ಅಬಾಯಾ, ಅಭಯ

To prevent automated spam submissions leave this field empty.

ಇತ್ತೀಚೆಗೆ ರಾಜ್ಯದಲ್ಲಿ ಕೋಲಾಹಲ. ಮುಸ್ಲಿಂ ಮಹಿಳೆಯರು, ತಮ್ಮಿಷ್ಟದ ಪ್ರಕಾರ, ಹಕ್ಕುಬದ್ಧವಾಗಿ ಧರಿಸುವ, ಬುರ್ಖಾ ಎಂದು ಕರೆಯಲ್ಪಡುವ, (ಅರಬ್ ದೇಶ ಗಳಲ್ಲಿ "ಅಬಾಯಾ" ಎನ್ನುತ್ತಾರೆ)   "ಹಿಜಾಬ್" ದೊಡ್ಡ ಅನಾಹುತವನ್ನೇ ಸೃಷ್ಟಿಸಿತು.  ತನ್ನ ಕೂದಲನ್ನು ಮರೆಮಾಡಲು ಉಪಯೋಗಿಸುವ ಒಂದು ತುಂಡು ಬಟ್ಟೆ ಇಷ್ಟೊಂದು ದೊಡ್ಡ ವಿವಾದವನ್ನು ಸೃಷ್ಟಿಸುತ್ತದೆ ಎಂದು ಯಾರೂ ಅಂದು ಕೊಂಡಿರಲಿಲ್ಲ, ಮುಸ್ಲಿಂ ಮಹಿಳೆಯಂತೂ ಕನಸಿನಲ್ಲೂ ಕಂಡಿರಲಿಕ್ಕಿಲ್ಲ ದೊಂಬಿಯಿಂದ  ಉಂಟಾದ ಈ ರಕ್ತಸಿಕ್ತ  ಚಿತ್ರಣವನ್ನು. 


ಮುಸ್ಲಿಂ ಮಹಿಳೆ ತನ್ನ ಶರೀರವನ್ನು ಪ್ರದರ್ಶನಕ್ಕಿಡದೆ ಮರ್ಯಾದೆಯಿಂದ, ತನ್ನನ್ನು ಅನಾವಶ್ಯಕ ನೋಟ ಬೀರುವ ಕಣ್ಣುಗಳಿಂದ ರಕ್ಷಿಸಿಕೊಳ್ಳುವುದು ಸುಶಿಕ್ಷಿತ ಸಮಾಜಕ್ಕೆ ಮುಳುವಾಗಿ ಕಂಡಿತು. ಕಾಣದೆ ಏನಾದೀತು ಹೇಳಿ, ಬಿಕಿನಿ ಎಂದು ಕರೆಸಿಕೊಳ್ಳುವ ಒಂದು ತುಂಡು ಬಟ್ಟೆ ಉಟ್ಟು ಸಮುದ್ರ ತೀರದ ಮೇಲೆ "ನೀರೆ" ನಡೆದಾಡಿದರೆ ಆಕೆ ಅಧುನಿಕ ಮನೋಭಾವವುಳ್ಳ ಹೆಣ್ಣು ಎಂದು ಪುರಸ್ಕಾರ. ಅದು ಸಲ್ಲದು, ನನ್ನ ಶರೀರ ನನ್ನ ಮಾನ, ಪರ ಪುರುಷನ ಕಣ್ಣುಗಳ ತಣಿಸಲು ಅಲ್ಲ ಎಂದರೆ ಅದು ಕೂಡದು. ಅದು ಹೆಣ್ತನಕ್ಕೆ ಆಗುವ ಅಪಮಾನ. ಹೆಣ್ಣಿನ ಶೋಷಣೆ. ಮತಾಂಧತೆಯ ಪರಾಕಾಷ್ಠೆ. islam is a regressive religion. ಬೇಕಾದ ರೀತಿಯಲ್ಲಿ ವ್ಯಾಖ್ಯಾನ. ಕಪಿಯ ಕೈಗೆ ಸಿಕ್ಕ ಮಾಣಿಕ್ಯವಾಯಿತು ಲೇಖನಿ.  ಓರ್ವ ಹೆಣ್ಣಿಗೆ ತಾನು ಏನನ್ನು ಉಡಬೇಕೆಂದು ಹೇಳಲು ಹೊರಗಿನವರ ಅಪ್ಪಣೆ. ಪುರುಷನೊಬ್ಬ ಅಷ್ಟೊಂದು ಶುದ್ಧ ಹಸ್ತದವನಾಗಿದ್ದರೆ, ಎಲ್ಲರೂ ಸಚ್ಚಾರಿತ್ರ್ಯ ದವರೇ ಆಗಿದ್ದರೆ ಏಕೆ ಬೇಕು ಮಹಿಳೆಯರಿಗೆ ವಿಶೇಷ ರೈಲು, ಏಕೆ ಬೇಕು ಮಹಿಳೆಯರಿಗೆ ಪ್ರತ್ಯೇಕ ಸರತಿ, ಮಹಿಳೆಯರಿಗೆ ಪ್ರತ್ಯೇಕ ಹಾಸ್ಟೆಲ್ಲುಗಳು? ಕೇರಳದಲ್ಲಿ ಬಸ್ಸಿನಲ್ಲಿ ಮಹಿಳೆಯರು ಹಿಂದಿನ ಸಾಲಿನಲ್ಲಿ ಕೂರಬೇಕು, ಏಕೆ?


