ತಮಿಳು ತಲೆಗಳ ನಡುವೆ!

To prevent automated spam submissions leave this field empty.

ಬಿ.ಜಿ.ಎಲ್.ಸ್ವಾಮಿಯರ"ತಮಿಳು ತಲೆಗಳ ನಡುವೆ’ ತಮಿಳರ ಭಾಷಾದುರಭಿಮಾನದ ಬಗ್ಗೆ ವಿವರಿಸುವ ರೀತಿ

ಅನನ್ಯವಾದದ್ದು. ಇದರಲ್ಲಿ ಬರುವ ಸ್ವಾರಸ್ಯಕರ ಸಂಗತಿಗಳು, ಸಂಭಾಷಣೆಗಳು ನಗೆಯುಕ್ಕಿಸುತ್ತವೆ.

ಒಂದೊಂದು ಅಧ್ಯಾಯಕ್ಕಿರುವ ಹೆಸರುಗಳೇ ಕುತೂಹಲಕರವಾಗಿದ್ದು ಓದುಗರನ್ನು ಸೆಳೆಯುತ್ತದೆ.

(ಉ.ದಾ-ಮಂಗಮಾಯಕಲೆ)

ತಮಿಳರ ಉಚ್ಚಾರಣಾ ಶೈಲಿ, ಸೀಮಿತ ಅಕ್ಷರಗಳಿಂದುಂಟಾಗುವ ಪ್ರಮಾದಗಳನ್ನು ಚೆನ್ನಾಗಿ ವಿವರಿಸಿದ್ದಾರೆ.

ತಮಿಳಿನಲ್ಲೇ ಎಲ್ಲದರ ಮೂಲವನ್ನು ಹುಡುಕುವ ಮತ್ತು ಅದರ ಪ್ರಾಚೀನತೆಯ ಕುರಿತಾದ ತಮಿಳರ ಭ್ರಮೆಗಳನ್ನು ಸ್ವಾಮಿಯವರು ಸಾಧಾರವಾಗಿ ನಮ್ಮೆದುರು ತೆರೆದಿಡುತ್ತಾರೆ.

ವೀರ ತಮಿಳರು ವಿಶ್ವವಿದ್ಯಾಲಯಗಳಲ್ಲಿ ಸುಲಭವಾಗಿ p.h.d ಪಡೆಯುವ ರೀತಿ ಅದರ ವಿಷಯಗಳು

ಎಲ್ಲ  ಬಹಳ ಚೆನ್ನಾಗಿದ್ದು ಒಮ್ಮೆ ಹಿಡಿದರೆ ಪೂರ್ತಿ ಓದಿ ಮುಗಿಸುವಂತಹ ಹೊತ್ತಗೆ.

ಕನ್ನಡಿಗರೆಲ್ಲರೂ ಓದಬೇಕಾದ ಪುಸ್ತಕ. ತಮಿಳರಿಗೆ ಹೋಲಿಸಿದರೆ ನಮಗೆ ಭಾಷಾಭಿಮಾನವೇ

ಇಲ್ಲವೇನೋ ಅನ್ನಿಸುತ್ತೆ!ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅನಂತೇಶು ರವರೇ, ಈ ಪುಸ್ತಕದ ಬಗ್ಗೆ ನಾನು ಕೇಳಿದ್ದೀನಿ. "ತಮಿಳು ತಲೆಗಳ ನಡುವೆ" - ಈ ಪುಸ್ತಕ ೧೯೭೯ರಲ್ಲಿ ಮೊದಲ ಮುದ್ರಣಗೊಂಡಿತ್ತು. ಮತ್ತೆ ೨೦೦೮ರಲ್ಲಿ ಮರುಮುದ್ರಣಗೊಂಡಿದೆ. ಬಸವನಗುಡಿಯ ಗೋಖಲೆ ಸಂಸ್ಥೆಯಲ್ಲಿ ಪುಸ್ತಕ ಲಭ್ಯ. ಇದರ ಬೆಲೆ ರೂ.೧೦೮. ಈ ಪುಸ್ತಕದ ಲೇಖಕರು ಬಿ.ಜಿ.ಎಲ್ ಸ್ವಾಮಿಯವರು. ಇವರು ನಮ್ಮ ಡಿ.ವಿ.ಜಿ ಯವರ ಪುತ್ರ. ಕಮಲ

