ಡಾ.ಎಚ್.ನರಸಿಂಹಯ್ಯ(ಡಾ.ಎಚ್.ಎನ್) ಒಂದು ನೆನಪು

To prevent automated spam submissions leave this field empty.

ಗೌರಿಬಿದನೂರು ತಾಲೋಕು
ಹೊಸೂರಲ್ಲಿ ಜನಿಸಿದ ನಾಯಕ
ನೀ ಪಡೆದೆ ಶಿಕ್ಷಕ ಕಾಯಕ
ನಾಡಿಗೆ ಮಾಡಿದೆ ಪಾಠ ಅನೇಕ
ಮೂಡನಂಬಿಕೆಗಳ ಜಾಡಿಸಿದೆ
ಜ್ಞಾನ ದೀವಿಗೆಯ ಹಿಡಿದ ಬುದ್ದ ನೀನಾದೆ
ಗಾಂಧಿವಾದ ಬಾಳಿಗೆ ನಾಂದಿ
ಮಾಡಿಕೊಂಡು ನೀ ಬಾಳಿದೆ
ಕಟ್ಟಿ ನೀ ಶಿಕ್ಷಣ ಸಂಸ್ಥೆಯನ್ನ
ಆದೆ ಅನನ್ಯ ಶಿಕ್ಷಣತಜ್ಞ
ಅಳವಡಿಸಿಕೊಂಡೆ ಬ್ರಹ್ಮಚರ್ಯ ಯಜ್ಞ
ಸರಳ ಜೀವನ ನಡೆಸಿದ ಯೋಗಿ
ವಿರಳ ನಿನ್ನಂತವರು ನೀ ಮಹಾ ತ್ಯಾಗಿ
ನಿನ್ನ ಜೀವನವು ಜಗಕೊಂದು ಪಾಠ
ಊಡಿ ಹೊರಟಿರುವೆಯಾ ಸ್ವರ್ಗಕ್ಕೆ ಸಾರೋಟ
ನಿನ್ನ ಅಗಲಿಕೆಗೆ ಮಂದಿ,ಮಕ್ಕಳು ಅತ್ತವು
ಮುಗಿಲೂ ಅತ್ತು ಕರೆದವು ತುಂಬಿ ಪ್ರೀತಿ ಚಿತ್ತವು
ನೀ ಸಾಮಾನ್ಯ ಅಲ್ಲ ಅಸಮಾನ್ಯ
ನಿನ್ನ ನೆನಪಲ್ಲಿ ಮುಡುಪು ನನ್ನ ಜೀವನ
ನಿನ್ನ ಅಡಿದಾವರೆಗೆ ನನ್ನೀ ಕವನ ಕುಸುಮ ನಮನ

ಲೇಖನ ವರ್ಗ (Category):