ಉದ್ದಿನ ವಡೆ ಅಥವಾ ಮೆದು ವಡಾ ?

3.727275

ಶನಿವಾರ (27 ಜೂನ್) ಮಧ್ಯಾಹ್ನ ಎಲ್ಲಾ ಮಿತ್ರರು ಸೌತ್ ಎಂಡ್ ಸರ್ಕಲ್ ಹತ್ರ ಮೀಟ್ ಮಾಡಿ, ಸಂಜೆ ತನಕ ಸುತ್ತಾಡಿ ಒಳ್ಳೆ ಮಜಾ ಇತ್ತು. ಸಂಜೆ ಹೊಟ್ಟೆ ಚುರ್ರ್ ಅಂದಾಗ ಶ್ರೇಯು "ಬನ್ರೋ, ಒಂದು ಹೊಸಾ ಹೋಟ್ಲು ಓಪನ್ ಆಗಿದೆ ಇಲ್ಲೇ, ಅಲ್ಲಿ ಹೋಗೋಣ...ಟೇಸ್ಟು ಚೆನ್ನಾಗಿದೆ" ಅಂದ. ಸರಿ ನಡಿ ಅಂತಾ ಹೊರಟ್ವಿ.

"ಸೌತ್ ತಿಂಡೀಸ್" ಅಂತಾ ಹೋಟ್ಲು. ಇದು ಇರೋದು ಕನಕಪುರ ರಸ್ತೆಯಲ್ಲಿ, ಕೃಷ್ಣರಾವ್ ಪಾರ್ಕಿನ ಬಳಿ (ಸೌತ್ ಎಂಡ್ ಸರ್ಕಲ್ಲಿನಿಂದ ನಾಗಸಂದ್ರ ಕಡೆ ಬಂದರೆ, ಮಧ್ಯದಲ್ಲಿ ಸಿಗೋ ಸರ್ಕಲ್ಲಿನಲ್ಲಿ ಬಲಕ್ಕೆ ತಿರುಗಿದರೆ ಈ ಹೋಟ್ಲು ಕಾಣುತ್ತೆ). ಈ ಜಾಗದಲ್ಲಿ ಮುಂಚೆ "ವಿಜಯ ದರ್ಶಿನಿ" ಅನ್ನೋ ಒಂದು ದರ್ಶಿನಿ ಇತ್ತು. ತಿಂಡಿ ಅಷ್ಟಕ್ಕಷ್ಟೆ ಇದ್ದದ್ದು, ಆದ್ರೆ ಕಾಫಿ ಚೆನ್ನಾಗಿ ಮಾಡ್ತಾ ಇದ್ರು.

ಸರಿ, ವಿಷಯಕ್ಕೆ ಬರೋಣ. ನಿನ್ನೆ ಎಲ್ರೂ ಸೇರಿದ್ರೆ ಏಳು ಜನ.

ನಾನು, ಹೇಮಂತ, ಶ್ರೇಯು, ಸುಬ್ಬು, ನವೀನ, ಜಗ್ಗ, ಶಶಿ...ಎಲ್ರೂ ಒಳ್ಳೇ ಗ್ರೈಂಡರ್ ನನ್ ಮಕ್ಳು. ಕ್ಯಾಶ್ ಕೌಂಟರಿನಲ್ಲಿ ನಿಂತು ಯಾರಿಗೆ ಏನು ಬೇಕು ಅಂತಾ ಡಿಸೈಡ್ ಮಾಡುವಾಗ ಅಲ್ಲಿ ಇದ್ದ ಮೆನ್ನು ಬೋರ್ಡಿನ ಮೇಲೆ ಕಣ್ಣು ಹೋಯ್ತು. ಮೈ ಎಲ್ಲಾ ಉರೀತು. ಇತ್ತೀಚಿಗೆ ಬೆಂಗಳೂರಿನ ಹೋಟೆಲಿಗರಿಗೆ ಶುರು ಆಗಿರೋ ಮತ್ತೊಂದು ರೋಗ ಅಂತ ಹೇಳ್ತೀನಿ.

"ಮೆದು ವಡಾ" ಅಂತಾ ಹಾಕಿದಾರೆ. ಉದ್ದಿನ ವಡೆಯನ್ನು ತಮಿಳುನಾಡಿನಲ್ಲಿ ಹೀಗೆ ಕರೆಯುತ್ತಾರೆ. ತಕ್ಷಣ ಕೌಂಟರಿನಲ್ಲಿ ಕೇಳಿದೆ,

ನಾನು :"ಯಾಕೆ ಸ್ವಾಮಿ ? ನೀವು ಕರ್ನಾಟಕದಲ್ಲಿ ಇದೀರೋ ಅಥವಾ ತಮಿಳುನಾಡಿನಲ್ಲಿ ಇದೀರೋ.. ಮೆದು ವಡಾ ಅಂತಾ ಯಾಕೆ ಹಾಕಿದೀರ? ಚೇಂಜ್ ಮಾಡ್ರೀ" ಅಂತಾ ದಬಾಯಿಸಿದೆ.

ಅದಕ್ಕೆ ಆತ :"ನಮಗೆ ಗೊತ್ತಿಲ್ಲ ಸಾರ್, ಓನರ್ ನ ಕೇಳಿ"

ಸರಿ, ಓನರ್ ಎಲ್ಲಿ ಅಂತಾ ವಿಚಾರಿಸಿದ್ದಕ್ಕೆ ಅಲ್ಲೇ ದೋಸೆ ಮಾಡೋ ಜಾಗದಲ್ಲಿ ಸಿಕ್ಕಿದ್ರು. ಅಲ್ಲಿ ಈ ನನ್ನ Objection ಹೇಳಿದ್ದಕ್ಕೆ, ಒಳಗೆ ಗಲಾಟೆ ಇದೆ, ಏನೂ ಸರಿಯಾಗಿ ಕೇಳುಸ್ತಾ ಇಲ್ಲಾ ಅಂತ ಹೊರಗೆ ಕರ್ಕೊಂಡು ಬಂದು ಮಾತಾಡೋಕ್ಕೆ ಶುರು ಮಾಡುದ್ರು.

ನಾನು : "ಅಲ್ಲಾ ಸಾರ್, ನೀವು ಇರೋದು, ನಿಮ್ಮ ಹೋಟ್ಲು ಇರೋದು ಎಲ್ಲಿ?"

ಓನರ್ : ಅಶ್ಚರ್ಯ ಪಟ್ಕೊಂಡು "ಬೆಂಗಳೂರಲ್ಲಿ... ಯಾಕೆ ಹಾಗೆ ಕೇಳ್ತೀರ?"

ನಾನು : "ಮತ್ತೆ, ಬೆಂಗಳೂರಲ್ಲಿ ಹೋಟ್ಲು ಮಾಡಿ ಮೆನು ನಲ್ಲಿ ತಮಿಳುನಾಡಿನ ಹಾಗೆ ಮೆದು ವಡಾ ಅಂತಾ ಯಾಕೆ ಹಾಕಿದೀರ? ಕನ್ನಡದಲ್ಲಿ ಇಷ್ಟು ವರ್ಷಗಳಿಂದ ಹಾಕೋ ಹಾಗೆ ಉದ್ದಿನ ವಡೆ ಅಂತಾ ಹಾಕೋಕ್ಕೆ ನಿಮಗೆ ಏನು ಪ್ರಾಬ್ಲಮ್ ?"

ಓನರ್ : "ನಮ್ಮ ಹೋಟ್ಲಿನ ಸ್ಪೆಶಾಲಿಟಿ ಅಂದ್ರೆ ದಕ್ಷಿಣ ಭಾರತದ ಎಲ್ಲಾ ನಾಲ್ಕು ರಾಜ್ಯಗಳ ತಿಂಡಿಗಳನ್ನೂ ಮಾಡ್ತೀವಿ, ಅದಕ್ಕೆ ಎಲ್ರಿಗೂ ಅರ್ಥ ಆಗ್ಲಿ ಅಂತಾ ಹೀಗೆ ಹೆಸ್ರು ಇಟ್ಟಿದ್ದು"

ನಾನು : "ರೀ ಸ್ವಾಮಿ, ನೀವು ಹೆಸ್ರು ಚೇಂಜ್ ಯಾಕೆ ಮಾಡ್ಬೇಕು ? ದಕ್ಷಿಣ ಭಾರತದ ಯಾವುದೇ ಮಂದಿ ಇಲ್ಲಿ ಬಂದು ತಿಂದ್ರೆ, ಅವ್ರಿಗೆ ಮೆದು ವಡಾ ಅಂದ್ರೆ ಮಾತ್ರ ಅರ್ಥ ಆಗುತ್ತಾ? ಇಲ್ಲಿಗೆ ಬಂದು ತಿನ್ನೋರು ಇಲ್ಲೇ ಬೆಂಗಳೂರಲ್ಲಿ ವಾಸವಾಗಿರೋ ಜನ. ಅವ್ರಿಗೆ ಉದ್ದಿನ ವಡೆ ಅಂದ್ರೆ ಏನ್ ಅರ್ಥ ಆಗ್ದೇ ಇರೋ ಐಟಮ್ಮಾ?"

ಓನರ್ : "ಇಲ್ಲಾ ಸಾರ್.. ನಾನು ಹೇಳಿದ್ದನ್ನ ನೀವು ಅರ್ಥ ಮಾಡ್ಕೊತಾ ಇಲ್ಲ"

ನಾನು : "ಸಾರ್, ಇವೆಲ್ಲಾ ಸುಮ್ನೆ ಬ್ಯಾಡ್ದೇ ಇರೋ ಆಟಗಳು ಇದು. ಕನ್ನಡನಾ, ಕನ್ನಡಿಗರನ್ನ ಕಡೆಗಾಣಿಸಿ ಬೇರೆ ಜನಕ್ಕೆ ಮಣೆ ಹಾಕ್ತೀರಲ್ಲಾ ನೀವು... ಅದ್ ಬಿಟ್ಟಾಕಿ, ನಾಳೆ ಮೀಲ್ಸ್ ಶುರು ಮಾಡಿದಾಗ ಮಜ್ಜಿಗೆ ಹುಳಿ ಮೆನು ನಲ್ಲಿ ಹಾಕ್ತೀರ. ಅವಾಗ ಅದನ್ನು ತಮಿಳಿನಲ್ಲಿ ಮೋರ್ ಕೊಳಂಬು ಅಂತಾ ಹಾಕ್ತೀರಾ ಅಥ್ವಾ ತೆಲುಗಲ್ಲಿ ಮಜ್ಜಿಗ ಪುಲ್ಸು ಅಂತಾ ಕರೀತೀರಾ?? ಸುಮ್ನೆ ಈ ಥರ ಆಡೋದನ್ನ ಬಿಟ್ಟೂ ನಮ್ಮ ಭಾಷೆಗೆ Prominance ಕೊಡಿ"

ಓನರ್ : "ಹಂಗಲ್ಲಾ ಸಾರ್, ಹೋಟ್ಲು ಅಂದಮೇಲೆ ಎಲ್ಲಾ ರೀತಿ ಜನರನ್ನೂ ಗಮನದಲ್ಲಿ ಇಟ್ಕೋಬೇಕು ಸಾರ್"

ನಾನು : "ರೀ ಸ್ವಾಮಿ, ಇಷ್ಟು ಹೇಳಿದ ಮೇಲೂ ನೀವು ಹೀಗೆ ಮಾತಾಡ್ತೀರಲ್ಲಾ, ನಿಮ್ ಹೋಟ್ಲು ನಿಮ್ಮಿಷ್ಟ.. ಏನಾದ್ರೂ ಮಾಡ್ಕೊಳಿ. ನಾನಂತೂ ಇಲ್ಲಿಗೆ ಬರೊಲ್ಲಾ ಹಾಗು ನನಗೆ ಗೊತ್ತಿರೋ ಜನಕ್ಕೆ ಇಲ್ಲಿಗೆ ಬರಬೇಡಿ ಅಂತಾನೇ ಹೇಳ್ತೀನಿ"

ಓನರ್ : "ಹಂಗೆಲ್ಲಾ ಮಾಡೋಹಾಗಿಲ್ಲಾ ಸಾರ್ ನೀವು"

ಪಕ್ಕದಲ್ಲಿದ್ದ ಜನರು ಸುಮಾರು ಹೊತ್ತಿಂದ ನಮ್ಮ ಮಾತು ಕೇಳುಸ್ಕೋತಾ ಇದ್ರು.. ಓನರ್ ಯಾವಾಗ ಹೀಗೆ ಹೇಳುದ್ರೋ ಅವಾಗ ಸುಮಾರು ಜನ ಒಟ್ಟಿಗೆ "ಅದ್ಯಾಕೆ ಆಗಲ್ಲಾ ?? ಕನ್ನಡದವರಾಗಿ ಹೀಗೆ ಮಾಡಿ ಅಂತ Suggestion ಕೊಟ್ರೆ, ಹೀಗೆ ಆಡ್ತೀರಲ್ಲ ನೀವು.. " ಹಾಗೆ ಹೀಗೆ ಅಂತಾ ತಲೆಗೆ ಒಂದೊಂದು ಆವಾಜ್ ಹಾಕ್ತಾ ಇದಾರೆ.

ಏನಾದ್ರೂ ಮಾಡ್ಕೊಂದು ಹಾಳಾಗಿ ಅಂತ ವಾಪಸ್ ಬಂದೆ.

ನಮ್ಮ ಜನರೇ ಈ ರೀತಿ ಮಾಡುದ್ರೆ, ನಮ್ಮ ಭಾಷೆ ಬಗ್ಗೆ ಯಾರು ಅಭಿಮಾನ ತೋರುಸ್ತಾರೆ ? ನಮ್ಮ ಭಾಷೆ ಬೆಳೆಯೋದು ಹೆಂಗೆ ? ಅನ್ಯಾಭಾಷಿಕರಿಗೆ ಮಣೆ ಹಾಕಿ ಹಾಕಿ ನಮಗೆ ಚಾಪೆ ಕೂಡಾ ಸಿಗದ ಹಾಗೆ ಆಗ್ತಾ ಇದೆ.