ಅಚ್ಚರಿಯ ಸಂಗತಿ ಏನೆಂದರೆ ಮುಸ್ಲಿಂ ಮಹಿಳೆ ಧರಿಸುವ ಹಿಜಾಬ್ ನ ಬಗ್ಗೆ ವಿಶೇಷ ಕುತೂಹಲ. ಒಂದು ರೀತಿಯ ಕಾಳಜಿ. ಆಕೆಯನ್ನು ಕತ್ತಲ ಕೂಪದಿಂದ ಹೊರತರುವ ಉತ್ಕಟೇಚ್ಚೆ. ಈ ಕಾಳಜಿ, ನೋವು ಗಲಭೆಗಳ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾದ  ಮಹಿಳೆಯರ ಬಗ್ಗೆ ಇರಲಿಲ್ಲ. ಇಂಥ ಘಟನೆಗಳ ಬಗ್ಗೆ ಯಾವುದಾದರೂ ಮಹಿಳಾ ಸಂಘಟನೆಗಳು ಸೊಲ್ಲೆತ್ತಿದ್ದು ಓದಿದ್ದೀರಾ?     


ನಾನು ಹಿಜಾಬ್ ನ ದೊಡ್ಡ ಅಭಿಮಾನಿಯೇನೂ ಅಲ್ಲ. ಆದರೆ ಅದನ್ನು ವಿರೋಧಿಸುವವರ ಪೈಕಿಯವನೂ ಅಲ್ಲ. ನನ್ನ ಪತ್ನಿ ಹಿಜಾಬ್ ಧರಿಸುತ್ತಾಳೆ. ಮದುವೆಯಾದ  ಹೊಸತರಲ್ಲಿ ನಾನು ನನ್ನ ಪತ್ನಿಗೆ ಸಾಂದರ್ಭಿಕವಾಗಿ ಹಿಜಾಬ್ ನ ಅವಶ್ಯಕತೆ ಇಲ್ಲ ಎಂದಾಗ ನನ್ನ ಮಡದಿ ಕೇಳಿದ್ದು, ಏಕೆ ಈ ಪ್ರಶ್ನೆ ನನ್ನನ್ನು ಮದುವೆ ಮುನ್ನ ನೋಡಲು ಬರುವಾಗಲೇ ಕೇಳಬಹುದಿತ್ತಲ್ಲ ಅಂತ. ಅದರ ಅರ್ಥ ಹಿಜಾಬ್ ವಿರೋಧಿಸುವ ನಿನ್ನನ್ನು ನಾನು ವರಿಸುತ್ತಿರಲಿಲ್ಲ ಎಂದು. ಇದು ಆಕೆಯ ಅಪ್ಪ ಹೇಳಿ ಕೊಟ್ಟಿದ್ದರಿಂದಲೋ, ಅಥವಾ ಆಕೆಯ ಅಮ್ಮ ಕಲಿಸಿದ್ದರಿಂದಲೋ ಸಿಕ್ಕಿದ ವಿವೇಕವಲ್ಲ. ತನ್ನ ಸುತ್ತ ಮುತ್ತ ನಡೆಯುವ ಆಗುಹೋಗುಗಳನ್ನು ನೋಡಿ ಕಲಿತ ಪಾಠ. ಅಷ್ಟು ಮಾತ್ರ ಅಲ್ಲ ತಾನು ಆರಾಧಿಸುವ ತನ್ನ ಸೃಷ್ಟಿಕರ್ತನ ಅಪ್ಪಣೆಗೆ ವಿಧೇಯಳಾಗುವ ಅಭಿಲಾಷೆ.


