ಬೆಳಗ್ಲಿಂದಾ ಬೈಗಿನ್ತನ್ಕ ಕಡ್ಲಿಂದೇ ಗೀಳು !

To prevent automated spam submissions leave this field empty.

ಅಮ್ಮ-ಮಗ, ಮುಳುಗುವ ಸೂರ್ಯನನ್ನು ತಡೆಯುವ ಪ್ರಯತ್ನದಲ್ಲಿದ್ದಾರೆಯೇ ! 

ಎಷ್ಟು ಚಿತ್ರಗಳನ್ನು ತೆಗೆದರೂ ಮನಸ್ಸಿಗೆ ಸಮಾಧಾನವಿಲ್ಲ.  ಅದೇನೋ ಇನ್ನೂ-ಬೇಕು ಮತ್ತೂ  ಬೇಕೆನ್ನಿಸುವ ಮನೋಭಾವ..

 

ನಾವೂ ಮಕ್ಳ ತರ್ಹ, ಬೆಳಿಗ್ಗೆ ಆಗೋದೆ ಕಾಯ್ತಿದ್ದು, ಕಡಲಿನ್ ಹತ್ರ ಓಡೋಗಿ, ಅಲೆಗಳ ಜೊತೆ ಆಟ ಆಡ್ತಿದ್ವಿ. ಆಗ ಬಹುಶಃ ಹೆಚ್ಚಿನ ಆರ್ಭಟ ಸಮುದ್ರರಾಜಂದು ಇರ್ತಿರ್ಲಿಲ್ಲ. ಆಮೇಲೆ ಸೂರ್ಯ ನೆತ್ತಿಮೇಲೆ ಬಂದಂಗೆಲ್ಲಾ ಆತ್ನ್ ಆಟ ಶುರು ನೋಡಿ. ನಿನ್ನೆ ಅಲ್ಲೆಲ್ಲೋ ದೂರ್ದಲ್ಲಿ ಮೂಡಿದ್ದ ಮರಳ ಇಂಗಿತ ಇವತ್ತ, ಇನ್ನೂ ಮೇಲಕ್ಕೆ ಬಂದಿದೆ. ಅಲ್ಲಿನ ಬೆಸ್ತರೋ ಮೀನ್ ಹಿಡಿಯಕ್ಕೆ ಸಿದ್ಧತೆ ಮಾಡಿದ್ದೂ ಮಾಡಿದ್ದೆ. ಅವರ ಸಿಕ್ ಹಾಕ್ಕೊಂಡಿದ್ದ ಗಂಟಿನ ಮೀನಿನ ಜಾಲದ ಎಳೆಗಳನ್ನು ಬಿಡ್ಸಿ, ಸಮುದ್ರಕ್ಕೆ ತಮ್ಮ ದೋಣಿನಾ ನೂಕಿ, ಮತ್ತೆ ಅದ್ರಲ್ಲಿ, ಹಾರಿ ಬಿರುಸಿನಿಂದ ತಮ್ಮ ಕಾರ್ಯಚರಣೆಯ ಶುಭಾರಂಭ ಮಾಡೊದನ್ನ ನೋಡೋದೆ ಚೆನ್ನ....

ಬೈಗಿನ ಕಡಲಿನ ದೃಶ್ಯ....

ಇಲ್ಲಿಂದಲೇ ನಮ್ಮ ದಿನ ಪ್ರಾರಂಭ, ಮತ್ತೆ ಮುಕ್ತಾಯ ಸಹಿತ....

ಮಲ್ಪೆ ಸಮುದ್ರ ತೀರದಲ್ಲಿ.....

ಮಲ್ಪೆ ಕಡಲ ತೀರದಲ್ಲಿ ನಾವು....