ಮಾಸ್ಟರ್ ಹಿರಣ್ಣಯ್ಯ ಭಾಷಾಭಿಮಾನದ ಬಗ್ಗೆ ಹೇಳೋ ಹಾಗೆ "ತಮಿಳರು ಅಭಿಮಾನಿಗಳು, ತೆಲುಗರು ದುರಭಿಮಾನಿಗಳು, ಕನ್ನಡಿಗರು ನಿರಭಿಮಾನಿಗಳು" ಅನ್ನೋ ಮಾತು ಎಷ್ಟು ಸತ್ಯ ಅನ್ಸುತ್ತೆ ಅಲ್ವಾ?

ಈ ಮೆದು ವಡಾ ಹೆಸ್ರು ಬರೀ ಇಲ್ಲಲ್ಲಾ, ಡಿವಿಜಿ ರಸ್ತೆಯಲ್ಲಿ ಇರೋ "ಉಪಹಾರ ದರ್ಶಿನಿ"ಯಲ್ಲೂ ಕೂಡಾ ಹಾಕಿದಾರೆ.

ನಿಮ್ಮೆಲ್ಲರಲ್ಲಿ ಒಂದು ವಿನಂತಿ, ಮುಂದಿನ ಬಾರಿ ನೀವು "ಸೌತ್ ತಿಂಡೀಸ್" ಅಥವಾ "ಉಪಹಾರ ದರ್ಶಿನಿ" ಗೆ ಭೇಟಿ ಕೊಟ್ರೆ, ಈ ವಿಚಾರವಾಗಿ ನಿಮ್ಮ Objection ತಿಳಿಸಿ. Atleast ತುಂಬಾ ಜನ ವಿರೋಧ ವ್ಯಕ್ತಪಡಿಸ್ತಾ ಇದಾರೆ ಅನ್ನೋ ಕಾರಣಕ್ಕಾದ್ರೂ ಬದಲಾಯಿಸಲಿ.

ಕನ್ನಡ ಬಳಸಿ, ಕನ್ನಡ ಉಳಿಸಿ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (11 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನನ್ನ ಸಮ್ಮತವಿಲ್ಲ. ನಿಮಗೆ ಕನ್ನಡ ಪದದ ಅವತರಣಿಕೆ ಗೊತ್ತಿದೆಯೆಂದಾದ ಮೇಲೆ ಅದನ್ನು ಕೊನೆಯ ಪಕ್ಷ ಬರವಣಿಗೆಯಲ್ಲಾದರೂ ಬಳಸಿರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿಡಿ ಇಂಚರ ಅವರೆ... ಈ ವಾದ ವಿನಿಮಯ ಮುಗಿಯೋದಿಲ್ಲ.
ನನ್ನ ಬರವಣಿಗೆಯೆ ಶೈಲಿ ಹೀಗೆ ಇರೋದು. ನಿಮ್ಮ ವಿಮರ್ಶೆಯನ್ನ ಮನದಲ್ಲಿ ಇಟ್ಟುಕೊಂಡು ಇನ್ಮೇಲೆ
ಕನ್ನಡ ಪದಪ್ರಯೋಗ ಹೆಚ್ಚು ಮಾಡ್ತೀನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಂಚಿನ ಮರಾಯ್ರೆ.. ನಿಮ್ಮ ಕಥೆ ಎಲ್ಲಿಯವರೆಗೆ ಬಂತು??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಂಕರ್, ಸಂಪದದಲ್ಲಿ ಲೇಖನದೊಳಗೆ ನಿಮ್ಮ ಬ್ಲಾಗಿಗೆ ಲಿಂಕ್ ಹಾಕಿದಲ್ಲಿ ಅದನ್ನು ವಿಂಡೋ ಆರ್ಟಿಕಲ್ ಎಂದು ಪರಿಗಣಿಸಿ ಅಳಿಸಿಹಾಕಲಾಗುವುದು. ನಿಮ್ಮ ಬ್ಲಾಗಿನ URL ಸಂಪದದ ನಿಮ್ಮ ಪ್ರೊಫೈಲಿನಲ್ಲಿ ಹಾಕಿಕೊಂಡರೆ ಉತ್ತಮ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಷ್ಟೆಲ್ಲ "ಬಿಸಿ ಬಿಸಿ" ಚರ್ಚೆ ಇಲ್ಲಿ ಆಗುವಾಗ ಅಲ್ಲಿ (ಆ ಉಪಾಹಾರಗೃಹದಲ್ಲಿ) ವಡೆ ತಣ್ಣಗಾಗಿ ಹೋಯ್ತೆಂದು ಅಂದಾಜಿಸಲಾಗಿದೆ. :-)

ಈ ಮೇಲಿನ ಹೇಳಿಕೆಗೆ

೧) ಸಾಪೇಕ್ಷ ಸಿದ್ಧಾಂತ (ಥಿಯರಿ ಆಫ್ ರಿಲೇಟಿವಿಟಿ) ಬಳಸಲಾಗಿದೆ. ಅಂದರೆ, ಚರ್ಚೆ ಮತ್ತು ವಡೆ ಇವುಗಳಲ್ಲಿ ಒಂದಕ್ಕೊಂದು ಹೋಲಿಸಿದಾಗ ಯಾವುದು ಬಿಸಿ ಎಂದು ಮಾಡಿದ ಹೋಲಿಕೆ :-)

೨) "ಅಪ್ಪ-ಅಮ್ಮ ಜಗಳದಲಿ... ಕೂಸು ಬಡವಾಯ್ತು..." ಹಾಡಿಗೊಂದು ಅಣಕುವಾಡು ಮಾಡಿ "ಶಂಕ್ರ-ಬಾಳಿಗ ಜಗಳದಲಿ... ವಡೆ ತಣ್ಣಗಾಯ್ತು..." ಎನ್ನಲಾಗಿದೆ.

===

ನನ್ನ ಸ್ವಭಾವ. ಗಂಭೀರ‍ ಚರ್ಚೆ ನಡೆಯುತ್ತಿದ್ದಾಗ ಅಲ್ಲೊಂದು ನಗು ಮೂಡಿಸುವ ಪ್ರಯತ್ನ ಮಾಡುವುದು. ಕೆಲವರಿಗೆ ಇಷ್ಟ ಆಗಲಿಕ್ಕಿಲ್ಲ. ಚರ್ಚಿತ ವಿಷಯವನ್ನು ಲಘುವಾಗಿಸುವುದು ನನ್ನ ಉದ್ದೇಶವೂ ಅಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆದು ವಡೆಗೆ ಮುಂಬಯಿ ಮರಾಠಿಗರು ಹೇಳುವುದು "ಮೆಂದು ವಡಾ" ಅಂತ. ಮೆಂದು ಅಂದರೆ ಮೆದುಳು ಅಂತ.

ನೋಡಿ ನಮ್ಮ ಉದ್ದಿನ ವಡೆಗೂ , ಮೆದುಳಿಗೂ ಎಲ್ಲಿಂದೆಲ್ಲಿಗೆ ಸಂಬಂಧ :-)

ವಿಷಯಕ್ಕೆ ಬಂದರೆ, ನೀವು ಹೋಟೆಲಿನವರಿಗೆ ಕೇಳಿದ್ದು ಸರಿ ಅಂತ ನನ್ನ ಅಭಿಪ್ರಾಯ.

ತಮಿಳರು ತಾವು ಮಾತಾಡುವಾಗ ಬೇಕಾದಷ್ಟು ಇಂಗ್ಲೀಷ್ ಉಪಯೋಗಿಸಿದರೂ, ತಮಿಳು ಭಾಷೆಯ ಪ್ರಶ್ನೆ ಬಂದಾಗ ಅವರು ಯಾವತ್ತೂ ಒಂದೇ.

ನಮ್ಮ ಕನ್ನಡಿಗರ ಸಮಸ್ಯೆ ಇರುವುದೇ ಅಲ್ಲಿ. ಸಾರ್ವಜನಿಕವಾಗಿ ಕನ್ನಡದ ತಾತ್ಸಾರ ಅಥವಾ ಕಡೆಗಣಿಕೆ ಕಂಡುಬಂದಾಗ ನಾವು ಪ್ರತಿಭಟಿಸುವುದಕ್ಕೆ ಹಿಂದೇಟು ಹಾಕುತ್ತೇವೆ. ನಾವೂ ಪ್ರತಿಭಟಿಸುವ ಗುಣ ಮೈಗೂಡಿಸಿಕೊಳ್ಳಬೇಕು .

ಮುಂಬಯಿಯಲ್ಲಿ ಅಂಗಡಿ ಬೋರ್ಡುಗಳ ಹೆಸರು ಮರಾಠಿಯಲ್ಲಿರಬೇಕು ಅಂತ ಕಾನೂನಿದೆ. ನಮ್ಮಲ್ಲಿಯಂತೆ, ಬರಿ ಹೆಸರಿಗೆ ಅಷ್ಟೇ.

ಕಳೆದ ವರ್ಷ ರಾಜ್ ಠಾಕರೆ, ಎಲ್ಲಾ ಅಂಗಡಿಗಳವರಿಗೆ ಒಂದು Ulimatum ಕೊಟ್ಟ. ಇಂಥಾ ತಾರೀಖಿನ ಒಳಗೆ ಮರಾಠೀ ಬೋರ್ಡು ಹಾಕದಿದ್ದರೆ , ಪರಿಣಾಮ ಎದುರಿಸಬೇಕಾಗುತ್ತದೆ ಅಂತ. ಅಷ್ಟೇ ಅಲ್ಲ. Count Down ಕೂಡಾ ಶುರು ಮಾಡಿದ. ತಗೊಳ್ಳಿ, ರಾತೋ ರಾತ್ರಿ ಬೋರ್ಡುಗಳು ಮರಾಠಿಗೆ ಬದಲಾದವು.

ಇದು ಗೂಂಡಾಗಿರಿಯೇ? ಹೌದು . ಆದರೆ , ಸಾಮ,ದಾನ,ಭೇದ , ದಂಡದಲ್ಲಿ ದಂಡವೂ ಒಂದು ಉಪಾಯ ಎಂದು ಹೇಳಲಾಗಿದೆಯಲ್ಲ :-)

ಸರಕಾರ ಸಾಮ , ದಾನ,ಭೇದ ಮಾಡದೆಯೇ ಇದ್ದಿದ್ದರಿಂದ ಬೇರೆಯವರು ದಂಡೋಪಾಯ ಮಾಡಬೇಕಾದ ಅಗತ್ಯ ಬಂತೇ? ನನಗೆ ಗೊತ್ತಿಲ್ಲ.

ನಾರಾಯಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದ್ರಿ, ನಮ್ಮ ಊಟಕ್ಕೆ ಬೇರೆ ಹೆಸ್ರು ಕೊಡೋದು ನಂಗೂ ಹಿಡಿಸೋಲ್ಲ. ಇದರ ಬಗ್ಗೆ ನಾನೂ ಒಂದ್ಸಲ ಬರ್ದಿದ್ದೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಹಿತಿಹೆ ಧನ್ಯವಾದಗಳು. ಇಂತಹ ಸ್ಥಳಗಳಿಗೆ ಭೇಟಿಕೊಡುವುದು ಬೇಡ ಎಂದು ನನ್ನ ಸ್ಣೆಹಿತರಿಗೆ ತಿಳಿಸುತ್ತೇನೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದೇನಪ್ಪಾ, ವಡೆಯ ಬಗ್ಗೆ ಇಷ್ಟೊಂದು ಬಿಸಿ ಬಿಸಿ ಚರ್ಚೆ ನಡೀತಾ ಇದೆಯಲ್ಲಾಂತ ಒಮ್ಮೆ ತಲೆ ಹಾಕಿದೆ ! ಹಾಗೇ ತಲೆ ಗಿರ್ರಂತು!! ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ, ಕನ್ನಡ ಉಳಿಸಿ, ಬೆಳೆಸುವ ಚರ್ಚೆ ? ಮೈಸೂರಿನಲ್ಲಿ ಹುಟ್ಟಿದ ನಾನು ಅಮ್ಮನಿಂದ ನನಗೆ ಬಳುವಳಿಯಾಗಿ ಬಂದ " ಅಪ್ಪಟ ಕನ್ನಡ" ವನ್ನು ಹೋದಲ್ಲೆಲ್ಲಾ ಪಸರಿಸುವ ಕಾಯಕವನ್ನು ಸಂತೋಷದಿಂದ ಮಾಡುತ್ತಿದ್ದೇನೆ, ಅದು ನನಗೆ ತುಂಬಾ ಸಂತೋಷ ನೀಡುತ್ತಿದೆ ಕೂಡಾ. ದುಬೈನಲ್ಲಿರುವ ನಾಲ್ಕಾರು ಉಡುಪಿ ಹೋಟೆಲ್ ಗಳನ್ನು ಹುಡುಕಿಕೊಂಡು ಹೋಗಿ, ಅವರೊಡನೆ ಕನ್ನಡದಲ್ಲಿಯೇ ಮಾತಾಡಿ, ಊಟ ಮಾಡಿ ಬರುವಾಗ ನನಗೆ ಅಮ್ಮನ ಕೈ ತುತ್ತು ತಿಂದಂತಾಗುತ್ತದೆ. ಅದು ನಮ್ಮ ಭಾಷೆಯ ಹಿರಿಮೆ. "ಗೂಂಡಾಗಿರಿ"ಯ ವಿಚಾರಕ್ಕೆ ಬಂದಾಗ, ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ, ಕನ್ನಡವನ್ನು, ಕನ್ನಡಿಗರನ್ನು ಅವಹೇಳನ ಮಾಡಿದ ತಮಿಳರನ್ನು ಅದೂ "ಹಲಸೂರಿನಲ್ಲಿ" ಹಿಂದೆ ಮುಂದೆ ನೋಡದೆ, ಚೆನ್ನಾಗಿ ಹಿಡಿದು ತದುಕಿದ್ದೂ ಉಂಟು. ಆದರೆ ಸಂಪದ ದಂತಹ ಸುಂದರ ವೇದಿಕೆಯಲ್ಲಿ ಈ ಚರ್ಚೆಗಳು ಸ್ವಲ್ಪ ಅತಿರೇಕವೇ ಅನ್ನಿಸುತ್ತಿದೆ. ನಾವು ನಮ್ಮ ಭಾಷೆಗಾಗಿ ಇನ್ನೊಬ್ಬರ ಜೊತೆ ಹೋರಾಟ ಮಾಡಿದಾಗ, "ಅದು ನಮ್ಮ ಹಕ್ಕು ಕೂಡಾ", ಅದನ್ನು ನಮ್ಮವರೊಂದಿಗೆ ಹಂಚಿಕೊಳ್ಳುವಾಗ, ಅದು ಅಪ್ಪಟ ಮೈಸೂರು ಕನ್ನಡದಲ್ಲಿದ್ದರೆ, ನಿಜಕ್ಕೂ " ಕನ್ನಡಮ್ಮ" ನಮ್ಮನ್ನು ಮೆಚ್ಚಿ ಕೊಂಡಾಡಿಯಾಳು!

