’ಟರ್ಟಲ್ ಬೇ ಸೀ ರೆಸಾರ್ಟ್” !

To prevent automated spam submissions leave this field empty.

ರೆಸಾರ್ಟ್ ನ ಪ್ರವೇಶದಲ್ಲಿ ಈ ಫಲಕವನ್ನು ಕಾಣಬಹುದು...

ಕರಾವಳಿಯ ಸೌಂದರ್ಯವನ್ನು ಸವಿಯಲು ನಾವು ಜನವರಿ ತಿಂಗಳಿನಲ್ಲಿ ಮಂಗಳೂರಿಗೆ ಹೊರಟು, ಉಡುಪಿ, ಕೊಲ್ಲೂರು, ಗೋಕರ್ಣ, ಮುರುಡೇಶ್ವರ, ಗಳನ್ನು ನೋಡುವುದರ ಜೊತೆಗೆ, ಕೆಲವು ಕಡಲ ತೀರಗಳನ್ನೂ ಭೆಟ್ಟಿಯಾದೆವು. ಮಲ್ಪೆ, ಅಂತಹ ಒಂದು ಸುಂದರ ಬೀಚ್ ಆದರೆ, ಮತ್ತೊಂದು ನಮಗೆ ಅತಿ ಮುದಕೊಟ್ಟ ಪ್ರದೇಶವೆಂದರೆ, ತ್ರಾಸಿಯಲ್ಲಿದ್ದ, "ಟರ್ಟಲ್ ಬೇ ಸೀ ರೆಸಾರ್ಟ್" !   ಸುಮಾರು ಒಂದು ವಾರಕ್ಕೂ ಹೆಚ್ಚು ಸಮಯವನ್ನು ಕರಾವಳಿಯಲ್ಲಿ  ಕಳೆದ ನಮಗೆ. ಇದೊಂದು ಅಪೂರ್ವ ಅನುಭವನೀಡಿತ್ತು ! ಅಲ್ಲಿ ಇದ್ದಷ್ಟು ದಿನ, ಬೆಳಿಗ್ಯೆಯಿಂದ ಸಾಯಂಕಾಲ, ರಾತ್ರಿಯವರೆಗೆ ಕಡಲತೀರದ ಅನನ್ಯ ಅನುಭವದ ಆಟಗಳು, ಮುದಕೊಟ್ಟವು. ನಮ್ಮ ಮಗ ಪ್ರಕಾಶ, ಅವನ ಜೊತೆಗೆ ಅನೇಕ ದೇಶ ವಿದೇಶದ ಪರ್ಯಟಕರು, ಅವರ "ಜೀವನಾನುಭವಗಳು," "ಊಟತಿಂಡಿಗಳು,"  "ಜೀವನ ಶೈಲಿ", ಮತ್ತು ಅಲ್ಲಿ ಲಬ್ಯವಿದ್ದ "ಅನನ್ಯ ಸುಯ್ಗುಟ್ಟುವ ತಂಗಾಳಿಯ ಒಡನಾಟ," ನಮಗೆ ಒಂದು "ಹೊಸಲೋಕಕ್ಕೆ ಲಗ್ಗೆಹಾಕಿದ ಅನುಭವ ನೀಡಿತ್ತು"  !

 ಅಧ್ಬುತವಾದ ಸೂರ್ಯಾಸ್ತದ ದೃಷ್ಯ....

ಒಳಗೆ ಕಾಲಿಟ್ಟಾಗ ನಮ್ಮನ್ನು  ಕೈಬೀಸಿ ಎದುರುಗೊಳ್ಳುವ ಸುಂದರವಾದ  ತೆಂಗಿನ ಮರಗಳು. ಇವು ನಮ್ಮನ್ನು ಕಡಲಕಡೆ ಕರೆದುಕೊಂಡು ಹೋಗುತ್ತವೆ...

ಬೆಳಿಗ್ಯೆ ಯೋಗವನ್ನು ಹೇಳಿಕೊಡಲು ಯೋಗ ಕೇಂದ್ರವಿದೆ...

