ಮುರುಡೇಶ್ವರ ಮಹಾಕ್ಷೇತ್ರದಲ್ಲಿ ಎಲ್ಲವೂ ಬೃಹತ್ ಪ್ರಮಾಣದ್ದೇ ಅಲ್ಲವೇ ?

To prevent automated spam submissions leave this field empty.

ಬೃಹತ್ ಶಿವಮೂರ್ತಿ, ಬೃಹತ್ ರಾಜಗೋಪುರ, ಬೃಹತ್ ಭಗೀರಥ, ಶಿವ-ಗಂಗಾದೇವಿಯರ ವಿಗ್ರಹ, ಮತ್ತೆ ಬೃಹತ್ ಅರಬ್ಬೀಕಡಲ ತೀರ, ಕೊನೆಗೆ ಬೃಹತ್ ಮುರುಡೇಶ್ವರ ದೇವಾಲಯ. ನನಗಂತೂ ಈ ಕ್ಷೇತ್ರಕ್ಕೆ ಬೃಹತ್ ಒಂದು ಅನ್ವರ್ಥನಾಮವೆನ್ನಿಸಿದೆ. ಅದಿಲ್ಲದೆ ಸುಮ್ಮನೆ ಮುರುಡೇಶ್ವರ ಎನ್ನಲಿಕ್ಕೆ ತಾನೇ ಹೇಗೆ ಸಾಧ್ಯ ನೀವೇ ಹೇಳಿ ಅಯ್ಯ ?

ಶ್ರೀ. ಶೆಟ್ಟಿಯವರ ಕಲ್ಪನೆಗಳೆಲ್ಲಾ ಬೃಹತ್ ಪ್ರಮಾಣದ್ದೇ ಆಗಿವೆ. ರಾಜಗೋಪುರ ಮತ್ತು ಶಿವಮೂರ್ತಿಯ ವಿಗ್ರಹ ವಿಶ್ವದಲ್ಲೇ ಅತಿ ಎತ್ತರದ್ದೆಂದು ಉಲ್ಲೇಖಿಸಲ್ಪಟ್ಟಿವೆ. 

ಮಂದಿರದ ಮಂಡಳಿಯ ಪ್ರಮುಖ ಭಕ್ತ-ಶಿಖಾಮಣಿ ಶೆಟ್ಟಿಯವರ ಹೆಸರು ಮುರುಡೇಶ್ವರದಲ್ಲಿ ಅಲ್ಲಿನ ದೈವದಷ್ಟೇ ಜನಪ್ರಿಯ ! ಶೆಟ್ಟಿಯವರ ರೆಸಾರ್ಟ್, ಮತ್ತೆ ಶೆಟ್ಟಿಯವರ ಹೋಟೇಲ್ ಮುಂತಾದವುಗಳು ಅಲ್ಲಿಗೆ ಬರುವ ಪರ್ಯಟಕರಿಗೆ ಎಲ್ಲಾ ಸೌಲಭ್ಯಗಳನ್ನೂ ಒದಗಿಸಲು ಕಂಕಣಬದ್ಧವಾಗಿವೆ. ದೇವಾಲಯದ ಕಡಲ ತೀರದಲ್ಲಿ ನಿಂತು ವೀಕ್ಷಿದರೆ, ನಮಗೆ ಶಿವ, ರಾಜಗೋಪುರ ಮತ್ತು ಮುರುಡೇಶ್ವರ ಮಂದಿರ ಇತ್ಯಾದಿಗಳು ಕಡಲ ಜೊತೆಯಲ್ಲಿ ಕಣ್ಣಿಗೆ ರಂಜಿಸುತ್ತವೆ.

ಬೃಹತ್ ಶಿವಮೂರ್ತಿ

ಬೃಹತ್ ಶಿವ,  ಬೃಹತ್ ಗಂಗೆಯನ್ನು ತನ್ನ ಜಟೆಯಲ್ಲಿ ಸಂಗ್ರಹಿಸಿ ಮತ್ತೆ ಹೊರಗೆ ಬಿಡುತ್ತಿರುವುದು. ಪಕ್ಕದಲ್ಲೇ ಬೃಹತ್ ಭಗೀರಥನ ವಿಗ್ರಹವೂ ಇದೆ.

ಮನಮೋಹಕ ಕಣ್ಮನ ತಣಿಸುವ ಸೂರ್ಯಾಸ್ತದ ಚೆಲುವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವೇ !

ಗೀತಾಚಾರ್ಯ, ಶ್ರೀ ಕೃಷ್ಣ,  ಅರ್ಜುನನಿಗೆ ಗೀತೋಪದೇಶವನ್ನು ಹೇಳುತ್ತಿರುವ ಬೃಹದ್ ಶಿಲ್ಪ !

 

-ಚಿತ್ರಗಳು : ವೆಂಕಟೇಶ ಮತ್ತು ಪ್ರಕಾಶ

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

<< ಮಂದಿರದ ಮಂಡಳಿಯ ಪ್ರಮುಖ ಭಕ್ತ-ಶಿಖಾಮಣಿ ಶೆಟ್ಟಿಯವರ ಹೆಸರು ಮುರುಡೇಶ್ವರದಲ್ಲಿ ಅಲ್ಲಿನ ದೈವದಷ್ಟೇ ಜನಪ್ರಿಯ ! >> ಮೂರ್ಖಶಿಖಾಮಣಿ, ಕೇಳಿದ್ದೆ, ಭಕ್ತ-ಶಿಖಾಮಣಿ ನನಗೆ ಹೊಸ ಶಬ್ದ, ಚೆನ್ನಾಗಿದೆ. ಶೆಟ್ರನ್ನ ತುಳುನಾಡಿನಲ್ಲಿ ಬಂದು ದೈವಕ್ಕೆ ಹೋಲಿಸ್ಬೇಡಿ please :) ಹಾಯ್ಗುಳಿ, ಯಕ್ಷಿ, ಬೊಬ್ಬರ್ಯ, ಕಲ್ಕುಟ್ಕ (ಕಲ್ಕುಡ) , ಇವೆಲ್ಲ ನಮ್ಮ ಕಡೆಯ powerful ದೈವಗಳು. ಶಕ್ತಿ ಕೇಂದ್ರಗಳಾದ ಇವನ್ನು ವಿಜ್ಞಾನದ ವಿದ್ಯಾರ್ಥಿಯಾದ ನಾನು ಕೂಡ ನಂಬುತ್ತೇನೆ. ಇವು ಪ್ರಕೃತಿಯ ಪವಾಡಗಳು. ಆದ್ರೂ ನಮ್ಮೂರಿಗೆ ಬಂದು ನಾನು ನೋಡಿದ್ದಕ್ಕಿಂತ ಹೆಚ್ಚಿನದೇ ನೊಡಿದ್ದಿರ :) ಕುಂಭಾಶಿ(ಆನೆಗುಡ್ಡೆ) ಯಲ್ಲಿ, ಕಾಮತ್ ಮಾಮ್ ರ ಮುಂಡಕ್ಕಿ ಉಪ್ಕರಿ ತಿಂದ್ರಾ?, ತಿನ್ನದೇ ಇದ್ದಿದ್ದರೆ, ನೀವು ಕರಾವಳಿಯ special ತಿಂಡಿಯೊಂದನ್ನ miss ಮಾಡಿಕೊಂಡಿರುವಿರಿ :)