ಜಸ್ವಂತ್ ಸಿಂಗ್ ಮತ್ತು ಜಿನ್ನಾ

To prevent automated spam submissions leave this field empty.

ಸತ್ಯಮೇವ ಜಯತೆ ಎನ್ನುವುದು ಈಗ ಬ್ಯಾಂಕ್ ನೋಟುಗಳಿಗೆ ಮಾತ್ರ ಸೀಮಿತ. truth alone triumphs ಯಾವ ಘಳಿಗೆ ನಮ್ಮೆಡೆಯಿಂದ ಮಾಯವಾಯಿತು ಎನ್ನುವುದು ನಿಖರವಾಗಿ ಗೊತ್ತಿಲ್ಲದಿದ್ದರೂ ಅದರ ಸಾವು ಮಾತ್ರ unsung ಆಗಿದ್ದು ಖೇದಕರ. ಕಾರಣ ನಮ್ಮ ದೇಶದಲ್ಲಿ ನಡೆಯುವ ಹಲವು ಮಹತ್ವದ ಘಟನೆಗಳು ಹಾಲು - ಸುಣ್ಣ conundrum ಗೆ ಸೇರಿದ್ದು. ಹಾಲು ಎಂದು ನಂಬಿ ಸಂತಸ ಹೆಮ್ಮೆ ಪಡುತ್ತಿರುವಾಗಲೇ ಅಲ್ಲಲ್ಲ ಅದು ಸುಣ್ಣ ಎನ್ನುವ ಕಹಿ ಸತ್ಯ party ಯನ್ನು ಹಾಳು ಮಾಡಿಬಿಡುತ್ತದೆ. ಸತ್ಯ ಹರಿಶ್ಚಂದ್ರನ tryst with truth ಅನ್ನು ನಾವು ಎಂಜಾಯ್ ಮಾಡಿ ವಿಶ್ವಕ್ಕೂ ಬಡಿಸಿದೆವು ಇದೇ ನಮ್ಮ ಜೀವನ ರೀತಿ, ನಮ್ಮ ಸಂಸ್ಕೃತಿ ಎಂದು.

As palace mirror'd in the stream, as vapour mingled with the skies,
So weaves the brain of mortal man the tangled web of Truth and Lies.

ದಶಕಗಳ ಕಾಲ ನಾವು ನಂಬಿದ್ದು (ಈಗಲೂ ನಂಬುತ್ತಿರುವುದು) ಜಿನ್ನಾ ಅನ್ನೋ ಸ್ವಾರ್ಥಿ ನಮ್ಮ ಅಖಂಡ ಭಾರತದ ಸ್ವಪ್ನಕ್ಕೆ ಹುಳಿ ಹಿಂಡಿ ತನ್ನ ಪಾಲಿನ ಪ್ರದೇಶಕ್ಕೆ ಪಾಕಿಸ್ತಾನ ಎಂದು ನಾಮಕರಣ ಮಾಡಿ ಗೆಲುವಿನ ನಗೆ ನಕ್ಕ ಅಂತ. ಈ ವಾದವನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಭೂಮಿಯಲ್ಲೇ ಹುಟ್ಟಿ ಇಲ್ಲೇ ಮಣ್ಣಾಗಿ ಹೋಗುವ ಒಂದು ಸಮುದಾಯದವರ ಮೇಲೆ ಗೂಬೆ ಕೂರಿಸಿ ಸಾಕಷ್ಟು ಸತಾಯಿಸಿ ನಾವು ಯಾರಿಗೂ ಕಡಿಮೆ ಇಲ್ಲ ಎಂದು ಜಗಜ್ಜಾಹೀರು ಮಾಡಿದೆವು. ವಿಶೇಷವಾಗಿ ಮುಸ್ಲಿಮರಿಗೆ ಜಿನ್ನಾ ಎಂದರೆ ತಮ್ಮೆಲ್ಲಾ ತಾಪತ್ರಯಗಳ ತಂದೆ ಎನ್ನುವ ನಂಬಿಕೆ. ಆತ ಪಾಕನ್ನು ಕೇಳದೆ ತೆಪ್ಪಗೆ ಬಿದ್ದಿದ್ದರೆ ರಗಳೆ ಆಗುತ್ತಿರಲಿಲ್ಲ ಎಂದು ಹಲುಬು. ಮಾಧ್ಯಮದವರಿಗೆ ಹೋಳಿಗೆ ಊಟವನ್ನೂ, ಅಡ್ವಾಣಿ ಮತ್ತು ಗೆಳೆಯರಿಗೆ ಹೊಸ ತಲೆನೋವನ್ನೂ ಉಣಿಸಲು ಒಂದು ಸುಂದರ (ಸುಂದರ?) ಬೆಳಗ್ಗೆ ಜಸ್ವಂತ್ ಸಿಂಗ್ ಹೊಸ ಹಾಡಿನೊಂದಿಗೆ ಪ್ರತ್ಯಕ್ಷವಾದರು. "ಜಿನ್ನ" ನಾನು ನೀವು ಎಣಿಸಿ ಕೊಂಡಂತಲ್ಲ ಆತ ನಿಜಕ್ಕೂ "ಚಿನ್ನ". ನಿಜವಾದ ಖಳನಾಯಕರು ನೆಹರು ಮತ್ತು ಪಟೇಲ ಎಂದು ದೇಶ ನಿಬ್ಬೆರಗಾಗುವಂಥ ಬಾಂಬ್ ಹಾಕಿದರು.

