ಮುಂಬೈನಲ್ಲಿ, ಸುಪ್ರಸಿದ್ಧ ಹರಿಕಥಾ ವಿದುಷಿ. ಜಿ. ಶೋಭಾ ನಾಯ್ಡು !

To prevent automated spam submissions leave this field empty.

ಬೆಂಗಳೂರಿನಿಂದ ಆಗಮಿಸಿದ, ದಿವಂಗತ ಶ್ರೀ ಗುರುರಾಜುಲು ನಾಯ್ಡುರವರ ಪುತ್ರಿ, ಪ್ರಸಿದ್ಧ ಹರಿಕಥಾ ವಿದೂಷಿ, ('ಕರ್ನಾಟಕ ರಾಜ್ಯೋತ್ಸವ ಕೀರ್ತನ ರತ್ನ'  'ಗಾನಸರಸ್ವತಿ ಕಳಶ ಪ್ರಶಸ್ತಿ' ಪುರಸ್ಕೃತೆ) ಶ್ರೀಮತಿ, ಶೋಭಾ ನಾಯ್ಡುರವರು,  ತಮ್ಮ ತಂದೆಯವರದೇ ಶೈಲಿಯಲ್ಲಿ ತಮ್ಮ ಹರಿಕಥಾಕೀರ್ತನೆಯ ರಸದೌತಣವನ್ನು ಕನ್ನಡ ರಸಿಕರಿಗೆ ಉಣಬಡಿಸಲು ಶ್ರಮಿಸುತ್ತಿದ್ದಾರೆ. ಅದರಂತೆ ಮುಂಬೈನಗರ ಹಾಗೂ ಉಪನಗರಗಳ ಕನ್ನಡ ಕೀರ್ತನ ಪ್ರಿಯರಿಗಾಗಿಯೇ  ಶೋಭಾರವರು, ತಮ್ಮ ಕಾರ್ಯಕ್ರಮಗಳನ್ನು ೨೦೦೯ ರ ಅಕ್ಟೋಬರ್ ತಿಂಗಳಿನಲ್ಲಿ ಹಮ್ಮಿಕೊಂಡಿದ್ದರು. ಅವುಗಳು ಹೀಗಿದ್ದವು :

೧. ’ವೀರ ಬಬ್ರುವಾಹನ’ (ಗುರುವಾರ, ೧, ಅಕ್ಟೋಬರ್, ೨೦೦೯ ಸಾಯಂಕಾಲ, ೬. ಗಂಟೆಗೆ),

ಮಾಹಿಮ್ ನಲ್ಲಿರುವ ’ಡಾ. ವಿಶ್ವೇಶ್ವರಯ್ಯ ಸಭಾಗೃಹ’ ದಲ್ಲಿ ’ಮುಂಬೈ ಕರ್ನಾಟಕ ಸಂಘ’ ದ, ಪ್ರಾಯೋಜಕತ್ವದಲ್ಲಿ,  ಕಥಾಪ್ರಸಂಗ ತುಂಬಾ ಚೆನ್ನಾಗಿ ಮೂಡಿಬಂತು. ಹೆಚ್ಚು ಸಂಖ್ಯೆಯಲ್ಲಿ ರಸಿಕರು ಹರಿಕಥೆಯ ಆನಂದವನ್ನು ಆಸ್ವಾದಿಸಿದರು. ಕರ್ನಾಟಕ ಸಂಘದ ಪದಾಧಿಕಾರಿಗಳಾದ, ಶ್ರೀ. ಭರತ್ ಕುಮಾರ ಪೊಲಿಪು, ಶೀ. ಓಂದಾಸ ಕಣ್ಣಂಗಾರ್, ಶ್ರೀ. ನಾಯಕ್ ಸಮಾರಂಭದಲ್ಲಿ ಹಾಜರಿದ್ದರು. ಶೀ. ಜಿ. ಎಸ್. ನಾಯಕ್ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದರು.
೨. ’ಮೂರೂವರೆ ವಜ್ರಗಳು’ (ಶುಕ್ರವಾರ, ೨ ಅಕ್ಟೋಬರ್, ೨೦೦೯ ರಂದು, ಮಧ್ಯಾನ್ಹ, ೧- ೪ ರವರೆಗೆ),
’ಕಲ್ಯಾಣದ ಕನ್ನಡ ಸಾಂಸ್ಕೃತಿಕ ಕೇಂದ್ರ’,  ವತಿಯಿಂದ ’ಫೆಡರೇಶನ್ ಹಾಲ್, ಲೋಕಗ್ರಾಮ, ಕಲ್ಯಾಣ್’ [ಪೂ]  ನಲ್ಲಿ ಹರಿಕಥೆ,ನಡೆಯಿತು.
 