ನಮ್ಮ ಮಗ ಪ್ರಕಾಶ್, ಈಜು ಕಲಿತು," ಬೇರೆ ನುರಿತ ಈಜುಗಾರರೊಟ್ಟಿಗೆ, ರ್ಸ್ನಾರ್ಕ್ಲಿಂಗ್ " ನಲ್ಲಿ ಭಾಗವಹಿಸಿದ!

snorkelling

ದಕ್ಷಿಣ ಕನ್ನಡದಲ್ಲಿನ ಅನೇಕ ಸುಂದರ ಕಡಲ್ಬೀಚ್ಗಳಲ್ಲಿ, ’ ಟರ್ಟಲ್ ಬೇ ಸೀ ರೆಸಾರ್ಟ್ ’ ವಿಶೇಷ ಸೌಲಭ್ಯಗಳನ್ನು ಹೊಂದಿದೆ. ನಾವು ಅಲ್ಲಿಗೆ ಜನವರಿ ೧೯,’ ಕಿಂಗ್ ಫಿಶರ್ ಏರ್ ಲೈನ್ಸ್ ” ಲ್ಲಿ ಹೊರಟು, ಅದೇ ದಿನ ಅಪರಾನ್ಹಕ್ಕೆ ಮಂಗಳೂರು ತಲುಪಿದೆವು. ಮಂಗಳೂರಿನಿಂದ ೧೧೦ ಕಿ. ಮೀ. ಗಳ ಕಾರ್ ಡ್ರೈವ್ ಮಾಡಿದರೆ, ’ಟರ್ಟಲ್ ಬೇ ಸೀ ರೆಸಾರ್ಟ್,” ತಲುಪಬಹುದು. ಜನವರಿ, ೨೯ ರಂದು ವಾಪಸ್ಸಾದೆವು.

ಉಡುಪಿಯಿಂದ ಮುಂಬೈಗೆ ಹೋಗುವ,   ’ಎನ್. ಎಚ್. ೧೭ ನ್ಯಾಶನಲ್ 'ಹೈವೇ” ನಲ್ಲಿ  ಪಕ್ಕದ ’ಅಡ್ಡ ರಸ್ತೆ’ಯಲ್ಲಿ ಹೋದರೆ, ಕೇವಲ ಅರ್ಧ ಮೈಲಿದೂರದಲ್ಲಿದೆ- ಈ ’ಟರ್ಟಲ್ ಬೇ ಸೀ ರೆಸಾರ್ಟ್.”  ಅಲ್ಲಿ ರೆಸಾರ್ಟ್ ನಸಿಬ್ಬಂದಿವರ್ಗವಲ್ಲದೆ, ಬೇರೆ ಯಾರಸಂಪರ್ಕವೂ ಇಲ್ಲದ. ಪ್ರಶಾಂತ ವಾತಾವರಣ, ನಗರದ ಜಂಜಾಟದಿಂದ ಮುಕ್ತರಾಗಲು ಹವಣಿಸಿ ಬರುವ ಪರ್ಯಟಕರಿಗೆ ಅತ್ಯಂತ ಮು ದ ನೀಡುವ ಸುಂದರ ತಾಣ.  ಸಮುದ್ರದ ಮರಳಿನ ದಂಡೆ ಅತಿ ಹತ್ತಿರ-ಕೇವಲ ೫೦ ಮೀ. ದಿನವಿಡೀ ಕಡಲಿನ ಭೋರ್ಗರೆಯುವ, ಅಬ್ಬರದ  ಅಲೆಗಳು ದಡಕ್ಕೆ ಅಪ್ಪಳಿಸಿದಾಗಿನ ಭಾರಿ ಶಬ್ದ ನಮಗೆ ಸಮುದ್ರದ ಇರುವಿಕೆಯನ್ನು ಮನದಟ್ಟು ಮಾಡುತ್ತದೆ. ಬೀಚಿನ ಎಡ-ಬಲಗಳ ಉದ್ದಕ್ಕೂ ನಮಗೆ ಮನದಣಿಯುವಷ್ಟು ದೂರ, ನಡೆದಾಡಬಹುದು. ಅರಬ್ಬೀ ಸಮುದ್ರದ ಭವ್ಯನೋಟ ಮನಸ್ಸಿಗೆ ಮುದನೀಡುತ್ತದೆ. ನಮ್ಮ ಮಗ, ಪ್ರಕಾಶ್  ಈಜು ಬಾರದ ಯುವಕ. ಅವನು ನಾವಿದ್ದ ೧೧ ದಿನಗಳಲ್ಲಿ ಈಜು ಕಲಿತ.

ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳಿನಲ್ಲಿ ಆಮೆಗಳು ಬಂದು ದಡದ ಬಳಿಯ ಉಸುಕಿನಲ್ಲಿ, ಮೊಟ್ಟೆಇಡುತ್ತವೆ. ಆ ಮೊಟ್ಟೆಗಳು ಒಡೆದು ಚಿಕ್ಕ ಚಿಕ್ಕ ಮರಿಗಳು ಏಳುತ್ತಾ ಬೀಳುತ್ತಾ ತೆವಳುತ್ತಾ ಕಡಲಿನ ನೀರಿನಲ್ಲಿ ಓಡಿಹೋಗಿ ಸೇರಿಕೊಂಡು ಬೃಹತ್ ಜಲರಾಶಿಯ ಮಧ್ಯದಲ್ಲಿ ಮಾಯವಾಗುವ ದೃಷ್ಯವನ್ನು ಕಣ್ಣಾರೆ ಕಂಡ ಅಲ್ಲಿನ ನಿವಾಸಿಜನರಿಂದ ಕೇಳಿ ಮೈನವಿರೇಳುತ್ತದೆ. ನಾವು ಹೋದ ಸಮಯದಲ್ಲಿ ಆಮೆಗಳು ನಮಗೆ ಕಾಣಿಸಲಿಲ್ಲ. ಡಾಲ್ಫಿನ್ ಗಳನ್ನು ಸ್ವಲ್ಪ ಆಳವಾದ ನೀರಿನಲ್ಲಿ ಕಾಣಬಹುದು. ಈಜಲು ಹೋದ ಹಲವರಿಗೆ ಅವು ಕಂಡಿತೆಂದು ನಮಗೆ ಹೇಳಿದರು !

’ನ್ಯಾಶನಲ್ ಜಿಯಾಗ್ರಫಿಯವರ ವೀಡಿಯೋ,’ ಗಳನ್ನು ನಾವು ವೀಕ್ಷಿಸಿದಾಗ ಆದ ರೋಮಾಂಚನ ಅನನ್ಯ. 'ವೀಡಿಯೋ' ನೋಡಿದಾಗ ಮೈ ’ಜುಂ” ಎನ್ನುತ್ತದೆ. 

೧. ಕುಂದಾಪುರಕ್ಕೆ ಹತ್ತಿರದ  ’ಮರವಂತೆ ಊರಿನ” ಬಳಿಯ ಕೆಲವೇ ಬೆಸ್ತರ ನಿವಾಸವಾಗಿರುವ ಈ ಸ್ಥಳ ಒಂದು ಸ್ವರ್ಗದಂತೆ ಗೋಚರಿಸುತ್ತದೆ. (Maravanthe, Trasi)   

೨. ಮುಂಬೈ, ಬೆಂಗಳೂರು, ಗೋವ, ಮತ್ತು ಮಂಗಳೂರನ್ನು ರಸ್ತೆ ಮತ್ತು ವಿಮಾನ ಹಾಗೂ ರೈಲಿನಲ್ಲಿ ತಲುಪಬಹುದು. ವಿಮಾನನಿಲ್ದಾಣದಿಂದ ಖಾಸಗಿ ಟ್ಯಾಕ್ಸಿ, ಮತ್ತು ಕಾರ್ ಗಳ ಸೌಲಬ್ಯವನ್ನು, ಮೊದಲೇ ತಿಳಿಸಿದರೆ, ಕಲ್ಪಿಸುತ್ತಾರೆ. 

೩. ಹತ್ತಿರದ ವಿಮಾನ ನಿಲ್ದಾಣ : ಮಂಗಳೂರು [Mangalore] (೧೧೦ ಕಿ. ಮೀ) dabolim (೨೬೫ ಕಿ .ಮೀ)


೪. ಪ್ರಮುಖ  ಬಸ್ ಸ್ಟಾಂಡ್ : ಉಡುಪಿ (೪೬ ಕಿ.ಮೀ) / ಕುಂದಾಪುರ (೧೨ ಕಿ.ಮೀ).


