ಪಾಕ್ ಎಂಬ ಕಬ್ಬಿಣ ಕಾದಿದೆ; ಬಡಿದು ಹದಕ್ಕೆ ತರಲು ಇದು ಸಕಾಲ

To prevent automated spam submissions leave this field empty.

ಸರಬ್‌ಜಿತ್ ಸಿಂಗ್‌ಗೆ ಪಾಕಿಸ್ತಾನವು ಗಲ್ಲು ಶಿಕ್ಷೆ ಖಾಯಂ ಮಾಡಿದೆ. ಆತ ತಪ್ಪಿತಸ್ಥನಲ್ಲವೆಂಬ ಅರಿವಿದ್ದೂ ಪಾಕಿಸ್ತಾನ ಈ ರೀತಿ ರಾಕ್ಷಸಿ ವರ್ತನೆಯ ಪುನರಾವರ್ತನೆ ಮಾಡುತ್ತಿದೆ. ಮುಂಬೈ ಬಾಂಬ್ ದಾಳಿ ವಿಷಯದಲ್ಲಿ ಪಾಕಿಸ್ತಾನಕ್ಕೆ ಎಳ್ಳಷ್ಟೂ ಪಶ್ಚಾತ್ತಾಪವಾಗಿಲ್ಲ.

ಭಾರತದ ವಿರುದ್ಧ ಪಾಕಿಸ್ತಾನವು ಮುಂಬಯಿಯಲ್ಲಿ ನಡೆಸಿದ ಆ ’ಮೂರು ದಿನದ ಅಧರ್ಮಯುದ್ಧ’ದಿಂದಾಗಿ ನೂರಾರು ಅಮಾಯಕ ಜೀವಗಳ ಹರಣವಾಯಿತಷ್ಟೇ ಹೊರತು ಪಾಕಿಸ್ತಾನವು ಅದರಿಂದ ಸಾಧಿಸಿದ್ದೇನಿಲ್ಲ. ಜಗತ್ತಿನ ವಿಶ್ವಾಸವನ್ನು ಅದೀಗ ಸಂಪೂರ್ಣವಾಗಿ ಕಳೆದುಕೊಂಡಿದೆ. ಆದರೆ, ಈ ಘಟನೆಯಿಂದ ಭಾರತವು ಕಲಿಯಬೇಕಾದ್ದು ಬಹಳಷ್ಟಿದೆ.

ಬ್ರಿಟಿಷರ ಬಳುವಳಿ
-------------------
ಬ್ರಿಟಿಷರು ಭಾರತವನ್ನು ಒಡೆದು ಹೊರಟುಹೋದರು. ನಂತರ ನಾವು ಮಾನಸಿಕವಾಗಿ ಒಂದಾಗುವ ಬದಲು ಇನ್ನಷ್ಟು ದೂರವಾಗತೊಡಗಿದೆವು. ಭಾರತ, ಪಾಕ್ ಎರಡೂ ದೇಶಗಳ ರಾಜಕಾರಣಿಗಳು ದ್ವೇಷದ ಬೆಂಕಿಯನ್ನು ಶಮನಗೊಳಿಸುವ ಬದಲು ಆ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳತೊಡಗಿದರು. ಪಾಕ್‌ನ ಮಿಲಿಟರಿ ಸರ್ವಾಧಿಕಾರಿಗಳಂತೂ ಭಾರತದ ಮಟ್ಟಿಗೆ ಮಾತ್ರವಲ್ಲ, ತಮ್ಮ ದೇಶದ ಪಾಲಿಗೂ ರಾಕ್ಷಸರೇ ಆದರು! ಇವೆಲ್ಲದರ ಪರಿಣಾಮ, ಸೌಹಾರ್ದಯುತವಾಗಿ ಬಗೆಹರಿಯಬಹುದಾಗಿದ್ದ ಕಾಶ್ಮೀರ ಸಮಸ್ಯೆಯು ಉಲ್ಬಣಗೊಂಡಿತು. ಪಾಕ್ ಪೋಷಿತ ಉಗ್ರರು ಹುಟ್ಟಿಕೊಂಡರು. ಕಾಶ್ಮೀರದ ಹೊರಗೂ ತಮ್ಮ ಕಬಂಧಬಾಹುಗಳನ್ನು ಚಾಚಿದ ಇವರು ಇಂದು ಇಡೀ ಭಾರತಕ್ಕೇ ಕಂಟಕಪ್ರಾಯರಾಗಿ ಬೆಳೆದುನಿಂತಿದ್ದಾರೆ.

ಭಾರತದಲ್ಲಿ ಮುಸ್ಲಿಮರನ್ನು ಹಿಂಸಿಸಲಾಗುತ್ತಿದೆಯೆಂದು ಕೆಲವು ಅನ್ಯೋದ್ದೇಶಭರಿತ ಮಾಧ್ಯಮಗಳು ಸುಳ್ಳು ಚಿತ್ರಣ ನೀಡುತ್ತಿರುವುದರಿಂದಾಗಿ ಮತ್ತು ಬಾಬ್ರಿ ಮಸೀದಿಯ ಧ್ವಂಸದ ವಿಷಯವನ್ನೆತ್ತಿಕೊಂಡು ಈ ಮುಸ್ಲಿಂ ಉಗ್ರರನ್ನು ಭಾರತದ ವಿರುದ್ಧ ಇನ್ನಷ್ಟು ವ್ಯಗ್ರಗೊಳಿಸಲಾಯಿತು. ಇದೇ ವೇಳೆ, ಅಧಿಕಾರ, ತುಷ್ಟೀಕರಣ ಹಾಗೂ ರಾಜಕೀಯ ದ್ವೇಷಗಳೇ ಗುರಿಯಾಗಿರುವ ನಮ್ಮ ಆಡಳಿತ ಪಕ್ಷಗಳು ಕಾಲದಿಂದ ಕಾಲಕ್ಕೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸೂಕ್ತವಾಗಿ ಆತ್ಮಸಮರ್ಥನೆಯ ಕಾರ್ಯ ನಿರ್ವಹಿಸುವಲ್ಲಿ ವಿಫಲವಾದವು. ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಪಾಕಿಸ್ತಾನ ಹಾಗೂ ಪಾಕ್ ಪ್ರೇರಿತ ಉಗ್ರಗಾಮಿ ಸಂಘಟನೆಗಳು ನಮ್ಮ ಮೇಲೆ ಎಲ್ಲ ರೀತಿಯ ದುರಾಕ್ರಮಣವನ್ನೂ ತೀವ್ರಗೊಳಿಸಿದವು. ಅದೀಗ ಮುಂಬಯಿಯಲ್ಲಾದಂತೆ ಅಘೋಷಿತ ಯುದ್ಧದ ಹಂತಕ್ಕೆ ಬಂದು ನಿಂತಿದೆ!