ಹಿಜಾಬ್ ಅಂದರೆ ಶರೀರವನ್ನು ಕಪ್ಪು ಬಟ್ಟೆಯಿಂದ ಸಂಪೂರ್ಣವಾಗಿ ಸುತ್ತಬೇಕು ಎಂದಲ್ಲ. ಮುಖ ಮತ್ತು ಮುಂಗೈಗಳು ಮಾತ್ರ ಕಾಣುವಂತೆ, ಅಂಗ ಸೌಷ್ಠವ ತೋರಿಸದ ಸಡಿಲವಾದ ಉಡುಪು. ಭಾಜಪದ ನಾಯಕಿ ಸುಷ್ಮಾ ಅವರ ಉಡುಗೆ ನೋಡಿದ್ದೀರಾ? ಹೆಚ್ಚು ಕಡಿಮೆ ಆ ರೀತಿಯದೇ. ಹಾಗೆ ಧರಿಸದೆ ಇದ್ದಾಗ ಹೆಣ್ಣು ಬಿಚ್ಚೋಲೆ ಗೌರಮ್ಮ. ಸಾಕಷ್ಟು ಅಂಗಗಳ ಪ್ರದರ್ಶನ ನಡೆದರೆ ಆಧುನಿಕ ಫ್ಯಾಶನ್ ಜೊತೆ ಹೆಜ್ಜೆ ಹಾಕುತ್ತಿರುವ ಮಹಿಳೆ. liberated woman. stylish. modern. chic.  ತನಗೆ ಬೇಕಾದ ರೀತಿಯಲ್ಲಿ, ಕನಿಷ್ಠ ಉಡುಗೆ ತೊಟ್ಟು ನಡೆಯುವ ಮಹಿಳೆಯ ಬಗ್ಗೆ ಮುಸ್ಲಿಂ ಮಹಿಳೆ ಚಕಾರ ಎತ್ತದೆ ಇದ್ದರೆ ಅದೇ ರೀತಿಯದಾದ ಪ್ರತ್ಯುಪಕಾರವನ್ನು ನಿರೀಕ್ಷಿಸಬಾರದೇ ಹಿಜಾಬ್ ಧರಿಸುವ ಹೆಣ್ಣು? ಹೆಣ್ಣನ್ನು ಇಂದು ಅಪ್ಪಟ ವ್ಯಾಪಾರದ ವಸ್ತುವಾಗಿಸಿ, ಗಂಡು ತೊಡುವ ಒಳ ಉಡುಪಿನಿಂದ ಹಿಡಿದು, ಕಾರನ್ನು ಮಾರಲೂ ಹೆಣ್ಣನ್ನು ಉಪಯೋಗಿಸುವ ನಾಗರೀಕತೆಗೆ ಹಿಜಾಬ್ ತೊಡಕಾಗಿ ಕಂಡರೆ, ಹಿನ್ನಡೆಯಾಗಿ ಕಂಡರೆ ಅಚ್ಚರಿಯಿಲ್ಲ.  ಹೆಣ್ಣನ್ನು ಅಶ್ಲೀಲವಾಗಿ ಬಿಂಬಿಸಿ ಪಾನ್ ಪರಾಗ್ ಅಥವಾ ಮತ್ಯಾವುದಾದರೂ ವಸ್ತುವಿನ ಜಾಹೀರಾತು ಇಲ್ಲದ ಚದರಡಿ ಜಾಗ ಸಿಕ್ಕೀತೆ ರಸ್ತೆಯಲ್ಲಿ? ಹೀಗೆ ಹೆಣ್ಣು ಮಕ್ಕಳನ್ನು ವ್ಯಾಪಾರದ, ಭೋಗದ ವಸ್ತುವನ್ನಾಗಿ ಉಪಯೋಗಿಸುವ ಪುರುಷರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಎಷ್ಟು ಜೋಪಾನದಿಂದ ಇಟ್ಟು ಕೊಳ್ಳುತ್ತಾರೆ ನೋಡಿ. 


ಗಂಡು ಮತ್ತು ಹೆಣ್ಣಿಗೆ ಇಸ್ಲಾಂ ಕೆಲವೊಂದು ಶಿಷ್ಟಾಚಾರಗಳನ್ನು ನೀಡಿದೆ. ತಮ್ಮ ದೃಷ್ಟಿಗಳನ್ನು ಬೇಡದ ಕಡೆ ನೆಡದೆ ನೆಲದ ಮೇಲೆ ಇಟ್ಟು, ಸುಶೀಲರಂತೆ ನಡೆಯಲು ಇಸ್ಲಾಂ ಬಯಸುತ್ತದೆ ತನ್ನ ಅನುಯಾಯಿಗಳಿಂದ. ಎಷ್ಟೋ ಪುರುಷರು ಶರೀರವನ್ನು ಬಿಗಿದಪ್ಪುವ ಜೀನ್ಸ್ಗಳನ್ನೂ ಧರಿಸುವುದಿಲ್ಲ.


ಹಿಜಾಬ್ ನ ಬಗ್ಗೆ ಮುಸ್ಲಿಂ ಪಂಡಿತರಲ್ಲೂ ಹಲವು ಅಭಿಪ್ರಾಯಗಳಿವೆ.  ಶರೀರವನ್ನು ಸಂಪೂರ್ಣವಾಗಿ ಹೊದ್ದು ಕಣ್ಣನ್ನು ಮಾತ್ರ ತೋರಿಸಿ ಧರಿಸುವ ಹಿಜಾಬ್ ನ ಅವಶ್ಯಕತೆ ಇಲ್ಲ ಎಂದು ವಿಶ್ವ ಪ್ರಸಿದ್ಧ, ೧೧೦೦ ವರ್ಷಗಳ ಇತಿಹಾಸ ಇರುವ ಇಜಿಪ್ಟ್ ದೇಶದ al-azhar ವಿಶ್ವ ವಿದ್ಯಾಲಯದ ಕುಲಪತಿ ಶೇಖ್ ತಂತಾವಿ ಹೇಳಿಕೆ ನೀಡಿದರು. ಹಾಗೆ ಸಂಪೂರ್ಣವಾಗಿ ಹಿಜಾಬ್ ಧರಿಸುವುದು ಇಸ್ಲಾಮಿಗಿಂತ ಮುಂಚಿನ ರೂಢಿ, ಆ ರೀತಿಯ ಧರಿಸುವಿಕೆಗೆ ಇಸ್ಲಾಮಿನ ಅನುಮೋದನೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಮುಖವನ್ನು ತೆರೆದಿಟ್ಟು ಧರಿಸುವ ಹಿಜಾಬ್ ಹೆಣ್ಣಿಗೆ ಒಳ್ಳೆಯದು ಎನ್ನುವುದು ಎಲ್ಲ ಪಂಡಿತರ ಅಭಿಪ್ರಾಯ.   