೫. ಪ್ರಮುಖ ರೈಲ್ವೆ ಸ್ಟೇಶನ್: ಮಂಗಳೂರು (೧೧೦ ಕಿ ಮೀ), ಕುಂದಾಪುರ ( ೧೮ ಕಿ ಮೀ )

೫ ನದಿಗಳು ಅರಬ್ಬೀ ಸಮುದ್ರಕ್ಕೆ ಸೇರುವ ಭವ್ಯ ದೃಷ್ಯ, ' ಗಂಗೊಳ್ಳಿ' ಎಂಬ ಜಾಗದಲ್ಲಿ ನೋಡಿ ಆನಂದಿಸಬಹುದು.’ಸೌಪರ್ಣಿಕಾ ನದಿ’ಯೂ ಸೇರಿದಂತೆ ಇತರ ೪ ನದಿಗಳು  ಸಮುದ್ರಕ್ಕೆ ಸೇರುವ ಜಾಗ  ಇಲ್ಲಿಗೆ ಅತಿ ಹತ್ತಿರದಲ್ಲಿದೆ. ಸಮುದ್ರದ ತಿಳಿಯಾದ ಮತ್ತು ಶುಭ್ರವಾದ ನೀರಿನಲ್ಲಿ ಟ್ರೆಕ್ಕಿಂಗ್, ಸ್ನಾರ್ಕ್ಲಿಂಗ್, [Snorkeling], ಸ್ಕೂಬಾ ಡೈವಿಂಗ್ [Scuba Diving], ಸಮುದ್ರದಲ್ಲಿ ಮನಸ್ಸಿಗೆಬಂದಾಗಲೆಲ್ಲಾ ದಿನದಲ್ಲಿ ಈಜುವ ಒಂದು ಸಂಭ್ರಮವನ್ನು ಮರೆಯಲು ಸಾಧ್ಯವೇ ? ! ಇದಕ್ಕೆ ಆಳವಾದ ನೀರಿನ ಆವಶ್ಯಕತೆ ಇದೆ. ಅದಕ್ಕಾಗಿ ಒಂದು 'ವಿಶೇಷ ಬೋಟ್ 'ನಲ್ಲಿ ’ ಮುರುಡೇಶ್ವರದ ಸಮುದ್ರತಟಕ್ಕೆ ಕರೆದುಕೊಂಡು ಹೋಗುತ್ತಾರೆ. ಇದಕ್ಕೆ ಪೂರ್ವಭಾವಿಯಾಗಿ ಕಾದಿರಿಸುವ ಅವಕಾಶವಿದೆ. ಈಜುವ ಆಟವನ್ನು ಇಲ್ಲಿ ಕಲಿಸಲಾಗುತ್ತದೆ.

ನಾವು ಹತ್ತಿರದಲ್ಲೇ ಇದ್ದ, "ಕುಂದಾಪುರ", "ಉಡುಪಿ", "ಪಾಜಕ",  "ಕೊಲ್ಲೂರು", "ಮುರುಡೇಶ್ವರ", "ಗೋಕರ್ಣ", ಗಳನ್ನು ಭೆಟ್ಟಿಮಾಡಿ ಅಲ್ಲಿನ ದೇವಾಲಯಗಳನ್ನು ಸಂದರ್ಶಿಸಿದೆವು. ಉಡುಪಿ ಮತ್ತು ಗೋಕರ್ಣಗಳಲ್ಲಿ ಊಟದ ವ್ಯವಸ್ಥೆ ಅತ್ಯಂತ ಅಚ್ಚುಕಟ್ಟಾಗಿದೆ. ಹತ್ತಿರದಲ್ಲಿದ್ದ "ಮಲ್ಪೆ ಬೀಚ್," ಗೂ ಹೋಗಿದ್ದೆವು.  "ಹೈವೇ" ಬಳಿಯ ಸಮಾನಾಂತರ ದಿಕ್ಕಿನಲ್ಲಿ ಅನೇಕ ಬೀಚ್ ಗಳು ಇವೆ. ಅವೇನೂ ಅಷ್ಟು ಜನಪ್ರಿಯವಾಗಿಲ್ಲದೆ ಇರಬಹುದು. ಅಲ್ಲಿನ ಕಲುಷಿತವಿಲ್ಲದ ವಾತಾವರಣ, ಹಾಗೂ ಹಾಲಿನಂತಹ-ಸ್ವಚ್ಛ ನೀರು, ಪರಿವಾರದ ಜನರಿಗೆಲ್ಲಾ ಮುದಕೊಡುತ್ತದೆ.

ಸಮುದ್ರ, ಮರಳು, ಸೂರ್ಯ,  ಇಲ್ಲಿನ ಅತಿ ಆಕರ್ಷಣೆಯ ಜಾಗಗಳು. ರೆಸಾರ್ಟ್ ನಲ್ಲಿ ಇರಲು ಸುಂದರವಾದ ಸುಸಜ್ಜಿತ ಕೊಠಡಿಗಳಿವೆ. ಸೊಂಪಾಗಿ ಬೆಳೆದ ಸುಂದರ, 'ತೆಂಗಿನ ಮರಗಳ ಸುಯ್ ಗುಟ್ಟುವ ಗಾಳಿಯ ಮಧ್ಯೆ ಕಳೆಯುವ ಕ್ಷಣಗಳು,'  ನಿಜಕ್ಕೂ ಮರೆಯಲಾರದ ಅನುಭವವನ್ನು ಕೊಡುತ್ತವೆ. 