 

 

-ಚಿತ್ರ. ವೆಂಕಟೇಶ್ ಮತ್ತು ಪ್ರಕಾಶ್.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮೊದ್ಲು, ನಿಂಗೆ ಚಿತ್ರಗೋಳು ಕಂಡ್ವು ಅನ್ನಾದ್ ಗೊತ್ತಾತು. ಅದೇನೊ ಕೆಲ್ವರ್ ಏಳ್ಕೆ ಪರ್ಕಾರ ಕಾಣ್ಸ್ವಲ್ದಂತೆ. ಅದ್ಯಾಕೊ ತಿಳ್ಯಕ್ಕಿಲ್ಲ ಮಗ.... ನಿಮ್ಮೂರು ಅಂದ್ರೇನು, ಅದೇನು ತೆಂಗಿನ್ಮರಗೊಳು. ದಾರಿಉದ್ದಕ್ಕು ! ಕಣ್ ಆಯ್ಸ್ ದಷ್ಟ್ ದೂರನೂವೆ.... ಬಾಳೆ, ಗೇರ್ ಬೀಜದ ಮರ್ಗೊಳು, ಅಡ್ಕೆ ನೂ ಐತಪ್ಪೊ, ಸ್ವಲ್ಪ ಕಡ್ಮೆ ಅಂದ್ರೆ.... ಬಯಲ್ ಸೀಮೆ ಜನಗಣಪ್ಪ, ನಾವು. ಈಗೆಲ್ಲೊ ಅಲ್ಲಿ ಇಲ್ಲಿ ಓಗಿ ಸಮುದ್ರ, ಅದು ಇದು ಅಂತ ಕಲ್ಕೊಣ್ಡಿದಿವಿ. ಬೊಂಬಾಯ್ನಾಗು ಐತೆ ನೊಡಪ್ಪ. ಅದನ್ ಸಮುದ್ರ ಅಂತ್ ಕರ್ಯಾಕೆ ಮುಜ್ಗರ ಆಗ್ತದ್ ಕಣಪ್ಪ. ಏನೊ ಈಗ ದ್ಯಾವೃ ಒಸಿ ಟೇಮ್ ಕೊಟ್ಟವ್ನೆ. ಮಕ್ಳು ಬಾಳ ಒಳ್ಳೇರ್ ಕಣಪ್ಪ. ನೋಡಿದ್ನೆ ಅಂಚ್ಕಂಡು ಓದಿ, ಪ್ರೀತಿ ಮಾತೇಳ್ತಿ. ನಿನ್ ಒಟ್ಟೆ ತಣ್ಗಿರ್ಲಿ ಕಣಪ್ಪ. ಬರ್ಲಾ.....

ನಮ್ಮ ನೆರೆಯ ಮಲ್ಪೆಗೆ ಮತ್ತೊಮ್ಮೆ ಭೇಟಿ ನೀಡಿ ನಿಮ್ಮ ದೃಷ್ಟಿಯಿಂದ ನೋಡುವಾಸೆ... ಧನ್ಯವಾದಗಳು ಸುಂದರ ಚಿತ್ರಗಳಿಗಾಗಿ. ಮೇಲಿಂದ ನಾಲ್ಕನೇ ಚಿತ್ರ ಬೇಡಿತ್ತೇನೋ...ಅಮ್ಮಂಗೆ ಮುಜುಗರ ಆಗಬಹುದು...ಅನ್ಸುತ್ತೆ. - ಆಸು ಹೆಗ್ಡೆ.

ಅಸು ಹೆಗ್ಡೆಯವರ ಅನಿಸಿಕೆ ಸರಿಯಾಗಿದೆ. ನನಗೂ ಒಮ್ಮೆ ಹಾಗೆ ಅನ್ನಿಸಿತ್ತು. ಬದಲಾವಣೆ ಸರಿಯಿದೆಯೇ ? ! ಚಿತ್ರಗಳು ಸುಂದರವಾಗಿವೆ. ಎಂದಿದ್ದೀರಿ. ಆದರೆ, ನೈಜ ಸೌಂದರ್ಯ ಇನ್ನೂ ಅಧಿಕವಾಗಿತ್ತು ಎನ್ನುವುದು ನಮ್ಮ ಅಭಿಮತ. ಏನ್ಮಾರಾಯ್ರೆ, ನಿಮ್ಮ ಊರು, ಭವ್ಯ ದೇವಸ್ಥಾನ, ಕಡಲ ತೀರ, ಮತ್ತು ಹಸಿರು ಹೊನ್ನಿನ ಮಿರಿ-ಮಿರಿ ಮಿನುಗುವ ಹೇಮ ತಾಣಗಳ ಹೂಮಾಲೆ !