ಕಟ್ಟೆ ಶಂಕ್ರ ರವರಿಗೆ ಹಾಗೂ ನನ್ನೆಲ್ಲ ಸಂಪದ ಮಿತ್ರರಿಗೆ ಒಂದು ವಿನಮ್ರ ಮನವಿ, ಸಾಗರದಾಚೆಯಿಂದ, ನಿಮ್ಮ ಯಾವುದೇ ಅನಿಸಿಕೆ, ಲೇಖನ, ಕವನ, ಬ್ಲಾಗ್ ಬರಹ, ಪ್ರತಿಕ್ರಿಯೆಗಳೆಲ್ಲವನ್ನೂ ಸಾಧ್ಯವಾದಷ್ಟೂ ಕನ್ನಡದಲ್ಲಿಯೇ ಬರೆಯಲು ಪ್ರಯತ್ನಿಸಿ. ನಮ್ಮ ದೈನಂದಿನ ಮಾತುಕತೆಗಳಲ್ಲಿ ನಾವು ಆಂಗ್ಲ ಭಾಷೆಯನ್ನು ಬೆರೆಸಿ ಮಾತಾಡಬಹುದು, ಅದು ಕೆಲವೊಮ್ಮೆ ಅನಿವಾರ್ಯ, ಆದರೆ ನಮ್ಮ ಬರವಣಿಗೆಗಳಲ್ಲಿ ನಮಗೆ "ಕಂಗ್ಲೀಷ್" ಬೇಡ, ನಮ್ಮ ಕನ್ನಡವೇ ಸಾಕು. ಅದು ನಾವು ನಮ್ಮ ತಾಯ್ನುಡಿಗೆ ಮಾಡುವ ಅಳಿಲು ಸೇವೆ.. ತಪ್ಪಾಗಿ ನುಡಿದಿದ್ದರೆ ಕ್ಷಮೆಯಿರಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ನಿಜವಾಗಲೂ ಒಳ್ಳೆಯ ಮಾತು. ಪ್ರತಿಯೊಬ್ಬರೂ ಅನುಸರಿಸುವಂತಹದ್ದು. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾ ಸರಿ, ಆದರೆ,
[quote]
ಅದನ್ನು ನಮ್ಮವರೊಂದಿಗೆ ಹಂಚಿಕೊಳ್ಳುವಾಗ, ಅದು ಅಪ್ಪಟ ಮೈಸೂರು ಕನ್ನಡದಲ್ಲಿದ್ದರೆ, ನಿಜಕ್ಕೂ " ಕನ್ನಡಮ್ಮ" ನಮ್ಮನ್ನು ಮೆಚ್ಚಿ ಕೊಂಡಾಡಿಯಾಳು!
[/quote]
ಅಂದರೆ ಮೈಸೂರು ಕನ್ನಡ ಮಾತ್ರ ಕನ್ನಡಮ್ಮನ ಪ್ರೀತಿಯ ಕನ್ನಡ ಅಂತನಾ? ಅಥವಾ ಅದೇ ಶುದ್ಧ ಕನ್ನಡ ಅಂತನ? ಅಥವಾ ಕನ್ನಡ ಅಂದ್ರೆ ಅದು ಮಾತ್ರ ಅಂತನ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನೋಜ್ ರವರೆ, ಮೈಸೂರು ಕನ್ನಡವೆಂದರೆ, " ವಜ್ರದಂತೆ, ಅದು ಅಪ್ಪಟ ಶುದ್ಧ ಕನ್ನಡ, ಕಲಬೆರಕೆ ಕಾಣುವುದಿಲ್ಲ. ಬೇರೆ ಭಾಗಗಳಲ್ಲಿ ತೆಲುಗು, ತಮಿಳು, ಮಲಯಾಳಂ, ಮರಾಠಿ ಭಾಷೆಗಳ ಪದಗಳನ್ನು ಬೆರೆಸಿಕೊಂಡು ಮಾತಾಡುವುದನ್ನು ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ. ಆ ಅರ್ಥದಲ್ಲಿ ನಾನು ಹೇಳಿದ್ದು, ಇರಲಿ, ಒಂದು ಅರ್ಥಪೂರ್ಣ ಚರ್ಚೆ, ಅನರ್ಥಕಾರಿಯಾಗಿ ಪರ್ಯವಸಾನಗೊಳ್ಳುವ ಎಲ್ಲಾ ಲಕ್ಷಣಗಳೂ ಇಲ್ಲಿ ಕಾಣುತ್ತಿವೆ. " ನಂನಮ್ಮ ಭಾವಕ್ಕೆ, ನಂನಮ್ಮ ಭಕುತಿಗೆ" ತಕ್ಕಂತೆ ನಾವು ಕನ್ನಡಮ್ಮನ ಸೇವೆ ಮಾಡೋಣ. ಎಲ್ಲ ಸಂಪದಿಗರ ಸಹಮತ ಇದೆ ಅಂದುಕೊಳ್ಳುತ್ತಾ ಈ ಚರ್ಚೆಗೆ ಪೂರ್ಣವಿರಾಮ ಹಾಕೋಣ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನೋಜ್ ರವರೆ, ಮೈಸೂರು ಕನ್ನಡವೆಂದರೆ, " ವಜ್ರದಂತೆ, ಅದು ಅಪ್ಪಟ ಶುದ್ಧ ಕನ್ನಡ, ಕಲಬೆರಕೆ ಕಾಣುವುದಿಲ್ಲ. ಬೇರೆ ಭಾಗಗಳಲ್ಲಿ ತೆಲುಗು, ತಮಿಳು, ಮಲಯಾಳಂ, ಮರಾಠಿ ಭಾಷೆಗಳ ಪದಗಳನ್ನು ಬೆರೆಸಿಕೊಂಡು ಮಾತಾಡುವುದನ್ನು ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ. ಆ ಅರ್ಥದಲ್ಲಿ ನಾನು ಹೇಳಿದ್ದು, ಇರಲಿ, ಒಂದು ಅರ್ಥಪೂರ್ಣ ಚರ್ಚೆ, ಅನರ್ಥಕಾರಿಯಾಗಿ ಪರ್ಯವಸಾನಗೊಳ್ಳುವ ಎಲ್ಲಾ ಲಕ್ಷಣಗಳೂ ಇಲ್ಲಿ ಕಾಣುತ್ತಿವೆ. " ನಂನಮ್ಮ ಭಾವಕ್ಕೆ, ನಂನಮ್ಮ ಭಕುತಿಗೆ" ತಕ್ಕಂತೆ ನಾವು ಕನ್ನಡಮ್ಮನ ಸೇವೆ ಮಾಡೋಣ. ಎಲ್ಲ ಸಂಪದಿಗರ ಸಹಮತ ಇದೆ ಅಂದುಕೊಳ್ಳುತ್ತಾ ಈ ಚರ್ಚೆಗೆ ಪೂರ್ಣವಿರಾಮ ಹಾಕೋಣ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿನ್ನೆ ನಾನು ಅಂತರ್ಜಾಲದ ಸಂಪರ್ಕಕ್ಕೆ ಬರಲಿಲ್ಲವಾದ್ದರಿಂದ, ಸದ್ಯ ನನ್ನ ಭಾನುವಾರದ ರಜೆ ಶಾಂತವಾಗಿಯೇ ಉಳಿಯಿತು.

ನಿನ್ನೆ ಮುಂಜಾನೆ, ನಮ್ಮೂರ ಭಟ್ರ ಉಪಾಹಾರ ಮಂದಿರದಲ್ಲಿ, ಮೆದುವಾದ ಉದ್ದಿನವಡೆ ಅಲ್ಲ ಉದ್ದಿನ ಮೆದುವಾದ ವಡಾಗಳನ್ನು ಸಾಂಬಾರು - ಚಟ್ನಿಯ ಜೊತೆಗೆ ತಿಂದು, ದಿನವೆಲ್ಲಾ ಶಾಂತ ರೀತಿಯಲ್ಲಿ ಕಳೆದೆ. ಇಲ್ಲಾಂದ್ರೆ, ಉದ್ದಿನ ವಡೆ ಅಥವಾ ಮೆದು ವಡಾ ಈ ಗೊಂದಲದಲ್ಲಿ, ನನ್ನ ವಾರಾಂತ್ಯದ ಒಂದು ರಜಾದಿನ ಹಾಳಾಗುತ್ತಿತ್ತೇನೋ... :)

(ಸದ್ಯ ಇಲ್ಲೆಲ್ಲೂ ಪರಭಾಷಾ ಪದ ಪ್ರಯೋಗ ಆಗಿಲ್ಲ).

ನಾನೊಂದು ಪಕ್ಷ ಲಂಡನಿನಲ್ಲಿ ಉಡುಪಿ ಉಪಾಹಾರ ಮಂದಿರವನ್ನು ಆರಂಭಿಸಿದರೆ ಈ ಉದ್ದಿನ ವಡೆಗೆ ಅಥವಾ ಈ ಮೆದು ವಡಾಕ್ಕೆ ಯಾವ ಹೆಸರಿಟ್ಟು ಕರೆಯಬೇಕಾಗಬಹುದು ಅಂತ ಯಾರಾದರೂ ಹೇಳ್ತೀರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ರೀ ಸಾರ್ ಆಸು ಹೆಗ್ಡೆ ,
ನೀವು ಲಂಡನ್ನಿನಲ್ಲಿ ಉಡುಪಿ ಹೋಟ್ಲಿಗೆ ಹೋದರೆ ಅಲ್ಲಿ ಉದ್ದಿನ ವಡೆಗೆ ಏನು ಬರೆದಿರುತ್ತಾರೆ ಅನ್ನೋದು ಈಗ ಅಪ್ರಸ್ತುತ ಹಾಗು ಅನಾವಶ್ಯಕ. ನಾನು ಮಾತಾಡ್ತಾ ಇರೋದು ಬೆಂಗಳೂರಲ್ಲಿ ಹೀಗೆ ತಮಿಳು ಸ್ಟೈಲಿನಲ್ಲಿ ಮೆದು ವಡಾ ಅಂತಾ ಹಾಕಿರೋದರ ಬಗ್ಗೆ. ಬೆಂಗಳೂರಲ್ಲಿ ಏನು ನಡೀತಾ ಇದೆ ಅನ್ನೋದನ್ನ ತಿಳಿಯದೆ ನೀವು ಲಂಡನ್ನಿಗೆ ಹೋದ್ರೆ ಹೆಂಗೆ ?
ನೀವು ಲಂಡನ್ನಿನಲ್ಲಿ ಉಡುಪಿ ಹೋಟ್ಲಿಗೆ ಹೋಗಬೇಕು ಅಂದ್ರೆ, Queensburough ಗೆ ಹೋಗಿ. ಅಲ್ಲೊಂದು ಸಣ್ಣ ಉಡುಪಿ ಹೋಟ್ಲು ಇದೆ.

ಶಂಕ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಂಕರ ಪ್ರಸಾದ,

>>ನೀವು ಲಂಡನ್ನಿನಲ್ಲಿ ಉಡುಪಿ ಹೋಟ್ಲಿಗೆ ಹೋದರೆ ಅಲ್ಲಿ ಉದ್ದಿನ ವಡೆಗೆ ಏನು ಬರೆದಿರುತ್ತಾರೆ ಅನ್ನೋದು ಈಗ ಅಪ್ರಸ್ತುತ ಹಾಗು ಅನಾವಶ್ಯಕ.<<

ನಾನು ಬರೆದದ್ದನ್ನು ಸರಿಯಾಗಿ ಓದದೇ ಉತ್ತರಿಸಿದ್ದೀರಿ. ನಾನು ಹೋಟೇಲು ಆರಂಭಿಸಿದರೆ ಏನು ಬರೆಯಬೇಕಾಗಬಹುದು ಅಂತ ಕೇಳಿದ್ದೆ. ಯಾರಾದರೂ ಈ ಕನ್ನಡಿಗನಿಗೆ ಸಹಾಯ ಮಾಡುತ್ತೆರೆಂಬ ನಿರೀಕ್ಷೆಯಿಂದ. ಆ ತಮಿಳಿನವನು ಅರಿಯದೇಯೋ ಅರಿತೋ ತಪ್ಪು ಮಾಡಿ ಪಟ್ಟ ಕಷ್ಟ ನಾನು ಪಡಬೇಕಾಗುವುದಿಲ್ಲವಲ್ಲಾ...ಅನ್ನುವ ಸ್ವಾರ್ಥ ದೂರಾಲೋಚನೆಯಿಂದ.

>>ಬೆಂಗಳೂರಲ್ಲಿ ಏನು ನಡೀತಾ ಇದೆ ಅನ್ನೋದನ್ನ ತಿಳಿಯದೆ ನೀವು ಲಂಡನ್ನಿಗೆ ಹೋದ್ರೆ ಹೆಂಗೆ ?<<

ಓಹೋ ತನ್ನೂರಿನಲ್ಲಿ ನಡೆಯುತ್ತಿರುವುದೆಲ್ಲವನ್ನೂ ಅರಿತ ನಂತರವೇ ಪರವೂರ ಯಾತ್ರೆ ಮಾಡಬೇಕೋ...?

>>ನೀವು ಲಂಡನ್ನಿನಲ್ಲಿ ಉಡುಪಿ ಹೋಟ್ಲಿಗೆ ಹೋಗಬೇಕು ಅಂದ್ರೆ, Queensburough ಗೆ ಹೋಗಿ. ಅಲ್ಲೊಂದು ಸಣ್ಣ ಉಡುಪಿ ಹೋಟ್ಲು
ಇದೆ.<<

ಈಗ ಇದು ಇಲ್ಲಿ ಅಪ್ರಸ್ತುತ ಮತ್ತು ಅನವಶ್ಯಕ ಅಂತ ಅನಿಸೋಲ್ವೆ? ನಿಮ್ಮನ್ನು ಯಾರಾದರೂ ಈ ವಿಳಾಸ ಹೇಳುವಂತೆ ಕೇಳಿದ್ದರೇ?

ಒಟ್ಟಾರೆ ನಿಮ್ಮ ಬರಹದ ಮೂಲ ಉದ್ದೇಶವನ್ನು ನೀವೇ ಗಾಳಿಗೆ ತೂರಿ ಬಿಟ್ಟದ್ದು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ನೀವು ಬರೆದದ್ದನ್ನು ಓದುಗ ಓದಬೇಕು ಎನ್ನುವ ನಿರೀಕ್ಷೆ ನಿಮಗಿದೆ. ಆದರೆ, ಪ್ರತಿಕ್ರಿಯೆಯನ್ನು ಗಮನವಿಟ್ಟು ಓದುವ ತಾಳ್ಮೆ ನಿಮಗೆ ಇಲ್ಲವೇ ಇಲ್ಲ. ಹಾಗಿರುವಾಗ ಇದರಿಂದ ಏನು ಪ್ರಯೋಜನವಾದೀತು.

ನಿಮ್ಮಲ್ಲಿ ಬರೆಯುವ ಕಲೆ ಇದೆ. ಬರೆಯುತ್ತಿರಿ. ಓದಿ, ಅವಶ್ಯ ಕಂಡಲ್ಲಿ ಪ್ರತಿಕ್ರಿಯಿಸುತ್ತಾ ಇರುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಸಂವಾದ ಜ್ಞಾನದ ವಿನಿಮಯವಾದರೆ
ವಾದ ವಿವಾದ ಅಜ್ಞಾನದವಿನಿಮಯ"
ಸಂವಾದಕ್ಕೆ ಸಂಪದವಿದೆ,ಸಂಪದ ಬಳಗ ಹೆಚ್ಚು ಹೆಚ್ಚು ಸಂವಾದಗಳಲ್ಲಿ ಪಾಲ್ಗೊಳ್ಳಲಿ
ಯಾವುದೂ ವಿವಾದವಾಗಿ ಅಸಹನೆಯಲ್ಲಿ ಪರ್ಯ್ಯಾವಸಾನವಾಗುವುದು ಬೇಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮೆ ಇರಲಿ.
ಕಣ್ತಪ್ಪಿನಿಂದ ಆದದ್ದು ಇದು.
ಲಂಡನ್ನಿನಲ್ಲಿ ಉಡುಪಿ ಹೋಟ್ಲು ಬಗ್ಗೆ ಹೇಳುದ್ರಲ್ಲ, ಅದಕ್ಕೆ ಅಲ್ಲಿ ಎಲ್ಲಿದೆ ಎಂದು ನಾನು ಹೇಳಿದೆ ಅಷ್ಟೇ.
ಲಂಡನ್ನಿನಲ್ಲಿ ದಕ್ಷಿಣ ಭಾರತೀಯ ಹೋಟಲುಗಳು ಇರೋದೆಲ್ಲಾ ತಮಿಳುನಾಡಿನವರದ್ದು.
ಅಲ್ಲಿ ಮೆದು ವಡಾ ಅಂತಾನೆ ಹಾಕಿರ್ತಾರೆ. ನೀವು ಅದರ ಬಗೆ ತಲೆ ಕೆದೆಸಿಕೊಲ್ಲದೆ, ಇಲ್ಲಿ ನಡೀತಾ ಇರೋ ವಿದ್ಯಮಾನಗಳ ಬಗ್ಗೆ ಸ್ವಲ್ಪ ಗಮನ ಕೊಟ್ರೆ ಸಾಕು ಅನ್ಕೋತೀನಿ.

ಶಂಕ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಲಂಡನ್ನಿನಲ್ಲಿ ದಕ್ಷಿಣ ಭಾರತೀಯ ಹೋಟಲುಗಳು ಇರೋದೆಲ್ಲಾ ತಮಿಳುನಾಡಿನವರದ್ದು.
ಅಲ್ಲಿ ಮೆದು ವಡಾ ಅಂತಾನೆ ಹಾಕಿರ್ತಾರೆ. ನೀವು ಅದರ ಬಗೆ ತಲೆ ಕೆದೆಸಿಕೊಲ್ಲದೆ, ಇಲ್ಲಿ ನಡೀತಾ ಇರೋ ವಿದ್ಯಮಾನಗಳ ಬಗ್ಗೆ ಸ್ವಲ್ಪ ಗಮನ ಕೊಟ್ರೆ ಸಾಕು ಅನ್ಕೋತೀನಿ.>>

ನಮ್ಮ ತಮಿಳ್ ಬಂಧುಗಳು "ಮೆದು ವಡೈಯನ್ನು" ಲಂಡನಿನಲ್ಲಿ "ಮೆದು ವಡೈ" ಅಂತಲೇ ಕರೆಯಬಹುದು. ಅದಕ್ಕೆ ಅಲ್ಲಿ ಯಾವ ವಿರೋಧವೂ ಇಲ್ಲ. ಆದರೆ ಆತನ ಸ್ವದೇಶದ ಪರ ರಾಜ್ಯದಲ್ಲಿ "ಮೆದು ವಡೈ" ಅನ್ನುವ ಹಾಗಿಲ್ಲ.
ಎಂತಹ ವಿಪರ್ಯಾಸ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ ಮಾಯ್ಸ.೨
>>>ನಾನು ತುಳು, ಕೊಡವ ಹಾಗು ಕೊಂಕಣಿ ರಾಜ್ಯಗಳೆಂಬ ಕರ್ನಾಟಕದಿಂದ ಬೇರ್‍ಪಟ್ಟ ರಾಜ್ಯಗಳ ಸ್ಥಾಪನೆಗೆ ಬೆಂಬಲಿಗ.! ಆಗಲಾದ್ರೂ ಕರ್ನಾಟಕ, ಕನ್ನಡ ನಾಡಾಗುವುದು! ಹರವಿಗಿಂತ ತಿರುಳು ದೊಡ್ಡದು, ಮುಖ್ಯ!>>>

ಇವತ್ತು ತುಳು, ಕೊಡವ ಹಾಗು ಕೊಂಕಣಿ ರಾಜ್ಯಗಳನ್ನು ಬೆಂಬಲಿಸಿ, ನಾಳೆ ಹೈದರ್ಭಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮುಂತಾದ ಇನ್ನು ಹಲವಾರು ರಾಜ್ಯಗಳ್ಳನ್ನ ನಿರ್ಮಾಣ ಮಾಡಿ ಕರ್ನಾಟಕದ ನಾಶಕ್ಕೆ ಭಾಷ್ಯ ಬರೆದ ಮೊದಲಿಗರಾಗಿ.

ಅಭಿನಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲಾ ಸ್ವಾಮಿ ಆಸು ಹೆಗ್ಡೆ ಅವರೇ,
ನಿರಭಿಮಾನಿಗಳು ಅಂತ ಹಿರಣ್ಣಯ್ಯನವರು ಕರೆದಿರುವುದು ನಿಮ್ಮಂಥವರನ್ನು ನೋಡಿಯೇ ಇರಬೇಕು.
ನಾನು ಇಲ್ಲಿ ಕರ್ನಾಟಕದ ಹೋಟೆಲಿನಲ್ಲಿ ಉದ್ದಿನವಡೆಯನ್ನು ಮೆದು ವಡೆ ಎಂದು ಕರೆದುದರ ಬಗ್ಗೆ ಗಂಟಲು ಹರ್ಕೊತಾ ಇದ್ರೆ,
ನೀವು ತಮಿಳರು ಪರ ರಾಜ್ಯದಲ್ಲಿ ಅವರ ಹೆಸರನ್ನು ಕರೆಲಾಗದೆ ಇದ್ದುದರ ಬಗ್ಗೆ ತಲೆ ಕೆಡುಸ್ಕೋತಾ ಇದ್ದೀರಾ. ನಾನು ಮಾತಾಡ್ತಾ ಇರೋದು ಇಲ್ಲಿನ ನಮ್ಮ ಜನಗಳ ಹೋಟೆಲಿನಲ್ಲಿ ಕನ್ನಡದಲ್ಲಿ ಹಾಕಬೇಕಾದ ತಿಂಡಿಯ ಹೆಸರನ್ನು ತಮಿಳಿನಲ್ಲಿ ಹಾಕಿರುವುದರ ಬಗ್ಗೆ. ನೀವು ನಿಜಕ್ಕೂ ನಿಮ್ಮ ನಿರಭಿಮಾನವನ್ನು ತೋರಿಸುತ್ತಾ ಇದ್ದೀರಾ. ಕನ್ನಡದ ಬಗ್ಗೆ ಮೊದಲು ಅಭಿಮಾನ ಬೆಳೆಸಿಕೊಳ್ಳಿ, ತದನಂತರ ತಮಿಳರ, ತಮಿಳಿನ ಬಗ್ಗೆ ಹೋರಾಡಲು ಮುಂದಾಗಿ.
ನಿಮ್ಮಂಥವರ ಜೊತೆ ವಾದ ಮಾಡುವುದೂ ವ್ಯರ್ಥ ಅನ್ಸುತ್ತೆ.

ಶಂಕರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಂಕರ ಪ್ರಸಾದ,

ನನ್ನನ್ನು ಅಲ್ಲಾ...ಸ್ವಾಮೀ ಅಂತ ಕರೆದು ಜಾತ್ಯಾತೀತನಾಗಿ ಸಂಭೋಧಿಸಿದುದಕ್ಕೆ ಸಂತಸವಾಯ್ತು.

ನನ್ನ ಕನ್ನಡಾಭಿಮಾನವನ್ನು ನಾನು ನನ್ನ ಮಾತು ಮತ್ತು ಬರಹಗಳಲ್ಲಿ ಕನ್ನಡವನ್ನು ಬಳಸುವುದರ ಮೂಲಕ ಪ್ರದರ್ಶಿಸುತ್ತೇನೆ. ಪರ ಭಾಷಿಗರೊಂದಿಗೆ ಕಾದಾಡುವುದರಲ್ಲಿ ಅಲ್ಲ.

ನೀವು ನನ್ನ ಜೊತೆಗೆ ವಾದ ಮಾಡಿ ಅಂತ ನಾನೇನೂ ಕರೆಯುತ್ತಿಲ್ಲ. ನಿಜ ಹೇಳಿ ಕರೆದ್ನಾ? ಅದು ನಿಮ್ಮ ಇಷ್ಟ.

ಕನ್ನಡಿಗರು ಕನ್ನಡದ ಬಳಕೆ ಮಾಡುತ್ತಿರುವ ತನಕ ಕನ್ನಡಕ್ಕೇ ಏನೂ ದಾಡಿ ಹೊಡೆಯುವುದಿಲ್ಲ ಅಂತ ನನ್ನ ಅನಿಸಿಕೆ.

ಆದರೆ ಆಡು ಭಾಷೆಯ ನೆಪದಲ್ಲಿ ಕನ್ನಡವನ್ನೇ ಹಿಂದೀಯಗೊಳಿಸಿ, ಆಂಗ್ಲೀಕರಿಸಿ, ಮಾತಾಡುವವರ ಕನ್ನಡಾಭಿಮಾನದ ಬಗ್ಗೆ ನಾನೇನೂ ಬಾಯ್ಬಿಟ್ಟು ಹೇಳಬೇಕಾಗಿಲ್ಲ. ನೀವೆಲ್ಲಾ ಆಡುಭಾಷೆಯಲ್ಲೂ ಕನ್ನಡವನ್ನೇ ಬಳಸಿ ಅಂತ ಹೋರಾಡಲೂ ನಾನು ಬರುವುದಿಲ್ಲ. ಅದು ನಿಮಗೇ ಬಿಟ್ಟ ವಿಚಾರ. ನಾನು ನನ್ನ ಕಾಣಿಕೆ ನೀಡುತ್ತಿರಬೇಕು ಅಷ್ಟೆ.

ಕನ್ನಡಿಗನೋರ್ವ ಆಡು ಭಾಷೆಯ ನೆಪದಲ್ಲಿ ತನ್ನ ಕನ್ನಡ ಬರಹದಲ್ಲಿ ಮಾಡಿದ ಪರಭಾಷಾ ಶಬ್ದಗಳ ಬಳಕೆಯಿಂದ ಕನ್ನಡಕ್ಕೆ ಧಕ್ಕೆಯೋ ಅಥವಾ ಪರಭಾಷಿಗ ತನ್ನ ಕಾರ್ಯಕ್ಷೇತ್ರದಲ್ಲಿ ತನ್ನದೇ ಭಾಷೆಯ ಶಬ್ದ ಬಳಕೆ ಮಾಡಿದ್ದರಿಂದ ಕನ್ನಡಕ್ಕೆ ಧಕ್ಕೆಯೋ ಅಂತ ಓದುಗರೇ ಹೇಳಬೇಕು.