ಚರಿತ್ರೆಯನ್ನು ಕುದುರೆ ಕನ್ನಡಕ ತೆಗೆದಿಟ್ಟು, ಧೈರ್ಯ ಮಾಡಿ, ಸಂಶೋಧಿಸಿ ಓದಿದ ಎಲ್ಲರಿಗೂ ಗೊತ್ತಿತ್ತು ಈ ಕಹಿ ಸತ್ಯ. ಆದರೆ ಇದನ್ನು ಜನರಿಗೆ ಬಡಿಸಲು ಎಂಟೆದೆ ಇಲ್ಲದೆ ಹೋಯಿತು. ವಿಪರ್ಯಾಸ ಏನೆಂದರೆ ಸತ್ಯ ನುಡಿಯಲು ಎಂಟೆದೆಯ ಅವಶ್ಯಕತೆ. ಇಲ್ಲೇ ನಾಗರೀಕತೆಯ ಸೋಲು. ನೈತಿಕತೆಯ ಮಹಾ ಸೋಲು. ಸತ್ಯ, ನಿರ್ಭಿಡೆ ಮತ್ತು ಸರಾಗವಾಗಬೇಕು, ಹರಿಯುವ ಝರಿಯಂತೆ. ಸತ್ಯಹರಿಶ್ಚಂದ್ರನ ಸತ್ಯ ನುಡಿವ ಪರಂಪರೆ ಅವನು ಕಾಯುವ  ಮಸಣ ದಾಟಿ ನಮ್ಮನ್ನು ತಲುಪಲಿಲ್ಲ. ಅದೇ ದೊಡ್ಡ ದುರಂತ.

ಒಂದೊಮ್ಮೆ ಕರಾವಳಿಯ ಮಣಿಪಾಲದಿಂದ ಪ್ರಕಟವಾಗುವ ವಾರಪತ್ರಿಕೆಯಲ್ಲಿ ಬಂದ ಲೇಖನದ ನೆನಪು ಬರುತ್ತಿದೆ. ಆ ವಾರಪತ್ರಿಕೆ ಮಾರುಕಟ್ಟೆಗೆ ಬಂದ ಹೊಸತು. ಒಳ್ಳೊಳ್ಳೆ ಲೇಖನ ವಿಶೇಷಾಂಕಗಳೊಂದಿಗೆ ಸುಂದರವಾಗಿ ಮೂಡಿ ಬರುತ್ತಿತ್ತು. ಮೈಸೂರ್ ಪ್ರಕಾಶನದವರ ವಾರಪತ್ರಿಕೆ ಹೊಸತನ ದೊಂದಿಗೆ ಹೆಜ್ಜೆ ಹಾಕಲು ಸೋಮಾರಿಯಾದಾಗ ಮಣಿಪಾಲದ ಈ ಪತ್ರಿಕೆ ಹೊಸತನ್ನು ನೀಡಲು ಆರಂಭಿಸಿತು. ಈ ವಾರಪತ್ರಿಕೆಯಲ್ಲಿ ಒಮ್ಮೆ ಒಂದು ಲೇಖನ. " ಭಾರತ ಪಾಕ ಒಂದಾಗಿದ್ದಿದ್ದರೆ" ಎನ್ನೋ ಶೀರ್ಷಿಕೆಯಡಿ ಹಲವು ಅಂಶಗಳ ಪ್ರಸ್ತಾಪ ಕೊಟ್ಟಿದ್ದರು.