೩.’ಭಕ್ತ ಪ್ರಹ್ಲಾದ’(ಅಕ್ಟೋಬರ್, ೨, ೨೦೦೯  ರಂದೇ, ಸಾಯಂಕಾಲ ೬ ಗಂಟೆಗೆ),
 
’ಡೊಂಬಿವಲಿಯ,[ಪ] ನಮ್ಮ ಕಲಾವಿದೆರ್’, ಆಶ್ರಯದಲ್ಲಿ, ’ರೇತಿಭವನ್’, ೩ ನೆ ಮಹಡಿಯಲ್ಲಿ, ಜರುಗಿತು.
೪. ’ಗಜಗೌರಿ ವ್ರತ’ (ಅಕ್ಟೋಬರ್, ೩, ಶನಿವಾರ, ೨೦೦೯  ೬ ಗಂಟೆಗೆ),
’ಕಲ್ಯಾಣ್ ಕರ್ನಾಟಕ ಸಂಘ’ದ ವತಿಯಿಂದ, ’ಶ್ರೀಮತಿ ಗಿರಿಜಾ ಪಯ್ಯಡೆ ಸಭಾಗೃಹ’, ಪ  ’ಜೋಕರ ಪ್ಲಾಝ’, ಬೈಲ್ ಬಝಾರ್’, ಸಮೀಪ,
 
೫.’ಶ್ರೀ ಕೃಷ್ಣ ಗಾರುಡಿ’ (ಅಕ್ಟೋಬರ್ ೪, ರವಿವಾರ ದಂದು, ಸಂಜೆ ೫ ಗಂಟೆಗೆ)
’ಬಿಲ್ಲವರ ಅಸೋಸಿಯೇಷನ್’, ’ಸತ್ಯ ವಿಜಯ ಸೊಸೈಟಿ,’ ಸರ್ವೋದಯ ನಗರ, ಭಾಂಡೂಪ್’ (ಪ)
 