ಉದ್ದಿನ ವಡೆಗೆ ಮೆದು ವಡೆ ಅಂದರೆ ಪರವಾಗಿಲ್ಲರೀ, ಯಾಕಂದ್ರೆ ಭೇಟಿಗೆ ಮೀಟಿಂಗ್, ರಸ್ತೆಗೆ ರೋಡ್, ಉಪಾಹಾರ ಮಂದಿರಕ್ಕೆ ಹೋಟೆಲ್ ಅನ್ನುವುದಕ್ಕಿಂತ ಅದು ಉತ್ತಮ. ಏಕೆಂದರೆ ಮೆದು ವಡೆಯಲ್ಲಿ ಕನ್ನಡವೂ ಇದೆ. ಮೀಟಿಂಗ್, ರೋಡ್, ಹೋಟೆಲ್‍ಗಳಲ್ಲಿ ಕನ್ನಡ ಎಲ್ಲಿದೆ ಹೇಳಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೂ ಸಹ ಅಪ್ಪಟ ನಿರಭಿಮಾನಿ ಧೋರಣೆ ತೋರುತ್ತಿದ್ದೀರ.
ಕನ್ನಡಾಭಿಮಾನವನ್ನು ಬರಹ, ನುಡಿ, ನಡೆಯಲ್ಲಿ ತೋರಬೇಕು ಎನ್ನುವ ನಿಮ್ಮ ವಿಚಾರಕ್ಕೆ ನಾನೂ ಒಪ್ಪುತ್ತೀನಿ.
ಆದರೆ, ನಮ್ಮ ಭಾಷೆಗೆ ಸಿಗುವ ಗುರವ, ಪ್ರಾಮುಖ್ಯತೆಯಲ್ಲಿ ಕೊರತೆ ಏರು ಪೆರು ಕಂಡುಬಂದಲ್ಲಿ, ಅದರಲ್ಲಿ ಹೊದೆದಾದುವುದರಲ್ಲಿ ತಪ್ಪೇನು ಇಲ್ಲ. ಎಲ್ಲರೂ ನಿಮ್ಮ ಹಾಗೆ ನಿರಭಿಮಾನಿ ಧೋರಣೆ ಇತ್ತಿಕೊಂದಿರುವುದರಿಂದಲೇ ಇವತ್ತು ನಮ್ಮ ಭಾಷೆಗೆ ಈ ದುಸ್ಥಿತಿ ಬಂದಿರುವುದು.
ನಾನು ಆಡುಭಾಷೆಯಲ್ಲಿ ಬರೆದಿರುವುದು, ಬರೆಯುವುದು ನನ್ನ ಶೈಲಿ.. ಇದರ ಬಗ್ಗೆ ಏಕೆ ಆಕ್ಷೇಪಣೆ ಬರುತ್ತಿದೆ ಅನ್ನೋದು ಅರ್ಥ ಆಗ್ತಾ ಇಲ್ಲ.

ಶಂಕ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಆದರೆ, ನಮ್ಮ ಭಾಷೆಗೆ ಸಿಗುವ ಗುರವ, ಪ್ರಾಮುಖ್ಯತೆಯಲ್ಲಿ ಕೊರತೆ ಏರು ಪೆರು ಕಂಡುಬಂದಲ್ಲಿ, ಅದರಲ್ಲಿ ಹೊದೆದಾದುವುದರಲ್ಲಿ ತಪ್ಪೇನು ಇಲ್ಲ. <<

ನಾನಂತೂ ಸುಸ್ತೋ ಸುಸ್ತು...

ನಿರಭಿಮಾನ ಒಳ್ಳೆಯ ಶಬ್ದ.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಾಳಿಗರೇ,

ಬಿಸ್ಕುಟಂಬಡೆ ನನ್ನ ಕಣ್ಣಿಗಿನ್ನೂ ಬಿದ್ದಿಲ್ಲ...ಸಿಕ್ಕರೆ...ನಾನೂ ಬಿಸ್ಕುಟಂಬಡೆ ಅಂತಾನೇ ಕರೀತೀನಿ ಎಲ್ಲೇ ಇದ್ರೂ......ಬೇರೆಯವರು ಹೇಗೆ ಕರೆದ್ರೆ ನಮಗೇನ್ರೀ...

ಹೇಂಡತಿಯನ್ನು ಆಗ ...ಕೇಳ್ತೇನೆ ಅಂತಿದ್ರು.. ....ಈಗ..ಡಾರ್ಲಿಂಗ್ ಅಂತಾರಂತೆ... ಕನ್ನಡ ಸತ್ತೋಗ್ತದಾ ಬಾಳಿಗರೇ ನೀವೇ ಹೇಳಿ...

ಉದ್ದಿನ ವಡೆಯ ಇನ್ನೊಂದು ರೂಪ ಇದೆ ಇಲ್ಲಿ. ಇದು ಬೂಂದಿ ಲಾಡಿನದಕ್ಕಿಂತ ಸ್ವಲ್ಪ ದೊಡ್ಡ ಉಂಡೆಯಾಕಾರ ಇದ್ದು ...ಜೊತೆಗೆ ಸಾಂಬಾರು-ರಸಂ-ತೋವೆ ಇವೆಲ್ಲದರ ನಡುವಿನ ಸ್ವಾದ ಇರುವ ಒಂದು ಸಾರಿನೊಂದಿಗೆ ಕೊಟ್ಟು, ಆ ಜೋಡಿಯನ್ನು ಬೋಂಡಾ - ಸೂಪ್ ಅಂತಾರೆ.

ಒಮ್ಮೊಮ್ಮೆ, ಅದರಲ್ಲೆಲ್ಲೋ ನಮ್ಮ ಬಿಸ್ಕುಟಂಬಡೆ ಕಳೆದು ಹೋಗಿದೆ ಅಂತ ಅನಿಸಿದ್ದೂ ಇದೆ, ನನಗೆ.

ಆದರೆ ಗೋಳಿ ಬಜೆಗೆ ಮಂಗ್ಳೂರು ಬಜ್ಜಿ ಅಂತಾರೆ. ಅದು ಮಾತ್ರ ಗೊತ್ತು.

ನೆನಪು ಮಾಡಿ ಬಾಯಲ್ಲಿ ನೀರಿಳಿಸಿದ್ರಿ.

ನನ್ನ ಮಾತು ನಿಮಗೆ ಅರ್ಥ ಆಗ್ತಾ ಇದೆಯಲ್ಲಾ ಬಾಳಿಗರೇ, ಧನ್ಯ, ನಾನು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿಸ್ಕುಟಂಬಡೆಯೋ ಉದ್ದಿನ ವಡೆಯೋ
ಹೋಳಿಗೆಯೋ ಅಲ್ಲಾ ಶ್ಯಾವಿಗೆಯೋ..
ಎಲ್ಲಾ ತಿಂಡಿಯ ನೆನಪಿಸಿದಾಗ
ಬಾಯಲ್ಲಿ ನೀರಿಳಿಯಿತು ಬಾಳಿಗರೇ...

(ಜೇನಿನ ಹೋಳೇಯೋ..ಧಾಟಿ ಹಾಕಬಹುದೇ..)

(ಶ್ಯಾವಿಗೆಗೆ ನೂಕಡ್ಡೆ ಅನ್ನುವುದೂ ಉಂಟು...ಮನೆಗೆ ಬಂದ ಅತಿಥಿ ಹೋಗದೇ ಇದ್ದಾಗ ಎಂಟನೇ ದಿನ ಮಾಡುವ ತಿಂಡಿ ಇದಾಗಿತ್ತಂತೆ - ಮನೆಯಿಂದಾಚೆಗೆ ನೂಕಲು-ನೂಕಡ್ಡೆ).

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

All you people.. many thanks for entertaining me with your comments and sillyness.. I might not be a kannada abhimaani like everyone else here but for all I know is that I respect all the languages .. anyway I think you guys have got way too much free time in your lives and I envy that..:)

Take care!!

Cheers!

ಸಂಪದದಲ್ಲಿ ಕನ್ನಡದಲ್ಲೇ ಬರೆಯಬೇಕೆಂಬ ನಿಯಮವಿದೆ - ನಿರ್ವಹಣಾ ತಂಡ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಣ್ಣ ಅಭಿಜಿತ್ ನಿಮಗೆ ಮನೋರಂಜನೆ ನೀಡಲು ಯಾರು ಇಲ್ಲಿ ಕಾಮೆಂಟ್ ಹಾಕಿಲ್ಲ , ಹಾಗೆ ಅದೇನೋ ಬರೆದಿದ್ದಿರಲ್ಲ ಸಿಲ್ಲಿ , ಪಲ್ಲಿ ಹಲ್ಲಿ ಅವೆಲ್ಲ ನಿಮ್ಮ ಬಳಿಯೇ ಇರಲಿ , ಚಂದ ಅನಿಸುತ್ತೆ .
ಹಾಗೆ ನಮ್ಮ ಬಿಡುವಿನ ಸಮಯದ ಚಿಂತೆ ನಿಮಗೆ ಬೇಕಾಗಿಲ್ಲ . ಇನ್ನು ಭಾಷ ಗೌರವ ನಿಮ್ಮ ಪ್ರತಿಕ್ರಿಯೆಯಲ್ಲೇ ಗೊತ್ತಾಗತ್ತೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡದಲ್ಲೇ ಬರಿಯಬೇಕು ಅಂತ ತಿಳಿಸಿದಕ್ಕೆ ಧನ್ಯವಾದಗಳು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ನಾನು ತುಳು, ಕೊಡವ ಹಾಗು ಕೊಂಕಣಿ ರಾಜ್ಯಗಳೆಂಬ ಕರ್ನಾಟಕದಿಂದ ಬೇರ್‍ಪಟ್ಟ ರಾಜ್ಯಗಳ ಸ್ಥಾಪನೆಗೆ ಬೆಂಬಲಿಗ.! ಆಗಲಾದ್ರೂ ಕರ್ನಾಟಕ, ಕನ್ನಡ ನಾಡಾಗುವುದು! ಹರವಿಗಿಂತ ತಿರುಳು ದೊಡ್ಡದು, ಮುಖ್ಯ!>>>>

ಹಾಗಾದ್ರೆ ಮಾಯ್ಸಣ್ಣೋರೆ... ಅವ್ರಿಗೆಲ್ಲಾ ಪ್ರತ್ಯೇಕ ರಾಜ್ಯ ಕೊಡಿಸ್ತಿದೀರ... ಹಂಗೆ ಕೋಲಾರ, ತುಮಕೂರು,ಬಳ್ಳಾರಿ... ಮೂರು ಜಿಲ್ಲೆಗಳನ್ನು ಸೇರಿಸಿ.. ತೆಲುಕನ್ನಡ ರಾಜ್ಯಕ್ಕು ತಮ್ಮ ಬೆಂಬಲ ನೀಡಬೇಕೆಂದು ತಮ್ಮಲ್ಲಿ ವಿನಂತಿ...
ಯಾಕಂದ್ರೆ మేమంత ಜಾಸ್ತಿ మాట్లాడేది ತೆಲುಗೂನೆ.. ನಮ್ಮ ఇంట్లో ಮತ್ತು జిల్లాలో ಎಲ್ರೂ వ్యవహరించేది ్ ತೆಲುಗೂನೆ ఎక్కువ... ಆ ಕಾರಣದಿಂದಾಗಿ మీరు ದಯಮಾಡಿ మాపైన
ದಯಮಾಡ ಬೇಕಾಗಿ వేడుకుంటున్నాము..
అప్పుడు ನೀವೆಲ್ಲಾ మీకు ಬೇಕಾದ కన్నడ నాడు ಕಟ್ಕೊಳ್ಳಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮೆಲ್ಲರ ಕಾಮೆಂಟ್ಸ್ ಇಂದ ಒಳ್ಳೆ ಟೈಮ್ ಪಾಸ್ ಆಯಿತು.. ಅದಕ್ಕಾಗಿ ಧನ್ಯವಾದಗಳು.. ನಾನು ನಿಮೆಲ್ಲರಷ್ಟು ಕನ್ನಡ ಅಭಿಮಾನಿ ಅಲ್ಲ ಅನಿಸುತದೆ ಆದರೆ ಖಂಡಿತ ಎಲ್ಲ ಭಾಷೆಗಳನ್ನು ಗೌರವಿಸುತೇನೆ... ಏನಿ ವೆ ನಿಮ್ಮೆಲ್ಲರ ಹತ್ತಿರ ಇರುವ ಫ್ರೀ ಟೈಮ್ ನೋಡಿ ನನ್ ಹತ್ರ ಇಷ್ಟೊಂದ್ ಫ್ರೀ ಟೈಮ್ ಇಲ್ವಲ್ಲ ಅಂತ ಬೇಸರ ಇದೆ :) ...ಟಾಪಿಕ್ ಎಲ್ಲಿಂದ ಎಲ್ಲೆಲ್ಲೊ ಹೋಗಿದ್ದರಿಂದ ವೀಕೆಂಡ್ ಒಳ್ಳೆ ಟೈಮ್ ಪಾಸ್ ಆಯಿತು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಹೇಳಬೇಕೆಂದುಕೊಂಡದ್ದನ್ನು ಅಭಿಜಿತ್ ದೇಶಕುಲ್ಕರ್ಣಿಯವರು ಹೇಳಿಬಿಟ್ಟಿದ್ದಾರೆ.
ಮೆದುವಡೆ, ಮನ್ನಿಸಿ, ಉದ್ದಿನ ವಡೆ ತಿಂದಷ್ಟೇ ಸವಿಯಾಗಿತ್ತು ಈ ಬರಹ ಹಾಗೂ ಅದಕ್ಕೆ ಬಂದ ಎಲ್ಲ ಕಾಮೆಂಟ್ಸುಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಬ್ಬಬ್ರಿಗೂ ಹಾಕ್ಕೊಂಡ್ ಹೊಡ್ಯಾಣ, ತಲೆ ಕೆಡಿಸ್ಕಾ ಬೇಡಿ... ಆದ್ರೆ ದಯವಿಟ್ಟು ಕನ್ನಡದಲ್ಲಿ ಬರೆಯೋದರ ಬಗ್ಗೆ ತಲೆ ಕೆಡಿಸ್ಕೋತೀರ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗೇಂದ್ರ ಅವರೆ... ಕಛೇರಿ ಕಂಪ್ಯೂಟರ್ ನಲ್ಲಿ ಬರಹ ಇರಲಿಲ್ಲ..ಕ್ಶಮಿಸಬೇಕು..ಹೀಗೆ ಕಂಪ್ಯೂಟರ್ ಮುಂದೆ ಕುಳಿತು ಬ್ಲೊಗ್ ನಲ್ಲಿ ಕನ್ನಡ ಪ್ರೇಮವನ್ನು ಉಕ್ಕಿ ಹರಿಸೊ ಅಂಥ ಬಾಳಿಗರು, ಇಂಚರ ಅಂಥವರು ಕರ್ನಾಟಕ ದಲ್ಲಿ ತುಂಬಾ ಇದ್ದಾರೆ. ೯೯% ಜನ ಹೊಟೆಲ್ ನಲ್ಲಿ ಅಯ್ಯೊ ಬಾರಪ್ಪ ಅವನು ಏನು ಬೋರ್ಡ್ ಹಾಕಿದ್ರೆ ನಮ್ಗೆ ಏನು..ವಡೆ ಚೆನ್ನಾಗಿದೆ ಅಂಥ ತಿನ್ದು ತೇಗಿ ಹಿಂದೆ ಅಂಡಿಗೆ ಕೈ ಒರೆಸ್ಕೊನ್ಡು ಹೋಗೂರು..ಶಂಕರ ಅವ್ರ ಥರ ಎಸ್ಟು ಜನ ಮಾಲಿಕರ ಹತ್ತಿರ ಹೋಗಿ ದಬಾಯಿಸೊ ಧೈರ್ಯ ಇದೆ? ನಾನು ಕೂಡ ಇಲ್ಲಿ ಹೇಳಿರೊ ಹೊಟೆಲ್ ಗೆ ಹೋದರೆ ಖಂಡಿತ ದಬಾಯಿಸುತ್ತೇನೆ. ಹೀಗೆ ೫೦ ಜನ ದಬಾಯಿಸಿದರೆ ಖಂಡಿತವಾಗಿ ಎಂಥ ಮಾಲಿಕ ಅಗ್ಗಿದ್ರು ಹೆಸರು ಬದಲಾಯಿಸುತ್ತಾನೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡದಲ್ಲಿ ಇದನ್ನು ಉದ್ದಿನ ವಡೆ ಅಂತ ಕರಿತಾರೆ...ಹಾಗಿರುವಾಗ ಇಲ್ಲಿ ಹೋಟೆಲ್ಗಳಲ್ಲಿ ಅದನ್ನು ಮೆದುವಡೆ ಅಂತ ಯಾಕೆ ಹೆಸರಿಸಬೇಕು?? ನಮ್ಮ ಜನರು ನೀವು ಹೇಳಿದ ಹಾಗೆ ಬೇರೆ ಭಾಷೆಯ ಜನಕ್ಕೆ ಮಣೆ ಹಾಕುವುದು ಜಾಸ್ತಿ...ನಿಮ್ಮಂಥವರು ಇಂಥವರಿಗೆ ಬುದ್ದಿ ಕಲಿಸಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬನ್ರಿ ಬಾಳಿಗರೆ, ಕನ್ನಡ ದಲ್ಲಿ ಬರೆಯುತ್ತ ಇದ್ದೆನೆ..ಅಲ್ಲ ಸ್ವಾಮಿ.. ೪೧ ವಾರಗಳಿಂದ ಸದಸ್ಯರಾಗಿರೊ ತಮಗೆ ಸಂಪದ ನಲ್ಲಿ ಇರೊ ಹುಳುಕು ಯಾಕೆ ಕಾಣಿಸಲಿಲ್ಲ? ಇಲ್ಲಿ english ಪದಗಳಿಗೆ ಏನು ಕೊರತೆ ಇದೆಯೆ? Ibox, Blog, kannada lipi ನಲ್ಲಿರೊ ಬಟನ್ನು ಇದೆಲ್ಲ ನಿಮ್ಮ ಕಣ್ಣಿಗೆ ಕಾಣಲಿಲ್ಲವೇಕೆ? ಇಲ್ಲ ಇದನ್ನ ಜಾಣ ಕುರುಡು ಎನ್ನಬಹುದೆ? ಶಂಕರ ಬ್ಲೊಗ್ ನಲ್ಲಿ ಇರೊ ಆಂಗ್ಲ ಪದಗಳು ಮಾತ್ರ ನಿಮ್ಮ ಕಣ್ನುಗಳಿಗೆ ಕುಕ್ಕುತ್ತಿವೆ ಅಲ್ಲವೆ? ಹುಳುಕು ಎಲ್ಲಿ ಬೇಕಾದರು ಹುಡುಕಬಹುದು ಸ್ವಾಮಿ..ನಮ್ಗೆ ಕನ್ನಡ ಬರೊದಿಲ್ರಿ..ನಿಮ್ಮಂಥ ಬುದ್ಧಿ ಜೀವಿಗಳು ಸಲಹೆ ಕೊಡಬೇಕು ಸಂಪದ ಅವ್ರಿಗೆ..ನೀವೆ ಇಲ್ಲಿ ಇರೊ ಆಂಗ್ಲ ಪದಗಳಿಗೆ ತಕ್ಕ ಕನ್ನಡ ಪದಗಳನ್ನು ಹುಡುಕಿ ಸಂಪದ ಅವರಿಗೆ ಕೊಡಬೇಕು ಅಂಥ ಕಳಕಳಿಯ ಮನವಿ. ನಮಸ್ಕಾರ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<೪೧ ವಾರಗಳಿಂದ ಸದಸ್ಯರಾಗಿರೊ ತಮಗೆ ಸಂಪದ ನಲ್ಲಿ ಇರೊ ಹುಳುಕು ಯಾಕೆ ಕಾಣಿಸಲಿಲ್ಲ? >>
ತಮ್ಮ ಕೈ ಅಲ್ಲಿ ಮಾಡಲಾಗದಿದ್ದಾಗ ಬೇರೆಯವರನ್ನು ಆಡಿಕೊಳ್ಳಬಾರದು, ಸಂಪದದ ಹುಟ್ಟಿಗೆ ನಿರ್ವಹಣಾ ತಂಡದವರ ಶ್ರಮದ ಅರಿವು ಇರಲಿ . ಯಾವುದು ಒಮ್ಮೆಗೇ ಆಗುವುದಿಲ್ಲ , ನಿಧಾನವಾಗಿ ಸರಿಹೋಗುತ್ತೆ . ಬಾಯಿಗೆ ಬಂತು ಅಂತ ಅನ್ನಿಸಿದ್ದೆಲ್ಲ ಹೇಳಿದರೆ ವಾಗರಿಕೆ ಬರುತ್ತದೆಯೋ ಹೊರತು ಗೌರವವಲ್ಲ . ಇದು ಉಚಿತವಾಗಿ ನಡೆಸುತ್ತಿರುವುದು ನೆನಪಿರಲಿ .

ಇನ್ನೊಂದು ಬಾಳಿಗರು ಅದೇನೋ ಹೇಳಿದರು ಹಾಗೆ ಹೀಗೆ ಅನ್ತಿದ್ದಿರಲ್ಲ ಅವರ ೨ ನೇ ಪ್ರತಿಕ್ರಿಯೆ ಓದಿ : ಹೀಗಿದೆ ಅದು -
<<ಅದೂ ಅಲ್ದೆ ಇನ್ನಷ್ಟು ಇಂಗ್ಲಿಷ್ ಪದಗಳೂ ಇವೆ. ಹೋಟ್ಲು, ಪಾರ್ಕು, ಸರ್ಕಲ್ಲು.
ನನಗೆ ಅದರಲ್ಲೇನೂ ಅಭ್ಯಂತರವಿಲ್ಲ. ಅವರು ಬಳಸಲಿ ಬಿಡಿ. ಅವರೇ ಪ್ರತಿಪಾದಿಸುತ್ತಿರುವ ನಿಯಮವನ್ನು ಅವರೇ ಪಾಲಿಸುತ್ತಿಲ್ಲ ಎನ್ನುವುದಷ್ಟೇ ನನ್ನ ಅಭಿಪ್ರಾಯ.>>>>
ಅರ್ಥವಾಯಿತೋ , ಕನ್ನಡದ ಬಗ್ಗೆ ಬರೆಯುತ್ತಿರಬೇಕಾದರೆ ಅಲ್ಲಿ ಕನ್ನಡ ಪದಗಳನ್ನೇ ಬಳಸಿ ಅನ್ನೋದು ತಪ್ಪೇ ? ಅನ್ಯ ಭಾಷೆಯ ಪದಗಳನ್ನೇ ತುಂಬಿಸಿ ಕನ್ನಡ ಕನ್ನಡ ಅನ್ನೋದು ಎಷ್ಟು ಸರಿ ? ಅವರು ಹೇಳಹೊರಟಿದ್ದು ಅರ್ಥ ಮಾಡಿಕೊಳ್ಳದೆ ಅನಾವಶ್ಯಕ ವಾದ ಮಾಡಿದ್ದು ಶಂಕರ ಅವರೇ ? ಹಾಗೆ ವೈಯಕ್ತಿಕ ಟೀಕೆ. ೪ ಪ್ರತಿಕ್ರಿಯೆ ಓದಿಕೊಂಡು ಬಾಯಿಗೆ ಬಂದಿದ್ದು ಬಡಬಡಿಸಬೇಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ವಿನಯ ಅವರೇ..ನೀವು ಬರೆದಿದ್ದು ನೋಡಿದರೆ ತಾವು ವ್ಯಕ್ತಿ ಪೂಜೆ ಬಹಳ ಚೆನ್ನಾಗಿ ಮಾಡುತ್ತೀರೆಂದು ತಿಳಿಯುತ್ತದೆ. ನಾನು ಸಂಪದ ಬಗ್ಗೆ ಕಾಮೆಂಟ್ ಮಾಡಿದ ತಕ್ಶ್ಣ ನಿಮಗ ಹೇಗೆ ಉರಿಯಿತು ಅಲ್ಲವೆ? ನಾನು ಕೂಡ ಅದನ್ನೆ ಹೇಳಿದ್ದು..ಸಂಪದ ನಲ್ಲಿ ಆಂಗ್ಲ ಪದಗಳಿದ್ದರೂ ಇದು ಕನ್ನಡವನ್ನು ಎಲ್ಲರಿಗೂ ತಲುಪಿಸುತ್ತಾ ಇದೆ..ಈ ವೆಬ್ ಸೈಟ್ ಉದ್ದೇಶ ಏನಿತ್ತೋ ಅದನ್ನ ಇದು ಸಮರ್ಥವಾಗಿ ನಿಭಾಯಿಸುತ್ತಾ ಇದೆ..ಶಂಕರ ಅವರ ಬ್ಲಾಗ್ ಕೂಡ ಹಾಗೆ ಎಂದು ನನ್ನ ಅನಿಸಿಕೆ..ಅವರು ಆಂಗ್ಲ ಪದ ಉಪಯೋಗಿಸಿದ್ದರೂ ಅದರ ಉದ್ದೇಶ ಏನು ಎಂದು ನಮ್ಮ ಬಾಳಿಗಾ ಮತ್ತೆ ನಿಮಗೆ ಏಕೆ ಅರ್ಥ ಆಗಲಿಲ್ಲ?? ಬಾಳಿಗಾ ಅವರು ಹೇಳಿದರು..ಅವರು ಇಲ್ಲಿ ಕನ್ನಡಕ್ಕೆ ಬಹಳ ಕೊಡುಗೆ ನೀಡಿದ್ದಾರೆ..ಅವರು ಹೇಳಿದ್ದೆ ಸರಿ ಅನ್ನೊ ವಾದ ಯಾಕೆ?? ಬ್ಲಾಗ್ ಬರವಣಿಗೆ ಒಬ್ಬೊಬ್ಬರದು ಒಂದೊಂದು ಶೈಲಿ..ಇದೇನು ಕನ್ನಡ ಪ್ರಬಂಧ ಸ್ಪರ್ಧೆಯೇ? ನಮ್ಮ ಹಾಯ್ ಬೆಂಗಳೂರು ರವಿ ಬೆಳೆಗೆರೆ ಅವರ ಬರವಣಿಗೆ ಶೈಲಿ ಕೂಡ ಹೀಗೆಯೇ..ಬಹಳ ಆಂಗ್ಲ ಪದಗಳನ್ನ ಅವರು ತಮ್ಮ ಲೇಖನದಲ್ಲಿ ಬಳಸುತ್ತಾರೆ..ಹಾಗೆಂದು ನೀವು ಅವರನ್ನು ಹೀಗೆ ಟೀಕೆ ಮಾಡುತ್ತೀರಾ?? ಅವರು ಕೂಡ ಬರೀ ಕನ್ನಡ ಪದಗಳನ್ನ ಬಳಸುತ್ತ ಬಂದರೆ ಯಾವ ಸಾಮಾನ್ಯ ಜನ್ರೂ ಅವರ ಪತ್ರಿಕೆ ಕೊಂಡು ಓದುವುದಿಲ್ಲ..ಬಡಬಡಿಸುತ್ತಿರುವುದು ಈಗ ಯಾರೆಂದು ಸ್ವಲ್ಪ ಯೋಚನೆ ಮಾಡಿ..ನಮಸ್ಕಾರ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನೀವು ಬರೆದಿದ್ದು ನೋಡಿದರೆ ತಾವು ವ್ಯಕ್ತಿ ಪೂಜೆ ಬಹಳ ಚೆನ್ನಾಗಿ ಮಾಡುತ್ತೀರೆಂದು ತಿಳಿಯುತ್ತದೆ>>
ಪೂಜೆ ಮಾಡಿದರೆ ನನಗ್ಯಾರು ಇಲ್ಲಿ ದಕ್ಷಿಣೆ ಕೊಡುವುದುಯಿಲ್ಲ ನನಗೆ ಅದು ಬೇಕಾಗೂ ಇಲ್ಲ .
" ನಿಮಗೆ ಯಾರು ಏನು ಹೇಳಹೊರಟಿದ್ದಾರೆ ಅನ್ನೋದೇ ತಿಳಿಯುವ ಸಂಯಮ ಇಲ್ಲ ಅನ್ನಿಸುತ್ತೆ . ಕನ್ನಡದ ಬಗ್ಗೆ ಬರೀತಿದ್ದಿರಿ ಅಂದ ಮೇಲೆ ಅನ್ಯ ಭಾಷೆ ಪದಗಳು ಅಲ್ಲೇಕೆ ಅನ್ನೋದು ಪ್ರಶ್ನೆ , ಬೇರೆ ಕಡೆ ಉಪಯೋಗಿಸಬೇಡಿ ಅಂತ ಯಾರು ಹೇಳಿಲ್ಲ . ಶಂಕರರು ಯಾವುದೋ ಉಪಹಾರ ಮಂದಿರದವನಿಗೆ ದಬಾಯಿಸಿದೆ ಅಂತ ಅಂದರಲ್ಲ , ಹಾಗಾದರೆ ನಮ್ಮ ಬೆಂಗಳೂರಿನ ಲಾಲ್ ಬಾಗ್ ಕನ್ನಡ ಪದವೇ , ನೀವು ಎಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದ್ದಿರಿ? ಒಮ್ಮೆ ಯಾದರು ಇದರ ಬಗ್ಗೆ ಅಲ್ಲಿನ ಆಡಳಿತ ಮಂಡಳಿ ಯವರಿಗೆ ದಬಾಯಿಸಿದ್ದಿರ ? ಸುಮ್ಮ ಸುಮ್ಮನೆ ಅದು ಹಾಗೆ ಇದು ಹೀಗೆ ಅನ್ನೋಬದ್ಲು ಏನು ಹೇಳಿದರು ಅನ್ನೋದು ತಿಳಿಯೋಕೆ ಪ್ರಯತ್ನಿಸಿ . ಇನ್ನು ಇಷ್ಟು ಚರ್ಚೆಗೆ ಕಾರಣ ಶಂಕರರು ತಾವಾಗಿಯೇ ಚಪ್ಪಡಿ ಕಲ್ಲನ್ನು ಮೈ ಮೇಲೆ ಎಳೆದುಕೊಂಡಿದ್ದು.