ಯುದ್ಧವೋ ಮತ್ತೇನೋ ಮಾಡಿ ಪಾಕಿಸ್ತಾನವನ್ನು ಬಗ್ಗುಬಡಿದುಬಿಡಬೇಕೆನ್ನುವ ಕೆಲವರ ಆಶಯದ ಅನುಷ್ಠಾನ ಇಂದು ಅಷ್ಟು ಸುಲಭವಲ್ಲ. ಇಂದಿರಾಗಾಂಧಿ ಮತ್ತು ಲಾಲ್‌ಬಹಾದುರ್ ಶಾಸ್ತ್ರಿ ಇವರಿಬ್ಬರಿಗೆ ಆ ಅವಕಾಶ ಇತ್ತು. ಈಗ ಪಾಕಿಸ್ತಾನವೂ ನಮ್ಮಂತೆ ಅಣುಶಕ್ತಿ ಸನ್ನದ್ಧ ರಾಷ್ಟ್ರವಾಗಿರುವುದರಿಂದ ಅದನ್ನು ಬಗ್ಗುಬಡಿಯಲು ಹೊರಡುವ ಮೊದಲು ನಾವು ಎಲ್ಲ ಸಾಧಕ ಬಾಧಕಗಳನ್ನೂ ಯೋಚಿಸಬೇಕಾಗುತ್ತದೆ.

ಮಾಡಬೇಕಾದ್ದೇನು?
---------------------
ಮೊಟ್ಟಮೊದಲು, ನಮ್ಮ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವವರೀಗ ಆಲಸ್ಯ ಮತ್ತು ಕಾಪಟ್ಯ ತೊರೆದು ಎಚ್ಚತ್ತುಕೊಳ್ಳಬೇಕಾಗಿದೆ. ಮೈಕೊಡವಿ ಎದ್ದೇಳಬೇಕಾಗಿದೆ. ಹಿಂದು-ಮುಸ್ಲಿಂ ವೋಟುಗಳಿಗಾಗಿ ದೇಶವನ್ನೇ ಬಲಿಕೊಡಲು ಹೇಸದಿರುವ ನಮ್ಮ ರಾಜಕಾರಣಿಗಳು ಇನ್ನಾದರೂ ಪ್ರಾಮಾಣಿಕತೆಯನ್ನು ತೋರಬೇಕು ಮತ್ತು ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿಯನ್ನು ಮೆರೆಯಬೇಕು. ಅಂಥ ಯೋಗ್ಯ ನೇತಾರರನ್ನೇ ಚುನಾಯಿಸುವ ತನ್ನ ಜವಾಬ್ದಾರಿಯನ್ನು ಮತದಾರ ತಪ್ಪದೇ ನಿರ್ವಹಿಸಬೇಕು.

’ಭಾರತದಲ್ಲಿ ಮುಸ್ಲಿಮರು ಹಿಂಸಿಸಲ್ಪಡುತ್ತಿದ್ದಾರೆ’ ಎಂಬ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿರುವುದೂ ಮುಸ್ಲಿಂ ಉಗ್ರರ ಭೀಕರ ಸ್ವರೂಪಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿರುವುದರಿಂದ ಅಂಥ ಅಪಕಲ್ಪನೆಯನ್ನು ನಿವಾರಿಸುವ ಕೆಲಸವನ್ನು ನಮ್ಮ ಮಾಧ್ಯಮಗಳು ಮತ್ತು ವಿಚಾರಪರ ಗಣ್ಯರು ಹಾಗೂ ಸಂಘಟನೆಗಳು ಕೈಗೆತ್ತಿಕೊಳ್ಳಬೇಕು. ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಈ ನಿಟ್ಟಿನಲ್ಲಿ ಸ್ಪಷ್ಟನೆಯ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಬೇಕು. ಜೊತೆಗೆ, ಕಾಶ್ಮೀರದಲ್ಲಿ ನಮ್ಮ ಸೈನಿಕರು ಇನ್ನೂ ಹೆಚ್ಚಿನ ಸಂಯಮ ಪ್ರದರ್ಶಿಸಬೇಕು. ರಾಜಕಾರಣಿಗಳು ಕಾಶ್ಮೀರದ ಜನತೆಗೆ ಉತ್ತಮ ಆಡಳಿತ ನೀಡಿ ಎಲ್ಲರ ವಿಶ್ವಾಸ ಗಳಿಸಬೇಕು.

ಇಷ್ಟಾಗುವಾಗ ನಾವು ಪಾಕಿಸ್ತಾನದೊಡನೆ ಮಾತುಕತೆಯನ್ನು ತೀವ್ರಗತಿಯಲ್ಲಿ ಮುನ್ನಡೆಸಬೇಕು. ಅದೇವೇಳೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಸಿ, ಪಾಕ್ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಒತ್ತಡಗಳನ್ನು ಹೇರಿಸಬೇಕು. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನವೀಗ ಆರ್ಥಿಕವಾಗಿ ಜರ್ಜರಿತವಾಗಿದೆ. ಅಲ್ ಖೈದಾ ಹಾಗೂ ತಾಲಿಬಾನ್ ಉಗ್ರರು ಪಾಕ್‌ಗೂ ಕಂಟಕಪ್ರಾಯರಾಗಿದ್ದಾರೆ. ಪಾಕ್‌ಗೆ ನೆರವು ನೀಡುತ್ತಿರುವ ಅಮೆರಿಕದ ಆರ್ಥಿಕ ಪರಿಸ್ಥಿತಿಯೂ ಭದ್ರವಾಗಿಲ್ಲ. ಜೊತೆಗೆ, ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಯು ಅಮೆರಿಕವೂ ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ಗೊತ್ತಿರುವುದೇ ಆಗಿದೆ. ಈ ಸಂದರ್ಭದ ಉಪಯೋಗ ಪಡೆದುಕೊಂಡು ಭಾರತವು ಪಾಕಿಸ್ತಾನವನ್ನು ಹಾದಿಗೆ ತರಲು ಸಾಧ್ಯ. ಕೊನೆಗೆ ಅನಿವಾರ್ಯವಾದರೆ ಶಕ್ತಿಪ್ರಯೋಗ ಇದ್ದೇ ಇದೆ. ನಮ್ಮ ಶಕ್ತಿಯ ಮುಂದೆ ಪಾಕಿಸ್ತಾನದ ಶಕ್ತಿ ಏನೇನೂ ಅಲ್ಲ.