ಧನ್ಯವಾದಗಳು ಕಮಲಾ ಅವರೇ ನಾನು ತಗೊಂಡಿದ್ದೂ ಬಸವನಗುಡಿಯ ಗೋಖಲೆ ಸಂಸ್ಥೆಯಲ್ಲೇ, ಬೆಲೆ ೧೦೫ ರೂಪಾಯಿಗಳು. ಗೋಖಲೆಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಬಿ.ಜಿ.ಎಲ್ ಸ್ವಾಮಿಯವರ ಮತ್ತು ಡಿವಿಜಿ ಯವರ ಬಹುತೇಕ ಪುಸ್ತಕಗಳು ಲಭ್ಯ. >>ಈ ಪುಸ್ತಕದ ಬಗ್ಗೆ ನಾನು ಕೇಳಿದ್ದೀನಿ.>>ಓದಿಲ್ಲವೇ? ಅಂದಹಾಗೆ ನನ್ನಹೆಸರು ಅನಂತೇಶ, ಅನಂತೇಶು ಅಲ್ಲ :)

ಕರ್ನಾಟಕದಿಂದ ತಮಿಳುನಾಡಿಗೆ ಬರುವ ಪ್ರತಿಯೊಬ್ಬರಿಗೂ ನಾನು ಮೊದಲು ಹೇಳುವುದು "ಇಲ್ಲಿಗೆ ಬರುವ ಮೊದಲು ತಮಿಳು ತಲೆಗಳ ನಡುವೆ ಓದಿ, ನಂತರ ತಮಿಳು, ತಮಿಳರು ಹಾಗೂ ತಮಿಳುನಾಡು ಏನೆಂಬುದು ನಿಮಗೇ ಗೊತ್ತಾಗುತ್ತದೆ!" ಅಂದಹಾಗೇ ಈ ಪುಸ್ತಕ ಓದಿದ 15 ವರ್ಷಗಳ ನಂತರ ನಾನೂ ಬಿಜಿಎಲ್ ಸ್ವಾಮಿಯವರ ಸ್ವಾನುಭವಗಳನ್ನು ಅಲ್ಲಲ್ಲಿ ಬೇರೇಯೇ ರೀತಿಯಲ್ಲಿ ಅನುಭವಿಸಿ... ಕ್ಷಮಿಸಿ ಇನ್ನೂ ಅನುಭವಿಸುತ್ತಿದ್ದೇನೆ! ದಿನಾಲೂ ಮರೀನಾ ಬೀಚಿನಲ್ಲಿ ಬೆಳಿಗ್ಗೆ ವಾಕ್ ಹೋಗುವಾಗ ಪ್ರಸಿಡೆನ್ಸಿ ಕಾಲೇಜ್ ನೋಡುವಾಗ ಬಿಜಿಎಲ್ ಹಾಗೂ ಅವರ ಪುಸ್ತಕ ನೆನಪಿಗೆ ಬರುತ್ತದೆ.

>>ತಮಿಳು, ತಮಿಳರು ಹಾಗೂ ತಮಿಳುನಾಡು ಏನೆಂಬುದು ನಿಮಗೇ ಗೊತ್ತಾಗುತ್ತದೆ!>> ತಮಿಳರ ಬಗ್ಗೆ ಇದಕ್ಕಿಂತ ಚೆನ್ನಾದ ಪರಿಚಯ ಇದ್ದಿರಲಾರದು!

ಇದೊಂದು ಅತ್ಯದ್ಭುತ ಅಮೋಘ ಪುಸ್ತಕ! ಮೇಲ್ನೋಟಕ್ಕೆ ನವಿರಾದ ಹಾಸ್ಯದ ನಿರೂಪಣೆ ಕಾಣುತ್ತದೆಯಾದರೂ ಸ್ವಾಮಿಯವರ ಒಳನೋಟ, ಅಗಾಧವಾದ ಜ್ಞಾನ, ಸೂಕ್ಷ್ಮವಾದ ಗಮನಿಕೆಗಳು ಅದನ್ನು ವಿಶಿಷ್ಟವಾಗಿ ನಿರೂಪಿಸುವ ಶೈಲಿ ಅಲ್ಟ್ರಾ ಸೂಪರ್!

>>ಇದೊಂದು ಅತ್ಯದ್ಭುತ ಅಮೋಘ ಪುಸ್ತಕ>> ಖಂಡಿತಾ ಹೌದು, ಹಾಸ್ಯ ನಿರೂಪಣೆಯಿಂದಲೇ ಗಂಭೀರವಾದ ವಿಷಯವನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಭಾಷೆ,ಪ್ರಾಚೀನತೆ ಇತ್ಯಾದಿ ವಿಷಯಗಳ ಬಗ್ಗೆ ಅವರಿಗಿದ್ದ ತಿಳಿವಳಿಕೆ ಮತ್ತು ಆಸಕ್ತಿ ಮೆಚ್ಚಬೇಕಾದದ್ದು.

ಈ ಪುಸ್ತಕವನ್ನು ಆಂಗ್ಲಕ್ಕೆ ಅನುವಾದಿಸಿ ಪ್ರಪಂಚಕ್ಕೆ ಕೊಟ್ಟರೆ ತಮಿಳರ ಸ್ವಭಾವ ಕನ್ನಡಬಾರದವರಿಗೂ ತಿಳಿಯುತ್ತದೆ. ಇದು ಯಾವಾಗ ಯಾರಿಂದ ಆಗುತ್ತದೆಯೋ ಅಂತ ಕಾದು ಕುಳಿತಿದ್ದೇನೆ!

ಅಯ್ಯೋ, ಎಷ್ಟೊಂದು ಜನರು ಓದಿದ್ದಾರೆ, ನಾನಿವತ್ತೇ ಈ ಹೆಸರು ಕೇಳಿದ್ದು, ಇವತ್ತೇ ತರಬೇಕು ಪುಸ್ತಕವನ್ನು. ಧನ್ಯವಾದಗಳು ಪುಸ್ತಕದ ಬಗ್ಗೆ ತಿಳಿಸಿದ್ದಕ್ಕೆ. :-)

ಬೊಳುಂಬು ಅವರೇ, ಈ ಪುಸ್ತಕವನ್ನು ಓದಬೇಕು ಅಂತ ತುಂಬಾ ದಿನದಿಂದ ಅಂದುಕೊಳ್ತಾ ಇದ್ದೆ. ಶೇರ್ ಮಾಡಿದ್ದಕ್ಕೆ ವಂದನೆಗಳು. ಪುಸ್ತಕ ಓದುತ್ತಾ ಇದ್ದೇನೆ. ಧನ್ಯವಾದಗಳು. ................................... "ಅತಿಬ್ರಾಹ್ಮಣರ" ಮತ್ತು "ಅತಿ ತಮಿಳರ" ಚಿಂತನೆಗಳ ಶೈಲಿಯಲ್ಲಿ ಬಹಳ ಸಾಮ್ಯತೆ ಇದೆ. "ಅತಿ ಬ್ರಾಹ್ಮಣ್ಯ" ಚಿಂತನೆಯೇ "ಅತಿ ತಮಿಳ" ಚಿಂತನೆಯ ಮೂಲವಿರಬಹುದೇ ಅಂತ ಅನೇಕ ಬಾರಿ ಅನ್ನಿಸಿದೆ.

- ಈ ಪುಸ್ತಕದ ಬಗ್ಗೆ ಮೊದಲೊಮ್ಮೆ http://www.sampada.n... ಇಲ್ಲಿ ಬರೆದಿದ್ದಾರೆ. - ಹರಿ ಸಂಪದದಲ್ಲೇ ಅಪ್ಲೋಡ್ ಮಾಡಿದ್ದಾರೆ. ಆದರೆ ಆ ಲಿಂಕ್ ಕೆಲ್ಸ ಈಗ ಮಾಡುತ್ತಿಲ್ಲ. ನಾನು ಹಿಂದೆ ಡೌನ್ ಲೋಡ್ ಮಾಡಿದ ಪ್ರತಿ ಇದೆ. - ಆಗಾಗ ಓದುತ್ತ ಇರುತ್ತೇನೆ.

ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ ಸಾಹಿತ್ಯ ಕೃತಿಯೊಂದು ಸಲ್ಲದ ದ್ವೇಷ ಸಾಧನೆ ಮಾಡುವಂತಿರಬಾರದು. ಯಾರ ಬಗ್ಗೆಯೂ ತೀರಾ ಅವಹೇಳನಕಾರಿಯಾರಿ ಇರಬಾರದು. ತಮಿಳರು ತಮ್ಮ ಭಾಷೆಯ ಬಗ್ಗೆ ಎಷ್ಟೇ ಅಂಧಾಭಿಮಾನ ಇಟ್ಟು ಕೊಂಡರು ಅದು ಅವರ ವೈಯಕ್ತಿಕ ನೆಲೆಯ ಅಭಿವ್ಯಕ್ತಿ. ನಾವದನ್ನು ಚುಚ್ಚುವಂತೆ ಚಿತ್ರಿಸಬೇಕಿಲ್ಲ. ಮೊದಮೊದಲು ನಾನು ಆ ಕೃತಿಯನ್ನು ಬಹಳ ಪ್ರೀತಿಯಿಂದ ಓದಿದೆ. ಆದರೆ ನಂತರ ನಾವು ನಮ್ಮ ಭಾಷೆಯ ಮೇಲಿನ ಪ್ರೀತಿಯಿಂದ ಇನ್ನೊಂದು ಭಾಷೆಯ ಜನರನ್ನು ಅವಹೇಳನ ಮಾಡುವುದು ತಿರಾ ಅವಹೇಳನ ಎನಿಸಿತು. ನಾನು ಅವರಿಮ್ತ ಭಿನ್ನರಲ್ಲ ಅನ್ನಿಸಿತು. ಬೇರೆ ಭಾಷಿಗರನ್ನು ವ್ಯಂಗ್ಯ ಮಾಡುವುದರಿಂದ ಏನು ಸಾಧನೆ ಆಗುವುದಿಲ್ಲ. ಬದಲಾಗಿ ಭಾಷೆಗಾಗಿದುಡಿಯಬೇಕು.

ನಿಜ ಸಾತ್ವಿಕ್. ನಾನು ನಿನ್ನೆ ಪಿಡಿಎಫ್ ಪ್ರತಿ ಓದಿದೆ. ಅರ್ಧ ಓದುವಷ್ಟರಲ್ಲಿ ಯಾಕೋ ತೀರ ಬೇಸರವಾಯಿತು. ಅವರಿಗಿರುವ ಅರ್ಧ ಭಾಷಾಭಿಮಾನ ನಮ್ಮಲ್ಲಿ ಇದ್ದಲ್ಲಿ ನಾವು ಇಷ್ಟೊಂದು ಅವರನ್ನು ಅವಹೇಳನ ಮಾಡುತ್ತಿರಲಿಲ್ಲ ಎಂದೇನಿಸಿ ಓದುವುದನ್ನು ನಿಲ್ಲಿಸಿಬಿಟ್ಟೆ.