ಹಿಜಾಬ್ ಬಗ್ಗೆ ಪ್ರಸಿದ್ಧ ಸಾಹಿತಿ Naomi Wolf ಹೇಳಿದ್ದು"


Choice is everything. But Westerners should recognise that when a woman in France or Britain chooses a veil, it is not necessarily a sign of her repression," says Naomi Wolf, author of the "The Beauty Myth," and the feminist on the other side of the veil debate.

"I put on a shalwar kameez and a headscarf in Morocco for a trip to the bazaar. Yes, some of the warmth I encountered was probably from the novelty of seeing a Westerner so clothed; but, as I moved about the market - the shape of my legs obscured, my long hair not flying about me - I felt a novel sense of calm and serenity. I felt, yes, in certain ways, free," says Wolf.


   

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅಬ್ದುಲ್, ಹೊರಗಿನವರೋ.. ಒಳಗಿನವರೋ.. ಓರ್ವ ಹೆಣ್ಣಿಗೆ ತಾನು ಏನನ್ನು ಉಡಬೇಕೆಂದು ಹೇಳಲು ಯಾರ ಅಪ್ಪಣೆಯೂ ಕೂಡದು. ಅವಳು ತನ್ನ ಒಳಿತನ್ನ ಯೋಚಿಸುವಸ್ಟು ಪ್ರಬುದ್ಧಳು ಅನ್ನೋದು ಅ ಬರಹದ ಉದ್ದೇಶ ಅಂತ ನನಗನ್ನಿಸಿದ್ದು. --- ವಿನಯ

ಜೀನತ್ ಅಮಾನ್, ಪರ್ವೀನ್ ಬಾಬಿ, ಆದಿಯಾಗಿ...ಹೇಮಾ ಮಾಲಿನಿಯನ್ನೂ ಸೇರಿಸಿ...ಬಿಚ್ಚು ಉಡುಗೆಗಳನ್ನು ತೊಟ್ಟು ದೇಹ ಪ್ರದರ್ಶನ ಮಾಡಿದ ಇಸ್ಲಾಮ್ ಧರ್ಮೀಯ ಸಿನಿಮಾ ತಾರೆಯರ ಬಗ್ಗೆ ಎಂದೂ ಯಾವುದೇ ಫತ್ವಾ ಜಾರಿ ಮಾಡಿದ ನೆನಪಿಲ್ಲ. ಅವರಿಗೆಲ್ಲಾ ರಿಯಾಯಿತಿ ನೀಡಲಾಗಿದೆಯೇ? :)

ಹೇಮಾ ಮಾಲಿನಿ ಮುಸ್ಲಿಮಳೋ, ಸುರೇಶ್? ಆಕೆ ಯಾರೇ ಆಗಿರಲಿ, ಸಿನೆಮಾ ತಾರೆಯರ dress ಅಥವಾ undress ಬಗ್ಗೆ ನಮ್ಮ ಮುಲ್ಲಾಗಳು ತಲೆಕೆಡಿಸಿಕೊಂಡಿಲ್ಲ, ಭಾಗ್ಯಕ್ಕೆ.

ಪಂಜಾಬ್ ಕಾ ಪುತ್ತರ್ ಧರ್ಮೇಂದರ್ ತನ್ನ ಮೊದಲ ಪತ್ನಿ ಜೀವಂತ ಇರುವಾಗಲೇ ಹೇಮ ಮಾಲಿನಿಯನ್ನು ವಿವಾಹ ಆಗಬೇಕಾಗಿ ಬಂದಾಗ ಆತ ಮತ್ತು ಹೇಮಾ ಈರ್ವರೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂದು ಓದಿದ್ದೆ. :)

ಎಷ್ಟೊಂದು ಉಪಯೋಗಗಳು ಇಸ್ಲಾಮಿನಿಂದ ನೋಡಿ, ಸ್ವಿಸ್ಸ್ ಆರ್ಮಿ ನೈಫ್ (swiss army knife) ಥರಾ. ಎರಡನೇ ಮದ್ವೆ ಆಗಬೇಕಾ, ಧುಮುಕಿ ಇಸ್ಲಾಮಿಗೆ, ಹಿಮಾಚಲದ ಮಂತ್ರಿಯೊಬ್ಬನ ಥರಾ. ಯಾರದಾದರೂ ಅಮಾಯಕರ ಅಂಡಿನ ಅಡಿ ಬಾಂಬ್ ಇಡಬೇಕಾ, ಇಡಿ ಇಸ್ಲಾಮಿನ ಹೆಸರಿನಲ್ಲಿ. ನೋಡಿ ಎಷ್ಟೊಂದು utility choice ಗಳು? ತಿಕ್ಕಲೆದ್ದಾಗ ಫಾತ್ವಾ ಕೊಡಬೇಕೇ, ಬನ್ನಿರಲ್ಲ ಇಸ್ಲಾಮಿಗೆ. :)

"ಹೌದು ಇದು ತಮಾಷೆ" ಅಂತಲೂ ಅನ್ನಲಾಗದು..."ಇಲ್ಲ, ಇದು ತಮಾಷೆ ಅಲ್ಲ, ಗಂಭೀರ ಪ್ರತಿಕ್ರಿಯೆ" ಅಂತಲೂ ಅನ್ನಲಾಗದು... ಅಡಕ್ಕೊತ್ತಿನಲ್ಲಿ ಸಿಕ್ಕ ಅಡಕೆಯಂತಾಯ್ತು ನನ್ನ ಪರಿಸ್ಥಿತಿ ನಿಮ್ಮೀ ಪ್ರಶ್ನೆಯಿಂದ...

