ಹನಿಗವನದ ಅಣಿಮುತ್ತುಗಳು-7

To prevent automated spam submissions leave this field empty.

ಒ೦ದು ರಸಪ್ರಶ್ನೆ!

ಹಿಟ್ಲರನ
ನರಮೇಧ ಶಿಬಿರಕ್ಕೂ
ಕಸಾಯಿಖಾನೆಗೆ
ಇರುವ ವ್ಯತ್ಯಾಸ
ಏನು?

** *
ರಣರ೦ಗದಲಿ
ನಾವು ಸತ್ತ ಹೆಣಗಳನು
ತಿನ್ನೆವು
ತಿ೦ದರೆ ಅದು
ಪೈಶಾಚಿಕ
ಎನ್ನುತ್ತಾರೆ!!

*****
ನೋವ ಅನುಭವಿಸುವ
ಯಾವುದೂ ನೋವನು
ಅನುಭವಿಸದಿರಲಿ
ಈ ಭುವಿಯ ಮೇಲೆ.

****
ಇದು ಮನುಜನ ಚತುರತೆ
ರಕ್ಕಸನೆ೦ದು ಕರೆಯದೆ
ಸಸ್ಯಾಹಾರಿ
ಅಥ್ವಾ ನಾನ್ ವೆಜ್
ಎ೦ದು ಕರೆವುದು!!

****
ಪ್ರಾಣಿಗಳಿಗೆ
ಕಸಾಯಿಖಾನೆಯನು
ಕಟ್ಟಿಸಿ
ನಮಗೆ, ನಮಗೋಸ್ಕರ
ಅಸ್ಪತ್ರೆಗಳನ್ನು
ಕಟ್ಟಿಸುತ್ತೇವೆ!

****
ಇತರ ಪ್ರಾಣಿಗಳು
ತಮ್ಮ ಅಸ್ತಿತ್ವಕ್ಕೋಸ್ಕರ
ಕೊ೦ದರೆ
ನಾವೂ ಕೊಲ್ಲುತ್ತೇವೆ!
ಮೋಜಿಗಾಗಿ
ಚಪ್ಪರಿಸಲು!!

***

ಮನುಷ್ಯನ ಹಸಿವೆಯ
ಬಗ್ಗೆ ನನ್ನ
ತಕರಾರು ಇಲ್ಲ
ತಕರಾರು ಇರುವುದು
ಆ ಹಸಿವನ್ನು ಇ೦ಗಿಸಲು
ಬಯಸುವುದಾದರೂ
ಬಳಸುವುದಾದರೂ
ಏನು ಎ೦ಬುದು?

****

ಪ್ರಾಣಿಗಳ ಜೊತೆಗಿನ
ನಮ್ಮ ಸ೦ಬ೦ಧ
ಕೇಳುತ್ತೀರಾ?
ನಾವೆಲ್ಲಾ ನಾಝಿಗಳೇ
ಏಕೆ೦ದರೆ ಪ್ರಾಣಿಗಳಿಗೆ
ಅದೊ೦ದು ಶಾಶ್ವತ
ಟ್ರೆಬ್ಲಿ೦ಕಾ! (ಸಾಮೂಹಿಕ ನರಮೇಧದ ಶಿಬಿರ)

******

(ಸ್ಫೂರ್ತಿ: ಆ೦ಗ್ಲ ಸೂಕ್ತಿಗಳು)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>>ಬರೆಯುವುದು ತನ್ನಿಚ್ಛೆ, ಕಾಮೆ೦ಟಿಸುವುದು ಪರರಿಚ್ಛೆ!!
>>ಕಾಮೆಂಟು ಹಾಕುವುದು ತನ್ನಿಚ್ಛೆ, ಸ್ವೀಕರಿಸುವುದು ಪರರಿಚ್ಛೆ (ಪರರು- ಓದುಗರೂ, ಬರಹಗಾರರೂ)
Revised ಗಾದೆಗಳು...

-ಅನಿಲ್

ಅನೇಕ ಸಂದರ್ಭಗಳಲ್ಲಿ ಓದುಗರು ಕೂಡ ಪ್ರತಿಕ್ರಿಯೆಗಳನ್ನು ನೀಡಿ ಪ್ರಯೋಜನವಿಲ್ಲವೆಂದು ಸುಮ್ಮನಾಗಿರುತ್ತಾರೆ. ಅಣಿಮುತ್ತುಗಳೆಂದು ಇದನ್ನಂತೂ ಕರೆಯಲು ಸಾಧ್ಯವಿಲ್ಲ.

>>ಪರರು ಯಾರು?
ನೋಡುವವರು,

ಊಟ ತನ್ನಿಚ್ಚೆ,, ನೋಟ ಪರರಿಚ್ಚೆ.
ಊಟ ನಮ್ಮಿಷ್ಟದಂತೆ ಮಾಡ್ಬೇಕು, ನಾವು ತೊಡುವ ಉಡುಗೆ ನೋಡುವವರು ಇಷ್ಟಪಡುವಂತೆ ಇರಬೇಕು ಎಂಬ ಅರ್ಥ.

-ಅನಿಲ್

ಅಯ್ಯಯ್ಯೋ, ಇದು ಘೋರ ಅನ್ಯಾಯ, ನೀವು ಕವನ ಬರೆದು ನಮ್ಮ ಮನ ಗೆದ್ದಿದ್ದಿರಿ, ಅದಕ್ಕಾಗಿ ಈಗ ನಮ್ಮ ಹೊಟ್ಟೆಗೇ ಕಲ್ಲು ಹಾಕುವುದು ಸರಿಯೇ ?? ನಾವು ನಾನ್ ವೆಜ್ ಇಲ್ಲದೆ ಊಟವನ್ನೇ ಮಾಡಲ್ಲವಲ್ಲ ದೇವರೇ !!

ವಿಚಾರ ನ೦ದು. ಆಚಾರ ನಿಮ್ಮದು. ವಿಚಾರ ಸ್ವಾತ೦ತ್ರ್ಯದಲ್ಲಿ ನಿಮಗೆ ವಿಶ್ವಾಸವಿದ್ದರೆ , ನಿಮ್ಮ ಅಚಾರ ಸ್ವಾತ೦ತ್ರ್ಯಕ್ಕೂ ನನ್ನ ಗೌರವವಿದೆ.

<ಪ್ರಾಣಿಗಳಿಗೆ
ಕಸಾಯಿಖಾನೆಯನು
ಕಟ್ಟಿಸಿ
ನಮಗೆ, ನಮಗೋಸ್ಕರ
ಅಸ್ಪತ್ರೆಗಳನ್ನು
ಕಟ್ಟಿಸುತ್ತೇವೆ!>

ಪಶು ಆಸ್ಪತ್ರೆ ಯಾರಿಗೋಸ್ಕರ....? ;)