"ದ ಕಿಂಗ್ ಆಫ್ ಪಾಪ್" - ಮೈಕಲ್ ಜಾಕ್ಸನ್ ಇನ್ನಿಲ್ಲ!

To prevent automated spam submissions leave this field empty.

ಪಾಪ್ ಮಾಂತ್ರಿಕ, ಕಿಂಗ್ ಆಫ್ ಪಾಪ್ ಎಂದೇ ಖ್ಯಾತಿ ಪಡೆದ ಮೈಕಲ್ ಜಾಕ್ಸನ್ ತಮ್ಮ ೫೦ ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಗುರುವಾರ ಮಧ್ಯಾಹ್ನ ಕಾರ್ಡಿಯಾಕ್ ಅರೆಸ್ಟ್ ನಿಂದಾಗಿ ಆಸ್ಪತ್ರೆ ಸೇರಿದ್ದಾಗಿ ವರದಿಯಾಗಿದ್ದು ಟ್ವಿಟರ್ ಇತ್ಯಾದಿಗಳ ಮೂಲಕ ಸಂಗೀತ ಪ್ರೇಮಿಗಳಿಗೆ ತಿಳಿಯಿತು. ನಂತರ ಈವಿಷಯವನ್ನು ಸಿ.ಬಿ.ಎಸ್ ನ್ಯೂಸ್, ಲಾಸ್ ಆಂಜಲ್ಸಿನ ಟೈಮ್ಸ್ ಇತ್ಯಾದಿ ಧೃಡಪಡಿಸಿವೆ. 

ಲಾಸ್ ಆಂಜಲ್ಸಿನ UCLA ಆಸ್ಪತ್ರೆಗೆ ೧೨:೨೧ ಕ್ಕೆ ೯೧೧ ಕಾಲ್ ಮಾಡಿ ಕರೆದೊಯ್ಯಲಾಯ್ತು. ಹೋಂಬ್ಲಿ ಹಿಲ್ಸ್ ನ ಅವರ ಮನೆಗೆ ತೆರೆಳಿದ ವೈದ್ಯರು ಕೊಟ್ಟ ಸಿ.ಪಿ.ಆರ್ ಚಿಕಿತ್ಸೆ ತರುವಾಯ ಆಸ್ವತ್ರೆ ಸೇರಿದ ಮೈಕಲ್ ಈ ಹೊತ್ತಿಗಾಗಲೇ ಕೋಮಾದಲ್ಲಿದ್ದರು. ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ದೊರೆತಿಲ್ಲ. 

ಬಾಲ ಕಲಾವಿದನಾಗಿ ರಂಗ ಪ್ರವೇಶಿಸಿದ ಮೈಕಲ್ ತನ್ನ ಸಂಗೀತದಿಂದಾಗಿ ೧೯೭೦ರ ಹೊತ್ತಿಗಾಗಲೇ ವಿಶ್ವವನ್ನೇ ತನ್ನ ತಾಳಕ್ಕೆ ಕುಣಿಯುವಂತೆ ಮಾಡಿದ್ದರು. ಈ ವರ್ಷ ಮತ್ತೆ ತಮ್ಮ ಸಂಗೀತದೊಂದಿಗೆ ರಂಗ ಪ್ರವೇಶಿಸುವ ಇರಾದೆಯೂ ಅವರಿಗೆ ಇತ್ತು.

Michael Joseph Jackson, Jr., Paris Michael Katherine Jackson and Prince
"Blanket" Michael Jackson II ಈ ಮೂರು ಮಕ್ಕಳನ್ನು ಮೈಕಲ್ ಈಗ ಅಗಲಿದ್ದಾರೆ..

ಇಂಗ್ಲೀಷ್ ಹಾಡುಗಳನ್ನು ಕೇಳಲಿಕ್ಕೆ ರೂಡಿಸಿಕೊಂಡಾಗಿನಿಂದಲೂ ಮೈಕಲ್ ಜಾಕ್ಸನ್ ರ ಕೆಲವೊಂದು ಹಾಡುಗಳು ಅವರ ನೃತ್ಯ ಪ್ರದರ್ಶನ ನನ್ನ ಮೈನವಿರೇಳಿಸಿದ್ದವು. ಅವುಗಳಲ್ಲಿ ಕೆಲವೊಂದು ಇಲ್ಲಿವೆ.