ಒಳ್ಳೇ ಪಾಯಿಂಟುಗಳು ಅಬ್ದುಲ್, ಆದರೆ ಎಲ್ಲೋ ವಾಸ್ತವತೆ ನೀವು ಹೇಳಿದುದಕ್ಕಿಂತ ಕೊಂಚ ಭಿನ್ನವಾಗಿದೆಯೋ ಎನಿಸುತ್ತದೆ. ನಾನೊಮ್ಮೆ ಕಬ್ಬನ್ ಪಾರ್ಕಿನಲ್ಲಿ ಇದ್ದಾಗ ಮುಸ್ಲಿಮ್ ಮಹಿಳೆಯರ ಗುಂಪೊಂದು ಬಂತು. 7-8 ಮಹಿಳೆಯರಿದ್ದ ಗುಂಪು ಅದು. ಬರುವಾಗ ಪೂರ್ತಿ ಬುರ್ಖಾ ಧರಿಸಿದ್ದ ಅವರು ಪಾರ್ಕಿನಲ್ಲಿ ಕುಳಿತೊಡನೆ ಒಬ್ಬೊಬ್ಬರಾಗಿ ತಮ್ಮ ಬುರ್ಖಾ ಬಿಚ್ಚತೊಡಗಿದರು. ನಿಮಿಷದೊಳಗೆ ಅವರು ಎಲ್ಲರಂತೆ ಕಾಣುವ ಹೆಣ್ಣುಮಕ್ಕಳು! ಇದರ ಹಿಂದಿನ ಕಾರಣವಂತು ನನಗೆ ಗೊತ್ತಿಲ್ಲ. ಅವರಿಗೆ ನಿಜವಾಗಲೂ ಧರಿಸಲು ಇಛ್ಛೆಯಿದ್ದರೆ ಹೀಗೆ ಮಾಡುತ್ತಿದ್ದರಾ?

ಮಹೇಶ್, ತಾವು ಹೇಳಿದ್ದು ಸರಿ. ಕೆಲವರು ಬಲವಂತಕ್ಕೆ ಉಡುತ್ತಾರೆ. ಇಲ್ಲಿ ಸೌದಿ ಅರೆಬಿಯಾದಲ್ಲೂ ಅಷ್ಟೇ. ಮಿರ ಮಿರ ಮಿಂಚುವ, ಬೆಲೆಬಾಳುವ ಅಬಾಯ ( ಬುರ್ಖಾ) ದ ಒಳಗೆ ಜೀನ್ಸ್, ಟೀ ಶರ್ಟ್. ನಮ್ಮ ದೇಶದಲ್ಲಿ ಮುಸ್ಲಿಂ ಮಹಿಳೆಯರು ಕನಸಿನಲ್ಲೂ ಧರಿಸಲಿಚ್ಚಿಸದ ಉಡುಗೆ ಇಲ್ಲಿಯವರದು. ಇಲ್ಲಿನ ಹುಡುಗಿಯರು ಅಷ್ಟೊಂದು fashionable.

ಅವರ ಉಡುಗೆ ಡಿಸೈಡ್ ಮಾಡಬೇಕಾದವರು ಅವರು, ಅದಕ್ಯಾಕೆ ಧರ್ಮದ ಹಂಗು.ಇಷ್ಟವಿಲ್ಲದಿದ್ದರೂ ಒತ್ತಾಯಕ್ಕೆ ಮಣಿದು ಧರಿಸುವುದರ ವಿರುದ್ಧ ಏನಾದರು ಆ ಲೇಖನ ಬಂದಿತ್ತೋ ಹೇಗೆ? ಈಗ ಓದೋಣವೆಂದರೆ ಆ ಲೇಖನದ ಪತ್ತೆಯೇ ಇಲ್ಲ.