’ಶ್ರೀ ಕೃಷ್ಣ ಗಾರುಡಿ’ (ದಿನಾಂಕ, ೫, ಸೋಮವಾರ, ೨೦೦೯  ರಂದು, ಮಧ್ಯಾನ್ಹ ೩ ಗಂಟೆಗೆ)
’ಯಕ್ಷ ಪ್ರೇಮಿ ಬಳಗ, ಮುಲುಂಡ್ ಪೂ’ , ಆಶ್ರಯದಲ್ಲಿ ಮದ್ಯಾನ್ಹ.
ಮರಾಠಾ ಸಾಂಸ್ಕೃತಿಕ ಮಂಡಳದ ಸಭಾಗೃಹ’ , ೯೦ ಅಡಿ ಮಾರ್ಗ, ’ಕೇಲ್ಕರ್ ಮಹಾವಿದ್ಯಾಲಯ’ದ  ಸಮೀಪ, ಮುಲುಂಡ್ ಪೂ,
೬.’ಮಾಯಾಬಝಾರ್’ (ಅಭಿಮನ್ಯು ವಿವಾಹ) (ಅಕ್ಟೋಬರ್, ೮, ೨೦೦೯  ಗುರುವಾರದಂದು, ಸಂಜೆ, ೬-೩೦ ಕ್ಕೆ),
’ಯಕ್ಷಕಲಾಪ್ರೇಮಿ ಸಂಘ ಡೊಂಬಿವಲಿ’ ಯವರ ಆಶ್ರಯದಲ್ಲಿ, ’ಠಾಕೂರ್ ಸಭಾಗೃಹ’, ಟಂಡನ್ ಮಾರ್ಗ, ’ಮಾರುತಿ ಟ್ರೇನಿಂಗ್ ಶಾಲೆ’ಯ ಎದುರಿಗೆ, ರಾಮನಗರ, ಡೊಂಬಿವಲಿ ಪೂ ಸಾಣೂರು ’ಮನೋಹರ ಕಾಮತ್’ ರವರ ಪ್ರಾಯೋಜಕತ್ವದಲ್ಲಿ ಹರಿಕೀರ್ತನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುಂಬೈನ ಖ್ಯಾತ ಸಮಾಜಸೇವಕ, ’ಬಿ. ವಿಶ್ವನಾಥ ಕಾಮತ್’ ದೀಪಬೆಳಗಿ ಸಮಾರಂಭದ ಉದ್ಘಾಟನೆಯನ್ನು ಮಾಡಿದರು. ’ರಷ್ಮಿ ಕಾಖಂಡಿಕೆ’ಯವರ ಸ್ವಾಗತಗೀತೆಯಿಂದ ಸಮಾರಂಭ ಆರಂಭವಾಯಿತು.
ಸ್ವಾಗತಭಾಷಣ, ’ಕನ್ನಡ ಜಾಗೃತಿ ಪರಿಷತ್’ ನ ಅಧ್ಯಕ್ಷ, ’ಕೆ. ವಿಶ್ವನಾಥ್  ಎನ್. ಭಟ್’ ಮಾಡಿದರು.
ಸಮಾಜಸೇವೆಯಲ್ಲಿ ಮಂಚೂಣಿಯಲ್ಲಿದ್ದ ಗಣ್ಯಾಹ್ವಾನಿತರಾಗಿದ್ದ, ’ಕಮಲಾಕ್ಷ್ ಕಾಮತ್’, ’ಸುಗುಣ ಕೆ. ಕಾಮತ್’, ’ಮನೋಹರ ಕಾಮತ್’, ’ಅನಪೂರ್ಣ ಕಾಮತ್’, ’ಕೆ. ವಿ. ಎನ್. ಭಟ್’, ’ವೆಂಕಟೇಶ ಪೈ,’ ’ಸುಮನ್ ಚಿಪ್ಳೂಣ್ಕರ್’, ’ರಘುನಂದನ್ ಕಾಮತ್’, ಸನ್ಮಾನಿಸಿದರು. ’ಬಿ. ವಿ. ಕಾಮತ್’ ಕಾರ್ಯಕ್ರಮಕ್ಕೆ ಯಶನ್ನು ಕೋರಿದರು. ಸಮರ್ಥವಾಗಿ ಕಾರ್ಯಕ್ರಮದ ನಿರ್ವಹಣೆಮಾಡಿದ, ’ಜಿ. ಎಸ್. ನಾಯಕ್’, ಕೊನೆಯಲ್ಲಿ, ವಂದನಾರ್ಪಣೆಮಾಡಿದರು.
’ವೆಂಕಟೇಶ ಪೈ ಯಕ್ಷಗಾನ ಪ್ರೇಮಿಗಳ ಸಂಘ’ದ ಮುಂದಿನ ಯೋಜನೆಗಳ ಬಗ್ಗೆ ವಿಷೇಶ ಮಾಹಿತಿಯನ್ನು ಕೊಡುತ್ತಾ, ತನುಮನಧನಗಳ ಪ್ರೋತ್ಸಾಹವನ್ನು ಯಾಚಿಸಿದರು.
ಒಟ್ಟಿನಲ್ಲಿ ಇಂದು ನಮ್ಮ ಮಧ್ಯೆ ಮೆರೆಯುತ್ತಿರುವ ಟೆಲಿವಿಶನ್, ಚಲನಚಿತ್ರ, ಆಡಿಯೋ-ವೀಡಿಯೋಗ ಮಧ್ಯೆ, ಹರಿಕಥೆಯ ಸ್ಥಾನವೂ ತನ್ನ ವ್ಯಕ್ತಿತ್ವವನ್ನು ಉಳಿಸಿಕೊಂಡು ಬೆಳೆಯುವಲ್ಲಿ ಶೋಭಾ ಕಠಿಣ ಪರಿಶ್ರಮ ಪಡುತ್ತಿರುವುದು, ಒಂದು ಗಮನಾರ್ಹ ಸಂಗತಿ.
ಈ ಕೀರ್ತನ ಕಲೆ ನಮ್ಮಿಂದ ದೂರಸರಿಯದಂತೆ ನಾವೆಲ್ಲಾ ಜಾಗೃತರಾಗಿದ್ದು ಶೋಭಾರವರ ಜೊತೆಗೂಡಿ ಪ್ರೋತ್ಸಾಹ ನೀಡಬೇಕಾಗಿದೆ.
-ವರದಿ, ವೆಂಕಟೇಶ್.

 

ಲೇಖನ ವರ್ಗ (Category):