ರಕ್ಷಣೆ ನೀಡಿ

To prevent automated spam submissions leave this field empty.

ನೀನು ತೆರೆದು ತೊರೆದು ದೂರ ಹೋದ ಮೇಲಿಂದ
ಕ್ಷಣ ನಿಮಿಷ ಗಂಟೆ ದಿನಗಳು ಅನಾಥವಾಗಿವೆ.
******
ಯೌವ್ವನದ ಹೂವು ತೊಟ್ಟು ಮುಡಿದಂದಿನಿಂದ
ರಾತ್ರಿಗಳು ಸುಖದಿಂದ ಹಗಲುಗಳಿಗೆ ಅಣಿಕಿಸಿ.
******
ಯೌವ್ವನವೇ ನೀನು ತಪ್ಪು ಮಾಡಿಬಿಟ್ಟೆ
ಧಾಳಿ ಮಾಡಲು ರಾತ್ರಿಗಳು ಗುರಾಣಿ ಹಿಡಿದಿವೆ.
******
ಪೋಲಿಸರೇ ಅವಳ ತುಟಿಗೆ ರಕ್ಷಣೆ ನೀಡಿ
ದುಂಬಿಗಳು ಹೂವುಗಳ ವಿಳಾಸ ಮರೆತಿವೆ.
******
ನಿನ್ನೊಂದಿಗೆ ಕೂತು ಆಪ್ತವಾಗಿ ಮಾತನಾಡಲು
ನನಗಿಂತ ಹೆಚ್ಚಾಗಿ ದಿನಗಳೇ ಇದಿರು ನೋಡಿವೆ.

ಕುಪ್ಪೇರಾವ್.

ಲೇಖನ ವರ್ಗ (Category):