<<<<ಇಲ್ಲಿ ಸೌದಿ ಅರೆಬಿಯಾದಲ್ಲೂ ಅಷ್ಟೇ. ಮಿರ ಮಿರ ಮಿಂಚುವ, ಬೆಲೆಬಾಳುವ ಅಬಾಯ ( ಬುರ್ಖಾ) ದ ಒಳಗೆ ಜೀನ್ಸ್, ಟೀ ಶರ್ಟ್. ನಮ್ಮ ದೇಶದಲ್ಲಿ ಮುಸ್ಲಿಂ ಮಹಿಳೆಯರು ಕನಸಿನಲ್ಲೂ ಧರಿಸಲಿಚ್ಚಿಸದ ಉಡುಗೆ ಇಲ್ಲಿಯವರದು.>>>>>>>> ನೀವು ನಮ್ಮ ದೇಶ ಅಂತಿರೋದು ಭಾರತ ಅಂತ ನಂಬಿದ್ದೀನಿ... ಅದು ಹೇಗೆ ನೀವು ನಮ್ಮ ದೇಶದ ಮುಸ್ಲಿಮ್ ಮಹಿಳೆಯರ ಇಚ್ಚೆಗಳ ಬಗ್ಗೆ ಹೇಳುವ ಪ್ರತಿನಿದಿಯಾಗ್ಬಿಟ್ರಿ. ಸುಮ್ನೆ ಹೇಳ್ಬೇಕು ಅಂತ ಏನೇನೋ ಹೇಳ್ಬೇಡಿ... ನಮ್ಮ ದೇಶದಲ್ಲಿ ಮುಸ್ಲಿಮ್ ಹೆಣ್ಮಕ್ಳು ಎಂತೆಂತಾ ಬಟ್ತೆ ದರಿಸಲು ಇಚ್ಚೆ ಪಡ್ತಾರೆ ಅಂತ ನೀವ್ಹೇಗೆ ನಿರ್ದರಿಸಿ ಬಹಿರಂಗ ಹೇಳಿಕೆ ಕೊಟ್ಬಿಟ್ರಿ..... ನೀವು ನಿಮ್ಮ ಲೇಖನದಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಬುರ್ಖಾ ಎಂಬ ಅಂಗಸೌಷ್ಠವವನ್ನು ಅನ್ಯರ (ಕಾಮದ) ದೃಷ್ಠಿಯಿಂದ ಕಾಪಾಡುವ ಬಳಸುವ ರಕ್ಷಾ ಕವಚವನ್ನು ನೀವೆ ನಿಮ್ಮ ಲೇಖನದಲ್ಲಿ ಅದು ರಕ್ಷಾ ಕವಚಕ್ಕಿಂತ ಧರ್ಮದ ವಾಸನೆ ಯಾಕೆ ಸೋಕಿಸುತ್ತಿದ್ದೀರಿ... ನೀವೆ ಅಲ್ಲ... ಬಹುತೇಕ ಧರ್ಮದ ಅಮಲಿನಲ್ಲಿರುವವರು ಮಾಡುತ್ತಿರವ ತಪ್ಪುಗಳು ಇವು .. basic problem ಏನು ಅಂತ ತಿಳಿದುಕೊಳ್ಳದೆ ಏಕಾಏಕಿ ಧರ್ಮದ ಸೆಂಟ್ ಹೊಡೆದು ಗಬ್ಬೆಬ್ಬೆಸುವುದು... <ಅಷ್ಟು ಮಾತ್ರ ಅಲ್ಲ ತಾನು ಆರಾಧಿಸುವ ತನ್ನ ಸೃಷ್ಟಿಕರ್ತನ ಅಪ್ಪಣೆಗೆ ವಿಧೇಯಳಾಗುವ ಅಭಿಲಾಷೆ.> <<<ಗಂಡು ಮತ್ತು ಹೆಣ್ಣಿಗೆ ಇಸ್ಲಾಂ ಕೆಲವೊಂದು ಶಿಷ್ಟಾಚಾರಗಳನ್ನು ನೀಡಿದೆ. ತಮ್ಮ ದೃಷ್ಟಿಗಳನ್ನು ಬೇಡದ ಕಡೆ ನೆಡದೆ ನೆಲದ ಮೇಲೆ ಇಟ್ಟು, ಸುಶೀಲರಂತೆ ನಡೆಯಲು ಇಸ್ಲಾಂ ಬಯಸುತ್ತದೆ ತನ್ನ ಅನುಯಾಯಿಗಳಿಂದ. ಎಷ್ಟೋ ಪುರುಷರು ಶರೀರವನ್ನು ಬಿಗಿದಪ್ಪುವ ಜೀನ್ಸ್ಗಳನ್ನೂ ಧರಿಸುವುದಿಲ್ಲ.>>> ನಿಮ್ಮ jk ಗೆ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳದೇನೂ ತಯಾರಾಗುತ್ತಿರುವ ಬಹುತೇಕ ಜಾಹೀರಾತುಗಳನ್ನ ನಾನು ನಿಮಗೆ ತೋರಿಸಬಲ್ಲೆ ಬೆಂಗಳೂರಿನಲ್ಲಿ.. ಯಾರೋ ಕೆಲವರು ಹಾಗೇ ಮಾಡ್ತಾರೆ ಅಂತ ಎಲ್ರನ್ನು ಜನ್ರಲೈಸ್ ಮಾಡೋದು ಸರಿ ಅಲ್ಲ.

ಮುಸ್ಲಿಮ್ ಆಗ್ಲಿ ಯಾರದರಾಗ್ಲಿ ವ್ಯಕ್ಥಿ ಸ್ವಾಥನ್ಥ್ರ ಇರಬೆಕು ಹಾಗೂ ನಮಗಿಸ್ಥವಾದ ದ್ರೆಸ್ಸ್ ಹಾಕಲು ಸ್ವಥನ್ಥ್ರ ಇರಬೆಕು, ಧರ್ಮದ ಹೆಸರಿನಲ್ಲಿ ಸ್ವಾಥನ್ಥ್ರ ಹಾಲಾಗಬಾರದು. ಬದಲಾವನೆ ಅನಿವಾರ್ಯ, ಅದನ್ನು ಧರ್ಮದ ಜೊಥೆ ಎಲ್ಲ ಸನ್ಧರ್ಭದಲ್ಲು ಬೆರೆಸುವುದು ಅನಗಥ್ಯ.