ಅದರಲ್ಲಿನ ಕೆಲವು ಅಂಶಗಳು ಮಾತ್ರ ನನ್ನ ನೆನಪಿನಲ್ಲುಳಿದಿದೆ.

1.       ಭಾರತ ಪಾಕ ಒಂದಾಗಿದ್ದಿದ್ದರೆ ವಿಶ್ವಕ್ಕೆ ಸವಾಲಾಗುವ ಬಲಿಷ್ಠ ರಾಷ್ಟ್ರವಾಗಿರುತ್ತಿತ್ತು.

2.       ನಮ್ಮ ಕ್ರಿಕೆಟ್ ತಂಡ ಯಾರನ್ನೂ ಮಣಿಸುವಂಥ ತಂಡವಾಗಿರುತ್ತಿತ್ತು.

         ಮತ್ತು ಕೊನೆಯದಾಗಿ,

3.       ಭಾರತ ಪಾಕ ಒಂದಾಗಿ ಇರುತ್ತಿದ್ದರೆ " ಅಖಂಡ ಭಾರತದ ಪ್ರಥಮ ಪ್ರಧಾನಿಯ ಹೆಸರು "ಬೇರೇನೋ" ಆಗಿರುತ್ತಿತ್ತು"

" ಬೇರೇನೋ " ಎಂದು  ಹೆಸರನ್ನು ಬಹಿರಂಗ ಪಡಿಸಲು ಆ ಪತ್ರಿಕೆ ಹೋಗಲಿಲ್ಲ. (ಎಂಟೆದೆಯ ಕೊರತೆ? ). ಸಾಮಾನ್ಯ ಜ್ಞಾನ ವಿರುವ ಒಂದಿಷ್ಟು ಚರಿತ್ರೆ ಓದಿದ ಜನರಿಗೆ ಮನವರಿಕೆ ಆಗಿತ್ತು " ಆ ಬೇರೇನೋ ಅನ್ನುವುದು ಪ್ರೇತವೋ, ಭೇತಾಳವೋ ಅಲ್ಲ, ಅದು ನಮ್ಮಿಂದ ಪಾಕ್ ಎಂಬ ತುಂಡನ್ನು ಕಸಿದುಕೊಂಡು ಓಡಿದ  ಪಾಕಿಸ್ತಾನದ ರಾಷ್ಟ್ರಪಿತ ಜಿನ್ನಾ ಎಂದು.

ಸ್ವಾರಸ್ಯವೆಂದರೆ ಜಿನ್ನಾ ಪಾಕಿಸ್ತಾನದಲ್ಲಿ ಸತ್ತು ಪಾಕಿಸ್ತಾನದಲ್ಲೇ ಸಮಾಧಿ ಸೇರಿದರೂ ಆತನ ಪ್ರೇತ ನಮ್ಮನ್ನು ಕಾಡುತ್ತಿರುವುದು.       

ಈ ಹಳತೆನ್ನೆಲ್ಲ ಹೊರಗೆಳೆದು ಸಂದು ಹೋದ ಘಟನೆಗಳ ಮೇಲೆ ವಿಪರೀತ ಫೋಕಸ್ ಹಾಕುವುದು ಕೇವಲ ನಮಗೆ ಇರುವ ಜಾಯಮಾನವೋ ಏನೋ ನನಗೆ ಗೊತ್ತಿಲ್ಲ. ಎಲ್ಲವನ್ನೂ ಮರೆತು, ಕ್ಷಮಿಸಿ ಭವಿಷ್ಯದೆಡೆ  ದಾಪುಗಾಲು ಹಾಕಲು ನಾವು ತೋರುವ ಅಸಡ್ಡೆ ಪ್ರಾಯಶಃ ದಕ್ಷಿಣ ಏಷ್ಯ ದುಃಖಿತ ಏಷ್ಯ ವನ್ನಾಗಿ ಮಾಡುತ್ತಿದೆಯೇನೋ.

