ವಿಜ್ಞಾನ ಪ್ರಿಯರಿಗೊಂದು ಕನ್ನಡ ವಿಜ್ಞಾನ ಸಮ್ಮೇಳನ ... ಇದೋ ಸ್ವಾಗತ

To prevent automated spam submissions leave this field empty.

ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕವು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ೫ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನು ಸೆಪ್ಟೆಂಬರ್ ೧೫ ರಿಂದ ೧೭ರ ವರೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಸಲು ತೀರ್ಮಾನಿಸಿರುತ್ತದೆ. ಕರಾವಳಿ ಪರಿಸರ ಸಂರಕ್ಷಣೆ ಮತ್ತು ನಿರ್ವಾಹಣೆ ಎಂಬ ಪ್ರಮುಖ ವಿಷಯಗಳನ್ನೊಳಗೊಂಡ ಈ ವಾರ್ಷಿಕ ಸಮ್ಮೇಳನ ಆಧುನಿಕ ವಿಜ್ಞಾನಗಳು ಹಾಗೂ ಸಾಮಾಜಿಕ ಸಾಂಸ್ಕ್ರತಿಕ ವಿಜ್ಞಾನಗಳು, ಮನೋವೈಜ್ಞಾನಿಕ - ಆಧ್ಯಾತ್ಮಿಕ ವಿಜ್ಞಾನಗಳು ಮತ್ತು ಸ್ವದೇಶಿ ವೈಜ್ಞಾನಿಕ ವಿಷಯಗಳಾದ ಆಯುರ್ವೇದ, ಸಿಧ್ದ, ಯೋಗ, ವಾಸ್ತು ಹಾಗೂ ಎಲ್ಲಾರೀತಿಯ ವಿಸ್ಮಯಪೂರಿತ ಅತೀಂದ್ರಿಯ, ಅಲೌಕಿಕ ಹಾಗೂ ನಿಗೂಢ ವೈಜ್ಞಾನಿಕ ವಿಷಯಗಳ ಮೇಲಿನ ಸಂಶೋಧಕ ಹಾಗೂ ವಿಮರ್ಷಕ ವಿಷಯಗಳಲ್ಲಿ ಪ್ರಬಂಧಗಳನ್ನು ಮಂಡಿಸಬಹುದು ಮುಖ್ಯವಾಗಿ ಈ ಕೆಳಗಿನ ಯಾವುದೇ ವಿಷಯಗಳಲ್ಲಿ ಕನ್ನಡದಲ್ಲಿ ಪ್ರಬಂದ ಮಂಡನೆಗೆ ಅವಕಾಶವಿರುತ್ತದೆ.

