ಮೈ ನೇಮ್ ಇಸ್ ಅಬ್ದುಲ್, ಬಟ್...

To prevent automated spam submissions leave this field empty.

my name is abdul, but i am not a fanatic. ಖಂಡಿತವಾಗಿಯೂ ಅಲ್ಲ. ಯಾರೋ ನನಗರಿವಿಲ್ಲದ ಜನ ಮಾಡಿದ, ಸತ್ಯವೋ ಮಿಥ್ಯೆಯೋ, ಸುಳ್ಳೋ ಪೊಳ್ಳೋ ಆಗಿರಬಹುದಾದ ಚಾರಿತ್ರಿಕ ಘಟನೆಗಳನ್ನು ಅಗಿದೂ ಅಗಿದೂ ಕರುಬಿ, ಕೊನೆಗೆ ಘಟನೆಗೆ ಸಂಬಂಧವಿಲ್ಲದ ಮುಗ್ಧ, ಅಮಾಯಕ ಜನರ ಜೀವ ಹಿಂಡುವುದು ನನ್ನ ಜಾಯಮಾನವಲ್ಲ, ಅಷ್ಟು ಮಾತ್ರವಲ್ಲ ನಾನು ಬೆಳೆದು ಬಂದ ಸಂಸ್ಕೃತಿಯೂ ನನಗದನ್ನು ಕಲಿಸಿಲ್ಲ. ಮಾತು ಮಾತಿಗೆ ಇಲ್ಲ್ಲಾ ಘಜನಿ, ಘೋರಿ, ಅಲ್ಲಾವುದ್ದೀನ್ ಖಿಲ್ಜಿ, ಅದು ಬಿಟ್ಟರೆ ಕಾಶ್ಮೀರಿ ಪಂಡಿತರ ಗೋಳು, ಇವುಗಳಾಚೆಯೂ ಪ್ರಪಂಚ ಇದೆ, ದಿನವೂ ಹೊಸ ಸೂರ್ಯ, ಚಂದಿರರು ಹುಟ್ಟುತ್ತಾರೆ ಎನ್ನುವ ಪರಿವೆ ಇಲ್ಲದೆ, ಅತ್ಯುತ್ಸಾಹದಿಂದ ಸಮುದಾಯಗಳ ನಡುವೆ ಕಂದಕ ನಿರ್ಮಿಸಲು ಹೊರಟ ಜನ ನಿಸರ್ಗದಿಂದ ಪಾಠ ಕಲಿತು ಸಹಬಾಳ್ವೆ ನಡೆಸಲು ಪ್ರಯತ್ನಿಸಬೇಕು.     


ತಮ್ಮ ಫರ್ಲಾಂಗ್ ಉದ್ದದ ಕಟ್ ಅಂಡ್ ಪೇಸ್ಟ್ ಪ್ರತಿಕ್ರಿಯಯಲ್ಲಿ ಒಬ್ಬರು ಒಂದಿಷ್ಟು ಘಟನೆಗಳ ಬಗ್ಗೆ ಬರೆದರು. ಪಾಪ ಅವರು ಕಟ್ ಅಂಡ್ ಪೇಸ್ಟ್ ಮಾಡುವ ತರಾತುರಿಯಲ್ಲಿ ಭಾರತದ ಉದ್ದಗಲಕ್ಕೂ ನಿರ್ದಿಷ್ಟ ಕೋಮಿನ ಜನರನ್ನು ಗುರಿಯಾಗಿಸಿಕೊಂಡು ನಡೆದ  ಗಲಭೆಗಳ ಬಗ್ಗೆ ಮೌನ ತಾಳಿದ್ದು ಸೋಜಿಗದ ಸಂಗತಿ. ಭಿವಂಡಿ, ಸೀತಾಮಡಿ, ಅಲಿಗಡ, ಮೊರಾದಾಬಾದ್, ಹೈದರಾಬಾದ್, ಸೂರತ್, ಮುಂಬೈ, ಒಂದೇ ಎರಡೇ? ಗಲಭೆ ಅಥವಾ ಶೋಷಣೆ ನಡೆಯದ ಒಂದು ಚದರ ಮೈಲಿನ ಸ್ಥಳ ತೋರಿಸಬಹುದೇ ತಾವು? ಈಗ ಅದಕ್ಕೆಲ್ಲಾ ಹಿಂದೂ ಸೋದರರನ್ನು ಕಾರಣವಾಗಿಸಿ ಹಗೆ ಸಾಧಿಸಲು ಹೊರಟರೆ ತಿಳಿಗೇಡಿತನವಲ್ಲದೆ ಮತ್ತೇನೆಂದು ಕರೆಯಲು ಸಾಧ್ಯ?


ಇನ್ನೊಬ್ಬ ಮಿತ್ರರು ರಶ್ದಿ, ತಸ್ನೀಮ ನಸ್ರೀನ್ ಎಂದು ಏನೇನೋ ಕನವರಿಸಿದರು. ಅವರಿಗೆ ಉತ್ತರ ಪೋಲಂಕಿ ರಾಮ ಮೂರ್ತಿ, ಹುಸೇನ್ ರವರೊಂದಿಗೆ ನಾವು ನಡೆದುಕೊಂಡ ಘಟನೆಯಲ್ಲಿ ಸಿಕ್ಕೀತು.


  


ಅದ್ಭುತ ಚಿತ್ರ ಕೊಟ್ಟು ಭಾರತೀಯರ ಮಾತ್ರವಲ್ಲ ವಿಶ್ವದ ಜನರ ಮೆಚ್ಚುಗೆ, ಪ್ರಶಂಸೆಗೆ ಕಾರಣನಾದ  ಶಾರುಕ್ ನಿಗೆ ನಾವೆಲಾ ಒಂದು ಮನವಿ ಸಲ್ಲಿಸಬೇಕು. ನೀನು ಕೋಟಿಗಟ್ಟಲೆ ಜನ ಇಷ್ಟ ಪಡುವ, ಆನಂದಿಸುವ, ಮನಸ್ಸುಗಳನ್ನು ಬೆಸೆಯುವ ಚಿತ್ರ ಮಾಡಬೇಡ, ಬದಲಿಗೆ ನಮ್ಮ ದೇಶದ ೩ ಡಜನ್ ಜನರಿಗೆ ಅವರ ಅಭಿರುಚಿಗೆ ತಕ್ಕುದಾದ ಚಿತ್ರಗಳನ್ನು ಮಾಡಬೇಕು.. ಹೇಗೂ ಕೋಟಿಗಟ್ಟಲೆ ಸಂಪಾದಿಸಿದ್ದಾನಲ್ಲ, ಬೆರಳೆಣಿಕೆಯ ಜನರಿಗಾಗಿ ಕೋಟಿ ಸುರಿದು ಒಂದು ಚಿತ್ರ ಮಾಡಲಿ ಖಾನ್.   


ಇಸ್ಲಾಂ ಪರಧರ್ಮ ಸಹಿಷ್ಣು ಎಂದು ಯಹೂದ್ಯರು ಮುಸ್ಲಿಮರ ಆಶ್ರಯ ಕೇಳಿದಾಗಲೇ ವಿಶ್ವಕ್ಕೆ ವ್ಯಕ್ತವಾಯಿತು. ೭೦೦ ವರ್ಷ  ಸ್ಪೇನ್ ದೇಶದಲ್ಲಿ ಮುಸ್ಲಿಂ ಆಳ್ವಿಕೆ ಕೊನೆಗೊಂಡಾಗ ಮುಸ್ಲಿಮರ ಹಿಂದೆಯೇ ಗಂಟು ಮೂಟೆ ಕಟ್ಟಿಕೊಂಡು ಯಹೂದ್ಯರು ಸ್ಪೇನ್ ದೇಶವನ್ನು ತ್ಯಜಿಸಿದರು. ಏಸು ಕ್ರಿಸ್ತರ ಕೊಲೆಗೆ ಯಹೂದ್ಯರು ಕಾರಣ ಎಂದು ಅವರನ್ನು ಸಿಕ್ಕ ಸಿಕ್ಕಲ್ಲಿ ಕ್ರೈಸ್ತರು ಬೇಟೆಯಾಡಿದಾಗ ಅವರಿಗೆ ಆಶ್ರಯ ನೀಡಿದ್ದು ಇರಾನ್, ತುರ್ಕಿ, ಯೆಮೆನ್, ಮೊರಾಕೊ ಗಳಂಥ ಮುಸ್ಲಿಂ ದೇಶಗಳು.


ಇಸ್ಲಾಂ ಧರ್ಮದ ಪ್ರವಾದಿಯ ಬಗ್ಗೆ ಮೈಸೂರು ವಿಶ್ವ ವಿದ್ಯಾಲಯದ Prof. ರಾಮಕೃಷ್ಣ ರಾವ್ ಬಹಳ ಸೊಗಸಾಗಿ ಬರೆದಿದ್ದಾರೆ. ಅದನ್ನು ಸ್ವಲ್ಪ ಓದಿದರೆ ಜ್ಞಾನ ವೃದ್ಧಿಗೆ ಸಹಾಯವಾಗಬಹುದು.  


ಕೊನೆಯದಾಗಿ ಶತಮಾನಗಳಿಂದ ನಿರ್ದಿಷ್ಟ ಪಂಗಡಗಳಿಗೆ, ವರ್ಗಗಳಿಗೆ ಸೇರಿದ ಕೋಟ್ಯಂತರ ಜನರನ್ನು ಸವರ್ಣೀಯರು ಸಮಾನರನ್ನಾಗಿ ಕಾಣಲು ವಿಫಲರಾಗಿ ಆ ಜನ ಇಂದಿಗೂ ಕೀಳರಿಮೆಯಿಂದ ಬಳಲುತ್ತಿರುವುದನ್ನು(ಮಾನಸಿಕ ಭಯೋತ್ಪಾದನೆ)  V.T. ರಾಜಶೇಖರ್ ಅವರ ಬಾಯಲ್ಲಿ ಕೇಳಬೇಕು.   


ಮೇಲಿನ ವಿಷಯ ಬರೆಯಲು, ಪ್ರಸ್ತಾಪಿಸಲು ಕಾರಣ ಯಾರೂ ಸಭ್ಯಸ್ಥರಲ್ಲ, ಅವರವರ ಕೈಯ್ಯಲ್ಲಿ ಸಾಧ್ಯವಾಷ್ಟೂ ತಪ್ಪು ನೆಪ್ಪುಗಳು ನಡೆದಿವೆ ಎಂದು ತೋರಿಸಲು ಮಾತ್ರ.


ಇದುವರೆಗೂ ನಮ್ಮ ಭಾರತೀಯ ಸಂಸ್ಕೃತಿಯನ್ನು ಕೊಂಡಾಡುತ್ತಿದ್ದ  ವಿಶ್ವ ನಮ್ಮೆಡೆ ಅನುಮಾನದಿಂದ ನೋಡಲು ತೊಡಗಿದೆ. ಅದಕ್ಕೆ ಕಾರಣ ಒರಿಸ್ಸಾದಲ್ಲಿ ನಡೆದ ಕ್ರೈಸ್ತ ವಿರೋಧಿ ಗಲಭೆಗಳನ್ನು ತನಿಖೆ ಮಾಡಲು ಅಮೆರಿಕೆ ಮತ್ತು ಐರೊಪ್ಯ ರಾಷ್ಟ್ರಗಳಿಂದ ಜನ ಬಂದಿದ್ದು. ಇವರನ್ನು ಒಳಗೆ ಬಿಟ್ಟುಕೊಂಡಿದ್ದು ನಾವು ಮಾಡಿದ ತಪ್ಪು. ಮುಸ್ಲಿಮರ ವಿರುದ್ಧ ಇಷ್ಟೆಲ್ಲಾ ಗಲಭೆಗಳು ನಡೆದರೂ ಯಾವ ಮುಸ್ಲಿಂ ಅಥವಾ ಅರಬ್ ರಾಷ್ಟ್ರಗಳಿಂದಾಗಲಿ ತನಿಖಾ ತಂಡ ನಮ್ಮ ಧರೆಯ ಮೇಲೆ ಇಳಿಯಲಿಲ್ಲ. ಅದಕ್ಕೆ ಭಾರತೀಯ ಮುಸ್ಲಿಮರು ಆಸ್ಪದವನ್ನೂ ಕೊಡುವುದಿಲ್ಲ.  ಇದು ಸೋದರ ಮಧ್ಯೆಯ ವಿವಾದ. ಅದನ್ನು ನಮ್ಮ ನಮ್ಮಲ್ಲೇ ಚರ್ಚಿಸಿ, ಸಂವಾದ ನಡೆಸಿ ಪರಿಹಾರ ಕಂಡುಕೊಳ್ಳುತ್ತೇವೆ.


ಬನ್ನಿ, ಕಂದಕ ತೋಡುವ ಕೆಲಸ ಅಲ್ಲಿಗೇ ನಿಲ್ಲಿಸಿ ಸುಂದರ ನಾಡೊಂದನ್ನು ಕಟ್ಟೋಣ.  


 


 


 


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

"ನ್ನೊಬ್ಬ ಮಿತ್ರರು ರಶ್ದಿ, ತಸ್ನೀಮ ನಸ್ರೀನ್ ಎಂದು ಏನೇನೋ ಕನವರಿಸಿದರು. ಅವರಿಗೆ ಉತ್ತರ ಪೋಲಂಕಿ ರಾಮ ಮೂರ್ತಿ, ಹುಸೇನ್ ರವರೊಂದಿಗೆ ನಾವು ನಡೆದುಕೊಂಡ ಘಟನೆಯಲ್ಲಿ ಸಿಕ್ಕೀತು >> ಹುಸೇನ್ ಬರೆದ ಚಿತ್ರಗಳು ತಮ್ಮ ಕಣ್ಣಿಗೆ ಬಿದ್ದಲ್ವೇನೊ? ಹಿಂದುಗಳ ಪೂಜ್ಯ ದೇವತೆ ತಮಗೆ ಮನ ಬಂದಂತೆ ಚಿತ್ರಿಸುವಾಗ ಅವರ ಕಣ್ಣ ಮುಂದೆ ಬೇರೆ ಯಾರು ಬರಲೇ ಇಲ್ಲವೇ?" "ತಮ್ಮ ಫರ್ಲಾಂಗ್ ಉದ್ದದ ಕಟ್ ಅಂಡ್ ಪೇಸ್ಟ್ ಪ್ರತಿಕ್ರಿಯಯಲ್ಲಿ ಒಬ್ಬರು ಒಂದಿಷ್ಟು ಘಟನೆಗಳ ಬಗ್ಗೆ ಬರೆದರು. ಪಾಪ ಅವರು ಕಟ್ ಅಂಡ್ ಪೇಸ್ಟ್ ಮಾಡುವ ತರಾತುರಿಯಲ್ಲಿ ಭಾರತದ ಉದ್ದಗಲಕ್ಕೂ ನಿರ್ದಿಷ್ಟ ಕೋಮಿನ ಜನರನ್ನು ಗುರಿಯಾಗಿಸಿಕೊಂಡು ನಡೆದ ಗಲಭೆಗಳ ಬಗ್ಗೆ ಮೌನ ತಾಳಿದ್ದು ಸೋಜಿಗದ ಸಂಗತಿ. ಭಿವಂಡಿ, ಸೀತಾಮಡಿ, ಅಲಿಗಡ, ಮೊರಾದಾಬಾದ್, ಹೈದರಾಬಾದ್, ಸೂರತ್, ಮುಂಬೈ, ಒಂದೇ ಎರಡೇ? ಗಲಭೆ ಅಥವಾ ಶೋಷಣೆ ನಡೆಯದ ಒಂದು ಚದರ ಮೈಲಿನ ಸ್ಥಳ ತೋರಿಸಬಹುದೇ ತಾವು? >> ಅದು ಕಿಲೋಮೀಟರ್ನಷ್ಟು ಇರಬೇಕು, ಅಷ್ಟು ಆಗಿದೆ ಹಿಂಸೆ, ಗಲಭೆ. ಇನ್ನು ಪ್ರಪಂಚದ್ಯಂತ ನಡೆದ ಘಟನೆಗಳನ್ನ ಬರೆಯುತ್ತಾ ಹೋದರೆ? ಅದಕ್ಕೆಲ್ಲ ಕಾರಣ? "ಮಾತು ಮಾತಿಗೆ ಇಲ್ಲ್ಲಾ ಘಜನಿ, ಘೋರಿ, ಅಲ್ಲಾವುದ್ದೀನ್ ಖಿಲ್ಜಿ, ಅದು ಬಿಟ್ಟರೆ ಕಾಶ್ಮೀರಿ ಪಂಡಿತರ ಗೋಳು, ಇವುಗಳಾಚೆಯೂ ಪ್ರಪಂಚ ಇದೆ," ಹೇಮಂತ ಕರ್ಕರೆಯಿಂದ ಆಚೆ ಕೂಡ ಪ್ರಪಂಚ ಇದೆ ಅನ್ನೋದು ಕೆಲವರಿಗೆ ತಿಳಿದಿಲ್ಲ ಅನ್ನಿಸುತ್ತೆ ;) "ಇದುವರೆಗೂ ನಮ್ಮ ಭಾರತೀಯ ಸಂಸ್ಕೃತಿಯನ್ನು ಕೊಂಡಾಡುತ್ತಿದ್ದ ವಿಶ್ವ ನಮ್ಮೆಡೆ ಅನುಮಾನದಿಂದ ನೋಡಲು ತೊಡಗಿದೆ. ಅದಕ್ಕೆ ಕಾರಣ ಒರಿಸ್ಸಾದಲ್ಲಿ ನಡೆದ ಕ್ರೈಸ್ತ ವಿರೋಧಿ ಗಲಭೆಗಳನ್ನು ತನಿಖೆ " >>ಹ ಹ ಹ!!!! ಇದಕ್ಕೂ ಮುಂಚೆ ದಂಗೆಕೋರರು ಈ ದೇಶವನ್ನು ಎಷ್ಟು ಬಾರಿ ಲೂಟಿ ಮಾಡಿದ್ದಾರೆ, ಇಲ್ಲಿನ ಸಂಸ್ಕೃತಿಯನ್ನ ಹೇಗೆ ನಾಶ ಮಾಡೀದ್ದಾರೆ ಎನ್ನುವುದನ್ನು ತಿಳಿಯಲು ಪ್ರಪಂಚದ ಎಲ್ಲ ರಾಷ್ಟ್ರಗಳಿಂದ ಜನ ಬರುತ್ತಾನೆ ಇದ್ದಾರೆ, ಇದಕ್ಕೆ ಹಂಪೆ, ಬೇಲೂರು, ಹಳೆಬೀಡು, ಇವುಗಳ ವಿದೇಶಿ ಪ್ರವಾಸಿಗರ ಸಂಖ್ಯೆಯೇ ಸಾಕ್ಷಿ. "ಮುಸ್ಲಿಮರ ವಿರುದ್ಧ ಇಷ್ಟೆಲ್ಲಾ ಗಲಭೆಗಳು ನಡೆದರೂ ಯಾವ ಮುಸ್ಲಿಂ ಅಥವಾ ಅರಬ್ ರಾಷ್ಟ್ರಗಳಿಂದಾಗಲಿ ತನಿಖಾ ತಂಡ ನಮ್ಮ ಧರೆಯ ಮೇಲೆ ಇಳಿಯಲಿಲ್ಲ. ಅದಕ್ಕೆ ಭಾರತೀಯ ಮುಸ್ಲಿಮರು ಆಸ್ಪದವನ್ನೂ ಕೊಡುವುದಿಲ್ಲ. " >>ಹಿಂದೆ ಕೂಡ ತಾವು ಇಂತದ್ದೆ ಅರ್ಥ ಬರುವ ಹೇಳಿಕೆ ಕೊಟ್ಟಿದ್ದೀರಿ. ಆಗ ನಾನು ಪಾಕಿಸ್ತಾನದಲ್ಲಿ ೧೯೯೨ ರಲ್ಲಿ ನಡೆದ ಹಿಂದು ದೇವಾಲಯಗಳ ಉರುಳುವಿಕೆಯ ಮಾಹಿತಿಯ ಕೊಂಡಿ ಕೊಟ್ಟಿದ್ದೆ, ಅದಕ್ಕೆ ತಾವು ಕೊಟ್ಟ ಉತ್ತರ ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಕೊನೆಯ ವಾಕ್ಯಪುಂಜಕ್ಕೂ ಮೊದಲನೆ ವಾಕ್ಯಕ್ಕೂ ಪಕ್ಕ ವಿರುದ್ದವಿದೆಯಲ್ಲ್ವೆ? ಎರಡರಲ್ಲಿ ಒಂದನ್ನು ತಿದ್ದುಬಿಡೀ.

ರೀ ಅಬ್ದುಲ್, ಒಂದು ಲೇಖನದಲ್ಲಿ ಸಂಪದದಂತಹ ಸುಂದರ ತಾಣದಲ್ಲಿ ಧರ್ಮದದ ಮಾತಾಡಿ ಗಬ್ಬೆಬ್ಬಿಸಬೇಡಿ ಅಂತ ಬೋದನೆ ಮಾಡ್ತಿರ. ಇಲ್ಲಿ ತಾವ್ ಮಾಡಿರೋದ್ ಏನು? ತಾವ್ ಯಾವ ಧರ್ಮದವರ ಕಡೆ ಬೊಟ್ಟು ಮಾಡಿ ಮಾತಾಡುತಿದ್ದಿರೋ ಅವರ್ಯಾರು ತಮ್ಮ ಧರ್ಮವೇ ಪರಿಪೂರ್ಣ ಅಂತನೋ, ಇಲ್ಲ ಅವರ ಧರ್ಮಕ್ಕೆ ಸೇರಿದವನು ಮಾಡಿದ್ದೆ ಸರಿ ಅಂತನೋ ವಾದ ಮಾಡೋದಿಲ್ಲ. <<ಕಂದಕ ತೋಡುವ ಕೆಲಸ ಅಲ್ಲಿಗೇ ನಿಲ್ಲಿಸಿ ಸುಂದರ ನಾಡೊಂದನ್ನು ಕಟ್ಟೋಣ>> ಕಂದಕ ತೋಡಲು ಬೇಕಾದದ್ದನ್ನೆಲ್ಲ ಬರೆದು ಕಡೆಗೆ ಸುಂದರ ನಾಡು ಕಟ್ಟುವ ಬಗ್ಗೆ ಮಾತು!. ನಿಮ್ಮ ಲೇಖನವನ್ನ ಮತ್ತೊಮ್ಮೆ ನೀವೇ ಓದಿಕೊಳ್ಳಿ. ಗಾಂಧೀಜಿಯವರ ಮಾತೊಂದಿದೆ ಗೊತ್ತ? 'You Must Be the Change YOU want to see" ಅಂತ... ಯೋಚಿಸಿ.. ರಾಕೇಶ್ ಶೆಟ್ಟಿ 'ಎಲ್ಲರೊಳಗೊಂದಾಗು - ಮಂಕು ತಿಮ್ಮ||'

"ಇಸ್ಲಾಂ ಪರಧರ್ಮ ಸಹಿಷ್ಣು ಎಂದು ಯಹೂದ್ಯರು ಮುಸ್ಲಿಮರ ಆಶ್ರಯ ಕೇಳಿದಾಗಲೇ ವಿಶ್ವಕ್ಕೆ ವ್ಯಕ್ತವಾಯಿತು" >> ನಿಮ್ಮ ಈ ಹೇಳಿಕೆಗೂ, ನಿನ್ನೆ ನಡೆದ ಘಟನೆಗೂ ಎಂಥ ವ್ಯತ್ಯಾಸ ... http://economictimes...

three Sikh youths were beheaded by Taliban in Pakistan’s Federally Administered Tribal Area (FATA) region after they allegedly refused to convert to Islam. Their severed heads were dumped at a gurudwara in Peshawar.

ಅಬ್ದುಲ್ ಈ ಹಿಂದೆ ಅದೇ ನಿಮ್ಮ್ ಫೇಸ್ ಬುಕ್ ಲೇಖ್ನದಲ್ಲಿ ಪ್ರತಿಕ್ರಿಯೆ ಕೊಡುತ್ತ ನಾಒಂದು ಮಾತು ಹೇಳಿದ್ದೆ ನೀವು "ದ್ವಂದ್ವ " ಅಥವಾ "ಇಬ್ಬಂದಿತನ" ತೋರ್ತಾ ಇದ್ದೀರಾ .ನೀವು ಒಂದೋ ಮಾನವವಾದಿಯಾಗಿ ನಿಜಕ್ಕೂ ಕಳಕಳಿ ತೋರಿಸಿ ಸಂಪದಾದಲ್ಲಿ ಕಂದಕ(ಅದು ಇದ್ರೆ....)ಮುಚ್ಚಬೇಕು... ಇಲ್ಲಾ ನಾಹಿಂಗೆ ನಾ ಮೂಲಭೂತ ವಾದಿ ಧರ್ಮ ಮೊದ್ಲು ಆ ಮೇಲೆ ದೇಶ ಅಂತ ಒಪ್ಕೊಳ್ಳಿ...ನೀವು ಹೀಗೆ ಮಾಡಿದ್ರೆ ನಮಗೇನೂ ಬೇಸರವಿಲ್ಲ. ಹಿಂದು ಧರ್ಮ ದಲ್ಲೂ ತಪ್ಪಿವೆ ನಿಜ ಹಾಗಂತ ನಾವ್ಯಾರೂ ಅದರ ವಿರುಧ್ಧ ವಾದ ಮಾಡ್ತಾ ಇಲ್ಲ.ನೀವು ಮೆಚ್ಚಬೇಕು ವಿರುದ್ಧ ಅಭಿಪ್ರಾಯ ವ್ಯಕ್ತ ಪಡಿಸೋಕೆ ಒಂದು ವೇದಿಕೆ ಅಂತಹವರಿಗೆ ಇದೆ . ಅದುಬಿಟ್ಟು ಫತ್ವಾ ಹೊರಡಿಸಿ ದೇಶಬಿಟ್ಟು ಹೊಡೆದೋಡಿಸಿಲ್ಲ , ಅಥವಾ ರುಂಡ ಬೇರ್ಪಡಿಸಿ ಅಟ್ಟಹಾಸ ಮಾಡಿಲ್ಲ. ನಿಮ್ಮ ತಲೆಬರಹ "ಮೈನೇಮ್ ಇಸ್ ಅಬ್ದುಲ್ ಬಟ್..."ಒಟ್ಟಾರೆ ನಿಮ್ಮ ದ್ವಂದ್ವಕ್ಕೆ ಸಾಕ್ಷಿಯಾಗಿಗೆ ಏನಂತೀರಿ....

ಇಸ್ಲಾ೦ ಎಷ್ಟು ಪರಧರ್ಮ ಸಹಿಷ್ಣು ಎ೦ಬುದು ಜಗತ್ತಿನಾದ್ಯ೦ತ ನಡೆಯುತ್ತಿರುವ ಭಯೋತ್ಪಾದನೆಯನ್ನು ನೋಡಿದರೆ ತಿಳಿಯುತ್ತದೆ.ಅದರ ಬಗೆಗಿನ ಆಸಕ್ತರು ದಯಮಾಡಿ ರವಿ ಬೆಳಗೆರೆ ಬರೆದ ’ಮುಸ್ಲಿ೦’ ಮತ್ತು ’ನೀನಾ ಪಾಕಿಸ್ತಾನ’ ಪುಸ್ತಕಗಳನ್ನು ಓದಿ.