ಜಿನ್ನಾ ಜಾತ್ಯಾತೀತ ಮನುಷ್ಯ ಎಂದ ಅಡ್ವಾಣಿಯ "oratory" ಮತ್ತು ಜಸ್ವಂತರ ಇತ್ತೀಚಿನ "wizardry" ಭವಿಷ್ಯದಲ್ಲಿ ಸಹಾಯಕವಾಗಬಹುದೋ?        

ಪುಸ್ತಕ ಪ್ರಕಟವಾದ ಕೂಡಲೇ ಎಲ್ಲಿ ನಮ್ಮ ಘನ ಸರಕಾರ ಗುಜರಾತಿನ ಆದರ್ಶ ಅನುಸರಿಸಿ ನಿಷೇಧಿಸೀತು ಎಂದು ಹೆದರಿ ಕೊಂಡು ತಂದು ಓದಿದೆ. ಪಾಕ್ ಮೂಲದ ಅಮೇರಿಕೆಯಲ್ಲಿ ವಾಸವಿರುವ Tufts University ಪ್ರೊಫೆಸರ್  ಆಯೇಶ ಜಲಾಲ್ ಬರೆದ The Sole Spokesman: Jinnah, the Muslim League and the Demand for Pakistan ಪುಸ್ತಕದ ಮತ್ತೊಂದು ಅವತಾರದಂತೆ ಜಸ್ವಂತ್ ರ ಈ ಹೊಸ ಸೆನ್ಸೇಶನ್ ಕಂಡಿತಾದರೂ ಯಾರಿಗೂ ಜಗ್ಗದೆ ಸತ್ಯವೋ ಮಿಥ್ಯೆಯೋ ಎಂಟೆದೆಯ ಗರಿಷ್ಠ ಲಾಭ ಪಡೆದು ಬರೆದೇ ಬಿಟ್ಟರು ಜಸ್ವಂತ್ ಸಿಂಗ್ ಸಾಹೇಬರು….

ನಾಣ್ಯಕ್ಕೆ ಎರಡು ಮುಖಗಳು,  ಎಂದು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಭಾರತ ಸ್ವಾತಂತ್ರ ಹೋರಾಟದ ಪ್ರಮುಖ ಘಟ್ಟದ ರಾಜಕೀಯ ಪರಿಸ್ಥಿತಿ ಮತ್ತು ಆಗ ಮುಂದಾಳತ್ವ ವಹಿಸಿದ್ದ ವ್ಯಕ್ತಿಗಳ ಬಗ್ಗೆ ತಿಳಿಯಲು ಡೊಮಿನಿಕ್ ಲ್ಯಾಪಿರೆ ಮತ್ತು ಲ್ಯಾರಿ ಕಾಲಿನ್ಸ್ (Dominique Lapierre and Larry Collins) ಬರೆದಿರುವ "Freedom at Midnight" ಪುಸ್ತಕವನ್ನು ಓದಿ. ಯಾವುದೇ ಪೂರ್ವಾಗ್ರಹವಿಲ್ಲದೆ ಬರೆದಂತ ಪುಸ್ತಕವಿದು. ಲೇಖಕರು ಸಾಕಷ್ಟು ಸಂಶೋದನೆ ಮಾಡಿ ಬರೆದಿದ್ದಾರೆ. ಪ್ರತಿಯೊಬ್ಬ ಭಾರತೀಯ ಪ್ರಜೆಯೂ (ಪಾಕಿಸ್ತಾನಿಗಳೂ ಸಹ) ಓದಬೇಕಾದ ಪುಸ್ತಕ.