ಕೃತಿ ಎಲ್ಲಿಯೂ ದ್ವೇಷ ಸಾಧನೆ ಮಾಡುವಂತಿಲ್ಲ! ಇದನ್ನು ಕೇವಲ ಸಾಹಿತ್ಯದಂತೆಯೋ, ಅಥವಾ just for information ನಂತೆಯೋ ಓದಿದರೆ ಹೀಗನ್ನಿಸುವುದು ತರವೇನೋ! ಆದರೆ ನನಗನ್ನಿಸಿದ್ದು ಇದೊಂದು ಅಧ್ಯಯನದ ಕೃತಿ. ಭಾಷೆಯನ್ನು ವೈಜ್ಞಾನಿಕ ದೃಷ್ಟಿಯಲ್ಲಿ ನೋಡಿರುವ ಕೃತಿ. ಸ್ವಾಮಿಯವರ ಆಳವಾದ ಅಧ್ಯಯನದ, ಸಂಶೋಧನೆಯ, ತಾರ್ಕಿಕತೆಯ ಕಂಪು ಇದರಲ್ಲಿದೆ. ಇದು ಕೇವಲ ತಮಿಳು ಭಾಷೆಗೆ ಸೀಮಿತವಾಗಿರದೆ, ಅವರ ಸಾಹಿತ್ಯ, ಸಂಗೀತ ಮತ್ತಿತರ ಕಲಾಪ್ರಾಕಾರಗಳ ಒಟ್ಟಾರೆ ಅಧ್ಯಯನವೂ ಆಗಿದೆ. ಅವರ ಮನಸ್ಥಿತಿಯ ವಿಶ್ಲೇಷಣೆಯಿದೆಯೇ ಹೊರತು ಅವಹೇಳನವಲ್ಲ. ಸ್ವಾಮಿಯವರು ಅವರ ಅನುಭವಗಳನ್ನು ನಮ್ಮ ಮುಂದಿಟ್ಟಿರುವ ಪರಿಯನ್ನು ವ್ಯಂಗ್ಯವೆನ್ನಬೇಕಿಲ್ಲ. ಅದೇ ಅವರ ಶೈಲಿ. ಅವರ ಕಾಲೇಜುತರಂಗ, ಪ್ರಾಧ್ಯಾಪಕನ ಪೀಠದಲ್ಲಿ, ಮೈಸೂರು ಡೈರಿ, ಹಸಿರುಹೊನ್ನು ಮತ್ತಿತರ ಕೃತಿಗಳನ್ನು ಓದಿದಾಗ ಅವರು ನಮ್ಮ ಶಿಕ್ಷಣ (ಅ)ವ್ಯವಸ್ಥೆಯನ್ನು ಕುರಿತೂ ಹೀಗೇ ವಿಶ್ಲೇಷಿಸುವುದು ನಮ್ಮರಿವಿಗೆ ಬರಬಹುದು. ಅವು ಒಂದುಬಗೆಯಲ್ಲಿ ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಸಾತ್ವಿಕ್ ಅವರೇ- >>ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ ಸಾಹಿತ್ಯ ಕೃತಿಯೊಂದು ಸಲ್ಲದ ದ್ವೇಷ ಸಾಧನೆ ಮಾಡುವಂತಿರಬಾರದು. ಯಾರ ಬಗ್ಗೆಯೂ ತೀರಾ ಅವಹೇಳನಕಾರಿಯಾರಿ ಇರಬಾರದು. ತಮಿಳರು ತಮ್ಮ ಭಾಷೆಯ ಬಗ್ಗೆ ಎಷ್ಟೇ ಅಂಧಾಭಿಮಾನ ಇಟ್ಟು ಕೊಂಡರು ಅದು ಅವರ ವೈಯಕ್ತಿಕ ನೆಲೆಯ ಅಭಿವ್ಯಕ್ತಿ>> ಈ ನಿಮ್ಮ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ, ಆದರೆ ಸ್ವಾಮಿಯವರು ಖಂಡಿತಾ ಸಲ್ಲದ ದ್ವೇಷ ಸಾಧನೆ ಮಾಡುತ್ತಿಲ್ಲ. ಲಘು ಬರಹದ ಧಾಟಿಯಲ್ಲಿ ಅವರಿಗೆದುರಾದ ಸಂದರ್ಭಗಳನ್ನು ನಮ್ಮೆದುರಿಗೆ ಇಟ್ಟಿದ್ದಾರಷ್ಟೇ. ಭಾಷಾಂಧತೆ ತಮಿಳರ ವೈಯಕ್ತಿಕ ಅಭಿವ್ಯಕ್ತಿಯಾಗಿರಬಹುದು, ಆದರೆ ಅದು ಇತರ ಭಾಷೆಗಳ ಕುರಿತು ಸಹಿಷ್ಣುವಾಗಿರಬೇಕು. ಇಂಚರಾ- ಸ್ವಾಮಿಯವರು ಹೇಳಿರುವ ವಿಚಾರಗಳಿಗೆ ಆಧಾರಗಳನ್ನು ಆಕರಗಳನ್ನು ಅಲ್ಲೇ ಕೊಟ್ಟಿದ್ದಾರೆ, ಪೂರ್ತಿಯಾಗಿ ಓದಿ, ನಿಮ್ಮ ಅಭಿಪ್ರಾಯ ಬದಲಾಗಬಹುದು. ವಿನುತಾ - ಬಿ.ಜಿ.ಎಲ್ ಅವರ ವಿಚಾರಗಳು ಮತ್ತು ಅವರ ಶೈಲಿಯ ಬಗ್ಗೆ ವಿವರಿಸಿದ್ದಕ್ಕೆ ಧನ್ಯವಾದಗಳು. ಅಂದಹಾಗೆ ಎಲ್ಲ ತಮಿಳರು ದುರಭಿಮಾನಿಗಳೆಂದು ಖಂಡಿತಾ ನಾನು ಹೇಳುತ್ತಿಲ್ಲ. ತಮಿಳರ ಕುರಿತು ಸ್ವಾಮಿಯವರ ಅಭಿಪ್ರಾಯಗಳು ವಿಚಾರಾರ್ಹವಲ್ಲವೇ?