ಮುಂಬೈನಂತಹ ಕಲುಷಿತ, ಕೆಟ್ಟವಾತಾವರಣದಿಂದ ಬಂದವರಿಗೆ ಈ ಸ್ಥಳ ಒಂದು ಸ್ವರ್ಗವೇ ಸರಿ ! ದಿನವಿಡಿ ತಂಪಾದ, ಹದವಾದ ಗಾಳಿ, ಮನಸ್ಸಿಗೆ ಆಹ್ಲಾದವನ್ನು ಕೊಡುತ್ತಿತ್ತು.  ಅದೇ ಗೋಕರ್ಣ, ಮುರುಡೇಶ್ವರ, ಮಂಗಳೂರು, ಮತ್ತು ಮಲ್ಪೆ ಬೀಚ್ ಗಳಲ್ಲಿನ ಹವೆ ಮುಂಬೈಗಿಂತ ಉತ್ತಮವಾಗಿದ್ದರೂ  "ತ್ರಾಸಿ" ಯಂತಿರಲಿಲ್ಲ !

ಪಕ್ಕದ ಸಮುದ್ರದಂಡೆಯ ಮರಳಿನ ಮೇಲೆ ಕುಳಿತು 'ಮೀನಿನ ಬಲೆ' ಯನ್ನು ಸಿದ್ಧಪಡಿಸುತ್ತಿರುವ ದಂಪತಿಗಳು...

ರೆಸಾರ್ಟ್ನಲ್ಲಿ ದೊರೆಯುವ ಸೌಲಭ್ಯಗಳು :

* ಸ್ಕೂಬಾ ಡೈವಿಂಗ್/[Scuba Diving/Snorkeling]
 
* ಟ್ರೆಕ್ಕಿಂಗ್ [Trekking]

* ದೋಣಿಯಲ್ಲಿ ಸಮುದ್ರದ ಮೇಲೆ ಸುತ್ತಾಟ [Boat Rides]

* ಹತ್ತಿರದಲ್ಲೇ ಡಾಕ್ಟರ್ ಸುಲಭವಾಗಿ ಸಿಗುತ್ತಾರೆ. 


* ಯೋಗ ರೇಕಿ, ಟಾಯ್-ಚಿ, ಆಯುರ್ವೇದ ರೀತಿಯಲ್ಲಿ ಮೈಗೆ ಎಣ್ಣೆಹಚ್ಚಿ ನೀವಿ ಮಾಡುವ ಉಪಚಾರಗಳು ಲಭ್ಯ. Yoga/ Reiki / Tai-Chi/ Ayurvedic Massage/

* ಸಮುದ್ರದಲ್ಲಿ ದೊರೆಯುವ ಮೀನು ಮತ್ತಿತರ ಉತ್ಪನ್ನಗಳಿಂದ ಮಾಡಿದ ತಿಂಡಿ ತಿನಸುಗಳು (ಆಯಾ ಋತುಮಾನಕ್ಕನುಗುಣವಾಗಿ) [Coastal Cuisine].

ಕೊರಿಯದ ಯುವತಿಯರ ಜೊತೆ, ವೆಂಕಟೇಶ್ ಮತ್ತು ಸರೋಜಾ....

ಊಟವಾದ ಮೇಲೆ ತೆಂಗಿನಮರದಡಿಯಲ್ಲಿ 'ಜೋಕಾಲೆಯಲ್ಲಿ ವಿಶ್ರಮಿಸುವ ಮುದ,'  ನನಗೆ ತಿಳಿದದ್ದು, ಇಲ್ಲೇ !

beach

ಈ ’ಸುಂದರ  ಕಾಟೇಜ್,’  ನಮಗೆ ಅತಿ ಮುದ ಕೊಟ್ಟಿತು....

http://www.nivalink.com/turtlebay/index.html  

http://www.youtube.com/watch?v=ptADbIB3BQs

 