ಜಸ್ವಂತ್ ಅವರ ಪುಸ್ತಕವನ್ನ ನಾನಿನ್ನು ಓದಿಲ್ಲ, ಆದರೆ ಪ್ರತಾಪರ ಪುಸ್ತಕವನ್ನ ಓದ್ತಾ ಇದ್ದೇನೆ. ಕೇವಲ 'ನೆಹರು, ಪಟೇಲ್' ಮಾತ್ರ ಕಾರಣರು ಅಂದರೆ ಹೇಗೆ!? ಆ ಲಿಸ್ಟ್ ಅಲ್ಲಿ ಗಾಂಧೀಜಿ,ಜಿನ್ನಾ,ಇಕ್ಬಾಲ್ ಕೂಡ ಸೇರಿಸಿದ್ದರೆ ಮಾತ್ರ ಅದು ಪರಿಪೂರ್ಣ! <<1.ಭಾರತ ಪಾಕ ಒಂದಾಗಿದ್ದಿದ್ದರೆ ವಿಶ್ವಕ್ಕೆ ಸವಾಲಾಗುವ ಬಲಿಷ್ಠ ರಾಷ್ಟ್ರವಾಗಿರುತ್ತಿತ್ತು.>> ಈ ಮಾತು ಉತ್ಪ್ರೇಕ್ಷೆ ಅನ್ನಿಸುತ್ತದೆ ಅಷ್ಟೇ!, ಧರ್ಮದ ಬಗ್ಗೆ ಯೋಚಿಸುವ ಜನರಿಂದ ದೇಶದ ಬಲಿಷ್ಟವಾದಿತೆ?, ಈಗ ಹೇಗಿದ್ದೇವೋ ಅದೇ ಸರಿ ಇದೆ, ಇಲ್ಲ ಅಂದ್ರೆ ಬರಿ ದಂಗೆ,ಹಿಂಸಾಚಾರಗಳು ಅಲ್ಲಿನಂತೆ ಇಲ್ಲಿಯೂ ನಿತ್ಯದ ಕತೆಯಾಗುತಿತ್ತು. <<2. ನಮ್ಮ ಕ್ರಿಕೆಟ್ ತಂಡ ಯಾರನ್ನೂ ಮಣಿಸುವಂಥ ತಂಡವಾಗಿರುತ್ತಿತ್ತು.>> ಇದು ಒಪ್ಪುವಂತ ಮಾತು! :) <<3. ಭಾರತ ಪಾಕ ಒಂದಾಗಿ ಇರುತ್ತಿದ್ದರೆ " ಅಖಂಡ ಭಾರತದ ಪ್ರಥಮ ಪ್ರಧಾನಿಯ ಹೆಸರು "ಬೇರೇನೋ" ಆಗಿರುತ್ತಿತ್ತು">> ಇದು ನಿಜ. ಆ ಕುರ್ಚಿಗೊಸ್ಕರವಾಗೆ ತಾನೇ ಅದೆಷ್ಟೋ ನಾಯಕರನ್ನು ಮೂಲೆಗುಂಪು ಮಾಡಿದ್ದು.

>>2. ನಮ್ಮ ಕ್ರಿಕೆಟ್ ತಂಡ ಯಾರನ್ನೂ ಮಣಿಸುವಂಥ ತಂಡವಾಗಿರುತ್ತಿತ್ತು. ಖಂಡಿತವಾಗಿಯೂ ಸಾಧ್ಯವಿರಲಿಲ್ಲ..... ಈಗ ಹೇಗಿದ್ಯೋ ಹಾಗೆ ಇರ್ತಿತ್ತು ...... ಇಡೀ ಆಸ್ಟ್ರೇಲಿಯಾ ಖಂಡದ ಜನಸಂಖ್ಯೆ, ನಮ್ಮ ಮುಂಬೈ ನಗರದ ಜನಸಂಖ್ಯೆಗಿಂತ ಕಡಿಮೆ.... ಆದರೆ ಅಲ್ಲಿರುವ ತಂಡ ನೋಡಿ... ಮನಸಿದ್ರೆ ಕರ್ನಾಟಕ ದಿಂದಲೇ ಆಸ್ಟ್ರೇಲಿಯ ಮಣಿಸುವ ತಂಡ ನಿರ್ಮಿಸಬಹುದು... ಅದೇ ಆಗದಿದ್ದಾಗ ಪಾಕಿಸ್ತಾನ ಇದ್ರೂ ಒಂದೇ ... ಶ್ರೀಲಂಕ ಇದ್ರೂ ಒಂದೇ .......