. <<ಅವರಿಗೆ ಉತ್ತರ ಪೋಲಂಕಿ ರಾಮ ಮೂರ್ತಿ, ಹುಸೇನ್ ರವರೊಂದಿಗೆ ನಾವು ನಡೆದುಕೊಂಡ ಘಟನೆಯಲ್ಲಿ ಸಿಕ್ಕೀತು.>> ಪೋಲಂಕಿಯವರು ಸೀತೆಯನ್ನು ವ್ಯಭಿಚಾರಿಣಿ ಎಂದರು. ಹುಸೇನ್ ದೇವರನ್ನು ನಗ್ನವಾಗಿ ಚಿತ್ರಿಸಿದ. ಇವರನ್ನು ಸನ್ಮಾನಿಸಬೇಕಿತ್ತಾ? ಹುಸೇನ್ ನಿಮ್ಮ ಪೈಗಂಬರರನ್ನು ನಗ್ನವಾಗಿ ಚಿತ್ರಿಸಲಿ ನೋಡೋಣ! ಈಗ ಅವನು ಅವಿತುಕೊಂಡಿರುವ ದುಬೈನಲ್ಲಿಯೇ ಅವನ ಶಿರಚ್ಛೇದನವಾಗುತ್ತದೆ! <<೭೦೦ ವರ್ಷ ಸ್ಪೇನ್ ದೇಶದಲ್ಲಿ ಮುಸ್ಲಿಂ ಆಳ್ವಿಕೆ ಕೊನೆಗೊಂಡಾಗ ಮುಸ್ಲಿಮರ ಹಿಂದೆಯೇ ಗಂಟು ಮೂಟೆ ಕಟ್ಟಿಕೊಂಡು ಯಹೂದ್ಯರು ಸ್ಪೇನ್ ದೇಶವನ್ನು ತ್ಯಜಿಸಿದರು.>> ಬಿಟ್ಟು ಎಲ್ಲಿಗೆ ಹೋದರು? ಜೋರ್ಡಾನ್ ಗಾ? ಅರಬ್ ಗಾ? ಈಗಲೂ ಇಸ್ರೇಲ್ ನ ದೊಡ್ಡ ವೈರಿ ಅರಬ್ ಎಂದು ಎಲ್ಲರಿಗೂ ಗೊತ್ತು. ಜೋರ್ಡಾನ್ , ಅರಬ್ ಇತ್ಯಾದಿ ದೇಶಗಳು ಎಷ್ಟು ಬಾರಿ ಇಸ್ರೇಲ್ ಮೇಲೆ ಧಾಳಿ ಮಾಡಿಲ್ಲ? ಪ್ಯಾಲೆಸ್ಟೀನ್ ಗೆ ಹಣ ಕೊಡುತ್ತಿರುವವರು ಯಾರು? ಪಾಠ ಹೇಳುವುದೊಂದು ರೀತಿ ನಡೆದುಕೊಳ್ಳುವುದೊಂದು ರೀತಿ! ಮೊದಲು ಮುಸಲ್ಮಾನರು ವಂದೇಮಾತರಂ ಹಾಡಲಿ, ಧರ್ಮಕ್ಕಿಂತ ದೇಶ ಮುಖ್ಯ ಎನ್ನಲಿ, uniform civil code ಗೆ ಒಪ್ಪಿಕೊಳ್ಳಲಿ. ಆಗ ಎಲ್ಲವೂ ತನ್ನಿಂದ ತಾನೇ ಸರಿಹೋಗುತ್ತದೆ. ಯಾರು ನಿಮ್ಮ ಮೇಲೆ ಬರುವುದಿಲ್ಲ.

ಬೇರೇನೂ ಬೇಡ ಅಬ್ದುಲ್, ಇಸ್ಲಾಂ ಧರ್ಮದ ಮೂಲ ತತ್ತ್ವಗಳು ಮತ್ತು ಈಗ ಅದನ್ನು ಎಷ್ಟು ತಪ್ಪಾಗಿ/ಕ್ರೂರವಾಗಿ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಒಂದು ಲೇಖನ ಬರೆಯಿರಿ ನೋಡೋಣ. ಅದೇ ಹಿಂದೂ ಲೇಖಕರು ಎಷ್ಟೋ ಜನ (ನೀವೇ ಉದಾಹರಣೆ ಕೊಟ್ಟಿದ್ದೀರಿ ಮೇಲೆ) ಅವರ ಧರ್ಮದ ಹುಳುಕುಗಳನ್ನು ಎತ್ತಿ ತೋರಿಸಿ, ಜಗತ್ತಿಗೆ ಹೇಳಿದ್ದಾರೆ. ಅದಕ್ಯಾರೂ ಅವರನ್ನು ನಿರ್ಬಂಧಿಸಿಲ್ಲ ಅಥ್ವಾ ಪ್ರಾಣ ತೆಗೆಯಲಿಲ್ಲ... ಸಾಧ್ಯವೇ ಇದು ಇತರ ಧರ್ಮದಲ್ಲಿ? ಸಹಿಷ್ಣುತೆಯ ಅರ್ಥ ಯಾರಿಗೆ ಹೇಳುತ್ತಿದ್ದೀರಿ...! ಹೋಗಲಿ ಬಿಡಿ...ಕಂದಕ ಮುಚ್ಚೋಣ...ಎಲ್ಲ ಇಸ್ಲಾಂ ಬಾಂಧವರಿಗೂ ಸಹ (ತಾಲಿಬಾನಿಗಳಿಗೂ ಕೂಡ) ಹೇಳಿ ಇದನ್ನು ಪ್ಲೀಸ್...

ಬೇರೇನೂ ಬೇಡ ಅಬ್ದುಲ್, ಇಸ್ಲಾಂ ಧರ್ಮದ ಮೂಲ ತತ್ತ್ವಗಳು ಮತ್ತು ಈಗ ಅದನ್ನು ಎಷ್ಟು ತಪ್ಪಾಗಿ/ಕ್ರೂರವಾಗಿ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಒಂದು ಲೇಖನ ಬರೆಯಿರಿ ನೋಡೋಣ. ಅದೇ ಹಿಂದೂ ಲೇಖಕರು ಎಷ್ಟೋ ಜನ (ನೀವೇ ಉದಾಹರಣೆ ಕೊಟ್ಟಿದ್ದೀರಿ ಮೇಲೆ) ಅವರ ಧರ್ಮದ ಹುಳುಕುಗಳನ್ನು ಎತ್ತಿ ತೋರಿಸಿ, ಜಗತ್ತಿಗೆ ಹೇಳಿದ್ದಾರೆ. ಅದಕ್ಯಾರೂ ಅವರನ್ನು ನಿರ್ಬಂಧಿಸಿಲ್ಲ ಅಥ್ವಾ ಪ್ರಾಣ ತೆಗೆಯಲಿಲ್ಲ... ಸಾಧ್ಯವೇ ಇದು ಇತರ ಧರ್ಮದಲ್ಲಿ? ಸಹಿಷ್ಣುತೆಯ ಅರ್ಥ ಯಾರಿಗೆ ಹೇಳುತ್ತಿದ್ದೀರಿ...! ಹೋಗಲಿ ಬಿಡಿ...ಕಂದಕ ಮುಚ್ಚೋಣ...ಎಲ್ಲ ಇಸ್ಲಾಂ ಬಾಂಧವರಿಗೂ ಸಹ (ತಾಲಿಬಾನಿಗಳಿಗೂ ಕೂಡ) ಹೇಳಿ ಇದನ್ನು ಪ್ಲೀಸ್...

ಕ್ಷಮಿಸಿ... ಸರ್ವರ್ ತೊಂದರೆಯಿಂದಾಗಿ ರಿಫ್ರೆಶ್ ಕೊಟ್ಟಾಗ ೩ ಸಲ ಒಂದೇ ಪ್ರತಿಕ್ರಿಯೆ ಬಂದಿದೆ... ಅದು ರೊಚ್ಚು-ರೋಷದಿಂದ ಅಲ್ಲ... :) :)

<< ಇನ್ನೊಬ್ಬ ಮಿತ್ರರು ರಶ್ದಿ, ತಸ್ನೀಮ ನಸ್ರೀನ್ ಎಂದು ಏನೇನೋ ಕನವರಿಸಿದರು. ಅವರಿಗೆ ಉತ್ತರ ಪೋಲಂಕಿ ರಾಮ ಮೂರ್ತಿ, ಹುಸೇನ್ ರವರೊಂದಿಗೆ ನಾವು ನಡೆದುಕೊಂಡ ಘಟನೆಯಲ್ಲಿ ಸಿಕ್ಕೀತು. >> ಪ್ರಪಂಚದಲ್ಲಿ ಎರಡು ರೀತಿಯ ಜನರಿರುತ್ತಾರೆ. ಒಂದು ತನ್ನಲ್ಲಿರುವ ದೋಷಗಳನ್ನು ಒಪ್ಪಿಕೊಂಡು ಮೂಂದುವರೆಯುವವರು. ಇನ್ನೊಂದು ರೀತಿಯ ಜನರು ತಮ್ಮಲ್ಲಿರುವ ತಪ್ಪುಗಳನ್ನು ಮುಚ್ಚಿಟ್ಟು ಇನ್ನೊಬ್ಬರಲ್ಲಿ ತಪ್ಪನ್ನು ಹುಡುಕಿ ಅವರನ್ನು ಮೂದಲಿಸುವವರು. ರಶ್ದಿ ತಸ್ಲೀಮರು ಮೊದಲ ಪಂಗಡಗಳಿಗೆ ಸೇರಿದರೆ ಹುಸೇನರು ಎರಡನೇ ಪಂಗಡಕ್ಕೆ ಸೇರಿದವರು. ರಶ್ದಿ ತಮ್ಮ ಧರ್ಮವಾದ ಇಸ್ಲಾಮ್ ನ ಹುಳುಹುಗಳನ್ನು ಎತ್ತಿ ತೋರಿಸಿದರು ಹುಸೇನ್ ತನ್ನದಲ್ಲದ ಹಿಂದೂ ಧರ್ಮದ ಅವಹೇಳನ ಮಾಡಿದರು. ಈ ವ್ಯತ್ಯಾಸ ತಿಳಿಯಲು ಸಾಧ್ಯವಾಗದ ನಿಮ್ಮ ಬಗ್ಗೆ ಮರುಕ ಪಡುತ್ತಿದ್ದೇನೆ. ಇನ್ನು ಕಂದಕದ ಬಗ್ಗೆ. ಕಂದಕದ ಎರಡೂ ಪಕ್ಕ ಇರುವವರು ಮಣ್ಣು ಹಾಕಿದರೆ ತಾನೆ ಕಂದಕ ಮುಚ್ಚುವುದು? ಅದಕ್ಕೇ ಹೇಳಿದ್ದು. ನಮ್ಮ ಧರ್ಮದಲ್ಲಿನ ದೋಷಗಳನ್ನು ನಾವು ಒಪ್ಪಿಕೊಳ್ಳುತ್ತೇವೆ, ಸರಿಪಡಿಸುತ್ತೇವೆ. ನಿಮ್ಮದನ್ನು ನೀವು ಒಪ್ಪಿಕೊಳ್ಳಿ ಸರಿಪಡಿಸಿಕೊಳ್ಳಿ ಎಂದಷ್ಟೇ ನಾನು (ನಾವು) ಹೇಳಿದ್ದು. ನನಗೆ ಗೊತ್ತಿರುವ ಮಟ್ಟಿಗೆ ಇಲ್ಯಾರೂ ಹಿಂದೂ ಧರ್ಮ (ಈಗ ಇರುವಂತೆ) ಪರಿಪೂರ್ಣ ಎಂದು ಹೇಳಿದಂತಿಲ್ಲ.

ಯೆಸ್ ಅಬ್ದುಲ್, ನಿಮ್ಮ ಮಾತಿಗೆ ಸಹಮತವಿದೆ. ಕಂದಕ ತೋಡುವ ಕೆಲಸ ಅಲ್ಲಿಗೇ ನಿಲ್ಲಿಸಿ ಸುಂದರ ನಾಡೊಂದನ್ನು ಕಟ್ಟೋಣ. ಖಂಡಿತವಾಗಿಯೂ. ಘೋರಿ, ಘಜ್ನಿ, ಔರಂಗಜೇಬ್ ಎಲ್ಲರನ್ನೂ ನಾವು ಮರೆತದ್ದಾಗಿದೆ. ಅವರೇನಿದ್ದರೂ ಇತಿಹಾಸದ ಪುಟಗಳು, ಮತ್ತೊಬ್ಬ ಕೃಷ್ಣದೇವರಾಯ, ಅಶೋಕ, ತುಘಲಕ್, ಅಕ್ಬರರಂತೆಯೇ. ರಾಮನನ್ನೂ, ಆತನ ಮಂದಿರವನ್ನೂ, ಬಾಬ್ರಿ ಮಸೀದಿಯನ್ನೂ ಮರೆತುಬಿಡೋಣ. ಕಾಶ್ಮೀರದ ಪಂಡಿತರನ್ನೂ, ಗೋಧ್ರಾ ನರಮೇಧವನ್ನೂ ಎಲ್ಲವನ್ನೂ ಮರೆಯೋಣ. ಗತಿಸಿದ್ದು ಗತಿಸಿ ಹೋಗಿದೆ. ಕೆದಕುವುದರಿಂದ ಪ್ರಯೋಜನ ಇಲ್ಲ ಅಲ್ಲವೇ? ಸರಿ. ಆದರೆ ಭವಿಷ್ಯದಲ್ಲಿ, ಭಾರತೀಯ ಪ್ರಜೆಗಳು ನೆಮ್ಮದಿಯಿಂದ ಬಾಳಲು, ೧. ಧರ್ಮಕ್ಕಿಂತ ದೇಶವನ್ನು ಎತ್ತಿಹಿಡಿಯಬಲ್ಲಿರಾ? ದೇಶಭಕ್ತಿಗೀತೆಗಳ ಮೇಲಿನ "ಫತ್ವ" ಗಳನ್ನು ಹಿಂದಕ್ಕೆ ಪಡೆಯಬಲ್ಲಿರಾ? ೨. ಧರ್ಮಾಧಾರಿತ ಕಾನೂನಿಗಿಂತ, "ಎಲ್ಲ" ಪ್ರಜೆಗಳಿಗೂ ಒಂದೇ ಕಾನೂನು ಎಂಬುದನ್ನು ಬೆಂಬಲಿಸಬಲ್ಲಿರಾ? ೩. ಒಳಗಿನವರ ಬೆಂಬಲವಿಲ್ಲದೇ ಯಾವ ಹೊರಗಿನವನೂ ಇಲ್ಲಿ ಯಶಸ್ಸು ಗಳಿಸಲಾರ. ಆದ್ದರಿಂದ ದೇಶದಲ್ಲೆಡೆ ಜನರು ನಿರ್ಭಯದಿಂದ ಬದುಕಲು ಅನುವಾಗುವಂತೆ, "ಭಯೋತ್ಪಾದಕತೆ"ಯನ್ನು ತಡೆಯಬಲ್ಲಿರಾ? ೪. "ಪ್ರೇಮ ವಿವಾಹ" ವಾದಾಗ, ಹುಡುಗನೋ, ಹುಡುಗಿಯೋ, ಮದುವೆಯ ನಂತರವೂ, ವಿವಾಹ ಪೂರ್ವದ ಧರ್ಮವನ್ನು ಅನುಸರಿಸಲು ಬಿಡುತ್ತೀರಾ? ಪ್ರಶ್ನೆಗಳು ಬಹಳಷ್ಟಿವೆ, ಆದರೆ ಉತ್ತರ ದೊರಕುವುದಿಲ್ಲ! ವೈಯಕ್ತಿಕ ನೆಲೆಗಟ್ಟಿನಲ್ಲಿ ನೀವು ಸಾಧ್ಯವೆಂದರೂ, ಸಾರ್ವಜನಿಕವಾಗಿ ಹೇಳಿ ನಿಮ್ಮವರಿಂದಲೇ ದಕ್ಕಿಸಿಕೊಳ್ಳಲಾರಿರಿ, ಇದೇ ವಾಸ್ತವ! ನಿಮ್ಮನ್ನು ನೀವು fanatic ಅಲ್ಲ ಎಂದು ಹೇಳಿಕೊಂಡದ್ದರಿಂದ ಈ ಪ್ರತಿಕ್ರಿಯೆಯೇ ಹೊರತು, ಉತ್ತರವನ್ನು ಖಂಡಿತ ನಿರೀಕ್ಷಿಸುತ್ತಿಲ್ಲ!

