ಇಡಗುಂಜಿ ಗಣಪತಿ ಮಹಾ-ಕ್ಷೇತ್ರ

To prevent automated spam submissions leave this field empty.

ನಾವು ರಸ್ತೆಯಮುಖಾಂತರ, ಕುಂದಾಪುರದಿಂದ ಮೊದಲು, ಇಡಗುಂಜಿ ಗಣಪತಿ ಮಹಾ-ಕ್ಷೇತ್ರಕ್ಕೆ ಹೊಗಿ, ಸ್ವಾಮಿಯ ದರ್ಶನವನ್ನು ಮುಗಿಸಿಕೊಂಡು, ಗೋಕರ್ಣ ಕ್ಷೇತ್ರಕ್ಕೆ ಹೋಗಿ, ದೇವರದರ್ಶನದ ಬಳಿಕ, ಅಲ್ಲಿಯೇ ಮಠದಲ್ಲಿ ಊಟವನ್ನು ಮುಗಿಸಿಕೊಂಡು, ಗೋಕರ್ಣದ ಕಡಲ ತಟವನ್ನು ನೋಡಿಕೊಂಡು, ಅಲ್ಲಿಂದ, ಮುರುಡೇಶ್ವರ ದೇವಾಲಯಕ್ಕೆ ಹೋದೆವು.

ಎಲ್ಲಿ ದೃಷ್ಟಿ ಹಾಯಿಸಿದರೂ, ತೆಂಗು, ಕಂಗು,  ಮತ್ತು ಕದಳಿ-ವನಗಳು ಕಣ್ಣಿಗೆ ಹಬ್ಬವನ್ನು ಉಂಟುಮಾಡಿದ್ದವು...

ಹಿಂದೂಗಳ ಪವಿತ್ರಯಾತ್ರಾಸ್ಥಳಗಳಲ್ಲೊಂದಾದ ಇಡಗುಂಜಿ ಗಣಪತಿ ಮಹಾ-ಕ್ಷೇತ್ರವು ಉತ್ತರ ಕರ್ನಾಟಕದ ಹೊನ್ನಾವರ ತಾಲ್ಲೂಕಿನಲ್ಲಿರುವ, ಗಣಪತಿಯ ಆರಾಧನಾಸ್ಥಳವಾಗಿದೆ ಲಕ್ಷಾಂತರಜನರ ಇಷ್ಠಾರ್ಥಗಳನ್ನು ನೆರವೇರಿಸಿ ಹರಸುತ್ತಿರುವ ಪ್ರಮುಖ ದೇವಾಲಯಗಳೊಂದಾಗಿದೆ. ಇಡಗುಂಜಿ ಗ್ರಾಮವು, ಹೊನ್ನಾವರದ ದಕ್ಷಿಣ ಪೂರ್ವದಲ್ಲಿ ೧೪ ಕಿ. ಮೀ ದೂರದಲ್ಲಿದೆ. ಒಂದು ವರ್ಷದಲ್ಲಿ ಸುಮಾರು ೧೦ ಲಕ್ಷಜನ ತೀರ್ಥಯಾತ್ರಿಗಳು ದೇವಸ್ಥಾನವನ್ನು ಸಂದರ್ಶಿಸುತ್ತಾರೆ. ಗಣಪತಿಮೂರ್ತಿಗೆ ಎರಡು ಕೈಗಳಿದ್ದು,  ಒಂದು ಕೈನಲ್ಲಿ ಮೋದಕವನ್ನೂ   ಮತ್ತೊಂದರಲ್ಲಿ ಕಮಲದ ಹೂವನ್ನು ಹಿಡಿದಿದ್ದಾನೆ. ಇಡಗುಂಜಿಯ ಗಣಪತಿಮೂರ್ತಿಯು, ಗೋಕರ್ಣದಲ್ಲಿರುವ ಗಣಪತಿಯನ್ನು ಹೋಲುತ್ತದೆ.

ನಾವು ಇಡಗುಂಜಿ ದೇವಾಲಯಕ್ಕೆ ಹೋದಾಗ ವಿಧಿಪೂರ್ವಕವಾದ ಒಂದು ಮಂಗಳಕಾರ್ಯ ನೆರವೇರುತ್ತಿತ್ತು...