@ ಸಾತ್ವಿಕ್, ಈ ಪುಸ್ತಕ ದ್ವೇಷ ಸಾಧನೆಯಂತಿದಿಯೇ? ಸ್ವಾಮಿಯವರ ಅಧ್ಯಯನ ಅವರು ಕೊಡುವ ಪುರಾವೆ ತಮಿಳ ಮೊಂಡಾಟ ಅದನ್ನ ನೋಡಿದ್ರೆ ತಿಳಿಯುತ್ತದೆ.ಸತ್ಯ ಯಾವ್ದು ಅಂತ ಹೇಳಿದ್ದಾರೆ ಅಷ್ಟೇ. ನೀವು ಒಮ್ಮೆ ಬೆಂಗಳೂರಿಗೆ ಬನ್ನಿ ಆಮೇಲೆ ಗೊತ್ತಾಗುತ್ತೆ ನಿಮಗೆ ಅಲ್ಲಿ ಸಿಗೋವ್ರು ಮಲಯಾಳಿಗಳು ಮಾತ್ರ ಅಲ್ವಾ!? ;) @ ಇಂಚರ ಅವರಿಗಿರೋ ಅಷ್ಟು ಪ್ರೀತಿ ನಮಗೆ ಬೇಡ ಬಿಡ್ರಿ , ಜಾಸ್ತಿ ಪ್ರೀತಿ ಈ ರೀತಿ ಕಪಿ ಚೇಷ್ಟೆ ಮಾಡಿಸುತ್ತೆ ನೋಡಿ http://uncyclopedia.... @ ಅನಂತೆಶ ಈ ಪುಸ್ತಕ ಮಾಹಿತಿಗೆ ಧನ್ಯವಾದಗಳು, ಓದುತ್ತ ಇದ್ದೇನೆ ರಾಕೇಶ್ ಶೆಟ್ಟಿ :)