ವಂದನೆಗಳು ವಿನುತ ತಮ್ಮ ಪ್ರತಿಕ್ರಿಯೆಗೆ, ನನ್ನನ್ನು ಸಮಾಧಾನ ಮಾಡಲು ನೀವು ರಾಮ ಮಂದಿರ ಮರೆಯಬೇಕಿಲ್ಲ. ನಾನೇನನ್ನು ಬರೆಯುತ್ತೇನೋ ಅದರಂತೆ ನಂಬುವವ ಮತ್ತು ನಡೆಯುವವನೂ ಸಹ. i scratch your back, you scratch my back ನೀತಿ ಯಲ್ಲಿ ನನಗೆ ವಿಶ್ವಾಸ ಇಲ್ಲ. ತಮ್ಮ ಪ್ರಶ್ನೆಗಳಿಗೆ ಉತ್ತರ. ೧. ದೇಶಭಕ್ತಿ ಗೀತೆ ಯಾವುದು ಎಂದು ತೀರ್ಮಾನಿಸುವವರು ಯಾರು? ಅದಕ್ಕೇನಾದರೂ guideline ಇವೆಯೇ? ತಮ್ಮ ಅಂದಾಜಿನ ಪ್ರಕಾರ ಒಂದು ದೇಶಕ್ಕೆ ಎಷ್ಟು ಗೀತೆಗಳ ಅವಶ್ಯಕತೆ ಇದೆ? ಇನ್ನು ವಂದೇ ಮಾತರಂ ಹಾಡಿದ ಮಾತ್ರಕ್ಕ್ಕೆ ನಿಮ್ಮ imagination ಅಲ್ಲಿಗೆ ನಿಂತು ಬೇರೆ ಹಾಡುಗಳನ್ನೂ ಹಾಡು ಎಂದು ಬಲವಂತ ಮಾಡುವುದಿಲ್ಲ ಎಂದು ಏನು guarantee? 2. ಭಯೋತ್ಪಾದಕತೆ ನಮಗೆ ಮಾತ್ರ ಸೀಮಿತ ಅಲ್ಲ ಎಂದು ಹುತಾತ್ಮರಾದ ಅಧಿಕಾರಿಯೊಬ್ಬರು ಸಾಬೀತು ಪಡಿಸಿದ್ದಾರೆ. we shouldn't dig the same grave over and over. 3. ಪ್ರೇಮ ವಿವಾಹ ವೈಯಕ್ತಿಕ ವಿಚಾರ, ಧರ್ಮ ತನ್ನ ಮೂಗು ತೋರಿಸುವುದು ಬೇಡ. ಉದಾಹರಣೆ ಬೇಕೆಂದಾದರೆ ಅಕ್ಬರ್ ಅಹ್ಮದ್ ದಮ್ಪಿ ಮದುವೆಯಾಗಿದ್ದು ಸವರ್ಣೀಯ ಸ್ತ್ರೀಯನ್ನು, ಆಕೆ ಈಗಲೂ ಹಿಂದೂ, ಶಾರುಕ್ ಖಾನ್ ರನ್ನು ಸಹ ಸೇರಿಸಿಕೊಳ್ಳಿ ಪಟ್ಟಿಗೆ. ತಮ್ಮನ್ನು ಬಾಧಿಸುತ್ತಿರುವ ಪ್ರತಿ ಪ್ರಶ್ನೆಗಳಿಗೆ ಉತ್ತರಿಸುವ ವಿಶ್ವಾಸ ನನಗಿದೆ, ವಿನುತಾ. ಇನ್ನು ನನ್ನ ಇತರೆ ಮಿತ್ರರಿಗೆ, ಗುಜರಾತ್ ನರಮೇಧಕ್ಕೆ ಹಿಂದೂ ಧರ್ಮವನ್ನು ಸಾಕ್ಷಿಯಾಗಿ ನಿಲ್ಲಿಸುವುದಾದರೆ ತಾಲಿಬಾನಿನ ಕ್ರೂರ ಅಟ್ಟಹಾಸಕ್ಕೂ ಇಸ್ಲಾಂ ಧರ್ಮವನ್ನು ಅಪರಾಧಿಯನ್ನಾಗಿ ನಿಲ್ಲಿಸಿ ಕಟಕಟೆಗೆ ದಬ್ಬೋಣ. ತಾಲಿಬಾನಿಗಳ ಬಗೆಗಿನ ನನ್ನ ಅಭಿಪ್ರಾಯ ಹಿಂದೊಮ್ಮೆ ಬರೆದಿದ್ದೆ, ಅವರು ಮನುಕುಲಕ್ಕೆ ಅಂಟಿದ ಶಾಪ ಅಂತ. ಸಾಲಿಮಠರಿಗೆ, ತಮ್ಮ ಪ್ರಶ್ನೆಗೆ ತಾವೇ ಉತ್ತರಿಸಿದ್ದೀರಿ, ಧನ್ಯವಾದಗಳು, ಇಲ್ಲಿದೆ ತಮ್ಮ ಉತ್ತರ. "ಪೋಲಂಕಿಯವರು ಸೀತೆಯನ್ನು ವ್ಯಭಿಚಾರಿಣಿ ಎಂದರು. ಹುಸೇನ್ ದೇವರನ್ನು ನಗ್ನವಾಗಿ ಚಿತ್ರಿಸಿದ. ಇವರನ್ನು ಸನ್ಮಾನಿಸಬೇಕಿತ್ತಾ? " rushdi ಮೇಲಿನ ಇರಾನಿನ ಫಾತ್ವಾ ವನ್ನು ೪೯ ಇಸ್ಲಾಮಿ ರಾಷ್ಟ್ರಗಳು ತಿರಸ್ಕರಿಸಿವೆ. ಇನ್ನು ಇಸ್ರೇಲ್ ಪಲೆಸ್ತಿನ್ ಪ್ರಶ್ನೆ. ಇದು ಸಂಕೀರ್ಣ ಪ್ರಶ್ನೆ. ಪ್ರೇಮ ವಿವಾಹಗಳಲ್ಲೂ, ಇನ್ನಿತರ ಕ್ಷುಲ್ಲಕ ಘಟನೆಗಳಲ್ಲೂ ಧರ್ಮದ ಕೈ ಹುಡುಕುವ ಜನರಿಗೆ ಒಗ್ಗುವ ವಿಚಾರವಲ್ಲ. it takes great amount of judgement and intelligence. ಅದನ್ನು ಜಾಣರಿಗೆ ಬಿಡೋಣ, ಏನಂತೀರಿ? ನನ್ನ ಲೇಖನ ಓದಿದ ಎಲ್ಲರಿಗೂ ಕೆಳಗಿನ ಹಾಡೊಂದನ್ನು ಅರ್ಪಿಸುತ್ತಿದ್ದೇನೆ. ಪೂರ್ತಿ ಹಾಡನ್ನು ತಮ್ಮ ಪಕ್ಕದ ಬೀದಿಯ ಕಸೆಟ್ ಅಂಗಡಿಯಲ್ಲಿ ಕಸೆಟ್ ಖರೀದಿಸಿ ಕೇಳಬಹುದು. ಶರಣು ಶರಣಯ್ಯಾ ಶರಣು ಜನಕಾ ನೀಡಯ್ಯ ಬಾರಯ್ಯ ಬೆಳಗುವಾ ಬೆಳಕಾ. ವಾಹ್, ಬೆಳಗುವ ಬೆಳಕು, ಎಷ್ಟು ಅರ್ಥಗರ್ಭಿತ ಆಲ್ವಾ?

ವಿನುತಾ ಅವರ ಎರಡು ಪ್ರಶ್ನೆಗಳಿಗೆ ಉತ್ತರ ಜಾರಿಸಿರುವುದು ಯಾಕೆ? ಏಕರೂಪ ಕಾನೂನು ಮತ್ತು ಭಯೋತ್ಪಾದಕರಿಗೆ ಲೋಕಲ್ ಮುಸ್ಲಿಂರ ಸಹಕಾರದ ಬಗ್ಗೆ ಹೇಳಿಯೇ ಇಲ್ಲ??? ಧರ್ಮಕ್ಕಿಂತ ದೇಶ ದೊಡ್ಡದು ಎಂಬ ಮಾತು ತಮ್ಮಿಂದ ಬಂದೇ ಇಲ್ಲ! ನನ್ನ ಪ್ರಶ್ನೆಗೆ ನಾನೆಲ್ಲಿ ಉತ್ತರ ನೀಡಿದ್ದೇನೆ? ನೀವೇ ಕಲ್ಪಿಸಿಕೊಂಡಿದ್ದೀರಿ! ಇನ್ನು ಹಾಡು .. ಅದು ಹೀಗಿದೆ ಶರಣು ಶರಣಯ್ಯಾ ಶರಣು ಬೆನಕಾ ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕಾ ಗಣಪತಿಯ ಕುರಿತಾದ ಹಾಡು ಅದು!

ಧನ್ಯವಾದ, ಮಧ್ಯಾನ್ಹದ ಜೋಕ್ ಗೆ ;) snip 1<<. i scratch your back, you scratch my back ನೀತಿ ಯಲ್ಲಿ ನನಗೆ ವಿಶ್ವಾಸ ಇಲ್ಲ.>> snip 2 << ಗುಜರಾತ್ ನರಮೇಧಕ್ಕೆ ಹಿಂದೂ ಧರ್ಮವನ್ನು ಸಾಕ್ಷಿಯಾಗಿ ನಿಲ್ಲಿಸುವುದಾದರೆ ತಾಲಿಬಾನಿನ ಕ್ರೂರ ಅಟ್ಟಹಾಸಕ್ಕೂ ಇಸ್ಲಾಂ ಧರ್ಮವನ್ನು ಅಪರಾಧಿಯನ್ನಾಗಿ ನಿಲ್ಲಿಸಿ ಕಟಕಟೆಗೆ ದಬ್ಬೋಣ.>> ಎರಡೂ ಒಂದೇ ಪ್ರತಿಕ್ರಿಯೆಯಲ್ಲಿ ಬರೆದರೆ....:) ನಿಮ್ಮ ಹಾಡಿನ ನಿಜವಾದ ರೂಪ, "ಶರಣು ಶರಣಯ್ಯ ಶರಣೂ ಬೆನಕ" ಇದು ಪ್ರತಿ ಗಣಪತಿ ಉತ್ಸವದ ಮೊದಲ ಗೀತೆ, ನಮ್ಮ ರಸ್ತೆಯಲ್ಲಿ ಜೋರಾಗಿ ಮೈಕ್ ನಲ್ಲಿ ಹಾಕ್ತಾ ಇದ್ವಿ.,,, ಜನಕ ಅಂಥ ನೀಮ್ಮ ಕಡೆ ಮೈಕ್ ನಲ್ಲಿ ಕೂಗ್ತಿರ? ಇಲ್ಲಿದೆ ನೋಡಿ ಸಾಹಿತ್ಯ http://meerasubbarao...

ಧನ್ಯವಾದಗಳು ಅಬ್ದುಲ್ ಪ್ರತ್ಯುತ್ತರಕ್ಕೆ. ಕ್ಷಮಿಸಿ, ತಮ್ಮನ್ನು ಸಮಾಧಾನ ಮಾಡಲಲ್ಲ ರಾಮಮಂದಿರ ಮರೆಯುವುದು, ಸೌಹಾರ್ದತೆಯ ದೃಷ್ಟಿಯಿಂದ! ಮಂದಿರಗಳನ್ನೇ ನಂಬದವಳಿಗೆ ರಾಮನದಾದರೇನು, ರಹೀಮನದಾದರೇನು ಅಲ್ಲವೇ? ಪ್ರಶ್ನೆಗಳಿಗೆ ಉತ್ತರವನ್ನು ಸ್ವಲ್ಪ ವಾಸ್ತವಿಕ ನೆಲೆಗಟ್ಟಿನಲ್ಲಿ ಕಂಡುಕೊಳ್ಳಬಹುದಲ್ಲವೇ? ಊಹಾಪೋಹಗಳಿಗೆ ನನ್ನಲ್ಲಿ ಉತ್ತರವಿಲ್ಲದಿದ್ದರೂ, ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಹೋರಾಟಗಾರರಲ್ಲಿ ಕಿಚ್ಚು ತುಂಬಿದ, ದೇಶದ ವೈಭವವನ್ನು ಮೆರೆಯುವ ಗೀತೆಯನ್ನು ದೇಶಭಕ್ತರು ದೇಶಭಕ್ತಿಗೀತೆಯೆಂದು ಕರೆದಿದ್ದಾರೆ. ಅದನ್ನು ದೇಶಭಕ್ತರಿದ್ದರೆ ಹಾಡಿಕೊಳ್ಳಲಿ ಬಿಡಿ, ಅದಕ್ಕೇಕೆ "ಫತ್ವಾ"? ಹೌದು, ತೋಡಿರುವ ಗುಂಡಿಯನ್ನು ಮತ್ತೆ ಮತ್ತೆ ತೋಡುವುದರಲ್ಲಿ ಅರ್ಥವಿಲ್ಲ, ಯಾಕೆಂದರೆ ತೋಡಿರುವ ಗುಂಡಿಯಲ್ಲಿ ಬಿದ್ದಿರುವವರ ಸಂಖ್ಯೆಯಲ್ಲಿ ಅಪಾರವಾದ ವ್ಯತ್ಯಾಸವಿದೆಯಲ್ಲ!! ಲಭ್ಯವಿರುವ ಮಾಹಿತಿಯಲ್ಲಿ ಸ್ವಲ್ಪ ಸಂಖ್ಯೆಗಳನ್ನು ಎಣಿಸಿನೋಡಿ, ಉತ್ತರ ಸಿಕ್ಕೀತು! ಉದಾಹರಣೆಗಳನ್ನು ಎಲ್ಲಕಡೆಗಳಿಂದಲೂ ಕೊಡಬಹುದು ಅಬ್ದುಲ್. ಮನುಷ್ಯಮಾತ್ರದವರಿಂದಲೇ ತಪ್ಪುಗಳು ನಡೆಯುವುದು. ಆದರೆ ತಪ್ಪನ್ನು ತಪ್ಪೆಂದು ಒಪ್ಪಿಕೊಂಡು ತಿದ್ದಿಕೊಳ್ಳುವ ಮುಕ್ತ ಮನಸ್ಸಿರಬೇಕಷ್ಟೇ ನನಗೂ, ನಿಮಗೂ, ಎಲ್ಲರಿಗೂ. ಒಂದು ಕಾಲು ಮುರಿದಾಗ ಚೆನ್ನಾಗಿ ಶುಶ್ರೂಷೆ ಮಾಡಿ, ಇನ್ನೊಂದು ಕಾಲು ಮುರಿದಾಗ ಅಸಡ್ಡೆ ಮಾಡಿದರೆ ಹೇಗೆ? ಮನುಷ್ಯ ಕುಂಟನಾಗೇ ಇರುತ್ತಾನಲ್ಲವೇ? ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವ ವಿಶ್ವಾಸವಿರುವವರು, ಎರಡನೇ ಪ್ರಶ್ನೆಯನ್ನೇಕೆ ಉತ್ತರಿಸದೆ ಬಿಟ್ಟಿರಿ? ಸಮಸ್ಯೆಗಳ ಮೂಲವಿರುವುದೇ ಅಲ್ಲಿ. ಸ್ವಾತಂತ್ರ್ಯ ಬಂದೊಡನೆ ಎಲ್ಲರನ್ನೂ ಒಂದೇ ಸಂವಿಧಾನದಡಿ, ಯಾವುದೇ ವಿಶೇಷ ಸವಲತ್ತುಗಳನ್ನು ನೀಡದೆ, ಒಂದೇ ದೇಶ, ಒಂದೇ ಕಾನೂನು ಎಂಬ ನೀತಿ ಜಾರಿಗೆ ಬಂದಿದ್ದಲ್ಲಿ, ಈ ಕೆಲಸಕ್ಕೆ ಬಾರದ ನಾನು-ನೀವುಗಳನ್ನು ಬಿಟ್ಟು ದೇಶ ಇನ್ನೂ ಎಷ್ಟೋ ಮುಂದುವರೆದಿರುತ್ತಿತ್ತು! ಹಾಡು ನಾನು ಕೇಳಿದಂತೆ: (ತಪ್ಪಿದ್ದರೆ ತಿದ್ದಿ) ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳನ್ನು ಬೆಳಗುವಾ ಬೆಳಕ|| ಕೊನೆಯದಾಗಿ, ಇಲ್ಲಿ ಎಷ್ಟೇ ಚರ್ಚಿಸಿದರೂ, ಯಾವುದೇ ಅಂಕಿ-ಅಂಶ-ಸಮಾಧಾನಗಳಿಂದಲೂ, ನಿಜಚಿತ್ರಣದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಮತ್ತವೇ ವಿಷಯಗಳನ್ನು ಕೆದಕುವುದರಿಂದ ಮನಸ್ಸುಗಳು ಹಾಳಾಗುತ್ತವೆಯಷ್ಟೇ. ಇನ್ಯಾವುದಾದರೂ constructive ವೇದಿಕೆಯಲ್ಲಿ ಸಿಗೋಣ. ನಮಸ್ಕಾರ.

<< ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವ ವಿಶ್ವಾಸವಿರುವವರು, ಎರಡನೇ ಪ್ರಶ್ನೆಯನ್ನೇಕೆ ಉತ್ತರಿಸದೆ ಬಿಟ್ಟಿರಿ? >> "ಸಮಾನತೆಯನ್ನು ಸಾರುವ ಧರ್ಮಕ್ಕೆ" ಬೇರೊಂದು ಸಮಾನ ನಾಗರಿಕ ಸಂಹಿತೆಯ ಅಗತ್ಯವಿಲ್ಲ ಎಂದು ಇರಬಹುದು. :)

ಇರಬಹುದೇನೋ ಇಂತದ್ದಕ್ಕೆಲ್ಲ ಉತ್ತರವೇ ಕೊಡೋದಿಲ್ಲ .. :) ತಮಗೆ ಸುಲಭ ಅನ್ನಿಸಿದ್ದಕ್ಕಷ್ಟೇ ಉತ್ತರ,ಉಳಿದಿದ್ದಕ್ಕೆ ನಿರುತ್ತರ!

http://sampada.net/a... ಅಬ್ದುಲ್ : ಖಂಡಿತ ಉತ್ತರಿಸಬಲ್ಲೆ ಭಾಸಿಪ್, ಪ್ರಶ್ನಿಸಿದಾಗಲೂ, ಉತ್ತರಿಸಿದಾಗಲೂ ಅಲ್ಲವೇ ಪೂರ್ವಾಗ್ರಹಪೀಡಿತ ವಿಚಾರಗಳ ಪರಿಚಯ ಆಗುವುದು? ಭಾಸ್ಕರ : ಪ್ರಶ್ನೆ ೧) http://www.indianexp... ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ" ಉತ್ತರ : ಇದಕ್ಕೂ ಇನ್ನೂ ಉತ್ತ್ರರ ಸಿಕ್ಕಿಲ್ಲ... ಇದು ನಡೆದದ್ದು ಫ಼ೆಬ್ರವರಿ ೯ ರಂದು.. ಇಂದಿಗೆ ೧೩ ದಿನ ಆಗಿದೆ

ಹೌದು. ಅದೇ ನೂಲಿನಲ್ಲಿ (ಥ್ರೆಡ್ನಲ್ಲಿ) ನನ್ನವೂ ಸಾಕಷ್ಟು ಪ್ರಶ್ನೆಗಳಿದ್ದವು. ಕೆಲವು ಸುಲಭ ಪ್ರಶ್ನೆಗಳಿಗೆ ಉತ್ತರಿಸಿ ಎಸ್ಕೇಪ್ ಆಗಿದ್ದರು ಅವರು. ಆ ಪ್ರಶ್ನೆಗಳು ಇಲ್ಲಿವೆ ನೋಡಿ. ಅಬ್ದುಲ್ ಅವರಿಗೆ ಉತ್ತರಿಸುವ ಮನಸ್ಸಿದ್ದರೆ ಈಗಲೂ ಉತ್ತರಿಸಬಹುದು. ಅಬ್ದುಲ್, ಈ ಎಲ್ಲ ಪ್ರಶ್ನೆಗಳು ನಿಮ್ಮನ್ನು ಗುರಿಯಾಗಿಸಿ ಕೇಳಿದ್ದು ಎಂದು ತಿಳಿದುಕೊಳ್ಳಬೇಡಿ. ಚರ್ಚೆಯ ಉದ್ದೇಶದಿಂದ ಕೇಳ್ತಾ ಇದ್ದೀನಿ. ಇದನ್ನು ಪರ್ಸನಲ್ ಆಗಿ ತೆಗೆದುಕೊಳ್ಳಬೇಡಿ. << ಲವ್ ಜಿಹಾದ್ ಸುಳ್ಳು, ಪೊಳ್ಳು ಎಂದು ಕೇರಳದ ಹೈ ಕೋರ್ಟ್ ಛೀಮಾರಿ ಹಾಕಿದೆ >> ಲಿಂಕ್ ಕಳಿಸ್ತೀರ ಸ್ವಲ್ಪ?? 6. ಮುಸ್ಲಿಮ್ ಬಾಹುಳ್ಯ ಜಾಗಗಳಲ್ಲಿ ಹಿಂದೂ ದೇವರ ವಿಗ್ರಹಗಳನ್ನು ಭಗ್ನಗೊಳಿಸುವ ನೀಚ ಕೆಲಸವನ್ನು (ಕೊಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ ಘಟನೆ) ಕೈ ಬಿಡುತ್ತಾರೆಯೇ? 7. ಲವ್ ಜಿಹಾದ್ ಅನ್ನು ನಿಲ್ಲಿಸುತ್ತಾರೆಯೇ? 8. ಮುಸ್ಲಿಮ್ ಬಾಹುಳ್ಯದ ದೇಶಗಳಲ್ಲಿ ಹಿಂದುಗಳ ಮತಾಂತರ ನಿಲ್ಲಿಸುತ್ತಾರೆಯೆ? << ಬೇರೆ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ಕಾಣಲಿಲ್ಲ ಏಕೆಂದರೆ ಅಂಥ ಘಟನೆಗಳು ಎಲ್ಲೂ ನಡೆದಿಲ್ಲ. >> http://hinduexistenc... ಘಟನೆಗಳ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು. ಹಾಗಂತ ಅದು ನಡೆದಿಲ್ಲ ಎಂದು ಹೇಗೆ ಹೇಳುತ್ತೀರಿ? "ಕಾಶ್ಮೀರದ ಪಂಡಿತರು ಬಿಟ್ಟು ಹೋದ ಮಂದಿರಗಳನ್ನು ಈಗಲೂ ಮುಸ್ಲಿಮರು ಕಾಯ್ದು ಕೊಂಡಿದ್ದಾರೆ ಎಂದು ಓದಿದ್ದೇನೆ. << ಒಪ್ಪುತ್ತೇನೆ. ನಿಜಕ್ಕೂ ಇದು ಹೊಸ ಬೆಳವಣಿಗೆ. ಅದಕ್ಕೇ ಹಿಂದು ಮುಸ್ಲಿಮ್ ಕಂದಕ ಒಂದು ದಿನ ಮಾಯವಾಭಉದು ಎಂಬ ನಂಬಿಕೆ ಇನ್ನೂ ಉಳಿದುಕೊಂಡಿದೆ ನನ್ನಲ್ಲಿ. ಹಾಗೆಯೇ ಮೊಹರಮ್ ನಲ್ಲಿ ಭಾಗವಹಿಸುವ ಹಿಂದೂಗಳು, ಅಯ್ಯಪ್ಪನ ಮಂದಿರ ಪ್ರವೇಶಿಸುವ ಮೊದಲು ಪಳ್ಳಿ (ಮಸೀದಿ) ಯಲ್ಲಿ ಪ್ರಾರ್ಥಿಸುವ ಹಿಂದೂಗಳು ಇದ್ದಾರೆ. ಹಾಗೆಂದು ಹಂಪಿ ಬಗ್ಗೆ ನಾನು ಹೇಳುತ್ತಿರುವುದು ಸುಳ್ಳಲ್ಲ. ಇದರ ಬಗ್ಗೆ ಸಂಶೋಧಕ ಚಿದಾನಂದ ಮೂರ್ತಿಯವರು ಸಾಕಷ್ಟು ಅಧಧ್ಯಯನ ಮಾಡಿ ಒಂದು ಕೈಪಿಡಿಯನ್ನೂ ಹೊರತಂದಿದ್ದರು. ಅದನ್ನು ಓದಿದ್ದೇನೆ ನಾನು. ಅದರಲ್ಲಿ ಆಧಾರ ಸಹಿತ ತೋರಿಸಲಾಗಿದೆ. ನಿಮಗೆ ಬೇಕಿದ್ದರೆ ಅಂತರ್ಜಾಲ ಲಿಂಕ್ ಹುಡುಕಿ ಕಳಿಸುವೆ. " "ಇನ್ನು ನೀವು ಕೊಟ್ಟ ರಿಜ್ವಾನೂರ್ ಪ್ರಕರಣ. ಅದೃಷ್ಟ(?)ವಶಾತ್ ಇದು ನನ್ನ ವಾದವನ್ನೇ ಸಮರ್ಥಿಸುತ್ತದೆ. ರಿಜ್ವಾನೂರ್ ಪ್ರಕರಣ ಸಮಯದಲ್ಲಿ ಪ್ರತಿಯೊಂದು ಬೆಳವಣಿಗೆಯನ್ನೂ ಗಮನಿಸಿದ್ದೇನೆ ನಾನು. ಈ ರಿಜ್ವಾನೂರ್ ಹಿಂದೂ ಹುಡುಗಿಯನ್ನು ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರ ಆಗಲು ಪ್ರಯತ್ನಿಸಿದ್ದ. ಅದಕ್ಕೇ ಆತನನ್ನು ಕೊಲ್ಲಲಾಯಿತು! ಅದೇ ಹುಡುಗಿ ಇಸ್ಲಾಮಿಗೆ ಮತಾಂತರವಾಗಿದ್ದರೆ ಏನೂ ಆಗುತ್ತಿರಲಿಲ್ಲ. ಮೊನ್ನೆ ತಾನೆ ಶಿಮೊಗ್ಗದಲ್ಲಿ ಅಶ್ವಿನಿ ಎಂಬ ಹುಡಗಿ ಮುಸ್ಲಿಮ್ ಹುಡುಗನೊಬ್ಬನನ್ನು ಮದುವೆಯಾಗಿ ಇಸ್ಲಾಮಿಗೆ ಮತಾಂತರವಾಗಿದ್ದಳು. ಆ ಹುಡುಗನಿಗೆ ಏನೂ ಆಗಿಲ್ಲ!!! ರಿಜ್ವಾನೂರ್ ಪ್ರಕರಣ ಒಂದಲ್ಲ. ಬೇಕಾದಷ್ಟಿವೆ. ಎರಡು ಉದಾಹರಣೆ ಕೆಳಗೆ ಕೊಟ್ಟಿದೀನಿ ನೋಡಿ : http://hindufocus.wo... http://www.hindujagr... "

ಇಲ್ಲಿ ಒಂದು ವಿಷಯ ಮರೆತಂತಿದೆ... ಭಾರತದಲ್ಲಿ ಎಷ್ಟೋ ವರ್ಷಗಳಿಂದ ಪರಕೀಯರ ದಬ್ಬಾಳಿಕೆಯನ್ನು ಸಹಿಸಿದ್ದಾರೆ. ಈಗಲೂ... ಹಿಂದೂ ಭಯೋತ್ಪಾದನೆ, ಇತರೆ ಧರ್ಮಗಳ ದಮನ ಮಾಡುವ ಪ್ರಯತ್ನ ಇತ್ಯಾದಿಗಳಿಗೆ ಎಷ್ಟು ಇತಿಹಾಸವಿದೆ, ಉದಾಹರಣೆಯಿದೆ? ವಸ್ತುನಿಷ್ಠವಾಗಿ ಉತ್ತರಿಸಿ. ಅದನ್ನೇ ಘಸ್ನಿಯ ಕಾಲದಿಂದಲೂ ಅಥವಾ ಇನ್ನೂ ಮೊದಲೇ ನೋಡಿದರೂ ಎಲ್ಲ ಕಾಲದಲ್ಲಿಯೂ ಇತರ ಧರ್ಮಗಳ ಮೇಲೆ ಧಾಳಿ, ಇತರೆ ಧರ್ಮೀಯರ ಮೇಲೆ ಅತ್ಯಾಚಾರ-ಕೊಲೆ, ದೇಗುಲಗಳ ನಾಶ, ಸ್ಥಳ ಅತಿಕ್ರಮಣ ಇತ್ಯಾದಿ ಇತ್ಯಾದಿ ಇತ್ಯಾದಿ....ಅಂದಿನಿಂದ ಇಂದಿನವರೆಗೂ.... ಈಗಲೂ ಎಷ್ಟೋ ಇಸ್ಲಾಂ ದೇಶಗಳಲ್ಲಿ ಇರುವ ಹಿಂದುಗಳಿಗೆ ಅವರ ದೇವರನ್ನು ಪೂಜಿಸುವ ಅವಕಾಶವಿಲ್ಲ...ಸುಳ್ಳೇ? ಅದೇ ಭಾರತದಲ್ಲಿ ಎಲ್ಲ ವಿಶೇಷ ಸವಲತ್ತು... ಯಾರು ಹೆಚ್ಚು ಸಹಿಷ್ಣುಗಳು? ಯಾರಿಗೆ ಪಾಠ ಹೇಳಬೇಕಾದದ್ದು? ಅವರಿಗೆ ಪಾಠ ಹೇಳುವ ಧೈರ್ಯವಿದೆಯೆ? ಇತಿಹಾಸದಲ್ಲಿ ಎಷ್ಟು ಹಿಂದೂ ಭಯೋತ್ಪಾದನೆ, ಧರ್ಮಗಳ ತುಳಿತ ಇತ್ಯಾದಿ ಸಿಗುತ್ತದೆ (ತಿಳಿದವರು ಹೇಳಿ, ಕಲಿಯುತ್ತೇನೆ)? ಅವೆಲ್ಲ ಆರಂಭವಾದದ್ದು ಇತ್ತೀಚಿಗೆ ಅಲ್ಲವೇ? ಅದೂ ಶತಮಾನಗಳಿಂದ ಸಹಿಸಿ ಸಹಿಸಿ ತಾಳ್ಮೆ ಕಟ್ಟೆ ಒಡೆದು, ಸ್ವರಕ್ಷಣೆಗಾಗಿ ಅಲ್ಲವೇ? ಯಾವುದೋ ಒಂದು ಎರಡು ಗೋಧ್ರಾ, ಅಯೋಧ್ಯೆಗಳನ್ನು ಹಿಡಿದು ಮಾನವ ಹಕ್ಕಿನ ಬಗ್ಗೆ ಮಾತಾಡುವವರಿಗೆ ಇಷ್ಟೊಂದು ವರ್ಷಗಳ ಕಾಲ ಅತ್ಯಾಚಾರ ಮಾಡಿದವರು, ದಮನಕ್ಕೊಳಗಾದವರು ಎಲ್ಲ ಲೆಕ್ಕಕ್ಕೆ ಇಲ್ಲವೇ? ಎಲ್ಲ ಗೋರಿಗಳ ಕೆಳಗೂ ದೇಗುಲಗಳ ಕಣ್ಣೀರು ಕಾಣುವುದಿಲ್ಲವೇ...? ಒಂದು ಗುಂಪಿನಲ್ಲಿ ದಡ್ದರಿದ್ದಾರೆ ಎಂದರೆ ಅದರಲ್ಲಿ ಎಲ್ಲರೂ ದಡ್ಡರು ಅಂತಲ್ಲ. ಹಾಗೆಯೇ ಒಂದು ಗುಂಪಿನಲ್ಲಿ ೯೫% ದಡ್ದರಿದ್ದಾಗ ಇನ್ನೊಂದು ಗುಂಪಿನ ೧೦% ದಡ್ಡರನ್ನು ತೋರಿಸಿ ಎರಡು ಗುಂಪುಗಳೂ ಒಂದೇ ಎನ್ನುವುದೂ ದಡ್ಡತನವೇ (ಅಥ್ವಾ ಅತಿ ಬುದ್ಧಿವಂತಿಕೆ)...!!!

<< ಒಂದು ಗುಂಪಿನಲ್ಲಿ ದಡ್ದರಿದ್ದಾರೆ ಎಂದರೆ ಅದರಲ್ಲಿ ಎಲ್ಲರೂ ದಡ್ಡರು ಅಂತಲ್ಲ. ಹಾಗೆಯೇ ಒಂದು ಗುಂಪಿನಲ್ಲಿ ೯೫% ದಡ್ದರಿದ್ದಾಗ ಇನ್ನೊಂದು ಗುಂಪಿನ ೧೦% ದಡ್ಡರನ್ನು ತೋರಿಸಿ ಎರಡು ಗುಂಪುಗಳೂ ಒಂದೇ ಎನ್ನುವುದೂ ದಡ್ಡತನವೇ >> ಸಮಾನತೆಯನ್ನು ಸಾರುವ ಧರ್ಮ ಇಂಥ ವಿಷಯಗಳಲ್ಲೂ ಸಮಾನತೆಯನ್ನು ಬಯಸುತ್ತಿರಬಹುದು.

ಅಬ್ದುಲ್...ಇದೆಲ್ಲ ನಿಮ್ಮ ಮೇಲೆ ಹೊರಿಸುವ ಆರೋಪಗಳೆಂದು ಅನಿಸಿದರೆ ತಿಳಿಸಿ... ನೀವು ಒಳ್ಳೆಯದಾಗಬೇಕೆಂಬ ಆಸೆಯಿಂದ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದೀರಿ, ಸಂತೋಷವಾಗಿದೆ. ಹೀಗೆ ಚರ್ಚೆಗೆ ತೆರೆದುಕೊಂಡು ತಪ್ಪುಗಳನ್ನು ಅರಿಯುವ ಪ್ರಯತ್ನದಲ್ಲಿ ಎಲ್ಲರಿಗೂ ಮನಸ್ಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ... :) ಆದರೆ ಎಲ್ಲರನ್ನೂ ಹಾಗೆ ಮಾಡುವರೆಂದು ಬಯಸುವುದು ಅಸಹಜ...so the problem persists... :( ಇದು ಖಂಡಿತವಾಗಿಯೂ ಯಾವುದೇ ವ್ಯಕ್ತಿಯ, ಧರ್ಮದ ಅಥ್ವಾ ನಂಬಿಕೆಗಳ ಮೇಲೆ ಧಾಳಿಯಲ್ಲ. ಆದರೆ ಕೆಲವರ, ಕೆಲವು ನಂಬಿಕೆಗಳು ಬೇರೆಯವರ ಜೀವ-ಜೀವನಕ್ಕೆ ತೊಂದರೆ ಮಾಡುವಾಗ ಅದರ ವಿರುದ್ಧ ಧ್ವನಿಗಳು ಏಳುತ್ತವೆ ಅಷ್ಟೇ.

ಚೆನ್ನಾಗಿ ಕೇಳಿದ್ದೀರಿ. ನನಗೂ ಹಳೆಯದನ್ನು ಕೆದಕಲು ಇಷ್ಟವಿಲ್ಲ. ಆದರೆ ಕೆಲವರು ಹಳೆ ಚಾಳಿಯನ್ನು ಬಿಡಲು ತಯಾರಿಲ್ಲದಿರುವಾಗ ನನಗೆ ರೋಸಿ ಹೋಗುತ್ತದೆ. ನಾನು ಒಬ್ಬ ಹಿಂದುವಾಗಿ ಜಾತಿ ಪಧ್ಧತಿಯನ್ನು ಒಪ್ಪುವುದಿಲ್ಲ. ಈಗಂತೂ ಮೂರ್ತಿಪೂಜೆಯನ್ನೇ ಪ್ರಶ್ನಿಸುವ ಹಂತಕ್ಕೆ ಬಂದಿದ್ದೇನೆ. ಆದರೂ ನಾನು ನಿಮ್ಮಂತೆ ನಾಸ್ತಿಕಳಲ್ಲ (quote:"ಮಂದಿರಗಳನ್ನೇ ನಂಬದವಳಿಗೆ"), ಅದು ಬೇರೆ ವಿಷಯ. ಹೀಗಿರಲು ಇನ್ನೊಬ್ಬರೂ ತಮ್ಮ ನಂಬಿಕೆಗಳನ್ನು ಪ್ರಶ್ನಿಸಿಕೊಳ್ಳಬೇಕೆಂದು ಬಯಸುವುದು ತಪ್ಪಾ? ಅದರಲ್ಲೂ ಇತರರಿಗೆ ನೋವುಂಟುಮಾಡುವ ನಂಬಿಕೆಗಳನ್ನು (ಕಾಫಿರ ಜಿಹಾದ್ ಇತ್ಯಾದಿ ಕಾನ್ಸೆಪ್ಟುಗಳು) ಅವರು ಪ್ರಶ್ನಿಸಿಕೊಳ್ಳಬೇಕೆನ್ನುವುದು ತಪ್ಪೇ?

ಒಂದೇ ಪದದಲ್ಲಿ ಹೇಳುವದಾದರೆ crap! ಪ್ರತಿಯೊಬ್ಬರೂ ತಮ್ಮ individual ಹೋರಾಟ ಮಾಡುತ್ತಿದ್ದಾರೆ, ನಂಬಿಕೆಗಳು clash ಆದಾಗ ಯಾರು ಉಳಿದುಕೊಳ್ಳುತ್ತಾರೋ ಅವರು ಸರಿ! ಮೇಲೆ ಎಗರಿ ಕೊಲ್ಲ ಹೋದರೆ ಅದು ದುರಾಕ್ರಮಣ, ಕೊಲ್ಲದಿದ್ದರೆ ಆತ ಕೊಲ್ಲುವನೆಂಬ ಸತ್ಯ ತಿಳಿದು ಕೊಂದರೆ ಅದು ಆತ್ಮರಕ್ಷಣೆ ಮಾತ್ರ!

ಪ್ರಿಯ ಅಬ್ದುಲ್ ಅವರೇ, ಸಂಪದದಲ್ಲಿ ಬೇಕೆಂದೇ ಕಂದಕ ತೋಡುವ ಕೆಲಸ ಯಾರೂ ಮಾಡುತ್ತಿಲ್ಲ ಎನ್ನುವುದು ನನ್ನ ನಂಬಿಕೆ. ನಾನು ಎಲ್ಲ ಚರ್ಚೆಗಳನ್ನೂ ಸೂಕ್ಷ್ಮವಾಗಿ ಗಮನಿಸಿಲ್ಲವಾದರೂ, ನಿಮ್ಮನ್ನು ವೈಯುಕ್ತಿಕವಾಗಿ ಯಾರೂ fanatic ಎಂದು ಭಾವಿಸಿಲ್ಲ ಎಂದು ನನಗನ್ನಿಸುತ್ತದೆ. ಸುಮ್ಮನೆ ಮನ ನೋಯಿಸಿಕೊಳ್ಳಬೇಡಿ. <<ಸುಂದರ ನಾಡೊಂದನ್ನು ಕಟ್ಟೋಣ.>> ಖಂಡಿತ, ನಾನೇನು ಮಾಡಬಹುದು ತಿಳಿಸಿ. :-)

