ಈ ಹುಳುವಿನ ಹೆಸರೇ ....ಚಂದ್ರಮ್ಮ!!!!!!--ಭೂಷಣ್ ಮಿಡಿಗೇಶಿ

To prevent automated spam submissions leave this field empty.

ಕಳೆದವಾರ ಪಾವಗಡ ತಾಲ್ಲೂಕಿನ ಐತಿಹಾಸಿಕ ನಿಡಗಲ್ಲು ದುರ್ಗದ ತಪ್ಪಲಿನ ಊರಾದ ಶ್ಯಾಮರಾಯನ ಪಾಳ್ಯಕ್ಕೆ ಹೋಗಿದ್ದೆ. ಚಿಕ್ಕಂದಿನಲ್ಲಿ ನಮ್ಮ ದಿನ್ನೆ ಹೊಲಗಳಲ್ಲಿ ಯಥೇಚ್ಚವಾಗಿ ಕಂಡುಬರುತ್ತಿದ್ದ ಕೆಂಪು ಬಣ್ಣದ ಸ್ಪಂಜಿನಂತಹ ಹುಳುವೊಂದನ್ನು(ಜೇಡದ ರೀತಿ) ಅಲ್ಲಿ ಕಂಡೆ.ಇಂತಹ ಹುಳು ನೋಡಿ ದಶಕಗಳೇ ಕಳೆದಿದ್ದವು.ಚಿಕ್ಕಂದಿನಲ್ಲಿ ಇಂತಹ ಸುಮಾರು ಹುಳುಗಳನ್ನು ಹಿಡಿದು ಗುಡ್ಡೆ ಹಾಕುತ್ತಿದ್ದೆವು.ಕೆಲವೊಂದು ಬಾರಿ ಜೇಬಿನಲ್ಲಿ ಹಾಕಿಕೊಂಡಿದ್ದೂ ಉಂಟು.ನಮ್ಮನಮ್ಮಲ್ಲಿಯೇ ಯಾರು ಜಾಸ್ತಿ ಹಿಡಿಯುತ್ತಾರೆನ್ನುವ ಬಗ್ಗೆ ಪೈಪೋಟಿ ಕೂಡಾ ಇರುತ್ತಿತ್ತು.ಒಂದು ಕಡೆಯಿಂದ ಆರಿಸಿತಂದು ಹಾಕಿದರೆ ಇನ್ನೊಂದು ಕಡೆಯಿಂದ ಈ ಹುಳು ಹರಿದು ಹೋಗುತ್ತಿತ್ತು.
ಮುಂಗಾರಿನ ಮೊದಲ ಮಳೆಯಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ಹುಳುಗಳ ಜೀವಿತಾವಧಿ ಎಷ್ಟು ದಿನ ,ಇದ್ಯಾವ ಪ್ರಭೇದಕ್ಕೆ ಸೇರಿದ್ದು ಇನ್ನಿತರೆ ಮಾಹಿತಿಗಳು ನನಗೆ ತಿಳಿದಿಲ್ಲ.(ಮಾಹಿತಿ ಇದ್ದವರು ಹಂಚಿಕೊಳ್ಳಬಹುದು) ವೆಲ್ವೆಟ್ ತರಹದ ಅತಿಸಣ್ಣ ರೋಮಗಳಿಂದ ಆವೃತವಾದ ಇದರ ಬಣ್ಣ ಅತ್ಯಾಕರ್ಷಕ.ಬಿಸಿಲಿನಲ್ಲಿ ಮಳೆಯಾಧಾರಿತ ಕೃಷಿಭೂಮಿಯಲ್ಲಿ ಮೆಲ್ಲಗೆ ಸರಿದಾಡುವ ಇದು ಹಿಡಿದುಕೊಂಡರೂ ಏನೂ ಮಾಡುವುದಿಲ್ಲ.ತೀರಾ ನಿರುಪದ್ರವಿ.ಮುಟ್ಟಿದರೆ ತಣ್ಣನೆಯ ಅನುಭವವಾಗುತ್ತದೆ.ಹಾಗಾಗಿ ಇದು ಶೀತರಕ್ತ ಪ್ರಾಣಿಯಿದ್ದರೂ ಇರಬಹುದು.ತಣ್ಣನೆಯ ಹಾಗೂ ತುಂಬಾ ಸಾಧುವಾದರಿಂದಲೇ ಇದನ್ನು ಚಂದಿರನಿಗೆ ಹೋಲಿಸಿರಬಹುದು.ಒಟ್ಟಾರೆ ಅತ್ಯಂತ ಸುಂದರವಾದ ನಿಸರ್ಗದ ಕೊಡುಗೆಯೆನ್ನುವುದರಲ್ಲಿ ಎರ‍ಡು ಮಾತಿಲ್ಲ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಮಸ್ತೆ ಭೂಷಣ್ ಸಾರ್,

ಇತ್ತೀಚಿಗಷ್ಟೆ ಈ ವೆಲ್ವೆಟ್ ಹುಳು ಬಗ್ಗೆ ಚರ್ಚೆ ಮಾಡಿದ್ದೆವು:
http://sampada.net/image/21052

ಮಾಹಿತಿಗೆ ಧನ್ಯವಾದಗಳು!

--ಶ್ರೀ

ಶ್ರೀನಿವಾಸ್,
ಮೊನ್ನೆ ಊರಿಗೆ ಬಂದಿದ್ರಂತೆ,ಅನಿಲ ಫೋನ್ ಮಾಡಿ ತಿಳಿಸಿದ್ದ,ಮುಂಚೆಯೇ ಗೊತ್ತಿದ್ದರೆ ನಾನೂ ಸಿಕ್ತಿದ್ದೆ.ಹೇಗಿದ್ದೀರಿ??.ಫೋನ್ ನಂಬರ್ ಕೊಡಿ.ಈ ಹುಳುವಿನ ಬಗ್ಗೆ ಏನು ಚರ್ಚೆ ನಡೆದಿತ್ತು.
ಭೂಷಣ್ ಮಿಡಿಗೇಶಿ