ಒಂದು ಪೌರಾಣಿಕ ಕಥೆಯ ಪ್ರಕಾರ, ಗಣಪತಿದೇವನು, ಕುಂಜಾರಣ್ಯವೆಂಬ ಕಾಡಿನಲ್ಲಿ ನೆಲೆಯಾಗಿದ್ದನೆಂದು ಪ್ರತೀತಿ. ಈಗ ಅದೇ ಸ್ಥಳವು ಇಡಗುಂಜಿಯೆಂದು ಪ್ರಸಿದ್ಧಿಯಾಗಿದೆ. [ಇಡಕುಂಜ] ಋಷಿಮುನಿಗಳು ತಪಸ್ಚೈರ್ಯವನ್ನು ಆಚರಿಸುತ್ತಿದ್ದ ಮಂಗಳ ಸ್ಥಳ. ಶ್ರೀ ವಿನಾಯಕ ದೇವರು ಸಾವಿರಾರು ಭಕ್ತರ ಅಭೀಷ್ಟಗಳನ್ನು ನೆರೆವೇರಿಸಿಹರಸುತ್ತಿದ್ದಾನೆ .

ಯಾತ್ರಾರ್ಥಿಗಳಿಗೆ ಸೌಕರ್ಯಗಳು :
೧. ಈ ಕ್ಷೇತ್ರಕ್ಕೆ ಪೂಜಾರ್ಥಿಗಾಗಿ ಬರುವ ಪ್ರತಿಯೊಬ್ಬರಿಗೂ ಉಚಿತ ಊಟದ ವ್ಯವಸ್ಥೆಯಿದೆ. 
ಇಡಗುಂಜಿ ಕ್ಷೇತ್ರದಿಂದ :
* ಹೊನ್ನಾವರ : ೧೪ ಕಿ.ಮೀ
* ಮುರುಡೇಶ್ವರ : ೨೦ ಕಿ.ಮೀ
* ಗೋಕರ್ಣ : ೫೦ ಕಿ.ಮೀ
* ಭಟ್ಕಳ : ೩೬ ಕಿ.ಮೀ
* ಮಂಜುಗುಣಿ: ೭೪ ಕಿ.ಮೀ
ಹತ್ತಿರದ ಸ್ಥಳ : ಮಂಕಿ ಮಾವಿನಕಟ್ಟೆ: ೪ ಕಿ.ಮೀ

ಯಾತ್ರಾರ್ಥಿಗಳಿಗೆ ಸೌಕರ್ಯಗಳು :   ಈ ಕ್ಷೇತ್ರಕ್ಕೆ ಪೂಜಾರ್ಥಿಗಾಗಿ ಬರುವ ಪ್ರತಿಯೊಬ್ಬರಿಗೂ ಉಚಿತ ಊಟದ ವ್ಯವಸ್ಥೆಯಿದೆ. 

ಇಡಗುಂಜಿ ಕ್ಷೇತ್ರದಿಂದ ಕೆಳಗೆ ನಮೂದಿಸಿರುವ ಸ್ಥಳಗಳಿಗೆ ಯಾತ್ರೆ ಬೆಳೆಸಬಹುದು. ಬಸ್ ನ ವ್ಯವಸ್ಥೆ ಚೆನ್ನಾಗಿದೆ :


* ಹೊನ್ನಾವರ : ೧೪ ಕಿ.ಮೀ

* ಮುರುಡೇಶ್ವರ : ೨೦ ಕಿ.ಮೀ

* ಗೋಕರ್ಣ : ೫೦ ಕಿ.ಮೀ

* ಭಟ್ಕಳ : ೩೬ ಕಿ.ಮೀ

* ಮಂಜುಗುಣಿ: ೭೪ ಕಿ.ಮೀ


ಹತ್ತಿರದ ಸ್ಥಳ : ಮಂಕಿ ಮಾವಿನಕಟ್ಟೆ: ೪ ಕಿ.ಮೀ

ಲೇಖನ ವರ್ಗ (Category):