-ಚಿತ್ರಗಳು- ವೆಂಕಟೇಶ್ ಮತ್ತು ಪ್ರಕಾಶ್

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಿಯ ವೆಂಕಟೇಶ ಅವರೇ, ಈಗ ಮೇಲಿನಿಂದ ಎರಡನೇ ಚಿತ್ರದ ಹೊರತಾಗಿ ಎಲ್ಲ ಚಿತ್ರಗಳು ಕಾಣಿಸುತ್ತಿವೆ. :-) <<’ನ್ಯಾಶನಲ್ ಜಿಯಾಗ್ರಫಿಯವರ ವೀಡಿಯೋ,’ ಗಳನ್ನು ನಾವು ವೀಕ್ಷಿಸಿದಾಗ ಆದ ರೋಮಾಂಚನ ಅನನ್ಯ. 'ವೀಡಿಯೋ' ನೋಡಿದಾಗ ಮೈ ’ಜುಂ” ಎನ್ನುತ್ತದೆ.>> ಅಂದರೆ ನಾಷನಲ್ ಜಿಯಾಗ್ರಾಫಿಕ್ ನವರು ಟರ್ಟಲ್ ಬೇ ಸೀ ರೆಸಾರ್ಟ್ ನ ಹತ್ತಿರ ವೀಡಿಯೋ ಚಿತ್ರೀಕರಣ ಮಾಡಿದ್ದಾರಾ?

ಸದ್ಯ. ಚಿತ್ರಗಳು ಕಾಣಿಸ್ತಿವೆ. ಸಂತೋಷ. ಇಲ್ಲಿನ ರೆಸಾರ್ಟ್ ನವರೇ ಅವರು ಕರೆದುಕೊಂಡು ಹೋಗಿ ಕಲಿಸಿದ ’ಡೀಪ್ ಸೀ ಡೈವಿಂಗ್ ವೀಡಿಯೋಚಿತ್ರ’ ಗಳನ್ನು ತೆಗೆದಿದ್ದಾರೆ. (ಸ್ನಾರ್ಕ್ಲಿಂಗ್, ಇತ್ಯಾದಿ) ಹಾಗೆಯೇ "ನ್ಯಾಶನಲ್ ಜಿಯಾಗ್ರಫಿ ಯವರ ಆಮೆಗಳು ಮರಳು ದಂಡೆಗೆ ಬಂದು ಮೊಟ್ಟೆ ಇಡುವ ವೀಡಿಯೋಗಳು,’ ನಮಗೆ ಲಭ್ಯವಿವೆ. ಆ ಮಟ್ಟದಲ್ಲಿ ಇಲ್ಲಿ ಆಮೆಗಳು ಬರುವುದಿಲ್ಲವಂತೆ. ಒಮ್ಮೊಮ್ಮೆ ಬರುತ್ತವೆ. ಡಾಲ್ಫಿನ್ ಗಳು ಸಹಿತ ! ದೂರದಲ್ಲಿ ಈಜುವ ಸಮಯದಲ್ಲಿ ನಮ್ಮ ಗೆಳೆಯರಲ್ಲನೇಕರು ’ಡಾಲ್ಫಿನ್ ಗಳನ್ನು’ ಕಂಡರು. ಹೆಚ್ಚು ಆಳವಿಲ್ಲದ ತಿಳಿನೀರಿನ ಕಡಲಲ್ಲವೇ ! ನದಿಗಳು ಹತ್ತಿರದಲ್ಲೇ ಬಂದು ಸೇರುವುದರಿಂದ ಕಡಲಿನ ಆ ಭಾಗಗಳ ನೀರು ಅಷ್ಟೇನೂ ಹೆಚ್ಚು ಉಪ್ಪುಪ್ಪಾ ಗಿರುವ್ರುದಿಲ್ಲ

ಚಿತ್ರಗಳು ಕಾಣಿಸದಿರಲು ಇದು ಕಾರಣವಿರಬಹುದೆ ? ಬಲ್ಲವರು ಅರುಹಿರಿ ಅಯ್ಯ... ನಾನು ಮೇಲಿನ ಎರಡು ಚಿತ್ರಗಳನ್ನು ನನ್ನ ಮಗನ ವೀಡಿಯೊ ಕ್ಯಾಮರದಿಂದ ಪಡೆದಿದ್ದೇನೆ. ಉಳಿದವು, ನನ್ನ ಎಚ್. ಪಿ. ಕ್ಯಾಮರದ ಚಿತ್ರಗಳು. ಅದೇನಾದರೂ ಕಾರಣವಿರಬಹುದೇ ?