ಮುಸ್ಲಿಮ್ ಆಗ್ಲಿ ಯಾರದರಾಗ್ಲಿ ವ್ಯಕ್ಥಿ ಸ್ವಾಥನ್ಥ್ರ ಇರಬೆಕು ಹಾಗೂ ನಮಗಿಸ್ಥವಾದ ದ್ರೆಸ್ಸ್ ಹಾಕಲು ಸ್ವಥನ್ಥ್ರ ಇರಬೆಕು, ಧರ್ಮದ ಹೆಸರಿನಲ್ಲಿ ಸ್ವಾಥನ್ಥ್ರ ಹಾಲಾಗಬಾರದು. ಬದಲಾವನೆ ಅನಿವಾರ್ಯ, ಅದನ್ನು ಧರ್ಮದ ಜೊಥೆ ಎಲ್ಲ ಸನ್ಧರ್ಭದಲ್ಲು ಬೆರೆಸುವುದು ಅನಗಥ್ಯ.

೧) ತಸ್ಲೀಮ ನಸ್ರಿನ್ ಎಂಬ ಬಾಂಗ್ಲಾ ಲೇಖಕಿ ಬಗ್ಗೆ ನನಗೆ ಯಾವ ಕಳಕಳಿಯೂ ಇಲ್ಲ, ಕನಿಕರವಿರುವುದು ನಮ್ಮ ದೇಶದ ಮುಸ್ಲಿಂ ಮಹಿಳೆಯರ ಬಗ್ಗೆ ಮಾತ್ರ. ೨) ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಕಡ್ಡಾಯಗೊಳಿಸುವುದಾದರೆ, ಸಮಾನತೆ ಬೋಧಿಸುವ ಮುಸ್ಲಿಂ ಧರ್ಮದಲ್ಲಿ ಪುರುಷರೇಕೆ ನುಣ್ಣಗೆ ಗಡ್ಡ ಬೋಳಿಸಿಕೊಂಡು, ಜೀನ್ಸ್ ಹಾಕ್ಕೊಂಡು ತಿರ್ಗ್ಬೇಕು? ಅವ್ರಿಗೆ ಯಾವ್ದಾದ್ರು ಹೆಣ್ ಮಕ್ಳ ಅನಾವಶ್ಯಕ ನೋಟ ಬೀರುವ ಕಣ್ಣುಗಳಿಂದ ರಕ್ಷಿಸಿಕೊಳ್ಳುವುದು ಬೇಕಿಲ್ವ? ೩) ಹಿಂದೆ ಮುಸ್ಲಿಂ ದಾಳಿಕೋರರ ರಕ್ಷಣೆಗೆ ಸತಿ ಪದ್ಧತಿ, ಜಾರಿ ಬಂತು. ಈಗ ಯಾರಾದ್ರು ಅದನ್ನ ಪಾಲಿಸೋದು ಕೇಳಿದ್ದೀರ? << ಓರ್ವ ಹೆಣ್ಣಿಗೆ ತಾನು ಏನನ್ನು ಉಡಬೇಕೆಂದು ಹೇಳಲು ಹೊರಗಿನವರ ಅಪ್ಪಣೆ.>> ೪) ಹೋರಿ, ಹೊಲಕ್ಕೆ ಮೇಯೋಕೆ ಹೊರಟ್ರೆ, ಹಸಿರು ಕಂಡಲ್ಲೆಲ್ಲ ಹೋಗುತ್ತೆ. ಯಾರದ್ದಾದ್ರು ಹೊಲಕ್ಕೆ ಬೇಲಿ ಹಾಕಿದ್ರೆ, ಬೇಲಿ ಹಾಕಿದ ಹೊಲಾನ ಬಿಟ್ಟು ಉಳಿದದ್ದೆಲ್ಲ ಹಾಳ್ ಮಾಡುತ್ತೆ. ೫) ಬುರ್ಖಾ ಹಾಕದ ಉಳಿದ ಧರ್ಮದ ಹೆಣ್ಣು ಮಕ್ಕಳ ಪಾಡೇನು? ೬) ಇದ್ರ ಬದ್ಲು, ಹೋರೀನ ಕಟ್ಟಿ ಹಾಕಿದ್ರೆ ಆಗಲ್ವ? << ತನ್ನ ಕೂದಲನ್ನು ಮರೆಮಾಡಲು ಉಪಯೋಗಿಸುವ ಒಂದು ತುಂಡು ಬಟ್ಟೆ ಇಷ್ಟೊಂದು ದೊಡ್ಡ ವಿವಾದವನ್ನು ಸೃಷ್ಟಿಸುತ್ತದೆ ಎಂದು ಯಾರೂ ಅಂದು ಕೊಂಡಿರಲಿಲ್ಲ, >> ೫) ತಲೆ ಕೂದಲು ಮಾತ್ರದಿಂದಲೇ ಕಾಮೋತ್ತೇಜನ ಆಗುತ್ತೆ ಅಂತ ಇವತ್ತು ತಿಳಿದು ಬಂತು. <<ಮುಸ್ಲಿಂ ಮಹಿಳೆಯಂತೂ ಕನಸಿನಲ್ಲೂ ಕಂಡಿರಲಿಕ್ಕಿಲ್ಲ >> ೬) ಬುರ್ಕಾ ಹಾಕ್ಕೊಂಡು ಜನಸಂಪರ್ಕದಿಂದ ವಂಚಿತರಾದ ಮಹಿಳೆಯರಿಗೆ ಕನಸೂ ಬೀಳತ್ತಾ? << ದೊಂಬಿಯಿಂದ ಉಂಟಾದ ಈ ರಕ್ತಸಿಕ್ತ ಚಿತ್ರಣವನ್ನು. >> ಈ ದೇಶದಲ್ಲಿ ಏನೇನಕ್ಕೆ ದೊಂಬಿಯಾಗುತ್ತೆ ಅಂತ ಸೃಷ್ಟಿಕರ್ತನಿಗೂ ತಿಳಿದಿರಲ್ಲ. << ಮಹಿಳೆಯರಿಗೆ ಪ್ರತ್ಯೇಕ ಹಾಸ್ಟೆಲ್ಲುಗಳು? >> ೭) ಕಣ್ಣಿಂದಲೂ ಮಕ್ಕಳು ಹುಟ್ಟಿಸ್ಬೋದಂತ, ಇವತ್ತು ಗೊತ್ತಾಯ್ತು. << ತನ್ನನ್ನು ಅನಾವಶ್ಯಕ ನೋಟ ಬೀರುವ ಕಣ್ಣುಗಳಿಂದ ರಕ್ಷಿಸಿಕೊಳ್ಳುವುದು ಸುಶಿಕ್ಷಿತ ಸಮಾಜಕ್ಕೆ ಮುಳುವಾಗಿ ಕಂಡಿತು >> 8) ಆ ಥರ ನೋಡೊವ್ನ ಹಿಡ್ಕಂಡು ನಾಲ್ಕು ಕಪಾಳಕ್ಕೆ ಬಿಗ್ಯೋದಲ್ವಾ, ಅದನ್ನ ಬಿಟ್ಟು ಹೆಣ್ಣು ಮಕ್ಕಳನ್ನ ಬುರ್ಖಾದಡಿ ತಳ್ಳೋದು ಎಷ್ಟು ಸರಿ? ಹೋಗ್ಲಿ, ಅತ್ಯಾಚಾರಿಗೆ ಮರಣದಂಡನೆ ಯಾಕ್ ಕೊಡ್ಬೇಕು? ಪಾಪ ಅವನ ತಪ್ಪೇನಿದೆ, ಕಾಮೋದ್ರೇಕವಾಯ್ತು, ಹೋಗಿ ಹೆಣ್ಣನ್ನು ಹಾಳ್ ಮಾಡಿದ. << ಅದರ ಅರ್ಥ ಹಿಜಾಬ್ ವಿರೋಧಿಸುವ ನಿನ್ನನ್ನು ನಾನು ವರಿಸುತ್ತಿರಲಿಲ್ಲ ಎಂದು. >> 9) ಇದನ್ನ ಸಮೂಹ ಸನ್ನಿ ಅಂತಾರೆ, ಬುರ್ಖಾ ಹಾಕ್ಕೊಂಡ್ರೆ ಸಂಪ್ರದಾಯಸ್ಥ ಹೆಣ್ ಮಗಳು ಅಂತ ತಿಳಿತಾರೆ, ಎಲ್ಲರಿಂದ ಗೌರವ. ಹಾಕ್ಕೊಳ್ದೆ ಹೋದ್ರೆ ಎಲ್ಲರ ಕಣ್ಣು ಆಕೆಯ ಮೇಲೆ. ಮೊದ್ಲು ಹೆಚ್ ಕಡ್ಮೆ ಮಾಡೋದು ಆಮೇಲೆ ಎನಾದ್ರೂ ಹೆಚ್ ಕಡ್ಮೆ ಆದ್ರೆ, ನೋಡ್ದ್ಯಾ ಮೆರಿತಿದ್ಲು ಅಂತ ಹೇಳೋದು. 10) ಹೆಣ್ ಮಕ್ಕಳೇ ಇರ್ಲಿ ಅತ್ವಾ ಗಂಡು ಮಕ್ಳೆ ಇರ್ಲಿ, ತಮ್ಮನ್ನ ಇತರರಿಗೆ ತೋರಿಸ್ಕೊಂಡು ವಾವ್, ಸುಂದರವಾಗಿದ್ದಳೆ/ನೆ ಅಂತ ಹೇಳಿಸ್ಕೋಬೇಕು ಅನ್ನೋ ಆಸೆ ಇದ್ದೆ ಇರುತ್ತೆ, ಇಲ್ಲಾಂದ್ರೆ ಅವ್ರಲ್ಲೇನೋ ಮಾನಸಿಕರೋಗ ಇದೆ, ಆದ್ರೆ ಇಲ್ ನೋಡಿ ಬುರ್ಕಾ ಹಾಕ್ಕೋಳ್ದಿದ್ದಿಕ್ಕೆ ಆಸಿಡ್ ಹಾಕ್ತಾರೆ http://www.hinduonne... << ಹೆಣ್ಣು ಮಕ್ಕಳನ್ನು ವ್ಯಾಪಾರದ, ಭೋಗದ ವಸ್ತುವನ್ನಾಗಿ ಉಪಯೋಗಿಸುವ ಪುರುಷರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಎಷ್ಟು ಜೋಪಾನದಿಂದ ಇಟ್ಟು ಕೊಳ್ಳುತ್ತಾರೆ ನೋಡಿ. >> 11) ಒಪ್ಪಿದೆ :) ಇಷಾರ ಚಾಯ್(ಅಲ್ಲಲ್ಲ ಕಾಫಿ) ಹಾಯ್