ಅರ್ಥ್ ಸಾಂಗ್:

2) ಬಿಲ್ಲಿ ಜೀನ್
3) ಸ್ಮೂತ್ ಕ್ರಿಮಿನಲ್
ಇತ್ತೀಚೆಗೆ ಕೋರ್ಟು ಕಟ್ಟಲೆ ಇತ್ಯಾದಿ ಏನೆಲ್ಲಾ ವಿಷಯಗಳಿಂದ ಮೈಕಲ್ ಜಾಕ್ಸನ್ ವಿಶ್ವದ ಮಾತಾಗಿದ್ದರೂ, ಪಾಪ್ ಲೋಕದಲ್ಲಿ ಅವರು ಯಾವಾಗಲೂ ಚಿರಾಯು...
ಚಿತ್ರ: http://www.allmichaeljackson.com/

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅರ್ಥ್ ಸಾಂಗ್ ಅದ್ಭುತವಾಗಿದೆ, ಇದು ಮೈಕೆಲ್ ಜಾಕ್ಸನ್ ದೈತ್ಯ ಪ್ರತಿಭೆಗೆ ಸಾಕ್ಶಿ.

ಸ್ಲಂನಲ್ಲಿ ಹುಟ್ಟಿ ಅಸಾಮಾನ್ಯ ಸಾಧನೆ ಮಾಡಿದ ವ್ಯಕ್ತಿ ಜಾಕ್ಸನ್

ಮಲ್ಲಿಕಾರ್ಜುನ ಹೊಸಪಾಳ್ಯ

ಜಾಕ್ಸನರ ಲೇಖನಕ್ಕೆ ಅನಂತ ಧನ್ಯವಾದಗಳು. ದೇವರು ಆ ಮಹಾನ್ ಪ್ರತಿಭೆಯ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಹಾರೈಸುತ್ತೇನೆ.

ಜಗತ್ತಿನಾದ್ಯಂತ ಅನೇಕ ಪಾಪ್ ನೃತ್ಯ ಕಲಾವಿದರು, ಸಿನಿಮಾ ಸ್ಟಾರ್ ಗಳು ಜಾಕ್ಸನ್ರ ಕುಣಿವ ಹೆಜ್ಜೆಯ ಕ್ವಚಿತ್ ಅನುಕರಣೆಯಿಂದಲೇ ಮೇಲೆ ಬಂದಿದ್ದಾರೆ. ನಮ್ಮದೇ ಮಿಥುನ್, ಅಮಿತಾಭ್, ಪ್ರಭುದೇವ ಇವರುಗಳು ಅನೇಕರಲ್ಲಿ ಕೆಲವು ಉದಾಹರಣೆಗಳಷ್ಟೆ ಇದಕ್ಕೆ.

ಜಾಕ್ಸನ್ ದ ಥ್ರಿಲ್ಲರ್, ಮೂನ್ ವಾಕರ್ ನಮ್ಮೆಲ್ಲರಲ್ಲಿ ಸದಾ ಅಮರರು

ಇವರ ಸಾಧನೆಗಳ ಬಗ್ಗೆ ನನಗೆ ಗೊತ್ತಿರುವ ಕೆಲವು ಮಾಹಿತಿ :
ಥ್ರಿಲ್ಲರ್ ಆಲ್ಬಮ್ - ಗಿನ್ನೆಸ್ ದಾಖಲೆ ಮಾರಾಟ, ಇನ್ನೂ ಮುರಿದಿಲ್ಲ
ಗ್ರಾಮಿ ಪ್ರಶಸ್ತಿ ಗೆದ್ದಿರುವುದು - ೫

ಮೈಖೇಲ್ ಜ್ಯಾಕ್ಸನ್, ವಿಶ್ವದ-ಯುವಪೀಳಿಗೆಯವರ ಕಣ್ಮಣಿಯಾಗಿದ್ದವರು, ಮೊನ್ನೆಮೊನ್ನೆಯರೆಗೂ ಅವರ ಜನಪ್ರಿಯತೆ ಅಪಾರ. ಹಾಲಿವುಡ್ ತಾರೆ, ಎಲಿಜಬೆತ್ ಟೇಲರ್ ಈ ಸುದ್ದಿಯನ್ನು ಕೇಳಿ ದಿಗ್ಭ್ರಮೆ ಹೊಂದಿದ್ದಾಗಿ ಮೀಡಿಯಾಗಳು ವರದಿಮಾಡುತ್ತವೆ. ಅಮೆರಿಕನ್ನರ ಮಾನಸಿಕ ಸ್ಥಿತಿಯೇ ಬೇರೆ. ಅವರು ಪ್ರಭಾವಿತರಾಗುವುದು ಅತಿಬೇಗ. ಹಿಂದಿನ, ಗತಿಸಿಹೋದ ಪಾಪ್ ಸಿಂಗರ್, ಎಲ್ವಿಸ್ ಪ್ರೆಸ್ಲಿಯನ್ನು ಅವರು ದೇವರಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಮತ್ತೊಬ್ಬ ಹಾಡುಗಾರ, ಹಾಗೂ ಗತಿಸಿಹೋದ ಹಾಲಿವುಡ್ ನಟ, ಫ್ರಾಂಕ್ ಸಿನೇಟ್ರಾ ಸತ್ತಾಗ ಅಮೆರಿಕದ ಜನರೆಲ್ಲಾ ಶೋಕಸಾಗರದಲ್ಲಿ ತೇಲಿಹೋಗಿದ್ದರು ! ನಾನು ನಿನ್ನೆ ಬೆಳಿಗ್ಯೆ, ೫ ಗಂಟೆಗೆ, " ರೆಡಿಫ್ ವಾರ್ತೆಯ ಅಂತರ್ಜಾಲ ತಾಣ " ದಲ್ಲಿ ಅವರ ನಿಧನವನ್ನು ಓದಿದ್ದೆ. ವೃತ್ತಪತ್ರಿಕೆಗಳಿಗೆ ವಾರ್ತೆ ತಡವಾಗಿ ತಲುಪಿದೆ. ಟೀವಿಯಲ್ಲೂ ನಿನ್ನೆ ಮಧ್ಯಾನ್ಹದ ಮೇಲೆ ವರದಿಗಳು ಬರಲಾರಂಭಿಸಿದವು.