ನಿಮಗೂ ನಮಸ್ಕಾರ

ಇಂತಿ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತ ಅವರೇ..
ನಿಮ್ಮ ಗುಂಪಿನವರೇ ಆದ ಇಂಚರ, ಗುರು ಬಾಳಿಗ ಅವರೆಲ್ಲರೂ ಕಂಗ್ಲಿಷ್ ಲೇಖನ ಬರೆದಾಗ ಅವರನ್ನೆಲ್ಲ ಇಂದ್ರ ಚಂದ್ರ ದೇವೇಂದ್ರ ಅಂತೆಲ್ಲ ಹೊಗಳಿ,, ನಾನು ಬರೆದ ಲೇಖನಕ್ಕೆ ಯಾಕೆ ಈ ಮಲತಾಯಿ ಧೋರಣೆ ?
<<ಇನ್ನು ಇಷ್ಟು ಚರ್ಚೆಗೆ ಕಾರಣ ಶಂಕರರು ತಾವಾಗಿಯೇ ಚಪ್ಪಡಿ ಕಲ್ಲನ್ನು ಮೈ ಮೇಲೆ ಎಳೆದುಕೊಂಡಿದ್ದು>>
ನಾನು ಮಾಡಬಾರದ ಯಾವುದೇ ಕೆಲಸ ಮಾಡಿ ಚಪ್ಪಡಿ ಕಲ್ಲನ್ನು ಎಳೆದುಕೊಂದಿಲ್ಲ. ನಿಮ್ಮಂಥ Hypocrites ಗಳಿಗೆ ಇದೆಲ್ಲ ಸಹ್ಯವಾಗೋದಿಲ್ಲ. ವೇದ ಹೇಳೋಕ್ಕೆ ಬದನೇಕಾಯಿ ತಿನ್ನೋಕ್ಕೆ ಅನ್ನೋ ಹಾಗೆ ನಿಮ್ಮ ನಡೆ ನುಡಿ. ಇಷ್ಟಕ್ಕೂ ನೀವು ಮಾತಾಡ್ತಾ ಇರೋ ಧೋರಣೆ ನೋಡಿದರೆ, ಸಂಪದ ದಲ್ಲಿ ಬರೀ ನಿಮ್ಮ ಬರಹಗಳು, ಲೇಖನಗಳು ರಾರಾಜಿಸಬೇಕು ಅನ್ನೋ ಹಾಗಿದೆ. ಯಾಕೆ ಹೀಗೆ ಆಡ್ತಾ ಇದೀರೋ ಅರ್ಥ ಆಗ್ತ ಇಲ್ಲ. ಮೊನ್ನೆ ಇಂದ ನಾನು ಹೇಳಿದ್ದನ್ನೇ ಹೇಳಿ ಹೇಳಿ ಸುಸ್ತಾಗಿದೀನಿ. ಬರಹದ ಹಿಂದೆ ಇರೋ ವಿಚಾರವನ್ನು ತಿಳಿಯಿರಿ. ನಿಮಗೆ ಹೋರಾಟ ಮಾಡುವ ಅಥವಾ ಕನಿಷ್ಠ ಪಕ್ಷ ಯಾಕೆ ಎಂದು ದಬಾಯಿಸಿ ಕೇಳುವ ಧೈರ್ಯ ಅಥವಾ ಉಮೇದು ಇಲ್ಲದಿದ್ದಲ್ಲಿ ದಯಮಾಡಿ ಸುಮ್ಮನಾಗಿ ಎಂದು ಕೆಲಿಕೊಲ್ತಾ ಇದ್ದೀನಿ. ಬರೀ ಮಾತಾಡುವ ಭಾಷೆ, ಲಿಖಿತ ಭಾಷೆ ಶುದ್ಧವಾಗಿದ್ದ ಪಕ್ಷದಲ್ಲಿ ಭಾಷೆ ಉದ್ಧಾರವಾಗೋಲ್ಲ. ಇದಕ್ಕೆ ಹೋರಾಟವೂ ಬೇಕು.
ನಿಮ್ಮಂಥ ನಿರಭಿಮಾನಿ, ಇಬ್ಬಗೆಯ ನೀತಿ ಉಳ್ಳವರು, Hypocrites (ಇದರ ಕನ್ನಡ ಪದ ತಿಳಿದಿಲ್ಲ) ಗಳಿಗೆ ಹೇಳಿ ಏನೂ ಪ್ರಯೋಜನ ಇಲ್ಲಾ..

ಶಂಕ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ವಿನುತ ಅವರಿಗೆ ಹೇಳಿದ್ದಿರೋ ಅಥವಾ ನನಗೋ ಗೊತ್ತಿಲ್ಲ , ನಾನು ಹೇಳಿದ ಒಂದೆರಡು ಮಾತುಗಳಿವೆ ಅದಕ್ಕೆ ಉತ್ತರಿಸುತಿದ್ದೇನೆ.
<<ನಿಮ್ಮ ಗುಂಪಿನವರೇ ಆದ ಇಂಚರ, ಗುರು ಬಾಳಿಗ ಅವರೆಲ್ಲರೂ ಕಂಗ್ಲಿಷ್ ಲೇಖನ ಬರೆದಾಗ ಅವರನ್ನೆಲ್ಲ ಇಂದ್ರ ಚಂದ್ರ ದೇವೇಂದ್ರ ಅಂತೆಲ್ಲ ಹೋಗಲಿ, ನಾನು ಬರೆದ ಲೇಖನಕ್ಕೆ ಯಾಕೆ ಈ ಮಲತಾಯಿ ಧೋರಣೆ ?>>
ನಿಮ್ಮ ಲೇಕನಕ್ಕೆ ೨ ನೇ ಪ್ರತಿಕ್ರಿಯೆ ನನ್ನದೇ ಅನ್ನಿಸುತ್ತೆ , ಅಲ್ಲೇ ಹೇಳಿದ್ದೇನೆ ನೋಡಿ .ಅದು ಹೀಗಿದೆ
<<ನೀವು ಹೇಳುತ್ತಿರುವಂತೆ ಲೇಕನದ ಹಿಂದಿರುವ ಉದ್ದೇಶ ಉತ್ತಮವಾದದ್ದೇ .
ಆದರೆ ವಿವರಿಸುವುದರಲ್ಲಿ ಸ್ವಲ್ಪ ಎಡವಿದ್ದಾರೆ ಅಷ್ಟೇ ಅನ್ಸುತ್ತೆ .
ಆದರೆ ಲೇಕನದಲ್ಲಿ ಹೇಳಹೊರಟಿರುವ ಕನ್ನಡದ ಬಗೆಗಿನ ಕಾಳಜಿಗೆ ನನ್ನ ಬೆಂಬಲವಿದೆ >>>>>>

ಅರ್ಥವಾಯಿತೋ ನಿಮ್ಮ ಮನಸಲ್ಲಿ ಇದ್ದ ಕನ್ನಡದ ಬಗ್ಗೆಯ ಕಾಳಜಿ ಬಗ್ಗೆ ಯಾರು ಪ್ರಶ್ನಿಸುತ್ತಿಲ್ಲ ಅರಿವಿರಲಿ .
ಇನ್ನು ಮತ್ತಿನ್ನೇನೋ ಬರೆದಿದ್ದಿರಲ್ಲ ಅದು ನಿಮ್ಮ ಚಿಂತನಾ ಲಹರಿ ವಿವರಿಸುತ್ತೆ , ಅದಕ್ಕೆಲ್ಲ ನಾ ಪ್ರತಿಕ್ರಿಯಿಸ ಹೋಗೋದಿಲ್ಲ .
ಸಾಧ್ಯವಾದರೆ ಈ ಕೆಳಗಿನ ಪದಗಳನ್ನು ಮುಂದಿನ ಪ್ರತಿಕ್ರಿಯೆಗಳಲ್ಲಿ ಸರಿಪಡಿಸಿಕೊಳ್ಳಿ .

<<ಎಳೆದುಕೊಂದಿಲ್ಲ ,ಕೆಲಿಕೊಲ್ತಾ ,>>

ಇಂತಿ
ವಿನಯ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಮಿ ವಿನಯ ಅವರೇ,

ಬರೆಯುವಾಗ ತಪ್ಪಾಗುವುದು ಸಹಜ.. ಹೇಳಿಲ್ಲವೇ ? to err is human ಅಂತ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಬರೆಯುವಾಗ ತಪ್ಪಾಗುವುದು ಸಹಜ>>
ನಾನೆಲ್ಲಿ ಇಲ್ಲ ಅಂದೇ . ತಗೋಳಪ್ಪ ಇನ್ನು ನಿಮಗೆ ಹೇಳಿ ಪ್ರಯೋಜನವಿಲ್ಲ . ತಿದ್ದಿಕೊಳ್ಳಲಿ ಅನ್ನೋ ದೃಷ್ಟಿ ಇಂದ ನಾನು ಹೇಳಿದ್ದು , ಬರಹಯಾರದೇ ಇರಲಿ , ನನ್ನದು ಕೂಡ . ಅದೇ ತಪ್ಪು ಅಂತ ಕಂಡರೆ ಏನು ಮಾಡೋಕೆ ಆಗೋಲ್ಲ .

ಇಂತಿ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ಮಾರಾರ್ರೇ ನಿಮಗೆ ಅವರು ಯಾರೂ ಹೇಳಿದ್ದು ಅರ್ಥವೇ ಆದಹಾಗೆ ಕಾಣ್ಸೋದಿಲ್ಲ.
ಅವರು ಹೇಳಿದ್ದು ತಾವಾಗಲೀ, ನೀವಾಗಲೀ ಇಂಗ್ಲೀಷ್ ಶಬ್ದಗಳನ್ನು ಬಳಸಬಾರದು ಅಂತ ಅಲ್ಲ, ಹಾಗೆ ಮಾಡುವವರಿಗೆ ಕನ್ನಡವನ್ನೇ ಎಲ್ಲಕಡೆಯೂ ಕನ್ನಡ ಶಬ್ದಗಳನ್ನೇ ಬಳಸಬೇಕು ಎಂದು ಹೇಳುವ moral highground ಇರುವುದಿಲ್ಲ ಎಂದು ಅಷ್ಟೆ.
ನೀವು ಅದನ್ನು ಅರ್ಥ ಮಾಡಿಕೊಳ್ಳದೇ, ವಾದದ ಮೇಲೆ ವಾದ ಮಾಡುತ್ತಿದ್ದೀರಿ. ನೋಡುವವರಿಗೆ ಸದಾ ಮೊದಲ ರಾಂಕ್ ಬಂದು ಈ ಬಾರಿ ಪರೀಕ್ಷೆಯಲ್ಲಿ ೨ನೆ ರಾಂಕ್ ಬಂದ ಮಕ್ಕಳು ಅತಾರ್ಕಿಕವಾಗಿ ರಚ್ಚೆ ಮಾಡುವಂತೆ ಕಾಣುತ್ತದೆ.
ನಿಮ್ಮ ರಚ್ಚೆಯ ಭರದಲ್ಲಿ ವಿನಯ ಯಾರು, ವಿನುತ ಯಾರು ಅನ್ನುವ ವ್ಯವಧಾನ ಕೂಡ ತಪ್ಪಿಹೋಗಿದೆ. ಅಲ್ಲವೇ? ಯಾಕೆ ಸುಮ್ಮನೆ ಇಷ್ಟೆಲ್ಲಾ ಬಿಸಿರಕ್ತ ಭರಿತ ವಾದ?
"ಹೌದು, ಆಡುಮಾತಿನಲ್ಲಿ ಇಂಗ್ಲೀಷ ಬಳಸಿದ್ದು ನಿಜ, ಆದರೆ ಹೋಟೆಲ್ ತಿಂಡಿಗೆ ಬೇರೆ ಭಾಷೆಯ ಹೆಸರು ಇಟ್ಟರೆ ಈಗ ಆಡು ಮಾತಿನಲ್ಲಿ ಆದಂತೆ ಎಲ್ಲೆಡೆಯೂ ಬೇರೆ ಭಾಷೆಯ ಶಬ್ದಗಳೇ ಬರುತ್ತವೆ ಎಂದು ನನ್ನ ಭಯ" ಎಂದು ಹೇಳಿ ಬಿಟ್ಟಿದ್ದರೆ ನಿಮ್ಮ ವ್ಯಕ್ತಿತ್ವಕ್ಕೂ ವಾದಕ್ಕೂ ಒಂದು ತೂಕ ಬಂದು ಬಿಡುತ್ತಿತ್ತು.
PS: ನನ್ನ ಈ ಕಮೆಂಟಿನಿಂದ ನನ್ನನ್ನು ಗುರುಬಾಳಿಗ/ವಿನಯ/ಇಂಚರರ 'ಗುಂಪಿಗೆ' ಆತುರದಿಂದ ಸೇರಿಸಬೇಡಿ. ನನಗೆ ಅವರ ಅಥವಾ ನಿಮ್ಮ ಅಭಿಪ್ರಾಯದಲ್ಲಿ ಯಾವುದರ ಬಗ್ಗೆ ಸಮ್ಮತಿ ಇದ್ದರೂ ನಾನು ಮೇಲೆ ಹೇಳಿದ್ದರಲ್ಲಿ ಯಾವುದೇ ವ್ಯತ್ಯಾಸವಾಗಬಾರದು ಅಲ್ಲವೇ?

PPS: Hypocrite ಗೆ ಕನ್ನಡದಲ್ಲಿ ಆಷಾಢಭೂತಿ ಅನ್ನಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಸಮ್ಮರ್ summer_glau ಅವರೆ,
<<"ಹೌದು, ಆಡುಮಾತಿನಲ್ಲಿ ಇಂಗ್ಲೀಷ ಬಳಸಿದ್ದು ನಿಜ, ಆದರೆ ಹೋಟೆಲ್ ತಿಂಡಿಗೆ ಬೇರೆ ಭಾಷೆಯ ಹೆಸರು ಇಟ್ಟರೆ ಈಗ ಆಡು ಮಾತಿನಲ್ಲಿ ಆದಂತೆ ಎಲ್ಲೆಡೆಯೂ ಬೇರೆ ಭಾಷೆಯ ಶಬ್ದಗಳೇ ಬರುತ್ತವೆ ಎಂದು ನನ್ನ ಭಯ">>

ನೀವು ಮೇಲೆ ಹೇಳಿದ ವಿಷಯವನ್ನೇ ನಾನು ಬೇರೆ ರೀತಿ ಹೇಳುತ್ತಾ ಬಂದರೂ ಅದನ್ನು ಅರ್ಥ ಮಾಡಿಕೊಂಡಿಲ್ಲ. ಹೀಗಾಗಿ ಅರೋಪ ಪ್ರತ್ಯಾರೋಪ ನಡೆಯುತ್ತಾ ಇದೆ.
ಇನ್ನು ನೀವು ಯಾವ ಪೂರ್ವಾಗ್ರಹ, ಪೂರ್ವಾಭಾವ ಇಟ್ಟುಕೊಳ್ಳದೆ ತಾರ್ಕಿಕ / ಅತಾರ್ಕಿಕ ಎಂಬ ತುಲನೆ ಮಾಡ್ತಾ ಇದೀರಾ?
ನೋಡುವ, ಈ ವಿಚಾರ ಎಲ್ಲಿ ವರೆಗೆ ಹೋಗುತ್ತದೆ ಎಂದು.

ಶಂಕ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಮನೇಲಿ ಜಗಳ ನಡೀತ ಇತ್ತು.. ಈಗ ಅಕ್ಕ ಪಕ್ಕದ ಮನೆಯಲ್ಲೂ ಚರ್ಚೆ, ಜಗಳ ಶುರು ಆಗಿದೆ.
ಇರಲಾರದೆ ಇರುವೆ ಬಿಟ್ಕೊಂಡ್ರು ಅಂತಾರಲ್ಲ ಹಾಗೆ ಈ ಅಕ್ಕ ಪಕ್ಕದ ಮನೆಯವರು.

ಶಂಕ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ವಾದ ಸರಣಿಯನ್ನು ಸುಮಾರು ಹತ್ತು ತಿಂಗಳ ಬಳಿಕ ಓದುತ್ತಿದ್ದೇನೆ, ಈ ವಾದ ವಿವಾದಗಳಲ್ಲಿ ಪಾಲ್ಗೊಂಡ ಬಹಳಷ್ಟು ಸಂಪಂದಿಗರು ಈಗ ನಮ್ಮ ಮಧ್ಯೆ ಇಲ್ಲ(ಸಂಪದದಲ್ಲಿ ಅಂತ ಓದಿಕೊಳ್ಳಬೇಕಾಗಿ ವಿನಂತಿ). ಮೊನ್ನೆ ಈ ಲೇಖಕ(ಕಟ್ಟೆ ಶಂಕರ)ರ ಬ್ಲಾಗ್, ಕನ್ನಡಪ್ರಭದಲ್ಲಿ (ರಿಕ್ಷಾಗಳ ಮೇಲಿನ ಬರವಣಿಗೆಗೆ ಸಂಬಂಧಪಟ್ಟ ಆ ಬ್ಲಾಗ್ ಚೆನ್ನಾಗಿತ್ತು) ಓದುತ್ತಿದ್ದಾಗ . ಮತ್ತೊಮ್ಮೆ ಇವರ ನೆನಪಾಯಿತು, ಅದಕ್ಕೆ ಲೇಖನ ಮತ್ತು ಪ್ರತಿಕ್ರಿಯೆಗಳನ್ನು ಇನ್ನೊಮ್ಮೆ ಓದಿದೆ, ನಕ್ಕು ಸುಸ್ತಾಯ್ತು. ಈಗಂತೂ ಸಂಪದದಲ್ಲಿ, ಈ ಥರದ ಕನ್ನಡಕ್ಕೆ ಸಂಬಧಪಟ್ಟ ಬರವಣಿಗೆಗಳೆ ಇಲ್ಲವೇ ಎಂಬಷ್ಟು ವಿರಳವಾಗಿಬಿಟ್ಟಿದೆ, ಕೊನೆ ಕುಟುಕು : ಇಲ್ಲಿನ ಚರ್ಚಾ ಗೋಷ್ಟಿಯ ಕೊನೆಯಲ್ಲಿ Mr. ಕನ್ನಡಿಗ ಎಂದು ಬಿರುದು ಕೊಡಿಸಿದ ಕಟ್ಟೆ ಶಂಕ್ರ ಅವರಿಗೆ ನಾನು ಆಭಾರಿಯಾಗಿದ್ದೇನೆ. ಆ ಹೋಟೇಲಿನಲ್ಲಿ ಈಗ ಮೆದು ವಡ ಅಲ್ಲಲ್ಲ ಉದ್ದಿನ ವಡಾ(ನಮ್ಮಲ್ಲಿ ಉದ್ದಿನ ವಡೆ) ಗೆ ಈಗ ಏನೆಂದು ಕರೆಯುತ್ತಾರೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲ, ತಿಳಿದವರು ದಯವಿಟ್ಟು ತಿಳಿಸಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ನೇಹಿತರೆ??!! ವಡೆ ವಿಷಯ ನೋಡ್ತಿದ್ರೆ ಜನ ನಮ್ಮ ವಡೆ ಮತ್ತು ಪಾಯಸ ತಿಂದಾದ ಮೇಲು ಮುಂದುವರೆದುಕೊಂಡು ಹೋಗು ರೀತಿ ಕಾಣಿಸುತಿದೆ ಅನ್ಸೋಲ್ವೆ? :) ಸಂಪದ ವಿಶ್ವದೆಲ್ಲೆಡೆ ಓದುವ ಜನರಿದ್ದಾರೆ ನಾವು ನಮ್ಮ ಭಾವನೆಗಳನ್ನು ಸ್ವಲ್ಪ ಹೆಚ್ಚಾಗೆ ಪ್ರಕತಿಸುತಿದೇವೆ ಅನ್ಸೋಲ್ವೆ? ಆದರಿಂದ ನಿಮ್ಮೆಲ್ಲರಿಗೂ ಕೇಳಿಕೊಳ್ಳುವುದು ಏನೆಂದರೆ ಈ ವಿಷಯಗಳನ್ನು ಇಲ್ಲಿಗೆ ಬಿಡಿ ಎಂದು ಅಷ್ಟೇ.

ಗುರು ಬಾಳಿಗ ಮತ್ತು ಅಸು ಹೆಗ್ಡೆ ಅವರೇ, ಕನ್ನಡ, ಇಂಗ್ಲಿಷ್ ಅಥವಾ ಯಾವುದೇ ಭಾಷೆಯಾದರೂ ಸಮನಾಗೆ ಉಪಿಯೋಗಿಸ್ಕೊಂಡು ಹೋಗೋಣ ಬಿಡಿ ಆಗ ಯಾರಿಗೂ ಬೇಜಾರ್ ಆಗಲ್ಲ. ನಾವೇ ಎಷ್ಟೋ ಸಲ ಕನ್ನಡ ಮಾತ್ ಆಡುವಾಗ ಬೇರೆ ಬೇರೆ ಭಾಷೆಗಳ ಪದಗಳನ್ನು ಉಪಯೋಗಿಸ್ತಿವಿ ಅದರಲ್ಲಿ ತಪ್ಪೇನು? ಈ ವಿಷಯದಲ್ಲಿ ನಮ್ಮ ದೇಶದ ಸರ್ಕಾರ ಕೂಡ ಒಂದು ನಿಲುವು ತೆಗೆದುಕೊಳಬೇಕು. ಹಿಂದಿಯನ್ನು ಶಾಲಾ ಕಾಲೇಜುಗಳಲ್ಲಿ ಅಳವಡಿಸಿದ ಹಾಗೆ, ದಕ್ಷಿಣ ಭಾರತದ ಭಾಷೆಗಳನ್ನೂ ಕಲಿಯುವ ಹಾಗೆ ಮಕ್ಕಳನ್ನು ಪ್ರೇರೇಪಿಸಬೇಕು ಅಲ್ವೇ?

ಪ್ರೀತಿಯ ಪ್ರದೀಪ್ ಅವರೇ ಬೇಜಾರು ಸಿಟ್ಟು ಮಾಡಿಕೊಳ್ಳಬೇಡಿ... 'Too many cooks spoil the broth' ಅನ್ನೋ ಅಂಗ್ಲ ನಾಣ್ಣುಡಿ ಕೇಳಿಲ್ಲವೇ? ಹಾಗೆ ಇದು ಕೂಡ... ತುಂಬ ಜನರು ಅವರವರ ಅಭಿಪ್ರಾಯಗಳನ್ನ ತಿಳಿಸುತ್ತಿರುವಾಗ ಮನಸ್ತಾಪಗಳು ಸಹಜ.

ಏನಿ ವೆ, ಶಂಕರ್ ನಿಮ್ಮ ಕನ್ನಡ ಪರ ಕಾಳಜಿಗೆ ಎಲ್ಲರು ಸ್ವಲ್ಪ ಹೆಚ್ಚಾಗೆ ಸ್ಪಂದಿಸಿದ್ದಾರೆ ನಾವೆಲ್ಲರೂ ಕನ್ನಡಿಗರೇ ಆದರೆ ಪ್ರೀತಿ ಹೋಗಿ fanatism ಜಾಸ್ತಿ ಆಗ್ತಾ ಇದೆ !!! ಕೊಡಗಿನಲ್ಲೂ ಕನ್ನಡ ಮಾತನಾಡುತಾರೆ ತುಳು , ಬಳ್ಳಾರಿ, ಕೋಲಾರ ಹೀಗೆ ಗಡಿನಾಡು ಕನ್ನಡಿಗರೂ ಇರುವರು ಮಾತನಾಡುವ ಶೈಲಿ ಹಾಗು ಪದಗಳು ಸ್ವಲ್ಪ ವ್ಯತ್ಯಾಸ ಆಗುತೆ ಅಷ್ಟೇ. ಎಲ್ಲರೂ ನಮ್ಮ ಸ್ನೇಹಿತರೇ ಅಲ್ಲವೇ?

ಇಲ್ಲಿ ಇರುವ ನಾವು ಯಾರೇ ಆದರೂ ಬೇರೆ ರಾಜ್ಯ ಅಥವಾ ದೇಶಕ್ಕೆ ಹೋದರೆ ನಾವೆಲ್ಲರೂ ನಮ್ಮ ಮಾತೃ ಭಾಷೆ ಕನ್ನಡ ಅಂತಾನೆ ಹೆಮ್ಮಯಿಂದ ಹೇಳೋದು !! :)

ಎಲ್ಲರಿಗು ನಮಸ್ಕಾರಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಭಿಜಿತ್
ಅಂತೂ ಕೊನೆಗೆ ಒಂದ್ ಒಳ್ಳೆ ವಾಕ್ಯ ಹೇಳಿದಿರಿ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮಂಜುನಾಥ್ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Pages