ಲ್ಯಾಂಡ್ ಮಾರ್ಕ್ ನಿರ್ಮಿಸುವುದು ಹೇಗೆ ?

To prevent automated spam submissions leave this field empty.

ಗೆ .
ಪರೇಶ್ ಕುಮಾರ್ D B S S
,,,,,,,,,,,,,,, ಬಡಾವಣೆ
ಶಿವಮೊಗ್ಗ .
ಇವರ ಮನೆ ಹತ್ರ ಅಲ್ವ ಸಾರ್ ನಿಮ್ ಮನೆ ಇರೋದು ಅಂತ ಅಂಗಡಿ ಹುಡುಗ ಹೇಳಿದಾಗ ಹೌದು ಅಂದೇ.
ಎಲ್ಲರು ಇದೆ ಅಡ್ರೆಸ್ ಕೇರಾಫ್ ಅಂತ ಬಳಸುತ್ತಾರೆ ಅಷ್ಟೊಂದು ಫೇಮಸ್ ಆಗಿದ್ದಾನೆ ಪರೇಶ. ಒಂದು ದಿನ ಬೆಳಿಗ್ಗೆ ಹಣ್ಣಿನ ಅಂಗಡಿಯಲ್ಲಿ ಹುಡುಗನ ಹತ್ತಿರ ಈ ಬಾಕ್ಸ್ ನಮ್ಮ ಮನೆಗೆ ತಲುಪಿಸಿಬಿಡು ಅಂತ ಹೇಳುತಿದ್ದಂತೆ ಅವ್ನು ಹೇಳಿದ ಗೊತ್ತು ಬಿಡಿ ಸಾರ್ ನಿಮ್ ಮನೆ ಪರೇಶ ಅವರ ಮನೆ ಹತ್ತಿರ ಅಲ್ವ ಸಾರ್ ಅಂತ ಹೇಳಿದ ಹೌದಪ್ಪ ಅಂತ ಹೇಳಿ ಹೊರಟೆ.
ಇದ್ದಕ್ಕಿದ್ದಂತೆ ಪರೇಶ ಅಷ್ಟೊಂದು ಫೇಮಸ್ ಆಗಿಬಿಟ್ಟ ಕಾರಣ ಮಾತ್ರ ಯಾರಿಗೂ ಗೊತ್ತಿಲ್ಲ , ಜೀವನದಲ್ಲಿ ಬಹಳ ಜನರು ಫೇಮಸ್ ಆಗಲಿಕ್ಕೆ ಲಕ್ಷ ಕೋಟಿ ಖರ್ಚು ಮಾಡಿದರು ಆಗುವದಿಲ್ಲ ಅಂತದರಲ್ಲಿ ಪರೇಶ ಇಷ್ಟೊಂದು ಫೇಮಸ್ ಆಗಿಬಿಟ್ಟ.
ಅಂದರೆ ಅವನ ಮನೆ ಅಡ್ರೆಸ್ ಒಂದು ಲ್ಯಾಂಡ್ ಮಾರ್ಕ್ ಆಗಿಬಿಟ್ಟಿದೆ.
ಕೆಲವರು ಲಾರಿಯವರಿಗೆ ಕೊಡುವ ಅಡ್ರೆಸ್ಸ್ ಇದೆ , ಮತ್ತೆ ಕೆಲವರು ಆಟೋ ದವರಿಗೆ ಹೇಳುವ ಅಡ್ರೆಸ್ಸ್ ಇದೆ , ಇನ್ನು ಕೆಲವರು ಹೊಸಬರು ಇಲ್ಲಿಗೆ ಬರುವಾಗ ಹೇಳುವುದು ಹೀಗೆ ಪರೇಶ್ ಕುಮಾರ್ ಮನೆ ಹತ್ರ ಬಂದ್ರೆ ಸಾಕು ನಾನು ಪಿಕ್ ಮಾಡ್ತೀನಿ , ಮುಂದುವರೆದು ಬೋರ್ವೆಲ್ ಹಾಕುವವರು ಬಂದು ಒಂದು ಬೋರೆವೆಲ್ ಸಹ ಅಲ್ಲಿ ಹಾಕಿದರು , ಕಾರಣ ಅಲ್ಲಿ ಇದ್ರೆ ಎಲ್ಲರಿಗು ಹೆಲ್ಪ್ ಆಗುತ್ತೆ ಸಾರ್ ಅಂತ ಕಾರಣ ಕೊಟ್ರು .
ಇನ್ನು ಮುಂದುವರೆದು ಜನರು ಪೋಸ್ಟಲ್ ಅಡ್ರೆಸ್ಸ್ ಬರೆಯುವಾಗ ಕೇರಾಫ್ - ಪರೇಶ ಕುಮಾರ್ D B S S ಅಂತ ಬೇರೆಯ ತೊಡಗಿದರು .
ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಎಲ್ಲ ಕಡೆ ಗೊತ್ತು ,. ಆದರೆ ನನಗೆ ಮಾತ್ರ ಈ ಸೀಕ್ರೆಟ್ ತಿಳಿಯಲೇ ಬೇಕೆಂದು ಆಸಕ್ತಿ ಯಾಯ್ತು .
ಒಂದು ದಿನ ರಾತ್ರಿ ಪರೇಶ ಹೀಗೆ ಮಾತನಾಡುತ್ತಿದ್ದಾಗ ನಾನು ಈ ವಿಷಯ ತೆಗೆದೆ ಏನೋ ಪರೇಶ ಏನಾದ್ರೂ ಆಗ್ಲಿ ನೀನು ಬಹಳ ಫೇಮಸ್ ಆದೆ ಕಣೋ ಅಂದೇ . ಹ್ಞೂ ಸಾರ್ 100/- ರೂ ಖರ್ಚು ಮಾಡಿದೀನ್ ಸಾರ್ ಅದಕ್ಕೆ ಇಷ್ಟು ಫೇಮಸ್ ಆಗಿದ್ ಸಾರ್ ಅಂದ . ಅದೆಂಗೋ ಅಂದೇ , ಅದೇ ಸಾರ್ ಅವತ್ತು ನಂ ಕಾಕಿ ಮಗಳು ಮದುವೆ ಅಂತ ಹೇಳಿದ್ನಲ್ಲ ಅವಳ್ದು ಮದುವೆ ಮುಗುದ ಮೇಲೆ ನಂಗೆ ಲೆಟರ್ ಸಿಕ್ತು ಪೋಸ್ಟ್ ಮ್ಯಾನ್ ಗೆ ಕೇಳ್ದಾಗ ನಿನ್ ಅಡ್ರೆಸ್ಸ್ ಯಾರಿಗು ಗೊತ್ತಿಲ್ಲ ಹಂಗಾಗಿ ಹುಡುಕಿ ನಿನಿಗ್ ತಲುಪಿಸಕ್ಕೆ ಲೇಟ್ ಆಯ್ತು ಅಂದ . ನಾನ್ ಹೇಳ್ದೆ ಇಲ್ಲಿ ಯಾರಿಗ್ ಕೆಳುದ್ರು ಹೇಳ್ತ್ರಿದಪ ಅಂದೇ ಅದಕ ಅವ್ನು ನಿನ್ ಮನೆ ಏನ್ ಕುತುಬ್ ಮಿನಾರ್ ಏನೋ ಎಲ್ಲರಿಗು ಗೊತ್ತು ಅನ್ನಾಕೆ ಅಂದ್ ಬಿಟ್ಟ ಸಾರ್ . ಅಷ್ಟೆ ಸಾರ್ ಅವತ್ತೇ ಪೋಸ್ಟ್ ಆಫೀಸ್ ಹೋಗಿ 100/- ರೂ ಕೊಟ್ಟು ಸುಮಾರು ಇನ್ಲ್ಯಾಂಡ್ ಲೆಟರ್ ತಂದೆ ಸಾರ್ , ಆಮೇಲೆ ಎಲ್ಲ ಲೆಟರ್ ಮೇಲೆ
ಪರೇಶ್ ಕುಮಾರ್ DBSS ,,,,, ,,,, ಶಿವಮೊಗ್ಗ . ಅಂತ ನನ್ನ ಫುಲ್ ಅಡ್ರೆಸ್ಸ್ ಬರೆದು ರೆಡಿ ಮಾಡಿಟ್ಟೆ ಸಾರ್ .