ಮೈ ನೇಮ್ ಇಸ್ ಅಬ್ದುಲ್ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕುತ್ತಿದೆ. ನಾನಂತೂ ಯಾವುದೇ ಪ್ರತಿಕ್ರಿಯೆಗಳನ್ನು ವೈಯಕ್ತಿವಾಗಿ ತೆಗೆದುಕೊಳ್ಳುತ್ತಿಲ್ಲ, ಮೇಲಾಗಿ ಸಂಪದಿಗರಾರೂ ನನ್ನನ್ನು ದೂಷಿಸಿಯೂ ಇಲ್ಲ. ಸಂವಾದ ಎಷ್ಟಿದ್ದರೂ ಅದು ಒಳ್ಳೆಯದೇ, ಇಲ್ಲದಿದ್ದರೆ "the others" ಇದೇ ರೀತಿ ಎಂದು ಸಾರಾಸಗಟಾಗಿ ನಾವು ಅವಗಣಿಸಿದರೆ ದೇಶಕ್ಕೆ ನಷ್ಟವೇ ಹೊರತು ಲಾಭವಲ್ಲ. ಮೈ ನೆಮ್...... ಈ ಶೀರ್ಷಿಕೆ ನಾನು humourous ಆಗಿ ಕೊಟ್ಟಿದ್ದಷ್ಟೇ, ಯಾರೂ ನನ್ನನ್ನು ನೀನು ಯಾರು ಎಂದು ಪುರಾವೆ ಕೇಳಿಲ್ಲ. ಸಂಪದಿಗರು ಸನ್ಮನಸ್ಸಿನವರು, ಚರ್ಚೆಯಲ್ಲಿ ನಿಷ್ಟುರತೆ ಬೇಕು ಅದಿಲ್ಲದಿದ್ದರೆ ನಾನು ಹಿಂದೆ ಹೇಳಿದ ಹಾಗೆ i scratch your back, ypu scratch my back ಎಂದು ಬರೀ niceties ಗಳಲ್ಲಿ ಕೊನೆಗೊಳ್ಳುತ್ತದೆ ಚರ್ಚೆ. Vinutha: common civil code ಒಂದು ದೊಡ್ಡ ವಿಷಯ. ಈ ಚರ್ಚೆಯಲ್ಲಿ ಅದರ ಬಗ್ಗೆ ಮಾತನಾಡಲಾಗುವುದಿಲ್ಲ. ಭಾರತದ ಸಂವಿಧಾನ ರಚಿಸುವ ವೇಳೆಯೇ ಇದರ ಬಗ್ಗೆ ಚರ್ಚಿಸಿ ದೃಢ ನಿರ್ಧಾರ ತೆಗೆದುಕೊಂಡಿದ್ದಿದ್ದರೆ ಈ ಪ್ರಶ್ನೆ ಇಂದು ಉಳಿಯುತ್ತಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಬಗ್ಗೆ ಬ್ರಿಟಿಶ್ ಸಂಸತ್ತಿನಲ್ಲಿ ಚರ್ಚೆ ಬಂದಾಗ ಆಗಿನ ವಿರೋಧ ಪಕ್ಷದ ನಾಯಕ, ಎರಡನೇ ವಿಶ್ವ ಯುದ್ಧದ ಹೀರೋ ವಿನ್ಸ್ಟನ್ ಚರ್ಚಿಲ್ ಪ್ರಧಾನಿ ಅಟ್ಲೀ ಯವರನ್ನು ಉದ್ದೇಶಿಸಿ ಹೇಳಿದ್ದು, ಭಾರತ ತನ್ನನ್ನು ತಾನು ಆಳಿಕೊಳ್ಳಲು ನಾಲಾಯಕ್ಕು, ಸ್ವಾತಂತ್ರ್ಯ ಕೊಡಬಾರದು ಎಂದು. ಸ್ವಾತಂತ್ರ್ಯ ಸಿಕ್ಕ ಕೂಡಲೇ ಮತೀಯವಾದ, ಏಕ ರೂಪ ಸಂಹಿತೆ ಇಂಥ ವಿಷಯಗಳ ಬಗ್ಗೆ ನಮ್ಮ founding fathers ದೃಢತೆ ತೋರಬೇಕಿತ್ತು. turkey, egypt ದೇಶದಲ್ಲಿ ಶರಿಯತ್ ಕಾನೂನಿಲ್ಲ. ಮುಸ್ಲಿಂ ನಾಯಕರನ್ನು ಒಲಿಸಿಕೊಂಡು (ಕಿರುಚಾಡಿ, ಬೆದರಿಕೆ ಹಾಕದೆ) ಮಾತನಾಡಿದರೆ ಸಮಸ್ಯೆಗೆ ಪರಿಹಾರ ಸಿಗಬಹುದು. ಭಾಸಿಪ್ ಅವರು ಸೆರೆಮನೆಯಲ್ಲಿ ಮುಸ್ಲಿಮರ ಅಂಕಿ ಅಂಶ ಕೇಳಿದ್ದಾರೆ. ಛಾಪಾ ಕಾಗದ ಹಗರಣದ "ತೆಲ್ಗಿ" ಜೊತೆ ಸಾವಿರಾರು ಜನ (ಜನ ಎಂದಾಗ ಅವರು ಯಾರು ಎಂದು ಸರಿಯಾಗೇ ಊಹಿಸಿದಿರಿ) ಕೋಟಿಗಟ್ಟಲೆ ಹಣ ಸಂಪಾದಿಸಿದರು. ಕಂಬಿ ಕಂಡಿದ್ದು ತೆಲಗಿ ಮಾತ್ರ, ಬಾಕಿ ಮಂದಿ ಸಭ್ಯಸ್ಥರಾಗಿ ದೊಡ್ಡ ದೊಡ್ಡ ಕಾರುಗಳಲ್ಲಿ ಸನ್ಮಾನಿತರಾಗಿ ಓಡಾಡುತ್ತಿದ್ದಾರೆ. ಕಾರಣ ಸಿಕ್ಕಿತೇ ಭಾಸಿಪ್ ಅವರೇ? ಕೆಲವೊಮ್ಮೆ ಕೆಲಸ ಒತ್ತಡದ ಕಾರಣ (ಭಾರತಕ್ಕೆ ಬರುವ ನಿರ್ಧಾರದ ಕಾರಣ) ಪ್ರತಿಕ್ರಿಯೆ ನಿಧಾನ, ಅದರ ಅರ್ಥ ಗಲಾಟೆ ನೋಡಿ ಊರು ಬಿಟ್ಟೆ ಎಂದಲ್ಲ.

:) ಕಂದಕ ಸ್ವಲ್ಪ ಮುಚ್ಚಿದಂತೆ ಕಂಡಿತು.. :) ಸ್ವಾತಂತ್ರ ಬಂದ ಸಮಯದಲ್ಲಿ ಬಹಳಷ್ಟು ತಪ್ಪುಗಳಾಗಿವೆ. ಅದನ್ನು ತಪ್ಪು ಎಂದು ಹೇಳುವುದಕ್ಕಿಂತ ಅಸಹಾಯಕತೆ ಎಂದು ಹೇಳಬಹುದೇನೋ? ಮನೆಯಲ್ಲಿ ನಮ್ಮ್ ಹಿರಿಯರನ್ನು ತಪ್ಪು ಮಾಡಿದಿರೆಂದು ಹೇಳುವುದು ರೂಢಿ. ಆದರೆ ಅವರು ಯಾವ ಸಂದರ್ಭದಲ್ಲಿ ತಪ್ಪು ಮಾಡಿದ್ದರೋ ಯಾರಿಗೆ ಗೊತ್ತು? ಹಾಗೆಯೇ ಗಾಂಧಿ, ಅಂಬೇಡ್ಕರರು ಯವರು ತಮ್ಮ ಕೈಲಾದ (ಅಥವಾ ಅದಕ್ಕಿಂತಲೂ ಮಿಗಿಲಾದ) ಕೊಡುಗೆಯನ್ನು ನೀಡಿದ್ದಾರೆ. ಅದರ ಕುಂದು ಕೊರತೆಗಳನ್ನು ಒಪ್ಪಿಕೊಂಡೂ ಅವರಿಗೆ ಸಲ್ಲಬೇಕಾದ ಗೌರವಗಳನ್ನು ಕೊಡಬಹುದು. ನಮ್ಮ generation ಆ ತಪ್ಪುಗಳನ್ನು ಸರಿಪಡಿಸಿಕೊಂಡು ನಡೆದರೆ ಎಲ್ಲರೂ ಚೆನ್ನಾಗಿರಬಹುದು ಎನಿಸುತ್ತದೆ.

ಭಾಸಿಪ್ ಅವರು ಸೆರೆಮನೆಯಲ್ಲಿ ಮುಸ್ಲಿಮರ ಅಂಕಿ ಅಂಶ ಕೇಳಿದ್ದಾರೆ. ಛಾಪಾ ಕಾಗದ ಹಗರಣದ "ತೆಲ್ಗಿ" ಜೊತೆ ಸಾವಿರಾರು ಜನ (ಜನ ಎಂದಾಗ ಅವರು ಯಾರು ಎಂದು ಸರಿಯಾಗೇ ಊಹಿಸಿದಿರಿ) ಕೋಟಿಗಟ್ಟಲೆ ಹಣ ಸಂಪಾದಿಸಿದರು. ಕಂಬಿ ಕಂಡಿದ್ದು ತೆಲಗಿ ಮಾತ್ರ, >.> ರಾತ್ರಿ ಜೋಕ್ ಗೆ ಧನ್ಯವಾದ .. ತೇಲಗಿ ಸಂಭಂಧಿಗಳು, ಸ್ನೇಹಿತರು, ಬಂಧು ಬಾಂಧವರು ನಿವು ಹೇಳಿದ "ಜನ" ಸಾಲಿಗೆ ಸೇರುತ್ತಾರೆ. ದೇಶದಲ್ಲಿ ನಡೆದ ಎಷ್ಟೋ ಕೃತ್ಯಗಳಿಗೆ ಕೆಲವೆ ಕೆಲವು ಜನ ಶಿಕ್ಷೆ ಅನುಭವಿಸುತ್ತಿದ್ದಾರೆ.. ಇದು ಹಾಗೆಯೆ ತಾನೆ... ನಾನು ಕೊಟ್ಟ ಅಂಕಿಅಂಶಗಳ ಕೇಸುಗಳಲ್ಲೇ ಎಷ್ಟೊ ನೂರು ಜನ ತೇಲಗಿ ಕೇಸ್ ನಂತೆ ತಪ್ಪಿಸಿಕೊಂಡಿದ್ದರೆ? ಇನ್ನು ನೀವು ಹೇಳಿದ ಹಾಗೆ ಕಾರ್ ಗಳಲಿ ಸಲ್ಮಾನ್ ಖಾನ್ , ಸೈಫ್ ಅಲಿ ಖಾನ್ ಕೂಡ ಓಡಾಡುತ್ತಿದ್ದಾರೆ ಅನ್ನೋದನ್ನ ಮರೆತಿರುವ ಹಾಗಿದೆ. ಹಾಗೆ ತೆಗೆದುಕೊಂಡರೆ ಪಾರ್ಲಿಮೆಂಟ್ ಮೇಲಿನ ದಾಳಿಯಲ್ಲಿ ಶಿಕ್ಶೆ ಆಗಿದೆಯೆ? ಅಫ್ಜಲ್ ಗುರು ಆರಮವಾಗಿ ಜೈಲಿನಲ್ಲಿ ಪುಕ್ಕಟ್ಟೆ ಊಟ ಮಾಡುತ್ತಿಲ್ಲವೆ, ಕಸಬ್ ಗೆ ಶಿಕ್ಷೆ ಆಗದೆ ಅವನ ಸೆಕ್ಯುರಿಟಿಗೆ ಎಶ್ಜ್ಟು ತೆರಿಗೆದಾರರ ಹಣ ಪೋಲಾಗುತ್ತಿಲ್ಲವೆ?

ಅಬ್ದುಲ್ ಅವರ ಬರಹ ಝಾಕಿರ್ ನಾಯ್ಕನ ಭಾಷಣದಂತಿದೆ!..ಆ ಮನುಷ್ಯ ಕೂಡ 'hindu brothers' ಅಂತಾ ಮಾತು ಮಾತಿಗೆ ಹೇಳ್ತಾ ತನ್ನ ಧರ್ಮವನ್ನು ಎಗ್ಗಿಲ್ಲದೆ ಸಮರ್ಥಿಸ್ತಾ, ಉಳಿದ ಧರ್ಮಾನ ನಾಜೂಕಾಗಿ ಉಗಿತಾನೆ. ಇದನ್ನು ಓದಿದರೆ ಕಂದಕ ಮುಚ್ಚುತ್ತಿದ್ದಾರೊ ಇಲ್ಲಾ ಇನ್ನೂ ತೋಡುತ್ತಿದ್ದಾರೊ ಅನ್ನೊ ಅನುಮಾನ ಬರೊ ಹಾಗಿದೆ. ಇದು ಕೂಡಾ ಒಂಥರಾ softcore fanaticism ಆ?? ಅಲ್ರಿ ಅಬ್ದುಲ್, ಅದ್ಯಾಗ್ರಿ ಖಿಲ್ಜಿ, ಘಜ್ನಿಗಳ ಧಾಳಿ ಮತ್ತು ಕಾಶ್ಮಿರಿ ಪಂಡಿತರ ಗೋಳು ಒಂದೆ ಆಗುತ್ತೆ? ಕಾಶ್ಮಿರಿ ಪಂಡಿತರ ಸಮಸ್ಯೆ ವರ್ತಮಾನ, ಪ್ರಚಲಿತ. ಅಂತಹ ಗಂಬೀರ ಸಮಸ್ಯೆಯನ್ನು ಆಗಿಹೋದ ಅಥವಾ ದಿನನಿತ್ಯದ 'ಗೋಳು' ಎಂಬಂತೆ ಬಿಂಬಿಸುತ್ತಿದ್ದಿರಲ್ಲಾ ನೀವು! ನಿಮ್ಮ ಲೇಖನವು ಸಾಕಷ್ಟು ವಿರೋಧಾಭಾಸಗಳಿಂದ ತುಂಬಿದೆ. ನಿಮ್ಮ ಧರ್ಮದವರ ಹಿಂಸೆ ತೋರಿಸುವ ಇತಿಹಾಸದ/ವರ್ತಮಾನದ ಅಧ್ಯಾಯಗಳನ್ನು ಮರೆಯಲು ಹೇಳುವ ಮತ್ತು ಅದರಾಚೆಗಿನ ಜಗತ್ತನ್ನು ನೋಡಲು ಭೋದಿಸುವ ನೀವು, ಇಸ್ಲಾಂನ ಶಾಂತಿಪ್ರೀಯತೆಯನ್ನು ಪ್ರತಿಪಾದಿಸಲು ಯೇಸುಕ್ರೀಸ್ತನ ಕಾಲಕ್ಕೆ ಹೋಗುತ್ತಿರಿ!!..ಶಾಂತಿಪ್ರೀಯತೆಗೆ ವರ್ತಮಾನದ ಯಾವುದೆ ಉದಾಹರಣೆ ಸಿಗಲಿಲ್ಲವೆ? ಅಂದರೆ ಇತಿಹಾಸ ಉಪಯೋಗಿಸುವುದು ನಮ್ಮ ಅನುಕೂಲಕ್ಕೆ ತಕ್ಕಂತೆ ಅಂದ ಹಾಗಾಯಿತು!. 'ಭಯೋತ್ಪಾದಕರು ಎಲ್ಲ ಧರ್ಮಗಳಲ್ಲಿಯೂ ಇರುತ್ತಾರೆ' ಹೇಮಂತ್ ಕರ್ಕರೆ ಈ ಮಾತು ಹೇಳಿದ್ದು ಜಲಗಾಂವ್ ವಿಷಯದಲ್ಲಿ. ಈ ಉಲ್ಲೇಖ ಇನ್ನು ಮುಂದಿನ ೨೫ ವರ್ಷಗಳಿಗೂ ಉಪಯೋಗವಾಗುತ್ತೆ..ಮುಸ್ಲಿಂರೊಬ್ಬರೆ ಭಯೊತ್ಪಾದಕರಲ್ಲ ಎಂದು ಸಮರ್ಥಿಸಲು!..ಜಗತ್ತಿನ ಹತ್ತು ಭಯೋತ್ಪಾದಕ ಕ್ರತ್ಯಗಳಲ್ಲಿ ಎಂಟು ಮುಸ್ಲಿಂರದೇ ಆಗಿದ್ರೂ ಕೂಡ!!. ಮಾತೆತ್ತಿದ್ರೆ ಮೂರೆ ವಿಷಯ..ಬಾಬ್ರಿ ಮಸಿದಿ, ಗೋಧ್ರಾ ಮತ್ತು ಜಲಗಾಂವ. ಅದರ ನಂತರ ನಡೆದ ಉಳಿದೆಲ್ಲ ಕ್ರತ್ಯಗಳಿಗೆ 'ಭಯೋತ್ಪಾದಕರು ಎಲ್ಲ ಧರ್ಮಗಳಲ್ಲಿಯೂ ಇರುತ್ತಾರೆ' ಎಂಬ ಸಮರ್ಥನೆ. ಅಬ್ದುಲ್, ನೀವೇ ಪಟ್ಟಿ ಮಾಡಿ, ನೀವು ಕೇಳಿದ/ಓದಿದ ಬಾಂಬು ಸ್ಪೋಟಿಸಿ ಹತ್ಯೆ ಮಾಡಿದ ಹಿಂದೂ ಭಯೋತ್ಪಾದಕ ಕ್ರತ್ಯಗಳೆಷ್ಟೆಂದು..ನಿಮ್ಮ ಲೀಸ್ಟಿಗೆ ಎರಡನ್ನು ನಾನು ಕೋಡುತ್ತೇನೆ..೧)ಜಲಗಾಂವ ೨)ಮಡಗಾಂವ. ಈ ವಿಷಯದಲ್ಲಿ ನೀವು cut and paste ಮಾಡಬೇಕಾಗಿಲ್ಲ..ಲೀಸ್ಟ ದೊಡ್ಡದಾಗಲ್ಲ. ಹಿಂದುವೊಬ್ಬ ತನ್ನ ಸಮಸ್ಯೆ ಹೇಳಿಕೊಂಡರೆ ನಿಮಗೆ ಅದು ಪ್ರಲಾಪ, ಗೋಳು ಅನ್ನಿಸತ್ತೆ..ನಮ್ಮ ಬಲಪಂಥಿಯ ಜಾತ್ಯತೀತವಾದಿಗಳಿಗೆ ಅನ್ನಿಸಿದ ಹಾಗೆ!..ಹುಸೇನ ಮೇಲೆ ಪ್ರತಿಭಟನೆ ಮಾಡಿದ್ರೆ ಅಭಿವ್ಯಕ್ತಿಸ್ವಾತಂತ್ರ್ಯಕ್ಕೆ ಅಡ್ಡಿ ಅಂತಾರೆ, ತಸ್ಲಿಮಾ,ರಷ್ದಿ,ಡೆನ್ಮಾರ್ಕ ವ್ಯಂಗ್ಯಚಿತ್ರಕಾರನ ವಿಷಯದಲ್ಲಿ ಜಾಣಮರೆವು ತೋರಿಸ್ತಾರೆ. ಅಬ್ದುಲ್, ತಪ್ಪುಗಳನ್ನು ಸಮರ್ಥಿಸುವ ಹಂಗಿಗೆ ಬೀಳಬೇಡಿ..ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಇನ್ನೊಬ್ಬರ ತಟ್ಟೆಯಲ್ಲಿರುವ ನೊಣದ ಬಗ್ಗೆ ಮಾತನಾಡುವುದು ಜಾಣತನವಾಗಲಾರದು.

ಮಂಗಳವಾರ ಶುರುವಾಯ್ತು (1136 ಹಿಟ್ಸ್ ಆಗಿದೆ), ನಿಮ್ದು ಒಂದ್ ಇರ್ಲಿ ಪ್ರಯತ್ನ. ಲೇಖಕ್ರ ಬಳಿ, ವಾರಾಂತ್ಯದ ಒಳಗೆ ನೀವು ಒಂದೆರ್ಡು ದೇಸ ಭಕ್ತಿ ವಾಕ್ಯಗಳನ್ನು ಹೇಳ್ಸಿ, ನಿಮ್ಗು ಖುಷಿಯಾಗ್ಲಿ ;) . ಇದ್ರ ಮಧ್ಯೆ, ಮ.ಅ.ಮೂ(ಮರಿ ಅನಂತ ಮೂರ್ತಿ), ನಿಮ್ ಜಾತಿ, ಯಾವ್ ಪಕ್ಸಕ್ಕೆ ಓಟ್ ಹಾಕ್ತಿರ, ಮತ, ಉಪಜಾತಿ, ಕುಟುಂಬದ ವರಮಾನ, ವೃತ್ತಿ ಇತ್ಯಾದಿ ಪ್ರಶ್ನೆ ಕೇಳ್ಬೋದು, ಅದಕ್ಕೂ ಉತ್ತರ್ಸಿ ಜೀವನ ಪಾವನ ಮಾಡ್ಕಳಿ

"ಅಬ್ದುಲ್, ತಪ್ಪುಗಳನ್ನು ಸಮರ್ಥಿಸುವ ಹಂಗಿಗೆ ಬೀಳಬೇಡಿ..ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಇನ್ನೊಬ್ಬರ ತಟ್ಟೆಯಲ್ಲಿರುವ ನೊಣದ ಬಗ್ಗೆ ಮಾತನಾಡುವುದು ಜಾಣತನವಾಗಲಾರದು. " >> ಇಲ್ಲಿ ನೊಣವೂ ಅಲ್ಲ,,, ಸೂಕ್ಷ್ಮದರ್ಶಕ ಇಟ್ಟು ಬ್ಯಾಕ್ಟೀರಿಯ ಹುಡುಕಿ ತೋರಿಸಲು ಹೊರಟ ಹಾಗಿದೆ.

'ಬಲಪಂಥಿಯ ಜಾತ್ಯತೀತವಾದಿಗಳಿಗೆ ಅನ್ನಿಸಿದ ಹಾಗೆ'..ಕ್ಷಮಿಸಿ..ಅದು 'ಎಡಪಂಥಿಯ ಜಾತ್ಯತೀತವಾದಿಗಳಿಗೆ ಅನ್ನಿಸಿದ ಹಾಗೆ' ಆಗಬೇಕಾಗಿತ್ತು. ಒಂದು ಆಶ್ಚರ್ಯ ಎಂದರೆ ನಮಗೆಲ್ಲಾ ನೆಗೆಟಿವ ಪಾಯಿಂಟ್ಸ ಹಾಕಿದ್ದು ಯಾರು?? ಜಾತ್ಯತೀತವಾದಿಗಳಾ??:) ನಮ್ಮನೆಲ್ಲಾ ಶ್ರೀರಾಮಸೇನೆಯ ಸದಸ್ಯರೆಂದು ಗೊಂದಲ ಮಾಡಿಕೊಂಡಿದ್ದಾರೊ ಹೇಗೆ?? !:)

ವೀರಕನ್ನಡಿಗ ಅವರೆ ಕನ್ನಡದಲ್ಲಿ ಒಂದು ಗಾದೆಇದೆ "ಅತ್ತು ಕರದು ಔತಣ ಹೇಳಿಸ್ಕೊಂಡಂಗೆ..." ಅಂತ . ನಾವೇನು ಅಬ್ದುಲ್ ಬಾಯಲ್ಲಿ ಗೀತೆ ಕೇಳಬೇಕಂತಿಲ್ಲ ಈ ದೇಶದ ಅರೆಬರೆ ಕಲಿತ ಮುಸಲ್ಮಾನರಿಗೊಂದು ರೋಗವಿದೆ ಹಿಂದುಗಳ ಜಾತಿ ಪದ್ಧತಿ,ಕಂದಾಚಾರ ನಿಂದಿಸೋದು ಮತ್ತು ಕಾಲು ಕೆದರಿ ಚರ್ಚೆ ಶುರು ಮಾಡೋದು ಅದು ಹದವಾದಾಗ ಓಡಿ ಹೋಗೋದು. ಅಬ್ದುಲ್ ಮಾಡ್ತಾ ಇರೋದೆ ಇದನ್ನು ಇನ್ನು ಈ ಚರ್ಚೆಗೆ ಅರ್ಥವಿಲ್ಲ.ನಮ್ಮನ್ನು ಟೀಕಿಸಲಿ ಬೇಡ ಎಂದಿಲ್ಲ ಆದರೆ ಉತ್ರಕೊಟ್ಟಾಗ, ಪ್ರಶ್ನೆ ಕೇಳಿದಾಗ ಎದುರಿಸೋ ಛಾತಿನೂ ಬೇಕು .ಚರ್ಚೆ ಶುರುಆಗಿದ್ದು ಶಾರುಖ್ ಸಿನೇಮಾದಬಗ್ಗೆ ಅದರಲ್ಲಿ ತೆಲಗಿಯಿಂದ ಹಿಡಿದು ಗಾಂಧಿ, ಚರ್ಚಿಲ್ ಎಲ್ಲ ಬಂದೋದ್ರು ಇದು ದೊಡ್ದ ತಮಾಷೆ ಅಲ್ವಾ?

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ. ಮಲ್ಗಿರೋರನ್ನ ಎಬ್ಸೋದು ಸುಲಬ, ಆದ್ರೆ ಹಾಗೆ ನಟಿಸ್ತಿರೋರನ್ನ ಎಬ್ಸೋದು ಸಾಧ್ಯವಿಲ್ಲದ ಮಾತು. ಬಿಡಿ ಇಲ್ಲಿಯೇ, ಇದನ್ನ ಮತ್ತು ಇಂತ ಮನಸ್ತಿತಿಯವರನ್ನ, ಇವರಿಂದ, ದೇಶಕ್ಕೆ ಅಪಾಯ ಇಲ್ಲ ಅಂತ ಗ್ರಹಿಸಿದರು, ಉಪಕಾರ ಅಂತು ಇಲ್ಲ. ಬನ್ನಿ ಕಟ್ಟೋಣ ಹೊಸ ನಾಡೊಂದನು

<<ಬನ್ನಿ, ಕಂದಕ ತೋಡುವ ಕೆಲಸ ಅಲ್ಲಿಗೇ ನಿಲ್ಲಿಸಿ ಸುಂದರ ನಾಡೊಂದನ್ನು ಕಟ್ಟೋಣ>> ಈಗಿರುವುದು ಸುಂದರ ನಾಡಲ್ಲ ಅಂತೀರ? ಕಂದಕವೂ ಬೇಕಲ್ಲವೆ ಕೋಟೆಯ ಸುತ್ತ? ;) ಶತ್ರು ಸುಲಭವಾಗಿ ದಾಳಿ ಮಾಡದಿರಲಿ ಎಂದು

http://sampada.net/b... ನಿಮ್ ಜಾತಿ ಮತ, ಉಪಜಾತಿ, ಕುಟುಂಬದ ವರಮಾನ, ವೃತ್ತಿ, ನಿಮ್ಮ ಐಡಿಯಾಲಜಿ ಎಂಥದ್ದು ಎಂದು ಸ್ಪಷ್ಟವಾಗಿ ಹೇಳಿ. ಹಿಂದುತ್ವವಾದಿ, ಪ್ರಗತಿಶೀಲ, ಬಲಪಂಥೀಯ, ಎಡಪಂಥೀಯ ಯಾವುದಾದರೊಂದು ಐಡಿಯಾಲಜಿ ಇಲ್ಲದಿದ್ದರೆ ಕೋಟೆ ಕಟ್ಟುವುದೂ ಅಸಾಧ್ಯ. ಧರ್ಮಗಳು ಯಾವತ್ತೂ ಕೆಡುಕನ್ನು ಬಯಸಿಲ್ಲ. ಅದನ್ನು ಅರಿಯುವ ಮಾರ್ಗದಲ್ಲಿ ಎಡವಲಾಗಿದೆ. ಹಿಂದೂ ಮುಸ್ಲಿಂ ಜನಾಂಗದ ನಡುವೆ ಸೂಕ್ತ ಮಾತುಕತೆ ಮತ್ತು ಸಾಮರಸ್ಯ ಇದ್ದರೆ ಮಾತ್ರ ಕಬೀರ ಹುಟ್ಟುತ್ತಾನೆ ಇಲ್ಲವಾದಲ್ಲಿ ಮೋದಿ ಹುಟ್ಟುತ್ತಾನೆ. ದೇಶದ ಪರಿಕಲ್ಪನೆ ಆಡ್ವಾಣಿ ಮತ್ತು ನರೇಂದ್ರ ಮೋದಿ ತಿಳಿದ ರೀತಿಯಲ್ಲಿಲ್ಲ ಎಂದು ಖ್ಯಾತ ಸಾಹಿತಿ ಡಾ. ಯು. ಆರ್ ಅನಂತಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ. http://thatskannada.... http://sampada.net/a...