ನಿಜವಾಗಿ ಹೇಳಬೇಕೆಂದರೆ, ನಮ್ಮ ವಯೋಮಾನದ ಜನರಲ್ಲಿ ಕೆಲವರು, ನನ್ನನ್ನೂ ಸೇರಿ, ಮೈಖೇಲ್ ಜ್ಯಾಕ್ಸನ್ ರ ಎಲ್ಲಾ ಹಾಡುಗಾರಿಕೆ-ನೃತ್ಯವನ್ನು ಮೆಚ್ಚಲು ಆಶಿಸುವುದಿಲ್ಲ. ಇದು ನೈಜಸಂಗತಿ. ಮೈಮುರಿದು, ಮುಖಕೆಟ್ಟದಾಗಿ ಮಾಡಿಕೊಂಡು ಕೂಗಿ, ಕಿರಿಚಾಡುವುದನ್ನು ನಾವು ಒಳ್ಳೆಯಹಾಡುಗಾರಿಕೆಯ ನೃತ್ಯವೆಂದು ಪರಿಗಣಿಸುವುದಿಲ್ಲ. ಆದರೆ ನಮ್ಮ ಮಾತನ್ನು ಯಾರು ಅನುಮೋದಿಸುತ್ತಾರೆ ?

ಇಲ್ಲ ಬಿಡಿ.

ಹೂ ಕೇರ್ಸ್ ?

ಆದರೆ, ಮೈಖೇಲ್ ರ ಹೃದಯವಂತಿಕೆಯನ್ನು ನಾನು ಖಂಡಿತಾ ಮೆಚ್ಚುತ್ತೇನೆ. ದೇವರು ಅವರ ಆತ್ಮಕ್ಕೆ ಶಾಂತಿನೀಡಲಿ. { ಪಾಪ, ಅವರ ೫೦ ವರ್ಷಗಳ ಜೀವನದುದ್ದಕ್ಕೂ ಅದೆಷ್ಟು ಕುಣ್ದು ಕುಪ್ಪಳ್ಸಿದ್ರಪ್ಪ, ಅದೆಷ್ಟು ಮೂಗಿನ ಪ್ಲಾಸ್ಟಿಕ್ ಸರ್ಜರಿಮಾಡಿಸಿಕೊಂಡಿದ್ರು. ಅದೆಷ್ಟು ಮೀಡಿಯಾ ಪ್ರಚಾರ-ಅಪಪ್ರಚಾರಗಳಿಗೆ ಗುರಿಯಾಗಿದ್ದರು }

ವೆಂಕಟೇಶ್.

<<ಇದು ನೈಜಸಂಗತಿ. ಮೈಮುರಿದು, ಮುಖಕೆಟ್ಟದಾಗಿ ಮಾಡಿಕೊಂಡು ಕೂಗಿ, ಕಿರಿಚಾಡುವುದನ್ನು ನಾವು ಒಳ್ಳೆಯಹಾಡುಗಾರಿಕೆಯ ನೃತ್ಯವೆಂದು ಪರಿಗಣಿಸುವುದಿಲ್ಲ>>
:) ಖಂಡಿತಾ ಸರ್, ರೌದ್ರ ಭಾವ / ರಸವನ್ನ ಬಿಂಬಿಸಿ ಮೇಲೆ ಬರುವ ಕಲಾವಿದರುಗಳು ಅನೇಕ. ಅದು ಮಾನ್ಯವಾಗುವುದೂ ಬೇಗ. ಅದೇ ಅವರ ಜೀವನಕ್ಕೆ ಮುಳುವಾಗುವುದೂ ಕಾಣುತ್ತೇವೆ. ದಿ. ಕಾಳಿಂಗ ನಾವಡ (ಖ್ಯಾತ ಯಕ್ಷಗಾನ ಭಾಗವತರು) ಇದಕ್ಕಿನ್ನೊಂದು ಉದಾಹರಣೆ ಅನ್ನಿಸುತ್ತದೆ.

ಯಕ್ಷಗಾನ, ಮತ್ತು ಭರತನಾಟ್ಯ ಪ್ರಾಕಾರಗಳಲ್ಲಿ ಹಲವಾರು ರಸಗಳು ಸಂದರ್ಭಕ್ಕನುಗುಣವಾಗಿ ಬರುತ್ತವೆ. ರೌದ್ರರಸ, ಕರುಣರಸ, ಶೃಂಗಾರರಸ, ಭೀಭತ್ಸರಸ, ಇತ್ಯಾದಿ. ನನಗೆ ತಿಳಿದಂತೆ ಪ್ರಿಯನು ತನ್ನ ಪ್ರೇಯಸಿಗೆ ಪ್ರೇಮಸಂಕೇತವನ್ನು ಕುಣಿದು ಕುಪ್ಪಳಿಸಿ, ಕೇಕೇ ಹಾಕಿ, ಕೆಟ್ಟಮುಖ, ನಾಲಿಗೆ ತೋರಿಸುತ್ತಾ, ಹಲ್ಲುಕಚ್ಚುತ್ತಾ, ಕೆಟ್ಟದಾಗಿ ಸೊಂಟಕುಣಿತವನ್ನು ಪ್ರದರ್ಶಿಸಿ, ೪ ಅಕ್ಷರಗಳ ಪದಗಳನ್ನು ಧಾರಾಳವಾಗಿ ಉಪಯೋಗಿಸುತ್ತಾ, ಮಾಡುವ ಪ್ರಚಂಡ ಶಬ್ದವನ್ನು ನಾವು ನೃತ್ಯಸಂಗೀತವೆಂದು ಕರೆಯಬೇಕೇ ? ಯಾವುದೂ ನಮ್ಮಂತಹ ಹಳೇಕಾಲದವರಿಗೆ ಇದು, ಗೊತ್ತಾಗೋಲ್ಲ. ನಾವು ಅವನ್ನು " ಹಮಾರೆ ಬಸ್ ಕಾ ಬಾತ್ ನಹೀ ಹೈ ಬಾಬಾ "ಅಂದರೆ, ಅವರು, ಎಲ್ಲಾ ಕುಣಿತಗಳಂತೆ ಇದನ್ನು ಮಾಡಿ , ಕೊನೆಗೆ " ಕು ಛ್ ಭೀ ಹೋಸಕ್ತಾಹೈ. ಯಹೀ ಹೈ ಅಸ್ಲೀ ಮ್ಯೂಸಿಕ್ ಬೇಬಿ " ಎಂದು ಭುಜ, ಮೈಕುಣಿಸಿಹೇಳಿದರೆ, ನಮ್ಮಜನ , ಹುಚ್ಚರಂತೆ ಮೇಲೆದ್ದು, ಪ್ರಚಂಡ ಚಪ್ಪಾಳೆಹೊಡೆಯುತ್ತಾರೆ. ಅದೂ ನಿಂತು !! ಖಂಡಿತ ಯುವಜನರ ಹೃದಯಕ್ಕೆ ಬೇಸರವಾದರೆ, ಕ್ಶಮಿಸಿ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ. ಸಾರಿ.....

" ಸ್ಟಾಂಡಿಂ ಒವೇಶನ್ " ಆಗದಿದ್ದರೆ ಸಾಧ್ಯವೇ ??

' ಅರ್ತ್ ಸಾಂಗ್ ’ ನ ’ ಥೀಂ,’ ನನಗೆ ತುಂಬಾ ಹಿಡಿಸಿತು. ಮನಸ್ಸಿಗಾದ ಮಾಯದ-ಗಾಯದ ಎಳೆಗಳನ್ನು ಗುರುತಿಸುತ್ತಾ, ತನ್ನ ಹೃದಯದ ಮಿಡಿತವನ್ನು ಎಲ್ಲರೊಡನೆ ಹಂಚಿಕೊಂಡು ಹಾಡುತ್ತಾ ಸಾಗುವ ’ ಹೃದಯವಿದ್ರಾವಕವಾದ ಹಾಡು, ’ ನಿಜಕ್ಕೂ ಅವರ್ಣನೀಯ !

ಭೇಶ್, ಚೆನ್ನಾಗಿದೆ.

ವೆಂಕಟೇಶ್.