ಕಬ್ಬಿಣ ಕಾದಿದೆ. ಬಡಿದು ಹದಕ್ಕೆ ತರಲು ಇದು ಸುಸಮಯ. ಇದಕ್ಕಾಗಿ ನಮ್ಮ ಸರ್ಕಾರಕ್ಕೆ ಬೇಕಾಗಿರುವುದು ಪ್ರಾಮಾಣಿಕತೆ, ಸಕಾರಾತ್ಮಕ ಧೋರಣೆ ಮತ್ತು ಇಚ್ಛಾಶಕ್ತಿ. ಅತ್ತ ಸರಬ್‌ಜಿತ್‌ಗೆ ಗಲ್ಲು ಖಾಯಂ ಆದರೆ ಇತ್ತ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲು ಹಿಂದೆಮುಂದೆ ನೋಡುತ್ತಿರುವ ನಮ್ಮ ಸರ್ಕಾರದಿಂದ, ಮುಂಬಯಿಯ ಘನಘೋರ ದುರಂತದ ನಂತರವೂ ಪಾಕ್ ವಿಷಯದಲ್ಲಿ ತಣ್ಣಗೆ ಕುಳಿತಿರುವ ನಮ್ಮ ಕೇಂದ್ರ ಸರ್ಕಾರದಿಂದ ಈ ಇತ್ಯಾತ್ಮಕ ಗುಣಗಳನ್ನು ನಾವು ನಿರೀಕ್ಷಿಸಬಹುದೇ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

incisive article ಶಾಸ್ತ್ರಿಗಳೇ.
’ಭಾರತದಲ್ಲಿ ಮುಸ್ಲಿಮರು ಹಿಂಸಿಸಲ್ಪಡುತ್ತಿದ್ದಾರೆ’
ಈ ವಾದ ಕೊಳ್ಳಲು ಯಾರೂ ತಯಾರಿಲ್ಲ, ವಿಶೇಷವಾಗಿ ಅರಬ್ ಮತ್ತು ಇತರ ರಾಷ್ಟ್ರಗಳು. ಅವರಿಗೆಲ್ಲ ಗೊತ್ತು ಮುಸ್ಲಿಮರು ಭಾರತದಲ್ಲಿ ಎಷ್ಟು ಹೆಮ್ಮೆಯಿಂದ ಬದುಕುತ್ತಿದ್ದಾರೆ ಎಂದು. ಉತ್ತರದ ರಾಜ್ಯವೊಂದರಲ್ಲಿ ಅತ್ಯಂತ ವ್ಯಸ್ಥಿತವಾಗಿ ಮುಸ್ಲಿಮರ ಮಾರಣ ಹೋಮ ನಡೆದಾಗಾಗಲಿ, ಬಾಬರಿ ಮಸ್ಜಿದ್ ಧ್ವಂಸದ ನಂತರವಾಗಲಿ ಯಾವ ಮುಸ್ಲಿಂ ರಾಷ್ಟ್ರಗಳೂ ಭಾರತವನ್ನು ಖಂಡಿಸಲಿಲ್ಲ. ಅದೇ ಸಮಯ ನಮ್ಮ ರಾಜ್ಯದಲ್ಲಿ ಕೆಲವೊಂದು ಶಿಲುಬೆಗಳು ಉರುಳಿದಾಗ ಇಟಲಿಯಿಂದ ಹಿಡಿದು ಅಮೆರಿಕೆಯ ವರೆಗೂ ನಮ್ಮ ಕೊರಳು ಪಟ್ಟು ಹಿಡಿದು ಪ್ರಶ್ನಿಸಲಾಯಿತು. ಭಾರತೀಯ ಮುಸ್ಲಿಮರಿಗೆ ಯಾವುದೇ ಹೊರ ದೇಶದ ಕೃಪಾಕಟಾಕ್ಷ ಬೇಕಿಲ್ಲ. ನಮ್ಮ ಸಮಸ್ಯೆಯನ್ನು ನಾವು ಮತ್ತು ಸಮಾನಮನಸ್ಕ, ಶಾಂತಿ ಪ್ರಿಯ ಹಿಂದೂಗಳು ಪರಿಹರಿಸಿಕೊಳ್ಳಬಹುದು.

ಪಾಕನ್ನು ಬಡಿದು ಬುಧ್ಧಿ ಕಲಿಸಲು ಮುಂಬೈ ಘಟನೆ ಸಾಕಿತ್ತು. ಅದನ್ನು ಕಳೆದುಕೊಂಡೆವು ನಾವು. ಈಗ ಮರುಗಿ ಪ್ರಯೋಜನವಿಲ್ಲ. ಚಾಣಕ್ಯ ಪುರಿಯಲ್ಲಿ (ವಿದೇಶಾಂಗ ಇಲಾಖೆ) ಸೂಟು ಬೂಟು ತೊಟ್ಟ ಕೆಲಸಕ್ಕೆ ಬಾರದ ಮುದಿ ಗೊಡ್ಡುಗಳನ್ನು ಒದ್ದೋಡಿಸಿ ಹೊಸ ಪೀಳಿಗೆಯ pragmatic ಜನರನ್ನು ನೇಮಿಸಬೇಕು. ನಮ್ಮ ವಿದೇಶಾಂಗ ನೀತಿ hopelessly outdated. ನಾವು proactive ಆಗಲೇಬೇಕು, ಅದಕ್ಕೆ ಇದು ಸಕಾಲ.

ಸೋದರ ಅಬ್ದುಲ್ ಲತೀಫ್ ಸೈಯದ್ ಅವರೇ,
ಕಣ್ಣು ತೆರೆಸುವಂಥ ನಿಮ್ಮ ಈ ನುಡಿಗಳು ನನಗೆ ಸಂತಸ ತಂದಿವೆ. ಹೃತ್ಪೂರ್ವಕ ಧನ್ಯವಾದ.

ವೆಲ್ಲ್ ಡ್ ನ್ ಪ್ರೆನ್ದ್, ಸರಿಯಾಗಿ ಹೆಳೀದಿರ, ನಾವೆಲ್ಲಾ ಒಟ್ಟಾಗಿ ಮೊದಲು ಧೂರ್ಥ ರಾಜಕರಣಿಗಳನ್ನು ಬಗ್ಗುಬಡಿಯಬೆಕು.

ಉತ್ತರದ ರಾಜ್ಯವೊಂದರಲ್ಲಿ ಅತ್ಯಂತ ವ್ಯಸ್ಥಿತವಾಗಿ ಮುಸ್ಲಿಮರ ಮಾರಣ ಹೋಮ ನಡೆದಾಗಾಗಲಿ, ಬಾಬರಿ ಮಸ್ಜಿದ್ ಧ್ವಂಸದ ನಂತರವಾಗಲಿ ಯಾವ ಮುಸ್ಲಿಂ ರಾಷ್ಟ್ರಗಳೂ ಭಾರತವನ್ನು ಖಂಡಿಸಲಿಲ್ಲ
>> http://www.nytimes.com/1992/12/08/world/pakistanis-attack-30-hindu-templ...

ಇದು fabricated ವರದಿ ಆಗಿದ್ದರೆ ನನ್ನ ತಪ್ಪಲ್ಲ.

ಮಾನ್ಯ ಅಬ್ದುಲ್ ಲತಿಫ಼್ ಸಯೆದ್,
ನಿಮ್ಮ ಅಭಿಪ್ರಾಯ ಚೆನ್ನಾಗಿದೆ.
ಆದರೆ ಅದರಲ್ಲಿ ಒಂದು ವಿಷಯ ವಿಶ್ವ ರಾಜಕೀಯ ದೃಷ್ಟಿಯಲ್ಲಿ ಮತ್ತು ಇತರ ಕಾರಣಗಳಿಂದ ಸರಿಯಾದುದಲ್ಲ.
ಮುಂಬೈ ಘಟನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ಬಡಿದು ಬುದ್ದಿ ಕಲಿಸುವ ಸಮಯೋಚಿತ ಯೋಚನೆಗೆ ಬುದ್ದಿವಂತಿಕೆಯ ಅಡಿಪಾಯವಿಲ್ಲ. ನಿಮ್ಮ ಅಭಿಪ್ರಾಯದಲ್ಲಿ ಮತ್ತೊಮ್ಮೆ ಯುದ್ಧ ಮಾಡುವ ಸದವಕಾಶ ಇತ್ತು ಅನ್ನುತ್ತೀರಿ. ಆದರೆ ಅದರ ಜೊತೆ ಹೊಣೆದ ಘೋರ ಸಮಸೆಗಳು ಬುದ್ಧಿ ಕಲಿಸುವ ಬದಲು ಬುದ್ಧಿ ಕಲಿಯುವ ಪರಿಸ್ತಿಯನ್ನು ಖಚಿತ ತರುತ್ತಿತ್ತು. ಆದರ ಜೊತೆಗೆ ಕೆಲವು ಬಿಲಿಯನ್ ಡಾಲರ್ ಗಳ ವೆಚ್ಚ ಯಾವ ಸಮಸ್ಯೆಯನ್ನು ನಿವಾರಿಸದೆ ಮತ್ತಷ್ಟು ಅನವಶ್ಯವಾದ ಸಮಸ್ಯೆಗಳನ್ನು ತರುತ್ತಿತ್ತು.
ಇದು ನವ ಯುಗ. ಪ್ರಪಂಚದಲ್ಲಿ ಪರಿಸ್ತಿತಿ ಅತ್ಯಂತ ಬದಲಾಗಿದೆ. ಹಿಂದಿನ ಕಾಲದಂದೆ - ನಾವು ಹೆಚ್ಚು ಶಕ್ತಿಯುಳ್ಳವರು ಎಂಬ ಮೂಡನಂಬಿಕೆಯಿಂದ - ಮಾತಿಗೆ ಮುಂಚೆ ಯುದ್ಧ ಪ್ರಾರಂಬಿಸುವ ದಿನಗಳು ಇನ್ನಿಲ್ಲ.
ನೋಡಿ, ಅಮೇಕ ಮತ್ತು ಊರೋಪ್ ದೇಶಗಳ ಮುನ್ನ್ಯೋಚನೆ ಇಲ್ಲದೆ ಶುರು ಮಾಡಿದ ಮೂರ್ಖನೊಬ್ಬನ ಗರ್ವ ಅಹಂಭಾವ ಹುಚ್ಚನ್ನು ಅವಲಂಬಿಸಿ ಸಹಾಯಕರಾಗಿ ಇರಾಕ್ ಮತ್ತು ಆಫ಼್ಗಾನಿಸ್ತಾನದಲ್ಲಿ ನಡೆಸುತ್ತಿರುವ ಕಾಳಗ ಕಿನಿತೊಂದೂ ಪರಿಹಾರ ಇದುವರೆಗೆ ತರಲಿಲ್ಲ. ಅದಲ್ಲದೆ ಇದುವರೆಗೆ ಸುಮಾರು ೬೦೦೦ ಕ್ಕೂ ಹೆಚ್ಚು ಅಮೇರಿಕ ಊರೋಪ್ ಯುವಕ ಸಿಪಾಯಿಗಳು ಪ್ರಾಣ ಕಳೆದುಕೊಂಡರು. ಜೊತೆಗೆ ಪ್ರತಿ ವರ್ಷ ಸುಮಾರು ೮೦ ಬಿಲಿಯನ್ ಡಾಲರ್ ಗಳಿಗೂ ಹೆಚ್ಚು ವೆಚ್ಚ ಅವಶ್ಯಕವಾಗಿದೆ. ಆದರೂ ಅಲ್ಲಿ ಅವರು ಗಳಿಸಿರುವ ಪ್ರಗತಿ ಶೂನ್ಯ. ಆ ವಿಷಯವನ್ನು ಕುರಿತು ಇದು ಸಂಕ್ಷಿಪ್ತ ವರದಿ.
ಯುದ್ಧ ಪ್ರಾರಂಭ ಮಾಡದೆ ಇದ್ದದ್ದು ಭಾರಕ್ಕೆ ಒಂದು ದೊಡ್ಡ ಅದೃಷ್ಟದಂತೆ. ಹಿಂದಿನ ೩ ಯುದ್ಧಗಳ ಪರಿಣಾಮ ಹೇಳಿಕೊಳ್ಳುವಂತದ್ದಲ್ಲ. ಫ್ರಯೋಜನ ಏನೂ ಕಾಣುತ್ತಿಲ್ಲ.
ಜೊತೆಗೆ ಮುಂಬೈ ಪ್ರಕರಣವನ್ನು ಕುರಿತು ಫಾಕ್ ಮೇಲೆ ದೂರಣೆ ಮಾಡಲು ರುಜುವಾತುಗಳಾದರು ಎಲ್ಲಿತ್ತು?
ಆದರೆ ಭಾರತ ಸರ್ಕಾರವು ಮುಂಬೈ ಪ್ರಕರಣದ ಬಗ್ಗೆ ಬಹಳ ಹೆಚ್ಚಾದ ರಾಜಕಾರಣಿಯ ಆಂತರ್ರಾಷ್ಟೀಯ ಮಟ್ಟದಲ್ಲಿ ಹೇರಳವಾದ ಒತ್ತು ಹಾಕಿ ಅಂದೋಳನ ಪ್ರಚಾರಣೆ ಮಾಡಬೇಕಾಗಿತ್ತು.
ಅಲ್ಲಿ ಭಾರತ ಸರ್ಕಾರ ವಿಷಾದಕರವಾಗಿ ಪರಾಜಿತವಾಗಿದೆ. ಮತಿಹೀನವಾಗಿ ಕುಳಿತಿದೆ.
- ವಿಜಯಶೀಲ

@ಮೊದಲಿಗೆ ಶಾಸ್ತ್ರಿಗಳೇ
ಒಳ್ಳೆಯ ಬರಹಕ್ಕೆ ಅಭಿನಂದನೆಗಳು ನಿಮಗೆ :)

@

@ವಿಜಯಶೀಲ
ಯುದ್ಧವೆನ್ನುವುದು ಸಾವು,ನೋವಿನ ಕಥೆ ಎನ್ನುವುದಂತೂ ನಿಜ.ನೀವು ಹೇಳಿದ ಹಾಗೆ "ಇದು ನವ ಯುಗ. ಪ್ರಪಂಚದಲ್ಲಿ ಪರಿಸ್ತಿತಿ ಅತ್ಯಂತ ಬದಲಾಗಿದೆ. ಹಿಂದಿನ ಕಾಲದಂದೆ - ನಾವು ಹೆಚ್ಚು ಶಕ್ತಿಯುಳ್ಳವರು ಎಂಬ ಮೂಡನಂಬಿಕೆಯಿಂದ - ಮಾತಿಗೆ ಮುಂಚೆ ಯುದ್ಧ ಪ್ರಾರಂಬಿಸುವ ದಿನಗಳು ಇನ್ನಿಲ್ಲ." ಇದು ನಿಜ.

ಆದರೆ
[quote]ಹಿಂದಿನ ೩ ಯುದ್ಧಗಳ ಪರಿಣಾಮ ಹೇಳಿಕೊಳ್ಳುವಂತದ್ದಲ್ಲ. ಫ್ರಯೋಜನ ಏನೂ ಕಾಣುತ್ತಿಲ್ಲ[/quote]
ಇದನ್ನು ಮಾತ್ರ ಒಪ್ಪುವಂತದ್ದು ಅನ್ನಿಸಲಿಲ್ಲ.೧೯೪೭ರ ಯುದ್ಧದಲ್ಲಿ 'ಚಾಚ' ಸುಮ್ಮನಿದ್ದಿದ್ದರೆ ಈ ಕಾಶ್ಮೀರದ ಸಮಸ್ಯೆ ಇವತ್ತಿಗೆ ಇರುತ್ತಿರಲಿಲ್ಲವೇನೋ.೧೯೭೧ರ ಯುದ್ಧದ ಲಾಭ 'ಬಾಂಗ್ಲಾದೇಶ'ದ ಹುಟ್ಟಿಗೆ ಕಾರಣವಾಗಿ ತನ್ಮೂಲಕ 'ಈಶಾನ್ಯ ರಾಜ್ಯ'ಗಳಲ್ಲಿ ಪಾಕಿಗಳ ಹುನ್ನಾರಕ್ಕೆ ಕಡಿವಾಣ ಬೀಳಲಿಲ್ಲವೇ? ಹಾಗೆ ಮುತ್ತಿನೋದಿಕೊಲ್ಲುವಂತ ಏಟನ್ನು ಪಾಕಿಗೆ ಕೊಟ್ಟು , ಆಗ ತಾನೇ ಚಿನಿಗಳ ಕೈಗೆ ಸಿಕ್ಕು ಹೈರಾಣಗಿದ್ದ ದೇಶದ ಕಡೆ ಇಡಿ ವಿಶ್ವವೇ ಬೆರಗುಗೊಳ್ಳುವಂತೆ ಮಾಡಿದ್ದು ಸುಳ್ಳೇ? ಇನ್ನು 'ಕಾರ್ಗಿಲ್' ಯುದ್ಧವೆನಾದರು ನಡೆಯದಿದ್ದರೆ ಪರಿಸ್ತಿತಿ ಏನಾಗುತ್ತಿತು ಅನ್ನುವುದು ತಿಳಿದಿದೆಯಲ್ಲವೇ.

ಕಡೆಯದಾಗಿ ನಾನು ಹೇಳಬಯಸುವುದೆನೆದರೆ ಒಂದು ದೇಶದ 'ವಿದೇಶಾಂಗ ನೀತಿ' ಬಹಳ ಗಟ್ಟಿಯಾಗಿರಬೇಕು.ಯುದ್ಧ ಹಾಗು ಶಾಂತಿಯಿಂದಲೇ ಎಲ್ಲವನ್ನು ಸಾಧಿಸಲು ಸಾಧ್ಯವೂ ಇಲ್ಲ.ಎರಡನ್ನು ಬೇಕಾದಾಗ ಸರಿಯಾಗಿ ಉಪಯೋಗಿಸಬೇಕು, ಇದಕ್ಕೆಲ್ಲ ಮುಖ್ಯವಾಗಿ ಶಾಸ್ತ್ರಿಗಳು ಹೇಳಿದಂತೆ "ಪ್ರಾಮಾಣಿಕತೆ, ಸಕಾರಾತ್ಮಕ ಧೋರಣೆ ಮತ್ತು ಇಚ್ಛಾಶಕ್ತಿ" ಇರುವ ನಾಯಕರು ಬೇಕು

ಅತ್ತ ಸರಬ್‌ಜಿತ್‌ಗೆ ಗಲ್ಲು ಖಾಯಂ ಆದರೆ ಇತ್ತ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲು ಹಿಂದೆಮುಂದೆ ನೋಡುತ್ತಿರುವ ನಮ್ಮ ಸರ್ಕಾರದಿಂದ, ಮುಂಬಯಿಯ ಘನಘೋರ ದುರಂತದ ನಂತರವೂ ಪಾಕ್ ವಿಷಯದಲ್ಲಿ ತಣ್ಣಗೆ ಕುಳಿತಿರುವ ನಮ್ಮ ಕೇಂದ್ರ ಸರ್ಕಾರದಿಂದ ಈ ಇತ್ಯಾತ್ಮಕ ಗುಣಗಳನ್ನು ನಾವು ನಿರೀಕ್ಷಿಸಬಹುದೇ?
>> ಅಫ್ಜಲ್ ಗುರು "Q" ನಲ್ಲಿ ಇದ್ದಾನೆ, ಹಾಗಾಗಿ ಸಧ್ಯಕ್ಕೆ ಏನೂ ನಿರೀಕ್ಷಿಸುವಂತಿಲ್ಲ,,

ಆನಂದರಾಮರೇ,
ಗಾಂಧೀ ಕುಟುಂಬದ (ಮತ್ತು ಈ ವಿದೇಶೀ ಸೊಸೆಯ) ಕೈಯಲ್ಲಿ ಅಧಿಕಾರ ಇರುವ ತನಕ ಯಾವುದೇ ರಾಷ್ಟ್ರದ ವಿರುದ್ಧ ಯಾವುದೇ ರೀತಿಯ ತೀವ್ರಗಾಮಿ ಕ್ರಮಗಳನ್ನು ನಾನು ನಿರೀಕ್ಷಿಸುವುದಿಲ್ಲ. ನೀವೂ ನಿರೀಕ್ಷಿಸಬೇಡಿ.
ಹಾಗೊಮ್ಮೆ ನಮ್ಮ ನಿರೀಕ್ಷೆ ಸುಳ್ಳಾದರೆ,
ಅದನ್ನು ಪವಾಡ ಎಂದು ಕರೆಯೋಣ.
ಆಮೇಲೆ ನಾವೆಲ್ಲಾ "ಕೈ" ಎತ್ತಿ ಒಕ್ಕೊರಲಿನಿಂದ "ಜೈ ಹಿಂದುಸ್ತಾನ್" ಎನ್ನೋಣ.

(ಇಲ್ಲಿ ನಾನು ಯಾವುದೇ ವ್ಯಕ್ತಿ /ಕುಟುಂಬ / ಜನಾಂಗ/ ಜಾತಿ ನಿಂದನೆಯ ಉದ್ದೇಶವನ್ನಿಟ್ಟುಕೊಂಡು ಪ್ರತಿಕ್ರಿಯಿಸಿಲ್ಲ ಎಂದು ಒತ್ತಿ ಹೇಳುತ್ತೇನೆ).

ನಿಮ್ಮ ಪ್ರತಿಕ್ರಿಯೆಗೆ ಸಂಬಂಧಿಸಿದು ಎನಿಸಿತು, ಅದಕ್ಕೆ ಹಾಕುತ್ತಿದ್ದೇನೆ ('ಮೌನ ಕಣಿವೆ'ಯಿಂದ http://mounakanive.blogspot.com/2009/05/blog-post_21.html)
[quote]ಇದೆಲ್ಲದರ ಜೊತೆಗೆ ಭಾರತೀಯ ಮನಸ್ಸು ಕೆಲಸ ಮಾಡುವ ರೀತಿಯೂ ಕಾರಣವಾಗಿರಬಹುದು. ಇಲ್ಲಿ ಕುಟುಂಬದಲ್ಲಿ ಸೊಸೆಗೆ ಎಲ್ಲಾ ರೀತಿಯ ಸ್ಥಾನಮಾನಗಳನ್ನು ನೀಡಲಾಗುತ್ತದೆ. ಆಕೆ ಮನೆಮಗಳ ಸಮಾನ ನಿಜ. ಆದರೆ ಕುಟುಂಬದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಅಪನಂಬಿಕೆಯ ಕರಿನೆರಳೊಂದು ಅವಳ ಮೇಲೆ ಬಿದ್ದಿರಿತ್ತದೆ. ಅವಳಿಗಿಂತ ಮನೆ ಮಗಳಿಗೆ-ಅವಳು ಮದುವೆಯಾಗಿ ಗಂಡನ ಮನೆಯಲ್ಲಿದ್ದರೂ ಹೆಚ್ಚಿನ ಅಧಿಕಾರವಿರುತ್ತದೆ.
ಅಲ್ಲದೇ ಇನ್ನೊಂದು ವಿಷಯವೂ ಗಮನಾರ್ಹ. ಹೆಣ್ಣು ಮಗಳೊಬ್ಬಳು ಗಂಡನ ಮನೆಗೆ ಬಂದಾಗ ಅದರಲ್ಲಿಯೂ ಅನ್ಯ ಜಾತಿಯ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾದಾಗ ಅವಳಲ್ಲಿ ಆತಂಕವಿರುತ್ತದೆ. ಅದು ಸಹಜ. ಆಕೆ ಗಂಡನನ್ನು ಸಂಪೂರ್ಣ ಒಪ್ಪಿಕೊಂಡಿದ್ದಾಳೆ ಮತ್ತು ನಂಬಿದ್ದಾಳೆ. ಆದರೆ ಗಂಡನ ಮನೆಯವರನ್ನು ಕ್ರ್‍ಅಮೇಣ ಒಪ್ಪಿಕೊಳ್ಳುತ್ತಾಳೆ. ನಂಬುತ್ತಾಳೆ ಎಂದು ಹೇಳಲಾಗದು. ’ಒಪ್ಪಿಕೊಳ್ಳುವುದು’ ಮತ್ತು ’ನಂಬುವುದು’ ಎರಡರ ಮಧ್ಯೆ ಸೂಕ್ಷಮವಾದ ಆದರೆ ಗಂಭೀರವಾದ ವ್ಯತ್ಯಾಸ ಇದೆ. ಒಪ್ಪಿಕೊಳ್ಳುವುದು ಅನಿವಾರ್ಯವಾಗಬಹುದು ಆದರೆ ನಂಬುವುದು ಆಕೆಗೇ ಬಿಟ್ಟಿದ್ದು. ಅದು ಆಕೆಯ ತೀರಾ ಅಂತರಂಗದ ವಿಷಯ. ಸೋನಿಯಾ ಭಾರತೀಯ ಪೌರತ್ವ ಸ್ವೀಕರಿಸಲು ತಡ ಮಾಡಿದ್ದಕ್ಕೆ ಇದೂ ಒಂದು ಕಾರಣವಾಗಿರಬಹುದು.
ಕಾಂಗ್ರೆಸ್ಸಿಗೆ ಆಕೆ ಅನಿವಾರ್ಯವಾಗಿದ್ದರು. ‘ಕೆರೆಗೆ ಹಾರ’ ಜನಪದ ಕಥನ ಕಾವ್ಯದಲ್ಲಿ ಊರ ಏಳ್ಗೆಗಾಗಿ ಕಿರಿ ಸೊಸೆ ಭಾಗೀರಥಿಯನ್ನು ಬಲಿ ಕೊಡುವುದಿಲ್ಲವೇ? ಕುಟುಂಬದ ಒಳಿತಿಗಾಗಿ ಗರ್ಭಿಣಿ ಸೊಸೆಯಂದಿರೇ ಬಲಿಯಾಗಬೇಕು!ಮನೆಮಗಳು ಅದಕ್ಕೆ ಅರ್ಹಳಲ್ಲ!
ನಮ್ಮೆಲ್ಲರದ್ದು ಅತ್ತೆ ಮನಸ್ಸು. ಸೋನಿಯಾರ ವಿಚಾರದಲ್ಲಿ ಬಿಜೆಪಿಯ ಮನಸ್ಸಂತೂ ‘ಘಟವಾಣಿ ಅತ್ತೆ’ಯ ಮನಸ್ಸಿನಂತೆ ಕೆಲಸ ಮಾಡಿದೆ. ಹಾಗಾಗಿಯೇ ಸೋನಿಯಾ ಪ್ರಧಾನಿಯಾದರೆ ತಲೆ ಬೋಳಿಸಿ ವಿಧವೆಯ ಬಾಳು ಬಾಳುತ್ತೇನೆಂದು ಸುಷ್ಮಾ ಸ್ವರಾಜ್ ಹೇಳುತ್ತಾರೆ. ಉಮಾಭಾರತಿ ಅದಕ್ಕೆ ಪಲ್ಲವಿ ಹಾಡುತ್ತಾರೆ.[/quote]

ಇವಕ್ಕೆಲ್ಲ ಉತ್ತರ ಬರಲ್ಲ ರೋಶನ್, ಕಾಯಬೇಡಿ ಖಂಡಿತಾ. ಮೊದಲು ಸಂಜಯ್ ಅವರನ್ನ ಮಗ ಅಂತ ನಡೆಸಿಕೊಂಡವರು ಯಾರು ? ಹುಲಿಯಂಥ ಅವನನ್ನ ಮಗ ಅಂತ ಕಾಣೋ ಧೈರ್ಯ ಆದರೂ ಇತ್ತಾ ಅವರಮ್ಮನಿಗೆ ?

ನಮ್ಮ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಅನ್ನೋ ಮೂರು ಸ್ವಾಯುತ್ತ ವ್ಯವಸ್ಥೆಗಳಿವೆ. ಕಾರ್ಯಾಂಗ ತನ್ನ ಕೆಲಸ ಮಾಡಿ ಅಪರಾಧಿಯನ್ನು ಬಂಧಿಸಿದೆ. ನ್ಯಾಯಾಂಗ ತನ್ನ ಕೆಲಸ ಮಾಡಿ ಆತನಿಗೆ ಗಲ್ಲುಶಿಕ್ಷೆ ವಿಧಿಸಿದೆ. ಆತನಿಗೆ ಗಲ್ಲುಶಿಕ್ಷೆಯನ್ನು ಜಾರಿಗೊಳಿಸಬೇಕಾದ್ದು ಮತ್ತೆ ಕಾರ್ಯಾಂಗದ ಕೆಲಸ. ಈ ನಡುವೆ ಆತನ ಕ್ಷಮಾ ಅಪೀಲು ಸಂವಿಧಾನದ ಅತ್ಯುಚ್ಚ ಪೀಠವಾದ ರಾಷ್ಟ್ರಪತಿಗಳ ಕಾರ್ಯಾಲಯದಲ್ಲಿ ಕಾದಿದೆ. ಹಾಗೆ ಕಾದಿರುವವರ ಸರತಿಯಲ್ಲಿ ಇಂದಿರಾಗಾಂಧಿ ಹಂತಕರೂ ಇದ್ದಾರೆನ್ನಲಾಗಿದೆ.

ಈ ವಿಷಯದಲ್ಲಿ ಕೇಂದ್ರ ಸರ್ಕಾರವು ತಣ್ಣಗೆ ಕುಳಿತಿದೆ ಎಂದು ಕೆಲವು ಮುಟ್ಠಾಳರು ಭಾವಿಸುತ್ತಾರೆ. ಆದರೆ ಈ ವಿಷಯದಲ್ಲಿ ಕೇಂದ್ರಸರ್ಕಾರವು ಶಾಸಕಾಂಗವಾಗಿದ್ದು ಇದರಲ್ಲಿ ಅದು ತನ್ನ ಮೂಗು ತೂರಿಸಿ ಮಾಡಬೇಕಾದ್ದೇನೂ ಇಲ್ಲ.

ಇಲ್ಲಿ ಮಾಯ್ಸ ಅವರು ಎತ್ತಿದ ಒಂದು ಅಂಶ ಗಮನಾರ್ಹವಾಗಿದೆ. ಆ ದುಷ್ಕೃತ್ಯ ನಡೆದುದು ಯಾರ ಕಾಲದಲ್ಲಿ ಎಂದು. ಅಂದರೆ ಆ ದುಷ್ಕರ್ಮಿ ಜೀವಂತ ಇರುವವರೆಗೂ ’ಯಾರಕಾಲದಲ್ಲಿ?’ ಎಂಬ ಪ್ರಶ್ನೆಯೂ ಜೀವಂತವಾಗಿರುತ್ತದೆ ಎಂದಾಯಿತು. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದಲ್ಲಿ ಒಂದು ಮಾತು ಬರುತ್ತದೆ. ಮೃತ್ಯುಸ್ ತತ್ ಕ್ಷಣಿಕೋ ದುಃಖಮ್ ಮಾನಭಙ್ಗನ್ ದಿನೇ ದಿನೇ = ಮೃತ್ಯು ತಕ್ಷಣದ ದುಃಖವಾದರೆ ಮಾನಭಂಗವು ಪ್ರತಿನಿತ್ಯವೂ ಹಿಂಸಿಸುತ್ತದೆ.

ಇರಲಿ ಇನ್ನು ಈ ಜೀವ/ಜೀವನ/ಜೀವತೆಗೆಯುವುದು/ಜೀವಾವಧಿಶಿಕ್ಷೆ ಇವುಗಳ ಬಗ್ಗೆ Anton Chekhov ಬರೆದಿರುವ The Bet ಎಂಬ ಕತೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿರಿ.

ಪ್ರೀತಿಯಿಂದ
ಸಿ ಮರಿಜೋಸೆಫ್

<ಮೃತ್ಯುಸ್ ತತ್ ಕ್ಷಣಿಕೋ ದುಃಖಮ್ ಮಾನಭಙ್ಗನ್ ದಿನೇ ದಿನೇ = ಮೃತ್ಯು ತಕ್ಷಣದ ದುಃಖವಾದರೆ ಮಾನಭಂಗವು ಪ್ರತಿನಿತ್ಯವೂ ಹಿಂಸಿಸುತ್ತದೆ.

ಇರಲಿ ಇನ್ನು ಈ ಜೀವ/ಜೀವನ/ಜೀವತೆಗೆಯುವುದು/ಜೀವಾವಧಿಶಿಕ್ಷೆ ಇವುಗಳ ಬಗ್ಗೆ Anton Chekhov ಬರೆದಿರುವ The Bet ಎಂಬ ಕತೆ ಓದಿ >

ಈ ವಾದದ ತಾತ್ಪರ್ಯ ಏನು ? ಗುರುವಿಗೆ ಗಲ್ಲು ಕೊಡಬೇಕೆಂದೋ, ಜೈಲು ಆಗಬೇಕೆಂದೋ ಅಥವಾ ಎರಡೂ ಮಾಡದೆ ಬಿಡಬೇಕೆಂದೋ - ದಯವಿಟ್ಟು ವಿವರಿಸಿ, ಅರ್ಥ ಆಗ್ತಿಲ್ಲ :)

- ಅರವಿಂದ

ಅಯ್ಯೋ ಕರ್ಮ!
ಒಣವಾದದಿಂದ ಹೊರಬಂದು ಒಂದು ಒಳ್ಳೇ ಕತೆ ಓದೀಪ್ಪಾ.

http://www.classicreader.com/book/240/1/

http://www.eastoftheweb.com/short-stories/UBooks/Bet.shtml

ಪ್ರೀತಿಯಿಂದ
ಸಿ ಮರಿಜೋಸೆಫ್

'ಗೊತ್ತಾಯ್ತು ಬಿಡಿ ಗಡ್ಡ ಎಳೆದವ್ನಿಗೆ ಮಿಠಾಯಿ' ಕತೆ ಇದು. ಈ ಕತೆ ಪುರಾಣ ಇಟ್ಕೊಂಡು ಕೇಳ್ಕೊಂಡು ಸಾಮೂಹಿಕ ಕೊಲೆಗಡಕರನ್ನ ಬಿಡ್ತಾ ಬಂದ್ರೆ ಆಗೋಯ್ತ, ಊರೆಲ್ಲ ಸದ್ದಾಂ, ಹಿಟ್ಲರ್ ಲೋಕ !

ಕೊಂಡಿಗೆ ವಂದನೆಗಳು

ಶಾಸ್ತ್ರೀಗಳೇ ನಿಜವಾಗಿಯೂ ತುಂಬ ಪ್ರಬುದ್ದವಾದ ಆರ್ತಿಕಲ್. ನಮ್ಮವರೇ ಆದ ಕೃಷ್ಣಾ ಏನು ಮಾಡುತ್ತಾರೋ ನೋಡೋಣ. Let us hope for the best.
ಮಹೇಶ್

ಕಳೆದ 86 ದಿನಗಳಲ್ಲಿ ’ಸಂಪದ’ದಲ್ಲಿ ನಾನು ಪ್ರಕಟಿಸಿರುವ 57 ಬರಹಗಳ ಪೈಕಿ ಅತಿ ಹೆಚ್ಚು ಪ್ರತಿಕ್ರಿಯೆಗಳನ್ನು ಗಳಿಸಿದ್ದು ಈ ಬರಹ. ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಓದುವಿಕೆಗಳನ್ನು ಸಂಪಾದಿಸಿದ್ದೂ ಈ ಬರಹ. ಓದುಗ-ಲೇಖಕ ಬಂಧುಗಳಾದ ನಿಮ್ಮೆಲ್ಲರ ಅತೀವ ಸಾಮಾಜಿಕ ಕಳಕಳಿ ಮತ್ತು ಉತ್ಕಟ ದೇಶಾಭಿಮಾನಕ್ಕೆ ಇದೇ ಸಾಕ್ಷಿ. ಭಾರತಕ್ಕೆ ಖಂಡಿತವಾಗಿಯೂ ಉಜ್ವಲ ಭವಿಷ್ಯವಿದೆ.
ಪ್ರತಿಕ್ರಿಯಿಸಿರುವ ಮತ್ತು ಪ್ರತಿಕ್ರಿಯಿಸಲಿರುವ ಎಲ್ಲ ಬಂಧುಗಳಿಗೂ ಹೃತ್ಪೂರ್ವಕ ಧನ್ಯವಾದಗಳು.

ಆತ್ಮೀಯ
<<ಪಾಕ್ ನ ಜೊತೆ ಯುದ್ಧಕ್ಕೆ ಹೊರಡುವ ಮುನ್ನ ಸಾಧಕ ಬಾಧಕಗಳನ್ನು ಯೋಚಿಸಬೇಕು>> ಸರಿಯಾದ ಮಾತು ಈಗ ಪಾಕ್ ಏನೂ ಸಾಮಾನ್ಯ ದೇಶ ಅಲ್ಲ .ಊಟಕ್ಕೆ ಗತಿಯಿಲ್ಲದಿದ್ದರೂ ಬ೦ದೂಕಿಗೆ ಕೊರತೆ ಮಾಡಿಕೊ೦ಡಿಲ್ಲ.ತಾಲಿಬಾನಿನ ನೇವರಿಕೆಯಲ್ಲೇ ಬಾಳುತ್ತಿರುವ ಪಾಕನ್ನು ಬಡಿದು ಹದಕ್ಕೆ ತರಲಿಕ್ಕೆ ಇದು ನಿಜವಾಗಲೂ ಸಕಾಲ.ಕಸಬ್ ನ೦ಥ ವನನ್ನು ಇನ್ನೂ ಸೆರೆಮನೆಯಲ್ಲಿಟ್ಟು ಸಾಕುವುದೇಕೆ?.ಪಾಕ್ ಗೆ
ಪ್ರತಿನಿತ್ಯ ವರದಿಯನ್ನು ಕಳುಹಿಸುವುದು.ಅರೋಪ ಪಟ್ಟಿಯನ್ನು ತಯಾರಿಸಿ ಕೊಡುವುದು ಈ Data Transfer ಕೆಲಸ ಇನ್ನೂ ಎಷ್ಟು ದಿವಸ.ಶಾಸ್ತ್ರಿಗಳೇ ಉಪಯುಕ್ತ ಲೇಖನಕ್ಕೆ ಧನ್ಯವಾದಗಳು
ಹರೀಶ ಆತ್ರೇಯ