಯಟಕರ ಮತ್ತೊಂದು ಆಕರ್ಷಣೆಯ ಕೇಂದ್ರ ತಾಣವೆಂದರೆ, ೩೫-೪೦ ಕಿ. ಮೀ. ದೂರದಲ್ಲಿರುವ ನಾರಾಯಣ್ ಪುರ್ ನಲ್ಲಿ ಕಂಗೊಳಿಸುತ್ತಿರುವ, ಬಾಲಾಜಿಮಂದಿರ. ಸುಮಾರು ೧೦ ವರ್ಷಗಳಷ್ಟೇ ಆಗಿರುವ ಈ ದೇವಾಲಯದ ಹೆಸರು,  ಭಾರತದ ಮೂಲೆಮೂಲೆಗಳಲ್ಲೂ ಹಬ್ಬಿದೆ. ವಿಶಾಲವಾದ ದೇವಸ್ಥಾನ ಮತ್ತು ಅಷ್ಟೇನೂ ದರ್ಶನಕ್ಕೆ ಕಷ್ಟಪಡಬೇಕಾದ ಪ್ರಮೇಯವಿಲ್ಲ. ಮತ್ತೆ ತಿರುಪತಿಯಲ್ಲಿರುವಂತೆ ಎಲ್ಲಾ ಸೇವೆಗಳೂ ಲಭ್ಯವಿರುವುದರಿಂದ ನೌಕರಿಮಾಡುತ್ತಿರುವ  ಭಕ್ತರಿಗೆ ವಾರಾಂತ್ಯದಲ್ಲಿ ಬಂದು ದರ್ಶನಮಾಡುವ ಸೌಲಭ್ಯಗಳನ್ನು ಕಡೆಗಣಿಸುವಂತಿಲ್ಲ !
ಬಾಲಾಜಿಮಂದಿರದ ರಾಜಗೋಪುರ..

ಈ ಬೃಹತ್ ದ್ರಾವಿಡ ಶೈಲಿಯಲ್ಲಿ ನಿರ್ಮಿಸಿದ ವೆಂಕಟೇಶ್ವರ ದೇವಾಲಯದ ನಿರ್ಮಾಣಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ,  ಪದ್ಮಶ್ರೀ.  ಬಿ. ವಿ. ರಾವ್ ಗೆ ಸಲ್ಲಬೇಕು. ರಾವ್ ಸಮೀಪದಲ್ಲೇ ಇರುವ ಸುಪ್ರಸಿದ್ಧ ವೆಂಕಟೇಶ್ವರ ಹ್ಯಾಚರೀಸ್ ಕಂಪೆನಿಯ ವಿಭಾಗವೊಂದರ ಮಾಲೀಕರಾಗಿದ್ದರು. ಮೊದಲು ವೆಂಕಟೇಶ್ವರ ಚಾರಿಟಬಲ್ ಮತ್ತು ರಿಲಿಜಿಯಸ್ ಟ್ರಸ್ಟ್ ಸ್ಥಾಪನೆಯಾಯಿತು. ಅವರ ಮಾರ್ಗದರ್ಶನದಲ್ಲಿ ತಿರುಪತಿಯ ವೆಂಕಟೇಶ್ವರ ದೇವಾಲಯದ ಪಡಿಯಚ್ಚಿನಂತೆ ಕಾಣಿಸುವ ದೇವಾಲಯವನ್ನು ೩ ರಿಂದ ೫ ಮಿಲಿಯನ್ ಅಮೆರಿಕನ್ ಡಾಲರ್ ಖರ್ಚಿನಲ್ಲಿ ನಿರ್ಮಿಸಲಾಗಿದೆ.  ಅಲ್ಲಿ ಭಕ್ತಾದಿಗಳಿಗೆ ಇರಲು ಮತ್ತು ಅಲ್ಲೇ ಸಾಧ್ಯವಾದರೆ ಅಡುಗೆ ಮಾಡಿಕೊಳ್ಳಲು ಸಹಾಯವಾಗುವಂತೆ,  ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರತಿಯೊಂದು ಹಂತದಲ್ಲೂ ತಿರುಪತಿಯ ಶ್ರೀ ದೇವಸ್ಥಾನದ ಮಾರ್ಗದರ್ಶನ ಲಭ್ಯವಿದೆ. ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಸುಮಾರು ೧೦ ಎಕರೆ ಜಮೀನಿನ ಮೇಲೆ ಕಟ್ಟಲಾಗಿರುವ ಸ್ವಾಮಿಯ ಸನ್ನಿಧಾನಕ್ಕೆ ಸಾವಿರಾರು ಭಕ್ತಾದಿಗಳು ಬರುತ್ತಿದ್ದಾರೆ. ದೇವಾಲಯದ ಕಟ್ಟುವಿಕೆಯಲ್ಲಿ ಬೇಕಾದ ಕಪ್ಪುಕಲ್ಲುಗಳು ಮರದ ಸಾಮಾನುಗಳನ್ನು ತಮಿಳುನಾಡಿನ ಕಂಚೀಪುರದಿಂದ ತರಲಾಗಿದೆ. ತಮಿಳುನಾಡಿನ, ಮತ್ತು ಆಂಧ್ರ ಪ್ರದೇಶದ ಕುಶಲ ಕಾರೀಗರ್ ಗಳು ಹಗಲಿರುಳು ದುಡಿದು, ೧೯೯೬-೨೦೦೩ ರ ಸಮಯಾವಧಿಯಲ್ಲಿ ದೇವಾಲಯದ ಕಾರ್ಯವನ್ನು  ಸಂಪನ್ನಗೊಳಿಸಿದರು.

ಇನ್ನೂ ಅಷ್ಟೇನೂ ಸದ್ದು ಗದ್ದಲವಿಲ್ಲದೆ ರಂಜಿಸುತ್ತಿರುವ ದೇವಾಲಯದ ಪ್ರಾಂಗಣ....

ಬಾಲಾಜಿಮಂದಿರಕ್ಕೆ ತಲುಪುವ ದಾರಿಯ ವಿವರಗಳು : 

ರಾಷ್ಟ್ರೀಯ ಹೆದ್ದಾರಿ NH4 (ಮುಂಬೈ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ), ಕಾಟ್ರಜ್ ಸುರಂಗವನ್ನು ದಾಟಿ ಸ್ವಲ್ಪ ಮುಂದೆನಡೆದರೆ,  ಶಿಂಡೆವಾಡಿ, ಖೇಡ್ ಶಿವಪುರ್, ನಸರಾಪುರ್ ಫಾಟ್, ಕಪೂರ್ ಹೊಳೆ ಗ್ರಾಮ, ಸಿಕ್ಕುತ್ತವೆ.  ಇಲ್ಲಿಂದ ಬಾಲಾಜಿ ಮಂದಿರ ಹತ್ತಿರವಿದೆ. ಮೊದಲು ನಿಮಗೆ ಆನಂದ್ ಹೋಟೆಲ್ ಸಿಕ್ಕುತ್ತದೆ. ಅಲ್ಲಿಂದ ನೀವು ಎಡಕ್ಕೆ ತಿರುಗಿ ಭೋರ್ ಸಸ್ವಾಡ್ ರಸ್ತೆಗೆ ತಿರುಗಿ ಮುಂದೆಸಾಗಿದರೆ, ಕೇಟ್ಕಾವಳೆಯಲ್ಲಿ ಬಾಲಾಜಿಯಮಂದಿರ ಕಾಣಿಸುತ್ತದೆ.  ಈ ಮಂದಿರ, ಪುಣೆಯಿಂದ  ಕೇವಲ ೩೫-೪೦ ಕಿ. ಮೀ ದೂರದಲ್ಲಿದೆ. ಮುಂದೆ  ೧೦ ಕಿ. ಮೀ ದೂರದಲ್ಲಿ  ಶ್ರೀ ಕ್ಷೇತ್ರ ನಾರಾಯನ್ ಪುರ್ ದತ್ತಮಂದಿರ ಸಿಗುತ್ತದೆ.  ೭ ಕಿ. ಮೀ ದೂರದಲ್ಲಿ ಪುರುಂದರ್ ಕೋಟೆ, ಸಾಸ್ವಾಡ್, ಸಿಗುತ್ತದೆ.  ಪುಣೆಗೆ ವಾಪಸ್ಸಾಗಬೇಕಾದರೆ,  ದಿವೇಘಾಟ್,  ಹಡ್ಸಾಪುರ್ ಮಾರ್ಗದಲ್ಲಿ ಬಂದರೆ ತಲುಪಬಹುದು. 

ದೇವಾಲಯದ ಸಮೀಪದಲ್ಲಿ ಗೋಧಿ ಹಿಟ್ಟು ತಯಾರಿಸುವ ಮತ್ತೊಂದು ಕಾರ್ಖಾನೆ, ’ ಉತ್ತರಾ ಫುಡ್ ” ಯಿದೆ. ೨೫ ಜನ ಲಡ್ಡೂ ಮಾಡುವ ಮತ್ತು ೨೫ ದೇವರ ಹಾರಗಳನ್ನು ತಯಾರಿಸುವ ಸಿಬ್ಬಂದಿವರ್ಗವನ್ನು  ತಿರುಪತಿಯಿಂದ ಬರಮಾಡಿಕೊಳ್ಳಲಾಗಿದೆ.  ೮  ಜನ ಅರ್ಚಕರು ತಿರುಪತಿಯ ಬಾಲಾಜಿಮಂದಿರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿವಾರದಿಂದ ಬಂದಿದ್ದಾರೆ. ಪ್ರತಿದಿನವೂ ದೈನಂದಿನ ಪೂಜಾವಿಧಾನ ಮತ್ತೊಂದು ಮಗದೊಂದು ಕಾರ್ಯಗಳಲ್ಲಿ ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ, ಮೂಲ ತಿರುಪತಿ ಮಂದಿರದ ಜೊತೆ,  ಹಾಟ್ ಲೈನ್ ಸಂಪರ್ಕವಿದೆ. ಸುಮಾರು, ೧೫,೦೦೦ ಭಕ್ತಾದಿಗಳ ದೊಡ್ಡ ಕ್ಯೂ ಪ್ರತಿದಿನ ಇದ್ದೇ ಇರುತ್ತದೆ. ರಜಾದಿನಗಳಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ಭಕ್ತ ಜನರ ಸಂಖ್ಯೆ ಹೆಚ್ಚು.

ದೇವಾಲಯದ ಪೂಜೆಯ ಸಮಯ :

ಬೆಳಿಗ್ಯೆ, ೬ : ೦೦  ರಿಂದ ರಾತ್ರಿ  ೧೦ : ಗಂಟೆಯ ವರೆಗೆ ಮಂದಿರ ಬಾಗಿಲುಗಳು ಸಾರ್ವಜನಿಕರಿಗೆ ತೆರೆದಿರುತ್ತವೆ.

 

ವಿಶಾಲವಾದ ಭೋಜನ ಶಾಲೆ.....

 

೧೦ ಕಿ. ಮೀ ದೂರದಲಿ ಶ್ರೀ ಕ್ಷೇತ್ರ ನಾರಾಯನ್ ಪುರ್ ದತ್ತಮಂದಿರ ಸಿಗುತ್ತದೆ. ೭ ಕಿ. ಮೀ ದೂರದಲ್ಲಿ ಪುರುಂದರ್ ಕೋಟೆ, ಸಾಸ್ವಾಡ್. ಪುಣೆಗೆ ವಾಪಸ್ಸಾಗಬೇಕಾದರೆ,  ದಿವೇಘಾಟ್ ಹಡ್ಸಾಪುರ್ ಮಾರ್ಗದಲ್ಲಿ ಬಂದರೆ ತಲುಪಬಹುದು. 
ಈ ಬೃಹತ್ ದ್ರಾವಿಡ ಶೈಲಿಯಲ್ಲಿ ನಿರ್ಮಿಸಿದ ವೆಂಕಟೇಶ್ವರ ದೇವಾಲಯದ ನಿರ್ಮಾಣಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಪದ್ಮಶ್ರೀ ಬಿ. ವಿ. ರಾವ್ ಗೆ ಸಲ್ಲಬೇಕು. ರಾವ್ ಸಮೀಪದಲ್ಲೇ ಇರುವ ಸುಪ್ರಸಿದ್ಧ ವೆಂಕಟೇಶ್ವರ ಹ್ಯಾಚರೀಸ್ ಕಂಪೆನಿಯ ವಿಭಾಗವೊಂದರ ಮಾಲೀಕರಾಗಿದ್ದಾರೆ.ಮೊದಲು ವೆಂಕಟೇಶ್ವರ ಚಾರಿಟಬಲ್ ಮತ್ತು ರಿಲಿಜಿಯಸ್ ಟ್ರಸ್ಟ್ ಸ್ಥಾಪನೆಯಾಯಿತು. ಅವರ ಮಾರ್ಗದರ್ಶನದಲ್ಲಿ ತಿರುಪತಿಯ ವೆಂಕಟೇಶ್ವರ ದೇವಾಲಯದ ಪಡಿಯಚ್ಚಿನಂತೆ ಕಾಣಿಸುವ ದೇವಾಲಯವನ್ನು ಊಶ್॓೩ ತೊ ॓೫ ಮಿಲ್ಲಿಒನ್ ಡಾಲರ್ ಖರ್ಚಿನಲ್ಲಿ ಅಲ್ಲಿ ಭಕ್ತಾದಿಗಳಿಗೆ ಇರಲು ಮತ್ತು ಅಲ್ಲೇ ಸಾಧ್ಯವಾದರೆ ಅಡುಗೆ ಮಾಡಿಕೊಳ್ಳಲು ಸಹಾಯವಾಗುವಂತೆ,  ಕೊಠಡಿಗಳನ್ನು ನಿರ್ಮಿಸಲಾಗಿದೆ.
ಪ್ರತಿಯೊಂದು ಹಂತದಲ್ಲೂ ತಿರುಪತಿಯ ಶ್ರೀ ದೇವಸ್ಥಾನದ ಮಾರ್ಗದರ್ಶನ ಲಭ್ಯವಿದೆ. ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಸುಮಾರು ೧೦ ಎಕರೆ ಜಮೀನಿನ ಮೇಲೆ ಕಟ್ಟಲಾಗಿರುವ ಸ್ವಾಮಿಯ ಸನ್ನಿಧಾನಕ್ಕೆ ಸಾವಿರಾರು ಭಕ್ತಾದಿಗಳು ಬರುತ್ತಿದ್ದಾರೆ.
ದೇವಾಲಯದ ಸಮೀಪದಲ್ಲಿ ಗೋಧಿ ಹಿಟ್ಟು ತಯಾರಿಸುವ ಮತ್ತೊಂದು ಕಾರ್ಖಾನೆ ಉತ್ತರಾ ಫುಡ್  ಯಿದೆ. 
ದೇವಾಲಯದ ಕಟ್ಟುವಿಕೆಯಲ್ಲಿ ಬೇಕಾದ ಕಪ್ಪುಕಲ್ಲುಗಳು ಮರದ ಸಾಮಾನುಗಳನ್ನು ತಮಿಳುನಾಡಿನ ಕಂಚೀಪುರದಿಂದ ತರಲಾಗಿದೆ. ೧೯೯೬-೨೦೦೩ ರ ಸಮಯಾವಧಿಯಲ್ಲಿ ದೇವಾಲಯದ ಕಾರ್ಯ ಸಂಪನ್ನವಾಯಿತು.
೨೫ ಜನ ಲಡ್ಡೂ ಮಾಡುವ ಮತ್ತು ೨೫ ದೇವರ ಹಾರಗಳನ್ನು ತಯಾರಿಸುವ ಸಿಬ್ಬಂದಿವರ್ಗ ತಿರುಪತಿಯಿಂದ ಬರಮಾಡಿಕೊಳ್ಳಲಾಗಿದೆ.  ೮ ಜನ ಅರ್ಚಕರು ತಿರುಪತಿಯ ಬಾಲಾಜಿಮಂದಿರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿವಾರದಿಂದ ಬಂಇದ್ದಾರೆ. ಪ್ರತಿದಿನವೂ ದೈನಂದಿನ ಪೂಜಾವಿಧಾನ ಮತ್ತೊಖ್ಂದು ಮಗದೊಂದು ಕಾರ್ಯಗಳಲ್ಲಿ ಸಲಹೆ ಮತ್ತು ಗಾಗಿ ಹಾಟ್ ಲೈನ್ ಸಂಪರ್ಕವಿದೆ. ಸುಮಾರು, ೧೫,೦೦೦ ಭಕ್ತಾದಿಗಳ ದೊಡ್ಡ ಕ್ಯೂ ಪ್ರತಿದಿನ ಇದ್ದೇ ಇರುತ್ತದೆ. ರಜಾದಿನಗಳಲ್ಲಿ ಮತ್ತು ಬಬ್ಬ ಹರಿದಿನಗಳಲ್ಲಿ ಜನರ ಸಂಖ್ಯೆ ಹೆಚ್ಚು.
ಬೆಳಿಗ್ಯೆ, ೬:೦೦ ರಿಂದ ರಾತ್ರಿ ೧೦: ಗಂಟೆಯ ವರೆಗೆ ಮಂದಿರ ಬಾಗಿಲುಗಳು ಸಾರ್ವಜನಿಕರಿಗೆ ತೆರೆದಿರುತ್ತವೆ.

 

-ಚಿತ್ರಗಳು, ವೆಂಕಟೇಶ್

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚಿತ್ರ ಸಮೇತ ಬ೦ದಿದ್ದ ಲೇಖನ ಸೊಗಸಾಗಿತ್ತು. ನವಿಮು೦ಬಯಿಯ ನೆರೂಲ್ ನಲ್ಲಿಯೂ ತಿರುಪತಿ ದೇವಸ್ಥಾನವನ್ನೇ ಹೋಲುವ ಬಾಲಾಜಿ ಮ೦ದಿರವಿದೆ. ಅಲ್ಲಿಗೆ ಹೋಗುವ ದಾರಿಯೂ ತಿರುಪತಿಯ೦ತೆಯೇ ಇದೆ.

ಹೌದು. ಅದು ಇನ್ನೂ ಕಟ್ಟುತ್ತಿದ್ದಾಗ ನೋಡಿದ ನೆನಪು. ಎಲ್ಲೇ ಇದ್ದರೂ ವೆಂಕಟೇಶ್ವರ ವೆಂಕಟೇಶ್ವರನೇ ! ಬಹುಶಃ ಪುಣೆಯ ದೇವಾಲಯದ ಭವ್ಯತೆ ಮತ್ತು ಪರಿಸರ ಅತಿ-ಸುಂದರವೆಂದು ನನ್ನ ಅನಿಸಿಕೆ !