೨ ದಿನ್ಕೊಂದು ಲೆಟರ್ ನಾನು ಪೋಸ್ಟ್ ಮಾಡಕ್ ಶುರು ಮಾಡ್ದೆ ಸಾರ್ ಮೊದಲು ನಾನು ಪೋಸ್ಟ್ ಮ್ಯಾನ್ ಬರ್ಬೇಕಾದ್ರೆ ಮನೆಹತ್ರ ನಿಂತು ಕೆಳಕ ಶುರು ಮಾಡ್ದೆ ನಂದ ಏನಾರ ಲೆಟರ್ ಐತೆನ್ರಿ ಅಂತ . ಮತ್ ಶುರು ಆತ್ ನೋಡ್ರಿ ಸಾರ್ , ೨ ದಿನ ೩ ದಿನಕ್ ವಾರಕ್ ೨, ೩ ಲೆಟರ್ ಬರಾಕ್ ಶುರು ಆದವು ಸಾರ್ , ಬೇರೆ ಬೇರೆ ಊರಿಗ್ ಹೋಗವ್ರ್ ಹತ್ರ ಎಲ್ಲ ನನ್ನ ಲೆಟರ್ ಕೊಟ್ಟಿ ಆಲ್ ಪೋಸ್ಟ್ ಮಾಡ್ರಿ ಅಂತ ಹೇಳ್ದೆ ಅವ್ರು ಅಲ್ಲಿ ಪೋಸ್ಟ್ ಮಾಡ್ತಿದ್ರು ಅದು ಇಲ್ಲಿಗ್ ಕರ್ಟ್ ೪ , ೬ ದಿನದಾಗ್ ಬರಾಕ್ ಶುರು ಆದವು ಸಾರ್ ಅದು ಅಲ್ದೆ ನನ್ನ ಅಡ್ರೆಸ್ಸ್ ಅಷ್ಟೆ ಸ್ಟ್ರಾಂಗ್ ಅಯಿತ್ ಸಾರ್ ,. ಹೆಂಗಾತ್ ಅಂದ್ರೆ ಯಾರಿಗೂ ಲೆಟರ್ ಇಲ್ಲದಿದ್ದರೇನು ನನಗ ಮಾತ್ರ ಲೆಟರ್ ಬರ್ತಿದ್ವು ಸ್ಸಾರ್ ಅಷ್ಟೊಂದು ನಾನ್ ಪೋಸ್ಟ್ ಮಾಡ್ತಿದ್ದೆ ಅಂದ.
ಅದೆಲ್ಲ ಸರಿ ನೀನು " ಪರೇಶ್ ಕುಮಾರ್ DBSS " ಅಂತ ಬರದು ಎಲ್ಲಾರು ನೀನು ಏನೋ ದೊಡ್ಡ ಆಫೀಸರ್ ಅಂತ ತಿಲ್ಕೊಂಡಿದಾರೋ ಅಂದೇ ಹೋ ಹೋ ಅದ ಸಾರ್ ಹ್ಞೂ ಸಾರ್ ಅದು ಏನಂದ್ರ ,.
D B S S ,,,,, ಧಾರವಾಡ - ಬಿಟ್ಟು - ಶಿವಮೊಗ್ಗ - ಸೆಟಲ್ ,,,..,,,..,,..!!!!!!!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು