ಹಟ್ಟಿಅಂಗಡಿ ಸಿದ್ಧಿವಿನಾಯಕ ದೇವಾಲಯ !

To prevent automated spam submissions leave this field empty.

ಉಡುಪಿ ಕ್ಷೇತ್ರಕ್ಕೆ ಅಪರೂಪವಾಗಿ ಹೋದನಮಗೆ, ಅಲ್ಲಿನ ಅಕ್ಕ-ಪಕ್ಕದ ದೇವಾಲಯಗಳನ್ನು ನೋಡಿಬರಲು ನಮ್ಮ ಮಗನ ಸಹಕಾರ ಹೆಚ್ಚಾಗಿತ್ತು. ಅವನ ಆದ್ಯತೆಗಳ ಮಧ್ಯದಲ್ಲೂ ಉಡುಪಿ, ಕೊಲ್ಲೂರು, ಹಟ್ಟಿಅಂಗಡಿಗಳ ದೇವಸ್ಥಾನಕ್ಕೆ ನಮ್ಮ ಜೊತೆ ಬಂದಿದ್ದ ! ಗೋಕರ್ಣ, ಮುರುಡೇಶ್ವರ, ವಡಬಾಂಡೇಶ್ವರ, ಪಾಜಕ, ಮತ್ತು ಇಡಗುಂಜಿ ದೇವಸ್ಥಾನಗಳಿಗೆ ಬರಲು ಅವನಿಗೆ ಸಮಯದ ಅಭಾವವಿತ್ತು !

ಕರ್ನಾಟಕದ ಉಡುಪಿಜಿಲ್ಲೆಯಲ್ಲಿರುವ ಹಟ್ಟಿಅಂಗಡಿ ಸಿದ್ಧಿವಿನಾಯಕನ ದೇವಸ್ಥಾನವು ಪಶ್ಚಿಮ ಘಟ್ಟದ ತಟದಲ್ಲಿನ ಅರಬ್ಬೀ ಸಮುದ್ರದ ತೆಕ್ಕೆಯಲ್ಲಿ ಮಲಗಿದೆ. ದ. ಕನ್ನಡದ ಎಲ್ಲಾ ವಿನಾಯಕ ದೇಗುಲಗಳಂತೆ, ಇದೂ ಸ್ಥಳೀಯ ಜನರ ಮನ್ನಣೆ, ಆದರಗಳಿಗೆ ಪಾತ್ರವಾಗಿದೆ. ಈ ದೇಗುಲಕ್ಕೆ ಬರಲು ಉಡುಪಿಮಾರ್ಗ ಬಹಳ ಸಲೀಸಾಗಿದೆ. ನೇರವಾಗಿ ಕುಂದಾಪುರಕ್ಕೆ ಬನ್ನಿ ; ಇಲ್ಲಿಂದ ಮುರುಡೇಶ್ವರದ ಕಡೆಗೆ ಪ್ರಯಾಣ ಬೆಳೆಸಿ. ೯ ಕಿ. ಮೀ ಹೋದಮೇಲೆ, ಬಲಕ್ಕೆ ತಿರುಗಿ. ಇಲ್ಲಿಂದ ಹಟ್ಟಿಅಂಗಡಿ ಗ್ರಾಮ ಕೇವಲ ೫ ಕಿ. ಮೀಟರ್ ಗಳು. ಮುರುಡೇಶ್ವರಕ್ಕೆ ಭೇಟಿನೀಡಿದವರು, ಹಟ್ಟಿಅಂಗಡಿ ಗಣಪನ ದರ್ಶನ ಮಾಡಲಿಚ್ಛಿಸುವವರು, ಉಡುಪಿಮಾರ್ಗದಲ್ಲಿರುವ ಭಟ್ಕಳಕ್ಕೆ ಬರಬೇಕು. ದಾರಿಯಲ್ಲಿ ನಿಮಗೆ ೯ ಕಿ. ಮೀ ಮಾರ್ಗ ಸರಿಸಿದಂತೆ, ಕುಂದಾಪುರ ಸಿಗುತ್ತದೆ. ಇಲ್ಲಿಂದ ಎಡಕ್ಕೆ ತಿರುಗಿ ೫ ಕಿ. ಮೀ. ದಾರಿಮುಂದೆ ಹೋದರೆ, ಹಟ್ಟಿಅಂಗಡಿಗೆ ತಲುಪುವಿರಿ. ಅಲ್ಲಿ ಕಾಣುವ ಭವ್ಯ ದೇವಸ್ಥಾನವೇ ಹಟ್ಟಿಅಂಗಡಿ ವಿನಾಯಕ ಗುಡಿ ! ಇಲ್ಲಿ ಉಚಿತವಾಗಿ ಊಟ ದೊರೆಯುತ್ತದೆ.
ಸುರುವಿಗೆ ನಮಗೆ ಅನ್ನಿಸಿದ್ದು, ಮರಾಠಿ-ಕನ್ನಡ ಬಲ್ಲ, ಚಿತ್ರ-ಅಭಿನೇತ್ರಿ ರೋಹಿಣಿ ಹಟ್ಟಂಗಡಿಯವರ ತವರೂರೆಂದು ! ಆದರೆ, ಈ ಊರಿನ ಹೆಸರು, ಹಟ್ಟಿಅಂಗಡಿಯೆಂದು ! ಇಲ್ಲಿಂದ ೨ ಗಂಟೆ ಪ್ರಯಾಣ ಮಾಡಿ ಆಗುಂಬೆಗೆ ಹೋಗಿ, ಮೈನವಿರೇಳುವ ಸೂರ್ಯಾಸ್ತವನ್ನು ವೀಕ್ಷಿಸಬಹುದು !

-

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು