ರಾಜ್ ಕುಮಾರ್ ಚಿತ್ರಗಳ ಹಸರುಗಳಿ೦ದ ಗೆಳತಿಗೊ೦ದು ಕವನ

To prevent automated spam submissions leave this field empty.
ನನ್ನ ಬಾಳಿನ ಹೊಸ ಬೆಳಕು ನೀನು,

ನಿನ್ನ ಬಾಳಿಗೆ ರವಿಚಂದ್ರ ನಾನು...

ಅಂದು ನನ್ನ ನಿನ್ನ ಬೇಟಿ ಆಕಸ್ಮಿಕ ,

ಇಂದು ನಮ್ಮದು ಭಲೇ ಜೋಡಿ...

ಹಾಲು ಜೇನಿನಂತೆ ಸಿಹಿಯಾಗಿರಲಿ ನಮ್ಮ ಪ್ರೀತಿ,

ಚಲಿಸುವ ಮೋಡದಂತೆ ಇರಲಿ ಅದರ ರೀತಿ..

ನನ್ನ ಪ್ರೀತಿಯ ಗಿರಿಕನ್ಯೆ ನೀನು,

ನಿನಗಾಗಿ ಹುಟ್ಟಿರುವ ಬಹಾದ್ದೂರ್ ಗಂಡು ನಾನು.

ಗಂಧದ ಗುಡಿಯಲ್ಲಿ ಮನೆಯ ಮಾಡಿ,

ಎರಡು ಕನಸು ಕಾಣೋಣ ಇಬ್ಬರು ಕೂಡಿ....

ನಿನಗೆ ಪ್ರೇಮದ ಕಾಣಿಕೆ ಕೊಡದೆ ಇರಲಾರೆ

ಎಂದಿಗೂ, ಗೆಳತಿ, ನಾ ನಿನ್ನ ಮರೆಯಲಾರೆ...

-- ಗಣೇಶ
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸೂಪರ್ ಸಾರ್,
ನಟಸಾರ್ವಭೌಮನಿಗೇ ಕೇಳಿತಂತೆ
ವಸಂತಗೀತೆ
ರಸಿಕರರಾಜನ ಈ ಹಾಡು ಕೇಳಿ.
ಅಭಿಮಾನಿ ದೇವರುಗಳ ಅಭಿಮಾನ ರಕ್ಷೆಯಲಿ.

ಅಣ್ಣಾವರ ಅಭಿಮಾನಿಯಾದ ನನಗೆ ಸಕತ್ ಖುಷಿ ಕೊಟ್ಟಿತು ಕವನ.