ಈ ಪುಸ್ತಕವನ್ನು ಬರೆದದ್ದೇ ಈಗ್ಗೆ ಸುಮಾರು ಮೂವತ್ತು ವರ್ಷಗಳ ಹಿಂದೆ. ಆಗಿನ್ನೂ ನಮ್ಮ (ಅಂದರೆ ನಮ್ಮ, ತಮಿಳರ ಮತ್ತು ಇತರರ) ಪರಸಂಸ್ಕೃತಿ ಸಹನೆಯ ಮಟ್ಟ ಇವತ್ತಿನಷ್ಟು ಕೆಳಗಿಳಿದಿರಲಿಲ್ಲ. ಹಾಸ್ಯವನ್ನು ಓದಿ ಕೇಳಿ ಕೆರಳದೆ ನಗುವ ಪ್ರವೃತ್ತಿ ಇನ್ನೂ ಅಲ್ಪಸ್ವಲ್ಪವಾದರೂ ಉಳಿದಿತ್ತು. ಇವತ್ತು "ಅವಹೇಳನ"ವೆಂದು ಕಾಣುವ ಸಾಹಿತ್ಯ ಅವತ್ತು ಕೇವಲ ತುಸು ಮೊನಚಾದ, ಚುಚ್ಚುವ ಹಾಸ್ಯವಾಗಿ ಮಾತ್ರ ಕಾಣುತ್ತಿತ್ತು (ಇದನ್ನು ಇಪ್ಪತ್ತೈದು-ಮೂವತ್ತು ವರ್ಷದ ಹಿಂದೆ ಓದಿದ ಅನುಭವದ ಮೇಲೆಯೇ ಇದನ್ನು ಹೇಳುತ್ತಿದ್ದೇನೆ). ಗ್ರಂಥದಲ್ಲಿ ಹಾಸ್ಯದ ಸ್ವಲ್ಪ ಹೆಚ್ಚೇ ಇದೆ, ಒಪ್ಪುತ್ತೇನೆ, ಆದರೆ ಇದರ ಹಿಂದಿರುವ ಆಳವಾದ ಅಧ್ಯಯನ (ಚುಚ್ಚುವುದಕ್ಕೇ ಮಾಡಿದ ಅಧ್ಯಯನವಲ್ಲ), ಮುಖ್ಯವಾಗಿ ತಮಿಳು ಭಾಷೆ/ಸಾಹಿತ್ಯ/ಇತಿಹಾಸಗಳ ಮೇಲೆ ಅವರಿಗಿದ್ದ ಪ್ರಭುತ್ವ, ಆ ಹಾಸ್ಯವನ್ನು ಸಹ್ಯಗೊಳಿಸುತ್ತದೆ. ಮೂವತ್ತುವರ್ಷ ತಮಿಳಿನ ಪರಿಸದಲ್ಲೇ ಬಾಳಿದ ಸ್ವಾಮಿ ತಮಿಳು ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡು ತಮಿಳರೇ ಆಗಿದ್ದರು ಎಂಬುದು ಆ ಹಾಸ್ಯವನ್ನು ಕ್ಷಮ್ಯಗೊಳಿಸುತ್ತದೆ ಕೂಡ. ಆದ್ದರಿಂದ ಅದು ಮನೆಯದೇ ಸದಸ್ಯನೊಬ್ಬ ಮಾಡಿದ ಟೀಕೆಯಂತೆ ಆತ್ಮೀಯವಾಗಿದೆಯೇ ಹೊರತು ಪರಕೀಯನೊಬ್ಬ ಮಾಡಿದ ದ್ವೇಷಾರೋಪಣೆಯೆನಿಸುವುದಿಲ್ಲ. ಅಲ್ಲಿ ಚುಚ್ಚುವ ಹಾಸ್ಯವಿದ್ದರೂ ವೈಯಕ್ತಿಕ ಭರ್ತ್ಸನೆಯಿಲ್ಲ. ಅದು ಕೇವಲ ಹಾಸ್ಯಗ್ರಂಥವಾಗಿ ಉಳಿಯದೇ ತಮಿಳು ಸಾಂಸ್ಕೃತಿಕ ಇತಿಹಾಸದ, ವಸ್ತುನಿಷ್ಠ ಪ್ರಮಾಣಬದ್ಧ ಅವಲೋಕನವೂ ಆಗಿದೆ. ಜೊತೆಗೆ ’ಧುರಭಿಮಾನ’ ನಮ್ಮನ್ನೂ ಯಾವರೀತಿ ಅಪಹಾಸ್ಯಕ್ಕೀಡುಮಾಡಬಹುದೆಂಬ ಎಚ್ಚರವೂ ನಮಗಾಗಬಹುದು. ಆದ್ದರಿಂದ ಅದು ಅವಹೇಳನಕಾರಿಯೆಂದು ಬೇಸರಿಸಿ ಪುಸ್ತಕ ಮುಚ್ಚಿಡುವುದರ ಬದಲು ಒಮ್ಮೆ ಓದಿದರೆ ನಷ್ಟವೇನೂ ಇಲ್ಲವೆನಿಸುತ್ತದೆ. ವಿಶೇಷವಾಗಿ "ಪುರಂದರದಾಸರ ಪುಣ್ಯ" ಎಂಬ ಭಾಗ ಓದಬೇಕಾದ್ದು.

ತಮಿಳರಲ್ಲಿರುವ ಭಾಷಾಭಿಮಾನದಲ್ಲಿ ಶೇ.೨೫ರಷ್ಟು ನಮ್ಮಲ್ಲಿದ್ದಿದ್ದರೆ ಕನ್ನಡ ಭಾಷೆಗೆ ಇಂದು ಈ ರೀತಿಯ ಹೀನಾಯ ಸ್ಥಿತಿ ಬರುತ್ತಿರಲಿಲ್ಲ. ಅವರ ಭಾಷಾಭಿಮಾನ ಒಮ್ಮೊಮ್ಮೆ ನಮಗೆ ದುರಭಿಮಾನವಾಗಿ ಕಂಡರೂ ಸಹಾ ಅದು ಅನುಕರಣೀಯ.