ನಿನಗಾಗಿ ಕಾದಿರುವೆ

To prevent automated spam submissions leave this field empty.

ಮಳೆ ಇಲ್ಲದೆ ಭೂಮಿಯಾಗಿದೆ ಬರುಡು,

ನಿನ್ನ ಕಾಣದೆ ನಾನಾದೆ ಕುರುಡು.......

ಪ್ರತಿ ಕ್ಷಣ ಮನದಲ್ಲಿ ನೋವಿನ ಮೆರವಣಿಗೆ,

ಕಾದು ಕುಳಿತಿರುವೆ ನೀ ಬರುವ ದಾರಿಗೆ....

ಏಕಾ೦ತವೇ ಜೋತೆಯಾಯ್ತು,

ದಿನಚರಿ ಎಲ್ಲಾ ಮರೆತೋಯ್ತು....

ಎತ್ತ ನೋಡಿದರು ಕತ್ತಲೆ ಕವಿದ೦ತೆ,

ಪ್ರತಿ ಕ್ಷಣ ಪ್ರಾಣ ಹೋಗಿ ಬ೦ದ೦ತೆ....

ನಿನಗಾಗಿ ಕಾದಿರುವೆ ಓಡಿ ಬಾ ಚಿನ್ನ

ಕಾದು ಕಾದು ಉಸಿರು ನಿಲ್ಲುವ ಮುನ್ನ.........

-- ಗಣೇಶ