೧. ರಾಸಾಯನಿಕ, ಜೀವ ವಿಜ್ಞಾನ ಮತ್ತು ಪದಾರ್ಥ ವಿಜ್ಞಾನಗಳು (Chemical, biological and material Sciences)ನಾಗಾರ್ಜುನೀಯಮ್
೨. ಭೌತಿಕ ಮತ್ತು ಗಣೆತಶಾಸ್ತ್ರಗಳು (Physical Mathematical Sciences)ಭಾಸ್ಕರೀಯಮ್
೩. ಕ್ರಷಿ, ತೋಟಗಾರಿಕೆ, ಮೀನುಗಾರಿಕೆ, ಮತ್ತು ಪಶುವೈದ್ಯ ಶಾಸ್ತ್ರಗಳು(Agricultural, Horticulture, Fishery and Vaterinary sciences) ಪರಾಸರೀಯಮ್
೪. ಆರೋಗ್ಯ ಮತ್ತು ಆಯುರ್ವೇದವನ್ನೊಳಗೊಂಡ ವೈದ್ಯಶಾಸ್ತ್ರ(Health and Medical sciences including Ayurveda) ದನ್ವಂತರೀಯಮ್
೫. ಸಿವಿಲ್, ಮೆಕ್ಯಾನಿಕಲ್, ಎರೋಸ್ಪೇಸ್ ಮತ್ತು ಸಾರಿಗೆ ವಿಜ್ಞಾನಗಳು ಜೊತೆಗೆ ಮಾಹಿತಿ ತಂತ್ರಜ್ಞಾನ,
ಜೈವಿಕ ತಂತ್ರಜ್ಞಾನ, ನ್ಯಾನೊ ತಂತ್ರಜ್ಞಾನ (Civil, Mechanical Aero-space and Transportation sciences, also IT, BT, NT) ಭಾರದ್ವಾಜಿಯಮ್
೬. ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್, ಸಂವಹನ ಮತ್ತು ಶಕ್ತಿ(Electricals, Electronics, Communication and Energy) ಜಿ.ಸಿ ಭೋಷೀಯಮ್
೭. ವಿಶ್ವವಿಜ್ಞಾನ, ಭೂವಿಜ್ಞಾನ, ಭೂಗೋಳ ಶಾಸ್ತ್ರ ಮತ್ತು ಪ್ರಾಚೀನ ಅವಶೇಷಗಳ ಅಧ್ಯಯನಶಾಸ್ತ್ರ, ಜಿವಪರಿಸ್ಥಿತಿಶಾಸ್ತ್ರ, ಜೈವಿಕವೈವಿಧ್ಯತೆ (Cosmology, Geology, Geography, Archaeology, Ecology, Biodiversity)ವಸುಂದರೀಯಮ್
೮. ಅರ್ಥಶಾಸ್ತ್ರ, ರಾಜಕೀಯ, ಚರಿತ್ರೆ ವಾಣಿಜ್ಯ, ನಿರ್ವಹಣಾ ವಿಜ್ಞಾನಗಳು(Socio- Economics Sciences including Economics, Politics, History, Commerce, Management Sciences) ಕೌಟಿಲ್ಯಮ್
೯. ಕಲೆ ಮತ್ತು ಸಂಗೀತ ಶಾಸ್ತ್ರವನ್ನು ಒಳಗೊಂಡ ಸಾಮಾಜಿಕ- ಸಾಂಸ್ಕ್ರತಿಕ ವಿಜ್ಞಾನಗಳು(socio- cultural science including Arts and Music) ಭರತೀಯಮ್
೧೦. ಮನೋವೈಜ್ಞಾನಿಕ- ಆಧ್ಯಾತ್ಮ ವಿಜ್ಞಾನ(Psycho- Spiritual and Philosophical Sciences) ಪತಂಜ್ಲೀಯಮ್.

ಈ ಸಮ್ಮೇಳನದಲ್ಲಿ ಪ್ರಬಂದಗಳನ್ನು ಮಂಡಿಸಲು ಇಚ್ಚಿಸುವವರು ಮತ್ತು ಭಾಗವಹಿಸಲು ಇಚ್ಚಿಸುವವರು ಹೆಚ್ಚಿನ ವಿವರಗಳಿಗಾಗಿ ಜುಲೈ ೧೫, ೨೦೦೯ ರ ಒಳಗಾಗಿ ಶ್ರೀ ಹೆಚ್ ರಮೇಶ್, ಪ್ರಧಾನ ಕಾರ್ಯದರ್ಶಿ, ಸ್ವದೇಶಿ ಸದನ, ಗುರು ನಾರಯಣ ವಿದ್ಯಾ ವಿಹಾರ, ಹೆಬ್ಬಾಳ, ಬೆಂಗಳೂರು. ಅವರನ್ನು ಸಂಪರ್ಕಿಸಬಹುದು. ಮೊಬೈಲ್: ೯೯೪೫೧೩೭೪೭೮/ ೯೮೪೦೭೦೩೩೧೭, ಫ್ಯಾಕ್ಸ್: ೦೮೦ ೨೩೫೪೪೬೧೯
ಇ-ಮೇಲ್: svak@vijnanabharati.com/ svak@vijnanabharathi.org

ಲೇಖನ ವರ್ಗ (Category):