ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ-ಒಂದು ವಿವೇಚನೆ !

To prevent automated spam submissions leave this field empty.

ಡಾ. ರಹಮತ್ ತರೀಕೆರೆ, ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ..

.

ಮುಖ್ಯಮಂತ್ರಿ ಚಂದೃ ರವರಿಗೆ, ’ಮೈಸೂರ್ ಅಸೋಸಿಯೇಷನ್ ನ ಅಧ್ಯಕ್ಷ’,  ಶ್ರೀ ರಾಮಭದ್ರರು, ಪುಷ್ಪ-ಗುಚ್ಛವನ್ನಿತ್ತು ಗೌರವಿಸುತ್ತಿದ್ದಾರೆ. ಮಂಚದಮೇಲೆ ನಿವೃತ್ತ ಶ್ರೀ. ಜಸ್ಟಿಸ್. ಶ್ರೀಕೃಷ್ಣ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದಾರೆ.

'ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ,' ಡಾ. ಉಪಾಧ್ಯೆರವರು ಸಭೆಯನ್ನುದ್ದೇಶಿಸಿ ಮಾತಾಡುತ್ತಿದ್ದಾರೆ....

'ಬೆಂಗಳೂರಿನ ಕನ್ನಡ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ,' ಮುಖ್ಯಮಂತ್ರಿ ಶ್ರೀ. ಚಂದೃ, ಸಭೆಯನ್ನುದ್ದೇಶಿಸಿ ಮಾತಾಡುತ್ತಿದ್ದಾರೆ....

* ಈ ಸಮಯೋಚಿತವಾದ ಒಂದು ವಿವೇಚನಾ ಕಮ್ಮಟ/ಮಾಲೋಚನೆಯನ್ನು ಮುಂಬೈನ ’ ಮೈಸೂರು ಅಸೋಸಿಯೇಷನ್ ಜೊತೆ, ಜಂಟಿಯಾಗಿ ’ ಕನ್ನಡ ಅಭಿವೃದ್ದಿಪ್ರಾಧಿಕಾರ,’ ಜೂನ್, ೨೧, ೨೦೦೯ ರ ಪ್ರಾತಃ ಕಾಲದಂದು, ಹಮ್ಮಿಕೊಂಡಿತ್ತು. ಬೆಳಿಗ್ಯೆ ೯.೦೦ ಗಂಟೆಯಿಂದ ಸಂಜೆ ೯.೦೦ ತನಕ ಜರುಗಿದ ಈ ವಿವೇಚನೆಯ ಉದ್ಘಾಟನೆಯನ್ನು ಕನ್ನಡ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷರಾದ, ಶ್ರೀ (ಮುಖ್ಯಮಂತ್ರಿ) ಚಂದ್ರು, ವಿಧ್ಯುಕ್ತವಾಗಿ ದೀಪಬೆಳೆಗಿಸುವುದರ ಮೂಲಕ ನೆರೆವೇರಿಸಿದರು. ಆಶಯ ಭಾಷಣವನ್ನು, ಕರ್ನಾಟಕ ಸಾಹಿತ್ಯ ಅಕ್ಯಾಡಮಿಯ ಅಧ್ಯಕ್ಷರಾದ, ಪ್ರೊ. ಎಂ. ಎಚ್. ಕೃಷ್ಣಯ್ಯನವರು ಮಾಡಿದರು. ಮೊದಲನೆಯ ಗೋಷ್ಟಿ ಯ ವಿಷಯ, " ಕನ್ನಡ ಭಾಷೆಯ ಹಿರಿಮೆ" ಇದರ ಅಧ್ಯಕ್ಷತೆಯನ್ನು ’ಪ್ರೊ. ಲಿಂಗದೇವರು ಹಳೆಮನೆ ’ಯವರು ವಹಿಸಿದ್ದರು. ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ,” ಡಾ. ಮಮತಾ ಸಾಗರ್ ’ ಕನ್ನಡತನವನ್ನು ವಿವರಿಸಿ ಮಾತಾಡಿದರು. ಕನ್ನಡಭಾಷೆಯ ಪ್ರಾಚೀನತೆಯ ಎಳೆಗಳನ್ನು ಒಂದೊಂದಾಗಿ ಬಿಡಿಸಿ ಹೇಳಿದ, ಮುಂಬೈ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ,’ ಡಾ. ಗಣೇಶ್ ಉಪಾದ್ಯ ’ ರವರು ಮರಾಠಿನೆಲದ ಅನೇಕರು ಕನ್ನಡಜನರನ್ನು ಗುರುತಿಸಿರುವುದರ ಬಗ್ಗೆ, ಅನೇಕ ಉಪಯುಕ್ತವಿಷಯಗಳನ್ನು ಪ್ರಸ್ತಾಪಿಸಿದರು. ೨. ಕನ್ನಡ ಅಭಿಯಾನ -ಅಭಿಮಾನ ದ ಅಧ್ಯಕ್ಷತೆಯನ್ನು ’ಡಾ. ಪುರುಷೋತ್ತಮ ಬಿಳಿಮಲೆ ’ ಯವರು ವಹಿಸಿಕೊಂಡಿದ್ದರು. ರವಿವಾರದ ಬೆಳಗಿನ ಕಾರ್ಯಕ್ರಮಕ್ಕೆ, ಸಾಹಿತ್ಯಾಸಕ್ತರು ಅಧಿಕಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಧ್ಯಾನ್ಹದ ಭೋಜನದ ವ್ಯವಸ್ಥೆಯೂ ಆಗಿತ್ತು. ಸಾಯಂಕಾಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ’ ಪ್ರಯೋಗರಂಗದಿಂದ " ಪಂಪ ವೈಭವ " ವೆಂಬ ಸುಂದರ ನೃತ್ಯವನ್ನು ಆಯೋಜಿಸಲಾಗಿತ್ತು. * ಮೇಲಿನ ಚಿತ್ರದಲ್ಲಿರುವವರು, ಡಾ. ರಹಮತ್ ತರೀಕೆರೆಯವರು, ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಮುಂಬೈನ ಖ್ಯಾತ ನಿವೃತ್ತ ಕನ್ನದ ಪ್ರಾಧ್ಯಾಪಕಿ, ದಾ. ಸುನಿತಾ ಶೆಟ್ಟಿಯವರು. -ಚಿತ್ರ-ವೆಂಕಟೇಶ್

ಲೇಖನ ವರ್ಗ (Category):