ಟ್ರಾವಂಕೂರ್ ರಾಜರುಗಳು - ತಿರುವನಂತಪುರ - ಮಹಾರಾಜ ಸ್ವಾತಿ ತಿರುನಾಳ್ - ಅನಂತಪದ್ಮನಾಭಸ್ವಾಮಿ ದೇವಾಲಯ !!!

To prevent automated spam submissions leave this field empty.

ಟ್ರಾವಂಕೂರ್ ರಾಜರುಗಳು - ತಿರುವನಂತಪುರ - ಮಹಾರಾಜ ಸ್ವಾತಿ ತಿರುನಾಳ್ - ಅನಂತಪದ್ಮನಾಭಸ್ವಾಮಿ ದೇವಾಲಯ !!!


ಈ ಸಲದ ಭಾರತ ಪ್ರವಾಸದಲ್ಲಿ ಬೇಸಿಗೆಯ - ೨೦೦೯ ರಲ್ಲಿ ಸುಮಾರು ಅರ್ಧದಷ್ಟು ಸಮಯ ದಕ್ಷಿಣ ಭಾರತದ ಕೆಲವು ಪ್ರವಾಸ ಸ್ಥಳಗಳನ್ನು ನೋಡುವ, ತಿಳಿಯುವ ಹಂಬಲವು ಫಲಿಸಿತ್ತು. ಮೊದಲನೆಯದಾಗಿ ಬೆಂಗಳೂರಿನಿಂದ ಕಿಂಗ್ ಫಿಶರ್ ವಿಮಾನದಲ್ಲಿ ಕುಳಿತು ತಿರುವನಂತಪುರ( ಟ್ರಿವ್ಯಾನ್ಡ್ರಮ್, ಟ್ರವಂಕೂರ್ ಎಂಬ ಮತ್ತೆರಡು ಹೆಸರಿವೆ) ತಲುಪಿದೆವು. ಬಿಸಿಲಿನ ಶಾಖ ಇದ್ದರು ತೆಂಗಿನ, ಬಾಳೆಗಳ ಮತ್ತು ಸಮುದ್ರ ತೀರದಿಂದ ಬೀಸಿದ ತಂಗಾಳಿಯು ತಂಪನ್ನೀಯುತ್ತಿತ್ತು. ಬಿಸಿಲಿನ ಬೇಗೆ ಗೊತ್ತಾಗಲೇ ಇಲ್ಲ. ಎಷ್ಟೊಂದು ಚರಿತ್ರೆ ಇರುವ ಈ ಊರಿಗೆ ಮೂರು ಮತ್ತೊಂದು ಹೆಸರಿರುವುದು ಅಚ್ಚರಿಯೆನಿಸಲಿಲ್ಲ. ಟಿ. ರಾಜರುಗಳು ( ಅರ್ಥಾತ್ ಟ್ರಾವಂಕೂರ್ ರಾಜರುಗಳು ಎಂದು ಅರ್ಥೈಸಿ ಇನ್ನು ಮುಂದೆ) ಅಲ್ಲಿ ಮೆರೆದು, ಸೇವೆ ಸಲ್ಲಿಸಿದ ದಿವ್ಯಭೂಮಿ ಇದಾಗಿದೆ. ದಿವ್ಯಭೂಮಿ ಅಂತ ಏಕೆ ಕರೆದೆ ಅಂದರೆ, ಪದ್ಮನಾಭಸ್ವಾಮಿ ದೇವಾಲಯ, ಮಹಾರಾಜ ಸ್ವಾತಿ ತಿರುನಾಳ್ ಅವರ ದಿವ್ಯ ಸಂಗೀತ ಎಲ್ಲ ಇಲ್ಲೇ ಹುಟ್ಟಿರುವುದರಿಂದ, ಇಲ್ಲಿ ಸಾಕ್ಷಾತ್ ಸರಸ್ವತಿ, ಲಕ್ಷ್ಮಿ ಮತ್ತು ನಾರಾಯಣರು ಮೆರೆದಿದ್ದಾರೆ ಎನ್ನುವುದಕ್ಕೆ ಸಂಶಯವೇ ಇಲ್ಲ ಎಂದೆನಿಸಿ.

ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು, ಹೊಟ್ಟೆಗೆ ತಿಂದು ನಮ್ಮ ಪ್ರೇಕ್ಷಣೀಯ ಸ್ಥಳಗಳ ಪಟ್ಟಿ ಮಾಡಿ, ಆದಿನವೇ ಈ ಊರಿನ (ತಿರುವನಂತಪುರದ) "ಶಂಕಮುಗಮ್" ಅನ್ನುವ ಬೀಚ್ ..ಸಮುದ್ರತೀರಕ್ಕೆ ಭೇಟಿ ಕೊಟ್ಟೆವು. ತಂಗಾಳಿ ಚೆನ್ನಾಗೇ ಬೀಸುತ್ತಿತ್ತು, ಬಿಸಿಲಿನ ಝಳ ಇನ್ನೂ ತಣಿಸಿರಲಿಲ್ಲ ಜುಲೈ ತಿಂಗಳಾದ್ದರಿಂದ. ಈ ಹವಾಮಾನ ಸಮುದ್ರತೀರದ ನಡಿಗೆಗೆ ಹೇಳಿಮಾಡಿಸಿದಂತಿತ್ತು. ಸುಂದರ, ಕೆಂಪಿನ ಮರಳ ತೀರ ಇದಾಗಿದೆ. ಉಪ್ಪುನೀರಿನ ಮೇಲೆ ಬೆಳೆಯುವ ಸೀವೀಡ್ನ ಹಂಗೇ ಇಲ್ಲಿಲ್ಲ. ಏನಿದ್ದರೂ ಜನಗುಂಗುಳಿಯಿಂದ ಮಾಡಲ್ಪಟ್ಟ ಕಸವಿತ್ತಷ್ಟೇ ಇಲ್ಲಿ. ಅಲ್ಲಲ್ಲಿ ಕಸದಬುಟ್ಟಿ ಇದ್ದರೂ ಜನ ಅದನ್ನು ಗಮನಿಸದೇ ಇದ್ದುದರಿಂದ ನನ್ನ ಮಗಳು ಅಲ್ಲೇ ಇದ್ದ ಕಸ ಎತ್ತಿ ಬುಟ್ಟಿಗೆ ಹಾಕಿದ್ದನ್ನು ನೋಡಿದ ಕೆಲವರು ಅವಳ ಸಹಾಯಕ್ಕೆ ಬಂದರು. ಅದು ಸ್ವಲ್ಪ ಸಮಾಧಾನ ತಂದಿತ್ತು ಮನಸ್ಸಿಗೆ. ಇಟ್ಟಿಗೇ ಬಣ್ಣದಂತ ಕೆಂಪು ಮರಳು ಒದ್ದೆಯಾದಮೇಲೆ ಇನ್ನಷ್ಟು ಕೆಂಪಗೆ ಕಾಣಿಸಿ ನೋಡಲು ಮನೋಹರವಾಗಿತ್ತು. ಇದರ ಚಿತ್ರ ಕೆಳಗಿದೆ..............

http://sampada.net/image/23763

http://sampada.net/image/23765

ಮರುದಿನದ ಕಾರ್ಯಕ್ರಮ ಪದ್ಮನಾಭಸ್ವಾಮಿ ದೇವಾಲಯ....... ದೇವಸ್ತಾನಕ್ಕೆ ಬಂದಾಗ ಸುಮಾರು ಬೆಳಗ್ಗೆ ೧೦ ಗಂಟೆ ಸಮಯ. ಸುಡು ಸುಡು ಬಿಸಿಲು ನೆಲವನ್ನು ಕಾಸಿತ್ತು.

ಮುಂದುವರೆಯುವುದು..............

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹರ್ಷ ಅವರೆ, ಮಾಹಿತಿಗೆ ನನ್ನಿ. ನನ್ನ ಮೈಸೂರು ಮೆಡಿಕಲ್ ಕಾಲೇಜ್ ಗೆಳೆಯ "ಜುಪಿಟರ್ ಹಾಸ್ಪಿಟಲ್ " ಒಡೆಯ, ವ್ಯಾಸ್ಕುಲಾರ್ ಸರ್ಜನ್, ಡಾ. ಮುರಳೀಧರ "ಶಂಖಮುಗಮ್ ಬೀಚ್ ಗೆ ಹೋಗು, ಚೆನ್ನಾಗಿದೆ" ಅಂತ ಹೇಳಿ, ಕಾಫಿ- ಬಾರ್ ವಿಷ್ಅಯ ಹೇಳುವುದು ಮರೆತ ಅಂತ ಕಾಣುತ್ತೆ. ಇನ್ನೊಮ್ಮೆ ಹೋದಾಗ ಅಲ್ಲಿಗೆ ಭೇಟಿ ಕೊಡುತ್ತೇನೆ. ~ಮೀನಾ.

ಮಹಾರಾಜ ಸ್ವಾತಿ ತಿರುನಾಳ್ ಕುರಿತು ಅನಿಲ್ ರಮೇಶ್ ಅವರು ಸುಂದರವಾದ ಲೇಖನ ಸರಣಿಯನ್ನು ಬರೆಯುತ್ತಿದ್ದಾರೆ. ಈ ಸರಣಿಯ ಎರಡನೇ ಭಾಗವನ್ನು ಓದಲು ಕೆಳಗಿನ ಕೊಂಡಿ ನೋಡಿರಿ............. http://sampada.net/a... ~ಮೀನಾ