ಇಲಿನಾಯ್ ನ ಒಂದು ಸುಂದರವಾದ ಪಾರ್ಕ್ ನಲ್ಲಿ, ನಾನು, ಅವಳು !

To prevent automated spam submissions leave this field empty.

ಇಲಿನಾಯ್ ರಾಜ್ಯದಲ್ಲಿ ಅಥವಾ ಬೇರೆ ನಾವು ಹೋಗ ಹಲವಾರು ಜಾಗಗಳಲ್ಲಿ, ಪಾರ್ಕ್ ಗಳನ್ನು ಎಷ್ಟು ಸುವ್ಯವಸ್ಥಿತವಾಗಿಟ್ಟಿದ್ದಾರಲ್ಲ, ಎಂದನ್ನಿಸಿತ್ತು. ಪ್ಲಾಸ್ಟಿಕ್ ಕಾಗದದ ಚೂರುಗಳೇ, ಅಥವಾ, ವೇಫರ್, ಅಥವಾ ಘುಟ್ಕ ತಿಂದು ಎಸೆದ ಕಾರ್ಟನ್ ಗಳೂ ಹುಡುಕಿದರೂ ಸಿಗದಿದ್ದಾಗ ಬೇಸರವಾಗಲಿಲ್ಲ ! ಇವೆಲ್ಲದೆ ಪಾರ್ಕ್ ಹೀಗೆ ಮಲಿನ ಮುಕ್ತ ಸ್ಥಿತಿಯಲ್ಲಿರಲು ಸಾಧ್ಯವಾದರೂ ಹೇಗೆ ಅಂತ ನಮಗೆ ಅನ್ನಿಸಿದ್ದು !

ಲೋಕಲ್ ಟ್ರೇನ್ ಎಡಬಲಗಳಲ್ಲಿ ಕೊಳೆತು ನಾರುವ ಪ್ಲಾಸ್ಟಿಕ್ ಪಿಶ್ವಿಗಳು, ಪಕ್ಕದಲ್ಲೇ ಬೀದಿನಾಯಿಗಳು, ಭಿಕ್ಷುಕರು, ಚಿಂದಿಆರಿಸುವ ಕೊಳಕು ಬಟ್ಟೆ ಧರಿಸಿದ ಕಚಡಾವಾಲಿ(ಲ) ಗಳು. ರೈಲ್ವೆ ಲೈನ್ ಪಕ್ಕದಲ್ಲೇ ಎರಡು ಬದಿಯಲ್ಲೂ ಚಂಬುಹಿಡಿದು ಕೂತ ಸ್ವಂತ ಚಾಲ್ ನಿಂದ ವಂಚಿನ  ನಮ್ಮ ಮುಂಬೈಕರ್ ಗಳು,  ಇವು ನಮ್ಮ ಜೀವನದ ಅವಿರ್ಭಾಗ ಅಂಗವಾಗಿರುವ ನಮ್ಮ ಮುಂಬೈ ನಗರದಲ್ಲಿನ ಪರಿಸ್ಥಿತಿ ನೆನೆಸಿಕೊಂಡರೆ, ಮೈ ಜುಮು-ಜುಮುಗುಟ್ಟುತ್ತವೆ.

ಇನ್ನೊಂದು, ಎಲೆಅಡಿಕೆಯ ರಸದಿಂದ ತೊಯ್ದು, ಕೆಂಪುಬಣ್ಣವನ್ನು ಹೊಂದಿದ ಚಿಕ್ಕ ರಸ್ತೆಗಳನ್ನು ನಾವು ಅಲ್ಲಿ ಕಾಣಲಿಲ್ಲ. ಬೆಳಿಗ್ಯೆ ಎದ್ದು ಕಡ್ಡಿಯಲ್ಲಿ ಹೆಮ್ಮೆಯಿಂದ ಹಲ್ಲುಜ್ಜುವ ಗುಜರಾಥಿ ವಯಸ್ಕರನ್ನು ಮಕ್ಕಳು ಅಲ್ಲಿ ಕಾಣಲಿಲ್ಲ. ಭಾರತ ಸಂಸ್ಕೃತಿಯನ್ನು ಅವರು ಪ್ರತಿನಿಧಿಸುತ್ತಿದ್ದಾರೆಯೋ ಎಂದು ಬೀಗಿ, ಅಲ್ಲಲ್ಲೇ ರಸ್ತೆಯ ಮಧ್ಯದಲ್ಲೇ ಉಗುಳುತ್ತಾ ನಿಧಾನವಾಗಿ ನಡೆಯುವ ಅವರನ್ನು ಬೊಂಬಾಯಿನಲ್ಲಿ ನಾವು ನೋಡಿ ನೋಡಿ ಸಾಕಾಗಿದೆ !

ದೇವಸ್ಥಾನದಲ್ಲೂ ಪ್ರಸಾದ ತೆಗೆದುಕೊಂಡ ನಂತರ ಕಂಬಗಳಿಗೆ, ಗೋಡೆಗಳಿಗೆ ಕೈಉಜ್ಜಿ ಸಾಫ್ ಮಾಡಿಕೊಳ್ಳುವ ಸಂಪ್ರದಾಯದಿಂದ ಹೊರಗೆ ಬಂದಿರುವ  ನಮ್ಮ ಭಾರತೀಯರು ಖಂಡಿತ ಸುಧಾರಿಸಿದ್ದಂತೆ ಕಂಡು ಬಂತು !

ಆದರೆ ಕ್ಯೂಗಳಲ್ಲಿ ನಮ್ಮ ಭಾರತೀಯರ ನಡುವಳಿಕೆ ಎಂಥವರನ್ನೂ ದಂಗುಬಡಿಸುವಂತಹದು. ಮಾರುತಿಯಂತೆ, ನೆಗೆದು, ಓಡಿ, ಎಲ್ಲರನ್ನೂ ತಳ್ಳಿಕೊಂಡು, ಸಾಧ್ಯವಾದರೆ ಮೆಲ್ಲಗೆ ಬೈಯುತ್ತಾ, ಬಡಬಡಿಸುತ್ತಾ ಸಾಗುವ ಅವರನ್ನು ನಕಲುಮಾಡಲು ’ ರಾಜು ಶ್ರೀವಾಸ್ತವ್ ’ ಗೂ ಸಾಧ್ಯವಿಲ್ಲವೇನೋ  !!

ಇನ್ನು ನಮ್ಮ ಜನರ ಒಳ್ಳೆಗುಣಗಳನ್ನು ಪಟ್ಟಿಮಾಡಿದ್ದೇನೆ. ಅವನ್ನು ನಂತರ ಬರೆಯುತ್ತೇನೆ.

( ಇವೆಲ್ಲಾ ಕೆಲವೇ ದಿನಗಳು ಅಲ್ಲಿದ್ದು ನೋಡಿದ ಕಂಡ ವಿವರಗಳು ನನ್ನ ಮಟ್ಟಿಗೆ ಸತ್ಯವಾಗಿವೆ !) 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು